ಎಮಿನೆಮ್

ಎಮಿನೆಮ್ ಎಂದು ರಂಗ ಕ್ಷೇತ್ರದ ಹೆಸರಿನಿಂದ ಗುರುತಿಸಲ್ಪಡುವ ಮಾರ್ಶಲ್ ಬ್ರೂಸ್ ಮ್ಯಾಥರ್ಸ್ III (ಜನಿಸಿದ್ದು ಅಕ್ಟೋಬರ್ 17, 1972ರಂದು ),[೧] ಎಮಿನೆಮ್ ಎಂದೇ ಬಹುಜನರಿಗೆ ಗೊತ್ತಿರುವ ಈತ ಒಬ್ಬ ಅಮೇರಿಕನ್ ರಾಪರ್, ಧ್ವನಿ ಮುದ್ರಿಕೆಗಳ ನಿರ್ಮಾಪಕ, ಗೀತ ರಚನೆಕಾರ ಮತ್ತು ನಟ. ಗ್ರಾಮಿ ಅವಾರ್ಡ್ ಫಾರ್ ಬೆಸ್ಟ್ ರಾಪ್ ಆಲ್ಬಮ್ ಎಂದು ತನ್ನ ಪ್ರಥಮ ಆಲ್ಬಮ್ ದಿ ಸ್ಲಿಮ್ ಶೇಡಿ LP ಗೆ ಪಡೆದ ಎಮಿನೆಮ್ 1999ರಲ್ಲಿ ಅತ್ಯಂತ ವೇಗವಾಗಿ ಜನಪ್ರಿಯಗೊಂಡ. ನಂತರ ಬಂದ ದಿ ಮಾರ್ಶಲ್ ಮ್ಯಾಥೆರ್ಸ್ LP ಎಂಬ ಆಲ್ಬಮ್ ಚರಿತ್ರೆಯಲ್ಲೇ ಅತ್ಯಂತ ವೇಗವಾಗಿ ಮಾರಾಟಗೊಂಡ ಹಿಪ್ ಹಾಪ್ ಆಲ್ಬಮ್ ಅದಾಯಿತು.[೨] ತನ್ನ ಸ್ವಂತದ್ದಾದ ಶೇಡಿ ರೆಕಾರ್ಡ್ಸ್ ಜೊತೆಗೆ ಇದು ಜನಪ್ರಿಯತೆಯ ತುತ್ತತುದಿಗೆ ಎಮಿನೆಮ್ ಅನ್ನು ಕೊಂಡೊಯ್ದಿತು ಮತ್ತು ಅವನ ತಂಡದ D12 ಯೋಜನೆಯನ್ನು ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುವುದಕ್ಕೆ ಅವಕಾಶವಾಯಿತು.ದಿ ಮಾರ್ಶಲ್ ಮ್ಯಾಥೆರ್ಸ್ LP ಮತ್ತವನ ಮೂರನೆಯ ಆಲ್ಬಮ್ ದಿ ಎಮಿನೆಮ್ ಶೋ ಕೂಡ ಗ್ರಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದರಿಂದಾಗಿ ಎಮಿನೆಮ್ ಸತತ ಮೂರು LPಗಳಿಗೂ ಬೆಸ್ಟ್ ರಾಪ್ ಆಲ್ಬಮ್ ಪ್ರಶಸ್ತಿ ಪಡೆದ ಏಕೈಕ ಕಲಾವಿದನಾದ. 2010ರಲ್ಲಿ ರಿಲ್ಯಾಪ್ಸ್ ಎನ್ನುವ ತನ್ನ ಮತ್ತೊಂದು ಆಲ್ಬಮ್‌ಗೆ ಪ್ರಶಸ್ತಿಯನ್ನು ಪಡೆಯುವ ಮುಖಾಂತರ 11 ಗ್ರಾಮಿಯನ್ನು ಎಮಿನೆಮ್ ತನ್ನ ವೃತ್ತಿ ಬದುಕಿನಲ್ಲಿ ಪಡೆದಂತಾಯಿತು.2002ರಲ್ಲಿ ತಾನೂ ಮುಖ್ಯ ನಟನಾಗಿ ನಟಿಸಿದ ಚಿತ್ರ 8 ಮೈಲ್ ಗೆ ಹಾಡಿದ "ಲೂಸ್ ಯುವರ್‌ಸೆಲ್ಫ್" ಹಾಡಿಗೆ ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ ಗೆದ್ದುಕೊಂಡ."ಲೂಸ್ ಯುವರ್‌ಸೆಲ್ಫ್" ಎಂಬ ಏಕವ್ಯಕ್ತಿ ಹಾಡು(solo) ಅತ್ಯಂತ ದೀರ್ಘಕಾಲ #1 ಹಿಪ್-ಹಾಪ್ ಹಾಡಾಗಿ ಚಾಲ್ತಿಯಲ್ಲಿ ಉಳಿಯುತ್ತದೆ.[೩] 2005ರಲ್ಲಿ ಪ್ರವಾಸದ ನಂತರ ಎಮಿನೆಮ್ ಹೈಯಾಟಸ್ (ವಿರಾಮ) ಗೆ ಹೋದ. 2004ರ ಎನ್‌ಕೋರ್ ನಂತರ ಮೊದಲ ಆಲ್ಬಮ್ ರಿಲ್ಯಾಪ್ಸ್ ಅನ್ನು ಮೇ 15, 2009ರಂದು ಬಿಡುಗಡೆ ಮಾಡಿದ. ಎಮಿನೆಮ್ ದಶಕದ ಅತ್ಯಂತ ಉತ್ತಮ ಮಾರಾಟದ ಕಲಾವಿದ,[೪] ಮತ್ತು ಇವತ್ತಿಗೆ ವಿಶ್ವದಾದ್ಯಂತ 80 ದಶಲಕ್ಷ ಆಲ್ಬಮ್ ಗಳಿಗೂ ಹೆಚ್ಚು ಮಾರಾಟ ಆಗಿ, ಬೆಸ್ಟ್-ಸೆಲ್ಲಿಂಗ್ ಮ್ಯೂಸಿಕ್ ಆರ್ಟಿಸ್ಟ್ ಇನ್ ದಿ ವರ್ಳ್ಡ್ ಎನ್ನಿಸಿಕೊಂಡಿದ್ದಾನೆ.[೫] ಎಮಿನೆಮ್ ಅನ್ನು ರೋಲ್ಲಿಂಗ್ ಸ್ಟೋನ್ ಪತ್ರಿಕೆಯವರು, ಸಾರ್ವಕಾಲಿಕ 100 ಶ್ರೇಷ್ಠ ಕಲಾವಿದರಲ್ಲಿ ಒಬ್ಬ ಎಂದು ಶ್ರೇಣೀಕರಿಸಿದ್ದಾರೆ.[೬]ವೈಬ್ ಪತ್ರಿಕೆಯವರೂ ಸಹಾ ಎಮಿನೆಮ್ ಅನ್ನು ಎಂದಿಗೂ ಉತ್ತಮ ರಾಪರ್ ಎಂದು ಹೆಸರಿಸಿದ್ದಾರೆ.[೭] D12 ಕಾರ್ಯವನ್ನು ಸೇರಿಸಿ ಎಮಿನೆಮ್ ಎಂಟು #1 ಆಲ್ಬಮ್‌ಗಳನ್ನು ಬಿಲ್‌ಬೋರ್ಡ್ ಟಾಪ್ 200 ಪಟ್ಟಿಯಲ್ಲಿ ಮತ್ತು ವಿಶ್ವದಾದ್ಯಂತ 12 ಪ್ರಥಮ ಏಕವ್ಯಕ್ತಿ ಹಾಡುಗಳ ಪಟ್ಟಿಯಲ್ಲಿ ಸೇರಿಸುವ ಸಾಧನೆಯನ್ನು ಮಾಡಿದ್ದಾನೆ. ಬಿಲ್‌ಬೋರ್ಡ್ ಮ್ಯಾಗಝೈನ್ ನವರಿಂದ ದಶಕದ ಉತ್ತಮ ಕಲಾವಿದ ಎಂದು ಡಿಸೆಂಬರ್ 2009ರಲ್ಲಿ ಕರೆಯಿಸಿಕೊಂಡಿದ್ದಾನೆ. ಬಿಲ್ ಬೋರ್ಡ್ ಪ್ರಕಾರ ಅತೀ ಹೆಚ್ಚು ಮಾರಾಟವಾಗಿರುವ ಶ್ರೇಷ್ಠ ಐದು ಆಲ್ಬಗಳಲ್ಲಿ ಎಮಿನೆಮ್‍ದೇ ಎರಡು ಆಲ್ಬಮ್‌ಗಳಿವೆ.

ಎಮಿನೆಮ್
Eminem performing live at the "DJ Hero" Party in Los Angeles
ಹಿನ್ನೆಲೆ ಮಾಹಿತಿ
ಜನ್ಮನಾಮMarshall Bruce Mathers III
ಅಡ್ಡಹೆಸರುSlim Shady
ಮೂಲಸ್ಥಳDetroit, Michigan, U.S.
ಸಂಗೀತ ಶೈಲಿHip hop
ವೃತ್ತಿRapper, record producer, actor, songwriter
ಸಕ್ರಿಯ ವರ್ಷಗಳು1995–present
L‍abelsMashin' Duck Records
Web Ent.
Interscope Records
Aftermath Ent.
Shady Records
Game Recordings
Associated actsD12, Bad Meets Evil, Dr. Dre, 50 Cent
ಅಧೀಕೃತ ಜಾಲತಾಣwww.eminem.com

ಆರಂಭಿಕ ಜೀವನ

ದೇಬೋರಾಹ್ ಮ್ಯಾಥೆರಸ್-ಬ್ರಿಗ್ಸ್ (ನೀ ನೆಲ್ಸನ್) ಮತ್ತು ಮಾರ್ಶಲ್ ಬ್ರೂಸ್ ಮ್ಯಾಥೆರ್ಸ್-ಜೂನಿಯರ್, ಅವರ ಮಗನಾಗಿ ಮ್ಯಾಥೆರ್ಸ್ ಮಿಸ್ಸೌರಿಯ, ಸೇಂಟ್. ಜೋಸೆಫ್ ನಲ್ಲಿ ಜನಿಸಿದನು.[೮] ಮ್ಯಾಥೆರ್ಸ್ ಸ್ಕಾಟಿಶ್,[೯] ಇಂಗ್ಲೀಷ್ ನವನು ಮತ್ತು ದೂರದ ಸ್ವಿಸ್ ಮತ್ತು ಜರ್ಮನ್ ಪೀಳಿಗೆಯವನು.[೧೦] ಮ್ಯಾಥರ್ಸ್ ಜನಿಸಿದ ಅಲ್ಪ ಕಾಲದಲ್ಲೇ ಅವನ ತಂದೆ ಕುಟುಂಬವನ್ನು ತ್ಯಜಿಸಿದನು. ಮ್ಯಾಥೆರ್ಸ್ ಮತ್ತು ಅವನ ತಾಯಿ ಅವನ ಹನ್ನೆರಡನೆಯ ವಯಸ್ಸಿನವರೆಗೂ, ಡೆಟ್ರ‍ಾಯ್ಟನ ಉಪನಗರ ಮಿಚೀಗನ್‌ನ, ವಾರ್ರೆನ್ ಗೆ ಬರುವುವವರೆಗೂ ಮಿಸ್ಸೌರಿಯ ವಿವಿಧ ನಗರ ಮತ್ತು ಪಟ್ಟಣ (ಅವುಗಳಲ್ಲಿ ಸೇಂಟ್.ಜೋಸೆಫ್‌ನ ಸವಾನ್ನಾಹ್ ಮತ್ತು ಕ್ಯಾನ್ಸಸ್ ಸಿಟಿ)[೧೧] ಗಳ ನಡುವೆ ಅಲೆದಾಡುತ್ತಿದ್ದರು. ಬೀಸ್ಟೀ ಬಾಯ್ಸ್ ಅವರ ಆಲ್ಬಮ್ ಲೈಸನ್ಸಡ್ ಟು Ill ಯ ಪ್ರತಿ ಪಡೆದ ಮೇಲೆ ಮ್ಯಾಥೆರ್ಸ್‌ಗೆ ಹಿಪ್ ಹಾಪ್ ನಲ್ಲಿ ಆಸಕ್ತಿ ಮೂಡಿತು, "M&M" ಎಂಬ ಕಲ್ಪಿತ ನಾಮದ ಅಡಿಯಲ್ಲಿ ಹವ್ಯಾಸಿ ರಾಪ್ ಸಂಗೀತಗಾರನಾಗಿ ನಂತರ "ಬಾಸ್‌ಮಿಂಟ್ ಪ್ರೊಡಕ್ಷನ್ಸ್" ಎಂಬ ತಂಡವನ್ನು ಸೇರಿ ಮೊದಲ EP ಸ್ಟೆಪ್ಪಿನ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿದರು.ಆನಂತರ ಅದರ ಹೆಸರನ್ನು "ಸೋಲ್ ಇಂಟೆಂಟ್" ಎಂದು ಬದಲಾಯಿಸಿದರು ಮತ್ತು ಸುಮಾರು 1995ರಲ್ಲಿ ಅವರ ಮೊದಲ ಏಕವ್ಯಕ್ತಿ ಹಾಡು "ಫಕಿನ್ ಬ್ಯಾಕ್‌ಸ್ಟಾಬರ್" ಎಂದು ಕರೆದು ಧ್ವನಿಮುದ್ರಕದ ಮೇಲೆ ಹಣೆಪಟ್ಟಿ ಮಶಿನ್ ಡಕ್ ರೆಕಾರ್ಡ್ಸ್ ಎಂದು ಹಾಕಿ ಬಿಡುಗಡೆ ಮಾಡಿದರು.[೧] ವಾರ್ರೆನ್‌ನ ಲಿಂಕನ್ ಹೈ ಸ್ಕೂಲ್ ನಲ್ಲಿ ಹೆಸರನ್ನು ದಾಖಲಿಸಿದ್ದರೂ ನಗರದಾಚೆಯ ಆಸ್ಬಾರ್ನ್ ಹೈ ಸ್ಕೂಲಿನಲ್ಲಿ ನಡೆಯುತ್ತಿದ್ದ ಫ್ರೀ ಸ್ಟೈಲ್ ಬ್ಯಾಟಲ್ಸ್ ನಲ್ಲಿ ಆಗಾಗ್ಗೆ ಪಾಲ್ಗೊಂಡು ಭೂಗತ ಹಿಪ್ ಹಾಪ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ.[೧]ಓದುಗಳ್ಳತನ ದಿಂದಾಗಿ ಒಂಬತ್ತನೇ ಶ್ರೇಣಿಯಲ್ಲಿ ಎರಡು ಸಾರಿ ಅನುತೀರ್ಣಗೊಂಡ ಮೇಲೆ ಶಾಲೆ ತ್ಯಜಿಸಿದ ಆಗ ಅವನ ವಯಸ್ಸು 17.[೮]

ಸಂಗೀತದ ವೃತ್ತಿ ಜೀವನ

1992–1998: ಆರಂಭಿಕ ವೃತ್ತಿಜೀವನ ಮತ್ತು ಇನ್‌ಫೈನೈಟ್

ಜೆಫ್ ಮತ್ತು ಮಾರ್ಕ್ ಬಾಸ್ ಸಹೋದರರ ನಡೆಸುವ FBT ಪ್ರೊಡಕ್ಷನ್ಸ್‌ಗೆ ಮ್ಯಾಥೆರ್ಸ್ 1992ರಲ್ಲಿ ಮೊದಲು ಸಹಿ ಮಾಡಿದ್ದು. ಸೇಂಟ್. ಕ್ಲೇರ್ ಶೋರ್ಸ್ ನ ಗಿಲ್ಬರ್ಟ್ ಲಾಡ್ಜ್ ನಲ್ಲಿ ಅಡುಗೆ ಮಾಡುವ ಮತ್ತು ಪಾತ್ರೆ ತೊಳೆಯುವ ಕಡಿಮೆ ವೇತನದ ಕೆಲಸವನ್ನೂ ಕೆಲ ಕಾಲ ಮ್ಯಾಥೆರ್ಸ್ ಮಾಡಿದ್ದನು.[೧೨] 1996ರಲ್ಲಿ ಮ್ಯಾಥೆರ್ಸ್‌ನ ಮೊದಲ ಆಲ್ಬಮ್ ಇನ್‌ಫೈನೈಟ್ ಸ್ವತಂತ್ರ ಗುರುತಿನ ಚೀಟಿಯೊಂದೆಗೆ ಅಥವಾ ಸ್ವತಂತ್ರ ಹಣೆಪಟ್ಟಿಯೊಂದಿಗೆ ವೆಬ್ ಎಂಟರ್‌ಟೈನ್‌ಮೆಂಟ್ ಎಂದು ಬಿಡುಗಡೆಯಾಯಿತು ಮತ್ತು ಅದರ ಧ್ವನಿ ಮುದ್ರಣ ಕಾರ್ಯ ನಡೆದದ್ದು ಬಾಸ್ ಬ್ರದರ್ಸ್ ಒಡೆತನದ ಬಾಸ್‌ಮಿಂಟ್‌ನಲ್ಲಿ.[೧೩] ಎಮಿನೆಮ್ ನೆನಪಿಸಿಕೊಂಡದ್ದು, "ನಿಸ್ಸಂಶಯವಾಗಿ ನಾನು ಚಿಕ್ಕವನಾಗಿದ್ದೆ ಮತ್ತು ಇತರ ಕಲಾವಿದರ ಪ್ರಭಾವಕ್ಕೊಳಪಟ್ಟಿದ್ದೆ ಮತ್ತು ನನಗೆ ಪ್ರತಿಕ್ರಿಯೆಗಳು ಬರುತ್ತಿದ್ದವು ನಾನು ನಾಸ್ ಮತ್ತು AZ ತರಹ ಧ್ವನಿಸುತ್ತಿದ್ದೇನೆ ಎಂದು. ನನ್ನ ರಾಪ್ ಸ್ಟೈಲ್ ಹೇಗಿರಬೇಕು ಮತ್ತು ನಾನು ಹೇಗೆ ಮೈಕ್‌ನಲ್ಲಿ ಧ್ವನಿಸಬೇಕು ಮತ್ತು ಹೇಗೆ ಮಂಡಿಸಬೇಕು ಎನ್ನುವುದರ ಪ್ರಯತ್ನವೇ ಇನ್‌ಫೈನೈಟ್ ಆಲ್ಬಮ್. ಅದು ಬೆಳವಣಿಗೆಯ ಹಂತ. ಇನ್‌ಫೈನೈಟ್ ಒಂದು ಪ್ರದರ್ಶನವೆಂಬಂತೆ ಅಂದುಕೊಂಡೆ ಸ್ಅದು ಸುಮ್ಮನೆ ಮೇಲಕ್ಕೇರಿಸಿತು."[೧೪] ಸೀಮಿತ ಹಣದಲ್ಲಿ ಆಗತಾನೇ ಜನಿಸಿದ ಅವನ ಮಗಳನ್ನು ಬೆಳಸಬೇಕಾದ ಅನಿವಾರ್ಯತೆ ಮತ್ತು ಶ್ರೀಮಂತನಾಗಬೇಕೆಂಬ ಹಂಬಲ ಈ ಹೋರಾಟವೇ ಇನ್‌ಫೈನೈಟ್ ಒಳಗೊಂಡ ವಿಷಯ ವ್ಯಾಪ್ತಿ.[೧೫] ವೃತ್ತಿ ಜೀವನದ ಆರಂಭದ ಕಾಲದಲ್ಲಿ ಎಮಿನೆಮ್ ಸಹವರ್ತಿ ಡೆಟ್ರಾಯ್ಟ್‌ನ MC ರಾಯ್ಸೆ ಡಾ 5'9" ಜೊತೆ ಬ್ಯಾಡ್ ಮೀಟ್ಸ್ ಈವಿಲ್ ಹೆಸರಿನ ವೇದಿಕೆಯಲ್ಲಿ ಕೆಲಸ ಮಾಡಿದನು.[೧೬] ಇನ್‌ಫೈನೈಟ್ ನ ಬಿಡುಗಡೆಯ ನಂತರ ಎಮಿನೆಮ್‌ನ ವೈಯಕ್ತಿಕ ಹೋರಾಟವು ಮಾದಕವಸ್ತು ಮತ್ತು ಮದ್ಯಸಾರದ ದುರುಪಯೋಗ ಹಾಗು ಆತ್ಮಹತ್ಯೆ ವಿಫಲ ಪ್ರಯತ್ನದ ಪರಕಾಷ್ಟೆವರೆಗೂ ತಲುಪಿತು.[೧]

