ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಸ್ಥಳೀಯ (ಮೂಲನಿವಾಸಿ) ಅಮೆರಿಕನ್ನರು

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಸ್ಥಳೀಯ ಅಮೆರಿಕನ್ನರು , ಇಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಭೂಖಂಡದಲ್ಲಿರುವ ಅಲಾಸ್ಕಾದ ಕೆಲ ಭಾಗಗಳು, ಹಾಗು ಹವಾಯಿ ದ್ವೀಪದ, ಉತ್ತರ ಅಮೆರಿಕಾದಲ್ಲಿರುವ ಸ್ಥಳೀಯ ನಿವಾಸಿಗಳಾಗಿದ್ದಾರೆ. ಅವರು ಅನೇಕ ವಿಭಿನ್ನ ಬುಡಕಟ್ಟು ಜನಾಂಗಗಳು, ರಾಜ್ಯಗಳು ಮತ್ತು ಜನಾಂಗೀಯ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಇವುಗಳಲ್ಲಿ ಹಲವು ಸಂಪೂರ್ಣವಾಗಿ ರಾಜಕೀಯ ಸಮುದಾಯಗಳಾಗಿ ಅಸ್ತಿತ್ವದಲ್ಲಿವೆ. ಸ್ಥಳೀಯ ಅಮೆರಿಕನ್ನರನ್ನು ಸೂಚಿಸಲು ಬಳಸುವ ಪದಗಳು ವಿವಾದಾಸ್ಪದವಾಗಿವೆ;ಈ 1995ರ US ಜನಗಣತಿ ವಿಭಾಗದ ಮನೆ ಮನೆಗಳ ಸಂದರ್ಶನಗಳಲ್ಲಿ , ಪ್ರತಿಕ್ರಿಯಿಸಿದ ಬಹುಪಾಲು ಜನರು ತಮ್ಮನ್ನು ಅಮೆರಿಕನ್ ಇಂಡಿಯನ್ ಅಥವಾ ಇಂಡಿಯನ್ನ ರೆಂದು ಗುರುತಿಸಿಕೊಳ್ಳಲು ಬಯಸುತ್ತಾರೆ.ಕೊನೆಯ 500 ವರ್ಷಗಳಲ್ಲಿ, ಅಮೆರಿಕಕ್ಕೆ ವಲಸೆ ಬಂದ ಆಫ್ರೊ-ಯುರೇಷಿಯನ್ನರು, ಹಳೆಯ ಮತ್ತು ಹೊಸ ಜಗತ್ತಿನ ಸಮುದಾಯಗಳ ನಡುವೆ ಶತಮಾನಗಳ ಹೋರಾಟ ಮತ್ತು ಹೊಂದಾಣಿಕೆಯನ್ನು ಮಾಡಿಕೊಂಡರು. ಸ್ಥಳೀಯ ಅಮೆರಿಕನ್ನರ ಬಗ್ಗೆ ಇರುವ ಬಹುಪಾಲು ಐತಿಹಾಸಿಕ ದಾಖಲೆಗಳು, ಅಮೆರಿಕಕ್ಕೆ ಯುರೋಪಿಯನ್ನರು ವಲಸೆ ಬಂದ ನಂತರ ರೂಪಿಸಿರುವ ದಾಖಲೆಗಳಾಗಿವೆ.[೩] ಅನೇಕ ಸ್ಥಳೀಯ ಅಮೆರಿಕನ್ನರು ಬೇಟೆಗಾರ-ಸಂಗ್ರಹಗಾರ ಸಮುದಾಯಗಳಂತೆ ಬದುಕಿದ್ದರು. ಆದರೂ ಕೂಡ ಅನೇಕ ಗುಂಪುಗಳಲ್ಲಿ ಮಹಿಳೆ ವಿಭಿನ್ನ ಉತ್ಪನ್ನಗಳ ಮೇಲೆ ಸುಸಂಸ್ಕೃತ ಕೃಷಿ ಮಾಡಿದ್ದಾಳೆ: ಮುಸುಕಿನ ಜೋಳ, ಬೀನ್ಸ್ ಮತ್ತು ಕುಂಬಳಕಾಯಿ ಜಾತಿಯ ತರಕಾರಿ ಇತ್ಯಾದಿ ಇದರಲ್ಲಿ ಸೇರಿವೆ. ಇವರ ಸಂಸ್ಕೃತಿಗಳು ಪಶ್ಚಿಮ ಯುರೇಷಿಯದ ಮೂಲ-ಕೈಗಾರಿಕಾ ವಲಸಿಗರು ಮತ್ತು ಕೃಷಿಕರಿಗಿಂತ ಭಿನ್ನವಾಗಿವೆ. ದೀರ್ಘಸ್ಥಾಪಿತ ಸ್ಥಳೀಯ ಅಮೆರಿಕನ್ನರು ಮತ್ತು ವಲಸೆ ಬಂದ ಯುರೋಪಿಯನ್ನರ ನಡುವಿನ ಸಾಂಸ್ಕೃತಿಕ ಭಿನ್ನತೆಗಳು, ಹಾಗು ಪ್ರತಿ ಸಂಸ್ಕೃತಿಯ ವಿಭಿನ್ನ ರಾಷ್ಟ್ರಗಳಲ್ಲಿ ಉಂಟಾಗುವ ಬದಲಾವಣೆಗಳು, ರಾಜಕೀಯ ಬಿಕ್ಕಟ್ಟು ಮತ್ತು ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾದವು. ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ನಿಯೋಜಿಸುವ ಪೂರ್ವ-ಕೊಲಂಬಿಯನ್ ಜನಸಂಖ್ಯೆ ಗಮನಾರ್ಹವಾಗಿ 1 ಮಿಲಿಯನ್ ನಿಂದ 18 ಮಿಲಿಯನ್ ವರೆಗಿತ್ತೆಂದು ಅಂದಾಜು ಮಾಡಲಾಗಿದೆ.[೪][೫]ವಸಾಹತುಗಳು ಗ್ರೇಟ್ ಬ್ರಿಟನ್ ನ ಮೇಲೆ ದಂಗೆಯೆದ್ದ ನಂತರ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ಸ್ಥಾಪಿಸಿದ ನಂತರ, ರಾಷ್ಟ್ರಾಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಮತ್ತು ಹೆನ್ರಿ ನಾಕ್ಸ್, ಅಮೆರಿಕಾ ಸಂಯುಕ್ತ ಸಂಸ್ಥಾನದ ಪೌರತ್ವ ಪಡೆಯಲು ಸಿದ್ಧರಾಗಲೆಂದು, ಸ್ಥಳೀಯ ಅಮೆರಿಕನ್ನರನ್ನು "ನಾಗರಿಕಗೊಳಿಸುವ" ಆಲೋಚನೆಯನ್ನು ಪ್ರಕಟಪಡಿಸಿದರು.[೬][೭][೮][೯][೧೦] ಹೊಂದಾಣಿಕೆಯು (ಚಾಕ್ಟವ್ ನೊಂದಿಗೆ ಸ್ವಇಚ್ಛೆಯಿಂದ,[೧೧][೧೨] ಅಥವಾ ಬಲವಂತವಾಗಿ) ಅಮೆರಿಕದ ಆಡಳಿತಗಳ ಮೂಲಕ ಹೊಂದಿಕೊಳ್ಳುವ ನೀತಿಯಾಯಿತು. ಆಗಿನ 19ನೇ ಶತಮಾನದ ಸಂದರ್ಭದಲ್ಲಿ, ಮ್ಯಾನಿಫೆಸ್ಟ್ ಡೆಸ್ಟಿನಿ ನಂಬಿಕೆಯು ಅಮೆರಿಕನ್ ರಾಷ್ಟ್ರೀಯತವಾದಿ ಚಳವಳಿಗೆ ಮುಖ್ಯವಾಯಿತು. ಅಮೆರಿಕನ್ ಕ್ರಾಂತಿಯ ನಂತರ ಯುರೋಪಿಯನ್‌-ಅಮೆರಿಕನ್‌ ಜನಸಂಖ್ಯೆಯ ವಿಸ್ತರಣೆಯಿಂದಾಗಿ, ಸ್ಥಳೀಯ ಅಮೆರಿಕನ್ ಭೂಮಿಯ ಮೇಲೆ ಒತ್ತಡ, ಗುಂಪುಗಳ ನಡುವೆ ಸಮರ ಮತ್ತು ಬಿಕ್ಕಟ್ಟುಗಳು ಹೆಚ್ಚಿದವು. ಆಗ 1830ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನ ಕಾಂಗ್ರೆಸ್ ಇಂಡಿಯನ್‌ ರಿಮೂವಲ್ ಆಕ್ಟ್ (ಇಂಡಿಯನ್ ಸ್ಥಳಾಂತರ ಕಾಯ್ದೆ)ಅನ್ನು ಹೊರಡಿಸಿತು. ಈ ಕಾನೂನು ಸರ್ಕಾರಕ್ಕೆ, ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ ಯುರೋಪಿಯನ್‌-ಅಮೆರಿಕನ್‌ ವಿಸ್ತರಣೆಯನ್ನು ಮಾಡಲು, ಮಿಸಿಸಿಪ್ಪಿ ನದಿಯ ಪೂರ್ವದ ಡೀಪ್ ಸೌತ್ ನ ಸ್ಥಳೀಯ ಅಮೆರಿಕನ್ನರನ್ನು ಅವರ ತಾಯ್ನಾಡಿನಿಂದ ಬೇರೆಡೆಗೆ ಸಾಗಿಸುವ ಹಕ್ಕನ್ನು ನೀಡಿತ್ತು. ಸರ್ಕಾರಿ ಅಧಿಕಾರಿಗಳು, ಗುಂಪುಗಳ ನಡುವಿನ ಕದನ ಕಡಿಮೆ ಮಾಡುವ ಮೂಲಕ ಉಳಿದಿರುವ ಇಂಡಿಯನ್ನರಿಗೂ ಸಹಾಯ ಮಾಡಬಹುದೆಂದು ಭಾವಿಸಿದರು. ಉಳಿದ ಗುಂಪುಗಳು ದಕ್ಷಿಣದುದ್ದಕ್ಕೂ ಬದುಕುತ್ತಿರುವ ಸಂತತಿಗಳನ್ನು ಹೊಂದಿವೆ. ಅಲ್ಲದೇ 20 ನೇ ಶತಮಾನದ ಉತ್ತರಾರ್ಧದಿಂದ ಅನೇಕ ರಾಜ್ಯಗಳು, ಮತ್ತು ಕೆಲವೊಂದು ಸಂದರ್ಭಗಳಲ್ಲಿ ಫೆಡರಲ್ ಸರ್ಕಾರ, ಇವರನ್ನು ಬುಡಕಟ್ಟು ಜನಾಂಗದವರೆಂದು ಗುರುತಿಸಿತು.ಮೊದಲ ಯುರೋಪಿಯನ್‌ ಅಮೆರಿಕನ್ನರು, ತುಪ್ಪಳದ ವ್ಯಾಪಾರಿಗಳ ರೂಪದಲ್ಲಿ ಪಶ್ಚಿಮದ ಬುಡಕಟ್ಟು ಜನಾಂಗದವರನ್ನು ಸಂಧಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ವಿಸ್ತರಣೆಯು ಪಾಶ್ಚಾತ್ಯ ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ತಲುಪಿದಂತೆ, ವಸಾಹತುಗಾರರು ಮತ್ತು ಗಣಿಕೆಲಸದ ವಲಸೆಗಾರರು, ಗ್ರೇಟ್ ಪ್ಲೇನ್ ನ ಬುಡಕಟ್ಟು ಜನಾಂಗದವರೊಂದಿಗಿನ ಕದನದ ಪ್ರಮಾಣವನ್ನು ಹೆಚ್ಚಿಸಿಕೊಂಡರು. ಇವು ಸಂಕೀರ್ಣವಾದ ಅಲೆಮಾರಿ ಸಂಸ್ಕೃತಿಗಳಾಗಿದ್ದು, ಕುದುರೆಗಳನ್ನು ಬಳಸಿಕೊಂಡು, ಕಾಡೆಮ್ಮೆಯನ್ನು ಬೇಟೆಯಾಡಲು ಕಾಲೋಚಿತವಾಗಿ ಪ್ರಯಾಣ ಬೆಳೆಸುವುದರ ಮೇಲೆ ಇವರ ವಹಿವಾಟು ಆಧರಿಸಿತ್ತು. ಇವರು ಅಮೆರಿಕನ್ ಆಂತರಿಕ ಕದನದ ನಂತರ ದಶಕಗಳ ವರೆಗೆ ನಡೆದ "ಇಂಡಿಯನ್‌ ಕದನ" ದಲ್ಲಿ ಅಮೆರಿಕದ ಆಕ್ರಮಣಕ್ಕೆ ಪ್ರಬಲವಾದ ವಿರೋಧ ವ್ಯಕ್ತಪಡಿಸಿದರು. ಈ ಕದನವು 1890 ರ ವರೆಗೆ ನಿರಂತರವಾಗಿ ನಡೆಯುತ್ತಲೇ ಇತ್ತು. ಖಂಡಾಂತರ ರೈಲು ಮಾರ್ಗದ ನಿರ್ಮಿತಿಯು ಪಶ್ಚಿಮದ ಬುಡಕಟ್ಟು ಜನಾಂಗದವರ ಮೇಲೆ ಒತ್ತಡ ಹೆಚ್ಚಿಸಿತು. ಸಮಯ ಕಳೆದಂತೆ ಅಮೆರಿಕಾ ಸಂಯುಕ್ತ ಸಂಸ್ಥಾನ, ಬುಡಕಟ್ಟು ಜನಾಂಗದವರು ಸರಣಿ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ಮತ್ತು ಜಮೀನನ್ನು ಕಾನೂನು ರೀತ್ಯ ಒಪ್ಪಿಸುವಂತೆ ಒತ್ತಾಯಪಡಿಸಿತು. ಅಲ್ಲದೇ ಅನೇಕ ಪಶ್ಚಿಮ ರಾಜ್ಯಗಳಲ್ಲಿ ಅವರಿಗೆ ಮೀಸಲು ಪ್ರದೇಶ ಒದಗಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರತಿನಿಧಿಗಳು ಸ್ಥಳೀಯ ಅಮೆರಿಕನ್ನರಿಗೆ ಯುರೋಪಿಯನ್ ಶೈಲಿಯ ಕೃಷಿಯನ್ನು ಮತ್ತು ಇದಕ್ಕೆ ಸದೃಶವಾಗಿರುವ ಕಸುಬನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದರು. ಆದರೆ ಜಮೀನುಗಳು ಅಂತಹ ಬಳಕೆಗಳಿಗೆ ಬೆಂಬಲ ನೀಡುವಷ್ಟು ಫಲವತ್ತಾಗಿರಲಿಲ್ಲ.ಸಮಕಾಲೀನ ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದೊಡನೆ ಇಂದು ವಿಶೇಷ ಸಂಬಂಧ ಹೊಂದಿದ್ದಾರೆ. ಏಕೆಂದರೆ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದಿಂದ ಪರಮಾಧಿಕಾರ ಅಥವಾ ಸ್ವತಂತ್ರವನ್ನು ಪಡೆದ ರಾಷ್ಟ್ರ, ಇಲ್ಲವೇ ಬುಡಕಟ್ಟು, ಅಥವಾ ಸ್ಥಳೀಯ ಅಮೆರಿಕನ್ನರ ತಂಡದ ಸದಸ್ಯರಾಗಿರಬಹುದು. ಅವರ ಸಮುದಾಯಗಳು ಮತ್ತು ಸಂಸ್ಕೃತಿಗಳು ವಲಸೆಗಾರರ (ಸ್ವ ಇಚ್ಛೆಯಿಂದ ಮತ್ತು ಗುಲಾಮ) ಸಂತತಿಯ ಬೃಹತ್ ಜನಸಂಖ್ಯೆಯೊಳಗೆ ಬೆಳೆದಿವೆ: ಆಫ್ರಿಕನ್‌, ಏಷ್ಯನ್, ಮಧ್ಯಪ್ರಾಚ್ಯ ಮತ್ತು ಯುರೋಪಿಯನ್‌ ಜನರು. ಮೊದಲೇ ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಲ್ಲದ ಸ್ಥಳೀಯ ಅಮೆರಿಕನ್ನರಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ 1924 ರಲ್ಲಿ ಪೌರತ್ವ ನೀಡಿತು.

Native Americans

ಚಿತ್ರ:Touch the Clouds 1877a.gif
ಚಿತ್ರ:Charles eastman smithsonian gn 03462a-cropped.jpg
Native Americans of the United States (from top left):
Joseph Brant · Sequoyah · Pushmataha
Tecumseh · Touch the Clouds · Sitting Bull
Chief Joseph · Charles Eastman  · Holmes Colbert
Billy Bowlegs III · Jim Thorpe · John Herrington
ಒಟ್ಟು ಜನಸಂಖ್ಯೆ
American Indian and Alaska Native
One race: 2.5 million are registered [೧]
In combination with one or more other races: 1.6 million are registered [೨]
1.37% of the U.S. population
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
Predominantly in the Western United States
ಭಾಷೆಗಳು
American English, Native American languages
ಧರ್ಮ
Native American Church
Protestant
Roman Catholic
Russian Orthodox
Traditional Ceremonial Ways
(Unique to Specific Tribe or Band)
ಸಂಬಂಧಿತ ಜನಾಂಗೀಯ ಗುಂಪುಗಳು
Indigenous peoples of the Americas

ಇತಿಹಾಸ

ಪೂರ್ವ-ಕೊಲಂಬಿಯನ್

ಮಂಜು ಮುಕ್ತ ಕಾರಿಡಾರ್ ಮತ್ತು ನಿರ್ದಿಷ್ಟ ಪೇಲಿಯೊಇಂಡಿಯನ್ ಪ್ರದೇಶಗಳ ಅಂದಾಜು ಸ್ಥಳವನ್ನು ತೋರಿಸುವ ನಕ್ಷೆ (ಕ್ಲೊವಿಸ್ ಸಿದ್ಧಾಂತ).

