ಆರ್ಥರ್ ಸಿಸಿಲ್ ಪಿಗು

ಆರ್ಥರ್ ಸಿಸಿಲ್ ಪಿಗು ಇಂಗ್ಲಿಷ್ ಅರ್ಥಶಾಸ್ತ್ರಜ್ಞರಾಗಿದ್ದರು. ಇವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಶಾಲೆಯ ಶಿಕ್ಷಕ ಮತ್ತು ವಾಸ್ತುಶಿಲ್ಪಿಯಾಗಿದ್ದರು, ಇವರು ಅನೇಕ ಅರ್ಥಶಾಸ್ತ್ರಜ್ಞರಿಗೆ ತರಬೇತಿ ಮತ್ತು ಪ್ರಭಾವ ನೀಡಿದ್ದಾರೆ. ಇವರ ಕೊಡುಗೆ ಅರ್ಥಶಾಸ್ತ್ರದ ವಿವಿಧ ವಿಷಯಗಳಿಗೆ ಸಂಬಂಧಿತವಾಗಿತ್ತು, ಪ್ರಮುಖ್ಯವಾಗಿ ಕಲ್ಯಾಣ ಅರ್ಥಶಾಸ್ತ್ರ. [೧] ಇವರು ಕನ್ಲಿಫ್ಪೆ ಕಮಿಟಿ ಮತ್ತು ೧೯೧೯ ರಾಯಲ್ ಕಮಿಷನ್ ಗೆ ಇವರು ಸೇವೆ ನೀಡಿದ್ದಾರೆ.

ಆರ್ಥರ್ ಸಿಸಿಲ್ ಪಿಗು
ಆರ್ಥರ್ ಸಿಸಿಲ್ ಪಿಗು
ಜನನ(೧೮೭೭-೧೧-೧೮)೧೮ ನವೆಂಬರ್ ೧೮೭೭
ರೈಡ್, ಐಲ್ ಆಫ್ ವೈಟ್
ಮರಣ7 March 1959(1959-03-07) (aged 81)
ಕೇಂಬ್ರಿಡ್ಜ್
ರಾಷ್ಟ್ರೀಯತೆಬ್ರಿಟನ್
ಶಿಕ್ಷಣ ಸಂಸ್ಥೆಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ, ಕಿಂಗ್ಸ್ ಕಾಲೇಜ್
Awards1903 ಆಡಂ ಸ್ಮಿತ್ ಬಹುಮಾನ

