ಎಸ್. ಕೆ. ಭಗವಾನ್‌

ಭಾರತೀಯ ಚಲನಚಿತ್ರ ನಿರ್ದೇಶಕ


ಎಸ್..ಕೆ. ಭಗವಾನ್ (ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್) ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಿರ್ದೇಶಕರು ಹಾಗೂ ನಿರ್ಮಾಪಕರು. ಮತ್ತೊಬ್ಬ ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧ. ಇವರಿಬ್ಬರೂ ಸೇರಿ ೫೫ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ಮಾಡಿರುವ ಅವರು ೨೪ ಕಾದಂಬರಿಗಳನ್ನು ಸಿನೆಮಾಗೆ ಅಳವಡಿಸಿದ್ದಾರೆ. ಪ್ರಸ್ತುತ ಅವರು ’ಆದರ್ಶ ಸಿನೆಮಾ ಇನ್ಸ್ಟಿಟ್ಯೂಟ್‍ನ’ ಪ್ರಾಂಶುಪಾಲರಾಗಿದ್ದಾರೆ. ಸಿನೆಮಾ ನಿರ್ದೇಶನದಿಂದ ನಿವೃತ್ತಿ ಹೊಂದಿದ್ದಾರೆ.

ಎಸ್. ಕೆ. ಭಗವಾನ್
ಜನನ
ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್

(1933-02-20) ೨೦ ಫೆಬ್ರವರಿ ೧೯೩೩ (ವಯಸ್ಸು ೯೧)
ಮೈಸೂರು, ಮೈಸೂರು ರಾಜ್ಯ, ಬ್ರಿಟಿಷ್ ಭಾರತ.
ಮರಣಫೆಬ್ರವರಿ ೨೦, ೨೦೨೩
ಬೆಂಗಳೂರು
ವೃತ್ತಿ(ಗಳು)ಚಿತ್ರ ನಿರ್ದೇಶಕ, ನಿರ್ಮಾಪಕ, ನಟ
Years active1965–1994

ಜೀವನ

ಎಸ್.ಕೆ. ಭಗವಾನ್ ಅವರು ೧೯೩೩ರ ಫೆಬ್ರುವರಿ ೨೦[೧] ರಂದು ತಮಿಳು ಬ್ರಾಹ್ಮಣ ಅಯ್ಯರ್ ಕುಟುಂಬದಲ್ಲಿ ಜನಿಸಿದರು. ಬೆಂಗಳೂರು ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಯುವಕರಾಗಿದ್ದಾಗ ’ಹಿರಣ್ಣಯ್ಯ ಮಿತ್ರ ಮಂಡಳಿ’ಯಲ್ಲಿ ನಾಟಕಗಳನ್ನು ಮಾಡುತ್ತಿದ್ದರು. ೧೯೫೬ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ಸಿನೆಮಾ ಜೀವನ ಆರಂಭಿಸಿದರು. ೨೦ನೇ ಫೆಬ್ರವರಿ ೨೦೨೩ ರಂದು ಮುಂಜಾನೆ ೬ಗಂಟೆ ೧೦ ನಿಮಿಷಕ್ಕೆ ಅವರ ೯೦ನೇ ವರ್ಷದಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಮರಣ ಹೊಂದಿದರು[೨]. ಕಾಕತಾಳೀಯವೆಂಬಂತೆ ಭಗವಾನರ ಜನ್ಮದಿನ (ಫೆಬ್ರವರಿ ೨೦, ೧೯೩೩), ಇಹಲೋಕ ತ್ಯಜಿಸಿದ ದಿನ (ಫೆಬ್ರವರಿ ೨೦. ೨೦೨೩) ಮತ್ತು ಅವರ ಜೊತೆಗಾರ ದೊರೈರಾಜ್ ಅವರು ಇಹಲೋಕ ತ್ಯಜಿಸಿದ (ಫೆಬ್ರವರಿ ೨೦, ೨೦೦೦) ದಿನಾಂಕ ಮತ್ತು ತಿಂಗಳು ಒಂದೇ ಆಗಿವೆ.[೧]