ಇನ್ನೂ ಚರ್ಚಿಸಲಾಗುತ್ತಿರುವ ಅಮೆರಿಕಾದ ವಸಾಹತೀಕರಣದ ಪ್ರಕಾರ, ಯುರೇಷಿಯದಿಂದ ಅಮೆರಿಕಾಕ್ಕೆ ವಲಸೆ ಬಂದ ಜನರು ಬರಿಂಜಿಯಾದ ಮೂಲಕ ಬಂದರು. ಇದು ಹಿಂದೆ ಬರಿಂಜ್ ಜಲಸಂಧಿಯುದ್ದಕ್ಕೂ ಎರಡು ಖಂಡಗಳನ್ನು ಸೇರಿಸುತ್ತಿದ್ದ ಭೂಸೇತುವೆಯಾಗಿದೆ.[೧೩] ಕುಸಿಯುತ್ತಿರುವ ಸಮುದ್ರ ಮಟ್ಟವು ಬರಿಂಜ್ ಭೂ ಸೇತುವೆಯನ್ನು ಸೃಷ್ಟಿಸಿತು. ಇದು ಸೈಬೀರಿಯಾವನ್ನು ಅಲಾಸ್ಕಾಕ್ಕೆ ಸೇರಿಸುತ್ತದೆ. ಈ ಕ್ರಿಯೆಯು ಸುಮಾರು 60,000 – 25,000 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು.[೧೩][೧೪] ಈ ವಲಸೆಯನ್ನು, ಬಗೆಹರಿಸದ ವಾದದೊಂದಿಗೆ (ಅಥವಾ ತುಂಬ ಮುಂಚೆ)ಸುಮಾರು 12,000 ಸಾವಿರ ವರ್ಷಗಳ ಹಿಂದೆ ನಡೆದಿದೆ, ಎಂದು ದೃಢಪಡಿಸಲಾಗಿದೆ.[೧೫][೧೬] ಮುಂಚಿನ ಈ ಪ್ರಾಗೈತಿಹಾಸಿಕ ಅಮೆರಿಕನ್ನರು, ಸಾಂಸ್ಕೃತಿಕವಾಗಿ ಭಿನ್ನವಾಗಿರುವ ನೂರಾರು ರಾಷ್ಟ್ರಗಳನ್ನು ಮತ್ತು ಬುಡಕಟ್ಟು ಜನಾಂಗಗಳ ವಿಕೇಂದ್ರೀಕರಣದ ಮೂಲಕ, ಶೀಘ್ರದಲ್ಲೆ ಅಮೆರಿಕಾದಲ್ಲೆಲ್ಲಾ ವ್ಯಾಪಿಸಿದರು.[೧೭] ಉತ್ತರ ಅಮೆರಿಕಾದ ವಾತಾವರಣವನ್ನು ಅಂತಿಮವಾಗಿ 8000 BCEಯಿಂದ ಸ್ಥಿರಗೊಳಿಸಲಾಯಿತು;ಹವಾಮಾನದ ಸ್ಥಿತಿಯು ಇಂದಿನ ಹವಾಮಾನದ ಸ್ಥಿತಿಗೆ ಹೆಚ್ಚು ಸದೃಶ್ಯವಾಗಿದೆ.[೧೮] ಇದು ವ್ಯಾಪಕವಾಗಿ ವಲಸೆಬರುವಂತೆ, ಬೆಳೆಗಳನ್ನು ಬೆಳೆಯಲು ಹಾಗು ಅಮೆರಿಕದ ಎಲ್ಲಾ ಕಡೆಗಳಲ್ಲೂ ಜನಸಂಖ್ಯೆಯಲ್ಲಿ ಹೆಚ್ಚಳವಾಗುವಂತೆ ಮಾಡಿತು.ಬೇಟೆಯಾಡುವ ದೊಡ್ಡ ಆಟದ ಸಂಸ್ಕೃತಿಯನ್ನು ಕ್ಲೊವಿಸ್ ಸಂಸ್ಕೃತಿ ಎಂದು ಕರೆಯಲಾಯಿತು. ಈ ಸಂಸ್ಕೃತಿಯನ್ನು ಆಗ ಕಲ್ಲನ್ನು ಕೊರೆದು ತಯಾರಿಸಲಾದ ಚೂಪಾದ ಸಾಧನವನ್ನು ಬಳಸುವುದರೊಂದಿಗೆ ಗುರುತಿಸಲಾಗುತ್ತದೆ. ಈ ಸಂಸ್ಕೃತಿಗೆ ನ್ಯೂ ಮೆಕ್ಸಿಕೊದ ಕ್ಲೊವಿಸ್ ನ ಸಮೀಪದಲ್ಲಿ ದೊರೆತಿರುವ ಕರಕುಶಲ ವಸ್ತುಗಳಿಂದಾಗಿ ಈ ಹೆಸರನ್ನು ಇಡಲಾಗಿದೆ; ಈ ಸಾಧನ ಸಂಕೀರ್ಣದ ಮೊದಲ ಸಾಕ್ಷಿಯನ್ನು 1932 ರಲ್ಲಿ ಉತ್ಖನಿಸಲಾಯಿತು. ಕ್ಲೊವಿಸ್ ಸಂಸ್ಕೃತಿಯು ಉತ್ತರ ಅಮೆರಿಕದ ಬಹುಪಾಲು ಭಾಗಗಳಲ್ಲಿ ಹರಡಿದೆ. ಅಲ್ಲದೇ ದಕ್ಷಿಣ ಅಮೆರಿಕಾದಲ್ಲೂ ಕೂಡ ಕಂಡುಬಂದಿದೆ. ಈ ಸಂಸ್ಕೃತಿಯನ್ನು ವಿಭಿನ್ನ ಕ್ಲೊವಿಸ್ ಅಂಶದಿಂದ ಗುರುತಿಸಲಾಗುತ್ತದೆ. ಕೊರೆದು ಬಿಲ್ಲೆಮಾಡಿದ ಚೂಪಾದ ತುದಿಹೊಂದಿರುವ ಚಕಮಕಿ ಕಲ್ಲನ್ನು ಬಾಣದೊಳಗೆ ಸೇರಿಸಲಾಗುತ್ತಿತ್ತು. ಕ್ಲೊವಿಸ್ ವಸ್ತುಗಳು ಯಾವ ಕಾಲಕ್ಕೆ ಸೇರಿವೆ ಎಂಬುದನ್ನು ಪ್ರಾಣಿಗಳ ಮೂಳೆಗಳೊಂದಿಗೆ ಹೋಲಿಸುವ ಮೂಲಕ ಹಾಗು ಕಾರ್ಬನ್ ಡೇಟಿಂಗ್ ವಿಧಾನವನ್ನು ಬಳಸುವ ಮೂಲಕ ನಿರ್ಧರಿಸಲಾಗುತ್ತದೆ. ಅಭಿವೃದ್ಧಿಪಡಿಸಲಾದ ಕಾರ್ಬನ್ ಡೇಟಿಂಗ್ ವಿಧಾನವನ್ನು ಬಳಸಿ ಇತ್ತೀಚೆಗೆ ಮಾಡಲಾದ ಕ್ಲೊವಿಸ್ ವಸ್ತುಗಳ ಪುನರ್ಪರಿಶೀಲನೆ, ಇವು 11,050 ಮತ್ತು 10,800 ರೇಡಿಯೋ ಕಾರ್ಬನ್ ವರ್ಷ B.P.ಗೆ (ಸರಿಸುಮಾರಾಗಿ 9100 ಯಿಂದ 8850 BCಯ ವರೆಗೆ) ಸೇರಿವೆ ಎಂಬ ಫಲಿತಾಂಶ ನೀಡಿದೆ.ಪ್ರಾಗೈತಿಹಾಸಿಕ ಕಾಲದ ಅನೇಕ ಸಂಸ್ಕೃತಿಗಳು ಉತ್ತರ ಅಮೆರಿಕಾವನ್ನು ಆವರಿಸಿವೆ. ಇವುಗಳಲ್ಲಿ ಕೆಲವನ್ನು ಗ್ರೇಟ್ ಪ್ಲೇನ್ಸ್ ಮತ್ತು ಅಮೆರಿಕಾದ ಆಧುನಿಕ ಅಮೆರಿಕಾ ಸಂಯುಕ್ತ ಸಂಸ್ಥಾನದ ಗ್ರೇಟ್ ಲೇಕ್ ಮತ್ತು ಕೆನಡಾ ಹಾಗು ಪಶ್ಚಿಮ ಮತ್ತು ನೈಋತ್ಯದ ನೆರೆಹೊರೆಯ ಪ್ರದೇಶಗಳಲ್ಲಿ ನಿರ್ಬಂಧಿಸಲಾಗಿದೆ. ಅಮೆರಿಕಾದ ಅನೇಕ ಸ್ಥಳಿಯ ಜನರ ಮೌಖಿಕ ಇತಿಹಾಸಗಳ ಪ್ರಕಾರ, ಅವರು ಹುಟ್ಟಿದಾಗಿನಿಂದಲೂ ಅಲ್ಲಿಯೇ ಜೀವಿಸುತ್ತಿದ್ದಾರೆಂದು, ಬೃಹತ್ ಮಟ್ಟದ ಸಾಂಪ್ರದಾಯಿಕ ಸೃಷ್ಟಿ ಕಾರಣಗಳ ಮೂಲಕ ವಿವರಿಸಲಾಗಿದೆ.[೧೯] ಫೊಲ್ಸಮ್ ನ ಸಂಪ್ರದಾಯವನ್ನು ಫೊಲ್ಸಮ್ ಅಂಶಗಳನ್ನು ಬಳಸುವ ಮೂಲಕ ವಿವರಿಸಲಾಗಿದೆ. ನೋದಕ ಅಂಶಗಳಿಂದ ಹಾಗು ಕಾಡೆಮ್ಮೆಯನ್ನು ಬಲಿಕೊಡುವುದು ಮತ್ತು ಹತ್ಯಾ ತಾಣಗಳಿಂದಾಗಿ ಹೆಸರುವಾಸಿಯಾದ ಇಂತಹ ಅಂಶಗಳ ಮೂಲಕ ನಿರೂಪಿಸಲಾಗುತ್ತದೆ. ಫೊಲ್ಸಮ್ ಸಾಧನಗಳು 9000 BCE ಮತ್ತು 8000 BCE ಗಿಂತ ಹಿಂದಿನವಾಗಿವೆ.[೨೦]

ಈಟಿಯಲ್ಲಿ ಬಳಸುವ ಒಂದು ಚೂಪಾದ ಫೋಲ್ಸಮ್ ಉಪಕರಣ

ನ್ಯಾ-ಡೆನೆ ಜನರು ಸುಮಾರು 8000 BCಯಲ್ಲಿ ಪ್ರವೇಶಿಸಲು ಪ್ರಾರಂಭಿಸಿ, ಫೆಸಿಫಿಕ್ ವಾಯವ್ಯ ಭಾಗವನ್ನು 5000 BCE [೨೧] ಯಲ್ಲಿ ತಲುಪಿ, ಉತ್ತರ ಅಮೆರಿಕವನ್ನು ಪ್ರವೇಶಿಸಿದರು. ಅಲ್ಲಿಂದ ಫೆಸಿಫಿಕ್ ಕರಾವಳಿಯುದ್ದಕ್ಕೂ ವಲಸೆಹೋಗುವ ಮೂಲಕ ಒಳನಾಡನ್ನು ಪ್ರವೇಶಿಸಿದರು. ಭಾಷಾಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು ಮತ್ತು ಪುರಾತತ್ತ್ವ ಶಾಸ್ತ್ರಜ್ಞರು, ಅವರ ಪೂರ್ವಿಕರು, ಮೊದಲ ಪ್ರಾಗೈತಿಹಾಸಿಕರ ನಂತರ ಉತ್ತರ ಅಮೆರಿಕಕ್ಕೆ ಪ್ರತ್ಯೇಕ ವಲಸೆ ಮಾಡಿದ್ದರೆಂದು ನಂಬುತ್ತಾರೆ. ಮೊದಲು ಅವರು ಈಗಿನ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಕ್ವೀನ್ ಚಾರ್ಲೊಟ್ ಐಲ್ಯಾಂಡ್ ಗಳ ಬಳಿ ನೆಲೆಸಿದ್ದರು. ಇಲ್ಲಿಂದಲೇ ಅವರು ಅಲಾಸ್ಕಾ ಮತ್ತು ಉತ್ತರ ಕೆನಡಾ, ಫೆಸಿಫಿಕ್ ಕರಾವಳಿಯೊಂದಿಗೆ ದಕ್ಷಿಣಕ್ಕೆ ಮತ್ತು ಒಳನಾಡಿಗೆ ವಲಸೆ ಬಂದಿದ್ದರು. ಅವರು, ಇಂದಿನ ಮತ್ತು ಐತಿಹಾಸಿಕ ನ್ಯಾವ್ಜೊ ಮತ್ತು ಅಪಾಚೆ ಬುಡಕಟ್ಟುಗಳನ್ನು ಒಳಗೊಂಡಂತೆ ಅಥಬಾಸ್ಕನ್ ಭಾಷಿಕರ ಹಿಂದಿನ ಪೂರ್ವಿಕರಾಗಿದ್ದಾರೆ. ಇವರ ಹಳ್ಳಿಗಳನ್ನು ಕಾಲೋಚಿತವಾಗಿ ಬಳಸಲಾಗುತ್ತಿದ್ದ ಬಹು ಕುಟುಂಬಗಳು ವಾಸಿಸುವಂತಹ ಮನೆಗಳೊಂದಿಗೆ ನಿರ್ಮಿಸಲಾಗಿತ್ತು. ಜನರು ವರ್ಷವಿಡೀ ಅಲ್ಲಿ ವಾಸಿಸುತ್ತಿರಲಿಲ್ಲ, ಆದರೆ ಚಳಿಗಾಲಕ್ಕಾಗಿ ಆಹಾರ ಸಂಗ್ರಹಿಸಲು ಬೇಸಿಗೆಯಲ್ಲಿ ಬೇಟೆಗೆ ಮತ್ತು ಮೀನು ಹಿಡಿಯಲು ಹೋಗುತ್ತಿದ್ದರು.[೨೨] ಒಷರಾ ಸಂಪ್ರದಾಯದ ಜನರು 5500 BCE ಯಿಂದ 600 CE ವರೆಗೆ ಜೀವಿಸಿದ್ದರು. ಇದು ನೈಋತ್ಯ ಪ್ರಾಚೀನ ಸಂಸ್ಕೃತಿಯಾಗಿದ್ದು, ಉತ್ತರ- ಮಧ್ಯ ನ್ಯೂ ಮೆಕ್ಸಿಕೊ, ಸ್ಯಾನ್ ಜುನ್ ಬ್ಯಾಸಿನ್, ರಿಯೊ ಗ್ರ್ಯಾಂಡೆ ಕಣಿವೆ, ದಕ್ಷಿಣ ಕಲರಾಡೊ, ಮತ್ತು ಆಗ್ನೇಯದ ಉತಹ್ ದಲ್ಲಿ ನೆಲೆಸಿದ್ದರು.ಪಾವರ್ಟಿ ಪಾಯಿಂಟ್ ಸಂಸ್ಕೃತಿ ಎಂಬುದು ಪುರಾತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಕೃತಿಯಾಗಿದ್ದು, ಇದರ ಜನರು ಮಿಸಿಸಿಪ್ಪಿಯ ಕೆಳ ಕಣಿವೆಯ ಮತ್ತು ಗಲ್ಫ್ ತೀರದ ಹತ್ತಿರದ ಪ್ರದೇಶದಲ್ಲಿ ವಾಸವಾಗಿದ್ದರು. ಈ ಸಂಸ್ಕೃತಿ ಪ್ರಾಚೀನ ಕಾಲದ ಸಂದರ್ಭದಲ್ಲಿ 2200 BCಯಿಂದ- 700 BC ವರೆಗೆ ಬೆಳೆಯಿತು.[೨೩] ಈ ಸಂಸ್ಕೃತಿಯ ಸಾಕ್ಷ್ಯಾಧಾರಗಳು ಪಾವರ್ಟಿ(ಬಡತನ) ಅಂಶದಿಂದ 100 ಕಿಂತ ಹೆಚ್ಚು ಸ್ಥಳಗಳಲ್ಲಿ ದೊರೆತಿದೆ. ಮೆಸ್ಸಿಸ್ಸಿಪ್ಪಿಯ ಮೆಲ್ಜೊನಿ ಹತ್ತಿರವಿರುವ ಜ್ಯಾಕ್ ಟೌನ್ ನಿಂದ 100 ಮೈಲಿ ದೂರದಲ್ಲಿರುವ ಲೂಸಿಯಾನದಲ್ಲಿ ದೊರೆತಿವೆ.ಉತ್ತರ ಅಮೆರಿಕನ್ ಪೂರ್ವ-ಕೊಲಂಬಿಯನ್ ಸಂಸ್ಕೃತಿಗಳ ವುಡ್ ಲ್ಯಾಂಡ್ ಕಾಲಾವಧಿ, ಉತ್ತರ ಅಮೆರಿಕದ ಪೂರ್ವ ಭಾಗದಲ್ಲಿ ಸರಿಸುಮಾರಾಗಿ 1000 BC ಯಿಂದ 1000 CE ವರೆಗಿನ ಅವಧಿಯನ್ನು ಸೂಚಿಸುತ್ತದೆ. "ವುಡ್ ಲ್ಯಾಂಡ್" ಪದವನ್ನು 1930ರ ಹೊತ್ತಿನಲ್ಲಿ ರಚಿಸಲಾಗಿದ್ದು, ಇದು ಪ್ರಾಚೀನ ಕಾಲಾವಧಿ ಮತ್ತು ಮಿಸಿಸಿಪ್ಪಿಯನ್ ಸಂಸ್ಕೃತಿಗಳ ಅವಧಿಗಳಿಗೆ ಸೇರಿದ ಪ್ರಾಗೈತಿಹಾಸಿಕ ಸ್ಥಳಗಳನ್ನು ಸೂಚಿಸುತ್ತದೆ. ಹೋಪ್ ವೆಲ್ ಸಂಸ್ಕೃತಿ ಎಂಬುದು ಸ್ಥಳೀಯ ಅಮೆರಿಕನ್ ಸಂಸ್ಕೃತಿಯ ಸಾಮಾನ್ಯ ಅಂಶಗಳನ್ನು ವಿವರಿಸಲು ಬಳಸುವ ಪದವಾಗಿದೆ. ಈ ಸಂಸ್ಕೃತಿಯು ಈಶಾನ್ಯ ಮತ್ತು ಮಧ್ಯಪಶ್ಚಿಮ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 200 BC ಯಿಂದ 500 CE ವರೆಗೆ ಬೆಳೆಯಿತು.[೨೪]

