ಆಲ್ಫ್ರೆಡ್ ಚಾರಲ್ಸ್‌ ಕಿನ್ಸೆ

ಆಲ್ಫ್ರೆಡ್ ಚಾರಲ್ಸ್‌ ಕಿನ್ಸೆ(ಜೂನ್ 23, 1894 – ಆಗಸ್ಟ್ 25, 1956) ಅಮೆರಿಕದ ಜೀವಶಾಸ್ತ್ರಜ್ಞ,ಪ್ರಾಣಿಶಾಸ್ತ್ರ ಮತ್ತು ಕೀಟಶಾಸ್ತ್ರದ ಪ್ರಾಧ್ಯಾಪಕ ಮತ್ತು ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಲೈಂಗಿಕಶಾಸ್ತ್ರದ ಅಧ್ಯಯನ ಪೀಠವನ್ನು ಸ್ಥಾಪನೆಮಾಡಿದ ಲೈಂಗಿಕ ವಿಜ್ಞಾನಿ.[೧]

ಆಲ್ಫ್ರೆಡ್ ಚಾರಲ್ಸ್‌ ಕಿನ್ಸೆ
Kinsey in Frankfurt, November 1955
ಜನನAlfred Charles Kinsey
June 23, 1894
Hoboken, New Jersey, United States
ಮರಣAugust 25, 1956(1956-08-25) (aged 62)
Bloomington, Indiana, United States
ವಾಸಸ್ಥಳUnited States
ರಾಷ್ಟ್ರೀಯತೆAmerican
ಕಾರ್ಯಕ್ಷೇತ್ರBiology
ಸಂಸ್ಥೆಗಳುIndiana University
ಅಭ್ಯಸಿಸಿದ ವಿದ್ಯಾಪೀಠBowdoin College
Harvard University
ಪ್ರಸಿದ್ಧಿಗೆ ಕಾರಣSexology and human sexuality: Kinsey Reports, Kinsey scale, Kinsey Institute for Research in Sex, Gender, and Reproduction

ಬಾಲ್ಯ ಮತ್ತು ಜೀವನ

ಅಮೆರಿಕದ ನ್ಯೂಜರ್ಸಿಯಲ್ಲಿ ಹುಟ್ಟಿದ. ಬ್ರನ್ಸ್‍ವಿಕ್, ಹಾರ್ವರ್ಡ್‍ಗಳಲ್ಲಿ ಕಲಿಕೆ ಮುಂದುವರಿಸಿ ಕೊನೆಗೆ 1920 ರಿಂದ 27 ವರ್ಷಗಳ ಕಾಲ ಪ್ರಾಣಿಶಾಸ್ತ್ರ ಪ್ರಾಧ್ಯಾಪಕನಾಗಿದ್ದು, ಆಮೇಲೆ ಕೊನೆಯ ತನಕ ಇಂಡಿಯಾನಾ ವಿಶ್ವವಿದ್ಯಾಲಯದ ಲೈಂಗಿಕ ಸಂಶೋಧನ ಸಂಸ್ಥೆಯ ನಿರ್ದೇಶಕನಾಗಿದ್ದ.

ಅಧ್ಯಯನ

ಲೈಂಗಿಕ ಜೀವನದ ಪದ್ಧತಿ, ರೂಢಿ, ಸಂಪ್ರದಾಯ, ಒಳಗುಟ್ಟುಗಳನ್ನು ಹೊರಗೆಡಹುವುದರಲ್ಲಿ ಇವನಿಗಿದ್ದ ಕಟ್ಟಾಸಕ್ತಿಯಿಂದ ಆ ಸಂಸ್ಥೆ ಹುಟ್ಟಿತು. ಇವನೂ ಇವನ ಸಹೋದ್ಯೋಗಿಗಳು ಸೇರಿ ನಡೆಸಿದ ಶೋಧನೆಗಳ ಫಲವಾಗಿ ಪ್ರಪಂಚದಲ್ಲಿ ಎಲ್ಲೆಲ್ಲೂ ಗಂಡಸರಲ್ಲಿನ ಲೈಂಗಿಕ ವರ್ತನೆ (1948), ಹೆಂಗಸರಲ್ಲಿನ ಲೈಂಗಿಕ ವರ್ತನೆ(1953) ಎಂಬ ಹೆಸರಾದ ಎರಡು ಪುಸ್ತಕಗಳು ಹೊರಬಂದವು. 18,500 ಜನರನ್ನು ಕಂಡು ಗೋಪ್ಯವಾಗಿ ಸಂಗ್ರಹಿಸಿದ ವಿವರಗಳು ಈ ಪುಸ್ತಕಗಳಲ್ಲಿವೆ. ಗಂಡು ಹೆಣ್ಣುಗಳ ಲೈಂಗಿಕ ವರ್ತನೆಗಳಲ್ಲಿ ಎಷ್ಟೊಂದು ಅಭಾಸ, ಏರುಪೇರು, ವಿಚಿತ್ರಗಳಿವೆ ಎನ್ನುವುದನ್ನು ಈತ ವರದಿಮಾಡಿದ್ದಾನೆ. ಇವನ ಇವೆರಡು ವರದಿಗಳ ಆಧಾರದ ಮೇಲೆ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಇವುಗಳಲ್ಲಿನ ತರ್ಕ, ವಾದ, ರೀತಿ ನೀತಿಗಳನ್ನು ಕಟುವಾಗಿ ಟೀಕಿಸಿದವರೂ ಇದ್ದಾರೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