ದಿ ಸ್ಲಿಮ್ ಶ್ಯಾಡಿ EP ಬಿಡುಗಡೆ ಆಗಿದೊಡನೆಯೇ ಮ್ಯಾಥರ್ಸ್ ತನ್ನ ಶೈಲಿ ಹಾಗೂ ಆಲ್ಬಮ್‌ನ ವಿಷಯದಲ್ಲಿ ಭೂಗತ ರಾಪರ್ ಕೇಜ್ ಅನ್ನು ಅನುಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.[೧೭][೧೮] EPಯ ಮಾರಾಟ ಪ್ರಚಾರದಲ್ಲಿ ಮ್ಯಾಥೆರ್ಸ್ ಇನ್‌ಸೇನ್ ಕ್ಲೌನ್ ಪೊಸ್ಸ್ ಸದಸ್ಯ ಜೋಸೆಫ್ ಬ್ರೂಸ್ ನನ್ನು ಕಂಡು ಕರಪತ್ರವನ್ನು ಕೈಗಿಟ್ಟ ಅದರಲ್ಲಿ ಬ್ರೂಸ್ ತಂಡವು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ನಡೆಸಿ ಕೊಡುತ್ತದೆ ಎಂಬ ಅರ್ಥ ಬರುವಂತೆ ಅದರಲ್ಲಿ ಇತ್ತು. ತನ್ನನ್ನು ಸಂಪರ್ಕಿಸದೆ ತಂಡದ ಹೆಸರನ್ನು ಈ ರೀತಿ ಬಳಸಿರುವುದಕ್ಕಾಗಿ ಬ್ರೂಸ್ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ನಿರಾಕರಿಸಿದ. ಬ್ರೂಸ್‌ನ ಪ್ರತಿಕ್ರಿಯೆಯಿಂದಾಗಿ ವೈಯಕ್ತಿಕವಾಗಿ ಸಿಟ್ಟುಗೊಂಡ ಮ್ಯಾಥೆರ್ಸ್ ರೇಡಿಯೋ ಸಂದರ್ಶನಗಳಲ್ಲಿ ಅವರನ್ನು ಟೀಕಿಸುತ್ತಿದ್ದ.[೧೯][೨೦]1997ರಲ್ಲಿ ರಾಪ್ ಒಲೈಂಪಿಕ್ಸ್ ನಲ್ಲಿ ಎರಡನೆ ಸ್ಥಾನವನ್ನು ಎಮಿನೆಮ್ ಗೆದ್ದುಕೊಂಡಾಗ ಇಂಟರ್‌ಸ್ಕೋಪ್ ರೆಕಾರ್ಡ್ಸ್ ನ CEO ಜಿಮ್ಮಿ ಲೋವಿನೆ ಎಮಿನೆಮ್‌ನ ಒಂದು ಪ್ರದರ್ಶನ ಟೇಪ್‌ಗಾಗಿ ಮನವಿ ಮಾಡಿದ.ಆಫ್ಟರ್‌ಮಾಥ್ ಎಂಟರ್‌ಟೈನ್‌ಮೆಂಟ್ ನ ಸ್ಥಾಪಕ ಹಾಗೂ ಧ್ವನಿ ಮುದ್ರಣದ‌ ನಿರ್ಮಾಪಕ Dr. ಡ್ರಿ ಗಾಗಿ ಲೋವಿನೆ ಟೇಪ್ ಅನ್ನು ನುಡಿಸಿದ. ಎಮಿನೆಮ್‌ನ ಮುಂಬರುವ ದೊಡ್ಡ ಮಟ್ಟದ ಆಲ್ಬಮ್ ದಿ ಸ್ಲಿಮ್ ಶ್ಯಾಡಿ LP ಗಾಗಿ ಇಬ್ಬರೂ ಹಾಡಿನ ಜಾಡುಗಳನ್ನು ಮುದ್ರಿಸಿಕೊಳ್ಳಲು ಪ್ರಾರಂಭಿಸಿದರು ಮತ್ತು ಎಮಿನೆಮ್ ಕಿಡ್ ರಾಕ್ ಅವರ ಡೆವಿಲ್ ವಿಥೌಟ್ ಎ ಕಾಸ್ ನಲ್ಲಿ ಅತಿಥಿ ಕಲಾವಿದನಾಗಿ ಕಾಣಿಸಿಕೊಂಡ.[೧] ಮಾರ್ಚ್ 1998ರ ಹಿಪ್ ಹಾಪ್ ಮ್ಯಾಗಝೈನ್ ದಿ ಸೋರ್ಸ್ ನ "ಅನ್‌ಸೈನ್ಡ್ ಹೈಪ್" ಅಂಕಣದಲ್ಲಿ ಎಮಿನೆಮ್ ಅನ್ನು ವಿಶೇಷ ಆಕರ್ಷಣೆಯಾಗಿ ಕಾಣಿಸಲಾಯಿತು.[೨೧]

1998–1999: ದಿ ಸ್ಲಿಮ್ ಶ್ಯಾಡಿ LP

ಬಿಲ್‌ಬೋರ್ಡ್ ಮ್ಯಾಗಝೈನ್ ನ ಪ್ರಕಾರ, ಈ ಹಂತದಲ್ಲಿ ಎಮಿನೆಮ್, "ತನ್ನ ಬದುಕಿನ ವಿಷಾದಗಳಿಂದ ತಪ್ಪಿಸಿಕೊಳ್ಳುವುದಕ್ಕೆ ತನ್ನ ಸಂಗೀತದ ಆಸೆ-ಆಕಾಂಕ್ಷೆಗಳೊಂದೇ ದಾರಿ ಎಂದು ಅರಿತ". ಆಫ್ಟರ್‌ಮಥ್ ಎಂಟರ್‌ಟೇನ್‌ಮೆಂಟ್/ಇಂಟರ್‌ಸ್ಕೋಪ್ ರೆಕಾರ್ಡ್ಸ್ ಗೆ 1998ರಲ್ಲಿ ಸಹಿ ಮಾಡಿದ ಮೇಲೆ ಎಮಿನೆಮ್ 1999ರಲ್ಲಿ Dr. ಡ್ರ‍ೀ ನಿರ್ಮಿಸಿದ ತನ್ನ ಮೊದಲ ಸ್ಟೂಡಿಯೋ ಆಲ್ಬಮ್ ದಿ ಸ್ಲಿಮ್ ಶ್ಯಾಡೀ LP ಅನ್ನು ಬಿಡುಗಡೆ ಮಾಡಿದ. ಬಿಲ್‌ಬೋರ್ಡ್ ನ ಪ್ರಕಾರ ಆಲ್ಬಮ್, "ಬೆಳಕಿನ ವರ್ಷಗಳಷ್ಟು ಮುಂದಿನ ವಸ್ತುಗಳನ್ನು ಮೊದಲೇ ಬರೆದಿದ್ದಾನೆ" .[೨೨]ವರ್ಷಾಂತ್ಯದಲ್ಲಿ ಟ್ರ‍ಿಪಲ್ ಪ್ಲಾಟಿನಮ್ ಆಗುತ್ತಾ 1999ರ ಅತ್ಯಂತ ಜನಪ್ರಿಯ ಆಲ್ಬಮ್ ಆಯಿತು.[೨೩] ಆಲ್ಬಮ್‌ನ ಸಾಹಿತ್ಯದಿಂದಾಗಿ ಆಲ್ಬಮ್ ವಾಗ್ವಾದಕ್ಕೆ ಸಿಲುಕಿತು. "'97 ಬೋನೀ ಆಂಡ್ ಕ್ಲೈಡ್" ನಲ್ಲಿ ಎಮಿನೆಮ್ ತನ್ನ ಸತ್ತ ಹೆಂಡತಿಯ ದೇಹವನ್ನು ಸಂಸ್ಕಾರ ಮಾಡಿ ಹಸುಗೂಸು ಮಗಳೊಡನೆ ಕೈಗೊಂಡ ಪ್ರವಾಸದ ಬಗ್ಗೆ ವಿವರಿಸುತ್ತಾನೆ. ಇನ್ನೊಂದು ಹಾಡು "ಗಿಳ್ಟಿ ಕನ್ಸೈನ್ಸ್"ನಲ್ಲಿ, ಒಬ್ಬ ತನ್ನ ಹೆಂಡತಿಯನ್ನು ಹಾಗು ಅವಳ ಪ್ರಿಯಕರನನ್ನು ಸಾಯಿಸುವುದಕ್ಕೆ ಎಮಿನೆಮ್ ಪ್ರೋತ್ಸಾಹ ನೀಡುತ್ತಾನೆ. ಎಮಿನೆಮ್ ಮತ್ತು ಡಾ. ಡ್ರೀ ನಡುವೆ ಬಲಿಷ್ಠ ಸ್ನೇಹ ಮತ್ತು ಸಂಗೀತದ ಬಂದ್ಧಕ್ಕೆ "ಗಿಳ್ಟಿ ಕನ್ಸೈನ್ಸ್" ನಾಂದಿಯಾಯಿತು. ಎರಡು ಬ್ರಾಂಡ್ ಸಹಚರರು ಆನಂತರ ಸಾಲು-ಸಾಲು ಹಿಟ್ ಹಾಡುಗಳಿಗೆ ಜೊತೆಗೂಡುತ್ತಾರೆ, ಆ ಹಿಟ್ ಹಾಡುಗಳೆಂದರೆ

"ಫರ್ಗಾಟ್ ಅಬೌಟ್ ಡ್ರೀ" ಮತ್ತು "ವಾಟ್ಸ್ ದಿ ಡಿಫರೆನ್ಸ್" ಡಾ. ಡ್ರೀಯ ಆಲ್ಬಮ್ 2001 ರಲ್ಲಿ, "ಬಿಚ್ ಪ್ಲೀಸ್ II" ಹಾಡು ದಿ ಮಾರ್ಶಲ್ ಮ್ಯಾಥೆರ್ಸ್ LP ನಲ್ಲಿ, "ಸೇ ವಾಟ್ ಯು ಸೇ" ಹಾಡು ದಿ ಎಮಿನೆಮ್ ಶೋ ನಲ್ಲಿ, ಎನ್‌ಕೋರ್ ನಿಂದ "ಎನ್‌ಕೋರ್/ಕರ್ಟೈನ್ಸ್ ಡೌನ್" ಮತ್ತು ರಿಲ್ಯಾಪ್ಸ್ ನಿಂದ "ಓಳ್ಡ್ ಟೈಮ್ಸ್ ಸೇಕ್" ಮತ್ತು "ಕ್ರ್ಯಾಕ್ ಎ ಬಾಟಲ್". ಆಫ್ಟರ್‌ಮಾಥ್ ಎಂಬ ಕಂಪನಿಯ ಆಲ್ಬಮ್ಗಳಲ್ಲಿ ಡಾ.ಡ್ರೀ ಒಂದು ಸಲವಾದರೂ ಅತಿಥಿ ಕಲಾವಿದನಾಗಿ ಎಮಿನೆಮ್‌ನ ಸ್ಟೂಡಿಯೋ ಆಲ್ಬಮ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದನು.[೨೪] ಆಲ್ಬಮ್ ಅನ್ನು ರೆಕಾರ್ಡಿಂಗ್ ಇಂಡಸ್ಟ್ರ‍ಿ ಅಸೋಸಿಯೇಷನ್ ಆಫ್ ಅಮೇರಿಕಾ (RIAA)ನವರು 4 ಬಾರಿ ಪ್ಲಾಟೀನಮ್ ಎಂದು ಪ್ರಮಾಣಿಸಿದೆ. ಜೊತೆಗೆ ವಿಶ್ವದಾದ್ಯಂತ 9 ದಶಲಕ್ಷ ಆಲ್ಬಮ್ ಮಾರಾಟವಾಗಿದೆ.

2000–2001: ದಿ ಮಾರ್ಶಲ್ ಮ್ಯಾಥರ್ಸ್ LP

ಮೇ 2000ದಲ್ಲಿ ದಿ ಮಾರ್ಶಲ್ ಮ್ಯಾಥರ್ಸ್ LP ಬಿಡುಗಡೆಯಾಯಿತು. ಸ್ನೂಪ್ ಡಾಗ್ ನ ದಾಖಲೆಯನ್ನು ಮುರಿದು ಇದು 1.76 ದಶಲಕ್ಷ ಪ್ರತಿಗಳು ಮಾರಾಟವಾಗಿದೆ.ಡಾಗ್ಗಿಸ್ಟೈಲ್ ಅತೀ ವೇಗವಾಗಿ ಮಾರಾಟಗೊಂಡ ಹಿಪ್ ಹಾಪ್ ಆಲ್ಬಮ್ ಮತ್ತು ಬ್ರಿಟ್ನೀಯ್ ಸ್ಪೀಯರ್ಸ್' ... ಬೇಬಿ ಒನ್ ಮೋರ್ ಟೈಮ್ ಎನ್ನುವ ಸೋಲೋ (ಒಂಟಿಯಾಗಿ ಹಾಡಿದ) ಆಲ್ಬಮ್ ಯುನೈಟೆಡ್ ಸ್ಟೇಟ್ಸ್‌ನ ಚರಿತ್ರೆಯಲ್ಲೇ ಅತ್ಯಂತ ವೇಗವಾಗಿ ಮಾರಾಟಗೊಂಡ ಆಲ್ಬಮ್ ಆಗಿದೆ.[೨][೨೫] "ದಿ ರೀಯಲ್ ಸ್ಲಿಮ್ ಶ್ಯಾಡಿ"ಯ ಏಕವ್ಯಕ್ತಿ ಹಾಡು ಯಶಸನ್ನು ಕಂಡಿತು ಜೊತೆಗೆ ಖ್ಯಾತನಾಮರನ್ನು ಅಪಮಾನ ಮಾಡಿ ವಿವಾದವನ್ನು ಹುಟ್ಟುಹಾಕಿತು ಮತ್ತು ಅದರಲ್ಲಿ ಅವರ ಬಗ್ಗೆ ಅನಿಶ್ಚಯವಾದ ನಂಬರ್ಲಹವಲ್ಲದ ಮಾತುಗಳಿದ್ದವು; ಎಮಿನೆಮ್ ಮಾತ್ರ, ಫ್ರೆಡ್ ಡರ್ಸ್ಟ್ ಮತ್ತು ಕರ್ಸನ್ ಡಾಲಿ ಬಗ್ಗೆ ಕ್ರಿಶ್ಟೀನಾ ಅಕ್ವಿಲೇರಾ ಮೌಖಿಕ ಲೈಂಗಿಕವೆಸಗಿದ್ದಾರೆ ಎಂದು ಹೇಳಿದ.[೨೬]

ಎರಡನೆಯ ಏಕವ್ಯಕ್ತಿ ಹಾಡು,"ದಿ ವೇ ಐಯಾಮ್" ನಲ್ಲಿ ಧ್ವನಿ ಮುದ್ರಣದ ಕಂಪನಿಯವರು ಹೆಚ್ಚು ಮಾರಾಟ ಮಾಡುವ ಲೆಕ್ಕಾಚಾರದಿಂದ "ಮೈ ನೇಮ್ ಇಸ್" ಅನ್ನು ಮೇಲೆ ಹಾಕಲು ಹೇಳಿ ಅವರು ತರುವ ಒತ್ತಡದ ಬಗ್ಗೆ ತನ್ನ ಅಭಿಮಾನಿಗಳಲ್ಲಿ ಹೇಳಿಕೊಳ್ಳುತ್ತಾನೆ. "ಮೈ ನೇಮ್ ಇಸ್" ಎನ್ನುವ ವೀಡಿಯೋದಲ್ಲಿ ಎಮಿನೆಮ್ ಮರಿಲಿನ್ ಮ್ಯಾನ್ಸನ್ ಅನ್ನು ಹಾಸ್ಯಮಾಡಿದ್ದರೂ ಕಲಾವಿದರು ಉತ್ತಮ ಬಾಂಧವ್ಯದಿಂದಿದ್ದಾರೆ ಎನ್ನಲಾಗಿದೆ. ಸಂಗೀತದ ಕಾರ್ಯಕ್ರಮವೊಂದರಲ್ಲಿ "ದಿ ವೇ ಐಯಾಮ್" ಎನ್ನುವ ಹಾಡನ್ನು ರಿಮಿಕ್ಸ್ ಮಾಡಿಕೊಂಡು ಅವರಿಬ್ಬರೂ ಜೊತೆಗೂಡಿ ಹಾಡಿದರು.[೨೭] ಮೂರನೆ ಏಕವ್ಯಕ್ತಿ ಹಾಡು, "ಸ್ಟಾನ್" (ಅದು ಉದಹರಿಸುವುದು ಡೀಡೋ'ನ "ಥ್ಯಾಂಕ್ ಯೂ"), ಎಮಿನೆಮ್ ಹೊಸದಾಗಿ ತಾನು ಕಂಡುಕೊಂಡ ಕೀರ್ತಿಯ ಜೊತೆ ವ್ಯವಹರಿಸಲು ಯತ್ನಿಸುತ್ತಾನೆ, ತನ್ನ ಬಸುರಿ ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಒಬ್ಬ ಬುದ್ಧಿಗೆಟ್ಟ ಅಭಿಮಾನಿಯ ಪ್ರಾತ್ರವನ್ನು ದಿ ಸ್ಲಿಮ್ ಶ್ಯಾಡಿ LP ಯ "'97 ಬೋನ್ನೀ & ಕ್ಲೈಡ್"ನಲ್ಲಿ ಕಾಣಿಸಿಸುತ್ತಾನೆ.[೮] "ಸ್ಟಾನ್"ನ ಮ್ಯೂಸಿಕ್ ವೀಡಿಯೋನಲ್ಲಿ ಎಮಿನೆಮ್ ಎಡಗೈನಲ್ಲಿ ಬರೆಯುತ್ತಿರುವುದು ಕಂಡು ಬರುತ್ತದೆ ಇದು ಅವನ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ, ಎಮಿನೆಮ್ ಸಾಮಾನ್ಯವಾಗಿ ಎಡಗೈ ಎಂದು ಕೆಲವರು ಬಲಗೈ ಎಂದು ಕೆಲವರು ವಾಗ್ವಾದಕ್ಕಿಳಿಯುತ್ತಿದ್ದರು. Q ಪತ್ರಿಕೆ "ಸ್ಟಾನ್" ಅನ್ನು ಸಾರ್ವಕಾಲಿಕ[೨೮] ಮೂರನೆಯ ಜನಪ್ರಿಯ ರಾಪ್ ಹಾಡು ಎಂದು ಗುರುತಿಸಿತು ಮತ್ತು Top40-Charts.com ನವರು ನಡೆಸಿದ ಇದೇ ಮಾದರಿಯ ಸಮೀಕ್ಷೆಯಲ್ಲಿ ಈ ಹಾಡು ಶ್ರೇಷ್ಟ ಹತ್ತನೆಯದಾಗಿ ಆಯ್ಕೆ ಆಯಿತು.[೨೯]ಈ ಹಾಡು ತುಂಬಾ ಪ್ರಶಂಸೆಗೆ ಒಳಪಟ್ಟಿತು ಮತ್ತು ರೋಲಿಂಗ್ ಸ್ಟೋನ್ ಪತ್ರಿಕೆಯ "500 ಸಾರ್ವಕಾಲಿಕ ಶ್ರೇಷ್ಠ ಹಾಡುಗಳು" ಎಂಬ ಪಟ್ಟಿಯಲ್ಲಿ 290ನೇಯದಾಗಿ ಆಯ್ಕೆಯಾಯಿತು.[೩೦] ಜುಲೈ 2000ದಲ್ಲಿ ದಿ ಸೋರ್ಸ್ ಪತ್ರಿಕೆಯು ಮುಖಪುಟದಲ್ಲಿ ಎಮಿನೆಮ್‌ನ ಚಿತ್ರ ಹಾಕಿತು, ಹೀಗೆ ಮುಖಪುಟದಲ್ಲಿ ರಾರಾಜಿಸಿದ ಮೊದಲ ಬಿಳಿಯನಾದ ಎಮಿನೆಮ್.[೨೧] ಯುನೈಟೆಡ್ ಸ್ಟೇಟ್ಸ್ ಒಂದರಲ್ಲೇ ಸುಮಾರು 10 ದಶಲಕ್ಷ ಆಲ್ಬಮ್ ಮಾರಾಟವಾಗಿದೆ ಮತ್ತು ವಿಶ್ವದಾದ್ಯಂತ 2 ದಶಲಕ್ಷ ಆಲ್ಬಮಿಗೂ ಮಿಗಿಲಾಗಿ ಮಾರಾಟವಾಗಿದೆ ಹಾಗಾಗಿ ಇದಕ್ಕೆ, ರೆಕಾರ್ಡಿಂಗ್ ಇಂಡಸ್ಟ್ರ‍ಿ ಅಸೋಸಿಯೇಷನ್ ಆಫ್ ಅಮೇರಿಕಾದವರು (RIAA) ಡೈಮಂಡ್ ಸರ್ಟಿಫಿಕೇಟ್ ಅನ್ನು ಕೊಟ್ಟಿರುತ್ತಾರೆ.