ಹೋಪ್ ವೆಲ್ ಸಂಸ್ಕೃತಿಯು ಕೇವಲ ಒಂದು ಸಂಸ್ಕೃತಿ ಅಥವಾ ಸಮಾಜವಲ್ಲ. ಆದರೆ ವ್ಯಾಪಕವಾಗಿ ಚೆದುರಿಹೋದ ಜನಸಮೂಹವಾಗಿದ್ದು, ಇವರು ಹೋಪ್ ವೆಲ್ ವಿನಿಮಯ ವ್ಯವಸ್ಥೆ ಎಂದು ಕರೆಯಲಾಗುವ ವ್ಯಾಪಾರೀ ಮಾರ್ಗಗಳ ಸಾಮಾನ್ಯ ಸಂಪರ್ಕದ ಮೂಲಕ ಇಲ್ಲಿಗೆ ಸೇರಿದರು.[೨೫] ಅದರ ಉತ್ತುಂಗದ ಸಮಯದಲ್ಲಿ ಹೋಪ್ ವೆಲ್ ವಿನಿಮಯ ವ್ಯವಸ್ಥೆಯು , ಆಗ್ನೇಯ ಅಮೆರಿಕಾ ಸಂಯುಕ್ತ ಸಂಸ್ಥಾನ ದಿಂದ ಆಗ್ನೇಯ ಕೆನಡಾದ ಆನ್ ಟಾರಿಯೋ ಸರೋವರದ ಅಂಚಿನವರೆಗೂ ಹಬ್ಬಿತು. ಈ ಪ್ರದೇಶದೊಳಗೆ, ವಿನಿಮಯದ ಕಾರ್ಯಚಟುವಟಿಕೆಯಲ್ಲಿ ಈ ಸಮೂಹದ ಸಮಾಜಗಳು ಜಲಮಾರ್ಗದ ಸೇವೆಗಳೊಂದಿಗೆ ಭಾರಿ ಮಟ್ಟದಲ್ಲಿ ಪಾಲ್ಗೊಂಡವು. ಜಲಮಾರ್ಗವು ಅವರ ಪ್ರಧಾನ ಸಾರಿಗೆ ಸಂಪರ್ಕ ಮಾರ್ಗವಾಗಿತ್ತು. ಹೋಪ್ ವೆಲ್ ವಿನಿಮಯ ವ್ಯವಸ್ಥೆಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಎಲ್ಲಾ ಕಡೆಗಳಿಂದಲೂ ವಸ್ತುಗಳ ವಹಿವಾಟು ಮಾಡಿತು.ಕೋಲ್ಸ್ ಕ್ರೀಕ್ ಸಂಸ್ಕೃತಿ ಎಂಬುದು ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಕೃತಿಯಾಗಿದ್ದು, ಇಂದಿನ ದಕ್ಷಿಣ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಮಿಸಿಸಿಪ್ಪಿ ಕೆಳ ಕಣಿವೆಯಲ್ಲಿ ನೆಲಸಿತ್ತು. ಈ ಅವಧಿಯನ್ನು ಪ್ರದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ತರವಾದ ಬದಲಾವಣೆ ಕಂಡ ಕಾಲಾವಧಿಯಾಗಿದೆ ಎಂದು ಗುರುತಿಸಲಾಗಿದೆ. ಇದ್ದಕ್ಕಿದ್ದಂತೆ ಜನಸಂಖ್ಯೆ ಹೆಚ್ಚಿತು. ಕೋಲ್ಸ್ ಕ್ರೀಕ್ ಕಾಲಾವಧಿ ಮುಗಿಯುವ ವೇಳೆಗೆ, ಬೆಳೆಯುತ್ತಿರುವ ಸಂಸ್ಕೃತಿ ಮತ್ತು ರಾಜಕೀಯ ಸಂಕೀರ್ಣತೆಗೆ ಬಲವಾದ ಸಾಕ್ಷ್ಯಗಳಿವೆ. ರಾಜತ್ವ ಸಮಾಜದ ಅನೇಕ ವಿಶಿಷ್ಟ ಲಕ್ಷಣಗಳನ್ನು ಸ್ಪಷ್ಟಪಡಿಸದಿದ್ದರೂ ಕೂಡ, 1000 CE ಯಿಂದ ಗಣ್ಯನೇತಾರರ ಸರಳ ಆಡಳಿತ ವ್ಯವಸ್ಥೆ ಪ್ರಾರಂಭವಾಯಿತು. ಕೋಲ್ಸ್ ಕ್ರೀಕ್ ಸಂಸ್ಕೃತಿಯ ಸ್ಥಳಗಳು ಅರ್ಕಾನ್ಸಾಸ್, ಲೂಯಿಸಿಯಾನ, ಒಕ್ಲಹೋಮ, ಮಿಸಿಸಿಪ್ಪಿ ಮತ್ತು ಟೆಕ್ಸಾಸ್ ನಲ್ಲಿ ಕಂಡುಬಂದಿವೆ. ಇದನ್ನು ಪ್ಲ್ಯಾಕ್ ಮೈನ್ ಸಾಂಸ್ಕೃತಿಯ ಪೂರ್ವಜ ಎಂದು ಪರಿಗಣಿಸಲಾಗುತ್ತದೆ.ಹೊಹೊಕ್ಯಾಮ್ ಎಂಬುದು ಈಗಿನ ಅಮೆರಿಕನ್ ನೈಋತ್ಯ ಭಾಗದ ನಾಲ್ಕು ಪ್ರಮುಖ ಪ್ರಾಗೈತಿಹಾಸಿಕ ಪುರಾತತ್ತ್ವ ಸಂಪ್ರದಾಯಗಳಲ್ಲಿ ಒಂದಾಗಿದೆ.[೨೬] ಸರಳವಾದ ಕೃಷಿಕನಂತೆ ಬದುಕುವ ಮೂಲಕ ಅವರು ಜೋಳ ಮತ್ತು ಬೀನ್ಸ್ ಬೆಳೆಯುತ್ತಿದ್ದರು. ಹಿಂದಿನ ಹೊಹೊಕ್ಯಾನ್, ಮಧ್ಯ ಗಿಲಾ ನದಿಯೊಂದಿಗೆ ಸಣ್ಣ ಹಳ್ಳಿಗಳ ಪಂಕ್ತಿಯನ್ನೇ ಹೊಂದಿದ್ದರು. ಸಮುದಾಯಗಳು, ಈ ಕಾಲಾವಧಿಯಲ್ಲಿ ಸಾಮಾನ್ಯವಾಗಿದ್ದ ಒಣಬೇಸಾಯದೊಂದಿಗೆ, ಕೃಷಿಗೆ ಯೋಗ್ಯವಾಗಿರುವ ಉತ್ತಮವಾದ ಜಮೀನಿನ ಸಮೀಪದಲ್ಲಿ ನೆಲೆಸಿದ್ದವು.[೨೬] ಬಾವಿಗಳು ಸಾಮಾನ್ಯವಾಗಿ 10 feet (3 m)ಕ್ಕಿಂತ ಕಡಿಮೆ ಆಳ ಹೊಂದಿರುತ್ತಿದ್ದವು. ಇವುಗಳನ್ನು 300 CE ದಿಂದ 500 CEಯ ವರೆಗೆ ಗೃಹಬಳಕೆಯ ನೀರಿನ ಸರಬರಾಜಿಗಾಗಿ ತೋಡಲಾಗುತ್ತಿತ್ತು.[೨೬] ಹಿಂದಿನ ಹೊಹೊಕ್ಯಾಮ್ ಮನೆಗಳನ್ನು, ಅರೆ ವೃತ್ತಾಕಾರದ ಶೈಲಿಯಲ್ಲಿ ಬಾಗಿಸಿದಂತಹ ಕೊಂಬೆಗಳಿಂದ ನಿರ್ಮಿಸಲಾಗುತ್ತಿತ್ತು. ಅನಂತರ ಸಣ್ಣ ಸಣ್ಣ ಕೊಂಬೆಗಳಿಂದ, ಜೊಂಡುಹುಲ್ಲಿನಿಂದ ಮುಚ್ಚಲಾಗುತ್ತಿತ್ತು, ಹಾಗು ಅಲ್ಲಿ ಮಣ್ಣು ಮತ್ತು ಇತರ ವಸ್ತುಗಳನ್ನು ಗಟ್ಟಿಗೊಳಿಸಲು ಹಾಕಲಾಗುತ್ತಿತ್ತು.[೨೬]ಆದರೂ ಇದು ದಕ್ಷಿಣ ಭಾಗದಲ್ಲಿದ್ದ ಮುಂದಿನ ಮೆಸೊಅಮೆರಿಕನ್ ನಾಗರಿಕತೆಯಷ್ಟು ಮುಂದುವರೆದಿರಲಿಲ್ಲ. ಇವರು ಉತ್ತರ ಅಮೆರಿಕದಲ್ಲಿ ವಿಕಸನಹೊಂದಿದ್ದ ಸ್ಥಿರವಾಗಿ ಒಂದೆಡೆ ನೆಲೆಸುವ, ಸುಸಂಸ್ಕೃತ ಪೂರ್ವ-ಕೊಲಂಬಿಯನ್ ಸಮಾಜಗಳಾಗಿವೆ. ಸೌತ್ ಈಸ್ಟರ್ನ್ ಸೆರೆಮೊನಿಯಲ್ ಕಾಂಪ್ಲೆಕ್ಸ್ ಎಂಬುದು, ಕರಕುಶಲ ವಸ್ತುಗಳು, ಮೂರ್ತಿಶಿಲ್ಪ, ಧಾರ್ಮಿಕ ಕ್ರಿಯೆಗಳು ಮತ್ತು ಮಿಸಿಸಿಪ್ಪಿಯನ್ ಸಂಸ್ಕೃತಿಯ ಪೌರಾಣಿಕ ಸಾಹಿತ್ಯದ ಪ್ರಾದೇಶಿಕ ಶೈಲಿಯ ಸದೃಶ್ಯತೆಗೆ ಪುರಾತತ್ತ್ವಶಾಸ್ತ್ರಜ್ಞರು ನೀಡಿದ ಹೆಸರಾಗಿದೆ. ಇದು ಜೋಳದ ವ್ಯವಸಾಯ ಮತ್ತು ನಾಯಕತ್ವ ಪದ್ಧತಿಯನ್ನು ಅಳವಡಿಸಿಕೊಂಡ ಜನರೊಂದಿಗೆ ಸದೃಶವಾಗಿದೆ-ಇದು 1200 CE ಯಿಂದ 1650 CE ವರೆಗೆ ಇದ್ದ ಅಧಿಕಾರ ಜಾಲದ,ಸಂಕೀರ್ಣತೆಯ ಸಾಮಾಜಿಕ ಸಂಸ್ಥೆಯಾಗಿದೆ.[೨೭][೨೮] ಪ್ರಸಿದ್ಧ ನಂಬಿಕೆಗೆ ವಿರುದ್ಧವಾಗಿ, ಈ ಅಭಿವೃದ್ಧಿಯು ಮೆಸೊಅಮೆರಿಕದೊಂದಿಗೆ ನೇರ ಸಂಬಂಧ ಹೊಂದಿದ್ದಂತೆ ಕಂಡುಬರುತ್ತದೆ. ಇದು, ಶೇಷ ಜೋಳದ ಸಂಗ್ರಹ, ದಟ್ಟ, ನಿಬಿಡ ಜನಸಂಖ್ಯೆ ಮತ್ತು ಕೌಶಲಗಳ ಪರಿಣತೆಯ ಮೇಲೆ ಉಂಟಾದ ಬದಲಾವಣೆಯೊಂದಿಗೆ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿತ್ತು.[dubious ] ಈ ಜೌಪಚಾರಿಕ ಸಂಕೀರ್ಣತೆಯು, ಮಿಸಿಸಿಪ್ಪಿಯನ್ ಜನರ ಧಾರ್ಮಿಕತೆಯ ಪ್ರಮುಖ ಅಂಶವನ್ನು ಪ್ರತಿನಿಧಿಸುತ್ತದೆ. ಅಲ್ಲದೇ ಅವರ ಧಾರ್ಮಿಕತೆಯನ್ನು ಅರ್ಥಮಾಡಿಕೊಳ್ಳಲು ಇರುವ ಮೂಲಗಳಲ್ಲಿ ಇದೂ ಕೂಡ ಒಂದಾಗಿದೆ.[೨೯]ಮಿಸಿಸಿಪ್ಪಿಯನ್ ಸಂಸ್ಕೃತಿಯು, ಉತ್ತರ ಅಮೆರಿಕದ ಮೆಕ್ಸಿಕೊ ಉತ್ತರ ಭಾಗದಲ್ಲಿ ಬಹುದೊಡ್ಡ ಮಣ್ಣಿನ ದಿಬ್ಬಗಳನ್ನು ನಿರ್ಮಿಸಿದೆ. ಪ್ರಮುಖವಾಗಿ ಕಾಹೊಕಿಯಾದಲ್ಲಿ ನೋಡಬಹುದಾಗಿದೆ. ಇವುಗಳನ್ನು ಈಗಿನ ಇಲಿನಾಯ್ಸ್ ನಲ್ಲಿರುವ ಮಿಸಿಸಿಪ್ಪಿ ನದಿಯ ಉಪನದಿಯ ಆಧಾರದ ಮೇಲೆ ನಿರ್ಮಿಸುತ್ತಿದ್ದರು. ಇವುಗಳ 10-ವೃತ್ತಾಂತಗಳುಳ್ಳ ಮಾಂಕ್ಸ್ ಮೌಂಡ್, ಟಿಯೊತಿಹುಕ್ಯಾನ್ ನಲ್ಲಿರುವ ಪಿರಮಿಡ್ ಆಫ್ ದಿ ಸನ್ ಗಿಂತ ಅಥವಾ ಈಜಿಪ್ಟ್ ನಲ್ಲಿರುವ ಗ್ರೇಟ್ ಪಿರಮಿಡ್ ಗಿಂತ ಅತ್ಯಂತ ಹೆಚ್ಚು ಕ್ಷೇತ್ರಫಲ ಹೊಂದಿವೆ. ಜನರ ವಿಶ್ವವಿಜ್ಞಾನದ ಖಗೋಳ ಶಾಸ್ತ್ರವನ್ನು ಆಧರಿಸಿ, ಆರು ಚದರ ಮೈಲಿ ದೂರದಲ್ಲಿ ನಗರ ಸಂಕೀರ್ಣ ನಿರ್ಮಿಸಲಾಗಿತ್ತು. ಅಲ್ಲದೇ ಇದು 100 ಕ್ಕಿಂತ ಹೆಚ್ಚು ಸುಂದರ ದಿಬ್ಬಗಳನ್ನೂ ಹೊಂದಿತ್ತು, ಇವು ಖಗೋಳ ವಿಜ್ಞಾನದ ಬಗೆಗಿನ ಅವರ ಜ್ಞಾನವನ್ನು ಸೂಚಿಸುತ್ತವೆ. ಇದು ಮರದ ಸ್ಮಾರಕವೊಂದನ್ನು ಒಳಗೊಂಡಿತ್ತು, ಇವುಗಳ ಪವಿತ್ರ ಸಿಡರ್ ಕಂಬಗಳನ್ನು, ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಗಳನ್ನು ಮತ್ತು ಮೇಷ ಸಂಕ್ರಾಂತಿಯನ್ನು ಗುರುತಿಸಲು ನೆಡಲಾಗುತ್ತಿತ್ತು. ಇದು 1250 AD ಯಲ್ಲಿ 30,000 ದಿಂದ 40,000 ದಷ್ಟು ಜನರನ್ನು ಹೊಂದಿತ್ತು. ಇಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಯಾವುದೇ ನಗರದ ಜನಸಂಖ್ಯೆ 1800 ರ ನಂತರ ಈ ಜನಸಂಖ್ಯೆಗೆ ಸಮನಾಗಿಲ್ಲ. ಇದರ ಜೊತೆಯಲ್ಲಿ, ಕಾಹೊಕಿಯಾವು ನಾಯಕನ ಅಧಿಕಾರಕ್ಕೊಳಪಟ್ಟ ಪ್ರಧಾನ ಪ್ರಾದೇಶಿಕ ಪ್ರದೇಶವಾಗಿದ್ದು, ಗ್ರೇಟ್ ಲೇಕ್ಸ್ ನಿಂದ ಮೆಕ್ಸಿಕೊದ ಗಲ್ಫ್ ವರೆಗೆ ಹಬ್ಬಿದ್ದಂತಹ, ವ್ಯಾಪಾರ ಮತ್ತು ನಾಯಕತ್ವಕ್ಕೆ ಒಳಪಟ್ಟ ಉಪಪ್ರದೇಶಗಳನ್ನು ಒಳಗೊಂಡಿತ್ತು.ಇರೊಕ್ವಾಯ್ಸ್ ಲೀಗ್ ಆಫ್ ನೇಷನ್ಸ್ ಅಥವಾ "ಪೀಪಲ್ ಆಫ್ ದಿ ಲಾಂಗ್ ಹೌಸ್", ಮೈತ್ರಿ ಮಾದರಿ ಹೊಂದಿತ್ತು, ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಜಾಪ್ರಭುತ್ವ ತತ್ವಪಾಲನೆಯ ಸರ್ಕಾರದ, ಅನಂತರದ ಅಭಿವೃದ್ಧಿಯ ಸಂದರ್ಭದಲ್ಲಿ ರಾಜಕೀಯ ಆಲೋಚನೆಗೆ ಕೊಡುಗೆ ನೀಡಲು ಪ್ರತಿಪಾದಿಸಲಾಯಿತು. ಯುರೋಪಿಯನ್ನರು ನಡೆದು ಬಂದ ಪ್ರಬಲ ರಾಜಪ್ರಭುತ್ವದಿಂದ ನಿರ್ಗಮಿಸಿ ಸದಸ್ಯರನ್ನಾಗಿಸಿಕೊಳ್ಳುವ ಅವರ ವ್ಯವಸ್ಥೆಯು ಒಂದು ರೀತಿಯ ಒಕ್ಕೂಟವಾಗಿದೆ.[೩೦][೩೧] ನಾಯಕತ್ವವನ್ನು 50 ಪ್ರತಿಷ್ಠಿತ ಸೇಚಮ್ ನಾಯಕರ ಗುಂಪಿಗೆ ಸೀಮಿತಗೊಳಿಸಲಾಗಿತ್ತು. ಇದರಲ್ಲಿನ ಪ್ರತಿಯೊಬ್ಬರೂ ಬುಡಕಟ್ಟು ಜನಾಂಗದೊಳಗೆ ಒಂದು ಗುಂಪನ್ನು ಪ್ರತಿನಿಧಿಸುತ್ತಿದ್ದರು; ಬುಡುಕಟ್ಟುಗಳಾದ ಒನ್ ಐಡಾಸ್ ಮತ್ತು ಮೊಹಾಕ್ ಜನ ಒಂಭತ್ತು ಸ್ಥಾನಗಳನ್ನು ಹೊಂದಿದ್ದರೆ, ಆನ್ ಆನ್ಡಗಾಸ್ ಹದಿನಾಲ್ಕು, ಕೆಯುಗಾಸ್ ಹತ್ತು ಮತ್ತು ಸೆನೆಕಾಸ್ ಎಂಟು ಸ್ಥಾನಗಳನ್ನು ಹೊಂದಿದ್ದವು. ಸೆನೆಕಾ ಬುಡಕಟ್ಟು ಜನಾಂಗದವರು, ಇತರ ಬುಡಕಟ್ಟು ಜನಾಂಗದವರನ್ನು ಒಟ್ಟಿಗೆ ಸೇರಿಸಿದರೂ ಕೂಡ ಸಮನಾಗದಷ್ಟು ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರು. ಪ್ರಾತಿನಿಧ್ಯವು ಜನಸಂಖ್ಯೆಯ ಆಧಾರದ ಮೇಲಿರುತ್ತಿರಲಿಲ್ಲ. ಸೇಚಮ್ ನ ನಾಯಕ ಮರಣಹೊಂದಿದಾಗ, ಆತನ ಬುಡಕಟ್ಟು ಜನಾಂಗದ ಹಿರಿಯ ಮಹಿಳೆಯರು, ಗುಂಪಿನ ಇತರ ಮಹಿಳೆಯರ ಸಲಹೆಯನ್ನು ತೆಗೆದುಕೊಂಡು, ಮುಂದಿನ ಮಾತೃ ಸಂತತಿಯ ಪೀಳಿಗೆಯೊಂದಿಗೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತಿದ್ದರು. ನಿರ್ಧಾರಗಳನ್ನು ಮತಚಲಾಯಿಸುವ ಮೂಲಕ ತೆಗೆದುಕೊಳ್ಳದೆ ಒಮ್ಮತದ ಅಭಿಪ್ರಾಯದೊಂದಿಗೆ ತೆಗೆದುಕೊಳ್ಳುತ್ತಿದ್ದರು. ಇದರ ಜೊತೆಯಲ್ಲಿ ಸೇಚಮ್ ನ ನಾಯಕನು ಸೈದ್ಧಾಂತಿಕ ನಿರಾಕರಣಾಧಿಕಾರವನ್ನು ಹೊಂದಿರುತ್ತಿದ್ದನು. ಆನ್ ಆನ್ಡಗಾಸ್ "ಜ್ವಾಲೆಯನ್ನು ಅರ್ಪಿಸುವವರಾಗಿದ್ದು", ಚರ್ಚಿಸುವ ವಿಷಯಗಳನ್ನು ನೀಡಲು ಜವಾಬ್ದಾರರಾಗಿರುತ್ತಾರೆ. ಅಲ್ಲದೇ ಸಂಪ್ರದಾಯದಂತೆ ಉರಿಯುತ್ತಿರುವ ಬೆಂಕಿಯ ಮೂರು ಬದಿಗಳಲ್ಲಿ (ಬೆಂಕಿಯ ಒಂದು ಕಡೆಯಲ್ಲಿ ಮೊಹಾಕ್ ಗಳು ಮತ್ತು ಸೆನೆಕಾಸ್ ಕುಳಿತುಕೊಳ್ಳುತ್ತಿದ್ದರು; ಅಲ್ಲದೇ ಮತ್ತೊಂದು ಬದಿಯಲ್ಲಿ ಒನ್ ಐಡಾಸ್ ಮತ್ತು ಕೆಯುಗಾಸ್ ಕುಳಿತುಕೊಳ್ಳುತ್ತಿದ್ದರು)ಒಂದು ಕಡೆ ಕುಳಿತುಕೊಳ್ಳುತ್ತಿದ್ದರು.[೩೨] ಟೆಂಪಲ್ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರಜ್ಞರಾಗಿರುವ ಎಲಿಜಬೆತ್ ಟೂಕರ್,ಪೂರ್ವಿಕರು ಅಳವಡಿಸಿದ ಸರ್ಕಾರದ ವ್ಯವಸ್ಥೆಯು,ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅಳವಡಿಸಿಕೊಳ್ಳಲಾದ ಅಂತಿಮ ಆಡಳಿತ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಹೋಲುತ್ತದೆ. ಅಲ್ಲದೇ ಇದು ಆನುವಂಶಿಕಕ್ಕಿಂತ ಬುಡಕಟ್ಟು ಜನಾಂಗದ ಮಹಿಳಾ ಸದಸ್ಯರು ಆಯ್ಕೆ ಮಾಡುವ ಚುನಾಯಿತ ನಾಯಕತ್ವವನ್ನೂ ಒಳಗೊಂಡಿದೆ. ಅಲ್ಲದೇ ಜನಸಂಖ್ಯೆಯ ಪ್ರಮಾಣವನ್ನು ಲೆಕ್ಕಿಸದೆ ಒಮ್ಮತದ ನಿರ್ಧಾರ ಕೈಗೊಳ್ಳುವಿಕೆಯನ್ನು ಕೂಡ ಒಳಗೊಂಡಿದೆ. ಅಷ್ಟೇ ಅಲ್ಲದೇ ಕೇವಲ ಒಂದು ಗುಂಪು ಮಾತ್ರ ಶಾಸಕಾಂಗದ ಎದುರು ವಿಷಯಗಳನ್ನು ಮಂಡಿಸಬಹುದಾಗಿದೆ,ಎಂದು ಮಾನವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.[೩೨]ದೂರ ವ್ಯಾಪಾರವು ಸ್ಥಳೀಯ ಜನರ ನಡುವಿನ ಕದನಕ್ಕೆ ತಡೆಯುಂಟು ಮಾಡಲಿಲ್ಲ. ಉದಾಹರಣೆಗೆ, ಪುರಾತತ್ತ್ವಶಾಸ್ತ್ರದ ಮತ್ತು ಬುಡಕಟ್ಟು ಜನಾಂಗಗಳ' ಮೌಖಿಕ ಇತಿಹಾಸಗಳು ಇರೊಕ್ವಾಯ್ಸ್, ಸುಮಾರು 1200 CE ಯಲ್ಲಿ ಇಂದಿನ ಕೆನ್ ಟುಕಿ ಯಲ್ಲಿರುವ ಓಹಿಒ ನದಿ ಪ್ರದೇಶದ ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮಾಡುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಿವೆ. ಅಂತಿಮವಾಗಿ ಅವರು, ಅನೇಕರನ್ನು ಐತಿಹಾಸಿಕವಾಗಿ ಅವರ ಸಾಂಪ್ರದಾಯಿಕ ನೆಲೆವಾಸಗಳಾದ ಮಿಸಿಸಿಪ್ಪಿ ನದಿಯ ಪಶ್ಚಿಮ ಭಾಗಕ್ಕೆ ವಲಸೆಗಾಗಿ ಜೊತೆಗೆ ಕರೆದುಕೊಂಡು ಬಂದರು. ಒಸೇಜ್, ಕಾವ್, ಪೊನ್ಕಾ ಮತ್ತು ಒಮಹಾ ಜನರನ್ನು ಒಳಗೊಂಡಂತೆ ಓಹಿಒ ಕಣಿವೆಯಲ್ಲಿ ಹುಟ್ಟಿಬೆಳೆದ ಬುಡಕಟ್ಟು ಜನಾಂಗದವರು ಪಶ್ಚಿಮಕ್ಕೆ ವಲಸೆ ಹೋದರು. ಆಗ 17 ನೇ ಶತಮಾನದ ಮಧ್ಯಾವಧಿಯಲ್ಲಿ ಅವರು ಈಗಿನ, ಕ್ಯಾನ್ ಸಾಸ್, ನೆಬ್ರಾಸ್ಕ್, ಆರ್ಕಾನ್ಸಸ್ ಮತ್ತು ಒಕ್ಲಹೋಮ ಗಳಲ್ಲಿರುವ ಅವರ ಐತಿಹಾಸಿಕ ಭೂಮಿಗಳಲ್ಲಿ ಪುನಃ ನೆಲಸಿದರು. ಒಸೇಜ್ ಬುಡಕಟ್ಟು ಜನಾಂಗದವರು ಸ್ಥಳೀಯ ಕ್ಯಾಡೊ ಭಾಷೆಯನ್ನು- ಮಾತನಾಡುವ ಸ್ಥಳೀಯ ಅಮೆರಿಕನ್ನರೊಂದಿಗೆ ಯುದ್ಧಮಾಡಿ, 18 ನೇ ಶತಮಾನದ ಮಧ್ಯಾವಧಿಯ ಹೊತ್ತಿಗೆ ಅವರನ್ನು ಸ್ಥಳಾಂತರಿಸಿದರು. ಅಲ್ಲದೇ ಅವರ ಹೊಸ ಐತಿಹಾಸಿಕ ಕ್ಷೇತ್ರಗಳನ್ನು ಆಳಿದರು.[೩೩]

ಯುರೋಪಿಯನ್‌ ಪರಿಶೋಧನೆ ಮತ್ತು ವಸಾಹತುಗಾರಿಕೆ

ವಿಲಿಯಂ ಹೆನ್ರಿ ಪೋವೆಲ್‌‌ನ (1823–1879) ಡಿಸ್ಕವರಿ ಆಫ್ ಮಿಸ್ಸಿಸ್ಸಿಪ್ಪಿ, ಇದು ಮಿಸಿಸಿಪ್ಪಿ ನದಿಯನ್ನು ಮೊದಲ ಬಾರಿಗೆ ನೋಡುತ್ತಿರುವ ಡಿ ಸೋಟೊನ ರಮ್ಯ ಚಿತ್ರಣವಾಗಿದೆ.ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಪಿಟಲ್ ಗೋಳಭವನದಲ್ಲಿ ತೂಗುಹಾಕಲಾಗಿದೆ.

