ಅಲಘನಿ ಪರ್ವತಗಳು



ಈ ಪರ್ವತವು ಉತ್ತರ ಅಮೇರಿಕ ಖಂಡದ 'ಉನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ' ದೇಶದಲ್ಲಿದೆ.ಪೆನ್ಸಿಲ್ವೇನಿಯ, ವರ್ಜಿನಿಯ ಸಂಸ್ಥಾನಗಳಲ್ಲಿ ಮತ್ತು ನ್ಯೂಯಾರ್ಕ್ ಸಂಸ್ಥಾನದ ಕೆಲವು ಭಾಗಗಳಲ್ಲಿ ಹಬ್ಬಿವೆ. ಹಡ್ಸನ್ ನದಿಯ ದಕ್ಷಿಣ ಮತ್ತು ಪಶ್ಚಿಮಕ್ಕೆ ಬರುತ್ತವೆ. ಸರಾಸರಿ ಎತ್ತರ 1460 ಮೀ. ಪ್ರಮುಖವಾಗಿ ಅಪಲೇಷಿಯನ್ ಪರ್ವತಗಳ ಭಾಗ. ಹಿಮಯುಗದಲ್ಲಿ ಹಿಮಭರಿತವಾಗಿದ್ದುವು. ಹಿಮನದಿಗಳ ಪ್ರವಾಹ ತಂದ ಮೆಕ್ಕಲು ಮಣ್ಣಿನಿಂದಾಗಿ ಅನೇಕ ಆಳವಾದ ಕಣಿವೆಗಳು ಫಲವತ್ತಾಗಿವೆ. ಪ್ರಸ್ಥಭೂಮಿ ಪ್ರದೇಶ ಬಹು ಒರಟಾಗಿದೆ. ಆದ್ದರಿಂದ ಈ ಭಾಗದಲ್ಲಿನ ಅಲಘನಿ ಮುಂತಾದ ಅನೇಕ ನದೀಪಾತ್ರಗಳಲ್ಲಿ ಹಲವು ಜಲಪಾತಗಳಿವೆ. ಪ್ರಸ್ಥಭೂಮಿಯ ಅನೇಕ ಕಡೆಗಳಲ್ಲಿ ವ್ಯವಸಾಯಕ್ಕೆ ಅನುಕೂಲವಾಗಿದೆ. ತರಕಾರಿಗಳನ್ನು ಬೆಳೆಯುವುದು ಇಲ್ಲಿನ ಅತಿ ಮುಖ್ಯ, ಲಾಭದಾಯಕ ಉದ್ಯಮ.

ಈ ಪರ್ವತಗಳ ಅತ್ಯಂತ ಎತ್ತರದ ಬಿಂದುವಿನಿಂದ ನೋಟ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