2001ರಲ್ಲಿ 43ನೇ ಗ್ರಾಮಿ ಪ್ರಶಸ್ತಿಗಳ ಸಮಾರಂಭದಲ್ಲಿ ಎಲ್ಟನ್ ಜಾನ್ ಜೊತೆಗೂಡಿ ಎಮಿನೆಮ್ ಕಾರ್ಯಕ್ರಮ ನಡೆಸಿಕೊಟ್ಟ, ಎಮಿನೆಮ್‌ನ ಸಾಹಿತ್ಯವು ಸಲಿಂಗ ಕಾಮಕ್ಕೆ ಭಯವನ್ನು ಸೂಚಿಸುವಂತಹುದುಎಂದು ಗ್ರಹಿಸಿರುವ [೩೧] ಗೇಯ್ ಆಂಡ್ ಲೆಸ್ಬೀಯನ್ ಅಲ್ಲೈಯನ್ಸ್ ಅಗೇಯ್ನಸ್ಟ್ ಡೆಫೆಮೇಷನ್ (GLAAD) ಸಂಸ್ಥೆಯು ಎಮಿನೆಮ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ದ್ವಿಲಿಂಗೀ ಜಾನ್ ಅನ್ನು ಖಂಡಿಸಿತು.[೩೨]ಇದನ್ನು ಎಂಟರ್‌ಟೈನ್‌ಮೆಂಟ್ ವೀಕ್ಲಿ ಪತ್ರಿಕೆಯು ದಶಕದ ಕೊನೆಯಲ್ಲಿ ಪ್ರಕಟಿಸುವ ದಶಕದ "ಉತ್ತಮ"ಗಳು ಎನ್ನುವ ಪಟ್ಟಿಯಲ್ಲಿ ಇದನ್ನು "ಪ್ರಪಂಚಾದ್ಯಂತ ಕೇಳಿಸಿದ ಅಪ್ಪುಗೆ" ಎಂದು ಹೇಳಿತು. ಹೋಮೋಫೋಬಿಕ್ ಸಾಹಿತ್ಯಕ್ಕಾಗಿ ಟೀಕೆಗೊಳಗಾದ ಎಮಿನೆಮ್ ಒಬ್ಬ ಸಲ್ಲಿಂಗಿ ಕಾಮಿ ಮೂರ್ತಿಯ ಜೊತೆ ವೇದಿಕೆಯನ್ನು "ಸ್ಟಾನ್"ಗಾಗಿ ಹಂಚಿಕೊಂಡಿದ್ದು ಎಂದೆಂದೂ ಮರೆಯದ ಪ್ರಸಂಗ."[೩೩]ಫೆಬ್ರವರಿ 21ರಂದು ಸ್ಟಾಪಲ್ಸ್ ಸೆಂಟರ್ನಲ್ಲಿ ನಡೆದ ಗ್ರಾಮಿ ಸಮಾರಂಭದ ಆಚೆ GLAAD ನವರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.[೩೪] 2001ರಲ್ಲಿ ಎಮಿನೆಮ್ ಮಾಡಿದ ಸಂಗೀತದ ಪ್ರವಾಸದ ಪಟ್ಟಿ ಹೀಗಿದೆ, ಡಾ. ಡ್ರೀ, ಸ್ನೂಪ್ ಡಾಗ್, ಎಕ್ಸಿಬಿಟ್ ಮುಂತಾದ ರಾಪ್ ಸಂಗೀತಗಾರರ ಜೊತೆಯಲ್ಲಿ ಅಪ್ ಇನ್ ಸ್ಮೋಕ್ ಟೂರ್ ಮತ್ತು ಲಿಂಪ್ ಬಿಜ್ಕಿಟ್ ತಂಡದ ಜೊತೆ ಐಸ್ ಕ್ಯೂಬ್[೩೫] ಮತ್ತು ಫ್ಯಾಮಿಲಿ ವ್ಯಾಲ್ಯೂಸ್ ಟೂರ್.[೩೬]

2002–2003: ದಿ ಎಮಿನೆಮ್ ಶೋ

ಎಮಿನೆಮ್‌ನ ಮೂರನೆಯ ಆಲ್ಬಮ್ ದಿ ಎಮಿನೆಮ್ ಶೋ 2002ರ ಬೇಸಿಗೆಯಲ್ಲಿ ಬಿಡುಗಡೆಗೊಂಡು ಮತ್ತೊಂದು ಯಶಸ್ಸಿನ ಕಥೆಯಾಯಿತು, ಬಿಡುಗಡೆಗೊಂಡ ಒಂದು ವಾರದಲ್ಲೇ 1 ದಶಲಕ್ಷ ಪ್ರತಿಗಳು ಮಾರಾಟವಾದವು, ಯಾವುದೇ ರೀತಿಯ ಚಾರ್ಟ್‌ನಲ್ಲೂ ಅಗ್ರಗಣ್ಯವಾಗಿ ಉಳಿಯಿತು.[೨೩]

ಇದರಲ್ಲಿ " ವಿಥೌಟ್ ಮೀ" ಎನ್ನುವ ಏಕವ್ಯಕ್ತಿಯ ಹಾಡು ಇದೆ ಇದು "ದಿ ರೀಯಲ್ ಸ್ಲಿಮ್ ಶ್ಯಾಡಿ"ಯ ಮುಂದಿನ ಭಾಗದಂತೆ ಗೋಚರಿಸುತ್ತದೆ ಇದರಲ್ಲಿ ಎಮಿನೆಮ್, ಬಾಯ್ ಬ್ಯಾಂಡ್ ನ ಲಿಂಪ್ ಬಿಜ್ಕಿಟ್, ಮಾಬಿ, ಮತ್ತು ಲಿನ್ನ್ ಚೆನೇಯ್ ಮುಂತಾದವರ ಬಗ್ಗೆ ಅನುಚಿತವಾದ ಟೀಕೆಗಳನ್ನು ಮಾಡಿದ್ದಾನೆ. ದಿ ಎಮಿನೆಮ್ ಶೋ ಒಂದು ಹಿಪ್ ಹಾಪ್ ಕ್ಲಾಸಿಕ್ ಆಗಿದ್ದು ಅದಕ್ಕೆ ರೆಕಾರ್ಡಿಂಗ್ ಇಂಡಸ್ಟ್ರ‍ಿ ಅಸೋಸಿಯೇಷನ್ ಆಫ್ ಅಮೇರಿಕಾ (RIAA) ದವರು ಡೈಮಂಡ್ ಸರ್ಟಿಫಿಕೇಟ್ ಅನ್ನು ಕೊಟ್ಟಿರುತ್ತಾರೆ. ಇದು ಯುನೈಟೆಡ್ ಸ್ಟೇಟ್ಸ್ ನಲ್ಲಿ 10 ದಶಲಕ್ಷ ಮಾರಾಟವಾದರೆ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ 20 ದಶಲಕ್ಷ ಮಾರಾಟವಾಗಿರುತ್ತದೆ. ಪ್ರಪಂಚಾದ್ಯಂತ ಎರಡು ಆಲ್ಬಮ್‌ಗಳು ತಲಾ 20 ದಶಲಕ್ಷ ಮಾರಾಟವಾಗಿ ಎರಡು ಡೈಮಂಡ್ ಗಳಿಸಿದ ಏಕೈಕ ಕಲಾವಿದ ಎಮಿನೆಮ್. ಎಮಿನೆಮ್‌, ಖ್ಯಾತಿಯನ್ನು, ಅವನ ಹೆಂಡತಿ ಮತ್ತು ಮಗಳ ಜೊತೆ ಅವನ ಬಾಂಧವ್ಯನ್ನು ಮತ್ತು ಹಿಪ್-ಹಾಪ್ ಸಮುದಾಯದಲ್ಲಿ ಅವನ ಮರ್ಯಾದಿ ಎಲ್ಲವನ್ನೂ ಈ ಆಲ್ಬಮ್ ಬಿಂಬಿಸುತ್ತದೆ. 2000ದಲ್ಲಿ ಒಬ್ಬ ವಿನೋದ ಕೂಟಗಳಲ್ಲಿ ಅನಾಹ್ವಾನಿತರನ್ನು ಹೊರಗಟ್ಟುವ ಆಳು ತನ್ನ ಹೆಂಡತಿಯನ್ನು ಚುಂಬಿಸುವುದನ್ನು ಕಂಡು ಎಮಿನೆಮ್ ಅವನ ಮುಖದ ಮೇಲೆ ಬಾರಿಸಿದ ಕೇಸ್ ಬಗ್ಗೆ ಕೂಡ ಎಮಿನೆಮ್ ಹೇಳಿದ್ದಾನೆ. ಆಲ್‌ಮ್ಯೂಸಿಕ್ ನ ಸ್ಟೀಫೆನ್ ಥಾಮಸ್ ಎರ್ಲೇವೈನ್, ಈ ಆಲ್ಬಮ್‌ನಲ್ಲಿ ಎಮಿನೆಮ್‌ನ ಕೋಪವು ಹಲವು ಹಾಡಿನ ಜಾಡಿನಲ್ಲಿ ಸ್ಪಷ್ಟವಾಗಿದೆ ಎಂದಿದ್ದಾನೆ, ದಿ ಮಾರ್ಶಲ್ ಮ್ಯಾಥೆರ್ಸ್ LP ಯಷ್ಟು ಪ್ರಚೋದಕತೆ ಇದರಲ್ಲಿ ಇಲ್ಲ ಎನ್ನಲಾಗಿದೆ.[೩೭] ಆದಾಗ್ಯೂ ಹಿಂದೆ ಮಿಸೋಗೈನಿಸ್ಟಿಕ್ ಸಾಹಿತ್ಯಕ್ಕಾಗಿ ದಿ ಮಾರ್ಶಲ್ ಮ್ಯಾಥೆರ್ಸ್ LP ಅನ್ನು ಟೀಕಿಸಿದ L. ಬ್ರೆಂಟ್ ಬೊಜೆಲ್ III ಗಮನಿಸಿದಂತೆ ದಿ ಎಮಿನೆಮ್ ಶೋ ನಲ್ಲಿ ಕೀಳು ದರ್ಜೆಯ ಭಾಷೆಯನ್ನು ಬಳಸಲಾಗಿದೆ, ತಾಯಿಗಂಡ ಪದವನ್ನು ಪರಿಷ್ಕರಣೆ ಮಾಡಿರುವುದಕ್ಕಾಗಿಯೂ ಎಮಿನೆಮ್‌ಗೆ "ಎಮಿನೆಫ್" ಎಂಬ ಅಡ್ದ ಹೆಸರನ್ನು ಕೊಡಲಾಗಿದೆ.ಆಲ್ಬಮ್‌ನಲ್ಲಿ ಹೇಸಿಗೆ ಭಾಷೆ ಮೇಲುಗೈಯಾಗಿದೆ[೩೮]

2004–2005: ಎನ್‌ಕೋರ್

ಡೆಸೆಂಬರ್ 8, 2003ರಂದು ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವೀಸ್ ನವರು, ಎಮಿನೆಮ್ ಯುನೈಟೆಡ್ ಸ್ಟೇಟ್‌ನ ಅಧ್ಯಕ್ಷರನ್ನು ಬೆದರಿಸಿದ ವಿಷಯದ ಬಗ್ಗೆ ತಾವು ಪರೀಶಿಲಿಸುತ್ತಿರುವುದಾಗಿ ಒಪ್ಪಿಕೊಂಡರು.[೩೯]

ಪ್ರಶ್ನಿಸಲ್ಪಡುವ ಸಾಹಿತ್ಯ:"ಸಂಭೋಗಿಸು ಹಣವನ್ನು/ನಾನು ಸತ್ತ ಅಧ್ಯಕ್ಷರಿಗೆ ರಾಪ್ ಮಾಡುವುದಿಲ್ಲ (ಹಾಡುವುದಿಲ್ಲ)/ಅದರ ಬದಲು ಅಧ್ಯಕ್ಷರು ಸಾಯುವುದನ್ನು ನೋಡುವೆನು/ಎಲ್ಲೂ ಹೇಳಿಲ್ಲ, ಆದರೆ ನಾನು ನಡಾವಳಿಯನ್ನು ಸ್ಥಾಪಿಸುತ್ತೇನೆ ..." .ಪ್ರಶ್ನಿಸಲ್ಪಡುವ ಹಾಡು "ವೀ ಆಸ್ ಅಮೇರಿಕನ್ಸ್" ಅನ್ನು ಆಲ್ಬಮ್ ಜೊತೆ ಬೋನಸ್ CD ಆಗಿ ಕೊಡಲ್ಪಟ್ಟಿತು.[೪೦]2004ರಲ್ಲಿ ಎಮಿನೆಮ್‌ನ ನಾಲ್ಕನೆಯ ಆಲ್ಬಮ್ ಎನ್‌ಕೋರ್ ಬಿಡುಗಡೆಯಾಯಿತು. ಸುಮಾರು 700,000 ಪ್ರತಿಗಳು ಮೊದಲ ವಾರದಲ್ಲೇ ಮಾರಾಟವಾಯಿತು. ಇದಕ್ಕೆ ರೆಕಾರ್ಡಿಂಗ್ ಇಂಡಸ್ಟ್ರ‍ಿ ಅಸೋಸಿಯೇಷನ್ ಆಫ್ ಅಮೇರಿಕಾ (RIAA) ದವರು ಪ್ಲಾಟಿನಮ್ ಸರ್ಟಿಫಿಕೇಟ್ ಅನ್ನು ಕೊಟ್ಟಿರುತ್ತಾರೆ, ಇದು ಎಮಿನೆಮ್‌ಗೆ 7ನೇ ಬಾರಿಗೆ ಲಭ್ಯವಾಗಿರುತ್ತದೆ. ಪ್ರಪಂಚಾದ್ಯಂತ 15 ದಶಲಕ್ಷ ಮಾರಾಟವಾಗಿರುತ್ತದೆ. ಇದರಲ್ಲಿ 7.8 ದಶಲಕ್ಷ ಪ್ರತಿಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಮಾರಾಟವಾಗಿದೆ. ಈ ಆಲ್ಬಮ್ ನಲ್ಲಿ ಇನ್ನೊಂದು ಅಗ್ರಮಾನ್ಯ ಅಂಶವೆಂದರೆ "ಜಸ್ಟ್ ಲೂಸ್ ಇಟ್" ಎನ್ನುವ ಏಕವ್ಯಕ್ತಿ ಹಾಡಿನಲ್ಲಿ ಮೈಖೇಲ್ ಜ್ಯಾಕ್ಸನ್ ನನ್ನು ಅವಮಾನಿಸಲಾಗಿದೆ.ಎನ್‌ಕೋರ್ ನಂತರ ಬಿಡುಗಡೆಗೊಂಡ ಏಕವ್ಯಕ್ತಿ ಹಾಡು "ಜಸ್ಟ್ ಲೂಸ್ ಇಟ್"ನ ಬಿಡುಗಡೆಯ ಒಂದು ವಾರದ ನಂತರ ಅಕ್ಟೋಬರ್ 12, 2004ರಂದು ಮೈಖೇಲ್ ಜ್ಯಾಕ್ಸನ್ ವೀಡಿಯೋ ಬಗೆಗಿನ ತನ್ನ ಅಸಮಾಧಾನವನ್ನು ಲಾಸ್ ಏಂಜಲೀಸ್-ಮೂಲದ ಸ್ಟೀವ್ ಹಾರ್ವೇ ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಕ್ತಪಡಿಸಿದ, ಆ ವೀಡಿಯೋದಲ್ಲಿ ಜ್ಯಾಕ್ಸನ್‌ನ ಶಿಶುಕಾಮವನ್ನು,ಮುಖದ ಮೇಲೆ ಮಾಡಿಕೊಂಡ ಚರ್ಮದ ಸರ್ಜರಿಯನ್ನು ಮತ್ತು 1984ರಲ್ಲಿ ಒಮ್ಮೆ ಪೆಪ್ಸಿ ಜಾಹೀರಾತಿನ ಚಿತ್ರೀಕರಣ ವೇಳೆಯಲ್ಲಿ ಕೂದಲಿಗೆ ಬೆಂಕಿ ತಗುಲಿದ್ದನ್ನು ಲೇವಡಿ ಮಾಡಲಾಗಿತ್ತು."ಜಸ್ಟ್ ಲೂಸ್ ಇಟ್" ನ ಸಾಹಿತ್ಯದಲ್ಲಿ ಜ್ಯಾಕ್ಸನ್‌ನ ಕಾನೂನು ತೊಡಕುಗಳನ್ನು ಉಲ್ಲೇಖಿಸಲಾಗಿತ್ತು, ಆದಾಗ್ಯೂ ಒಂದು ಹಾಡಿನಲ್ಲಿ ಹೇಳುತ್ತಾನೆ "... ಮತ್ತು ಅದು ಮೈಖೇಲ್ ಅನ್ನು ತಿವಿಯುವುದಕ್ಕಲ್ಲ/ಅದು ಕೇವಲ ರೂಪಕ/ನಾನು ಕೇವಲ ಸೈಕೋ ಅಷ್ಟೇ...." ಜ್ಯಾಕ್ಸನ್‌ನ ಸ್ನೇಹಿತರು ಮತ್ತು ಬೆಂಬಲಿಗರು ವೀಡಿಯೋದ ವಿರುದ್ಧ ಕಿಡಿಕಾರಿದರು ಅದರಲ್ಲಿ ಸ್ಟೆವೀ ವಂಡರ್ಸ್ ಅಂತೂ ವೀಡಿಯೋವನ್ನು "ಕಿಕಿಂಗ್ ಎ ಮ್ಯಾನ್ ವ್ಹೈಲ್ ಹೀ ಇಸ್ ಡೌನ್" ಮತ್ತು

"ಬುಲ್‌ಶಿಟ್",[೪೧] ಸ್ಟೀವ್ ಹಾರ್ವೇ ಘೋಷಣೆ "ಎಮಿನೆಮ್ ಹ್ಯಾಸ್ ಲಾಸ್ಟ್ ಹಿಸ್ ಘೆಟ್ಟೋ ಪಾಸ್. ವಿ ವಾಂಟ್ ದಿ ಪಾಸ್ ಬ್ಯಾಕ್." [೪೧] ವೀಡಿಯೋದಲ್ಲಿ ಎಮಿನೆಮ್ ಪೀ ವೀ ಹರ್ಮನ್, MC ಹ್ಯಾಮರ್ ಅನ್ನು ಮತ್ತು ಚಿನ್ನದ ವರ್ಣದ ಕೇಶದಲ್ಲಿ ಪ್ರವಾಸವನ್ನು ಕೈಗೊಳ್ಳುವ ಆಸೆಯ ಮಡೋನ್ನಾಳನ್ನೂ ಲೇವಡಿ ಮಾಡಿದ.[೪೨] ಜ್ಯಾಕ್ಸನ್ ಪ್ರತಿಭಟನೆಯ ವಿಚಾರವಾಗಿ ಎಮಿನೆಮ್ ಹಾಡು "ಲೂಸ್ ಯುವರ್‌ಸೆಲ್ಫ್" ಅನ್ನು 2003ರಲ್ಲಿ ತನ್ನ ಆಲ್ಬಮ್ ಪೂಡಲ್ ಹ್ಯಾಟ್ ನಲ್ಲಿ "ಕೌಚ್ ಪೊಟಾಟೋ" ಹೆಸರಿನ ಹಾಡಿನ ಮೂಲಕ ಲೇವಡಿ ಮಾಡಿದ "ವೀರ್ಡ್ Al" ಯಾನ್ಕೋವಿಕ್, ಚಿಕಾಗೋ ಸನ್-ಟೈಮ್ಸ್ ಗೆ "ಕಳೆದ ವರ್ಷ, ಎಮಿನೆಮ್‌ನ "ಲೂಸ್ ಯುವರ್‌ಸೆಲ್ಫ್" ಅನ್ನು ಲೇವಡಿ ಮಾಡುವ ತನ್ನ ವೀಡಿಯೋದ ತಯಾರಿಕೆಯನ್ನು ನಿಲ್ಲಿಸಿಬಿಡುವುದಾಗಿ ಬಲವಂತ ಮಾಡಿದ್ದ, ತನ್ನ ವೀಡಿಯೋ ಅವನ ಭವಿಷ್ಯತ್ತಿಗೆ ಹಾನಿ ಎಂದು ಅವನಿಗೆ ಅನ್ನಿಸಿದೆ,

