ಎಬೊನೈಟ್

ಎಬೊನೈಟ್ ಅಧಿಕ ಗಂಧಕ ಬೆರೆತ ಬಿರುಸಾದ ರಬ್ಬರ್.[೧][೨] ರಬ್ಬರ್ ಮತ್ತು ಗಂಧಕವನ್ನು ಬೆರೆಸಿ ೧೪೦ - ೧೬೦ ಸೆಂ.ಗ್ರೇ. ಉಷ್ಣತೆಗೆ ಕಾಸಿ ಇದನ್ನು ತಯಾರಿಸಬಹುದು. ಸಾಮಾನ್ಯ ಉಷ್ಣತಾಮಿತಿಗಳಲ್ಲಿ ಬಿರುಸಾಗಿದ್ದು ಕಾಸಿದಾಗ ಮೃದುವಾಗುವುದು. ಸ್ಥಿತಿಸ್ಥಾಪಕತ್ವ ಗುಣವಿಲ್ಲ. ಗಡಸು ಮೈ. ಗೀರುನಿರೋಧಕವಾಗಿದೆ. ಎರಕಹೊಯ್ದು ರಂಧ್ರ ಮಾಡಿ ಚೆನ್ನಾಗಿ ಹೊಳೆಯುವಂತೆಯೂ ಮಾಡಬಹುದು. ವಿದ್ಯುನ್ನಿರೋಧಕವಸ್ತು. ಹಲವಾರು ರಾಸಾಯನಿಕಗಳು ಇದರೊಡನೆ ವರ್ತಿಸುವುದಿಲ್ಲ.

೨೦೧೪ರಲ್ಲಿ ತಯಾರಿಸಿದ ಹಸಿರು/ಕಪ್ಪು ಏರಿಳಿತಗಳಿರುವ ಎಬೊನೈಟ್ ಫೌಂಟನ್ ಪೆನ್ ಮತ್ತು ೨೦೧೭ರಲ್ಲಿ ತಯಾರಿಸಿದ ಕಪ್ಪು ಎಬೊನೈಟ್ ಪೆನ್ನು.

ಉಪಯೋಗಗಳು

ರೇಡಿಯೊ, ತಾಂತ್ರಿಕ ಮುಂತಾದ ಉದ್ದಿಮೆಗಳಲ್ಲಿ ಹೆಚ್ಚಿನ ಉಪಯೋಗವಿದೆ. ರಸಾಯನೋದ್ಯಮದಲ್ಲಿ ರಕ್ಷಕ ಪದರವಾಗಿ ಉಪಯೋಗಿಸುವರು. ಅಚ್ಚುಹಾಕಿ ಕೋಶಪೆಟ್ಟಿಗೆ ಫೌಂಟನ್ ಪೆನ್ನು ಕೊಳವೆ,[೩][೪] ಟೆಲಿಫೋನ್, ಹೆಣಿಗೆ, ತಂಬಾಕು ಚಿಲುಮೆ ಮುಂತಾದ ಹಲವಾರು ನಿತ್ಯೋಪಯೋಗಕಾರಿ ವಸ್ತುಗಳನ್ನು ಇದರಿಂದ ತಯಾರಿಸಬಹುದು.

ಉಲ್ಲೇಖಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