ಆಗ 1492ರಲ್ಲಿ ಯುರೋಪಿಯನ್ನರು‌ ಅಮೆರಿಕಾವನ್ನು ಪರಿಶೋಧಿಸಿದ (ಕಂಡುಕೊಂಡ)ನಂತರ ಹಳೆಯ ಮತ್ತು ನವ ಜಗತ್ತುಗಳು ಹೇಗೆ ತಮ್ಮನ್ನು ತಾವು ಕಂಡುಕೊಂಡವು ಎಂಬುದನ್ನು ಸೂಚಿಸಿದವು. ಆದರೆ ವಿಜಯಿ ಜುನ್ ಪಾನ್ಸ್ ಡೆ ಲಿಯೊನ್ 1513 ರ ಏಪ್ರಿಲ್ ನಲ್ಲಿ ಲಾ ಫ್ಲೋರಿಡಾಗೆ ಬಂದಿಳಿದಾಗ ಅಮೆರಿಕನ್ ಡೀಪ್ ಸೌತ್ ನಲ್ಲಿ ಪ್ರಮುಖ ಸಂಪರ್ಕಗಳಲೊಂದು ಏರ್ಪಟ್ಟಿತು. ಅನಂತರ 1528 ರಲ್ಲಿ ಪ್ಯಾನ್ ಫಿಲ್ಲೊ ಡೆ ನ್ಯಾರ್ವೇಜ್ ಮತ್ತು 1539 ರಲ್ಲಿ ಹೆರ್ನ್ಯಾನ್ಡೊ ಡೆ ಸೊಟೊ ಗಳಂತಹ ಇತರ ಸ್ಪ್ಯಾನಿಷ್ ಪರಿಶೋಧಕರು ಪಾನ್ಸ್ ಡೆ ಲಿಯೊನ್ ನನ್ನು ಅನುಸರಿಸಿದರು. ಅನಂತರ ಉತ್ತರ ಅಮೆರಿಕಕ್ಕೆ ಬಂದಂತಹ ಯುರೋಪಿಯನ್‌ ವಸಾಹತುಗಾರರು, ಕ್ರೈಸ್ತ ನಾಗರಿಕತೆಯನ್ನು ಹರಡುವ ಮೂಲಕ ಅನಾಗರಿಕ ಮತ್ತು ಅಸಂಸ್ಕೃತ ವಿಶ್ವವನ್ನು ಕಾಪಾಡುತ್ತಾರೆ ಎಂಬ ಕಲ್ಪನೆಯೊಂದಿಗೆ ಸಾಮ್ರಾಜ್ಯದ ವಿಸ್ತರಣೆಗೆ ಮುಂದಾದರು.[೩೪]ಅಮೆರಿಕದ ಸ್ಪ್ಯಾನಿಷ್ ವಸಾಹತುಗಾರಿಕೆಯಲ್ಲಿ ಇಂಡಿಯನ್‌ ರಿಡಕ್ಷನ್ಸ್ ನೀತಿಯಿಂದಾಗಿ, ಉತ್ತರ ನ್ಯೂವೊ ಎಸ್ಪ್ಯಾನ್ ನಲ್ಲಿ, ಸ್ಥಳೀಯ ಜನರು ದೀರ್ಘಕಾಲದಿಂದ ಆಚರಿಸಿಕೊಂಡು ಬಂದ ಅವರ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಪ್ರದಾಯಗಳಿಂದ ದೂರಾಗುವಂತೆ, ಹಾಗು ತಮ್ಮದೇ ಆದ ಮತಧರ್ಮಶಾಸ್ತ್ರದ ನಂಬಿಕೆಗಳಿಂದ ಮತಾಂತರಗೊಳ್ಳುವಂತೆ ಅವರನ್ನು ಒತ್ತಾಯಿಸಲಾಯಿತು.

ಸ್ಥಳೀಯ ಜನರ ಮೇಲಾದ ಪರಿಣಾಮ

ಹೀಗೆ 16 ನೇ ಶತಮಾನದಿಂದ 19 ನೇ ಶತಮಾನದ ಮೂಲಕ ಸ್ಥಳೀಯ ಅಮೆರಿಕನ್ನರ ಜನಸಂಖ್ಯೆಯು ಕೆಳಕಂಡ ಕಾರಣಗಳಿಗಾಗಿ ಇಳಿಮುಖವಾಯಿತು: ಯುರೋಪ್ ನಿಂದ ಬಂದ ಸಾಂಕ್ರಾಮಿಕ ರೋಗ; ಯುರೋಪಿಯನ್‌ ಶೋಷಕರು, ವಸಾಹತುಗಾರರಿಂದ ನಡೆದ ನರಮೇಧ,ಜನಹತ್ಯೆ ಮತ್ತು ಬುಡಕಟ್ಟು ಜನಾಂಗದವರ ನಡುವೆ ನಡೆದ ಯುದ್ಧ[೩೫]; ಅವರ ಮೂಲ ವಾಸಸ್ಥಾನಗಳಿಂದ ಅವರನ್ನು ಸ್ಥಳಾಂತರಗೊಳಿಸಿದ್ದು; ಆಂತರಿಕ ಯುದ್ಧ,[೩೬] ಗುಲಾಮಗಿರಿ; ಮತ್ತು ಅಧಿಕ ಸಂಖ್ಯೆಯ ಅಂತರ್ವಿವಾಹಗಳು ಇತ್ಯಾದಿ.[೩೭][೩೮] ಬಹುಪಾಲು ಪ್ರಚಲಿತ ವಿದ್ವಾಂಸರು ಅನೇಕ ಸಹಾಯಕ ಅಂಶಗಳೊಳಗೆ, ಸಾಂಕ್ರಾಮಿಕ ರೋಗವು ಸ್ಥಳೀಯ ಅಮೆರಿಕನ್ನರ ಜನಸಂಖ್ಯೆಯಲ್ಲಿ ಕುಸಿತ ಉಂಟಾಗಲು ಮುಖ್ಯ ಕಾರಣವಾಗಿತ್ತು ಎಂದು ನಂಬುತ್ತಾರೆ. ಏಕೆಂದರೆ ಯುರೋಪ್ ನಿಂದ ಬಂದ ಹೊಸ ರೋಗವನ್ನು ತಡೆದುಕೊಳ್ಳಲು ಅವರಲ್ಲಿದ್ದ ರೋಗ ನಿರೋಧಕ ಶಕ್ತಿಯ ಕೊರತೆಯೇ ಕಾರಣವೆನ್ನುತ್ತಾರೆ.[೩೯][೪೦][೪೧] ಕೆಲವು ಜನಾಂಗಗಳ ಜನಸಂಖ್ಯೆಗಳಲ್ಲಿ ಉಂಟಾದ ಕ್ಷಿಪ್ರ ಕುಸಿತ, ಮತ್ತು ಅವರದೇ ರಾಷ್ಟ್ರಗಳ ನಡುವೆ ಮುಂದುವರೆಸಿದ ಪೈಪೋಟಿಯೊಂದಿಗೆ ಸ್ಥಳೀಯ ಅಮೆರಿಕನ್ನರು ಕೆಲವೊಮ್ಮೆ, ಫ್ಲೋರಿಡಾದ ಸೆಮಿನಾಲ್ಸ್ ಮತ್ತು ಆಲ್ಟಾ ಕ್ಯಾಲಿಫೋರ್ನಿಯಾದ ಮಿಷಿನ್ ಇಂಡಿಯನ್ನರಂತಹ ಹೊಸ ಸಾಂಸ್ಕೃತಿಕ ಗುಂಪುಗಳನ್ನು ರಚಿಸಲು ಪುನಃ ಸಂಘಟಿತವಾದರು.ಪ್ರಬಲ ಸಾಕ್ಷ್ಯಾಧಾರ ಅಥವಾ ಲಿಖಿತ ದಾಖಲೆಯ ಕೊರತೆಯಿಂದಾಗಿ, ಸ್ಥಳೀಯ ಅಮೆರಿಕನ್ನರ ಜನಸಂಖ್ಯೆಯನ್ನು, ಯುರೋಪಿಯನ್ ಪರಿಶೋಧಕರು ಮತ್ತು ವಸಾಹತುಗಾರರ ಆಗಮನದ ಮೊದಲು, ಅಮೆರಿಕಾದ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿದ್ದಂತಹ, ಜನರ ಸಂಖ್ಯೆ ಎಂದು ಅಂದಾಜುಮಾಡಲಾಗಿದೆ.ಈ ವಿಷಯವು ಇನ್ನೂ ಚರ್ಚೆಗೆ ಒಳಪಟ್ಟಿದೆ. ಮಾನವಶಾಸ್ತ್ರಜ್ಞ ಜೇಮ್ಸ್ ಮೂನಿಯವರು 1890 ರಲ್ಲಿ ಸುಮಾರು 1 ಮಿಲಿಯನ್ ಇದ್ದಿರಬಹುದೆಂದು ಮೊದಲ ಬಾರಿ ಅಂದಾಜುಮಾಡಿದ್ದರು. ಪ್ರತಿ ಸಾಂಸ್ಕೃತಿಕ ಪ್ರದೇಶದ ಜನಸಂಖ್ಯಾ ಸಾಂದ್ರತೆಯನ್ನು ಅವುಗಳ ಬದುಕುವ ಸಾಮರ್ಥ್ಯದ ಆಧಾರದ ಮೇಲೆ ಪರಿಗಣಿಸಲಾಗುವುದು.ನಂತರ 1965ರಲ್ಲಿ, ಅಮೆರಿಕನ್ ಮಾನವಶಾಸ್ತ್ರಜ್ಞರಾದ ಹೆನ್ರಿ ಡೊಬಾಯ್ಸ್ , ನಿಜವಾದ ಜನಸಂಖ್ಯೆ 10 ರಿಂದ 12 ಮಿಲಿಯನ್ ಇದ್ದಿರಬಹುದೆಂದು ಅಂದಾಜು ಮಾಡುವ ಮೂಲಕ ಆ ಕುರಿತ ಅಧ್ಯಯನಗಳನ್ನು ಪ್ರಕಟಿಸಿದರು. ಅದೇನೇ ಆದರೂ 1983ರ ಹೊತ್ತಿಗೆ ಅವರ ಅಂದಾಜನ್ನು, 18 ಮಿಲಿಯನ್ ಗೆ ಏರಿಸಿದರು.[೪೨] ಅವರು, ಯುರೋಪಿಯನ್‌ ಪರಿಶೋಧಕರು ಮತ್ತು ವಸಾಹತುಗಾರರಿಂದ ಪಸರಿಸಿದ ಸಾಂಕ್ರಾಮಿಕ ರೋಗ ದ ಎದುರು ಸಹಜವಾದ ರೋಗ ನಿರೋಧಕ ಶಕ್ತಿ ಇಲ್ಲದೇ ಮೃತಪಟ್ಟ ಸ್ಥಳೀಯ ಅಮೆರಿಕನ್ನರ ಮರಣ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರು. ಡೊಬೈನ್ಸ, ನಿಜವಾದ ಜನಸಂಖ್ಯೆಯ ನಿರೀಕ್ಷಿಸಬಹುದಾದ ಪ್ರಮಾಣವನ್ನು ಲೆಕ್ಕಹಾಕಲು, ಸ್ಥಳೀಯ ಜನರಲ್ಲಿ ಈ ಕಾಯಿಲೆಯ ಮರಣ ಪ್ರಮಾಣವನ್ನು, 19 ನೇ ಶತಮಾನದ ವಿಶ್ವಸನೀಯ ಜನಸಂಖ್ಯಾ ದಾಖಲೆಯೊಂದಿಗೆ ಸೇರಿಸಿದ್ದಾರೆ.[೪][೫]ಈ ಸಮಯದಲ್ಲಿ ಸೀತಾಳೆ ಸಿಡುಬು ಮತ್ತು ದಡಾರ, ಸ್ಥಳೀಯವಾಗಿದ್ದರೂ ಕೂಡ ಯುರೋಪಿಯನ್ನರಿಗೆ ಹೆಚ್ಚು ಮಾರಕವಾಗಿರಲಿಲ್ಲ (ಏಷ್ಯಾದಿಂದ ಪರಿಚಯಿಸಿದ ಅನೇಕ ವರ್ಷಗಳ ನಂತರ), ಆದರೆ ಅವು ಸ್ಥಳೀಯ ಅಮೆರಿಕನ್ನರಿಗೆ ಮಾರಕವಾಗಿದ್ದವೆಂಬುದು ಸಾಬೀತಾಗಿದೆ. ವಿಶೇಷವಾಗಿ ಸೀತಾಳೆ ಸ್ಥಳೀಯ ಅಮೆರಿಕನ್ನರಿಗೆ ಮಾರಕವಾಗಿತ್ತೆಂದು ಸಾಬೀತಾಗಿದೆ.[೪೩] ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಯುರೋಪಿಯನ್‌ ಪರಿಶೋಧನೆಯ ನಂತರ ಬರುತ್ತಿದ್ದವು. ಅಲ್ಲದೇ ಕೆಲವೊಮ್ಮೆ ಸಂಪೂರ್ಣ ಹಳ್ಳಿಯ ಜನರನ್ನೆಲ್ಲಾ ನಾಶ ಮಾಡಿಬಿಡುತ್ತಿದ್ದವು. ಖಚಿತವಾಗಿ ಮರಣ ಪ್ರಮಾಣದ ಅಂದಾಜನ್ನು ನಿರ್ಧರಿಸಲಾಗದಿದ್ದಾಗ ಕೆಲವು ಇತಿಹಾಸತಜ್ಞರು, ಮೊದಲ ಸಂಪರ್ಕದ ನಂತರ ಯುರೇಷಿಯನ್ ಸಾಂಕ್ರಾಮಿಕ ರೋಗದಿಂದಾಗಿ 80ಪ್ರತಿಶತದಷ್ಟು ಕೆಲವು ಸ್ಥಳೀಯ ಜನಸಮೂಹ ಮರಣಕ್ಕೆ ತುತ್ತಾಯಿತು, ಎಂದು ಅಂದಾಜುಮಾಡಿದ್ದಾರೆ.[೪೪] ಕೊಲಂಬಿಯನ್ ವಿನಿಮಯದ ಒಂದು ಸಿದ್ಧಾಂತವು, ಕ್ರಿಸ್ಟೊಫರ್ ಕೊಲಂಬಸ್ ನ ಪರಿಶೋಧನೆಯಿಂದ ಬಂದ ಕೆಲವು ಪರಿಶೋಧಕರು ಸ್ಥಳೀಯ ಜನರಿಂದ ಮೇಹರೋಗ ವನ್ನು (ಚರ್ಮರೋಗ) ಸೋಂಕಿಸಿಕೊಂಡು ಯುರೋಪ್ ಗೂ ಕೊಂಡೊಯ್ದರು. ಅಲ್ಲಿ ಅದು ವ್ಯಾಪಕವಾಗಿ ಹರಡಿತು.[೪೫] ಕೊಲಂಬಸ್ ಮತ್ತು ಆತನ ಸಹಚರರು ಅಮೆರಿಕಾದ ಸ್ಥಳಿಯ ಜನರ ಬಳಿಗೆ ಹೊರಗಿನಿಂದ ಮರಳಿ ಬರುವ ಮೊದಲೇ, ಯುರೋಪ್ ಮತ್ತು ಏಷ್ಯಾದಲ್ಲಿ ರೋಗವು ಅಸ್ತಿತ್ವದಲ್ಲಿತ್ತೆಂದು ಇತರ ಸಂಶೋಧಕರು ನಂಬುತ್ತಾರೆ. ಆದರೆ ಅವರು ಅದನ್ನು ಹೆಚ್ಚು ವಿಷಪೂರಿತ ರೂಪದಲ್ಲಿ ಹಿಂದಕ್ಕೆ ತಂದರು. (ಮೇಹ ರೋಗ ನೋಡಿ .)ಹೀಗೆ 1618–1619 ರಲ್ಲಿ, ಸೀತಾಳೆ 90 ಪ್ರತಿಶತದಷ್ಟು ಮ್ಯಾಸಚುಸೆಟ್ಟ್ಸ್ ಕೊಲ್ಲಿಯ ಸ್ಥಳೀಯ ಅಮೆರಿಕನ್ನರನ್ನು ನಾಶಮಾಡಿತು.[೪೬] ಇತಿಹಾಸಗಾರರು, ಇಂದಿನ ನ್ಯೂಯಾರ್ಕ್ ನಲ್ಲಿದ್ದ ಅನೇಕ ಮೊಹಾಕ್ ಸ್ಥಳೀಯ ಅಮೆರಿಕನ್ನರು, 1634 ರಲ್ಲಿ ಆಲ್ ಬೆನಿಯಲ್ಲಿ ಡಚ್ ವ್ಯಾಪಾರಿಗಳ ಮಕ್ಕಳೊಂದಿಗೆ ಸಂಪರ್ಕಕ್ಕೆ ಬಂದ ನಂತರ ರೋಗ ಪೀಡಿತರಾದರು. ರೋಗವು ಮೊಹಾಕ್ ಹಳ್ಳಿಗಳಿಂದ ವೇಗವಾಗಿ ಪಸರಿಸಿ 1636 ರ ಹೊತ್ತಿಗೆ ಲೇಕ್ ಆನ್ ಟಾರಿಯೊನಲ್ಲಿದ್ದ ಸ್ಥಳೀಯ ಅಮೆರಿಕನ್ನರನ್ನು ಮತ್ತು 1679 ರ ಹೊತ್ತಿಗೆ ಪಶ್ಚಿಮ ಇರೊಕ್ವಿಯನ್ನರನ್ನು ತಲುಪಿತು. ಇದು ಪ್ರವಾಸ ಮತ್ತು ವ್ಯಾಪಾರಕ್ಕಾಗಿ ಹೊರಹೋದ ಮೊಹಾಕ್ ಮತ್ತು ಇತರ ಸ್ಥಳೀಯ ಅಮೆರಿಕನ್ನರಿಂದ ಹರಡಿತ್ತು.[೪೭] ಅಧಿಕ ಮರಣ ಸಂಖ್ಯೆಯಿಂದಾಗಿ, ಸ್ಥಳೀಯ ಅಮೆರಿಕನ್ ಸಮಾಜಗಳಲ್ಲಿ ಆರೋಗ್ಯದ ಸ್ಥಿತಿ ನಾಶವಾಯಿತು. ಅಲ್ಲದೇ ಪೀಳಿಗೆಗಳ ಸಾಂಸ್ಕೃತಿಕ ವಿನಿಮಯಕ್ಕೆ ತಡೆಯುಂಟಾಯಿತು.

ಒಂದು ಕರ್ಮಾಚರಣೆ ಅಗ್ನಿಯ ಸುತ್ತ ಸೇರಿದ ಫ್ರೆಂಚ್ ಮತ್ತು ಇಂಡಿಯನ್‌ ಮುಖಂಡರ ಸಭೆ.

ಈ ಹಿಂದೆ 1754 ರಿಂದ 1763 ರ ನಡುವೆ ಅನೇಕ ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗದವರು, ಫ್ರೆಂಚ್ ಪಡೆಯೊಂದಿಗೆ ಬ್ರಿಟಿಷ್ ವಸಾಹತು ಸೈನಿಕಪಡೆಯ ವಿರುದ್ಧ ನಡೆದ ಫ್ರೆಂಚ್ ಮತ್ತು ಇಂಡಿಯನ್‌ ಯುದ್ಧ/ಏಳು ವರ್ಷಗಳ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಅಮೆರಿಕನ್ನರು ಯುದ್ಧದ ಎರಡೂ ಕಡೆಗಳಲ್ಲಿಯೂ ಹೋರಾಟಮಾಡಿದರು. ಬುಡಕಟ್ಟು ಜನಾಂಗದವರು ಯುರೋಪಿಯನ್ ವಿಸ್ತರಣೆ ತಡೆಗಟ್ಟುವ ಭರವಸೆಯಲ್ಲಿ ಫ್ರೆಂಚ್ ನೊಂದಿಗೆ ಅಧಿಕ ಸಂಖ್ಯೆಯಲ್ಲಿ ಒಟ್ಟಾಗಿ ಹೋರಾಡಿದರು. ಬ್ರಿಟಿಷರು ಕೆಲವು ಮೈತ್ರಿಗಳನ್ನು ಮಾಡಿಕೊಂಡರು. ಆದರೆ ಒಪ್ಪಂದಗಳಿಗೆ ಬೆಂಬಲ ನೀಡುವಲ್ಲಿ ಹೊಂದಾಣಿಕೆ ಮತ್ತು ನಿಷ್ಠೆಯನ್ನು ತೋರಿಸುವಂತೆ ಕೆಲವು ಬುಡಕಟ್ಟು ಜನಾಂಗದವರನ್ನು ಕೋರಿದರು. ಆದರೆ ಅನಂತರ ಇವು ಬುಡಮೇಲಾದಾಗ ಅವರು ನಿರಾಶರಾದರು. ಇದರ ಜೊತೆಯಲ್ಲಿ ಯುರೋಪಿಯನ್‌ ಶಕ್ತಿಗಳೊಂದಿಗೆ ಅವರ ಮೈತ್ರಿಯನ್ನು ಬಳಸಿಕೊಂಡು ಸಾಂಪ್ರದಾಯಿಕ ಸ್ಥಳೀಯ ಶತ್ರುಗಳೊಂದಿಗೆ, ಹೋರಾಡಲು ಬುಡಕಟ್ಟು ಜನಾಂಗದವರು ಅವರದೇ ಆದ ಉದ್ದೇಶಗಳನ್ನು ಹೊಂದಿದ್ದರು.

ಆದರೆ

ಕುಕ್ 1978ರ ಪ್ರಕಾರ ಸ್ಥಳೀಯ ಕ್ಯಾಲಿಫೋರ್ನಿಯಾದ ಜನಸಂಖ್ಯೆ.

1770 ರಲ್ಲಿ ಯುರೋಪಿಯನ್ ಪರಿಶೋಧಕರು ಪಶ್ಚಿಮ ಕರಾವಳಿಯನ್ನು ತಲುಪಿದ ನಂತರ, ಸೀತಾಳೆ ಕ್ಷಿಪ್ರವಾಗಿ ವಾಯವ್ಯ ಕರಾವಳಿಯ 30 ಪ್ರತಿಶತದಷ್ಟು ಸ್ಥಳೀಯ ಅಮೆರಿಕನ್ ರನ್ನು ಬಲಿತೆಗೆದುಕೊಂಡಿತ್ತು. ಮುಂದಿನ 80 ರಿಂದ 100 ವರ್ಷಗಳಲ್ಲಿ ಸೀತಾಳೆ ಮತ್ತು ಇತರ ರೋಗಗಳು ಈ ಪ್ರದೇಶದಲ್ಲಿ ಸ್ಥಳೀಯ ಜನರನ್ನು ಬಲಿತೆಗೆದುಕೊಂಡವು.[೪೮] ಪುಜೆಟ್ ಸೌಂಡ್ ಪ್ರದೇಶದಲ್ಲಿ ಒಮ್ಮೆ 37,000 ಸಾವಿರ ಜನರಿದ್ದರೆಂದು ಇದು ಅಧಿಕ ಜನಸಂಖ್ಯೆಯೆಂದೂ ಅಂದಾಜು ಮಾಡಲಾಗಿತ್ತು, ಆದರೆ ಈ ಪ್ರಮಾಣ 19 ನೇ ಶತಮಾನದ ಮಧ್ಯಾವಧಿಯಲ್ಲಿ ವಸಾಹತುಗಾರರು ಒಟ್ಟಾಗಿ , ಸಮೂದಾಯವಾಗಿ ಆಗಮಿಸಿದ ಸಮಯದಲ್ಲಿ ಕೇವಲ 9,000 ಕ್ಕೆ ಇಳಿದಿತ್ತು.[೪೯] ಕ್ಯಾಲಿಫೋರ್ನಿಯಾದಲ್ಲಿ ಸ್ಪ್ಯಾನಿಷ್ ಆಯೋಗವು,ಸ್ಥಳೀಯ ಅಮೆರಿಕನ್ ಕ್ಯಾಲಿಫೋರ್ನಿಯನ್ನರ ಜನಸಂಖ್ಯೆಯ ಮೇಲೆ ಗಮನಾರ್ಹ ಪರಿಣಾಮ ಬೀರದಿದ್ದರೂ ಕೂಡ, ಕ್ಯಾಲಿಫೋರ್ನಿಯಾದಲ್ಲಿ ಸ್ಪ್ಯಾನಿಷ್ ವಸಾಹತುಗಳು ಕಾಣಿಸಿಕೊಂಡ ನಂತರ ಅವರ ಜನಸಂಖ್ಯೆಯಲ್ಲಿ ಕುಸಿತ ಕಾಣಿಸಿತು. ಅದರಲ್ಲೂ ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧ ಮತ್ತು 20 ನೇ ಶತಮಾನದ ಪ್ರಾರಂಭದಲ್ಲಿ ಭಾರೀ ಮಟ್ಟದ ಕುಸಿತ ಕಾಣಬಹುದಾಗಿದೆ.(ಬಲ ಬದಿಯ ಕೋಷ್ಠಕ ನೋಡಿ).

ಅನಂತರದ 1780–1782 ರಲ್ಲಿ ಮತ್ತು 1837–1838ರಲ್ಲಿ ಬಂದ ಸೀತಾಳೆ ಸಾಂಕ್ರಾಮಿಕ ರೋಗವು ಪ್ಲೇನ್ಸ್ ಇಂಡಿಯನ್ನರ ತೀವ್ರ ನಿರ್ಜನೀಕರಣ ಮತ್ತು ಹಾನಿಗೆ ಕಾರಣವಾಯಿತು.[೫೦][೫೧] ಅದಲ್ಲದೇ 1832ರ ಹೊತ್ತಿಗೆ, ಸಂಯುಕ್ತ ಸರ್ಕಾರವು ಸ್ಥಳೀಯ ಅಮೆರಿಕನ್ನರಿಗಾಗಿ (1832 ರ ಇಂಡಿಯನ್ ಚುಚ್ಚುಮದ್ದಿನ ಕಾಯ್ದೆ ) ಸೀತಾಳೆ ಸಿಡುಬು ಚುಚ್ಚುಮದ್ದಿನ ಮೂಲಕ ನಿವಾರಣಾ ಕಾರ್ಯಕ್ರಮವನ್ನು ಆಯೋಜಿಸಿತು. ಇದು ಸ್ಥಳೀಯ ಅಮೆರಿಕನ್ನರ ಆರೋಗ್ಯ ಸಮಸ್ಯೆಗಾಗಿ ಫೆಡರಲ್ ಸರ್ಕಾರ ಹಮ್ಮಿಕೊಂಡ ಮೊದಲ ಕಾರ್ಯಕ್ರಮವಾಗಿದೆ.[೫೨][೫೩]

ಪ್ರಾಣಿಗಳ ಪರಿಚಯ

ಎರಡು ಜಗತ್ತುಗಳ ಸಮ್ಮಿಲನದೊಂದಿಗೆ ಪ್ರಾಣಿಗಳು, ಕೀಟಗಳು ಮತ್ತು ಸಸ್ಯಗಳನ್ನು ಎರಡರ ನಡುವೆ ವಿನಿಮಯ ಮಾಡಿಕೊಳ್ಳಲಾಯಿತು. ಹಳೆಯ ಜಗತ್ತಿನ ಪ್ರಾಣಿಗಳಾದ ಕುರಿ, ಹಂದಿ ಮತ್ತು ಪಶುಗಳನ್ನು ಸಮಕಾಲೀನ ಸ್ಥಳೀಯ ಅಮೆರಿಕನ್ನರಿಗೆ ಪರಿಚಯಿಸಲಾಯಿತು. ಇಂತಹ ಪ್ರಾಣಿಗಳು ಅವರಿಗೆ ಗೊತ್ತಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]ಆದರೆ 16ನೇ ಶತಮಾನದಲ್ಲಿ ಸ್ಪ್ಯೇನ್ ನವರು ಮತ್ತು ಇತರ ಯುರೋಪಿಯನ್ನರು ಅಮೆರಿಕಾಕ್ಕೆ ಕುದುರೆಗಳನ್ನು ತಂದರು.[ಸೂಕ್ತ ಉಲ್ಲೇಖನ ಬೇಕು] ಹಿಂದಿನ ಅಮೆರಿಕನ್‌ ಕುದರೆಯನ್ನು ಭೂಖಂಡದಲ್ಲಿದ ಪ್ರಾಚೀನ ಮಾನವರು ಕ್ರೀಡೆಗಾಗಿ ಬಳಸುತ್ತಿದ್ದರು. ಇವುಗಳನ್ನು ಕೊನೆಯ ಹಿಮಶಿಲಾಯುಗ ಕೊನೆಗೊಂಡ ಕೆಲವೇ ವರ್ಷಗಳ ನಂತರ ಬೇಟೆಯಾಡಿ ಸುಮಾರು 7000 BC ಯ ಹೊತ್ತಿಗೆ ನಾಶ ಮಾಡಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಸ್ಥಳೀಯ ಅಮೆರಿಕನ್ನರಿಗೆ ಕುದುರೆಗಳನ್ನು ಪುನಃ ಪರಿಚಯಿಸಿದ್ದರಿಂದ ಲಾಭವಾಯಿತು.[ಸೂಕ್ತ ಉಲ್ಲೇಖನ ಬೇಕು] ಅವರು ಪ್ರಾಣಿಗಳನ್ನು ಬಳಸಲು ಪ್ರಾರಂಭಿಸಿದಂತೆ, ಅವರ ಸಂಸ್ಕೃತಿಯನ್ನು ವಾಸ್ತವಿಕ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಪ್ರಾರಂಭಿಸಿದರು. ಅದರಲ್ಲೂ ವಿಶೇಷವಾಗಿ ಅವರ ವಲಯಗಳನ್ನು ವಿಸ್ತರಿಸುವ ಮೂಲಕ ಅವರ ಸಂಸ್ಕೃತಿಯನ್ನು ಬದಲಾಯಿಸಲು ಆರಂಭಿಸಿದರು.[ಸೂಕ್ತ ಉಲ್ಲೇಖನ ಬೇಕು] ಕೆಲವು ಕುದುರೆಗಳು ಅಲ್ಲಿಂದ ಓಡಿ ಹೋದವು, ಹಾಗು ಕೆಲವುಗಳನ್ನು ಸಾಕಲಾಯಿತು. ಅಲ್ಲದೇ ವ್ಯಾಪಕವಾಗಿ ಅವುಗಳ ಸಂಖ್ಯೆಯನ್ನೂ ಹೆಚ್ಚಿಸಲಾಯಿತು.ಉತ್ತರ ಅಮೆರಿಕಕ್ಕೆ ಕುದುರೆಯನ್ನು ಪುನಃ ಪರಿಚಯಿಸಿದ್ದು, ಗ್ರೇಟ್ ಪ್ಲೇನ್ ನಲ್ಲಿದ್ದ ಸ್ಥಳೀಯ ಅಮೆರಿಕನ್ ಸಂಸ್ಕೃತಿಯ ಮೇಲೆ ಗಮನಾರ್ಹ ಪರಿಣಾಮ ಬೀರಿತು. ಬುಡಕಟ್ಟು ಜನಾಂಗದವರು ಕುದುರೆಗಳನ್ನು ಬಳಸಲು ಕಲಿತರು. ಅಲ್ಲದೇ ಅವುಗಳನ್ನು ಸವಾರಿ ಮಾಡಲು ಮತ್ತು ಮೂಟೆಗಳನ್ನು ಸಾಗಿಸಲು ಅಥವಾ ಹೊರೆಬಂಡಿಯನ್ನು ಎಳೆಯಲು ಬಳಸಿದರು. ಜನರು ಅವರ ಸಮಾಜಕ್ಕಾಗಿ ಮತ್ತು ಅವರ ಪ್ರಾಂತ್ಯಗಳನ್ನು ವಿಸ್ತರಿಸುವುದಕ್ಕಾಗಿ ಸಂಪೂರ್ಣವಾಗಿ ಕುದುರೆಯ ಬಳಕೆಯನ್ನು ಸಂಘಟಿಸಿದರು. ಅವರು ನೆರೆಹೊರೆಯ ಬುಡಕಟ್ಟು ಜನಾಂಗದವರೊಂದಿಗೆ ವಿನಿಮಯಕ್ಕಾಗಿ ಸರಕು ಸಾಮಾನುಗಳನ್ನು ಸಾಗಿಸಲು ಕುದುರೆಯನ್ನು ಬಳಸುತ್ತಿದ್ದರು. ಅಲ್ಲದೇ ಬೇಟೆ ಆಟಕ್ಕಾಗಿ ಅದರಲ್ಲೂ ವಿಶೇಷವಾಗಿ, ಕಾಡೆಮ್ಮೆಯನ್ನು ಬೇಟೆಯಾಡಲು, ಮತ್ತು ಯುದ್ಧ ಮಾಡಲು ಹಾಗು ಕುದುರೆ ಸವಾರಿಗಾಗಿ ಬಳಸುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು]

ಸ್ವತಂತ್ರಕ್ಕಾಗಿ ಬುನಾದಿ

1827ರಲ್ಲಿ ಚಿತ್ರಿಸಿದ ಬೆಂಜಮಿನ್ ವೆಸ್ಟ್‌ರ ಟ್ರೀಟಿ ಆಫ್ ಪೆನ್ನ್ ವಿತ್ ಇಂಡಿಯನ್ಸ್

ಕೆಲವು ಯುರೋಪಿಯನ್ನರು, ಸ್ಥಳೀಯ ಅಮೆರಿಕನ್ ಸಮುದಾಯಗಳನ್ನು ಸುವರ್ಣ ಯುಗದ ಪ್ರತಿನಿಧಿಗಳೆಂದು ಪರಿಗಣಿಸುತ್ತಿದ್ದರು ಎಂಬುದು ಕೇವಲ ಜನಪದ ಇತಿಹಾಸದಿಂದ ಅವರಿಗೆ ತಿಳಿದಿದೆ.[೫೪] ರಾಜಕೀಯ ಸಿದ್ಧಾಂತಿ ಜೀನ್ ಜ್ಯಾಕ್ಯೂಸ್ ರೊಸ್ಸೆಯೊ, ಸ್ವತಂತ್ರದ ಆಲೋಚನೆ ಮತ್ತು ಪ್ರಜಾಪ್ರಭುತ್ವದ ಆದರ್ಶಗಳು ಅಮೆರಿಕಾದಲ್ಲಿ ಹುಟ್ಟಿದವು, ಏಕೆಂದರೆ ಯುರೋಪಿಯನ್ನರು "ಕೇವಲ ಅಮೆರಿಕಾದಲ್ಲಿ ಮಾತ್ರ" 1500 ರಿಂದ 1776 ರ ವರೆಗೆ "ನಿಜವಾಗಿ ಸ್ವತಂತ್ರವಾಗಿದ್ದ" ಸಮುದಾಯಗಳನ್ನು ನೋಡಿದ್ದರು ಎಂದು ಅವರು ಬರೆದಿದ್ದಾರೆ.[೫೪]

Natural freedom is the only object of the policy of the [Native Americans]; with this freedom do nature and climate rule alone amongst them ... [Native Americans] maintain their freedom and find abundant nourishment... [and are] people who live without laws, without police, without religion.

—Jean Jacques Rousseau, Jesuit and Savage in New France[೫೪]

ಇರೊಕ್ವಾಯ್ಸ್ ರಾಷ್ಟ್ರಗಳ ರಾಜಕೀಯ ಒಕ್ಕೂಟ ಮತ್ತು ಪ್ರಜಾಪ್ರಭುತ್ವ ಸರ್ಕಾರವು, ಆರ್ಟಿಕಲ್ಸ್ ಆಫ್ ಕನ್ ಫೆಡರೇಷನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನದ ಮೇಲೆ ಪ್ರಭಾವ ಬೀರಿವೆ, ಎಂದು ನಂಬಲಾಗಿವೆ.[೫೫][೫೬] ಅಸ್ತಿತ್ವದಲ್ಲಿರುವ ಸ್ಥಳೀಯ ಅಮೆರಿಕನ್‌ ಸರ್ಕಾರದ ಮಾದರಿಗಳಿಂದ, ವಸಾಹತುಗಾರರು ಎಷ್ಟರ ಮಟ್ಟಿಗೆ ಎರವಲು ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಇತಿಹಾಸತಜ್ಞರು ಚರ್ಚಿಸಿದ್ದಾರೆ. ಬುನಾದಿಯನ್ನು ನಿರ್ಮಿಸಿದ ಅನೇಕ ಹಿರಿಯರು ಸ್ಥಳೀಯ ಅಮೆರಿಕನ್‌ ನಾಯಕರನ್ನು ಸಂಪರ್ಕಿಸಿ, ಅವರ ಸರ್ಕಾರದ ಶೈಲಿಗಳ ಬಗ್ಗೆ ಕಲಿತುಕೊಂಡಿದ್ದರು. ಥಾಮಸ್ ಜೆಫರ್ ಸನ್ ಮತ್ತು ಬೆಂಜಮಿನ್ ಫ್ರಾಂಕ್ಲಿನ್ ನಂತಹ ಪ್ರಮುಖರು, ನ್ಯೂಯಾರ್ಕ್ ನಲ್ಲಿರುವ ಇರೊಕ್ವಾಯ್ಸ್ ಒಕ್ಕೂಟದ ನಾಯಕರೊಂದಿಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದ ಜಾನ್ ರುಟ್ಲೆಡ್ಜ್, ಇತರ ರಚನಕಾರರಿಗಾಗಿ, ಇರೊಕ್ವಿಯನ್ ಕಾನೂನಿನ "ನಾವು, ಜನರು, ಒಕ್ಕೂಟ ರಚನೆ, ಶಾಂತಿ, ಸಮಾನತೆ, ಮತ್ತು ನೀತಿನಿಯಮ ಪ್ರತಿಷ್ಠಾಪನೆಗೆ..." ಎಂಬ ಪದಗಳೊಂದಿಗೆ ಆರಂಭಿಸಿ ದೀರ್ಘ ಲೇಖನಕ್ಕೆ ಮಾರು ಹೋಗಿದ್ದಾರೆ, ಎಂದು ಹೇಳಲಾಗುತ್ತದೆ.[೫೭]

"As powerful, dense [Mound Builder] populations were reduced to weakened, scattered remnants, political readjustments were necessary. New confederacies were formed. One such was to become a pattern called up by Benjamin Franklin when the thirteen colonies struggled to confederate: 'If the Iroquois can do it so can we,' he said in substance."

—Bob Ferguson, Choctaw Government to 1830[೫೮]

ಇತ್ತೀಚಿಗೆ 1988 ರ ಅಕ್ಟೋಬರ್ ನಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್, ಸಮಾನಹಕ್ಕಿನ ಸಂಕಲ್ಪ 331 ಅನ್ನು ಜಾರಿಗೆ ತಂದಿತು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ, ಸಂವಿಧಾನದ ಮತ್ತು ಹಕ್ಕುಗಳ ಮಸೂದೆಯ ಮೇಲೆ ಇರೊಕ್ವಾಯ್ಸ್ ಸಂವಿಧಾನದ ಪ್ರಭಾವವನ್ನು ಗುರುತಿಸಲು ಜಾರಿಗೆ ತರಲಾಯಿತು.[೫೯] ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನಾತ್ಮಕ ಚರ್ಚಾ ದಾಖಲೆಗಳಲ್ಲಿ ಪ್ರಜಾಪ್ರಭುತ್ವದ ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂಸ್ಥೆಗಳಲ್ಲಿರುವ ಸಾಕ್ಷಿಯ ಕೊರತೆಯಿಂದಾಗಿ, ಇರೊಕ್ವಾಯ್ಸ್ ನ ಪ್ರಭಾವವಿಲ್ಲವೆಂದು ವಾದಿಸುವವರು ಯುರೋಪಿಯನ್‌ ಆಲೋಚನೆಗಳಲ್ಲಿ ವ್ಯಾಪಕವಾದ ಹಿಂದಿನ ಪ್ರಭಾವಳಿಯನ್ನು ಹೊಂದಿದ್ದಾರೆ.[೬೦]

ವಸಾಹತಿಗರ ಪ್ರತಿಭಟನೆ

1734ರ ಜುಲೈ‌ನಲ್ಲಿ ಯಾಮಕ್ರಾವ್ ಕ್ರೀಕ್ ಸ್ಥಳೀಯ ಅಮೆರಿಕನ್ನರು ಇಂಗ್ಲೆಂಡ್‌ನ ಜಾರ್ಜಿಯಾದ ವಸಾಹತಿನ ಟ್ರಸ್ಟಿಯೊಂದಿಗೆ ಮಾಡಿದ ಭೇಟಿ.ಈ ವರ್ಣಚಿತ್ರವು ಒಬ್ಬ ಸ್ಥಳೀಯ ಅಮೆರಿಕನ್‌ ಹುಡುಗ (ನೀಲಿ ಕೋಟಿನಲ್ಲಿ) ಮತ್ತು ಮಹಿಳೆಯೊಬ್ಬಳು (ಕೆಂಪು ಪೋಷಾಕಿನಲ್ಲಿ) ಯುರೋಪಿಯನ್‌ ಉಡುಪಿನಲ್ಲಿರುವುದನ್ನು ತೋರಿಸುತ್ತದೆ.