ಆದುದರಿಂದ ಮೈಖೇಲ್ ಜೊತೆಗೆ ಈ ವ್ಯಂಗದ ಸಂದರ್ಭವು ನನಗಿನ್ನೂ ಇದೆ." [೪೩] ವೀಡಿಯೋ ಪ್ರಸಾರವನ್ನು ಮೊದಲು ನಿಲ್ಲಿಸಿದ್ದು ಬ್ಲಾಕ್ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ನವರು. ಆದಾಗ್ಯೂ, MTVನವರು ಪ್ರಸಾರವನ್ನು ಮುಂದುವರೆಸುವುದಾಗಿ ಘೋಷಿಸಿದರು. ದಿ ಸೋರ್ಸ್ ನ CEO ರೇಮಂಡ್ "ಬೆನ್‌ಜಿನೋ" ಸ್ಕಾಟ್‌ಗೆ ಬರೀ ವೀಡಿಯೋ ನಿಲ್ಲಿಸುವುದಷ್ಟೇ ಅಲ್ಲಾ ಆ ಆಲ್ಬಮ್‌ನಿಂದ ಆ ಹಾಡನ್ನು ತೆಗೆದುಹಾಕಿ ಜ್ಯಾಕ್ಸನ್‌ಗೆ ಸಾರ್ವಜನಿಕವಾಗಿ ಎಮಿನೆಮ್ ಕ್ಷಮೆ ಕೇಳಬೇಕು.[೪೪] ವೈಯಾಕಾಮ್ ನಿಂದ ಫೇಮಸ್ ಮ್ಯೂಸಿಕ್ LLC ಯನ್ನು 2007ರಲ್ಲಿ ಜ್ಯಾಕ್ಸನ್ ಮತ್ತು ಸೋನಿ ತಂದರು. ಈ ಒಪ್ಪಂದವು ಎಮಿನೆಮ್ ಶಕೀರಾ ಮತ್ತು ಬೆಕ್ ಮುಂತಾದವರ ಹಾಡುಗಳ ಹಕ್ಕುಗಳನ್ನು ಕೊಡುತ್ತದೆ.[೪೫] ಆದಾಗ್ಯೂ ಏಕವ್ಯಕ್ತಿ ಹಾಡುಗಳ ಹಾಸ್ಯ ವಸ್ತುವಿನ ಆಲ್ಬಮ್ ಎನ್‌ಕೋರ್ ನಲ್ಲಿ ಯುದ್ಧ ವಿರೋಧಿಯಂಥ ಗಂಭೀರ ವಿಷಯವೂ "ಮೋಶ್"ನ ಹಾಡಿನಲ್ಲಿ ಇದೆ. 2004 U.S. ಅಧ್ಯಕ್ಷೀಯ ಚುನಾವಣೆ ಯ ಒಂದು ವಾರದ ಹಿಂದೆ ಅಕ್ಟೋಬರ್ 25, 2004ರಂದು "ಮೋಶ್" ಅನ್ನು ಎಮಿನೆಮ್ ಇಂಟರ್‌ನೆಟ್‌ನಲ್ಲಿ ಬಿಡುಗಡೆ ಮಾಡಿದ.ಈ ಆಲ್ಬಮ್‌ನಲ್ಲಿ ಬಲವಾದ ಬುಷ್ ವಿರೋಧಿ ಸಂದೇಶವು ಇದೆ, ಇದರಲ್ಲಿ "ಫಕ್ ಬುಷ್‌" ಮತ್ತು "ದಿಸ್ ವೆಪನ್ ಆಫ್ ಮಾಸ್ ಡಿಸ್ಟ್ರ‍ಕ್ಷನ್ ದಟ್ ವಿ ಕಾಲ್ ಔರ್ ಪ್ರೆಸಿಡೆಂಟ್" ಮುಂತಾದ ಸಾಹಿತ್ಯವುಳ್ಳ ಹಾಡುಗಳಿವೆ.[೪೬]ಈ ವೀಡಿಯೋದಲ್ಲಿ ಎಮಿನೆಮ್ ಲಾಯ್ಡ್ ಬ್ಯಾಂಕ್ಸ್ ನಂಥ ಒಂದಷ್ಟು ರಾಪರ್‌ಗಳನ್ನು ಸೇರಿಸಿಕೊಂಡು ಅವರೆಲ್ಲಾ ಬುಷ್ ಅಡ್ಮಿನಿಸ್ಟೇಷನ್ ನ ಬಲಿಪಶುಗಳು ಎಂಬಂತೆ ಚಿತ್ರಿಸಿ ಅವರನೆಲ್ಲಾ ವೈಟ್ ಹೌಸ್ ಗೆ ಕರೆದುಕೊಂಡು ಹೋಗುವಂತೆ ತಯಾರಿಸಲಾಗಿತ್ತು. ಆದಾಗ್ಯೂ ಅಲ್ಲಿಗೆ ಸೈನಿಕರು ಬಂದು ಬಿಡುತ್ತಾರೆ ಆನಂತರ ಅವರು ಮತ ಚಲಾಯಿಸುವುದಕ್ಕೆ ಬಂದಿರುತ್ತಾರೆ ಎಂಬುದಾಗಿ ಗೊತ್ತಾಗುತ್ತದೆ ಕೊನೆಗೆ ವೀಡಿಯೋ ಪರದೆ ಮೇಲೆ "ಮಂಗಳವಾರ ನವೆಂಬರ್ 2ರಂದು ಮತ ಚಲಾಯಿಸಿ" ಎಂದಿರುತ್ತದೆ. ಬುಷ್ ಚುನಾವಣೆ ಗೆದ್ದ ಮೇಲೆ ವೀಡಿಯೋದ ಅಂತ್ಯವನ್ನು ಬದಲಾಯಿಸಲಾಯಿತು ಈ ಹೊಸ ಭಾಗದಲ್ಲಿ ಬುಷ್‌ ನಿಂತು ಭಾಷಣ ಮಾಡುತ್ತಿರುವಂತೆ ಎಮಿನೆಮ್ ಮತ್ತು ಪ್ರತಿಭಟನಾಕಾರರು ವೇದಿಕೆಯೆಡೆಗೆ ದಾಳಿ ಮಾಡಲು ನುಗ್ಗುವಂತೆ ಚಿತ್ರಿಸಲಾಯಿತು.[೪೭]

2005–2008: ಮ್ಯೂಸಿಕಲ್ ಹೈಯಾಟಸ್

ಆಗಸ್ಟ್ 2005ರಲ್ಲಿ ಎಮಿನೆಮ್ ಆಂಗರ್ ಮ್ಯಾನೇಜ್‌ಮೆಂಟ್ ಪ್ರವಾಸದಲ್ಲಿ ಕಾರ್ಯಕ್ರಮ ನಡೆಸಿಕೊಡುವನು.

2005ರಲ್ಲಿ ಉದ್ಯಮದ ಅನೇಕರು ಆರು ವರ್ಷಗಳ ತರುವಾಯ ಮತ್ತು ಅಷ್ಟರಲ್ಲಿ ಅನೇಕ ಪ್ಲಾಟಿನಮ್ ಆಲ್ಬಮ್‌ಗಳನ್ನು ಮಾಡಿ ಎಮಿನೆಮ್ ನಿವೃತ್ತಿ ಹೊಂದುವುದಾಗಿ ಯೋಚಿಸುತ್ತಿದ್ದಾನೆ ಎಂದು ಊಹಿಸಿದರು. 2005ರ ಕೊನೆಯಲ್ಲಿ ದಿ ಫನರೆಲ್ ಎನ್ನುವ ಹೆಸರಿನ ಡಬಲ್-ಡಿಸ್ಕ್ ಆಲ್ಬಮ್ ಬಿಡುಗಡೆ ಆಗಿದ್ದೇ ಈ ಊಹೆಗೆ ಕಾರಣವಾಯಿತು.[೪೮] Curtain Call: The Hitsಹೆಸರಿನ ಅಡಿಯಲ್ಲಿ ಈ ಆಲ್ಬಮ್ ಸುಸ್ಪಷ್ಟವಾಗಿ ಗ್ರೇಟೆಸ್ಟ್ ಹಿಟ್ಸ್ ಆಲ್ಬಮ್ ಆಯಿತು, ' ಡಿಸೆಂಬರ್ 6, 2005ರಂದು ಮನರಂಜನೆಯ ನಂತರ ಬಿಡುಗಡೆಯಾಯಿತು.

2005ರಲ್ಲಿ ಡೆಟ್ರಾಯ್ಟ್ ಫ್ರೀ ಪ್ರೆಸ್ ಒಂಟಿ ಹಾಡುಗಾರ ಎಮಿನೆಮ್‌ಗೆ ಬಲವಾದ ಪೆಟ್ಟೇ ಆಗುವಂಥ ಸುದ್ದಿಯನ್ನು ಬಿತ್ತರಿಸಿತು, ಎಮಿನೆಮ್‌ನ ಒಳವೃತ್ತದ ಸಹಚರರ ಹೆಸರನ್ನು ಹೇಳಿ ಅವರು ಎಮಿನೆಮ್ ಇನ್ನು ಮುಂದೆ ನಿರ್ಮಾಪಕ ಮತ್ತು ಕಂಪನಿಯ ನಿರ್ವಾಹಕನ ಸ್ಥಾನದಲ್ಲಿ ಇರುತ್ತಾನೆ ಎಂದಿತು. ಸಂಗ್ರಹ ಆಲ್ಬಮ್ ಬಿಡುಗಡೆಯ ದಿನದಂದೇ ಡೆಟ್ರಾಯ್ಟ್ ಮೂಲದ WKQI'ನ "ಮೋಜೋ ಇನ್ ದಿ ಮಾರ್ನಿಂಗ್" ರೇಡಿಯೋ ಕಾರ್ಯಕ್ರಮದಲ್ಲಿ,ಎಮಿನೆಮ್ ತಾನು ನಿವೃತ್ತಿ ಹೊಂದುವ ಸುದ್ದಿಯನ್ನು ಅಲ್ಲಗೆಳೆಯುತ್ತ ಆದರೆ ತಾನು ಕಲಾವಿದನಾಗಿ ಒಂದು ವಿರಾಮವನ್ನು ಪಡೆಯುವುದಾಗಿ ಹೇಳಿದನು, ಅವನು "ನನ್ನ ವೃತ್ತಿ ಬದುಕು ಎಲ್ಲಿ ಹೊರಡುತ್ತಿದೆ ಎಂಬುದೇ ಗೊತ್ತಿಲ್ಲದ ಬಿಂದುವಿನಲ್ಲಿ ನಾನು ಇದ್ದೇನೆ ...

ಈ ಕಾರಣದಿಂದಲ್ಲೇ ನಾವು ’ಪರದೆಯ ಕರೆ’ ಎನ್ನುವುದು ಯಾಕೆಂದರೆ ಅದು ಅಂತಿಮವೂ ಆಗಬಹುದು. ನಮಗದು ಗೊತ್ತಿಲ್ಲ." ಎಂದ.[೪೯]2005ರಲ್ಲಿ ಬರ್ನಾರ್ಡ್ ಗೋಳ್ಡ್‌ಬರ್ಗ್ ನ ಪುಸ್ತಕ, 100 ಪೀಪಲ್ ವ್ಹೂ ಆರ್ ಸ್ಕ್ರೂವಿಂಗ್ ಅಪ್ ಅಮೇರಿಕಾ ದಲ್ಲಿ ವಸ್ತುವಾದ; ಅದರಲ್ಲಿ ಎಮಿನೆಮ್ #58ನೇ ಶ್ರೇಣಿಯವನಾಗಿದ್ದ.[೫೦]

ಈ ಪುಸ್ತಕದಲ್ಲಿ ದಿ ನ್ಯೂ ಯಾರ್ಕ್ ಟೈಮ್ಸ್ ನ 2001ರ ಬಾಬ್ ಹರ್ಬರ್ಟ್ ಅವರ ಲೇಖನವನ್ನು ಉಲ್ಲೇಖಿಸಲಾಗಿತ್ತು ಆ ಲೇಖನದಲ್ಲಿ "ಎಮಿನೆಮ್ ಪ್ರಪಂಚದಲ್ಲಿ ಎಲ್ಲಾ ಮಹಿಳೆಯರು ವ್ಯಭಿಚಾರಿಗಳು ಮತ್ತು ಎಮಿನೆಮ್ ಅವರನೆಲ್ಲಾ ಬಲತ್ಕಾರದಿಂದ ಸಂಭೋಗಿಸಿ ಆನಂತರ ಅವರನ್ನು ಸಾಯಿಸಲು ಉತ್ಸುಕನಾಗಿದ್ದಾನೆ." ಎಂದು ಬರೆದಿತ್ತು.[೫೧]ಎಮಿನೆಮ್‌ನ ಸಂಗೀತದಲ್ಲಿನ ಸ್ತ್ರೀದ್ವೇಷ ಕ್ಕೆ ಉದಾಹರಣೆಯಾಗಿ ಎಮಿನೆಮ್‌ನ ದಿ ಸ್ಲಿಮ್ ಶ್ಯಾಡಿ EP ಆಲ್ಬಮ್‌ನ "ನೋ ಒನ್ಸ್ ಇಲ್ಲರ್" ಅನ್ನು ಬಳಸಿದರು.[೫೨] 2005ರ ಬೇಸಿಗೆಯಲ್ಲಿ ಎಮಿನೆಮ್ ಮೂರು ವರ್ಷದಲ್ಲಿ ಮೊದಲ U.S. ಕಾರ್ಯಕ್ರಮವನ್ನು ಪ್ರಾರಂಭಿಸಿದನು, ಆಂಗರ್ ಮ್ಯಾನೇಜ್‌ಮೆಂಟ್ 3 ಟೂರ್ ನಲ್ಲಿ 50 ಸೆಂಟ್, G-ಯುನಿಟ್, ಲಿಲ್' ಜೊನ್, D12, ಓಬೀ ಟ್ರೈಸ್, ದಿ ಆಲ್ಕೆಮಿಸ್ಟ್, ಮತ್ತು ಇನ್ನಿತರವು ಒಳಗೊಂಡಿದ್ದವು.ಆಗಸ್ಟ್ 2005ರಲ್ಲಿ, ಎಮಿನೆಮ್ ಯೂರೋಪಿಯನ್ ಪ್ರವಾಸವನ್ನು ರದ್ದು ಪಡಿಸಿ ಆನಂತರ "ನಿದ್ದೆ ಔಷಧೀಕರಣ"ಕ್ಕೆ ಔಷಧ ಪುನರ್ ವಸತಿ ಚಿಕಿತ್ಸೆಯಲ್ಲಿ ದುಡಿಯುವುದಾಗಿ ಘೋಷಿಸಿದ".[೫೩]

