ಅರಮೀನು
ಅರಮೀನು | |
---|---|
Planehead filefish, Stephanolepis hispidus | |
Scientific classification | |
ಸಾಮ್ರಾಜ್ಯ: | Animalia |
ವಿಭಾಗ: | Chordata |
ವರ್ಗ: | Actinopterygii |
ಗಣ: | Tetraodontiformes |
ಕುಟುಂಬ: | Monacanthidae Nardo, 1842 |
Genera | |
See text |
ಅರಮೀನು : ಬ್ಯಾಲಿಸ್ಟಿಡೀ ಕುಟುಂಬಕ್ಕೆ ಸೇರಿರುವ ಮಾನೊಕಾಂತಸ್ ಜಾತಿಯಮೀನುಗಳಿಗಿರುವ ಸಾಮಾನ್ಯ ಹೆಸರು (ಫೈಲ್ ಫಿಷ್)[೧]. ಇದೇ ಕುಟುಂಬದ ಬಾಲಿಸ್ಟಸ್ಜಾತಿಯ ಮೀನುಗಳಿಗೆ ಟ್ರಿಗರ್ ಮೀನುಗಳು ಎಂದು ಕರೆಯಲಾಗುತ್ತದೆ.
ಉಷ್ಣ ಮತ್ತುಉಪೋಷ್ಣ ಸಮುದ್ರಗಳಲ್ಲಿ ಅಂದರೆ ಅಟ್ಲಾಂಟಿಕ್, ಪೆಸಿಫಿಕ್, ಹಿಂದೂ ಮಹಾಸಾಗರದಉಷ್ಣವಲಯದ ಭಾಗಗಳಲ್ಲಿ ವಾಸಿಸುತ್ತವೆ.
ಸಾಮಾನ್ಯವಾಗಿ 60 ಸೆಂಮೀ ಉದ್ದ ಬೆಳೆಯುತ್ತವೆ. ಬಣ್ಣ ಹಳದಿ, ಕೆಂಪು ನೀಲಿ.ಬ್ಯಾಲಿಸ್ಟಿಡೀ ಕುಟುಂಬದ ಮೀನುಗಳಲ್ಲಿ ಬೆನ್ನುರೆಕ್ಕೆಯ ಮೊದಲನೆಯ ಮುಳ್ಳುಸೆಟೆದು ನಿಲ್ಲಲು ಹಿಂದಿರುವ ಸಣ್ಣ ಮುಳ್ಳು ನೆರವಾಗುತ್ತದೆ (ಬಂದೂಕಿನ ಒತ್ತು ಗುಂಡಿಯಂತೆ).ಅದಕ್ಕಾಗಿಯೇ ಈ ಮೀನುಗಳಿಗೆ ಟ್ರಿಗರ್ ಮೀನುಗಳು ಎಂದು ಹೆಸರು. ಅರಮೀನುಗಳಲ್ಲಿಎರಡನೆಯ ಸಣ್ಣ ಮುಳ್ಳು ದೇಹದಲ್ಲಿ ಹುದುಗಿಹೋಗಿರಬಹುದು.
ಇವು ಸಾಮಾನ್ಯವಾಗಿತೀರಕ್ಕೆ ಸಮೀಪದಲ್ಲಿ ಮಣ್ಣು ಅಥವಾ ಮರಳಿನಿಂದ ಕೂಡಿದ ತಳಗಳಲ್ಲಿ ಹವಳ, ಸ್ಪಾಂಜ್ಮತ್ತು ಪಾಚಿಗಳ ಸಮೀಪದಲ್ಲಿ ವಾಸಿಸುತ್ತದೆ.
ಇವೆರಡಕ್ಕೂ ಚೂಪಾದ, ಬಲವಾದ ಬಾಚಿಹಲ್ಲುಗಳಿವೆ. ಇವುಗಳಿಂದ ಹವಳದಚೂರುಗಳನ್ನು ಕಡಿದು ತಿನ್ನಲು, ಮೃದಂಗಿಗಳ ಚಿಪ್ಪನ್ನು ಒಡೆದು ಒಳಗಿನ ಮಾಂಸವನ್ನುತಿನ್ನಲು ಸಾಧ್ಯವಾಗಿದೆ. ಈ ಕಾರಣದಿಂದ ಮುತ್ತಿನ ಮತ್ತು ಮುತ್ತಿನ ಚಿಪುಗಳ ವ್ಯವಸಾಯಕ್ಕೆಈ ಮೀನುಗಳಿಂದ ಹೆಚ್ಚು ನಷ್ಟ. ಈ ಗುಂಪಿನ ಕೆಲವು ಮೀನುಗಳ ಮಾಂಸ ವಿಷಪೂರಿತವಾದದ್ದು.