ಅಮೆರಿಕನ್ ಕ್ರಾಂತಿಯ ಸಂದರ್ಭದಲ್ಲಿ, ಹೊಸದಾಗಿ ಘೋಷಿಸಲಾದ ಅಮೆರಿಕಾ ಸಂಯುಕ್ತ ಸಂಸ್ಥಾನ, ಮಿಸಿಸಿಪ್ಪಿ ನದಿಯ ಪೂರ್ವದಲ್ಲಿರುವ ಸ್ಥಳೀಯ ಅಮೆರಿಕನ್ ರಾಷ್ಟ್ರಗಳ ಸ್ವಾಮಿನಿಷ್ಠೆಗಾಗಿ ಬ್ರಿಟಿಷರೊಂದಿಗೆ ಹೋರಾಡಿತು. ಈ ಹೋರಾಟದಲ್ಲಿ ಬ್ರಿಟಿಷರ ಪರವಾಗಿದ್ದ ಬಹುಪಾಲು ಸ್ಥಳೀಯ ಅಮೆರಿಕನ್ನರು, ಸ್ಥಳೀಯ ಅಮೆರಿಕನ್ ಪ್ರದೇಶದಲ್ಲಿ ವಸಾಹತುಗಳ ವಿಸ್ತರಣೆಯನ್ನು ತಾತ್ಕಾಲಿಕವಾಗಿ ತಡೆಯಲು, ಅಮೆರಿಕನ್ ಕ್ರಾಂತಿಕಾರಿ ಯುದ್ಧ ತಂತ್ರ ಬಳಸಲು ಯೋಜಿಸಿದರು. ಅನೇಕ ಸ್ಥಳೀಯ ಸಮುದಾಯಗಳು ಯುದ್ಧದಲ್ಲಿ ಯಾರ ಪರವಹಿಸಬೇಕೆಂಬುದರ ಮೇಲೆ ವಿಭಜಿಸಲ್ಪಟ್ಟವು. ಲೆನ್ಯಾಪೆ, ಹೊಸ ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದಂತಹ ಮೊದಲ ಸ್ಥಳೀಯ ಸಮುದಾಯವಾಗಿದೆ. ಇರೊಕ್ವಾಯ್ಸ್ ಒಕ್ಕೂಟಕ್ಕಾಗಿ, ಅಮೆರಿಕನ್ ಕ್ರಾಂತಿ ಆಂತರಿಕ ಯುದ್ಧವಾಗಿ ಮಾರ್ಪಟ್ಟಿತು. ಕೇವಲ ಇರೊಕ್ವಾಯ್ಸ್ ಬುಡಕಟ್ಟು ಜನಾಂಗದವರು ಮಾತ್ರ ಒನ್ ಐಡಾ ಮತ್ತು ತುಸ್ಕರೊರಾ ದಲ್ಲಿದ್ದ ವಸಾಹತಿಗರ ಜೊತೆಗೂಡಿದರು.ಅಮೆರಿಕನ್ ಕ್ರಾಂತಿಯ ಸಂದರ್ಭದಲ್ಲಿ ನಡೆದ ಗಡಿನಾಡಿನವರ ಯುದ್ಧವು, ಅತ್ಯಂತ ಕ್ರೂರವಾಗಿತ್ತು. ಅಲ್ಲದೇ ವಸಾಹತುಗಾರರು ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರಂತವರು ಅನೇಕ ದುಷ್ಕೃತ್ಯಗಳನ್ನು ಎಸಗಿದರು. ಯೋಧರಲ್ಲದವರೂ ಯುದ್ಧದ ಸಮಯದಲ್ಲಿ ತೀವ್ರವಾಗಿ ನರಳಿದರು. ಮೊಹಾಕ್ ಕಣಿವೆ ಮತ್ತು ಪಶ್ಚಿಮ ನ್ಯೂಯಾರ್ಕ್ ನ ಮೇಲೆ ನಿರಂತರ ದಾಳಿ ನಡೆಸಿ, ಅಲ್ಲಿನ ಜನರ ಯುದ್ಧ ಸಾಮರ್ಥ್ಯವನ್ನು ಕುಂದಿಸಿದಂತೆ, ಎರಡು ಕಡೆಗಳು ನಡೆಸಿದ ಸೈನಿಕ ಕಾರ್ಯಾಚರಣೆಗಳು, ಜನರ ಹೋರಾಟದ ಶಕ್ತಿಯನ್ನು ಕುಂದಿಸಲು ಹಳ್ಳಿಗಳನ್ನು ಮತ್ತು ಆಹಾರ ದೊರೆಯುವ ಮೂಲಗಳನ್ನು ನಾಶ ಮಾಡಿದವು.[೬೧] ಆಗ 1779 ರ ಸುಲಿವ್ಯಾನ್ ಸೈನಿಕ ಕಾರ್ಯಚರಣೆಯು, ಎಲ್ಲಾ ಸೈನಿಕ ಕಾರ್ಯಾಚರಣೆಗಳಲ್ಲಿ ಅತ್ಯಂತ ದೊಡ್ಡದಾಗಿದೆ. ಇದರಲ್ಲಿ ಅಮೆರಿಕನ್ ವಸಾಹತು ಸೈನ್ಯಗಳು, ಅಪ್ ಸ್ಟೇಟ್ ನ್ಯೂಯಾರ್ಕ್ ನಲ್ಲಿ ಇರೊಕ್ವಾಯ್ ಗಳ ದಾಳಿಯನ್ನು ಹತ್ತಿಕ್ಕಲು, 40 ಕ್ಕಿಂತ ಹೆಚ್ಚು ಇರೊಕ್ವಾಯ್ಸ್ ಹಳ್ಳಿಗಳನ್ನು ನಾಶ ಮಾಡಿದವು. ಸೈನಿಕ ಕಾರ್ಯಾಚರಣೆಯು ಉದ್ದೇಶಿತ ಸಾಧನೆಯನ್ನು ಮಾಡಲಾಗಲಿಲ್ಲ: ಹೀಗಾಗಿ ಸ್ಥಳೀಯ ಅಮೆರಿಕನ್ ಕಾರ್ಯಚಟುವಟಿಕೆಯು ಮತ್ತಷ್ಟು ದೃಢವಾಯಿತು.

American Indians have played a central role in shaping the history of the nation, and they are deeply woven into the social fabric of much of American life.... During the last three decades of the twentieth century, scholars of ethnohistory, of the "new Indian history," and of Native American studies forcefully demonstrated that to understand American history and the American experience, one must include American Indians.

— Robbie Ethridge, Creek Country.[೬೨]

ಬ್ರಿಟಿಷರು ಪ್ಯಾರಿಸ್ ಒಪ್ಪಂದದಲ್ಲಿ(173) ಅಮೆರಿಕನ್ನರೊಂದಿಗೆ ಯುದ್ಧವಿರಾಮ ಘೋಷಿಸಿದರು. ಈ ಒಪ್ಪಂದದ ಮೂಲಕ ಅವರು ಸ್ಥಳೀಯ ಅಮೆರಿಕನ್ನರಿಗೆ ತಿಳಿಸದೆಯೇ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವ್ಯಾಪಕವಾದ ಸ್ಥಳೀಯ ಅಮೆರಿಕನ್ ಪ್ರಾಂತ್ಯಗಳನ್ನು ಬಿಟ್ಟುಕೊಟ್ಟು, ತಕ್ಷಣವೇ ವಾಯವ್ಯ ಇಂಡಿಯನ್ ಯುದ್ಧವನ್ನು ಸಾರಿದರು. ಅಮೆರಿಕಾ ಸಂಯುಕ್ತ ಸಂಸ್ಥಾನ ಆರಂಭದಲ್ಲಿ ಬ್ರಿಟಿಷರೊಂದಿಗೆ ಹೋರಾಡಿದ ಸ್ಥಳೀಯ ಅಮೆರಿಕನ್ನರನ್ನು ಭೂಪ್ರದೇಶ ಕಳೆದುಕೊಂಡ, ಅಧೀನಕ್ಕೆ ಒಳಪಟ್ಟ ಜನರಂತೆ ನೋಡಿತು. ಇರೊಕ್ವಾಯ್ಸ್ ನ ಅನೇಕ ಬುಡಕಟ್ಟು ಜನಾಂಗದವರು ಸ್ವಾಮಿನಿಷ್ಠೆಯನ್ನು ಹೊಂದಿರುವವರೊಂದಿಗೆ ಕೆನಡಾಕ್ಕೆ ತೆರಳಿದರೂ ಕೂಡ, ಇತರರು ನ್ಯೂಯಾರ್ಕ್ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲೆ ಉಳಿಯಲು ಮತ್ತು ಅವರ ಜಮೀನುಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರು. ಆದಾಗ್ಯೂ, ನ್ಯೂಯಾರ್ಕ್ ನ ರಾಜ್ಯ ಇರೊಕ್ವಾಯ್ಸ್ ನೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿತು. ಅಲ್ಲದೇ ಹಿಂದೆ ಅವರ ಪ್ರಾಂತ್ಯಗಳಾಗಿದ್ದ ಭೂಪ್ರದೇಶವನ್ನು ಮಾರಾಟ 5,000,000 acres (20,000 km2)ಕ್ಕಿಟ್ಟಿತು. ರಾಜ್ಯವು ವಸಾಹತುಗಾರರಿಗೆ ಮಿತ್ರರಾಗಿದ್ದ ಆನ್ ಆನ್ಡಗಾಸ್ ಜನಾಂಗದವರಿಗಾಗಿ ಸೆರಕ್ಯುಸ್ ನ ಬಳಿ ಪ್ರದೇಶವನ್ನು ಮೀಸಲಿರಿಸಿತು.

The Indians presented a reverse image of European civilization which helped America establish a national identity that was neither savage nor civilized.

—Charles Sanford, The Quest for Paradise[೫೮]

ಅಮೆರಿಕಾ ಸಂಯುಕ್ತ ಸಂಸ್ಥಾನ, ಹೊಸ ಪ್ರದೇಶಗಳಲ್ಲಿ ಕೃಷಿ ಮತ್ತು ನೆಲೆಗಳನ್ನು ಅಭಿವೃದ್ಧಿಪಡಿಸಲು ಹಾಗು ಭೂಪ್ರದೇಶಕ್ಕಾಗಿ ಹಂಬಲಿಸಿ ನ್ಯೂ ಇಂಗ್ಲೆಂಡ್ ನಿಂದ ಮತ್ತು ಹೊಸದಾಗಿ ಬಂದ ವಲಸೆಗಾರರನ್ನು ತೃಪ್ತಿಪಡಿಸಲು ಇನ್ನಷ್ಟೂ ವಿಸ್ತಾರಗೊಳ್ಳಲು ಬಯಸಿತು. ರಾಷ್ಟ್ರೀಯ ಸರ್ಕಾರವು ಆರಂಭದಲ್ಲಿ ಒಪ್ಪಂದಗಳ ಮೂಲಕ ಸ್ಥಳೀಯ ಅಮೆರಿಕನ್ ಜಮೀನನ್ನು ಖರೀದಿಸುವ ದಾರಿಯನ್ನು ಕಂಡುಕೊಂಡಿತು. ರಾಜ್ಯಗಳ ಜನರು ಮತ್ತು ವಲಸಿಗರು ಈ ನೀತಿ ಖಂಡಿಸಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು.[೬೩]

ಸ್ವಭಾವದಲ್ಲಿ ಬದಲಾವಣೆ ಕಂಡ ಸ್ಥಳೀಯ ಅಮೆರಿಕಾ

ಜಾರ್ಜ್ ವಾಷಿಂಗ್ಟನ್‌ ಸ್ಥಳೀಯ ಅಮೆರಿಕನ್‌ ಸಮಾಜದ ಪ್ರಗತಿಯನ್ನು ಎತ್ತಿಹಿಡಿದರು. ಅಲ್ಲದೇ ಇಂಡಿಯನ್ನರಿಗೆ ಸ್ವಲ್ಪ ಮಟ್ಟಿನ ಸದ್ಭಾವನೆಯನ್ನು ತೋರಿಸಿದರು."[೬೪]

ಯುರೋಪಿಯನ್‌ ರಾಷ್ಟ್ರಗಳು ಸ್ಥಳೀಯ ಅಮೆರಿಕನ್ನರನ್ನು (ಕೆಲವೊಮ್ಮೆ ಅವರ ಇಚ್ಛೆಯ ವಿರುದ್ಧವಾಗಿ)ಕುತೂಹಲದ ವಸ್ತುಗಳೆಂಬಂತೆ ಹಳೆಯ ಜಗತ್ತಿಗೆ ಕಳುಹಿಸಿದವು. ಅವರು ಅಧಿಕ ಗೌರವ ಧನವನ್ನು ಪ್ರೋತ್ಸಾಹಿಸಿದರು. ಅಲ್ಲದೇ ಕೆಲವೊಮ್ಮೆ ವಾಣಿಜ್ಯ ಉದ್ದೇಶಕ್ಕಾಗಿ ಸುಲಿಗೆ ಮಾಡುತ್ತಿದ್ದರು. ಕೆಲವು ಯುರೋಪಿಯನ್ ವಸಾಹತುಗಳಿಗೆ ಸ್ಥಳೀಯ ಅಮೆರಿಕನ್ನರ ಕ್ರೈಸ್ತೀಕರಣವು ಯೋಜಿತ ಉದ್ದೇಶವಾಗಿತ್ತು.

Whereas it hath at this time become peculiarly necessary to warn the citizens of the United States against a violation of the treaties.... I do by these presents require, all officers of the United States, as well civil as military, and all other citizens and inhabitants thereof, to govern themselves according to the treaties and act aforesaid, as they will answer the contrary at their peril.

—-George Washington, Proclamation Regarding Treaties, 1790.[೬೫]

ಅಮೆರಿಕನ್ ಕ್ರಾಂತಿಯ ನಂತರವೂ ಅಮೆರಿಕಾ ಸಂಯುಕ್ತ ಸಂಸ್ಥಾನ ಸ್ಥಳೀಯ ಅಮೆರಿಕನ್ನರ ಮೇಲೆ ನಿರ್ಬಂಧ, ನಿಯಮ ಹೇರುವುದನ್ನು ಮುಂದುವರೆಸಿತು. ಜಾರ್ಜ್ ವಾಷಿಂಗ್ಟನ್‌ ಮತ್ತು ಹೆನ್ರಿ ನಾಕ್ಸ್ , ಸ್ಥಳೀಯ ಅಮೆರಿಕನ್ನರು ಸಮಾನರೇ, ಆದರೆ ಅವರ ಸಮಾಜವು ಕೆಳಮಟ್ಟದಾಗಿದೆ ಎಂದು ನಂಬುತ್ತಾರೆ. ವಾಷಿಂಗ್ಟನ್‌, "ನಾಗರಿಕಗೊಳಿಸುವ" ಕಾರ್ಯವಿಧಾನವನ್ನು ಪ್ರೋತ್ಸಾಹಿಸಲು ಸೂತ್ರವೊಂದನ್ನು ರಚಿಸಿದರು.[೭] ವಾಷಿಂಗ್ಟನ್‌, ನಾಗರಿಕತೆಗೆ ಆರು ಅಂಶಗಳ ಯೋಜನೆ ಹೊಂದಿತ್ತು, ಇವು ಕೆಳಕಂಡಂತಿವೆ:

1. ಸ್ಥಳೀಯ ಅಮೆರಿಕನ್ನರಿಗೆ ನಿಷ್ಪಕ್ಷಪಾತವಾದ ನ್ಯಾಯ
2. ಸ್ಥಳೀಯ ಅಮೆರಿಕನ್ನರ ಜಮೀನುಗಳ ಕೊಂಡುಕೊಳ್ಳುವಿಕೆಯನ್ನು ನಿಯಂತ್ರಿಸುವುದು
3. ವಾಣಿಜ್ಯಕ್ಕೆ ಬೆಂಬಲ
4. ನಾಗರಿಕಗೊಳಿಸಲು ಮಾಡುವ ಪ್ರಯೋಗಗಳಿಗೆ ಅಥವಾ ಸ್ಥಳೀಯ ಅಮೆರಿಕನ್ ಸಮಾಜವನ್ನು ಸುಧಾರಿಸುವ ಪ್ರಯತ್ನಗಳಿಗೆ ಬೆಂಬಲ
5. ಉಪಸ್ಥಿತಿಗಳನ್ನು ನೀಡಲು ಅಧ್ಯಕ್ಷೀಯ ಅಧಿಕಾರ
6. ಸ್ಥಳೀಯ ಅಮೆರಿಕನ್ ಹಕ್ಕುಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆವಿಧಿಸುವುದು.[೯]

ಬೆಂಜಮಿನ್ ಹಾಕಿನ್ಸ್ ತಮ್ಮ ತೋಟದಲ್ಲಿ ಕ್ರೀಕ್ ಸ್ಥಳೀಯ ಅಮೆರಿಕನ್ನರಿಗೆ ಹೇಗೆ ಯುರೋಪಿಯನ್‌ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ಕಲಿಸಿಕೊಡುತ್ತಿರುವುದು.ಇದನ್ನು 1805ರಲ್ಲಿ ಚಿತ್ರಿಸಲಾಗಿದೆ.

ಇತಿಹಾಸತಜ್ಞ ರಾಬರ್ಟ್ ರೆಮಿನಿ, "ಇಂಡಿಯನ್ನರು ಮನೆ ಕಟ್ಟಿಕೊಳ್ಳುವುದು, ಬೇಸಾಯ ಮಾಡುವುದು, ಅವರ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು, ಕ್ರೈಸ್ತ ಮತವನ್ನು ಅನುಸರಿಸುವಂತಹ ಖಾಸಗಿ ಆಸ್ತಿ ಗಳಿಕೆಯ ಅಭ್ಯಾಸವನ್ನು ಒಮ್ಮೆ ಬೆಳೆಸಿಕೊಂಡರೆಂದರೆ, ಈ ಸ್ಥಳೀಯ ಅಮೆರಿಕನ್ನರು ಬಿಳಿಯ ಅಮೆರಿಕನ್ನರಿಂದ ಸಮ್ಮತಿಯನ್ನು ಗೆಲ್ಲಬಹುದು" ಎಂದು ಬರೆದಿದ್ದಾರೆ.[೮] ಅಮೆರಿಕಾ ಸಂಯುಕ್ತ ಸಂಸ್ಥಾನ ಬೆಂಜಮಿನ್ ಹಾಕಿನ್ಸ್ ನಂತಹ ಪ್ರತಿನಿಧಿಗಳನ್ನು, ಸ್ಥಳೀಯ ಅಮೆರಿಕನ್ನರ ನಡುವೆ ಬದುಕಲು ಮತ್ತು ಬಿಳಿಯರಂತೆ ಹೇಗೆ ಬದುಕಬೇಕೆಂಬುದನ್ನು ಕಲಿಸಲು ನೇಮಿಸಿದೆ.[೬]

How different would be the sensation of a philosophic mind to reflect that instead of exterminating a part of the human race by our modes of population that we had persevered through all difficulties and at last had imparted our Knowledge of cultivating and the arts, to the Aboriginals of the Country by which the source of future life and happiness had been preserved and extended. But it has been conceived to be impracticable to civilize the Indians of North America — This opinion is probably more convenient than just.

—-Henry Knox to George Washington, 1790s.[೬೪]

ಹೊಂದಾಣಿಕೆ

ಹೀಗೆ 18ನೇ ಶತಮಾನದ ಉತ್ತರಾರ್ಧದಲ್ಲಿ ವಾಷಿಂಗ್ಟನ್‌ ಮತ್ತು ನಾಕ್ಸ್ ರೊಂದಿಗೆ ಪ್ರಾರಂಭವಾಗಿ ಸಮಾಜ ಸುಧಾರಕರು,[೬೬] ಸ್ಥಳೀಯ ಅಮೆರಿಕನ್ನರನ್ನು "ನಾಗರಿಕರನ್ನಾಗಿಸುವ" ಪ್ರಯತ್ನದಲ್ಲಿ ಅಥವಾ ಬೃಹತ್ ಸಮಾಜಕ್ಕೆ(ಅವರನ್ನು ಮೀಸಲಾತಿಗೆ ತಳ್ಳುವ ಬದಲು )ಅವರನ್ನು ಸಮೀಕರಿಸಲು ಸ್ಥಳೀಯ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಬೆಂಬಲ ನೀಡಿದರು. ಆದರೆ 1819 ರ ನಾಗರಿಕತೆ ನಿಧಿ ಕಾನೂನು, ಸ್ಥಳೀಯ ಅಮೇಕನ್ನರ ಸುಧಾರಣೆಗಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಾಜಗಳಿಗೆ(ಬಹುಶಃ ಧಾರ್ಮಿಕ) ಧನ ಸಹಾಯವನ್ನು ಒದಗಿಸುವ ಮೂಲಕ ನಾಗರಿಕರನ್ನಾಗಿಸುವ ನೀತಿಗೆ ಬೆಂಬಲ ನೀಡಿತು.

I rejoice, brothers, to hear you propose to become cultivators of the earth for the maintenance of your families. Be assured you will support them better and with less labor, by raising stock and bread, and by spinning and weaving clothes, than by hunting. A little land cultivated, and a little labor, will procure more provisions than the most successful hunt; and a woman will clothe more by spinning and weaving, than a man by hunting. Compared with you, we are but as of yesterday in this land. Yet see how much more we have multiplied by industry, and the exercise of that reason which you possess in common with us. Follow then our example, brethren, and we will aid you with great pleasure....