2008–present: ರಿಲ್ಯಾಪ್ಸ್ ಮತ್ತು ರಿಲ್ಯಾಪ್ಸ್ 2

2007ರಲ್ಲಿ ನ್ಯೂ ಯಾರ್ಕ್‌ನ ರೇಡಿಯೋ ಸ್ಟೇಷನ್‌‌ನಲ್ಲಿ ಹಾಟ್ 97 50 ಸಂದರ್ಶನದಲ್ಲಿ ಎಮಿನೆಮ್ ತಾನು ಇನ್ನೊಂದು ಆಲ್ಬಮ್ ಎಂದು ಬಿಡುಗಡೆ ಮಾಡಬೇಕೆಂಬುದರ ಬಗ್ಗೆ ಅನಿಶ್ಚಿತ ಸ್ಥಿತಿಯಲ್ಲಿರುವುದಾಗಿ ತಿಳಿಸುತ್ತಾನೆ. "ತಾನು' ಯಾವಾಗಲೂ ಕೆಲಸಮಾಡುತ್ತಿರುತ್ತೇನೆ – ತಾನು ಯಾವಾಗಲೂ ಸ್ಟೂಡಿಯೋದಲ್ಲೇ ಇರುತ್ತೇನೆ. ಸಧ್ಯಕ್ಕೆ ಕಂಪನಿಗೆ ಶಕ್ತಿ ಇರುವುದರಿಂದ ಎಲ್ಲವೂ ಚನ್ನಾಗಿರುವಂತೆ ಭಾಸವಾಗುತ್ತದೆ. ಸ್ವಲ್ಪ ಹೊತ್ತು, ನನಗೆ ಸ್ಟೂಡಿಯೋ ಒಳಕ್ಕೆ ಹೋಗಬೇಕೆನ್ನಿಸಲಿಲ್ಲ ... ನಾನು ಖಾಸಗಿ ಕೆಲಸದ ಮೇಲೆ ಹೋದೆ. ನಾನು ಖಾಸಗಿ ವಿಷಯಗಳಿಂದ ಆಚೆ ಬರುತ್ತಿದ್ದೇನೆ ಮತ್ತು ಈಗ ಚನ್ನಾಗಿರುವಂತೆ ಭಾಸವಾಗುತ್ತಿದೆ." [೫೪]ಸೆಪ್ಟೆಂಬರ್ 2008ರಲ್ಲಿ ತನ್ನ ಸಿರೀಯಸ್ ಚಾನಲ್ ಶೇಡ್ 45 ನಲ್ಲಿ ಪ್ರತ್ಯಕ್ಷವಾಗಿ ಹೇಳುತ್ತಾನೆ,"ಸಧ್ಯಕ್ಕೆ ನಾನು ಏಕಾಗ್ರತೆಯಿಂದ ನನ್ನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ, ಸಧ್ಯಕ್ಕೆ ಒಳ್ಳೆ ಉತ್ತಮ ಹಾಡಿನ ಜಾಡುಗಳನ್ನು ತಯಾರಿಸುವುದು ನನ್ನ ಆದ್ಯತೆ. ನಿಮಗೆ ಗೊತ್ತೆ, ನಾನು ಹೆಚ್ಚೆಚ್ಚು ಉತ್ತಮವಾದವುಗಳನ್ನು ತಯಾರಿಸಿದಷ್ಟೂ ನನಗೆ ಸತ್ವವಾದವುಗಳು ಗೊತ್ತಾಗುತ್ತಾ ಹೋಗುತ್ತದೆ." [೫೫] ಈ ಸಂದರ್ಭದಲ್ಲೇ ಇಂಟರ್‌ಸ್ಕೋಪ್ ಅಂತಿಮವಾಗಿ ಹೊಸ ಆಲ್ಬಮ್‌ನ ಅಸ್ತಿತ್ವವನ್ನು ದೃಢಪಡಿಸಿತು,[೫೬],[೫೬] 2009ರ ವಸಂತ ಋತುವಿನ ಹಿಂದೆಯೇ ಆಲ್ಬಮ್ ಬಿಡುಗಡೆ ಆಗಬೇಕಾಗಿದ್ದದ್ದು ಎಂದು ಹೇಳಿದರು.[೫೭] ಡಿಸೆಂಬರ್ 2008ರಲ್ಲಿ ಆಲ್ಬಮ್‌ನ ಬಗ್ಗೆ ಹೆಚ್ಚಿನ ವಿವರಗಳನ್ನು ಎಮಿನೆಮ್ ಕೊಟ್ಟ ಮತ್ತು ಇತ್ತೀಚೆಗೆ ಅದನ್ನು ರಿಲ್ಯಾಪ್ಸ್ ಎಂದು ಹೆಸರಿಸಲಾಗಿದೆ ಎಂದು ವರದಿಯಾಗಿದೆ. "ಹಿಂದಿನಂತೆ ನಾನು ಮತ್ತು ಡ್ರೀ ಲ್ಯಾಬ್‌ನೊಳಗೆ ಮತ್ತೆ ಬಂದಿದ್ದೇವೆ, ಮ್ಯಾನ್. ’ರಿಲ್ಯಾಪ್ಸ್’ನ ಹೆಚ್ಚಿನ ಹಾಡುಗಳನ್ನು ಡ್ರೀ ನಿರ್ಮಿಸುತ್ತಾನೆ. ನಾವು ಅದೇ ಹಳೇ ತುಂಟಾಟಗಳಲ್ಲಿ ಇದ್ದೇವೆ ... ಅದನ್ನು ಹಾಗೆಯೇ ಬಿಡೋಣ." [೫೮]ಮಾರ್ಚ್ 5, 2009ರಂದು, ಎಮಿನೆಮ್ ಇದೇ ವರ್ಷ ಎರಡು ಆಲ್ಬಮ್ ಬಿಡುಗಡೆ ಮಾಡುವುದಾಗಿ ಪತ್ರಿಕಾ ಪ್ರಕಟಣೆಯೊಂದರಲ್ಲಿ ಹೇಳಿದ್ದಾನೆ. ರಿಲ್ಯಾಪ್ಸ್ , ಮೊದಲ ಆಲ್ಬಮ್ ಅನ್ನು ಮೇ 19ರಂದು ಬಿಡುಗಡೆಯಾಯಿತು, "ವಿ ಮೇಡ್ ಯೂ", ಮೊದಲ ಅಧಿಕೃತ ಏಕವ್ಯಕ್ತಿ ಹಾಡು ಮತ್ತು ಮ್ಯೂಸಿಕ್ ವೀಡಿಯೋ ಏಪ್ರಿಲ್ 7ರಂದು ಬಿಡುಗಡೆಯಾಯಿತು.[೫೯]. ಅಕ್ಟೋಬರ್ 3, 2009ರಂದು, ಎಮಿನೆಮ್ ಶೇಡ್ 45 ನಲ್ಲಿ DJ ವ್ಹೂ ಕಿಡ್ ಜೊತೆ ಪ್ರತ್ಯಕ್ಷನಾಗಿ ಡಿನಾವ್ನ್ ಪೋರ್ಟರ್ ಮತ್ತು ಜಸ್ಟ್ ಬ್ಲೇಜ್ ವಿರಾಮವಿಲ್ಲದೆ ರಿಲ್ಯಾಪ್ಸ್ 2 ಗಾಗಿ ತುಂಬಾ ಕೆಲಸ ಮಾಡುತ್ತಿದ್ದಾರೆ ಎಂದು ಘೋಷಿಸಿದ.[೬೦] ಅಕ್ಟೋಬರ್ 30ರಂದು ಎಮಿನೆಮ್ ನ್ಯೂ ಆರ್ಲೀಯೆನ್ಸ್‌ನಲ್ಲಿ ನಡೆದ ವೂಡೂ ಮ್ಯೂಸಿಕ್ ಎಕ್ಸ್ಪೀರೀಯೆನ್ಸ್ನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾನೆ,2009ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಮಿನೆಮ್ ಪೂರ್ಣ ಪ್ರಮಾಣದಲ್ಲಿ ಶ್ರ‍ೇಷ್ಠ ನಟನಾಗಿದ್ದು ಈ ಕಾರ್ಯಕ್ರಮದಲ್ಲೇ ಮೊದಲು.[೬೧] ಈ ಕಾರ್ಯಕ್ರಮದಲ್ಲಿ ರಿಲ್ಯಾಪ್ಸ್ನಿಂದ ಅನೇಕ ಹಾಡುಗಳನ್ನು ಮತ್ತು ಹಳೆಯ ಹಿಟ್ ಹಾಡುಗಳನ್ನು ಹಾಡಿ ಮತ್ತು D12ನಿಂದ ಒಂದು ದೃಷ್ಯವನ್ನು ನಡೆಸಿಕೊಟ್ಟ. ಎಮಿನೆಮ್‌ನ ಹಳೆಯ ಆಲ್ಬಮ್‌ನಷ್ಟು ಮಾರಾಟಗೊಳ್ಳದಿದ್ದರೂ ವಾಣಿಜ್ಯದಲ್ಲಿ ಯಶಸ್ಸುಗೊಂಡು ವಿಮರ್ಶಕರ ವಲಯದಲ್ಲಿ ಮೆಚ್ಚುಗೆಯನ್ನೂ ಪಡೆಯಿತು. ಮತ್ತು ಹಿಪ್ ಹಾಪ್ ಪ್ರಪಂಚದಲ್ಲಿ ಪುನರ್ ಪ್ರತಿಸ್ಥಾಪನೆಗೊಂಡ. 2009ರಲ್ಲಿ ರಿಲ್ಯಾಪ್ಸ್ ಶ್ರೇಷ್ಠ ಆಲ್ಬಮ್ ಎಂದು ಹೆಸರಿಸಲಾಯಿತು. ರೆಕಾರ್ಡಿಂಗ್ ಇಂಡಸ್ಟ್ರ‍ೀ ಅಸೊಸೀಯೇಷನ್ ಆಫ್ ಅಮೇರಿಕಾ (RIAA)ದವರು ಡಬಲ್ ಪ್ಲಾಟಿನಮ್ ಎಂದು ಇದನ್ನು ಪ್ರಮಾಣಿಸಿದರು. ವಿಶ್ವದಾದ್ಯಂತ ಇದು 5 ದಶಲಕ್ಷ ಪ್ರತಿಗಳು ಮಾರಾಟವಾದವು. ನವೆಂಬರ್ 19, 2009ರಂದು ಎಮಿನೆಮ್ ತನ್ನ ವೆಬ್‌ಸೈಟ್‌ನಲ್ಲಿ, ರಿಲ್ಯಾಪ್ಸ್: ರೀಫಿಲ್ ಅನ್ನು ಡಿಸೆಂಬರ್ 21ರಂದು ಬಿಡುಗಡೆಗೊಳಿಸುವುದಾಗಿ ಘೋಷಿಸಿದ. "ಫಾರ್‌ಎವರ್" ಮತ್ತು "ಟೇಕಿಂಗ್ ಮೈ ಬಾಲ್" ಎನ್ನುವ ಏಳು ಹೊಸ ಹಾಡುಗಳ ಬೋನಸ್‌ನೊಂದಿಗೆ ರಿಲ್ಯಾಪ್ಸ್ ಅನ್ನು ಪುನರ್ ಬಿಡುಗಡೆಗೊಳಿಸುತ್ತಿರುವುದಾಗಿದೆ.ತನ್ನ ಮುಂದಿನ CD ಬಗ್ಗೆ ಹೀಗೆ ವಿವರಿಸುತ್ತಾನೆ:

"ನಾನು ಮೊದಲೇ ಯೋಜಿಸಿದಂತೆ ಈ ವರ್ಷ ನನ್ನ ಅಭಿಮಾನಿಗಳಿಗೆ ನಾನು ಹೆಚ್ಚಿನದೇ ಕೊಡಬೇಕೆಂದಿದ್ದೇನೆ ... ದಿ ರೀಫಿಲ್ ನ ಈ ಹಾಡುಗಳು ಮುಂದಿನ ವರ್ಷದಲ್ಲಿ ರಿಲ್ಯಾಪ್ಸ್ 2 ಬರುವವರೆಗೂ ನನ್ನ ಅಭಿಮಾನಿಗಳನ್ನು ನಡೆಸುತ್ತದೆ ಎನಿಸುತ್ತದೆ... ಡ್ರೀ ಹಾಗೂ ಜಸ್ಟ್ ಬ್ಲೇಜ್‌ನಂಥ ಇನ್ನೂ ಕೆಲವು ನಿರ್ಮಾಪಕರೊಂದಿಗೆ ಸಂಪೂರ್ಣವಾಗಿ ವಿಭಿನ್ನವಾಗಿ ಕೆದಕುತ್ತಾ ನಡೆದೆ. ರಿಲ್ಯಾಪ್ಸ್ 2 ನಲ್ಲಿ ನಾನು ಅಂದುಕೊಂಡಂತಕ್ಕಿಂತ ಹೊಸ ಹಾಡುಗಳು ವಿಭಿನ್ನವಾಗಿ ಧ್ವನಿಸಿದಂತೆ ಅನಿಸಿದೆ ಆದರೆ ನಾನು ಇನ್ನೂ ಸತ್ವವಾದವುಗಳನ್ನು ಕೇಳಿಸಬೇಕು".

ಶ್ಯಾಡಿ ರೆಕಾರ್ಡ್ಸ್ ಮತ್ತು D12

ಎಮಿನೆಮ್ ಮಳ್ಟಿ-ಪ್ಲಾಟಿನಮ್‌ನಲ್ಲಿ ಧ್ವನಿಮುದ್ರಕಗಳು ಮಾರಾಟಗೊಳ್ಳುತ್ತಿದ್ದಂತೆ ಇಂಟರ್‌ಸ್ಕೋಪ್‌ನವರು ತಮ್ಮ ಸ್ವಂತ ಧ್ವನಿಮುದ್ರಕಗಳ ಕಂಪನಿಯನ್ನು ಬಳಸಲು ಕೊಟ್ಟುಬಿಟ್ಟರು. ಎಮಿನೆಮ್ ಮತ್ತು ತನ್ನ ಮ್ಯಾನೇಜರ್ ಪಾಲ್ ರೋಸೆನ್‌ಬರ್ಗ್ ಶ್ಯಾಡಿ ರೆಕಾರ್ಡ್ಸ್ ಅನ್ನು 1999ರ ಉತ್ತಾರಾರ್ಧದಲ್ಲಿ ಸೃಷ್ಟಿಸಿದರು. ಇದನ್ನು ಅನುಸರಿಸುವಂತೆ ತನ್ನ ಸ್ವಂತ ಡೆಟ್ರಾಯ್ಟ್‌ನ ಸಂಗ್ರಹ D12 ಮತ್ತು ರಾಪರ್ ಓಬೀ ಟ್ರೈಸ್ ಅನ್ನು ಆ ಕಂಪನಿಗೆ ಸಹಿ ಮಾಡಿದರು.

2002ರಲ್ಲಿ, ಎಮಿನೆಮ್ 50 ಸೆಂಟ್ ಆಲ್ಬಮ್‌ಗಾಗಿ ಶ್ಯಾಡಿ ಮತ್ತು ಡಾ.ಡ್ರೀಯ ಆಫ್ಟರ್‌ಮಥ್ ಎನ್ನುವ ಕಂಪನಿಯವರ ನಡುವಿನ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದನು. ಶ್ಯಾಡಿ/ಆಫ್ಟರ್‌ಮಥ್ ಸರದಿ ಪಟ್ಟಿಯ ನಂತರ 2003ರಲ್ಲಿ ಎಮಿನೆಮ್ ಮತ್ತು ಡಾ. ಡ್ರೀ ಅಟ್ಲಾಂಟಾ ರಾಪರ್ ಸ್ಟಾಟ್ ಕ್ವೋಗಾಗಿ ಸಹಿ ಮಾಡಿದರು . ಎಮಿನೆಮ್‌ನ ಮಾಜಿ DJ,DJ ಗ್ರೀನ್ ಲ್ಯಾನ್‌ಟರ್ನ್,ಶ್ಯಾಡಿ ರೆಕಾರ್ಡ್ಸ್‌ಗಾಗಿ ಸಹಿ ಮಾಡಿದ್ದ ಆದರೆ 50 ಸೆಂಟ್ ಮತ್ತು ಜಡಾಕಿಸ್ ವಿಚಾರದಲ್ಲಿ ತಗಾದೆಯಾಗಿದ್ದರಿಂದ ಕಂಪನಿಯಿಂದ ಆಚೆ ಹೋಗಬೇಕಾಯಿತು ಹೀಗಾಗಿ ಮುಂದೆ ಆತ ಎಮಿನೆಮ್ ಜೊತೆಗಿರಲಿಲ್ಲ. ದಿ ಆಲ್ಕೆಮಿಸ್ಟ್ ಈಗ ಎಮಿನೆಮ್‌ನ ಅಧಿಕೃತ ಪ್ರವಾಸದ DJ. 2005ರಲ್ಲಿ ಎಮಿನೆಮ್, ವೆಸ್ಟ್ ಕೋಸ್ಟ್‌ನ ರಾಪರ್ ಕ್ಯಶಿಸ್ ಜೊತೆಗೆ ಮತ್ತೊಂದು ಅಟ್ಲಾಂಟಾ ರಾಪರ್ ಬಾಬಿ ಕ್ರೀಕ್‌ವಾಟರ್‌ ಅನ್ನು ತನ್ನ ಕಂಪನಿಗೆ ಸೇರಿಸಿಕೊಂಡ.[೬೨]ಡಿಸೆಂಬರ್ 5, 2006ರಂದು, ಶ್ಯಾಡಿ ರೆಕಾರ್ಡ್ಸ್ ಸಂಗ್ರಹ ಆಲ್ಬಮ್ ಅನ್ನು ಬಿಡುಗಡೆ ಮಾಡಿತು.Eminem Presents: The Re-Up . ಮಿಕ್ಸ್ ಟೇಪ್ ಆಗಿ ಪ್ರಾರಂಭಗೊಂಡದ್ದು ಕೊನೆಗೆ ಅದು ನಿರೀಕ್ಷೆಗಿಂತ ಚನ್ನಾಗಿ ಮೂಡಿಬಂದುದರಿಂದ ಎಮಿನೆಮ್ ಅದನ್ನು ಪೂರ್ಣ ಆಲ್ಬಮ್ ಆಗಿ ಬಿಡುಗಡೆ ಮಾಡಿದನು. ಸ್ಟಾಟ್ ಕ್ವೋ, ಕ್ಯಾಶಿಸ್ ಮತ್ತು ಕ್ರೀಕ್‌ವಾಟರ್‌ನ ಸರದಿಯಲ್ಲಿ ಇದನ್ನು ಪ್ರಾರಂಭಿಸಿದ್ದು ಹೊಸ ಕಲಾವಿದರಿಗೆ ಸಹಾಯ ಮಾಡಲೆಂದು.[೬೩]ಬಹು ಜನರ ತಂಡ ವು-ಟ್ಯಾಂಗ್ ಕ್ಲಾನ್ ನಂಥೆ ಕಾರ್ಯನಿರ್ವಹಿಸಲು ಇನ್‌ಫೈನೈಟ್ ನ ರೆಕಾರ್ಡಿಂಗ್ ಸಂದರ್ಭದಲ್ಲಿ ಎಮಿನೆಮ್, ಪ್ರೂಫ್ ಮತ್ತು ಕಾನ್ ಆರ್ಟಿಸ್‌ನಂಥ ಒಂದಷ್ಟು ಜನ ರಾಪರ್ಸ್‌ಗಳನ್ನು ಒಂದುಗೂಡಿಸಿದ, ಆ ತಂಡವನ್ನು "ಡೆಟ್ರಾಯ್ಟ್ ಟ್ವೆಲ್ವ್" ಅಥವಾ "ಡರ್ಟೀ ಡಜನ್" ಎಂಬುದಾಗಿ ಕರೆದು D12 ಎಂದು ಚಿಕ್ಕದಾಗಿ ಸಂಬೋಧಿಸುತ್ತಿದ್ದರು.[೬೪] 2001ರಲ್ಲಿ, ಎಮಿನೆಮ್ ಆ D12 ರಾಪ್ ತಂಡವನ್ನು ಪಾಪ್‌ನ ಲೋಕದಲ್ಲಿ ಜನಪ್ರಿಯಗೊಳಿಸಿದ ಮತ್ತು ಆ ತಂಡದಿಂದ ಅದೇ ವರ್ಷ ಡೆವಿಲ್ಸ್ ನೈಟ್ ಬಿಡುಗಡೆಯಾಯಿತು.[೬೫] ಮೊದಲ ಏಕವ್ಯಕ್ತಿಯ ಹಾಡು "ಶಿಟ್ ಆನ್ ಯು", ತದ ನಂತರ ಬಂದದ್ದು "ಪರ್ಪಲ್ ಪಿಲ್ಸ್" ಇದು ಔಷಧಗಳ ಪುನರ್ ಸೃಷ್ಟಿಯ ಬಗ್ಗೆ ಬರೆದಂತಹ ಹಾಡು. "ಪಿಲ್ಸ್" ಅನ್ನು ರೇಡಿಯೋ ಮತ್ತು ದೂರದರ್ಶನಕ್ಕಾಗಿ ಪುನ: ಬರೆಯಲಾಯಿತು, ಅದರಲ್ಲಿದ್ದ ಲೈಂಗಿಕ ಮತ್ತು ಔಷಧಗಳ ಬಗೆಗಿನ ಉಲ್ಲೇಖವನ್ನು ಪರಿಷ್ಕರಿಸಿ "ಪರ್ಪಲ್ ಹಿಲ್ಸ್" ಎಂದು ಮರು ನಾಮಕರಣ ಮಾಡಲಾಯಿತು. ಈ ಏಕವ್ಯಕ್ತಿ ಹಾಡು ಯಶಸ್ವಿಯಾಯಿತು ಆದರೆ ಆಮೇಲೆ ಬಂದ "ಫೈಟ್ ಮ್ಯೂಸಿಕ್" ಯಶಸ್ಸು ಕಾಣಲಿಲ್ಲ.[೬೬]D12ನವರು ತಮ್ಮ ಆರಂಭದ ಆಲ್ಬಮ್ ಬಿಡುಗಡೆಯ ನಂತರ ಮೂರು ವರ್ಷ ಸ್ಟೂಡಿಯೋದಿಂದ ದೂರ ಉಳಿದಿದ್ದರು ಆನಂತರ ಪುನ: ಸಂಘಟಿತರಾಗಿ 2004ರಲ್ಲಿ D12 ವರ್ಳ್ಡ್ ಅನ್ನು ಹೊರ ತಂದರು ಇದರಲ್ಲಿ ಜನಪ್ರಿಯ ಏಕವ್ಯಕ್ತಿ ಹಾಡು "ಮೈ ಬ್ಯಾಂಡ್" ಇದೆ.[೬೫] ಮಿಚಿಗನ್‌ನ ಡೆಟ್ರಾಯ್ಟ್‌ನಲ್ಲಿ 8 ಮೈಲ್ ರಸ್ತೆ ಯ ಕ್ಲಬ್ ಕಾದಾಟದಲ್ಲಿ ಏಪ್ರಿಲ್ 2006ರಲ್ಲಿ D12ನ ಸದಸ್ಯ ದೆಶಾನ್ "ಪ್ರೂಫ್" ಹಾಲ್ಟನ್ ಕೊಲ್ಲಲ್ಪಟ್ಟ ಇದಕ್ಕೂ ಹಿಂದೆ U.S. ನ ಸೈನಿಕ ಕೀಥ್ ಬೆಂಡರ್ ಜೂ., ಅನ್ನು ಪ್ರೂಫ್ ಕೊಂದಿದ್ದ.ಪೂಲ್ ಆಟವೊಂದರಲ್ಲಿ ಆದ ವಾಗ್ವಾದವು ಈ ಕದನಕ್ಕೆ ಕಾರಣ ಎನ್ನಲಾಗಿದೆ. ಈ ಕಾದಾಟದಲ್ಲಿ ಬೆಂಡರ್‌ನ ಸೋದರ ಸಂಬಂದ್ಧಿ ಬೌನ್ಸರ್ ಮಾರಿಯೋ ಎಥರಿಡ್ಜ್ ಪ್ರೂಫ್‌ನನ್ನು ಶೂಟ್ ಮಾಡಿದ. ಖಾಸಗಿ ವಾಹನವೊಂದರಲ್ಲಿ ಸೇಂಟ್.ಜಾನ್ ಹೆಲ್ಥ್ಸ್ ಕೊನ್ನರ್ ಕ್ರೀಕ್ ಕ್ಯಾಂಪಸ್‌ಗೆ ಕರೆದುಕೊಂಡು ಹೋಗಿದ್ದರೂ ಹೊರರೋಗಿಗಳ ವಿಭಾಗದಲ್ಲೇ ಪ್ರೂಫ್ ಸತ್ತಿರುವುದಾಗಿ ಘೋಷಿಸಿದರು.ಅಂತಿಮ ಸಂಸ್ಕಾರದಲ್ಲಿ ಎಮಿನೆಮ್ ಮತ್ತು ಮಾಜಿ ಡೆಟ್ರಾಯ್ಟ್ ಶ್ಯಾಡಿ ರೆಕಾರ್ಡ್ಸ್ ನ ಕಲಾವಿದ ಓಬೀ ಟ್ರೈಸ್ ಅಂತ್ಯ ಸಂಸ್ಕಾರದಲ್ಲಿ ಮಾತನಾಡಿದರು.[೬೭]D12 ಸದಸ್ಯ ಬಿಜಾರ್ರೆ ಎಮಿನೆಮ್ ತಮ್ಮ ಹೊಸ ಆಲ್ಬಮ್ ಬ್ಲೂ ಚೀಸ್ & ಕೋನೀಯ್ ಐಲ್ಯಾಂಡ್ ನಲ್ಲಿ ಸೇರಿಲ್ಲ ಕಾರಣ ಎಮಿನೆಮ್ "ಹೀಸ್ ಬ್ಯುಸಿ ಡೂಯಿಂಗ್ ಹಿಸ್ ಥಿಂಗ್" ನಲ್ಲಿ ಮಗ್ನನಾಗಿದ್ದಾನೆ.[೬೮]

ಪ್ರಭಾವಗಳು ಮತ್ತು ರಾಪ್ಪಿಂಗ್ ತಂತಜ್ಞಾನ

ಎಮಿನೆಮ್‌ನ rapping ಮೇಲೆ ಅನೇಕ MCಗಳ ಪ್ರಭಾವ ಆಗಿದೆ ಅವರುಗಳಲ್ಲಿ ಈಶಮ್,[೬೯] ಕೂಲ್ G ರಾಪ್[೭೦], ಮಸ್ಟಾ ಏಸ್[೭೧], ಬಿಗ್ ಡ್ಯಾಡಿ ಕೇನ್[೭೨], ನ್ಯೂಕ್ಲೀಅಸ್[೭೧], ಐಸ್-T[೭೧], ಮಾಂಟ್ರೋನಿಕ್ಸ್[೭೧], ಮೆಳ್ಳೆ ಮೆಲ್ (ನಿರ್ದಿಷ್ಟವಾಗಿ ’ದಿ ಮೆಸೇಜ್’ ಹಾಡು’)[೭೧], LL ಕೂಲ್ J[೭೧], ದಿ ಬೀಸ್ಟೀ ಬಾಯ್ಸ್[೭೧], ರನ್-DMC[೭೧], ರಾಕಿಮ್[೭೧], ಮತ್ತು ಬೂಗೀ ಡೌನ್ ಪ್ರೊಡಕ್ಷನ್ಸ್[೭೧]. ಹೌ ಟು ರಾಪ್ ಎನ್ನುವ ಪುಸ್ತಕದಲ್ಲಿ, ಗೆರಿಲ್ಲಾ ಬ್ಲಾಕ್ ಬರೆದಿರುವ ಪ್ರಕಾರ ಎಮಿನೆಮ್ ತನ್ನ ರಾಪ್ಪಿಂಗ್ ತಂತ್ರಜ್ಞಾನವನ್ನು ಸೃಷ್ಟಿಸಿಕೊಳ್ಳುವುದಕ್ಕೆ ಬೇರೆ MC ಗಳನ್ನೂ ಅಭ್ಯಸಿಸಿದ್ದಾನೆ ಎನ್ನಲಾಗಿದೆ–“ಎಮಿನೆಮ್ ಎಲ್ಲವನ್ನೂ ಆಲಿಸುತ್ತಿದ್ದ ಆದ್ದರಿಂದಲ್ಲೇ ಆತ ಶ್ರೇಷ್ಠರಲ್ಲಿ ಒಬ್ಬನಾದ”[೭೩].

