ಉದಯಭಾನು ಕಲಾ ಸಂಘ, ಕೆಂಪೇಗೌಡ ನಗರ, ಬೆಂಗಳೂರು

ಉದಯಭಾನು ಕಲಾಸಂಘ, [೧](ನೋಂ)ಬೆಂಗಳೂರು, ೧೨-೦೬-೧೯೬೫ ರಲ್ಲಿ ಅಸ್ತಿತ್ವಕ್ಕೆ ಬಂದ ಈ ಜನೋಪಕಾರಿ ಸಮಾಜಸೇವಾ ಮನೋಭಾವದ ಸಂಘದ ಸ್ಥಾಪನೆಗೆ ನೆರವಾದವರಲ್ಲಿ ಅಗ್ರಗಣ್ಯರು ಹಲವಾರು ಮಂದಿ. ೧೯೬೫ ರ 'ಸಾರ್ವಜನಿಕ ಗಣೇಶೋತ್ಸವ' ಮತ್ತು ಅದರ ಜೊತೆಗೆ ಹೊಂದಿಕೊಂಡ 'ಉಚಿತ ವಾಚನಾಲಯ'ವನ್ನು ಉದ್ಘಾಟಿಸಿದವರು, ಶ್ರೀ.ದಾಶರಥಿ ದೀಕ್ಷಿತರು. ಆ ದಿನದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದವರು ಶ್ರಿ.ನಾಡಿಗೇರ ಕೃಷ್ಣರಾವ್ ಅವರು. 'ಗಣೇಶೋತ್ಸವ'ದಿಂದ ಪ್ರಾರಂಭವಾಗಿ ಕಳೆದ ೪ ದಶಕಗಳಿಂದ ಸಮಾಜದ ಸೇವೆಯೇ ಮೂಲ ಉದ್ದೇಶ್ಯವೆಂದು ಪರಿಗಣಿಸಿ, ಕಳಕಳಿಯಿಂದ ದುಡಿಯುತ್ತಿರುವ ಬೆಂಗಳೂರಿನ ಸಂಸ್ಥೆಗಳಲ್ಲಿ 'ಉದಯಭಾನು ಕಲಾಸಂಘ'ವೂ ಒಂದು. ಇದರ ವ್ಯಾಪ್ತಿ, ವಿದ್ಯಾಭಿವೃದ್ಧಿ, ವೈದ್ಯಕೀಯ-ನಾಗರಿಕ, ಸಾಮಾಜಿಕ, ನಗರ ಕಲ್ಯಾಣ, ಕ್ರೀಡೆಗಳಿಗೆ ಪ್ರೊತ್ಸಾಹ, ಪುಸ್ತಕ ಭಂಡಾರ, ಉಚಿತ ವಾಚನಾಲಯ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಭವನದ ನಿರ್ಮಾಣ ಕಾರ್ಯ, ಆರೋಗ್ಯ ಸೇವೆ, ಇತ್ಯಾದಿ.