—President Thomas Jefferson, Brothers of the Choctaw Nation, December 17, 1803[೬೭]

ಅಮೆರಿಕನ್ ನಾಗರಿಕ ಯುದ್ದ ಮತ್ತು ಇಂಡಿಯನ್‌ ಯುದ್ಧಗಳ ನಂತರ 19 ನೇ ಶತಮಾನದ ಉತ್ತರಾರ್ಧದಲ್ಲಿ ಸ್ಥಳೀಯ ಅಮೆರಿಕನ್ ಬೋರ್ಡಿಂಗ್ ಶಾಲೆಗಳನ್ನು ಸ್ಥಾಪಿಸಲಾಯಿತು. ಇವುಗಳನ್ನು ಆರಂಭದಲ್ಲಿ ಕ್ರೈಸ್ತ ಮತಪ್ರಚಾರಕರು ನಡೆಸಿದರು.[೬೮] ಈ ಸಮಯದಲ್ಲಿ ಅಮೆರಿಕನ್ ಸಮಾಜವು, ಸ್ಥಳೀಯ ಅಮೆರಿಕನ್ ಮಕ್ಕಳನ್ನು ಸಾಮಾನ್ಯ ಸಾರ್ವತ್ರಿಕ ಸಮಾಜಕ್ಕೆ ಸೇರಿಸುವ ಅಗತ್ಯವಿದೆ ಎಂದು ಭಾವಿಸಿದರು. ಬೋರ್ಡಿಂಗ್ ಶಾಲೆಯಲ್ಲಿ ಸ್ಥಳೀಯ ಅಮೆರಿಕನ್ ಮಕ್ಕಳಿಗೆ ಅಹಿತಕರ ಅನುಭವವಾಯಿತು. ಈ ಮಕ್ಕಳಿಗೆ ಅವರ ಸ್ಥಳೀಯ ಭಾಷೆಗಳನ್ನು ಆಡದಂತೆ ನಿಷೇಧಿಸಿ, ಕ್ರೈಸ್ತ ಮತವನ್ನು ಭೋಧಿಸಲಾಯಿತು. ಅಲ್ಲದೇ ಅವರ ಸ್ಥಳೀಯ ಧರ್ಮಗಳನ್ನು ಆಚರಿಸುವ ಹಕ್ಕನ್ನು ಕೂಡ ನಿರಾಕರಿಸಿ, ಅನೇಕ ರೀತಿಗಳಲ್ಲಿ ಅವರ ಸ್ಥಳೀಯ ಅಸ್ತಿತ್ವಗಳನ್ನು ತ್ಯಜಿಸುವಂತೆ ಮತ್ತು [೬೯] ಯುರೋಪಿಯನ್‌-ಅಮೆರಿಕನ್‌ ಸಂಸ್ಕೃತಿಯನ್ನು ಅನುಸರಿಸುವಂತೆ ಒತ್ತಾಯಿಸಲಾಯಿತು. ಈ ಶಾಲೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ, ದೈಹಿಕ ಮತ್ತು ಮಾನಸಿಕ ಹಿಂಸೆಗಳು ನಡೆದಿರುವ ಪ್ರಸಂಗಗಳಿಗೆ ದಾಖಲೆಗಳು ಕೂಡ ದೊರಕಿವೆ.[೭೦][೭೧]

ಅಮೆರಿಕನ್ ನಾಗರಿಕರಂತೆ ಸ್ಥಳೀಯ ಅಮೆರಿಕನ್ನರು

ಆಗ 1857 ರಲ್ಲಿ ಮುಖ್ಯ ನ್ಯಾಯಮೂರ್ತಿ ರೊಜರ್ ಬಿ. ಟ್ಯಾನಿ, ಸ್ಥಳೀಯ ಅಮೆರಿಕನ್ನರು "ಮುಕ್ತ ಮತ್ತು ಸ್ವತಂತ್ರ ಜನರಾದಾಗಿನಿಂದ" ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾಗಬಲ್ಲರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[೭೨] ಟ್ಯಾನಿ, ಸ್ಥಳೀಯ ಅಮೆರಿಕನ್ನರನ್ನು ದೇಶೀಯರಾಗಿಸಬಹುದು ಹಾಗು ಅಮೆರಿಕಾ ಸಂಯುಕ್ತ ಸಂಸ್ಥಾನದ "ರಾಜಕಿಯ ಸಮುದಾಯ"ವನ್ನು ಸೇರಬಹುದು ಎಂದು ವಾದಿಸಿದ್ದಾರೆ.[೭೨]

[Native Americans], without doubt, like the subjects of any other foreign Government, be naturalized by the authority of Congress, and become citizens of a State, and of the United States; and if an individual should leave his nation or tribe, and take up his abode among the white population, he would be entitled to all the rights and privileges which would belong to an emigrant from any other foreign people.

—Chief Justice Roger B. Taney, 1857, What was Taney thinking? American Indian Citizenship in the era of Dred Scott, Frederick e. Hoxie, April 2007.[೭೨]

ಅಮೆರಿಕಾ ಸಂಯುಕ್ತ ಸಂಸ್ಥಾನದ ಪೌರತ್ವ

ಅಲ್ಲದೇ 1924 ರ ಜೂನ್ 2 ರಂದು ಅಮೆರಿಕಾ ಸಂಯುಕ್ತ ಸಂಸ್ಥಾನ ಗಣರಾಜ್ಯದ ರಾಷ್ಟ್ರಾಧ್ಯಕ್ಷ ಕೆಲ್ವಿನ್ ಕೂಲಿಡ್ಜ್, ಇಂಡಿಯನ್‌ ಪೌರತ್ವ ಕಾಯ್ದೆಗೆ ಸಹಿ ಹಾಕುವ ಮೂಲಕ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸೇರಿರುವ ಅದರ ಪ್ರಾಂತ್ಯಗಳಲ್ಲಿ ಜನಿಸಿ ಮೊದಲೆ ಪೌರತ್ವ ಪಡೆದಿರದ ಎಲ್ಲಾ ಸ್ಥಳೀಯ ಅಮೆರಿಕನ್ನರಿಗೆ ಪೌರತ್ವ ನೀಡಲಾಯಿತು. ಈ ಕಾಯ್ದೆಗೆ ಮೊದಲೇ ಮೂರನೆ ಎರಡು ಭಾಗದಷ್ಟು ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾಗಿದ್ದರು.[೭೩] ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾದ ಅತ್ಯಂತ ಹಳೆಯ ದಾಖಲೆಗಳೆಂದರೆ, 1831 ರಲ್ಲಿ ಮಿಸಿಸಿಪ್ಪಿ ಯ ಚಾಕ್ಟವ್,(ಬುಡಕಟ್ಟು ಜನಸಮುದಾಯದ ಪ್ರದೇಶ) ಅಮೆರಿಕಾ ಸಂಯುಕ್ತ ಸಂಸ್ಥಾನದ ಶಾಸಕಾಂಗ ಟ್ರೀಟಿ ಆಫ್ ಡ್ಯಾನ್ ಸಿಂಗ್ ರಾಬಿಟ್ ಕ್ರೀಕ್ ಒಪ್ಪಂದದ ನಂತರ ಪೌರರಾದರು.[೧೨][೭೪][೭೫][೭೬] ಯು.ಎಸ್‌. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಚಾಕ್ಟವ್ ಪ್ರತಿನಿಧಿಗೆ ಸ್ಥಾನ ನೀಡಲು ಅನುಚ್ಛೇದ 22 ಅನ್ನು ಅನ್ವಯಿಸಲಾಯಿತು.[೧೨] ಆ ಒಪ್ಪಂದದ ಅನುಚ್ಛೇದ XIV ಯಡಿಯಲ್ಲಿ ಆಯ್ಕೆಗೊಂಡ ಯಾವ ಚಾಕ್ಟವ್ ನಾದರೂ, ಒಂದುವೇಳೆ ಚಾಕ್ಟವ್ ರಾಷ್ಟ್ರದೊಂದಿಗೆ ಹೋಗಲು ಬಯಸದೇ ಇದ್ದಲ್ಲಿ ಅಂತಹವನು ಅಮೆರಿಕಾದ ನಾಗರಿಕನಾಗಬಲ್ಲನು. ಒಪ್ಪಂದದ ದೃಢೀಕರಣದ ನಂತರ ಆತ ನೋಂದಾಯಿಸಿಕೊಂಡು, ನಿಯೋಜಿತ ಪ್ರದೇಶದಲ್ಲಿ ಐದು ವರ್ಷಗಳ ಕಾಲ ನೆಲೆಸಿದಲ್ಲಿ ಈ ಪೌರತ್ವವನ್ನು ಪಡೆಯಬಲ್ಲನು. ನೆಲೆವಾಸದ ವರ್ಷಗಳ ಮೂಲಕ, ಮತ್ತು ಈ ಕೆಳಕಂಡ ಅಂಶಗಳ ಮೂಲಕ ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾಗಬಲ್ಲರು:

1. ಒಪ್ಪಂದದ ನಿಬಂಧನೆ (ಮಿಸಿಸಿಪ್ಪಿ ಚಾಕ್ಟವ್ ನೊಂದಿಗಾದಂತೆ)
2. 1887 ರ ಫೆಬ್ರವರಿ 8 ರಂದಿನ ಡ್ಯಾವೆಸ್ ಕಾನೂನಿನಡಿಯಲ್ಲಿ ನೋಂದಣಿ ಮತ್ತು ಭೂಮಿ ಹಂಚಿಕೆ
3. ಅನಿರ್ಬಂಧದ ಆಸ್ತಿಯಲ್ಲಿ ಹಕ್ಕುಪತ್ರ ನೀಡುವಿಕೆ
4. ನಾಗರಿಕ ಜೀವನದ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು
5. ವಯಸ್ಕರಲ್ಲದ ಮಕ್ಕಳು
6. ಹುಟ್ಟಿನಿಂದ ದೊರೆಯುವ ಪೌರತ್ವ
7. ಅಮೆರಿಕಾ ಸಂಯುಕ್ತ ಸಂಸ್ಥಾನದ ಯುದ್ಧ ಪಡೆಗಳಲ್ಲಿ ಸೈನಿಕನಾಗುವುದು ಮತ್ತು ನಾವಿಕನಾಗುವುದು
8. ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಮದುವೆಯಾಗುವುದು
9. ಕಾಂಗ್ರೆಸ್ ನ ವಿಶೇಷ ಕಾಯ್ದೆ.

The Choctaws would ultimately form a territory by themselves, which should be taken under the care of the general government; or that they should become citizens of the State of Mississippi, and thus citizens of the United States.

-Cherokee Phoenix, and Indians' Advocate, Vol. II, No. 37., 1829.[೭೭]

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇಂದು ಅಮೆರಿಕನ್ ಇಂಡಿಯನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನದಲ್ಲಿ ನೀಡಲಾಗಿರುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ. ಅವರು ಚುನಾವಣೆಗಳಲ್ಲಿ ಮತಚಲಾಯಿಸಬಲ್ಲರು ಮತ್ತು ರಾಜಕೀಯದಲ್ಲಿ ಪಾಲ್ಗೊಳ್ಳಬಲ್ಲರು. ಬುಡಕಟ್ಟು ಜನಾಂಗದವರ ಸಮಸ್ಯೆಗಳು,ಸ್ವತಂತ್ರ ಮತ್ತು ಸಾಂಸ್ಕೃತಿಕ ಪದ್ದತಿಗಳ ಬಗ್ಗೆ ಫೆಡರಲ್ ಸರ್ಕಾರ ಎಷ್ಟರ ಮಟ್ಟಿಗಿನ ನ್ಯಾಯವ್ಯಾಪ್ತಿ ಹೊಂದಿದೆ ಎಂಬುದರ ಮೇಲೆ ವಿವಾದವಿದೆ.[೭೮]

Be it enacted by the Senate and House of Representatives of the United States of America in Congress assembled, That all noncitizen Native Americans born within the territorial limits of the United States be, and they are hereby, declared to be citizens of the United States: Provided, That the granting of such citizenship shall not in any manner impair or otherwise affect the right of any Native American to tribal or other property.

Indian Citizenship Act of 1924

ಅಮೆರಿಕನ್ ವಿಸ್ತರಣೆಯ ಸಮರ್ಥನೆ

ಕೊಲಂಬಿಯಾದ ಮ್ಯಾನಿಫೆಸ್ಟ್ ಡೆಸ್ಟಿನಿಯ ಸಾಂಕೇತಿಕ ಚಿತ್ರಣದಿಂದ ತೊರೆದುಹೋಗುತ್ತಿರುವ ಸ್ಥಳೀಯ ಅಮೆರಿಕನ್ನರು, ಇದನ್ನು 1872ರಲ್ಲಿ ಜಾನ್ ಗ್ಯಾಸ್ಟ್ ಚಿತ್ರಿಸಿದರು.

ಆಗ 1845 ರ ಜುಲೈನಲ್ಲಿ, ನ್ಯೂಯಾರ್ಕ್ ವೃತ್ತ ಪತ್ರಿಕೆಯ ಸಂಪಾದಕರಾದ ಜಾನ್ ಎಲ್. ಒ’ಸುಲಿವ್ಯಾನ್ ರವರು, “ಮ್ಯಾನಿಫೆಸ್ಟ್ ಡೆಸ್ಟಿನಿ” ಎಂಬ ಪದಗುಚ್ಛವನ್ನು ರಚಿಸಿದರು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಾಂತೀಯ ವಿಸ್ತರಣೆಗೆ "ಮುಂಜಾಗ್ರತೆಯ ವಿನ್ಯಾಸವು" ಹೇಗೆ ಬೆಂಬಲ ನೀಡುತ್ತದೆ ಎಂಬುದನ್ನು ವಿವರಿಸಲು ರಚಿಸಿದರು.[೭೯] ಯಾವಾಗ ಭೂಖಂಡದ ವಿಸ್ತರಣೆಯು ನಿಸ್ಸಂಶಯವಾಗಿ ಸ್ಥಳೀಯ ಅಮೆರಿಕನ್ ಭೂಮಿಯ ಕಸುಬನ್ನು ಉದ್ದೇಶಿಸಿತೋ, ಆಗ ಮ್ಯಾನಿಫೆಸ್ಟ್ ಡೆಸ್ಟಿನಿ ಸ್ಥಳೀಯ ಅಮೆರಿಕನ್ನರ ಮೇಲೆ ಪರಿಣಾಮ ಬೀರಿತು. ಮ್ಯಾನಿಫೆಸ್ಟ್ ಡೆಸ್ಟಿನಿ, ವಿಸ್ತರಣೆಯ ಮತ್ತು ಪಶ್ಚಿಮದ ಚಳವಳಿಯ ವಿವರಣೆ ಅಥವಾ ಸಮರ್ಥನೆಯಾಯಿತು, ಅಥವಾ ಕೆಲವು ಅರ್ಥವಿವರಣೆಗಳಲ್ಲಿ ನಾಗರಿಕತೆಯ ಕಾರ್ಯ ವಿಧಾನಕ್ಕೆ ಬೆಂಬಲ ನೀಡಲು ಸಹಾಯಮಾಡಿದ ಚಿಂತನೆ ಅಥವಾ ಭೋಧನೆಯಾಯಿತು. ಮ್ಯಾನಿಫೆಸ್ಟ್ ಡೆಸ್ಟಿನಿಯ ಸಲಹಾಗಾರರು, ವಿಸ್ತರಣೆ ಕೇವಲ ಒಳ್ಳೆಯದಷ್ಟೇ ಅಲ್ಲದೇ, ಇದು ಸ್ಪಷ್ಟ ಮತ್ತು ನಿಶ್ಚಿತವಾದುದೆಂದು ನಂಬುತ್ತಾರೆ. ಈ ಪದವನ್ನು ಆರಂಭದಲ್ಲಿ 1840 ರ ಹೊತ್ತಿನಲ್ಲಿ ಮೊದಲು ಜ್ಯಾಕ್ ಸೊನಿಯನ್ ಡೆಮೊಕ್ರಾಟ್ಸ್ ರವರು ಈಗಿರುವ ಪಶ್ಚಿಮ ಅಮೆರಿಕಾ ಸಂಯುಕ್ತ ಸಂಸ್ಥಾನದ ವಶಪಡಿಸಿಕೊಳ್ಳುವಿಕೆಗೆ ಬೆಂಬಲ ನೀಡಲು ಬಳಸಿದರು. (ಒರೆಗನ್ ಪ್ರಾಂತ್ಯ, ಟೆಕ್ಸಾಸ್ ವಶಪಡಿಸಿಕೊಳ್ಳುವಿಕೆ ಮತ್ತು ಮೆಕ್ಸಿಕನ್ ವಶಪಡಿಸಿಕೊಳ್ಳುವಿಕೆ).

What a prodigious growth this English race, especially the American branch of it, is having! How soon will it subdue and occupy all the wild parts of this continent and of the islands adjacent. No prophecy, however seemingly extravagant, as to future achievements in this way [is] likely to equal the reality.

—Rutherford Birchard Hayes, U.S. President, January 1, 1857, Personal Diary.[೮೦]

ಮ್ಯಾನಿಫೆಸ್ಟ್ ಡೆಸ್ಟಿನಿಯ ಕಾಲವನ್ನು "ಇಂಡಿಯನ್‌ ರಿಮೂವಲ್" ಮೂಲಕ ಸ್ಥಾಪಿಸಿತೆಂದು ಹೇಳಲಾಯಿತು. ಆದರೂ ರಿಮೂವಲ್ ನ ಕೆಲವು ಮಾನವಹಿತಕಾರಿ ಸಲಹಾಗಾರರು, ಸ್ಥಳೀಯ ಅಮೆರಿಕನ್ನರು ಬಿಳಿಯರಿಂದ ದೂರಹೋದಲ್ಲಿ ಮೊದಲಿಗಿಂತ ಚೆನ್ನಾಗಿರುತ್ತಾರೆ, ಹಾಗು ಹೆಚ್ಚುತ್ತಿರುವ ಅಮೆರಿಕನ್ನರ ಸಂಖ್ಯೆ ಸ್ಥಳೀಯರನ್ನು ಅಮೆರಿಕನ್ ವಿಸ್ತರಣೆಯ ಮಾರ್ಗದಲ್ಲಿ ನಿಂತಿರುವ "ಅನಾಗರಿಕ"ರೆಂದು ಕರೆಯುವರೆಂದು ನಂಬುತ್ತಾರೆ. ಥಾಮಸ್ ಜೆಫರ್ಸನ್, ಸ್ಥಳೀಯ ಅಮೆರಿಕನ್ನರು ಬಿಳಿಯರಷ್ಟೇ ಬುದ್ಧಿಜೀವಿಗಳಾಗಿದ್ದ ಮೇಲೆ, ಅವರು ಬಿಳಿಯರಂತೆ ಬದುಕಬೇಕು ಅಥವಾ ಅನಿವಾರ್ಯವಾಗಿ ಅವರಿಂದ ಪಕ್ಕಕ್ಕೆ ತಳ್ಳಿಸಿಕೊಳ್ಳಬೇಕು ಎಂದು ನಂಬುತ್ತಾರೆ. ಜೆಫರ್ಸನ್, ದಾರ್ಶನಿಕ ಚಳವಳಿಯಲ್ಲಿ ನೆಲೆಸುವ ಮೂಲಕ, ಎಂದಿಗೂ ಅಂತ್ಯಗೊಳ್ಳದ ಏಕ ರಾಷ್ಟ್ರವನ್ನು ಕಟ್ಟಲು ಬಿಳಿಯರು ಮತ್ತು ಸ್ಥಳೀಯ ಅಮೆರಿಕನ್ನರು ಒಟ್ಟಿಗೆ ಸೇರಬೇಕು ಎಂದು ನಂಬುತ್ತಾರೆ. ಅಲ್ಲದೇ ಸ್ಥಳೀಯರು ಮಿಸಿಸಿಪ್ಪಿ ನದಿಯ ಕಡೆಗೆ ವಲಸೆ ಹೋಗಬೇಕು ಮತು ಪ್ರತ್ಯೇಕ ಸಮಾಜವನ್ನು ನಿರ್ಮಿಸಬೇಕೆಂದು ಕೂಡ ಅವರು ನಂಬುತ್ತಾರೆ.[ಸೂಕ್ತ ಉಲ್ಲೇಖನ ಬೇಕು]

1871 ರ ಇಂಡಿಯನ್ ಮೀಸಲಾತಿ ಕಾಯ್ದೆ

ನಂತರ 1871 ರಲ್ಲಿ ಕಾಂಗ್ರೆಸ್ , ಇಂಡಿಯನ್ ಮೀಸಲಾತಿ ಕಾಯ್ದೆಗೆ ಉಪವಿಧಿಯೊಂದನ್ನು ಸೇರಿಸಿತು. ಅಧಿಕ ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗದವರ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಿಗಣನೆಯನ್ನು ಅಂತ್ಯಮಾಡಿತಲ್ಲದೇ ಅಧಿಕ ಒಪ್ಪಂದಗಳನ್ನು ನಿಷೇಧಿಸಿತು.

That hereafter no Indian nation or tribe within the territory of the United States shall be acknowledged or recognized as an independent nation, tribe, or power with whom the United States may contract by treaty: Provided, further, that nothing herein contained shall be construed to invalidate or impair the obligation of any treaty heretofore lawfully made and ratified with any such Indian nation or tribe.

