ಅಶ್ವ ಸಾಮರ್ಥ್ಯ

ಸಾಮರ್ಥ್ಯವನ್ನು (ಪವರ್) ಅಳೆಯುವ ಏಕಮಾನ (ಹಾರ್ಸ್ ಪವರ್, ಸಂಕೇತ H.P) ಬಲ (ಫೋರ್ಸ್- ಸಂಕೇತ F) ಕಾರ್ಯ ಅಥವಾ ಕೆಲಸ (ವರ್ಕ್-ಸಂಕೇತ W) ಮಾಡುತ್ತದೆ. ಬಲ ಮತ್ತು ಅದರ ಚಲನೆಯ ದಿಕ್ಕಿನಲ್ಲಿ ಬಲಪ್ರಯೋಗಗೊಂಡ ಬಿಂದುವಿನ ಸ್ಥಾನಪಲ್ಲಟ ಇವುಗಳ ಗುಣಲಬ್ಧ ಒಂದು ಬಲ ಮಾಡಿದ ಕೆಲಸ, ಚಿತ್ರದಲ್ಲಿ ಈ ದೂರ . ಆದ್ದರಿಂದ . ಕೆಲಸವನ್ನು (W) ಮಾಡಬಲ್ಲ ಕ್ಷಮತೆಗೆ ಶಕ್ತಿ (ಎನರ್ಜಿ-ಸಂಕೇತ E) ಎಂದು ಕರೆಯುತ್ತಾರೆ. ಕಾಲದಿಂದ ಭಾಗಿಸಿ ದೊರೆಯುವ ಭಾಗಲಬ್ಧ ಆ ಬಲದ ಸಾಮರ್ಥ್ಯ (ಸಂಕೇತ P). ಆದ್ದರಿಂದ P=E/T ಅಥವಾ E=PT. ಕೆಲಸ ನಡೆಯುವ ಕಾಲದರವನ್ನು ಸಾಮರ್ಥ್ಯ ನಿರ್ಧರಿಸುತ್ತದೆ. ಒಂದು ಜೌಲ್ ಕೆಲಸವನ್ನು ಒಂದು ಸೆಕೆಂಡಿನಲ್ಲಿ ಕೆಲಸವ ಮಾಡಬಲ್ಲ ಸಾಮರ್ಥ್ಯ - ಒಂದು ವಾಟ್. 746 ವಾಟ್ಗಳು 1 ಅಶ್ವಸಾಮರ್ಥ್ಯಕ್ಕೆ ಸಮ. ಜೇಮ್ಸ್‌ವಾಟ್ ಬಲಿಷ್ಠಕುದುರೆಗಳ ಸಾಮರ್ಥ್ಯವನ್ನು ಪ್ರಾಯೋಗಿಕವಾಗಿ ಪರಿಶೀಲಿಸಿ 1 ಮಿನಿಟಿಗೆ 33000 ಅಡಿ-ಪೌಂಡ್ ಕೆಲಸ (W ಪೌಂಡ್ ತೂಕವನ್ನು ಊರ್ಧ್ವವಾಗಿ a ಅಡಿ ಮೇಲಕ್ಕೆ ಎತ್ತುವಾಗ ಆಗುವ ಕೆಲಸ aw ಅಡಿ ಪೌಂಡ್) ಅಥವಾ 1 ಸೆಕೆಂಡಿಗೆ 550 ಅಡಿ-ಪೌಂಡ್ ಕೆಲಸ 1 ಅಶ್ವ ಸಾಮರ್ಥ್ಯಕ್ಕೆ ಸಮವೆಂದು ನಿರ್ಧರಿಸಿ ಸಾಮರ್ಥ್ಯದ ಈ ಏಕಮಾನವನ್ನು ಹೆಸರಿಸಿದ. 154 ಪೌಂಡ್ ಭಾರದ ಒಬ್ಬ ಮನುಷ್ಯ 50 ಅಡಿ ಎತ್ತರದ ಮಹಡಿಯನ್ನು 14 ಸೆಕೆಂಡುಗಳಲ್ಲಿ ಏರಿದರೆ ಅವನ ಅಶ್ವಸಾಮರ್ಥ್ಯ = 1 h p. ವಿದ್ಯುಚ್ಛಕ್ತಿಯ ಮಾನದಲ್ಲಿ 746 ವಾಟ್ಗಳೂ ಉಷ್ಣಶಕ್ತಿಯ ಮಾನದಲ್ಲಿ 2545 ಬಿ. ಟಿ. ಯು. ಗಳೂ (ಬ್ರಿಟಿಷ್ ಥರ್ಮಲ್ ಯೂನಿಟ್) 1 ಅಶ್ವ ಸಾಮರ್ಥ್ಯಕ್ಕೆ ಸಮಾನ. ಮೆಟ್ರಿಕ್ ವ್ಯವಸ್ಥೆಯಲ್ಲಿ ಮಿನಿಟಿಗೆ 4500 ಕಿ.ಗ್ರಾಂ-ಮೀಟರ್ 1 ಅಶ್ವಸಾಮರ್ಥ್ಯ ಎಂದು ವ್ಯಾಖ್ಯಿಸಲಾಗಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