ಅದೇ ಪುಸ್ತಕದಲ್ಲಿ ,ಎಮಿನೆಮ್ ಅನ್ನು ಬೇರೆ ಇನ್ನಿತರ MCಗಳು ಅವನ ವಿವಿಧ ರಪ್ಪಿಂಗ್ ತಂತ್ರಜ್ಞಾನವನ್ನು ಹೊಗಳಿದ್ದಾರೆ, ಅವುಗಳಲ್ಲಿ : ಅವನ ವಿವಿಧ ಮತ್ತು ಹಾಸ್ಯಮಯ ವಸ್ತು[೭೪], ಪ್ರೇಕ್ಷಕರನ್ನು ಸೇರುವ ಪರಿ[೭೫], ಒಂದೇ ವಸ್ತುವನ್ನು ಅನೇಕ ಮಾಲಿಕೆಗಳ ಆಲ್ಬಮ್‌ಗಳಲ್ಲಿ ಕೊಂಡೊಯುವುದು[೭೬], ಸಂಕೀರ್ಣ ಪ್ರಾಸ ಯೋಜನೆಗಳು[೭೭], ಪ್ರಾಸ ಬರುವಂತೆ ಶಬ್ದಗಳನ್ನು ಬಳಸುವುದು[೭೮], ಬಹು ರೀತಿಯ ಉಚ್ಚಾರಾಂಶಗಳ ಪ್ರಾಸ[೭೨] ಗಳನ್ನು ಬಳಸುವುದು, ಒಂದೊಂದರಲ್ಲೂ ಅನೇಕ ಪ್ರಾಸಗಳನ್ನು ಸೇರಿಸುವುದು[೭೯], ಸಂಕೀರ್ಣ ಪ್ರಾಸಗಳು [೮೦], ಸ್ಪಷ್ಟ ನಿರೂಪಣೆ[೮೧], ಮಧುರತೆಯನ್ನು ಬಳಸುವುದು[೮೨], ಮತ್ತು ಲಯವನ್ನು ಹಿಂದು ಮುಂದು ಮಾಡುವುದು[೮೩].ಎಮಿನೆಮ್ ಬಗೆಗಿನ ಪುಸ್ತಕ ದಿ ವೇ ಐಯಾಮ್ ನಲ್ಲಿ ಉಲ್ಲೇಖಿಸಿರುವಂತೆ ಎಮಿನೆಮ್ ಒಂದು ಕಾಗದದ ಮೇಲೆ ಗೀತಸಾಹಿತ್ಯವನ್ನು ಬರೆದಿಟ್ಟುಕೊಳ್ಳುತ್ತಿದ್ದ, ಒಂದು ಗೀತರಚನೆ[೮೪] ಗೆ ದಿನಗಳಗಟ್ಟಳೆ ಅಥವಾ ಒಂದು ವಾರವಾದರೂ ತೆಗೆದುಕೊಳ್ಳುತ್ತಿದ್ದ, ಕೆಲಸದಗೀಳಿನವನಾಗಿದ್ದ[೮೫] ಮತ್ತು ಹಾಡಲೆಂದೇ ಬರೆದ ಹಾಡುಗಳ ರಾಶಿಯನ್ನಿಟ್ಟುಕೊಂಡಿರುತ್ತಿದ್ದ.[೮೬]

ಪ್ರಧಾನವಾಗಿರೋದು ಮತ್ತು ತಯಾರಿಕೆಗಳು

ಆದಾಗ್ಯೂ ಎಮಿನೆಮ್ ಡಾ. ಡ್ರೀ, 50 ಸೆಂಟ್, D12 ಮುಂತಾದ ಅನೇಕ ರಾಪರ್‌ಗಳ ಸಹಯೋಗದಲ್ಲಿ ಆಫ್ಟರ್‌ಮಾಥ್ ಎಂಟರ್ಟೈನ್‌ಮೆಂಟ್ ಮತ್ತು ಶ್ಯಾಡಿ ರೆಕಾರ್ಡ್ಸ್ ನವರ ಅಡಿಯಲ್ಲಿ ಕಾರ್ಯಕ್ರಮ ಮಾಡಿದ್ದಾನೆ, ಎಮಿನೆಮ್ ಇತರ ಕಲಾವಿದರಾದ ರೆಡ್‌ಮ್ಯಾನ್, ಕಿಡ್‌ರಾಕ್, DMX, ಮಿಸ್ಸಿ ಈಲೀಯಟ್, ಜೇಯ್-Z, ಮೆಥೆಡ್ ಮ್ಯಾನ್, ಜಡಾಕಿಸ್, ಫ್ಯಾಟ್ ಜೋ, ಸ್ಟಿಕೀ ಫಿಂಗಜ್, T.I. ಮತ್ತು ಇತರ ಕಲಾವಿದರೊಂದಿಗೂ ಕಾರ್ಯಕ್ರಮ ಮಾಡಿದ್ದಾನೆ.ಜೂನ್ 27, 2006ರಂದು BET ಮ್ಯೂಸಿಕ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎಮಿನೆಮ್, ಬಸ್ಟಾ ರೈಮ್ಸ್' "ಟಚ್ ಇಟ್" ರೀಮಿಕ್ಸ್ ಹಾಡುಗಳನ್ನು ಹಾಡಿದ. ಅಕೋನ್' ನ ಆಲ್ಬಮ್ ಕಾನ್ವಿಕ್ಟಡ್ ನಲ್ಲಿ ಸೇರಿದ ಅಕೋನ್ ನ ಏಕವ್ಯಕ್ತಿ ಹಾಡು "ಸ್ಮ್ಯಾಕ್ ದಟ್" ನಲ್ಲಿ ಎಮಿನೆಮ್ ಪ್ರಧಾನವಾಗಿ ಕಾಣಿಸಿಕೊಂಡ.

ಎಮಿನೆಮ್ ಒಬ್ಬ ಕ್ರಿಯಾಶೀಲ ನಿರ್ಮಾಪಕ ಕೂಡ. D12'ನ ಎರಡು ಆಲ್ಬಮ್‌ಗಳಾದ ಡೆವಿಲ್ಸ್ ನೈಟ್ ಮತ್ತು D12 ವರ್ಳ್ಡ್ ಗೆ ಕಾರ್ಯಕಾರಿ ನಿರ್ಮಾಪಕನಾಗುವ ಜೊತೆಗೆ, ಓಬೀ ಟ್ರ‍ೀಸ್ ರ ಚೀಯರ್ಸ್ ಮತ್ತು ಸೆಕೆಂಡ್ಸ್ ರೌಂಡ್ಸ್ ಆನ್ ಮೀ ಮತ್ತು 50 ಸೆಂಟ್ ರ ಗೆಟ್ ರಿಚ್ ಆರ್ ಡೈ ಟ್ರೈಯಿನ್' ಮತ್ತು ದಿ ಮಸಾಕ್ರೆ ಗೂ ಕಾರ್ಯಕಾರಿ ನಿರ್ಮಾಪನಾಗಿ ಕೆಲಸ ಮಾಡಿದ್ದಾನೆ.[೮೭] ಇದರ ಜೊತೆಗೆ, ಎಮಿನೆಮ್ ಇತರ ರಾಪರ್ಸ್‌ಗಳ ಹಲವು ಹಾಡುಗಳನ್ನು ನಿರ್ಮಿಸಿ ಅದರಲ್ಲಿ ಕಾಣಿಸಿಕೊಂಡೂ ಇದ್ದಾನೆ ಅವುಗಳೆಂದರೆ ಜಡಾಕಿಸ್ ನವರ' "ವೆಲ್ ಕಮ್ ಟು D-ಬ್ಲಾಕ್", ಜೇಯ್-Zರವರ "ರೆನಾಗೇಡ್" ಮತ್ತು "ಮುಮೆಂಟ್ ಆಫ್ ಕ್ಲಾರಿಟಿ" ಲಾಯ್ಶ್ ಬ್ಯಾಂಕ್ಸ್ ನವರ' "ಆನ್ ಫೈರ್", "ವಾರ್ರಿಯರ್ ಪಾರ್ಟ್ 2", ಮತ್ತು "ಹ್ಯಾಂಡ್ಸ್ ಅಪ್", ಟೊನಿ ಯಾಯೋ'ಅವರ "ಡ್ರಾಮಾ ಸೆಟ್ಟರ್", ಟ್ರಿಕ್ ಟ್ರ‍ಿಕ್ಸ್ "ವೆಲ್‌ಕಮ್ 2 ಡೆಟ್ರಾಯ್ಟ್", ಮತ್ತು ಎಕ್ಸಿಬಿಟ್ಸ್ ಅವರ "ಮೈ ನೇಮ್" ಮತ್ತು "ಡೋಂಟ್ ಅಪ್ರೋಚ್ ಮೀ".[೮೮] ಅನೇಕ ದಿ ಎಮಿನೆಮ್ ಶೋ ಗಳನ್ನು ತನ್ನ ಬಹುಕಾಲದ ಸಹಯೋಗಿ ಜೆಫ್ ಬಾಸ್ ಜೊತೆ ಸಹನಿರ್ಮಾಣ ಮಾಡಿರುವುದನ್ನು ಬಿಟ್ಟರೆ ಇನ್ನು ಬಹುತೇಖವಾಗಿ ಎಮಿನೆಮ್ ಸ್ವತ: ನಿರ್ಮಾಣ ಮಾಡಿರುತ್ತಾನೆ.[೮೯] ಎನ್‌ಕೋರ್ ನ ನಿರ್ಮಾಣವನ್ನು ಡಾ.ಡ್ರೀ ಜೊತೆ ವಿಭಜಿಸಿಕೊಂಡಿದ್ದಾನೆ. 2004ರಲ್ಲಿ, ಎಮಿನೆಮ್, 2ಪ್ಯಾಕ್ ನ ಮರಣೋತ್ತರ ಆಲ್ಬಮ್ ಲಾಯಲ್ ಟು ದಿ ಗೇಮ್ ಗೆ 2ಪ್ಯಾಕ್ ಮಾತೃ ಅಫೇನಿ ಶಾಕುರ್ ಜೊತೆ ಕಾರ್ಯಕಾರಿ ನಿರ್ಮಾಪಕನಾಗಿದ್ದ.[೯೦] ಎಮಿನೆಮ್ UKಯ #1 ಏಕವ್ಯಕ್ತಿ ಹಾಡು "ಘೆಟ್ಟೋ ಗಾಸ್ಪೆಲ್" ಅನ್ನು ನಿರ್ಮಿಸಿದ ಅದರಲ್ಲಿ ಎಲ್ಟನ್ ಜಾನ್ ಪ್ರಮುಖವಾಗಿ ಕಾಣಿಸಿಕೊಂಡಿದ್ದ.[೯೧] ನಾಸ್ ಕಂಪನಿಯವರ ಆಲ್ಬಮ್ ಗಾಡ್ಸ್ ಸನ್ ನ "ದಿ ಕ್ರಾಸ್" ಹಾಡನ್ನು ಎಮಿನೆಮ್ ನಿರ್ಮಿಸಿದ.[೯೨] ಆಗಸ್ಟ್ 15, 2006ರಲ್ಲಿ, ಓಬೀ ಟ್ರೈಸ್ ಸೆಕೆಂಡ್ ರೌಂಡ್ಸ್ ಆನ್ ಮೀ ಯನ್ನು ಬಿಡುಗಡೆ ಮಾಡಿದ. ಎಮಿನೆಮ್, ಆ ಆಲ್ಬಮಿನಲ್ಲಿ 8 ಹಾಡುಗಳನ್ನು ನಿರ್ಮಿಸಿದ. "ದೇರ್ ದೇ ಗೋ" ಹಾಡಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ. ಎಮಿನೆಮ್, ಟ್ರಿಕ್ ಟ್ರಿಕ್ ಹೊಸ ಆಲ್ಬಮ್‌ನ ಕೆಲವು ಹಾಡುಗಳು ದಿ ವಿಲ್ಲನ್ ನಿರ್ಮಿಸಿದ , "ವ್ಹೂ ವಾಂಟ್ ಇಟ್"ನಲ್ಲಿ ಪ್ರಮುಖವಾಗಿ ಕಾಣಿಸಿಯೂ ಕೊಂಡಿದ್ದ.[೯೩]

ಬಣ್ಣದ ಬದುಕು

ನವೆಂಬರ್ 2001ರಲ್ಲಿ ಎಮಿನೆಮ್ ಕಿರುಸಾಹಿತ್ಯ ಚಿತ್ರ ದಿ ವಾಶ್ ದಲ್ಲಿ ಸಣ್ಣ ಪಾತ್ರವನ್ನು ಮಾಡಿದ್ದರೂ ಎಮಿನೆಮ್‌ ಹಾಲಿವುಡ್ ಗೆ ಅಧಿಕೃತ ಪ್ರವೇಶವಾದದ್ದು ಅರೆ-ಆತ್ಮ ಕಥನ ಚಿತ್ರವಾದ 8 ಮೈಲ್ ಮುಖಾಂತರ ಮತ್ತು ಅದು ನವೆಂಬರ್ 2002ರಲ್ಲಿ ಬಿಡುಗಡೆಯಾಯಿತು. ಚಿತ್ರವು ತನ್ನ ಬದುಕಿನ ಕಥೆಯಲ್ಲಾ ಆದರೆ ಡೆಟ್ರ‍ಾಯ್ಟ್‌ನ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ ಎಂದು ಎಮಿನೆಮ್ ಹೇಳಿದ. ಅನೇಕ ಹೊಸ ಹಾಡಿನ ಜಾಡುಗಳನ್ನು ಧ್ವನಿಮುದ್ರಿಸಿದ್ದ ಅದರಲ್ಲಿ 2003ರಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ಎಂದು ಅಕಾಡೆಮಿ ಪ್ರಶಸ್ತಿ ಗೆದ್ದ ಹಾಡೂ ಒಳಗೊಂಡಿದೆ. ಆದಾಗ್ಯೂ ಆ ಹಾಡನ್ನು ಆ ಕಾರ್ಯಕ್ರಮದಲ್ಲಿ ಎಮಿನೆಮ್ ಹಾಜರಾಗದೇ ಇದ್ದುದರಿಂದ ಹಾಡಲಾಗಿಲ್ಲ. ಎಮಿನೆಮ್‌ನ ಜೊತೆಗೂಡಿ ಹಾಡನ್ನು ರಚಿಸಿದಾತ, ಎಮಿನೆಮ್‌ನ ಸಹಚರ ಲ್ಯೂಯಿಸ್ ರೆಸ್ಟೋ ಪ್ರಶಸ್ತಿಯನ್ನು ಸ್ವೀಕರಿಸಿದ.[೯೪]ಎಮಿನೆಮ್, ಕಂಠದಾನ ಕಲಾವಿದನಾಗಿಯೂ ಹಲವು ಪಾತ್ರಗಳಲ್ಲಿ ಪಾಲ್ಗೊಂಡಿದ್ದಾನೆ. ಅವುಗಳಲ್ಲಿ ಕೆಲವು ವೀಡಿಯೋ ಆಟಗಳು 50 Cent: Bulletproof , ಅದರಲ್ಲಿ ಎಮಿನೆಮ್ ಒಬ್ಬ ವಯಸ್ಸಾದ ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಧ್ವನಿಯನ್ನು ಕೊಟ್ಟಿದ್ದಾನೆ ಆ ಪೊಲೀಸ್ ಅಧಿಕಾರಿ ಎಬೋನಿಕ್ಸ್ ಭಾಷೆಯಲ್ಲಿ ಮಾತನಾಡುತ್ತಾನೆ ಮತ್ತು ಎಮಿನೆಮ್ ಅತಿಥಿಯಾಗಿ ಕಾಮಿಡಿ ಸೆಂಟ್ರಲ್ ಎಂಬ ದೂರದರ್ಶನ ಶೋ ಕ್ರಾಂಕ್ ಯಾಂಕರ್ಸ್ ಹಾಗೂ ದಿ ಸ್ಲಿಮ್ ಶ್ಯಾಡಿ ಶೋ ಎಂಬ ವೆಬ್ ಕಾರ್ಟೂನ್‌ನಲ್ಲೂ ಕಾಣಿಸಿಕೊಳ್ಳುತ್ತಾನೆ, ಮತ್ತು ಇದು ಇಂಟರ್‌ನೆಟ್‌ನಿಂದ ವರ್ಜಿತವಾಗಿದೆ ಬದಲಾಗಿ DVDನಲ್ಲಿ ಮಾರಾಟವಾಗಿದೆ.[೯೫]ಧ್ವನಿ ಮುದ್ರಣದಲ್ಲಿ ಅಥವಾ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತಾನೆ.[೯೬] 2008ರಲ್ಲಿ ಜಂಪರ್ ಚಿತ್ರದ ಡೇವಿಡ್ ರೈಸ್ ಪಾತ್ರಕ್ಕಾಗಿ ಎಮಿನೆಮ್ ಪ್ರಯತ್ನ ಪಡುತ್ತಿದ್ದ ಆ ಪಾತ್ರ ಮಾಡಬೇಕಿದ್ದ ಟಾಮ್ ಸ್ಟರ್ರಿಡ್ಜ್ ಅನ್ನು ಚಿತ್ರ ಪ್ರಾರಂಭದ 2 ವಾರಗಳ ಹಿಂದಷ್ಟೇ ಕೈ ಬಿಡಲಾಗಿತ್ತು. ಇನ್ನೂ ಹೆಚ್ಚಿನ ದಕ್ಷ ನಟನನ್ನು ಆಯ್ಕೆ ಮಾಡಲು ಸಿಗದಿದ್ದಾಗ ನಿರ್ದೇಶಕ ಡೌಗ್ ಲಿಮನ್ ಬೇರೆ ನಟರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಲು ತೀರ್ಮಾನಿಸುತ್ತಾರೆ. ಎಮಿನೆಮ್ ಬದಲಾಗಿ ಹೇಯ್ಡನ್ ಕ್ರಿಸ್ಟೇನ್‌ಸೆನ್ ಅನ್ನು ಆಯ್ಕೆ ಮಾಡಲಾಗುತ್ತದೆ.[೯೭] 2009ರ ಚಿತ್ರ ಫನ್ನಿ ಪೀಪಲ್ ನಲ್ಲೂ ಎಮಿನೆಮ್ ಕಾಣಿಸಿಕೊಂಡ.ನವೆಂಬರ್ 8, 2009ರಂದು ವರದಿಯೊಂದು ಎಮಿನೆಮ್, ಜಾನ್ ಡೇವಿಸ್ ನಿರ್ದೇಶಿಸುತ್ತಿರುವ 3D ಭೀತಿಗ್ರಸ್ತ ಚಿತ್ರ ಶ್ಯಾಡಿ ಟೇಲಜ್ ,ನಲ್ಲಿ ನಟಿಸುತ್ತಿರುವುದಾಗಿ ಹೇಳಿತು. 2010ರ ಸುಮಾರಿಗೆ ಚಲನಚಿತ್ರದ ಬಗ್ಗೆ ನಾಲ್ಕು ಸಂಚಿಕೆಯ ಕಾಮಿಕ್ ಪುಸ್ತಕ ಪ್ರಕಟವಾಗುವ ನಿರೀಕ್ಷೆಯೂ ಇತ್ತು.[೯೮]

ನೆನಪಿನೋಲೆಗಳು

ಅಕ್ಟೋಬರ್ 21, 2008ರಂದು ಎಮಿನೆಮ್ ತನ್ನ ಆತ್ಮ ಕಥನ ದಿ ವೇ ಐಯಾಮ್ ಬಿಡುಗಡೆ ಮಾಡಿದನು. ಅದರಲ್ಲಿ ತನ್ನ ಬದುಕಿನ ಸಂಪೂರ್ಣ ವಿವರವನ್ನು ಕೊಟ್ಟಿದ್ದಾನೆ, ಅದರಲ್ಲಿ ಬಡತನ ಬಗ್ಗೆ, ಮಾದಕ ಔಷಧಗಳ ಬಗ್ಗೆ, ಖ್ಯಾತಿಯ ಬಗ್ಗೆ, ತನಗೊದಗಿದ ಎದೆ ಬಿರುಯುವ ದು:ಖ ಮತ್ತು ಖಿನ್ನತೆ ಬಗ್ಗೆ ಮತ್ತು ಹಿಂದೆ ನಡೆಸಿರುವ ವಿವಾದಗಳ ಬಗ್ಗೆಯೂ ವಿವರಣೆ ಕೊಟ್ಟಿದ್ದಾನೆ. ಸ್ಟಾನ್ ಮತ್ತು ದಿ ರೀಯಲ್ ಸ್ಲಿಮ್ ಶ್ಯಾಡಿ ಅಂಥ ಹಾಡುಗಳ ಸಾಹಿತ್ಯವನ್ನು ಬರೆದ ಮೂಲ ಕಾಗದಗಳನ್ನು ಕೊಟ್ಟಿದ್ದಾನೆ.[೯೯]

ವೈಯಕ್ತಿಕ ಜೀವನ

ಕುಟುಂಬ

ಮ್ಯಾಥೆರ್ಸ್ ಎಮಿನೆಮ್ ಒಬ್ಬ ರಾಪರ್ ಆಗಿ ಮತ್ತು ಆತನ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ್ಗೆ ಶೋಧನೆಗೆ ಒಳಪಟ್ಟಿದ್ದಾನೆ.[೨೫] ಹೈ ಸ್ಕೂಲ್‌ನಲ್ಲಿ ಓದುತ್ತಿದ್ದಾಗ ಭೇಟಿ ಆಗಿದ್ದ ಕಿಂಬರ್ಲಿ ಆನ್ನೆ ಸ್ಕಾಟ್ ಜೊತೆಗೆ ಎರಡು ಸಾರಿ ಮದುವೆ ಆಗಿದ್ದ. 1989ರಲ್ಲಿ ದೂರಾಗುವ ಪುನ: ಒಂದಾಗುವ ನಂಟಿನಂತ್ತಿದ್ದ ಸಂಬಂದ್ಧ 1999 ಮದುವೆ ಎಂದಾಯಿತು.2001ರಲ್ಲಿ ಮೊದಲ ಬಾರಿಗೆ ವಿಚ್ಚೇಧನಗೊಂಡರು.[೧೦೦] 2000ರಲ್ಲಿ ಸ್ಕಾಟ್ ಆತ್ಮಹತ್ಯೆಗೆ ಯತ್ನಿಸಿದಳು ಮತ್ತು ಎಮಿನೆಮ್ "ಕಿಮ್" ಹಾಡಿನಲ್ಲಿ ಅವಳ ಹಿಂಸಾತ್ಮಕ ಸಾವಿನ ಬಗ್ಗೆ ವರ್ಣಿಸಿದ್ದಕ್ಕಾಗಿ ಎಮಿನೆಮ್ ಮೇಲೆ ಮಾನ ನಷ್ಟ ಕೇಸ್ ಅನ್ನು ಹಾಕಿದಳು.[೧೦೦][೧೦೧] 2006ರಲ್ಲಿ ಪುನ: ಮದುವೆ ಆಗಿ ಮೂರು ತಿಂಗಳ ಒಳಗೇ ಮತ್ತೇ ವಿಚ್ಚೇಧನ ಹೊಂದಿದರು. ಡಿಸೆಂಬರ್ 25, 1995ರಲ್ಲಿ ಜನಿಸಿದ ತಮ್ಮ ಮಗಳು ಹೈಲೀ ಜೇಡ್ ಸ್ಕಾಟ್‌ಳನ್ನು ಸಾಕುವ ಕಾರ್ಯವನ್ನು ಹಂಚಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡರು.[೧೦೦][೧೦೦][೧೦೧][೧೦೨]"'97 ಬೋನ್ನೀ & ಕ್ಲೈಡ್", "ಹೈಲೀಸ್ ಸಾಂಗ್", "ಮೈ ಡ್ಯಾಡ್ಸ್ ಗಾನ್ ಕ್ರೇಜಿ", "ಮಾಕಿಂಗ್‌ಬರ್ಡ್", "ಫರ್ಗಾಟ್ ಅಬೌಟ್ ಡ್ರ‍ೀ", "ಕ್ಲೀನಿನ್' ಔಟ್ ಮೈ ಕ್ಲೋಸೆಟ್", "ವೆನ್ ಐಯಾಮ್ ಗಾನ್", "ಡೇಜು ವು", ಮತ್ತು "ಬ್ಯೂಟಿಫುಲ್" ಮುಂತಾದ ಎಮಿನೆಮ್‌ನ ಹಾಡುಗಳಲ್ಲಿ ಹೈಲೀ ಸ್ಕಾಟ್‌ಳ ಬಗ್ಗೆ ಉಲ್ಲೇಖವಿರುತ್ತದೆ ಅಥವಾ ಪ್ರಧಾನವಾಗಿ ಅವಳ ಬಗೆಯೇ ಇರುತ್ತದೆ. ಮ್ಯಾಥೆರ್ಸ್ ಬೇರೆ ಎರಡು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾನೆ : ಅಲೈನಾ "ಲೇನೆಯ್" ಮ್ಯಾಥೆರ್ಸ್ ಕಿಂಬರ್ಲೇ ಸ್ಕಾಟ್‌ಳ ತಂಗಿ ಮಗಳು[೧೦೦] ಮತ್ತು ವ್ಹೈಟ್ನೀ ಮ್ಯಾಥೆರ್ಸ್ ಎಮಿನೆಮ್‌‌ನ ಮಲ ಮಗಳು.

ಕಾನೂನು ಅಡೆತಡೆಗಳು

ದಿ ಸ್ಲಿಮ್ ಶ್ಯಾಡಿ LP ಹಾಡಿನಲ್ಲಿ ತನ್ನನ್ನು ಅಪನಿಂದೆ ಮಾಡಲಾಗಿದೆ ಎಂದು 1999ರಲ್ಲಿ ಮ್ಯಾಥೆರ್ಸ್‌ನ ತಾಯಿ ಅವನ ಮೇಲೆ ಮಾನನಷ್ಟ ದಾವೆಯನ್ನು ಹೂಡಿ US$10 ದಶಲಕ್ಷ ಹಣವನ್ನು ಕೇಳಿದ್ದಳು; ಆದರೆ 2001ರಲ್ಲಿ US$1,600 ಅನ್ನು ಕೊಡುಬೇಕೆಂದಾಯಿತು.[೧೦೩]ರಾಯಲ್ ಓಕ್, ಮಿಚಿಗನ್ ನ ಕಾರ್ ಆಡಿಯೋ ಅಂಗಡಿಯಲ್ಲಿ ಡೌಗ್ಲಾಸ್ ಡೇಲ್ ಎಂಬುವನ ಜೊತೆ ಜಗಳವಾಗಿ ಮ್ಯಾಥೆರ್ಸ್, ಬುಲ್ಲೆಟ್ ಇಲ್ಲದ ಗನ್ ಅನ್ನು ಆಚೆ ತೆಗೆದು ನೆಲಕ್ಕೆ ಗುರಿಯಿಟ್ಟು ಹೆದರಿಸಿದ್ದ, ಈ ಕಾರಣಕ್ಕೆ ಜೂನ್ 3, 2000ರಲ್ಲಿ ಮ್ಯಾಥೆರ್ಸ್ ಅನ್ನು ಬಂಧಿಸಲಾಗಿತ್ತು.[೧೦೪] ಮಾರನೆಯ ದಿನ ಮಿಚಿಗನ್‌ನ ವಾರ್ರೆನ್‌ನಲ್ಲಿರುವ ಹಾಟ್ ರಾಕ್ ಕೆಫೆ ಯ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಮಾಜಿ ಪತ್ನಿ ಕಿಮ್‌ಳನ್ನು ಕಿಸ್ ಬೌನ್ಸರ್ ಜಾನ್ ಗುರ್ರೆರಾ ಜೊತೆ ಕಂಡಾಗ ಅವನನ್ನು ಥಳಿಸಿದನು.[೧೦೦][೧೦೧][೧೦೪]ಈ ಎರಡು ಪ್ರಸಂಗದಿಂದಾಗಿ ಎಮಿನೆಮ್‌ಗೆ ಪರೀಕ್ಷಾರ್ಥ ಶಿಕ್ಷಾಸ್ಥಗನವನ್ನು ನೀಡಲಾಗಿತ್ತು.[೧೦೫]2001ರ ಬೇಸಿಗೆಯಲ್ಲಿ ಮ್ಯಾಥರ್ಸ್ ಎಮಿನೆಮ್‌ನ ಕಾನೂನು ತೊಂದರೆಗಳು ಮುಂದುವರೆದವು,ಸೈಕೋಪ್ಯಾಥಿಕ್ ರೆಕಾರ್ಡ್ಸ್ ನ ನೌಕರನ ಜೊತೆ ನಡೆದ ವಾಗ್ವಾದದಲ್ಲಿ ಶಸ್ತಾಸ್ತ್ರ ಬಳಕೆಗಾಗಿ ಪರೀಕ್ಷಾರ್ಥ ಶಿಕ್ಷಾಸ್ಥಗನವನ್ನು ಮತ್ತು $2,000 ದಂಡ ಹಾಗೂ ಹಲವು ಗಂಟೆಗಳ ಸಮುದಾಯ ಸೇವೆಯನ್ನು ವಿಧಿಸಲಾಯಿತು.[೧೦೬]

2007ರಲ್ಲಿ ಎಮಿನೆಮ್‌ನ ಮ್ಯೂಸಿಕ ಪ್ರಕಟನಾ ಸಂಸ್ಥೆ ಏಯ್ಟ್ ಮೈಲ್ ಸ್ಟೈಲ್ LLC ಮಾರ್ಟಿನ್ ಅಫಿಲ್ಲೀಯೇಟೆಡ್ LLC ಜೊತೆಗೆ ಆಪಲ್, ಇನ್-ಕಾರ್ಪೊರೇಷನ್ ಮತ್ತು ಆಫ್ಟರ್‌ಮಥ್ ಎಂಟರ್‌ಟೈನ್‌ಮೆಂಟ್ ವಿರುದ್ಧ ದಾವೆಯನ್ನು ಹೂಡಿದರು, ಆಪಲ್‌ನವರ iಟ್ಯೂನ್ಸ್ ಸೇವೆಗೆ 93 ಎಮಿನೆಮ್‌ನ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಬಗ್ಗೆ ಆಫ್ಟರ್‌ಮಥ್‌ನವರಿಗೆ ಆಪಲ್‌ನವರ ಬಳಿ ವ್ಯವಹರಿಸಲು ನಿಖರವಾದ ಯಾವ ಅಧಿಕಾರವಿತ್ತು ಎಂದು ಪ್ರಶ್ನಿಸಿ ಈ ದಾವೆಯನ್ನು ಹೂಡಲಾಗಿತ್ತು.[೧೦೭][೧೦೮][೧೦೯] ಸೆಪ್ಟೆಂಬರ್ 2009ರಲ್ಲಿ ಈ ಕೇಸ್ ವಿಚಾರಣೆಗೆ ಹೋಗಿ ಕೆಲವು ದಿನಗಳ ನಂತರ ಇತ್ಯರ್ಥವಾಯಿತು.[೧೧೦]

ಮಾದಕ ಔಷಧಗಳ ರಾದ್ಧಾಂತಗಳು

ಎಮಿನೆಮ್‌ನ ಸಹಚರ D12ನ ಪ್ರೂಫ್ ನ ಪ್ರಕಾರ 2002 ರಿಂದ ಎಮಿನೆಮ್ ಮಾದಕ ಔಷಧ ಮತ್ತು ಕುಡಿತದ ಮೇಲಿನ ಅವಲಂಬನೆಯಿಂದ ಸ್ವತಂತ್ರಗೊಂಡು ಸಮಚಿತ್ತನಾಗಿದ್ದ.[೧೧೧]ಆದಾಗ್ಯೂ ನಿದ್ರಾಹೀನತೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಜೋಲ್ಪಿಡೆಮ್ ನನ್ನೂ ಕೂಡ ಅವಲಂಬಿಸಿಲ್ಲ. ಇದರಿಂದಾಗಿ, ಎಮಿನೆಮ್ ಆಗಸ್ಟ್ 2005ರಲ್ಲಿ, ಯೂರೋಪಿಯನ್ ಆಂಗರ್ ಮ್ಯಾನೇಜ್‌ಮೆಂಟ್‌ ಟೂರ್ ಗೆ ಹೋಗುವುದು ರದ್ದಾಯಿತು ಮತ್ತು ಅಂತಿಮವಾಗಿ ಪುನರ್ ವಸತಿಯ ಚಿಕಿತ್ಸೆಗೆ "ನಿದ್ದೆ ಮಾತ್ರೆಗಳ ಅವಲಂಬನೆ" ಯಿಂದ ಬಿಡುಗಡೆ ಹೊಂದಲು ಹೋಗುವುದೆಂದಾಯಿತು.[೫೩][೧೧೨] 2009ರಲ್ಲಿ ಜೊನಾಥನ್ ರೋಸ್ಸ್ ಎಂಬ ಬ್ರಿಟಿಷ ಟಾಕ್ ಶೋ ನ ಅತಿಥೇಯ ಮಾಡಿದ ಸಂದರ್ಶನವೊಂದರಲ್ಲಿ ಮ್ಯಾಥೆರ್ಸ್ ಮಧ್ಯ ವ್ಯಸನಿಯಾಗಿದ್ದ ಉಚ್ಚ ಸಂದರ್ಭದಲ್ಲಿ ತಾನು ಆತ್ಮಹತ್ಯೆಗೆ ಶರಣಾಗಬೇಕೆಂದು ಅಂದುಕೊಂಡದ್ದಾಗಿ ಒಪ್ಪಿಕೊಂಡ, ಎಮಿನೆಮ್ ಹೇಳಿದ್ದು "ನನ್ನ ನಾನು ನೋಡಿಕೊಳ್ಳುತ್ತಿರಲಿಲ್ಲ ಎಷ್ಟೋ ಸಾರಿ ಈ ಬದುಕು ಮುಗಿಸಬೇಕೆಂದುಕೊಂಡಿದ್ದೆ." [೧೧೩]

ಅದರ ಜೊತೆಗೆ ತಾನು ಈಗ ಸಮಚಿತ್ತದವನಾಗಿದ್ದೇನೆ ಎಂದು ದೃಢಪಡಿಸಿದ "[ರಾ]ಪ್ ನನ್ನ ಔಷಧ ... ಆಮೇಲೆ ಆ ಕಾರಣಕ್ಕೇ ನಾನು ಬೇರೆ ಕೆಲಸಗಳಲ್ಲಿ ಆಶ್ರಯಿಸಬೇಕು. ಈಗ ರಾಪ್ ನನ್ನನ್ನು ಪೂರ್ತಿ ಆವರಿಸಿಕೊಂಡಿದೆ." [೧೧೩]

ಮೇರಿಯಾ ಜೊತೆ ಕಾದಾಟ

ಪಾಪ್ ಗಾಯಕಿ ಮೇರಿಯಾ ಕೇರೇಯ್ ಮತ್ತು ತನ್ನ ಜೊತೆಗಿನ ಸಂಬಂದ್ಧದ ಬಗ್ಗೆ ಎಮಿನೆಮ್ ಹಲವು ಹಾಡುಗಳಲ್ಲಿ ಉಲ್ಲೇಖಿಸಿದ್ದಾನೆ, ಆದಾಗ್ಯೂ ಆಕೆ ಅದನ್ನು ನಿರಾಕರಿಸಿದ್ದಾಳೆ.[೧೧೪]ಇಬ್ಬರೇ ಓಡಾಡಿದ್ದೇವೆ ಆದರೆ ಲೈಂಗಿಕತೆ ಅಥವಾ ಸಲುಗೆ ಯಾವುದೂ ನಡೆದಿಲ್ಲ ಎನ್ನುತ್ತಾಳೆ. ಎಮಿನೆಮ್ ಅವಳನ್ನು ಅನೇಕ ಹಾಡುಗಳಲ್ಲಿ ಉಲ್ಲೇಖಿಸಿದ್ದಾನೆ ಅವುಗಳಲ್ಲಿ "ಸೂಪರ್‌ಮ್ಯಾನ್", "ಜಿಮ್ಮಿ ಕ್ರಾಕ್ ಕಾರ್ನ್", "ಬ್ಯಾಗ್ ಪೈಪ್ಸ್ ಫ್ರಮ್ ಬಾಗ್ದಾದ್", ಮತ್ತು "ದಿ ವಾರ್ನಿಂಗ್". 2003ರಲ್ಲಿ "ಸೂಪರ್‌ಮ್ಯಾನ್" ಬಿಡುಗಡೆಯಾದ ಹೊತ್ತಿನಲ್ಲೇ ಕ್ಯಾರೇಯ್ ತನ್ನ ಚಾರ್ಮ್‌ಬ್ರೇಸ್‌ಲೆಟ್ ಆಲ್ಬಮ್‌ಗೆ "ಕ್ಲೌನ್" ಹೆಸರಿನ ಹಾಡನ್ನು ಬಿಡುಗಡೆ ಮಾಡಿದಳು, ಇದರಲ್ಲಿಯೂ 2009ರ ಹಿಟ್ "ಒಬ್ಸೆಸ್ಸಡ್" ನಲ್ಲಿ ಉಲ್ಲೇಖಿಸಿರುವಂತೆ ಉಲ್ಲೇಖಿಸಲಾಗಿದೆ.

