ಅಶ್ವಿನಿ ಪೊನ್ನಪ್ಪ

ಅಶ್ವಿನಿ ಪೊನ್ನಪ್ಪ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ಮೂಲದ ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರ್ತಿ [೧][೨][೩]. ಎಂ.ಎ.ಪೊನ್ನಪ್ಪ ಮತ್ತು ಕಾವೇರಿ ಪೊನ್ನಪ್ಪ ದಂಪತಿಗಳ ಮಗಳಾಗಿ ಈಕೆ ಹುಟ್ಟಿದ್ದು ಬೆಂಗಳೂರು ನಗರದಲ್ಲಿ (ಸೆಪ್ಟೆಂಬರ್ ೧೮ ರ ೧೯೮೯ ನೆಯ ಇಸವಿ) . ತಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ವ್ಯವಸ್ಥಾಪಕರಾಗಿ ಮತ್ತು ತಾಯಿ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ಈಕೆಗೆ ಒಬ್ಬ ತಮ್ಮನೂ ಇದ್ದಾನೆ.[೪]

ಅಶ್ವಿನಿ ಪೊನ್ನಪ್ಪ
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುಅಶ್ವಿನಿ ಪೊನ್ನಪ್ಪ
ಹುಟ್ಟು (1989-09-18) ೧೮ ಸೆಪ್ಟೆಂಬರ್ ೧೯೮೯ (ವಯಸ್ಸು ೩೪)
ಬೆಂಗಳೂರು, ಕರ್ನಾಟಕ
ವಾಸಸ್ಥಾನಬೆಂಗಳೂರು, ಹೈದರಾಬಾದ್,ಭಾರತ
ಎತ್ತರ5 ft 5 in (1.65 m)
ದೇಶಭಾರತ
ಆಡುವ ಕೈಬಲಗೈ
ಮಹಿಳೆಯರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ೧೩ (೨೫ ಜೂನ್ ೨೦೧೦)
ಸದ್ಯದ ಸ್ಥಾನ೨೯ (೦೨ ಜೂಲೈ ೨೦೧೫)
BWF profile

ವೃತ್ತಿ ಪೂರ್ವ ಜೀವನ

ಅಶ್ವಿನಿಯ ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿಯೇ ನೆಡೆಯಿತು. ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಗರ್ಲ್ಸ್ ಹೈ ಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ತಂದೆಯ ಕೆಲಸದ ನಿಮಿತ್ತ ಸಂಸಾರವು ಹೈದರಾಬಾದ್ ನಗರಕ್ಕೆ ಸ್ಥಳಾಂತರವಾಯಿತು. ಹೈದರಾಬಾದಿನಲ್ಲೇ ಅಶ್ವಿನಿಯು ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಸದ್ಯ ಈಕೆ ಪ್ರತಿಷ್ಠಿತ ಓ.ಎನ್.ಜಿ.ಸಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲೇ ಬ್ಯಾಡ್ಮಿಂಟನ್ ಕಡೆಗೆ ಆಸಕ್ತಿ ಬೆಳಸಿಕೊಂಡ ಇವರು ೨೦೦೧ ನೆಯ ಇಸವಿಯಿಂದ ಅಧಿಕೃತವಾಗಿ ಸ್ಪರ್ಧೆಯಲ್ಲಿ ತೊಡಗಿಕೊಂಡರು.[೫]