ಉದಯಭಾನು ಕಲಾಸಂಘ,(ನೋಂ) ಕೆಂಪೇಗೌಡ ನಗರ, ಬೆಂಗಳೂರು.
ಚಿತ್ರ:Udaya (F).jpg
ಸಾಮಾನ್ಯ ಮಾಹಿತಿ
ಮಾದರಿಅತ್ಯಾಧುನಿಕ ವ್ಯವಸ್ಥೆಯ ಪ್ರಮುಖ ಸಭಾಂಗಣ,ಸಭಾಗೃಹ,ಹಾಗೂ ಲೈಬ್ರರಿ,,
ವಾಸ್ತುಶಾಸ್ತ್ರ ಶೈಲಿ೧೯೬೫ ರ 'ಸಾರ್ವಜನಿಕ ಗಣೇಶೋತ್ಸವ' ಮತ್ತು ಅದರ ಜೊತೆಗೆ ಹೊಂದಿಕೊಂಡ 'ಉಚಿತ ವಾಚನಾಲಯ'ವನ್ನು ಶ್ರೀ.ದಾಶರಥಿ ದೀಕ್ಷಿತರು ಉದ್ಘಾಟಿಸಿದವರು, ಆ ದಿನದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದವರು ಶ್ರಿ.ನಾಡಿಗೇರ ಕೃಷ್ಣರಾವ್.'ಗಣೇಶೋತ್ಸವ'ದಿಂದ ಪ್ರಾರಂಭವಾಗಿ ಕಳೆದ ೪ ದಶಕಗಳಿಂದ ಸಮಾಜದ ಸೇವೆಗೆ ಸಂಸ್ಥೆ ಮುಡಿಪಾಗಿದೆ.
ಸ್ಥಳಬೆಂಗಳೂರಿನ ಕೆಂಪೇಗೌಡ ನಗರ, ಭಾರತ * '೨೦೦೫ ನೇ ಸಾಲಿನ,ಸುವರ್ಣ ಕರ್ನಾಟಕ ರಾಜ್ಯೋತ್ಸವದ ರಾಜ್ಯಪ್ರಶಸ್ತಿ'ದೊರೆತಿದೆ
ನಿರ್ಮಾಣ ಪ್ರಾರಂಭವಾದ ದಿನಾಂಕ
  • ಕಂಪ್ಯೂಟರ್ ಕಲಿಕಾ ತರಗತಿಗಳು, * ಪುಸ್ತಕ ಪ್ರಕಾಶನ, * ಕನ್ನಡದಲ್ಲಿ ವಿಜ್ಞಾನ ಸಂವಹನ,ವಿದ್ಯಾಭಿವೃದ್ಧಿ, ವೈದ್ಯಕೀಯ-ನಾಗರಿಕ, ಸಾಮಾಜಿಕ, ನಗರ ಕಲ್ಯಾಣ, ಕ್ರೀಡೆಗಳಿಗೆ ಪ್ರೊತ್ಸಾಹ, ಪುಸ್ತಕ ಭಂಡಾರ, ಉಚಿತ ವಾಚನಾಲಯ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಭವನದ ನಿರ್ಮಾಣ ಕಾರ್ಯ, ಆರೋಗ್ಯ ಸೇವೆ, ಇತ್ಯಾದಿ.
ತೆರೆಯುವ ದಿನಾಂಕ೧೯೬೫ ರಲ್ಲಿ,ಗಣೇಶೋತ್ಸವದ ಉದ್ಘಾಟನೆ'ಜರುಗಿತು.
Design and construction
ಮುಖ್ಯ ಗುತ್ತಿಗೆದಾರ[[ ]]
ಜಾಲ ತಾಣ
www.udayabhanu.org/p/blog-page_27.htmlpage.html
ಚಿತ್ರ:Audito (F) .jpg
'ಅತ್ಯಾಧುನಿಕ ರಂಗಮಂದಿರ'
ಚಿತ್ರ:UB118.JPG
'ಉದಯಭಾನು ಕಲಾಸಂಘದ ಹಳೆಯ ಕಟ್ಟಡ'

ಉದಯಭಾನು ಕಲಾಸಂಘ ಬೆಳೆದ ಪರಿ

ಕೇವಲ ೧೦ ಅಡಿ ಉದ್ದಗಲದ 'ಚಿಕ್ಕ ಅಂಗಡಿ ಮಳಿಗೆ'ಯಲ್ಲಿ ಪ್ರಾರಂಭವಾದ ಸಂಘವು, ಈ ಐದು ದಶಕಗಳಲ್ಲಿ ವಿವಿಧ ಆಯಾಮಗಳಲ್ಲಿ ಕ್ರಿಯಾಶೀಲವಾಗಿದೆ. ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ, ನಗರಕಲ್ಯಾಣ, ಉಚಿತ ಶಿಕ್ಷಣ, ನಾಗರಿಕ ಆರೋಗ್ಯ ಪಾಲನೆ, ಮಹಿಳಾ-ಯುವಜನ ಕಲ್ಯಾಣ, ಕಂಪ್ಯೂಟರ್ ತರಬೇತಿ, ಸಮಾಜದ ಒಳಿತಿಗೆ ಪೂರಕವಾಗುವಂತಹ ಉಪಯುಕ್ತ ಸಾಹಿತ್ಯಿಕ ಪ್ರಕಟಣೆಗಳು, ಮತ್ತು ಈ ಎಲ್ಲ ಚಟುವಟಿಕೆಗಳನ್ನು ಮತ್ತೂ ಹೆಚ್ಚುಹೆಚ್ಚಾಗಿ ವಿಸ್ತರಿಸಲು ನೆರವಾಗುವಂತಹ ಸುಮಾರು ೧೫,೦೦೦ ಚದರ ಅಡಿ ವಿಸ್ತೀರ್ಣದ ಭವ್ಯಕಟ್ಟಡ-ಸಭಾಂಗಣ ಕನ್ನಡನಾಡಿಗೆ ದೊರೆತಿದೆ.