ಸಿನಿಮಾ ರಂಗದಲ್ಲಿ

೧೯೬೬ರಲ್ಲಿ ಎಂ.ಸಿ. ನರಸಿಂಹಮೂರ್ತಿಯವರೊಡಗೂಡಿ ಸಂಧ್ಯಾರಾಗ ಸಿನೆಮಾ ನಿರ್ದೇಶಿಸಿದರು. ನಂತರ ದೊರೈ-ಭಗವಾನ್ ಜೋಡಿಯು ರಾಜಕುಮಾರ್ ನಾಯಕನಟನಾಗಿರುವ ’ಜೇಡರ ಬಲೆ’ ಚಿತ್ರವನ್ನು ನಿರ್ದೆಶಿಸಿತು. ಇದು ಕನ್ನಡದಲ್ಲಿ ಜೇಮ್ಸ್ ಬಾಂಡ್‌ ಮಾದರಿಯ ಮೊದಲ ಚಿತ್ರವಾಗಿತ್ತು. ಮುಂದಿನ ಅವರ ಎಲ್ಲಾ ಚಿತ್ರಗಳನ್ನು ಈ ನಿರ್ದೇಶಕದ್ವಯರು ಜೋಡಿಯಾಗೇ ನಿರ್ದೇಶಿಸಿದರು. ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸಬೆಳಕು’, ‘ಯಾರಿವನು’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದರು. ಇವರ ೩೨[೨] ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ಅನಂತನಾಗ್ ಮತ್ತು ಲಕ್ಷ್ಮಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್.ಕೆ ಭಗವಾನ್ ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಅನುಭವ ಹೊಂದಿದ್ದಾರೆ.

  • ದೊರೈರಾಜರ ಮರಣದ ನಂತರ ಇವರು ನಿರ್ದೇಶನದಿಂದ ನಿವೃತ್ತಿ ಹೊಂದಿದರು. ೧೯೯೩ರ ’ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರ.
  • ಭಗವಾನರು ದೊರೈ ಅವರೊಂದಿಗೆ ಜೊತೆಯಾಗಿ ಸುಮಾರು ೫೦ಕ್ಕೂ ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.[೧]
  • ದೊರೈ-ಭಗವಾನ್ ಜೋಡಿಯಾಗಿ ವಾಣಿ, ಭಾರತೀಸುತ, ತ.ರಾ.ಸು, ಚಿತ್ರಲೇಖ, ಟಿ.ಕೆ.ರಾಮರಾವ್, ಎನ್.ಪಂಕಜಾ ಮತ್ತು ವಿಶಾಲಾಕ್ಷಿ ದಕ್ಷಿಣಮೂರ್ತಿ ಅವರ ಕಾದಂಬರಿಗಳು ಸೇರಿದಂತೆ ೨೪ ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶನ ಮಾಡಿದೆ.[೧]
  • ಆಡುವ ಗೊಂಬೆ (೨೦೧೮-೧೯) ಎಸ್. ಕೆ. ಭಗವಾನರು ನಿರ್ದೇಶಿಸಿದ ಕೊನೆಯ ಚಿತ್ರ. ೮೬ ನೇ ವಯಸ್ಸಿನಲ್ಲಿ ಚಿತ್ರ ನಿರ್ದೇಶಿಸುವ ಮೂಲಕ ಇವರು ಭಾರತದ ಅತ್ಯಂತ ಹಿರಿಯ ನಿರ್ದೇಶಕರೆನಿಸಿದ್ದಾರೆ.

ಸಿನೆಮಾ ಪಟ್ಟಿ

(ಇದು ಭಾಗಶಃ ಪಟ್ಟಿ. ಇದನ್ನು ವಿಸ್ತರಿಸಬಹುದು)