ತರಬೇತಿ

ದೀಪಾಂಕರ್ ಭಟ್ಟಾಚಾರ್ಯ ಅವರು ಅಶ್ವಿನಿಯ ಮುಖ್ಯ ತರಬೇತುದಾರರು. ಇವರ ಮಾರ್ಗದರ್ಶನದಲ್ಲಿ ಅಶ್ವಿನಿಯು ವೃತ್ತಿ ಜೀವನದಲ್ಲಿ ಉತ್ತಮವೆನಿಸಿದ ೧೯ ಅಕ್ಟೋಬರ್ ೧೫, ೨೦೧೦) ನೆಯ ಕ್ರಮಾಂಕವನ್ನು ತಲುಪಿದರು. ಇದಕ್ಕೆ ಬೆನ್ನೆಲುಬಾಗಿ ನಿಂತವರು ಈಕೆಯ ಡಬಲ್ಸ್ ಜೋಡಿ ಜ್ವಾಲಾ ಗುಟ್ಟ ಅವರು. ಕೆಲವು ಕಾಲ ಈಕೆ ಎಡ್ವಿನ್ ಇರೈವನ್ ಮತ್ತು ಎಸ್.ಎಂ. ಆರೀಫ್ ಅವರುಗಳಿಂದಲೂ ಮಾರ್ಗದರ್ಶನ/ತರಬೇತಿಯನ್ನು ಪಡೆದುಕೊಂಡರು.[೬]

ಕ್ರೀಡಾ ವೃತ್ತಿ ಜೀವನ

ಅಶ್ವಿನಿ ಪೊನ್ನಪ್ಪ

2001 ರಲ್ಲಿ ಅಶ್ವಿನಿ ಪೊನ್ನಪ್ಪ ಭಾರತೀಯ ಜೂನಿಯರ್ ಚಾಂಪಿಯನ್ಶಿಪ್ ವಿಜೇತರಾದರು . 2006 ರಲ್ಲಿ ನಡೆದ ದಕ್ಷಿಣ ಏಷ್ಯನ್ ಕ್ರೀಡಾಕೂಟ ದಲ್ಲಿ ಚಿನ್ನದ ಪದಕವನ್ನು ಗೆದ್ದರು. 2010 ರ ಕಾಮನ್ವೆಲ್ತ್ ಕ್ರೀಡಾಕೂಟ ದಲ್ಲಿ ಅವರು ಜ್ವಾಲಾ ಗುಟ್ಟ ಜೊತೆಗೂಡಿ ಮಹಿಳೆಯರ ಡಬಲ್ಸ್ ನಲ್ಲಿ ಚಿನ್ನದ ಪದಕ ಗೆದ್ದರು[೭]. ಲಂಡನ್ ಒಲಿಂಪಿಕ್ಸ್ನಲ್ಲಿ ಜ್ವಾಲಾ ಗುಟ್ಟ ಜೊತೆಗೂಡಿ ಆರಂಭಿಕ ಮ್ಯಾಚ್ ಅನ್ನು ಜಪಾನೀ ಜೋಡಿ Reika Kakiiwa ಮತ್ತು ಮಿಝುಕಿಯ ಫುಜಿ ವಿರುದ್ಧ ಆಡಿ ಸೋತರು. ಆದರೆ ಮುಂದಿನ ಪಂದ್ಯದಲ್ಲಿ ಮೂರು ಸೆಟ್ಗಳಲ್ಲಿ ಚೈನಾ ತೈಪೆಯ ಜೋಡಿ ಚೆಂಗ್ ಮತ್ತು ಚೈನ್ ಆಫ್ ವಿರುದ್ಧ 25-23, 14-21, 21-18 ರಲ್ಲಿ ಗೆಲುವು ಸಾಧಿಸಿದರು[೮]. ಮುಂದಿನ ಪಂದ್ಯಗಳಲ್ಲಿ ಗಮನಾರ್ಹ ಸಾಧನೆ ತೋರಿದರೂ ಸಹ ಪದಕ ಗೆಲ್ಲುವಲ್ಲಿ ವಿಫಲರಾದರು. ೨೦೧೧ ರಲ್ಲಿ ನೆಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕವನ್ನು ಗೆದ್ದು ಸಾಧನೆಗೈದರು. ೨೦೧೫ರ ಜೂನ್ ೨೯ರಂದು ಕೆನಡಾ ಓಪನ್ ಮಹಿಳೆಯರ ಡಬಲ್ಸ್ ಟೂರ್ನಿಯನ್ನು ಡಚ್​ ಜೋಡಿಗಳಾದ ಈಫ್ಜೆ ಮಸ್ಕೇನ್ಸ್​ ಮತ್ತು ಸಲೇನಾ ಪಿಕ್​ರನ್ನು 21-19 21-16 ಗೇಮ್‘​ಗಳಿಂದ ಮಣಿಸುವ ಮೂಲಕ ಗೆದ್ದು ಕೊಂಡರು.[೯]