ಜನನ ಮತ್ತು ಬಾಲ್ಯ

ಪಿಗು ೧೮ ನವೆಂಬರ್ ೧೮೭೭ ರಂದು ರೈಡ್, ಐಲ್ ಆಫ್ ವೈಟ್ ಎಂಬ ಸ್ಧಳದಲ್ಲಿ ಜನಿಸಿದರು. ಇವರ ತಂದೆ ಕ್ಲಾರೆನ್ಸ್ ಜಾರ್ಜ್ ಸ್ಕಾಟ್ ಪಿಗು ಮತ್ತು ಇವರ ತಾಯಿ ನೊರ ಬಿಡ್ಡೆಲ್ ಫ್ರಾನ್ಸೆಸ್ ಸೊಫಿಯ ಲೀಸ್. [೨] ಇವರಿಗೆ ಹ್ಯಾರೋ ಶಾಲೆಗೆ ವಿದ್ಯಾರ್ಥಿವೇತೆನ ಸಿಕ್ಕಿತು, ಇಲ್ಲಿ ಇವರು ನ್ಯೂಲ್ಯಾಂಡ್ಸ್ ಮನೆಯಲ್ಲಿದ್ದು ಶಾಲೆಯ ಪ್ರಥಮ ಮಾರ್ಡನ್ ಹೆಡ್ ಆದರು. ೧೮೯೬ರಲ್ಲಿ ಕಿಂಗ್ಸ್ ಕಾಲೇಜ್, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಸೇರಿದರು [೩]. ಆದರೆ ಅಲ್ಲಿ ಅವರು ಕಲಿತದ್ದು ಇತಿಹಾಸ. ಒಂದು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅವರು ಕಡ್ಡಾಯವಾಗಿ ಓದಿಕೊಳ್ಳಬೇಕಾಯಿತು. ಹೀಗೆ ಅರ್ಥಶಾಸ್ತ್ರಕ್ಕೆ ಅವರು ಕಾಲಿರಿಸಿದ್ದು ಆಕಸ್ಮಿಕವಾಗಿ; ಆದರೆ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ಮೀಸಲಾಗಿಟ್ಟ ಆಡಂ ಸ್ಮಿತ್ ಬಹುಮಾನವನ್ನು ಅವರು ಕೈಗಾರಿಕಾ ಕ್ರಾಂತಿಯ ಬಗ್ಗೆ ಪ್ರಬಂಧ ಬರೆದು ಗಳಿಸಿಕೊಂಡರು. ೧೯೦೦ ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಯುನಿಯನ್ ಸಮಾಜದ ಅಧ್ಯಕ್ಷರಾದರು. ಇವರು ಆಲ್ಫ್ರೆಡ್ ಮಾರ್ಷಲ್ ಕೆಳೆಗೆ ಅರ್ಥಶಾಸ್ತ್ರ ಓದಿದರು, ೧೯೦೪ರಲ್ಲಿ ಅವರು ಅರ್ಥಶಾಸ್ತ್ರದ ಉಪನ್ಯಾಸಕನಾಗಿ ನೇಮಕಗೊಂಡರು. ೧೯೦೮ರಲ್ಲಿ ಮಾರ್ಷಲ್ ನಿವೃತ್ತಿ ಹೊಂದಿದ ಮೇಲೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕ ಹುದ್ದೆಗೆ ಪಿಗು ನೇಮಕಗೊಂಡರು. ೧೯೪೩ರಲ್ಲಿ ಆ ಹುದ್ದೆಯಿಂದ ನಿವೃತ್ತಿ ಹೊಂದಿದರು.

ಶೈಕ್ಷಣಿಕ ಕೆಲಸ

ಪಿಗು ೧೯೦೧ರಲ್ಲಿ ಎರಡನೇ ವರ್ಷ ವಿಧ್ಯಾರ್ಧಿಗಳಿಗೆ ಮುಂದುವರಿದ ಅರ್ಥಶಾಸ್ತ್ರ ಎಂಬ ವಿಷಯದ ಮೇಲೆ ಭಾಷಣ ನೀಡಲು ತೊಡಗಿದರು. ಇವರು ನೀಡಿದ ಭಾಷಣ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರತಜ್ಞರಿಗೆ ಮೂಲನಾಗಿತ್ತು. [೪] ಇವರು ೧೯೦೨ ಮಾರ್ಚ್ ರಲ್ಲಿ ಎರಡನೀ ಪ್ರಯತ್ನದಲ್ಲಿ ಫೆಲೊ ಆಫ್ ಕಿಂಗ್ಸ್ ಕಾಲೇಜ್ ಆದರು[೫]. ಇವರ ಮುಖ್ಯ ಕೊಡುಗೆ ದ ಎಕೊನಾಮಿಕ್ಸ್ ಆಫ್ ವೆಲ್ಫೆರ್, ೧೯೨೦, ಇದರಲ್ಲಿ ಅವರು ಅಕ್ಸ್ಟೆರ್ನಾಲಿಟಿ(extrenality) ಎಂಬ ಪರಿಕಲ್ಪನೆ ನೀಡಿದರು ಮತ್ತು ಪಿಗೋವಿಯನ್ ತೆರಿಗೆಯನ್ನು ಜಾರಿಗೊಳಿಸುವದರ ಮೂಲಕ ಅಕ್ಸ್ಟೆರ್ನಾಲಿಟಿ(externality) ತೊಂದರೆಗಳನ್ನು ಸರಿಪಡಿಸಬಗುದು ಎಂಬ ಉಪಾಯ ನೀಡಿದರು. [೬]