ವರ್ಷಸಿನೆಮಾನಟ-ನಟಿಯರುಟಿಪ್ಪಣಿ
೧೯೫೬ಭಾಗ್ಯೋದಯಕಣಗಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ
೧೯೬೬ಸಂಧ್ಯಾರಾಗರಾಜಕುಮಾರ್ಎಂ.ಸಿ.ನರಸಿಂಹಮೂರ್ತಿ ಜೊತೆಗೂಡಿ ನಿರ್ದೇಶನ. ಅನಕೃ ಅವರ ಕಾದಂಬರಿ.
೧೯೬೮ಜೇಡರ ಬಲೆರಾಜಕುಮಾರ್, ಉದಯಕುಮಾರ್ದೊರೈರಾಜ್ ಅವರೊಡನೆ ಮೊದಲ ಸಿನೆಮಾ ಹಾಗೂ ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಮೊದಲ ಸಿನೆಮಾ
೧೯೬೮ಗೋವಾದಲ್ಲಿ ಸಿಐಡಿ ೯೯೯ರಾಜಕುಮಾರ್, ನರಸಿಂಹರಾಜು, ಲಕ್ಷ್ಮಿ
೧೯೬೯ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿಐಡಿ ೯೯೯ರಾಜಕುಮಾರ್, ರೇಖಾ, ಕೆ. ಎಸ್. ಅಶ್ವತ್ಥ್, ನರಸಿಂಹರಾಜು, ಸುರೇಖಾ
೧೯೭೧ಕಸ್ತೂರಿ ನಿವಾಸರಾಜಕುಮಾರ್, ಆರತಿ, ಜಯಂತಿ, ರಾಜಾ ಶಂಕರ್
೧೯೭೧ಪ್ರತಿಧ್ವನಿರಾಜಕುಮಾರ್, ರಾಜೇಶ್, ಆರತಿ
೧೯೭೪ಎರಡು ಕನಸುರಾಜಕುಮಾರ್, ಕಲ್ಪನ, ಮಂಜುಳವಾಣಿ ಅವರ ಕಾದಂಬರಿ
೧೯೭೬ಬಯಲುದಾರಿಅನಂತನಾಗ್, ಕಲ್ಪನಭಾರತೀಸುತರ ಕಾದಂಬರಿ
೧೯೭೬ಮುಗಿಯದ ಕಥೆರಾಜೇಶ್, ಸುಮಿತ್ರಾ, ಪಂಡರಿಬಾಯಿದೊರೈ ನಿರ್ದೇಶನ
೧೯೭೭ಗಿರಿಕನ್ಯೆರಾಜಕುಮಾರ್, ಜಯಮಾಲಾಭಾರತೀಸುತರ ಕಾದಂಬರಿ
೧೯೭೮ಆಪರೇಷನ್ ಡೈಮಂಡ್ ರಾಕೆಟ್ರಾಜಕುಮಾರ್, ಪದ್ಮಪ್ರಿಯಾ
೧೯೭೯ಚಂದನದ ಗೊಂಬೆಅನಂತನಾಗ್, ಲಕ್ಷ್ಮಿ, ಲೋಕೇಶ್ತ.ರಾ.ಸು ಅವರ ಕಾದಂಬರಿ
೧೯೭೯ನಾನೊಬ್ಬ ಕಳ್ಳರಾಜಕುಮಾರ್, ಕಾಂಚನ, ಲಕ್ಷ್ಮಿ
೧೯೮೦ವಸಂತ ಗೀತರಾಜಕುಮಾರ್, ಗಾಯತ್ರಿಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಣ
೧೯೮೧ಗಾಳಿ ಮಾತುಲಕ್ಷ್ಮಿ, ಜೈಜಗದೀಶ್, ಕೆ. ಎಸ್. ಅಶ್ವತ್ಥ್ತ.ರಾ.ಸು ಅವರ ಕಾದಂಬರಿ
೧೯೮೧ಮುನಿಯನ ಮಾದರಿಶಂಕರನಾಗ್, ಮೋಹನ್, ಜಯಮಾಲಾಅಶ್ವತ್ಥ ಅವರ ಕಾದಂಬರಿ
೧೯೮೨ಹೊಸ ಬೆಳಕುರಾಜಕುಮಾರ್, ಸರಿತಾ, ಕೆ. ಎಸ್. ಅಶ್ವತ್ಥ್ವಾಣಿ ಆವರ ಕಾದಂಬರಿ
೧೯೮೩ಬೆಂಕಿಯ ಬಲೆಅನಂತನಾಗ್, ಲಕ್ಷ್ಮಿ, ದಿನೇಶ್ತ.ರಾ.ಸು ಅವರ ಕಾದಂಬರಿ