  • ರಿಯೊ ಒಲಿಂಪಿಕ್ಸ್‌: ಬ್ಯಾಡ್ಮಿಂಟನ್‌ನ ಡಬಲ್ಸ್‌ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಕರ್ನಾಟಕದ ಅಶ್ವಿನಿ ಪೊನ್ನಪ್ಪ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಫೋಟೋ+ :[[೧]]

ಆಯ್ದ ಎದುರಾಳಿಗಳು ವಿರುದ್ಧದ ದಾಖಲೆಗಳು

ಜ್ವಾಲಾ ಗುಟ್ಟ ಜೊತೆಗೂಡಿ ಸೂಪರ್ ಸೀರೀಸ್ ಫೈನಲ್, ವಿಶ್ವ ಚಾಂಪಿಯನ್ ಶಿಪ್ ಫೈನಲ್, ಮತ್ತು ಒಲಿಂಪಿಕ್ ಕ್ವಾರ್ಟರ್ ಫೈನಲ್ ತಲುಪಿದವರ ವಿರುಧ್ಧ ಆಡಿದ ಪಂದ್ಯಗಳ ಫಲಿತಾಂಶಗಳು.[೧೦]ಎದುರಾಳಿ ದೇಶ------ಎದುರಾಳಿ ತಂಡ------ಗೆಲುವಿನ ಅಂತರ

  • ಚೀನಾ----Du Jing & Yu Yang---- 0–1
  • ಚೀನಾ----Tang Jinhua & Xia Huan---- 0–1
  • ಚೀನಾ----Ma Jin & Wang Xiaoli ----0–2
  • ಚೀನಾ---- Tian Qing & Zhao Yunlei ----0–5
  • ಚೀನಾ---- Wang Xiaoli & Yu Yang---- 0–2
  • ಚೀನಾ---- Yang Wei & Zhang Jiewen---- 0–1
  • ತೈಪೆ---- Cheng Wen-hsing & Chien Yu-chin---- 2–2
  • ಡೆನ್ಮಾರ್ಕ್---- Christinna Pedersen & Kamilla Rytter Juhl ----0–2
  • ಹಾಂಕಾಂಗ್----Poon Lok Yan & Tse Ying Suet -----1–1
  • ಇಂಡೋನೇಷ್ಯಾ---- Vita Marissa & Nadya Melati---- 1–0
  • ಜಪಾನ್---- Mizuki Fujii & Reika Kakiiwa ----1–3
  • ಜಪಾನ್---- Miyuki Maeda & Satoko Suetsuna ----1–4
  • ಜಪಾನ್---- Shizuka Matsuo & Mami Naito---- 0–2
  • ಕೊರಿಯಾ---- Ha Jung-eun & Kim Min-jung---- 0–3
  • ಕೊರಿಯಾ---- Lee Hyo-jung & Kim Min-jung---- 0–1
  • ಕೊರಿಯಾ---- Jung Kyung-eun & Kim Ha-na---- 1–1
  • ಮಲೇಷ್ಯಾ---- Chin Eei Hui & Wong Pei Tty---- 0–4
  • ಸಿಂಗಾಪುರ---- Shinta Mulia Sari & Lei Yao ----1–3
  • ಥಾಯಿಲ್ಯಾಂಡ್---- Duanganong Aroonkesorn & Kunchala Voravichitchaikul---- 1–0

ಉಲ್ಲೇಖನಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