ಪಿಗುವಿನ ಆರ್ಥಿಕ ಚಿಂತನೆ

ಅರ್ಥಶಾಸ್ತ್ರದ ವ್ಯಾಪ್ತಿ ಹಾಗೂ ಸ್ವರೂಪ : ಅರ್ಥಶಾಸ್ತ್ರವು ಭಾವನಾ ರಹಿತ ಮತ್ತು ಕೇವಲ ವಿಶ್ಲೇಷಣಾತ್ಮಕ ತಟಸ್ಥ ಶಾಸ್ತ್ರವೊ ಅಥವಾ ಅದು ಮಾನವನ ಜೀವನಕ್ಕೆ ಸುಖ ಸಂತೋಷಗಳನ್ನು ಉಂಟುಮಾಡುವ ಶಾಸ್ತ್ರವೊ ಎಂಬುದು ಪಿಗುವಿನ ಕಾಲದಲ್ಲಿ ಬಹು ಬಿರುಸಿನ ಚರ್ಚೆಯ ವಿಷಯವಾಗಿತ್ತು. ಮುಖ್ಯವಾಗಿ ಗಣಿತ ಮತ್ತು ಸಮೀಕರಣಪ್ರಿಯ ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರವು ಮಾರ್ಗದರ್ಶನ ನೀಡುವ ಶಾಸ್ತ್ರವಲ್ಲ; ಒಳಿತು - ಕೆಡುಕುಗಳನ್ನು ಹೇಳುವುದು ಅರ್ಥಶಾಸ್ತ್ರದ್ ಗೊಡವೆಯಲ್ಲ ಅಂದು ವಾದಿಸುಲ್ಲಿದ್ದರು. ಅರ್ಥಶಾಸ್ತ್ರಜ್ಞರು ಪಕ್ಷಪಾತಿಗಳಾಗ ಬಾರದು; ಅವರು ಇದ್ದದ್ದನ್ನು ಇದ್ದಂತೆ ಬಿಡಿಸಿ, ವಿಂಗಡಿಸಿ, ಹೇಳಬೇಕಷ್ಟೆ. ಇದ್ದುದ್ದು ಹಾಗೆಯೇ ಇರಬೇಕು ಅಥವಾ ಅದನ್ನು ಬದಲಾಯಿಸಬೇಕೋ ಎಂಬುದನ್ನು ಅರ್ಥಶಾಸ್ತ್ರಜ್ಞರು ಹೇಳಬಾರದು ಎಂಬುದು ಈ ಚಿಂತಕರ ವಾದವಾಗಿತ್ತು. [೭]ಆದರೆ ಪಿಗು ಈ ವಾದವನ್ನು ಒಪ್ಪುವುದಿಲ್ಲ. ಅರ್ಥಶಾಸ್ತ್ರವು ಮಾನವನ ಜೀವನವನ್ನು ಅಭ್ಯಸಿಸುವ ಸಮಾಜಶಾಸ್ತ್ರವಾಗಿದೆ. ಆದುದರಿಂದ ಅದು ಮಾನವನಿಗೆ ದಾರಿತೋರಿಸಿ, ಅವನ ಬಾಳನ್ನು ಸಂತೋಷದಿಂದ ತುಂಬಿಡುವ ಶಾಸ್ತ್ರವಾಗಬೇಕು. ಅರ್ಥಶಾಸ್ತ್ರವು ಕೇವಲ ಜ್ಞಾನವನ್ನೀಯುವ ಶಾಸ್ತ್ರವಾಗಿರದೆ, ಅದರ ಕಂಪಿನಿಂದ ಮಾನವ ಜೀವನ ಸಮೃದ್ಧವಾಗುವಂತಿರಬೇಕು ಎಂಬುದಾಗಿ ಅಭಿಪ್ರಾಯ ಪಡುತ್ತಾನೆ ಪಿಗು. ಮಾನವ ಪ್ರತಿಕ್ಷಣವೂ ತನ್ನ ಕಲ್ಯಾಣವನ್ನು ವೃದ್ಧಿಸಿಕೊಳ್ಳಲು ಹೆಣಗುತ್ತಿರುತ್ತಾನೆ. ಇದನ್ನುಅಭ್ಯಸಿಸುವ ಶಾಸ್ತ್ರವಾದ ಅರ್ಥಶಾಸ್ತ್ರವು ಹೇಗೆ ತಾನೇ ತಟಸ್ಥವಾಗಿರಲು ಸಾಧ್ಯ ಎಂಬುದಾಗಿ ಪಿಗು ಪ್ರಶ್ನಿಸುತ್ತಾನೆ.
ರಾಷ್ಟ್ರಿಯ ವರಮಾನ ಹಾಗೂ ಅದರ ಹಂಚಿಕೆ - ಕಲ್ಯಾಣ ಅರ್ಥಶಾಸ್ತ್ರ
ಸಂಪತ್ತು ಮತ್ತು ಆರ್ಥಿಕ ಕಲ್ಯಾಣ ಇವುಗಳಿಗೆ ನಿಕಟ ಸಂಬಂಧವಿದೆ ಎನ್ನುತ್ತಾನೆ ಪಿಗು. ಸಂಪತ್ತು ಮಾನವ ಕಲ್ಯಾಣಕ್ಕೆ ಅತ್ಯಗತ್ಯ. ಸಂಪತ್ತು ಸ್ಥಿರ (stock) ಕಲ್ಪನೆಯಾಗಿದೆ. ಆದರೆ ರಾಷ್ಟ್ರೀಯ ವರಮಾನವು ಪ್ರವಾಹದ (flow) ಕಲ್ಪನೆಯಾಗಿದೆ. ಆದುದರಿಂದ ಸಂಪತ್ತಿನ ಬದಲು ರಾಷ್ಟ್ರೀಯ ವರಮಾನದ ಚಿಹ್ನೆಯನ್ನು ಬಳಸುವುದು ಹೆಚ್ಚು ಸಮಂಜಸವಾಗಿದೆ. ಪಿಗೂನ ಪ್ರಕಾರ ರಾಷ್ಟ್ರೀಯ ವರಮಾನವು ಆರ್ಥಿಕ ಕಲ್ಯಾಣವೂ ಹೆಚ್ಚಿನದಾಗಿರಿತ್ತದೆ ಎಂದು ಹೇಳಬಹುದು. ರಾಷ್ಟ್ರೀಯ ವರಮಾನವನ್ನು ಹೆಚ್ಚಿಸಿಕೊಂಡರೆ ಅದರ ಪರಿಣಾಮವಾಗಿ ಆರ್ಥಿಕ ಕಲ್ಯಾಣವು ತನಗೆ ತಾನೇ ವೃದ್ಧಿಸುತ್ತದೆ ಎಂಬುದು ಪಿಗೂನ ಅಭಿಪ್ರಾಯ. ರಾಷ್ಟ್ರೀಯ ವರಮಾನ ವೃದ್ಧಿಯಾಗುವ ಪ್ರಮಾನಣದಲ್ಲಿ ಆರ್ಥಿಕ ಕಲ್ಯಾಣವು ವೃದ್ಧಿಸುವುದೇ? ಹಾಗೆ ಹೇಳಲು ಸಾಧ್ಯವಿಲ್ಲ ಎನ್ನುತ್ತಾನೆ ಪಿಗು. ವೃದ್ಧಿಸಿದ ವರಮಾನವೆಲ್ಲ, ಶ್ರೀಮಂತರೊ ಬೊಕ್ಕಸಗಳನ್ನು ಸೇರಿ ಬಡವ - ಬಲ್ಲಿದರಲ್ಲಿನ ಆರ್ಥಿಕ ಅಂತರ ಹೆಚ್ಚಾದರೆ, ಆರ್ಥಿಕ ಕಲ್ಯಾಣವು ಉತ್ತಮಗೊಳ್ಳುವುದಕ್ಕೆ ಬದಲಾಗಿ ಕಡಿಮೆಯಾಗುತ್ತದೆ ಎಂಬುದಾಗಿ ಹೇಳುತ್ತಾನೆ ಪಿಗು. ಅದಕ್ಕೆ ವಿರುದ್ಧವಾಗಿ, ರಾಷ್ಟ್ರೇಯ ವರಮಾನವು ಹೆಚ್ಚದೆ, ಅದರ ಹಂಚಿಕೆಯಲ್ಲಿ ಮಾರ್ಪಾಟಾದರೆ ಬಡವರಿಗೆ ಹೆಚ್ಚಿನ ಪಾಲು ಮತ್ತು ಶ್ರೀಮಂತರಿಗೆ ಕಡಿಮೆ ಪಾಲು ದೊರೆತರೆ ಆರ್ಥಿಕ ಕಲ್ಯಾಣವು ವೃದ್ಧಿಸುವುದು. ಪಿಗು ಹೇಳುವುದನ್ನು ಗಮನಿಸಿ : "ಶ್ರೀಮಂತರಿಂದ ಕಿತ್ತುಕೊಂಡ ಹಣವನ್ನು ಬಡವರಿಗೆ ಹಂಚಿದರೆ ಶ್ರೀಮಂತರ ವಲಾಸಿ ಬೇಡಿಕೆಗಳು ಬದಲು ಬಡವರ ಜೀವನಾಶ್ಯಕ ಬೇಡಿಕೆಗಳು ತೃಪ್ತವಾಗುವುವು. ಇದು ನಿಸ್ಸಂದೇಹವಾಗಿ ಒಟ್ಟು ಕಲ್ಯಾಣವನ್ನು ಹೆಚ್ಚಿಸುವುದು. ಆದುದರಿಂದ ರಾಷ್ಟ್ರೀಯ ವರಮಾನದ ಪುನರ್ ಹಂಚಿಕೆಯು ಆರ್ಥಿಕ ಕಲ್ಯಾಣವನ್ನು ಹೆಚ್ಚಿಸುತ್ತದೆ." ಪಿಗೂನ ಈ ಹೇಳಿಕೆಯ ಹಿಂದೆ ಮಾರ್ಷಲನ ಸೀಮಾಂತ ತುಷ್ಟಿಗುಣದ ತತ್ವವಿರುದು ಕಂಡುಬರುತ್ತದೆ.ಪಿಗೂನ ಪ್ರಕಾರ ಶ್ರೀಮಂತರಿಂದ ಕಿತ್ತು ಕೊಂಡ ಹಣವನ್ನು ಬಡವರಿಗೆ ಹಂಚಿದರೆ. ಅವರು ಅದರಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳುತ್ತಾರೆ. ಆದರೆ ಶ್ರಿಮಂತರು ತೊಂದರೆಗೀಡಾಗುತ್ತಾರೆ. ಬಡವರಿಗಾದ ಪ್ರಯೋಜನ ಶ್ರೀಮಂತರಿಗಾದ ನಷ್ಟಕ್ಕಿಂತ ಹೆಚ್ಚಾಗಿದ್ದರೆ ರಾಷ್ಟ್ರೀಯ ವರಮಾನದ ಪುನರ್ ಹಂಚಿಕೆಯು ಒಟ್ಟು ಕಲ್ಯಾಣವನ್ನು ವೃದ್ಧಿಸುವುದು. ಶ್ರೀಮಂತರಿಂದ ಹಣವನ್ನು ಕಿತ್ತುಕೊಳ್ಳಲಾಗಿ ಅವರು ತಮ್ಮ ಅನವಶ್ಯಕ ಬಯಕೆಗಳಿಂದ ವಂಚಿತರಾಗುತ್ತಾರೆ. ಆದರೆ ಆ ಹಣವು ಬಡವರಿಗೆ ದೊರೆಯುವುದರಿಂದ ಅದರ ಅತ್ಯವಶ್ಯಕ ಬಯಕೆಗಳಾದ ಹಸಿವು, ವಸತಿ ಮುಂತಾದುಗಳನ್ನು ಈಡೇರಿಸಿಕೊಳ್ಳುವುದು ಸಾಧ್ಯವಾಗುವುದರಿಂದ ಒಟ್ಟು ಆರ್ಥಿಕ ಕಲ್ಯಾಣ ವೃದ್ಧಿಯಾಗುತ್ತದೆ ಎಂಬುದಾಗಿ ಪಿಗು ಅಭಿಪ್ರಾಯಪಡುತ್ತಾನೆ.ರಾಷ್ಟ್ರೀಯ ವರಮಾನದ ಈ ಪುನರ್ ಹಂಚಿಕೆಯು ಕೆಲವು ಪ್ರಶ್ನೆಗಳಿಗೆ ಆಸ್ಪದ ಕೊಡುತ್ತದೆ. ಅವೆಂದರೆ ೧) ಶ್ರಿಮಂತರಿಂದ ಹಣ ಕಿತ್ತುಕೊಂಡರೆ ಅವರ ಉಳಿತಾಯ ಮತ್ತು ಹೂಟೆಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗಿ ಭವಿಷ್ಯದಲ್ಲಿ ರಾಷ್ಟ್ರೀಯ ವರಮಾನವು ಕುಂಠಿತಹೊಳ್ಳುವುದಿಲ್ಲವೆ? ೨) ಶ್ರೀಮಂತರಿಂದ ಹಣವನ್ನು ಬಡವರಿಗೆ ಹಂಚಿದಾಗ, ಬಡವರ ಪರಿಸ್ಥಿತಿಯು ಉತ್ತಮಗೊಂಡು ಅವನ ಸಂತತಿ ಹೆಚ್ಚಾಗುವುದಿಲ್ಲವೆ? ಇವೆರಡೂ ಪ್ರಶ್ನೆಗಳಿಗೆ ಪಿಗು ನಕಾರಾರ್ಥದಲ್ಲಿ ಉತ್ತರಿಸುವರು. ಶ್ರೀಮಂತರಿಂದ ಅವರ ವರಮಾನದಲ್ಲಿನ ಸ್ವಲ್ಪ ಭಾಗವನ್ನು ತೆಗದುಕೊಂಡರೆ ಅವರು ಮಾಡುವ ಉಳಿತಾಯ ಕಡಿಮೆಯಾಗುವುದು ಎಂಬುದು ನಿರಾಧಾರವಾಗಿದೆ. ಶ್ರೀಮಂತರ ವರಮಾನ ಮೇಲೆ ತೆರಿಗೆ ವಿಧಿಸಿ ಅದನ್ನು ಕಿತ್ತುಕೊಂಡರೆ ಅವರು ತಮ್ಮ ವಿಲಾಸಿ ಜೀವನದ ಸರಕುಗಳನ್ನು ಅನುಭೋಗಿಸುವುದನ್ನು ಕೈಬಿಡುವರು ದುಂದುವೆಚ್ಚವನ್ನು ತೊರೆಯುವರು, ಹೆಮ್ಮೆಗಾಗಿ ಮಾಡುವ ಅನವಶ್ಯಕ ಖರ್ಚು ಕಡಿಮೆಯಾಗುವುದು.