ಕಂಪ್ಯೂಟರ್ ಕಲಿಕಾ ತರಗತಿಗಳು

ಯುವಜನರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ಸಹಾಯವಾಗುವಂತೆ ತರಬೇತಿ ಕೇಂದ್ರವನ್ನು ಈ ಸಂಘವು ಉಚಿತವಾಗಿ ನಡೆಸಿಕೊಂಡು ಬರುತ್ತಿದೆ. ಈಗಾಗಲೇ ೫ ನೇ ತಂಡದ ಉದ್ಘಾಟನಾ ಸಮಾರಂಭವು ೦೩-೦೭-೨೦೧೧ ರಂದು ಸಂಘದ ಸಭಾಂಗಣದಲ್ಲಿ ನೆರವೇರಿ ದೆ. ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಇದೇ ಸಂದರ್ಭದಲ್ಲಿ ೪ನೆಯ ತಂಡದ ಒಟ್ಟು ೫೮ ಫಲಾನುಭವಿ ವಿದ್ಯಾರ್ಥಿಗಳಿಗೆ ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಉಪ ಕಾರ್ಯದರ್ಶಿಗಳಾದ ಶ್ರೀ.ಕೆ. ಸುಧಾಕರ ಶೆಟ್ಟಿಯವರು 'ಪ್ರಮಾಣಪತ್ರ'ಗಳನ್ನು ವಿತರಿಸಿದರು. ಹಿರಿಯ ಪತ್ರಕರ್ತೆ ಡಾ. ವಿಜಯಾ ಆಶಯ ನುಡಿಗಳನ್ನಾಡುತ್ತಾ ಉದಯಭಾನು ಸಂಘದ ಸಾಧನೆಗಳನ್ನು ಶ್ಲಾಘಿಸಿದರು. ಸಂಘದ ಅಧ್ಯಕ್ಷರಾದ ಬಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಕಾರ್ಯದರ್ಶಿ, ಶ್ರೀ.ಎಂ.ನರಸಿಂಹರವರು ಸ್ವಾಗರ ಕೋರಿದರು. ಕಂಪ್ಯೂಟರ್ ಶಿಕ್ಷಕಿ, ಸಿ.ದಾಕ್ಷಾಯಿಣಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಕನ್ನಡದಲ್ಲಿ ವಿಜ್ಞಾನ ಸಂವಹನ

'ಕನ್ನಡದಲ್ಲಿ ವಿಜ್ಞಾನ ಸಂವಹನೆ'-'ವಿಶ್ವದ ವಿಜ್ಞಾನ ಪ್ರಜ್ನೆ'ಯನ್ನು 'ಕನ್ನಡ ಸಮುದಾಯದ ಪ್ರಜ್ಞೆ'ಯನ್ನಾಗಿಸಲು ಈವರೆಗೆ ಆಗಿರುವ ಸಂವಹನ ಕಾಯಕದ ಐತಿಹಾಸಿಕ ದಾಖಲೆಯ ಪ್ರಬಂಧಗಳ ಸಂಗ್ರಹವೇ ಈ ಪುಸ್ತಕ. ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆಗಳನ್ನೇ ಗುರಿಯಾಗಿಟ್ಟು ಕೊಂಡು ಸುಮಾರು ೫ ದಶಕಗಳ ನಿರಂತರ ಸಾರ್ವಜನಿಕ ಸೇವೆಗಳಲ್ಲಿ ನಿರತವಾಗಿರುವ ಉದಯಭಾನು ಕಲಾಸಂಘದ ಪ್ರಕಟಣೆಯಾಗಿದೆ.(ಬೆಂಗಳೂರು ದರ್ಶನದ ಖ್ಯಾತಿ)

