ಅಲೆಕ್ಸಿಸ್ ಕರೆಲ್

ಫ಼್ರೆಂಚ್ ಶಸ್ತ್ರಚಿಕಿತ್ಸಕ ಮತ್ತು ಜೀವಶಾಸ್ತ್ರಜ್ಞ

ಫ್ರಾನ್ಸಿನ ಶಸ್ತ್ರಚಿಕಿತ್ಸಾತಜ್ಞ ಮತ್ತು ಜೀವವಿಜ್ಞಾನಿಯಾಗಿದ್ದ ಅಲೆಕ್ಸಿಸ್ ಕರೆಲ್‌ರವರು ೧೮೭೩ಯ ಜೂನ್ ೨೮ರಂದು ಫ್ರಾನ್ಸಿನ ರ‍್ಹೋನ್‌ನಲ್ಲಿ ಜನಿಸಿದರು. ಕರೆಲ್‌ರವರು ೧೯೦೫ರಲ್ಲಿ ಅಮೇರಿಕಕ್ಕೆ ಹೋದರು ಮತ್ತು ೧೯೩೯ರವರೆವಿಗೂ ಅಲ್ಲೇ ನೆಲೆಸಿದ್ದರು. ಆ ಅವಧಿಯಲ್ಲಿ ಅವರು ನ್ಯೂಯಾರ್ಕಿನಲ್ಲಿರುವ ರಾಕ್‌ಫೆಲ್ಲರ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ (ಈಗ ಅದು ರಾಕ್‌ಫೆಲ್ಲರ್ ವಿಶ್ವವಿದ್ಯಾಲಯವಾಗಿದೆ) ಕೆಲಸ ಮಾಡಿದರು. ಆ ಅವಧಿಯಲ್ಲಿ ಅವರು ರಕ್ತನಾಳಗಳನ್ನು ಹೊಲೆಯುವ ವಿಧಾನವನ್ನು (೧೯೦೨ರಲ್ಲಿ) ಕಂಡುಹಿಡಿದರು. ಅದಕ್ಕೆ ಈಗ ’ನಾಳೀಯ ಶಸ್ತ್ರಚಿಕಿತ್ಸೆ’ (vascular surgery) ಎಂಬುದಾಗಿ ಕರೆಯಲಾಗಿದೆ. ಆ ವಿಧಾನದ ಸಂಶೋಧನೆಗೆ ಅವರಿಗೆ ೧೯೧೨ರ ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೧]೧೯೩೦ರಲ್ಲಿ ಕರೆಲ್‌ರವರು ಅಮೇರಿಕದ ವಾಯುಯಾನತಜ್ಞರಾಗಿದ್ದ ಚಾರ್ಲ್ಸ್ ಲಿಂಡ್‌ಬರ್ಗ್‌ರವರ ಜೊತೆ ಸೇರಿ ದೇಹದ ಅವಯವಗಳಿಗೆ ಪ್ರಮುಖವಾದ ದ್ರವಗಳನ್ನು ಹರಿಸಲು ಅನುಕೂಲವಾದ ’ಯಾಂತ್ರಿಕ ಹೃದಯ’ವನ್ನು (mechanical heart) ಸಂಶೋಧಿಸಿದರು. ಅನೇಕ ಪ್ರಾಣಿಗಳ ಊತಕಗಳನ್ನು ಮತ್ತು ಅವಯವಗಳನ್ನು ಅನೇಕ ವರುಷಗಳ ಕಾಲ ಸುಸ್ಥಿತಿಯಲ್ಲಿಡಲು ಇಂತಹ ಸಂಶೋಧನೆಯಿಂದ ಸಾಧ್ಯವಾಯಿತು. ೧೯೩೯ರಲ್ಲಿ ಕರೆಲ್‌ರವರು ಫ್ರಾನ್ಸಿಗೆ ವಾಪಸ್ಸಾದರು. ಕರೆಲ್‌ರವರು ೧೯೪೪ರ ನವೆಂಬರ್ ೫ರಂದು ನಿಧನರಾದರು.

ಅಲೆಕ್ಸಿಸ್ ಕರೆಲ್
ಅಲೆಕ್ಸಿಸ್ ಕರೆಲ್
ಜನನ
ಅಲೆಕ್ಸಿಸ್ ಕರೆಲ್

೨೮ ಜೂನ್ ೧೮೭೩
ಫ್ರಾನ್ಸ್
ರಾಷ್ಟ್ರೀಯತೆಫ್ರಾನ್ಸ್

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