ಶೈಕ್ಷಣಿಕ ಹೊರತಾದ ಜೀವನ

ಪಿಗು ವಿಶ್ವ ಯುದ್ಧ ೧ರಲ್ಲಿ ಮಿಲಿಟರಿ ಸೇವೆಯ ಮೂಲಕ ಮಾನವ ಜೀವನಕ್ಕೆ ನಾಶಆಗುವುದನ್ನು ಇವರು ವಿರೋಧಿಸಿದರು ಇದರ ಕಾರಣ ಇವರಿಗೆ ತೊಂದರೆ ಉಂಟಾಯಿತು. ಇವರು ರಜೆ ಸಮಯದಲ್ಲಿ ಫ಼್ಪ್ರೆಂಡ್ಸ್ ಆಂಬುಲೆನ್ಸ್ ಯುನಿಟ್ ಎಂಬ ಸಂಸ್ಧೆಯಲ್ಲಿ ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತಿದ್ದರು. ಯುದ್ಧದ ಕೊನೆಯಲ್ಲಿ ಬೊರ್ಡ್ ಆಫ್ ಟ್ರೆಡ್ ಸಂಸ್ಧೆಯಲ್ಲಿ ಒಂದು ಪದವಿಯನ್ನು ಇಷ್ಟವಿಲ್ಲದೆ ಸ್ವೀಕರಿಸಿದರು.ಇವರಿಗೆ ಪರ್ವತಗಳು ಮತ್ತು ಹತ್ತುವುದು ತುಂಬ ಇಷ್ಟ, ಇವರು ಹತ್ತುವುದನ್ನು ತಮ್ಮ ಅನೇಕ ಸ್ನೇಹಿತರಿಗೆ ಪರಿಚಯಿಸಿದರು. ಇವರಿಗೆ ಹೃದಯ ಸಂಬಂಧಿತ ರೋಗ ಇದ್ದ ಕಾರಣ, ಇವರ ತೀವ್ರತೆಯ ಮೀಲೆ ಪರಿಣಾಮ ಬೀರಿತು. ಪಿಗು ೧೯೪೩ರಲ್ಲಿ ಪ್ರಾಧ್ಯಾಪಕರ ಹುದ್ದೆಯಿಂದ ನಿವೃತ ಹೊಂದಿದರು, ಆದರೆ ಅವರ ನಿದನದ ತನಕ ಫೆಲೊ ಆಫ್ ಕಿಂಗ್ಸ್ ಕಾಲೇಜ್ ವಾಗಿ ಉಳಿದರು. ತಮ್ಮ ಕೊನೆಯ ದಿನಗಳಲ್ಲಿ, ಭಾಷಣ ನೀಡುವದಕ್ಕೆ ಅಥವ ನಡೆಯಲು ಮಾತ್ರ ಕೊಠಡಿಯಿಂದ ಹೊರ ಬರುತ ಇದ್ದರು.

ಪಿಗುವಿನ ಕೆಲವು ಪ್ರಮುಖ ಗ್ರಂಥಗಳು

  • ವೆಲ್ಥ್ ಅಂಡ್ ವೆಲ್ಫೆರ್ (Wealth and Welfare-1912)
  • ಎಕೊನಾಮಿಕ್ಸ್ ಆಫ್ ವೆಲ್ಫೆರ್ (Economics of Welfare-1920)
  • ಎಸೆಸ್ಸ್ ಇನ್ ಅಪ್ಲೈಡ್ ಎಕೊನಾಮಿಕ್ಸ್(Essays in applied economics-1923)
  • ಎ ಸ್ಡಡಿ ಇನ್ ಪಬ್ಲಿಕ್ ಫಿನಾನ್ಸ್(The study in public finance-1928)
  • ಸೊಶ್ಯಲಿಸಮ್ v/s ಕಾಪಿಟಲಿಸಮ್ (Socialism v/s Capitalism-1937)
  • ದಿ ವೆಯಿಲ್ ಆಫ್ ಮನಿ(The veil of money-1950)

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