ಪುಸ್ತಕದ ಬಿಡುಗಡೆಯ ಸಮಾರೋಪ ಸಮಾರಂಭ

ಚಿತ್ರ:UB.JPG
'ಸಮಾರೋಪ ಸಮಾರಂಭ'ದ ಕೊನೆಯಲ್ಲಿ, ಶ್ರೀ.ಬೆ.ಗೊ.ರಮೇಶ್, ಧನ್ಯವಾದ ಸಮರ್ಪಣೆಯನ್ನು ಮಾಡುತ್ತಿರುವುದು

ಈ ಪುಸ್ತಕವನ್ನು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ನ, ಎಚ್.ಏನ್. ಮಲ್ಟಿ ಮೀಡಿಯ ಹಾಲ್ ನಲ್ಲಿ, ೨೦೧೧ ರ, ಡಿಸೆಂಬರ್, ೨೪ ರಂದು, ಪ್ರೊ.ಎಲ್. ಎಸ್. ಶೇಷಗಿರಿ ರಾವ್ ರವರ ಹಸ್ತದಿಂದ ಬಿಡುಗಡೆ ಮಾಡಲಾಯಿತು.'ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಕಾರ್ಯಕಾರಿ ಸಮಿತಿಯ ಪದಾಧಿಕಾರಿ', ಶ್ರೀ. ಬೆ.ಗೊ ರಮೇಶ್, 'ಧನ್ಯವಾದ ಸಮರ್ಪಣೆ'ಯನ್ನು ಮಾಡುತ್ತಿದ್ದಾರೆ. ವೇದಿಕೆಯ ಮೇಲೆ ಕುಳಿತ ಗಣ್ಯರು:(ಎಡದಿಂದ ಬಲಕ್ಕೆ): ಡಾ. ಅನಂತ ರಾಜು, ಡಾ. ಎ.ಎಚ್.ರಾಮರಾವ್, ಮತ್ತು 'ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ' ಪ್ರೊ.ಎಚ್. ಆರ್. ರಾಮಕೃಷ್ಣ ರಾವ್