೧೯೮೪ಸಮಯದ ಗೊಂಬೆರಾಜಕುಮಾರ್, ರೂಪಾದೇವಿ, ಕಾಂಚನಚಿತ್ರಲೇಖ ಅವರ ಕಾದಂಬರಿ
೧೯೮೪ಯಾರಿವನುರಾಜಕುಮಾರ್, ಬಿ. ಸರೋಜಾದೇವಿ, ಶ್ರೀನಾಥ್
೧೯೮೫ಬಿಡುಗಡೆಯ ಬೇಡಿಅನಂತನಾಗ್, ಲಕ್ಷ್ಮಿ, ಕೆ. ಎಸ್. ಅಶ್ವತ್ಥ್ತ.ರಾ.ಸು ಅವರ ಕಾದಂಬರಿ
೧೯೮೫ಸೇಡಿನ ಹಕ್ಕಿಅನಂತನಾಗ್, ಲಕ್ಷ್ಮಿ, ಪ್ರಭಾಕರ್ಟಿ. ಕೆ. ರಾಮರಾವ್ ಅವರ ಕಾದಂಬರಿ
೧೯೮೬ಹೆಣ್ಣಿನ ಕೂಗುಸರಿತಾ, ಶ್ರೀಧರ್
೧೯೮೭ವಿಜಯೋತ್ಸವಕುಮಾರ್ ಬಂಗಾರಪ್ಪ
೧೯೭೧ಗಗನಅನಂತನಾಗ್, ಕುಶ್ಬೂ, ಭವ್ಯ, ಲೀಲಾವತಿಎನ್. ಪಂಕಜಾ ಅವರ ಕಾದಂಬರಿ
೧೯೯೧ನೀನು ನಕ್ಕರೆ ಹಾಲು ಸಕ್ಕರೆವಿಷ್ಣುವರ್ಧನ್, ರೂಪಿಣಿ, ರಜನಿ, ವಿನಯಾ ಪ್ರಸಾದ್, ಚಂದ್ರಿಕಾ ಅಂಜಲಿ ಸುಧಾಕರ್, ಶ್ರೀನಾಥ, ಉಮೇಶ್
೧೯೯೨ಜೀವನ ಚೈತ್ರರಾಜಕುಮಾರ್, ಮಾಧವಿ, ಸುಧಾರಾಣಿ, ತೂಗುದೀಪ ಶ್ರೀನಿವಾಸ್ವಿಶಾಲಾಕ್ಷಿ ದಕ್ಷಿಣಮೂರ್ತಿಯವರ ’ವ್ಯಾಪ್ತಿ-ಪ್ರಾಪ್ತಿ’ ಕಾದಂಬರಿ
೧೯೯೩ಮಾಂಗಲ್ಯ ಬಂಧನಅನಂತನಾಗ್, ಮಾಲಾಶ್ರೀ, ಮೂನ್ ಮೂನ್ ಸೇನ್, ಕೆ. ಎಸ್. ಅಶ್ವತ್ಥ್ಎಸ್. ಕೆ. ಭಗವಾನ್ ನಿರ್ದೇಶನ
೧೯೯೪ಒಡಹುಟ್ಟಿದವರುರಾಜಕುಮಾರ್, ಅಂಬರೀಶ್, ಉಮಾಶ್ರೀ, ವಜ್ರಮುನಿ
೧೯೯೫ಬಾಳೊಂದು ಚದುರಂಗಸಾಯಿಕುಮಾರ್, ಸುಧಾರಾಣಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ
೨೦೧೯ಆಡುವ ಗೊಂಬೆಸಂಚಾರಿ ವಿಜಯ್, ಅನಂತನಾಗ್, ರಿಶಿತಾ ಮಲ್ನಾಡ್, ಸುಧಾ ಬೆಳವಾಡಿಎಸ್. ಕೆ. ಭಗವಾನ್ ನಿರ್ದೇಶನ (ಕೊನೆಯ ಚಿತ್ರ)

ಪ್ರಶಸ್ತಿಗಳು

  • ೨೦೧೭ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಕಾಡಮಿ ಪ್ರಶಸ್ತಿ [೩]
  • ಕರ್ನಾಟಕ ಸರ್ಕಾರದಿಂದ ೧೯೯೫-೯೬ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
  • ೨೦೧೦ರಲ್ಲಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿ

ಉಲ್ಲೇಖಗಳು

ಹೊರಸಂಪರ್ಕಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