ಎಮಿನೆಮ್‌ನ ರಿಲ್ಯಾಪ್ಸ್ ಆಲ್ಬಮ್‌ನ ಹಾಡು "ಬ್ಯಾಗ್ ಪೈಪ್ಸ್ ಫ್ರಮ್ ಬಾಗ್ದಾದ್" ಕ್ಯಾರೇಯ್ ಉಲ್ಲೇಖದ ಅತ್ಯುತ್ತಮ ಉದಾಹರಣೆ ಆಗುತ್ತದೆ ಮತ್ತು ಅದು ಹುಟ್ಟು ಹಾಕಿದ ವಿವಾದಗಳಿಂದಲ್ಲೂ ಅಷ್ಟೇ.ಈ ಹಾಡು ಮಾರಿಯಾ ಮತ್ತು ಅವಳ ಪತಿ ನಿಕ್ ಕ್ಯಾನನ್ ನಡುವಣ ಸಂಬಂದ್ದವನ್ನು ಹೀನೈಸುತ್ತದೆ.[೧೧೫] ಕ್ಯಾನನ್ ಎಮಿನೆಮ್‌ಗೆ ಪ್ರತಿಕ್ರಿಯಿಸುತ್ತ ಆತನ ವೃತ್ತಿ ಜೀವನ "ಜಾತಿ ಅಂಧಾಭಿಮಾನ" ದಿಂದ ಕೂಡಿದೆ ಮತ್ತು ಅವನ ವಿರುದ್ಧ ತಾನು ಸೇಡು ತೀರಿಸಿಕೊಳ್ಳುವುದಾಗಿ ಹೇಳಿ ಬಹುಶ: ತಾನೂ ರಾಪ್ಪಿಂಗ್‌ಗೆ ಹಿಂದಿರುಗಬಹುದೆಂದು ನಗೆಯಾಡಿದ್ದ.[೧೧೬] ಆನಂತರ ಎಮಿನೆಮ್ ಆ ಹಾಡನ್ನು ತಪ್ಪಾಗಿ ಅರ್ಥೈಸಲಾಗಿದೆ ಅವರಿಬ್ಬರಿಗೂ ಶುಭವಾಗಲಿ ಎಂದನು.[೧೧೫] ಕ್ಯಾನನ್‌ನೂ ಸಹ ನನಗೂ ಅಂಥ ಬಲವಾದ ಭಾವನೆಯಿಲ್ಲ ಆ ಹಾಡಿಗೆ ಪ್ರತಿಕ್ರಿಯಿಸಬೇಕಾಗಿತ್ತು ಪ್ರತಿಕ್ರಿಯಿಸಿದೆ ಅಷ್ಟೇ ಎಂದನು.[೧೧೭] 2009ರಲ್ಲಿ ಕ್ಯಾರೇಯ್ "ಒಬ್ಸೆಸ್ಡ್" ಅನ್ನು ಬಿಡುಗಡೆ ಮಾಡಿದಳು ಅದರಲ್ಲಿ ಅಂಥ ಒಬ್ಬ ಮನುಷ್ಯ ತನ್ನೊಡನೆ ಸಂಬಂದ್ಧವಿರುವುದಾಗಿ ಹೇಳಿಕೊಳ್ಳುತ್ತಾನೆ ಎಂದು ಹಾಡಿದಳು.[೧೧೮] ಕ್ಯಾನನ್ ಆ ಹಾಡು ಎಮಿನೆಮ್‌ಗೆ ಅವಮಾನ ಮಾಡುವುದಕ್ಕಲ್ಲ ಎಂದನು.[೧೧೯] ಆದಾಗ್ಯೂ ಎಮಿನೆಮ್ ಜುಲೈ 2009ರಲ್ಲಿ "ದಿ ವಾರ್ನಿಂಗ್" ಬಿಡುಗಡೆ ಮಾಡಿ ಪ್ರತಿಕ್ರಯಿಸಿದನು. ತಾನು ಮತ್ತು ಮಾರಿಯಾ ಕ್ಯಾರೇಯ್ ಜೊತೆಗಿದ್ದಾಗ ನಡೆದ ಸಂಭಾಷಣೆಯ ವಾಯ್ಸ್ ಮೇಲ್ ರೆಕಾರ್ಡಿಂಗ್ಸ್ ತುಣುಕುಗಳನ್ನು ಆ ಹಾಡಿನೊಳಗೆ ಅಳವಡಿಸಲಾಗಿದೆ ಎಂದನು.[೧೨೦] ತಮ್ಮ ಸಂಬಂದ್ಧವನ್ನು ಸಾರುವ ಬೇರೆ ಸಾಕ್ಷಿಗಳು ತನ್ನ ಬಳಿ ಇನ್ನೂ ಇದೆ ಎಂದನು ಎಮಿನೆಮ್. ಈ ಹಾಡಿಗೆ ಕ್ಯಾರೇಯ್ ಆಗಲಿ ಕ್ಯಾನನ್ ಆಗಲಿ ಪ್ರತಿಕ್ರಯಿಸಲಿಲ್ಲ.

ಧ್ವನಿಮುದ್ರಿಕೆ ಪಟ್ಟಿ

ಪ್ರಥಮ ಸ್ಥಾನದಲ್ಲಿರುವ ಏಕ ವ್ಯಕ್ತಿ ಹಾಡಿದ ಹಾಡು

ವರ್ಷಗೀತೆಉನ್ನತ ಸ್ಥಾನಗಳುಆಲ್ಬಮ್‌ಗಳು
U.S.ಆಸ್ಟ್ರೇಲಿಯಾAUTಜರ್ಮನಿ
ಐರ್ಲ್ಯಾಂಡ್
ಇಟಲಿ
ನ್ಯೂಜಿಲ್ಯಾಂಡ್
ಸ್ವೀಡೆನ್
ಸ್ವಿಜರ್‌ಲ್ಯಾಂಡ್
ಯು.ಕೆ
2000"ದಿ ರೀಯಲ್ ಸ್ಲಿಮ್ ಶ್ಯಾಡಿ"411671415321ದಿ ಮಾರ್ಶಲ್ ಮ್ಯಾಥರ್ಸ್ LP
"ಸ್ಟಾನ್" (ಫೀಟ್. ಡಿಡೋ)511111114311
2002"ವಿಥೌಟ್ ಮೀ"2111121111ದಿ ಎಮಿನೆಮ್ ಶೋ
"ಲೂಸ್ ಯುವರ್ಸೆಲ್ಫ್"11121111118 Mile
2004"My Band"119221932D12 ವರ್ಳ್ಡ್
"ಜಸ್ಟ್ ಲೂಸ್ ಇಟ್"61422211211ಎನ್‌ಕೋರ್
2005"ಲೈಕ್ ಟಾಯ್ ಸೋಲ್ಡ್ಜರ್ಸ್"344883821431
"ವ್ಹೆನ್ ಐಯಾಮ್ ಗಾನ್"817652574Curtain Call: The Hits
2006"ಸ್ಮ್ಯಾಕ್ ದಟ್ " (ವಿಥ್ ಅಕೋನ್)22951301331ಕನ್ವಿಕ್ಟಡ್
2009"ಕ್ರ್ಯಾಕ್ ಎ ಬಾಟಲ್" (ಫೀಟ್. ಡಾ. ಡ್ರೀ ಮತ್ತು 50 ಸೆಂಟ್)118416346944ರಿಲ್ಯಾಪ್ಸ್
"ವಿ ಮೇಡ್ ಯು"919913211144
"ಬ್ಯೂಟಿಫುಲ್"1751191112812
ಒಟ್ಟು ನಂಬರ್-ಒನ್ ಹಿಟ್ಸ್2742727247- align="center"

ಚಲನಚಿತ್ರಗಳ ಪಟ್ಟಿ

ವರ್ಷಸಿನಿಮಾಪಾತ್ರಟಿಪ್ಪಣಿಗಳು
2000ಡಾ ಹಿಪ್ ಹಾಪ್ ವಿಚ್ತಮ್ಮದೇ ನಿಜಜೀವನದ ಪಾತ್ರ
ಅಪ್ ಇನ್ ಸ್ಮೋಕ್ ಟೂರ್
ದಿ ಸ್ಲಿಮ್ ಶ್ಯಾಡಿ ಶೋವಿವಿಧ
2001ದಿ ವಾಶ್ಕ್ರೈಸ್ಜಮಾ ಇಲ್ಲದ್ದು
20028 ಮೈಲ್ಜಿಮ್ಮಿ "B-ರಾಬಿಟ್" ಸ್ಮಿತ್, ಜೂ.ಅತ್ಯುತ್ತಮ ಮೂಲ ಹಾಡಿಗೆ ಅಕಾಡೆಮಿ ಪ್ರಶಸ್ತಿ
MTV ಮೂವೀ ಅವಾರ್ಡ್ ಫಾರ್ ಬೆಸ್ಟ್ ವೀಡಿಯೋ ಫ್ರಮ್ ಎ ಫಿಲ್ಮ್ – ಲೂಸ್ ಯುವರ್‌ಸೆಲ್ಫ್
ನಾಮನಿರ್ದೇಶಿತ – MTV ಮೂವೀ ಪ್ರಶಸ್ತಿ‌ (ಅತ್ಯುತ್ತಮ ನಟನೆ (ಪುರುಷ))
MTV ಮೂವೀ ಅವಾರ್ಡ್ ಫಾರ್ ಬೆಸ್ಟ್ ಬ್ರೇಕ್ ಥ್ರೂ ಮೇಲ್ ಪರ್ಫಾಮೆನ್ಸ್
ASCAPಅವಾರ್ಡ್ ಫಾರ್ ಮೋಸ್ಟ್ ಪರ್ಫಾರ್ಮ್ಡ್ ಸಾಂಗ್ ಫ್ರಮ್ ಎ ಮೋಶನ್ ಪಿಕ್ಚರ್- ಲೂಸ್ ಯುವರ್ ಸೆಲ್ಫ್
ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಫಾರ್ ಬೆಸ್ಟ್ ಸಾಂಗ್ – ಲೂಸ್‌ ಯುವರ್‌ಸೆಲ್ಪ್
| ಟೀನ್‌ ಚಾಯ್ಸ್‌ ಪ್ರಶಸ್ತಿ‌ (ಚಾಯ್ಸ್‌ ಮೂವೀ ನಟ, ನಾಟಕ/ಸಾಹಸ)
ಟೀನ್ ಚಾಯ್ಸ್ ಅವಾರ್ಡ್ ಫಾರ್ ಚಾಯ್ಸ್ ಮೂವಿ ಬ್ರೇಕ್ ಔಟ್ ಸ್ಟಾರ್ – ಮೇಲ್
BMI ಫಿಲ್ಮ್ ಅವಾರ್ಡ್ ಫಾರ್ ಮ್ಯೂಸಿಕ್
BMI ಫಿಲ್ಮ್ ಅವಾರ್ಡ್ ಫಾರ್ ಮೋಸ್ಟ್ ಪರ್ಫಾರ್ಮ್ಡ್ ಸಾಂಗ್ ಫ್ರಮ್ ಎ ಫಿಲ್ಮ್ – ಲೂಸ್ ಯುವರ್‌ಸೆಲ್ಫ್
ನಾಮಿನೇಟೆಡ್ – ಗೋಳ್ಡನ್ ಗ್ಲೋಬ್ ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ ಫ್ರಮ್ ಎ ಮೋಷನ್ ಪಿಕ್ಚರ್ – ಲೂಸ್ ಯುವರ್‌ಸೆಲ್ಫ್
ನಾಮಿನೇಟೆಡ್ – CFCA ಅವಾರ್ಡ್ ಫಾರ್ ಮೋಸ್ಟ್ ಪ್ರಾಮಿಸಿಂಗ್ ಪರ್ಫಾರ್ಮರ್
ನಾಮಿನೇಟೆಡ್ – ಗೋಳ್ಡನ್ ಸ್ಯಾಟಿಲೈಟ್ ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ – ಲೂಸ್ ಯುವರ್‌ಸೆಲ್ಫ್
ನಾಮಿನೇಟೆಡ್ – OFCS ಫಾರ್ ಬೆಸ್ಟ್ ಬ್ರೇಕ್‌ಥ್ರೂ ಪರ್ಫಾರ್ಮನ್ಸ್
ನಾಮಿನೇಟೆಡ್ – PFCS ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ – ಲೂಸ್ ಯುವರ್‌ಸೆಲ್ಫ್
ನಾಮಿನೇಟೆಡ್ – ಗ್ರಾಮಿ ಫಾರ್ ಬೆಸ್ಟ್ ಸಾಂಗ್ ವ್ರಿಟ್ಟನ್ ಫಾರ್ ಎ ಮೋಷನ್ ಪಿಕ್ಚರ್, ಟೆಲಿವಿಶನ್ ಆರ್ ಅಥರ್ ವಶ್ಯುಲ್ ಮೀಡಿಯಾ – ಲೂಸ್ ಯುವರ್‌ಸೆಲ್ಫ್ ಜ್
200350 Cent: The New Breedತಮ್ಮದೇ ನಿಜಜೀವನದ
2004ಕ್ರಾಂಕ್ ಯಾಂಕರ್ಸ್ಬಿಲ್ಲಿ ಫ್ಲೆಚೆರ್TV ಗೆಸ್ಟ್ ರೋಲ್; ವಾಯ್ಸ್
2009ರಾಕ್ ಆಂಡ್ ರೋಲ್ ಆಫ್ ಫೇಮ್ ಇಂಡಕ್ಷನ್ ಸೆರಮನಿತಮ್ಮದೇ ನಿಜಜೀವನದ ಪಾತ್ರಇಂಡಕ್ಟಡ್ ರನ್-D.M.C.
ಫನ್ನೀ ಪೀಪಲ್ತಮ್ಮದೇ ನಿಜಜೀವನದ ಪಾತ್ರಕೇಮೀಯೋ[೧೨೧]
2010ಶ್ಯಾಡಿ ಟೇಲ್ಜ್ಮುಖ್ಯ ಪಾತ್ರ
ಹ್ಯಾವ್ ಗನ್ - ವಿಲ್ ಟ್ರಾವಲ್ಪಾಲಾಡಿನ್
ದಿ ಫೈಟರ್

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಎಮಿನೆಮ್‌ಗೆ ಹನ್ನೊಂದು ಗ್ರಾಮಿ ಪ್ರಶಸ್ತಿಗಳು ಲಭ್ಯವಾಗಿವೆ,ಯಾವುದೇ ರಾಪ್ ಕಲಾವಿದ ಪಡೆಯದಷ್ಟು ಸಂಖ್ಯೆಯ ಗ್ರಾಮಿ ಪ್ರಶಸ್ತಿಗಳನ್ನು ಎಮಿನೆಮ್ ಪಡೆದಿದ್ದಾನೆ,ಎಮಿನೆಮ್ ಅನ್ನು ಆತನ "ಶಾಬ್ದಿಕ ಶಕ್ತಿ"ಗಾಗಿ ಹೊಗಳಲಾಗಿದೆ,ಉತ್ತಮ ಗುಣಮಟ್ಟದ ಸಾಹಿತ್ಯ ಮತ್ತು MTV ಅವರ ದಿ ಗ್ರೇಟೆಸ್ಟ್ MC ಆಫ್ ಆಲ್ ಟೈಮ್ ಗಳ ಪಟ್ಟಿಯಲ್ಲಿ ಎಮಿನೆಮ್ ಒಂಬತ್ತನೆಯವನಾಗಿ ಗುರುತಿಸಲ್ಪಟ್ಟಿದ್ದಾನೆ,[೧೨೨][೧೨೩] 2003ರಲ್ಲಿ MTV'ಯ 22 ಶ್ರೇಷ್ಠ ಸಂಗೀತದ ಧ್ವನಿಗಳಲ್ಲಿ[೧೨೪] ಹದಿಮೂರನೆಯವನಾಗಿ ಎಮಿನೆಮ್ ಗುರುತಿಸಲ್ಪಟ್ಟರೆ 82ನೇಯವನಾಗಿ ರೋಲ್ಲಿಂಗ್ ಸ್ಟೋನ್ನ "ದಿ ಇಮ್ಮಾರ್ಟಲ್ಸ್" ನಲ್ಲಿ ಗುರುತಿಸಲಾಗಿದೆ.[೧೨೫] 2008ರಲ್ಲಿ, ವೈಬ್ ಮ್ಯಾಗಝೈನ್‌ನ ಓದುಗರು ಎಮಿನೆಮ್ ಅನ್ನು "ಜೀವಂತ ರಾಪರ್‌ಗಳಲ್ಲಿ ಶ್ರೇಷ್ಠ ರಾಪರ್" ಎಂದು ಆಯ್ಕೆ ಮಾಡಿರುತ್ತಾರೆ.[೧೨೬] ವೈಬ್ ವೆಬ್‌ಸೈಟ್‍ನವರು ಕೈಗೊಂಡ ಚುನಾವಣೆಯಲ್ಲಿ, ಸಂಗೀತ ಪ್ರೇಮಿಗಳು ಎಲ್ಲಾ ವಿರೋಧವನ್ನು ಹಿಮ್ಮೆಟ್ಟಿ ಎಮಿನೆಮ್ ಅನ್ನು "ಬೆಸ್ಟ್ ರಾಪರ್ ಎವರ್" ಎಂದು ಹೆಸರಿಸಿದ್ದಾರೆ. ಎಮಿನೆಮ್‌ಗೆ ಮೊದಲ ಬಾರಿಗೆ ಗ್ರಾಮಿ ಪ್ರಶಸ್ತಿ ಪಡೆದ ದಿ ಮಾರ್ಶಲ್ ಮ್ಯಾಥರ್ಸ್ LP ಆಲ್ಬಮ್‌ನಲ್ಲಿ "ದಿ ರೀಯಲ್ ಸ್ಲಿಮ್ ಶ್ಯಾಡಿ" ಎಂಬ ಹಾಡಿನಲ್ಲಿರುವ ನಖರಾತ್ಮಕ ಭಾವನೆಗಳು ಎಮಿನೆಮ್‌ಗೆ ಎಂದೆಂದೂ ಗೆಲ್ಲಿಸುತ್ತದೆ ಎಂದು ವ್ಯಂಗ್ಯವಾಡಿದ್ದೂ ಇದೆ.

ಇವನ್ನೂ ಗಮನಿಸಿ

  • ಆರ್ಟಿಸ್ಟ್ಸ್ ವಿಥ್ ದಿ ಮೋಸ್ಟ್ ಗೋಳ್ಡ್,ಪ್ಲಾಟಿನಮ್ ಆಂಡ್ ಮಳ್ಟೀ-ಪ್ಲಾಟಿನಮ್ ಸಿಂಗಲ್ಸ್ ಇನ್ ದಿ U.S.A.
  • ಆರ್ಟಿಸ್ಟ್ಸ್ ವಿಥ್ ದಿ ಮೋಸ್ಟ್ ನಂಬರ್-ಒನ್ ಯೂರೋಪಿಯನ್ ಸಿಂಗಲ್ಸ್
  • ಲಿಸ್ಟ್ ಆಫ್ ಆರ್ಟಿಸ್ಟ್ಸ್ ವ್ಹೂ ರೀಚ್ಡ್ ನಂಬರ್ ಒನ್ ಆನ್ ದಿ ಹಾಟ್ 100 (U.S.)
  • ಲಿಸ್ಟ್ ಆಫ್ ಬೆಸ್ಟ್-ಸೆಲ್ಲಿಂಗ್ ಆಲ್ಬಮ್ಸ್ ಇನ್ ದಿ U.S.A.
  • ಲಿಸ್ಟ್ ಆಫ್ ಬೆಸ್ಟ್-ಸೆಲ್ಲಿಂಗ್ ಆಲ್ಬಮ್ಸ್ ವರ್ಳ್ಡ್ ವೈಡ್
  • ಲಿಸ್ಟ್ ಆಫ್ ಬೆಸ್ಟ್-ಸೆಲ್ಲಿಂಗ್ ಮ್ಯೂಸಿಕ್ ಆರ್ಟಿಸ್ಟ್ಸ್
  • ಲಿಸ್ಟ್ ಆಫ್ ಬೆಸ್ಟ್ ಸೆಲ್ಲಿಂಗ್ ಮ್ಯೂಸಿಕ್ ಆರ್ಟಿಸ್ಟ್ಸ್ ಇನ್
  • ಲಿಸ್ಟ್ ಆಫ್ ಬೆಸ್ಟ್-ಸೆಲ್ಲಿಂಗ್ ಸಿಂಗಲ್ಸ್ ವರ್ಳ್ಡ್ ವೈಡ್
  • ಲಿಸ್ಟ್ ಆಫ್ ಆಲ್ಬಮ್ಸ್ ಸರ್ಟಿಫೈಡ್ ಡೈಮಂಡ್ ಇನ್ ದಿ U.S.
  • ಪಾಪ್‌ ಐಕಾನ್

ವ್ಯಾಪಾರದ ಸಾಹಸಗಳು

  • ಶ್ಯಾಡಿ ರೆಕಾರ್ಡ್ಸ್
  • ಶೇಡ್ 45 ಸಿರೀಅಸ್
  • ಶ್ಯಾಡಿ ಲಿಮಿಟೆಡ್. ಕ್ಲೋಥಿಂಗ್
  • ಶ್ಯಾಡಿ ಗೇಮ್ಸ್
  • ಏಯ್ಟ್ ಮೈಲ್ ಸ್ಟೈಲ್ LLC[೧೦೭][೧೦೮]

ಆಕರಗಳು

ಮೂಲಗಳು

  • Bozza, Anthony (2003), Whatever You Say I Am: The Life and Times of Eminem, New York, New York, United States: Crown Publishing Group, ISBN 1400050596
  • Edwards, Paul (2009), How to Rap: The Art & Science of the Hip-Hop MC, Chicago, United States: Chicago Review Press, ISBN 1556528167
  • Goldberg, Bernard (2005), 100 People Who Are Screwing Up America, New York, New York, United States: HarperCollins, ISBN 0060761288

ಬಾಹ್ಯ ಕೊಂಡಿಗಳು

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಎಮಿನೆಮ್]]
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