ಇತಿಹಾಸದಲ್ಲಿ ವಿಜ್ಞಾನ

ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನದ ಇತಿಹಾಸ, ಹಾಗೆಯೆ 'ಇತಿಹಾಸದಲ್ಲಿ ವಿಜ್ಞಾನ' [೨] (ಜೆ.ಡಿ.ಬರ್ನಾಲ್)ಮುಂತಾದ ಶ್ರೇಷ್ಠ ಲೇಖಕರು ಬರೆದ ಸಾಕಷ್ಟು ಪುಸ್ತಕಗಳಿವೆ. ಕನ್ನಡದಲ್ಲೂ ಸಾಹಿತ್ಯ ಚರಿತ್ರೆಯನ್ನು ದಾಖಲಿಸಿರುವ ಪ್ರಸಿದ್ಧ ಗ್ರಂಥಗಳಿವೆ. ಆದರೆ ಇಂದಿನ ಬದುಕಿಗೆ ಅನಿವಾರ್ಯವಾದ ವಿಜ್ಞಾನ, ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೆಳೆದ ಬಗೆಯ ಪರಿಚಯವಾಗದಿದ್ದರೆ 'ಶಾಸ್ತ್ರಿಯ ಭಾಷೆ'ಯಾಗಿ ರೂಪುಗೊಳ್ಳುತ್ತಿರುವ 'ಕನ್ನಡದ ಸರ್ವಾಂಗೀಣ ಬೆಳವಣಿಗೆ' ಕುಂಠಿತವಾಗುತ್ತದೆ. ಈ ಕೊರತೆಯನ್ನು ತುಂಬಲು, ವಿವಿಧ ವಿಜ್ಞಾನ ಶಾಖೆಗಳಲ್ಲಿ ಇದುವರೆಗೆ ನಡೆದಿರುವ ಚಿಂತನೆ, ಹಾಗೂ ಪ್ರಯೋಗಿಕ ವಿವರಣೆಗಳ ಸಮಗ್ರ ಮಾಹಿತಿಗಳನ್ನು ನೀಡುವ ೧೫ ಪ್ರಬಂಧಗಳನ್ನು ೧೩ ಹೆಸರಾಂತ ವಿಜ್ಞಾನ ಲೇಖಕರು ಬರೆದ 'ಕನ್ನಡದಲ್ಲಿ ವಿಜ್ಞಾನ ಸಂವಹನೆ' ಹೊರಬಂದಿದೆ. ಇದು, ಇಂದಿನ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಬರೆದಿರುವ ಪುಸ್ತಕ. ಕ್ರೈಸ್ಟ್ ಕಾಲೇಜಿನ ವಿಶ್ರಾಂತ ಭೌತವಿಜ್ಞಾನದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ, ಪ್ರೊ.ಎಚ್. ಆರ್. ರಾಮಕೃಷ್ಣರಾವ್ ಮತ್ತು ಹೆಸರಾಂತ ವಿಶ್ರಾಂತ ಭೂ-ವಿಜ್ಞಾನಿ, ಶ್ರೀ.ಟಿ. ಅರ್. ಅನಂತರಾಮು ಈ ಪುಸ್ತಕದ ಸಂಪಾದಕರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ, 'ಹಿರಿಯ' ಮತ್ತು 'ಕಿರಿಯ ವಿಜ್ಞಾನಿಗಳು' ಮತ್ತು 'ವಿಜ್ಞಾನ ಲೇಖಕರು' ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.[೩]

ಕೃತಿಯಲ್ಲಿ

ಒಟ್ಟು ೧೫ ಪ್ರಬಂಧಗಳಿರುವ ಈ ಹೊತ್ತಿಗೆ, ೨೫೨ ಪುಟಗಳ ೧/೮ ಡೆಮಿ ಗಾತ್ರದ ಸುಂದರ ಕವಚದ ವಿಜ್ಞಾನ ಸಾಹಿತ್ಯದ ಅನುಪಮ ಸಂಗ್ರಹ. ಈ ಪ್ರಬಂಧಗಳಲ್ಲಿ ಒದಗಿಸಿರುವ ಸ್ಪಷ್ಟ ಸಮಯೋಚಿತ ಮಾಹಿತಿಗಳು ಚೆನ್ನಾಗಿ ಮೂಡಿ ಬಂದಿವೆ. ತಮ್ಮ ಪ್ರಬುದ್ಧ ಪ್ರಬಂಧಗಳನ್ನು ಮಂಡಿಸಿರುವ ಗಣ್ಯವಿಜ್ಞಾನ ಲೇಖಕರು:

  • ಪ್ರೊ. ಎಚ್.ಆರ್.ರಾಮಕೃಷ್ಣರಾವ್,
  • ಡಾ.ಬಿ.ಎಸ್.ಸೋಮಶೇಖರ್,
  • ಪ್ರೊ. ಎಂ. ಆರ್. ನಾಗರಾಜು,
  • ಡಾ.ಪಿ.ಎಸ್. ಶಂಕರ್,
  • ಡಾ. ಎಚ್.ಎಸ್.ನಿರಂಜನ ಆರಾಧ್ಯ,
  • ಶ್ರೀ ಜಿ.ಎನ್. ನರಸಿಂಹಮೂರ್ತಿ,
  • ಶ್ರೀ ಕೊಳ್ಳೇಗಾಲ ಶರ್ಮ,
  • ಶ್ರೀಮತಿ ಸುಮಂಗಲಾ ಮುಮ್ಮಿಗಟ್ಟಿ,
  • ಜನಾಬ್,ಅಬ್ದುಲ್ ರೆಹಮಾನ್ ಪಾಷ,
  • ಡಾ.ನಾ.ಸೋಮೇಶ್ವರ,
  • ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ,
  • ಡಾ. ಕೆ. ಎನ್. ಗಣೇಶಯ್ಯ,
  • ಶ್ರೀ ಟಿ. ಜಿ. ಶ್ರೀನಿಧಿ.

ಕನ್ನಡ ವಿಜ್ಞಾನ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ ನವರಿಗೆ ಈ ಕೃತಿ ಸಮರ್ಪಿತವಾಗಿದೆ. ಲೇಖಕರ ಪಟ್ಟಿಯಲ್ಲಿ ಶ್ರೀ ಟಿ. ಅರ್.ಅನಂತರಾಮು ರವರ, ಪೆನ್ ಫ್ರೆಂಡ್ಸ್ ಬಳಗದವರ ಪಾಲು ಹೆಚ್ಚಾಗಿದೆ.

ಬಂಗಾರದ ಹಬ್ಬದ ಸವಿನೆನಪಿನಲ್ಲಿ

'ಉದಯಭಾನು ಕಲಾಸಂಘದ ಬಂಗಾರದ ಹಬ್ಬ'[೪]ದ ಸವಿನೆನಪಿನಲ್ಲಿ ಪ್ರಕಟಿಸಿದ ಪುಸ್ತಕಗಳ ಸಾಲಿನಲ್ಲಿ ೫೦ ಪುಟ್ಟ ಪುಸ್ತಕಗಳನ್ನು ಸಂಘವು ಹೊರತಂದಿದೆ. [೫] ಕರ್ನಾಟಕದ ಬೆಳವಣಿಗೆಯಲ್ಲಿ ದುಡಿದ ಚೇತನಗಳ ವ್ಯಕ್ತಿ ಚಿತ್ರಗಳನ್ನು ಸವಿಸ್ತಾರವಾಗಿ ಈ ಪುಸ್ತಕಗಳಲ್ಲಿ ದಾಖಲಿಸಲಾಗಿದೆ. ಇದನ್ನು ಬರೆದ ಲೇಖಕರು ಅಂತಹ ಹರಿಕಾರರನ್ನು ತೀರ ಹತ್ತಿರದಲ್ಲಿ ಬಲ್ಲ ವ್ಯಕ್ತಿಗಳಾಗಿದ್ದಾರೆ. 'ಡಾ.ಪಿ.ವಿ.ನಾರಾಯಣ' ಈ ಪುಸ್ತಕಗಳ ಸಂಪಾದಕರಾಗಿದ್ದಾರೆ. [೬]ಜೂನ್ 2014 ರಿಂದ, ಮೊದಲ್ಗೊಂಡು ಜೂನ್ 2015 ರವರೆಗೆ, 'ಸಂಘವು ವರ್ಷಪೂರ್ತಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ'.

ಸಂಸ್ಥೆ ಪ್ರಕಟಿಸಿರುವ ಪುಸ್ತಕಗಳು

  1. ಅಮಾರ್ತ್ಯಸೇನ್: ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ, ಲೇಖಕರು: ಡಾ. ಆರ್ ಕೋಮಲ ಮತ್ತು ಡಾ. ಶುಭ ರಮೇಶ್
  2. ಕೆರೆಗಳು ಬತ್ತಿದಾಗ-ಜಲ ಸಮಸ್ಯೆ : ನೀರಿನ ಸಮಸ್ಯೆ ಬಗ್ಗೆ ಹಾಗೂ ವಿವಿಧ ಕೆರೆಗಳ ಪರಿಚಯ ಲೇ: ಶ್ರೀ ಟಿ.ಆರ್.ಅನಂತರಾಮು

ಪ್ರಶಸ್ತಿ ಪುರಸ್ಕಾರಗಳು

  1. ಸಂಘಕ್ಕೆ, '೨೦೦೫ ನೇ ಸಾಲಿನ,ಸುವರ್ಣ ಕರ್ನಾಟಕ ರಾಜ್ಯೋತ್ಸವದ ರಾಜ್ಯಪ್ರಶಸ್ತಿ'ದೊರೆತಿದೆ.

ಬಾಹ್ಯಸಂಪರ್ಕಗಳು

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