—Indian Appropriations Act of 1871[೮೧]

ಪ್ರತಿರೋಧ

ಟೆಕುಮ್ಸೇಹ್ ಟೆಕುಮ್ಸೇಹ್-ಕದನದ ಶಾವ್ನೀ ಮುಖಂಡರಾಗಿದ್ದರು, ಅವರು ಉತ್ತರ ಅಮೆರಿಕಾದಾದ್ಯಂತ ಸ್ಥಳೀಯ ಅಮೆರಿಕನ್‌ ಬುಡಕಟ್ಟು ಜನಾಂಗಗಳ ಮೈತ್ರಿಕೂಟವೊಂದನ್ನು ಆಯೋಜಿಸಲು ಪ್ರಯತ್ನಿಸಿದರು.[೮೨]

ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರಿ ಅಧಿಕಾರಗಳು ಈ ಸಮಯದಲ್ಲಿ ಅನೇಕ ಒಪ್ಪಂದಗಳಿಗೆ ಒಳಗಾದರು, ಆದರೆ ಅನಂತರ ಹಲವು ಕಾರಣಗಳಿಗಾಗಿ ಅನೇಕ ಒಪ್ಪಂದಗಳನ್ನು ಮುರಿದರು. ಇತರ ಒಪ್ಪಂದಗಳನ್ನು ಅವುಗಳ ನಿಯಮಗಳನ್ನು ಬದಲಾಯಿಸಬಹುದಾದ "ಜೀವಂತ" ದಾಖಲೆಗಳೆಂದು ಪರಿಗಣಿಸಲಾಯಿತು. ಮಿಸಿಸಿಪ್ಪಿ ನದಿಯ ಪೂರ್ವ ಭಾಗದಲ್ಲಿ ನಡೆದ ಪ್ರಮುಖ ಯುದ್ಧಗಳು ಪೆಕೊಟ್ ಯುದ್ಧ, ಕ್ರೀಕ್ ಯುದ್ಧ, ಮತ್ತು ಸೆಮಿನೊಲೆ ಯುದ್ಧಗಳನ್ನು ಒಳಗೊಂಡಿವೆ. ಗಮನಾರ್ಹವಾಗಿ, ಶಾವ್ನಿ ಬುಡಕಟ್ಟಿನ ನಾಯಕ ಟೆಕ್ಯುಮ್ಸೆ ನಡೆಸಿದ ಬಹು ಬುಡಕಟ್ಟಿನ ಸೈನ್ಯವು, 1811–12 ರ ಸಮಯದಲ್ಲಿ ಅನೇಕ ಹೋರಾಟಗಳನ್ನು ನಡೆಸಿತು. ಇದನ್ನು ಟೆಕ್ಯುಮ್ಸೆ ಯುದ್ಧವೆಂದು ಕರೆಯಲಾಗುತ್ತದೆ. ಅನಂತರದ ಹಂತಗಳಲ್ಲಿ, ಟೆಕ್ಯುಮ್ಸೆ ಯ ಗುಂಪು, 1812 ರ ಕದನದಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿತು. ಅಲ್ಲದೇ ಡೆಟ್ರಾಯ್ಟ್ ನ ವಿಜಯದಲ್ಲಿ ಸಾಧನವಾಯಿತು. ಸೆಂಟ್. ಕ್ಲೇರ್ ನ ಸೋಲು (1791) ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲಿಯೇ ಸ್ಥಳೀಯ ಅಮೆರಿಕನ್ನರಿಂದ ಸೋತಂತಹ ಅಮೆರಿಕಾ ಸಂಯುಕ್ತ ಸಂಸ್ಥಾನ ಸೈನ್ಯದ ಅತ್ಯಂತ ಹೀನಾಯ ಪರಾಜಯವಾಗಿದೆ.ಮಿಸಿಸಿಪ್ಪಿಯ ಪಶ್ಚಿಮದಲ್ಲಿರುವ ಸ್ಥಳೀಯ ಅಮೆರಿಕನ್ ರಾಷ್ಟ್ರಗಳು ಅಧಿಕ ಸಂಖ್ಯೆಯಲ್ಲಿದ್ದವು, ಹಾಗು ಅಮೆರಿಕಾ ಸಂಯುಕ್ತ ಸಂಸ್ಥಾನ ಆಡಳಿತಕ್ಕೆ ಒಪ್ಪಿಸಿದಂತಹ ಕೊನೆಯ ರಾಷ್ಟ್ರಗಳಾಗಿವೆ. ಅಮೆರಿಕನ್ ಸರ್ಕಾರ ಮತ್ತು ಸ್ಥಳೀಯ ಅಮೆರಿಕನ್ ಸಮಾಜಗಳ ನಡುವೆ ನಡೆದ ಯುದ್ಧಗಳನ್ನು "ಇಂಡಿಯನ್‌ ಯುದ್ಧಗಳೆಂದು" ಕರೆಯಲಾಗುತ್ತದೆ. ಲಿಟ್ಟಲ್ ಬಿಗ್ ಹಾರ್ನ್ ಯುದ್ಧವು (1876), ಸ್ಥಳೀಯ ಅಮೆರಿಕನ್ನರು ಸಾಧಿಸಿದ ಅತಿ ದೊಡ್ಡ ವಿಜಯಗಳಲ್ಲಿ ಒಂದಾಗಿದೆ. ಆಗಿನ 1862 ರ ಸಿ ಆಕ್ಸ್ ಅಪ್ರೈಸಿಂಗ್, ಸ್ಯಾಂಡ್ ಕ್ರೀಕ್ ಮ್ಯಾಸಕ್ರೆ (1864) ಮತ್ತು 1890 ರ ವುಂಡೆಡ್ ನೀ ಯುದ್ಧಗಳಲ್ಲಿ ಇವರು ಜಯಗಳಿಸಿದ್ದಾರೆ.[೮೩] ಈ ಕದನಗಳು ಸ್ಥಳೀಯ ಅಮೆರಿಕನ್ನರ ಪ್ರಧಾನ ಸಂಸ್ಕೃತಿ ಅಳಿಯದಂತೆ ಬದಲಾವಣೆಗಳನ್ನು ತಂದವು. ಆದಾಗ್ಯೂ 1872 ರ ಹೊತ್ತಿಗೆ, ಅಮೆರಿಕಾ ಸಂಯುಕ್ತ ಸಂಸ್ಥಾನ ಸೈನ್ಯವು, ಸ್ಥಳೀಯ ಅಮೆರಿಕನ್ನರು ಶರಣಾಗತರಾಗಲು ಸಮ್ಮತಿಸುವವರೆಗೂ, ಹಾಗು "ಅವರದೇ ಆದ ಕ್ರೈಸ್ತಮತ ಮತ್ತು ಕೃಷಿ ಪದ್ದತಿಯನ್ನು ಅವರು ತಿಳಿಯಪಡಿಸುವ" ಮೀಸಲು ಪ್ರದೇಶಗಳಲ್ಲಿ ಬದುಕಲು ಒಪ್ಪುವವರೆಗೂ ಎಲ್ಲರನ್ನು ನಿರ್ನಾಮ ಮಾಡುವ ಕಾರ್ಯನೀತಿ ಅನುಸರಿಸಿತು.[೮೪]

The Indian [was thought] as less than human and worthy only of extermination. We did shoot down defenseless men, and women and children at places like Camp Grant, Sand Creek, and Wounded Knee. We did feed strychnine to red warriors. We did set whole villages of people out naked to freeze in the iron cold of Montana winters. And we did confine thousands in what amounted to concentration camps.

The Indian Wars of the West, 1934[೮೫]

ತೆಗೆದುಹಾಕುವಿಕೆ(ಸ್ಥಳಾಂತರಗಳು) ಮತ್ತು ಮೀಸಲಾತಿಗಳು

ಕಳೆದ 19 ನೇ ಶತಮಾನದಲ್ಲಿ, ಎಡೆಬಿಡದೆ ನಡೆದ ಅಮೆರಿಕಾ ಸಂಯುಕ್ತ ಸಂಸ್ಥಾನದ ಪಶ್ಚಿಮ ವಿಸ್ತರಣೆಯು, ಮುಂದಿನ ಪಶ್ಚಿಮದ ಭಾಗಗಳಲ್ಲಿ ಮರುನೆಲೆಗೊಳಿಸಲು ಹೆಚ್ಚಿನ ಸಂಖ್ಯೆಯ ಸ್ಥಳೀಯ ಅಮೆರಿಕನ್ನರನ್ನು ಅವರ ಇಚ್ಛೆಯ ವಿರುದ್ಧ ಬಲವಂತವಾಗಿ ಸ್ಥಳಾಂತರಿಸಲಾಯಿತು. ಸ್ಥಳೀಯ ಅಮೆರಿಕನ್ನರು, 1785 ರ ಹೋಪ್ ವೆಲ್ ಒಪ್ಪಂದ ನೀಡಿದ ಬಲವಂತವಾಗಿ ಸ್ಥಳಾಂತರಿಸುವ ನೀತಿಯು ಕಾನೂನು ಬಾಹಿರ ಎಂದು ನಂಬಿದ್ದರು. ರಾಷ್ಟ್ರಾಧ್ಯಕ್ಷ ಆಂಡ್ರೀವ್ ಜ್ಯಾಕ್ ಸನ್ ರವರಡಿಯಲ್ಲಿ , ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್, 1830 ರ ಇಂಡಿಯನ್‌ ರಿಮೂವಲ್ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ರಾಷ್ಟ್ರಾಧ್ಯಕ್ಷರಿಗೆ, ಮಿಸಿಸಿಪ್ಪಿ ನದಿಯ ಪಶ್ಚಿಮದ ಭಾಗಗಳಿಗೆ ಪ್ರತಿಯಾಗಿ, ನದಿಯ ಪೂರ್ವ ಭಾಗಗಳಲ್ಲಿರುವ ಸ್ಥಳೀಯ ಅಮೆರಿಕನ್ನರ ಭೂಪ್ರದೇಶದ ವಿನಿಮಯ ಮಾಡಿಕೊಳ್ಳಲು ಒಪ್ಪಂದಗಳನ್ನು ಮಾಡುವಂತಹ ಅಧಿಕಾರ ನೀಡಿತು. ಇಂಡಿಯನ್‌ ರಿಮೂವಲ್ ನೀತಿಯ ಪರಿಣಾಮವಾಗಿ ಸುಮಾರು 100,000 ದಷ್ಟು ಸ್ಥಳೀಯ ಅಮೆರಿಕನ್ನರನ್ನು ಪಶ್ಚಿಮಕ್ಕೆ ಸ್ಥಳಾಂತರಿಸಲಾಯಿತು. ಈ ಸಿದ್ಧಾಂತದಲ್ಲಿ ವಲಸೆಯು, ಸ್ವ ಇಚ್ಛೆಯಿಂದ ಮಾಡುವಂತಹದ್ದು ಮತ್ತು ಅನೇಕ ಸ್ಥಳೀಯ ಅಮೆರಿಕನ್ನರನ್ನು ಪೂರ್ವದಲ್ಲೇ ಉಳಿಸುವುದು ಎಂದಿತ್ತು. ಆದರೆ ಪ್ರಾಯೋಗಿಕವಾಗಿ, ಈ ಸ್ಥಳಾಂತರ ಒಪ್ಪಂದಗಳಿಗೆ ಸಹಿಹಾಕಲು ಸ್ಥಳೀಯ ಅಮೆರಿಕನ್ ನಾಯಕರ ಮೇಲೆ ಅತ್ಯಧಿಕ ಒತ್ತಡ ಹೇರಲಾಗಿತ್ತು.ನ್ಯೂ ಎಕೊಟಾ ಒಪ್ಪಂದದಡಿ ಸ್ಥಳಾಂತರ ನೀತಿಯ ಉದ್ದೇಶವನ್ನು ತೀವ್ರವಾಗಿ ವಿರೋಧಿಸಲಾಯಿತು. ಈ ಒಪ್ಪಂದಕ್ಕೆ ಚುನಾಯಿಸಲ್ಪಟ್ಟ ನಾಯಕತ್ವ ಸಹಿಹಾಕದೇ, ಚೆರೋಕೀಯರ ಭಿನ್ನಮತೀಯ ಒಳಪಂಗಡ ಸಹಿಹಾಕಿತು. ರಾಷ್ಟ್ರಾಧ್ಯಕ್ಷ ಜ್ಯಾಕ್ ಸನ್ ಒಪ್ಪಂದವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು. ಇದರ ಫಲಿತಾಂಶವಾಗಿ ಟೇಲ್ ಆಫ್ ಟಿಯರ್ಸ್ ನಲ್ಲಿ 4,000 ಚೆರೋಕೀಯರು ಮೃತಪಟ್ಟರು, ಎಂದು ಅಂದಾಜು ಮಾಡಲಾಗಿದೆ. ಸುಮಾರು 17,000 ಚೆರೋಕೀಯರೊಂದಿಗೆ ಸರಿಸುಮಾರು 2,000 ದಷ್ಟು ಚೆರೋಕೀಯರು ಹೊಂದಿದ್ದ ಕಪ್ಪು ಗುಲಾಮರನ್ನು ಅವರ ಮನೆಗಳಿಂದ ಹೊರಗಟ್ಟಲಾಯಿತು.[೮೬]ಬುಡಕಟ್ಟು ಜನಾಂಗದವರನ್ನು ಸಾಮಾನ್ಯವಾಗಿ, ಸುಲಭವಾಗಿ ಅವರ ಸಾಂಪ್ರದಾಯಿಕ ಜೀವನದಿಂದ ಬೇರ್ಪಡಿಸಬಹುದಾದ ಮತ್ತು ಯುರೋಪಿಯನ್‌-ಅಮೆರಿಕನ್‌ ಸಮಾಜಕ್ಕೆ ತಳ್ಳಬಹುದಾದ ಮೀಸಲು ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಕೆಲವು ದಕ್ಷಿಣದ ರಾಜ್ಯಗಳ ಮೇಲೆ 19 ನೇ ಶತಮಾನದಲ್ಲಿ, ಸ್ಥಳೀಯ ಅಮೆರಿಕನ್ನರ ಪ್ರದೇಶಗಳಲ್ಲಿ ಸ್ಥಳೀಯ ಅಮೆರಿಕನ್ನರಲ್ಲದವರನ್ನು ನೆಲೆಗೊಳಿಸುವ ಕ್ರಿಯೆಯನ್ನು ನಿಷೇಧಿಸುವ ಮೂಲಕ ಅಧಿಕ ಕಾನೂನು-ಕಟ್ಟಳೆಗಳನ್ನು ವಿಧಿಸಲಾಯಿತು. ಈ ಕಾನೂನುಗಳನ್ನು ಚೆದುರಿಹೋದ ಸ್ಥಳೀಯ ಅಮೆರಿಕನ್ನರ ಪ್ರತಿಭಟನೆಯ ಶಕ್ತಿಗೆ ಸಹಾನುಭೂತಿಯುಳ್ಳ ಬಿಳಿ ಧರ್ಮಪ್ರಚಾರಕರು ಸಹಾಯ ಮಾಡದಂತೆ ತಡೆಯಲು ಜಾರಿಗೆತರಲಾಗಿತ್ತು.[೮೭]

ಸ್ಥಳೀಯ ಅಮೆರಿಕನ್‌ ಗುಲಾಮಗಿರಿ

ಸ್ಥಳೀಯ ಅಮೆರಿಕನ್ ಗುಲಾಮಗಿರಿಯ ಸಂಪ್ರದಾಯಗಳು

ಉತ್ತರ ಅಮೆರಿಕಾಕ್ಕೆ ಆಫ್ರಿಕನ್ ಗುಲಾಮಗಿರಿಯನ್ನು ಯುರೋಪಿಯನ್ನರು ಪರಿಚಯಿಸುವ ಮೊದಲು, ಸ್ಥಳೀಯ ಅಮೆರಿಕನ್ ಬುಡಕಟ್ಟು ಜನಾಂಗದವರು ಒಂದು ರೀತಿಯ ಗುಲಾಮಗಿರಿ ಪದ್ಧತಿಯನ್ನು ಹೊಂದಿದ್ದರು. ಆದರೆ ಯಾವ ಗುಲಾಮಿ ಕೆಲಸಗಾರನನ್ನು ದೊಡ್ಡ ಮಟ್ಟದಲ್ಲಿ ಶೋಷಿಸಿಲ್ಲ. ಇದರ ಜೊತೆಯಲ್ಲಿ ಸ್ಥಳೀಯ ಅಮೆರಿಕನ್ನರು ವಸಾಹತು ಪೂರ್ವಯುಗದಲ್ಲಿ ಯಾವ ಖೈದಿಯನ್ನೂ ಮಾರಾಟ ಮಾಡಿಲ್ಲ, ಮತ್ತು ಖರೀದಿಸಿಲ್ಲ. ಆದರು ಕೆಲವೊಮ್ಮೆ ಶಾಂತಿ ಸಂಕೇತವಾಗಿ ಅಥವಾ ಅವರ ಸದಸ್ಯರ ವಿಮಿಮಯಕ್ಕಾಗಿ, ಇತರ ಬುಡಕಟ್ಟು ಜನಾಂಗದವರೊಂದಿಗೆ ಗುಲಾಮಗಿರಿಗೆ ಒಳಪಟ್ಟ ವ್ಯಕ್ತಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಖೈದಿಗಳನ್ನು ಬಳಸುವ ಅವರ ವ್ಯವಸ್ಥೆಗೆ "ಗುಲಾಮ" ಎಂಬುದು ಖಚಿತವಾದ ಪದವಾಗಿಲ್ಲದಿರಬಹುದು.[೮೮]ಬುಡಕಟ್ಟು ಜನಾಂಗಳಲ್ಲಿ ಗುಲಾಮರನ್ನಿಟುಕೊಂಡಿರುವ ಸ್ಥಳೀಯ ಅಮೆರಿಕನ್ನರ ಷರತ್ತುಗಳು ವಿಭಿನ್ನವಾಗಿರುತ್ತವೆ. ಅನೇಕ ಸಂದರ್ಭಗಳಲ್ಲಿ, ಗುಲಾಮರಾದ ಯುವ ಖೈದಿಗಳನ್ನು, ಯುದ್ಧದಲ್ಲಿ ಅಥವಾ ಕಾಯಿಲೆಯಿಂದ ಮಡಿದ ಸೈನಿಕರ ಸ್ಥಾನ ತುಂಬಲು ಜನಾಂಗದೊಳಗೆ ಸೇರಿಸಿಕೊಳ್ಳಲಾಗುತ್ತಿತ್ತು. ಇತರ ಬುಡಕಟ್ಟಿನವರು ಸಾಲದ ಗುಲಾಮಗಿರಿಯನ್ನು ಅಥವಾ ಅಪರಾಧ ಮಾಡಿದ ಬುಡಕಟ್ಟು ಜನಾಂಗದ ಸದಸ್ಯರ ಮೇಲೆ ಹೇರಲಾದ ಗುಲಾಮಗಿರಿಯನ್ನು ರೂಢಿಸಿಕೊಂಡಿದ್ದರು; ಆದರೆ ಇದು ಕೇವಲ ತಾತ್ಕಾಲಿಕವಾಗಿರುತ್ತಿತ್ತು. ಎಲ್ಲಿಯವರೆಗೆ ಗುಲಾಮನಾದವನು ಬುಟಕಟ್ಟು ಸಮಾಜಕ್ಕೆ ಅವರ ನಿಬಂಧನೆಗಳಿಗೆ ಒಳಪಟ್ಟು ಕೆಲಸಮಾಡಿ ಆತನ ಋಣವನ್ನು ತೀರಿಸುತ್ತಾನೋ ಅಲ್ಲಿವರಿಗಷ್ಟೇ ಆತ ಗುಲಾಮನಾಗಿರುತ್ತಾನೆ.[೮೮]ಕೆಲವು ವಾಯವ್ಯ ಪೆಸಿಫಿಕ್ ಬುಡಕಟ್ಟು ಜನಾಂಗಗಳಲ್ಲಿ ಜನಸಂಖ್ಯೆಯ ನಾಲ್ಕುಭಾಗದಷ್ಟು ಜನ ಗುಲಾಮರಾಗಿದ್ದರು.[೮೯] ಉತ್ತರ ಅಮೆರಿಕಾದಲ್ಲಿ ಗುಲಾಮರನ್ನು ಇಟ್ಟುಕೊಳ್ಳುವ ಇತರ ಬುಡಕಟ್ಟು ಜನಾಂಗದವರೆಂದರೆ ಟೆಕ್ಸಾಸ್ ನ ಕಾಮ್ಚೆ, ಜಾರ್ಜಿಯಾದ ಕ್ರೀಕ್, ಪ್ಯಾವ್ನೀ ಮತ್ತು ಕಲ್ಮತ್ ಎನಿಸಿದ್ದಾರೆ.[೯೦]

ಯುರೋಪಿಯನ್‌ ಗುಲಾಮಗಿರಿ

ಯುರೋಪಿಯನ್ನರು ಉತ್ತರ ಅಮೆರಿಕಕ್ಕೆ ವಸಾಹತುಗಾರರಾಗಿ ಆಗಮಿಸಿದಾಗ, ಸ್ಥಳೀಯ ಅಮೆರಿಕನ್ನರು ಏಕಾಏಕಿ ಅವರ ಗುಲಾಮಗಿರಿ ಪದ್ಧತಿಯನ್ನು ಬದಲಾಯಿಸಿಕೊಂಡರು. ಬ್ರಿಟಿಷ್ ವಸಾಹತಿಗರು ಅದರಲ್ಲೂ ವಿಶೇಷವಾಗಿ ದಕ್ಷಿಣದ ವಸಾಹತುಗಳಲ್ಲಿದ್ದವರು ತಂಬಾಕು, ಅಕ್ಕಿ ಮತ್ತು ಇಂಡಿಗೋವನ್ನು ಬೆಳೆಯುವುದಕ್ಕಾಗಿ, ಸ್ಥಳೀಯ ಅಮೆರಿಕನ್ನರನ್ನು ಉಪಯೋಗಿಸಲು ಅವರನ್ನು ಕೊಂಡುಕೊಳ್ಳುತ್ತಿದ್ದರು ಅಥವಾ ಸೆರೆಹಿಡಿಯುತ್ತಿದ್ದರು. ಸ್ಥಳೀಯ ಅಮೆರಿಕನ್ನರು ಬಿಳಿಯರನ್ನು ಅವರ ಸಮಾಜಗಳೊಳಗೆ ಸೇರಿಸಿಕೊಳ್ಳುವ ಬದಲು ಯುದ್ಧ ಖೈದಿಗಳನ್ನು ಅವರಿಗೆ ಮಾರಾಟ ಮಾಡಲು ಪ್ರಾರಂಭಿಸಿದರು. ವೆಸ್ಟ್ ಇಂಡೀಸ್ ನಲ್ಲಿ ಕಬ್ಬಿನ ಬೇಸಾಯದೊಂದಿಗೆ ಜೀತಗಾರರ ಬೇಡಿಕೆಯೂ ಬೆಳೆಯಿತು. ಯುರೋಪಿಯನ್ನರು "ಸಕ್ಕರೆಯ ಐಲೆಂಡ್" ಗಳಿಗೆ ಸ್ಥಳೀಯ ಅಮೆರಿಕನ್ನರನ್ನು ಕಳುಹಿಸಲೆಂದು ಅವರನ್ನು ಗುಲಾಮರಾಗಿಸಿ ಕೊಳ್ಳುತ್ತಿದ್ದರು. ಎಷ್ಟು ಜನರನ್ನು ಗುಲಾಮರಗಿಸಿಕೊಂಡಿದ್ದರೆಂಬುದಕ್ಕೆ ಖಚಿತವಾದ ದಾಖಲೆಗಳಿಲ್ಲ. ಯುರೋಪಿಯನ್ನರು ಸಾವಿರಾರು ಸ್ಥಳೀಯ ಅಮೆರಿಕನ್ನರನ್ನು ಗುಲಾಮರಾಗಿಸಿಕೊಂಡಿದ್ದರು ಎಂದು ಅಂದಾಜು ಮಾಡಲಾಗಿದೆ.[೮೮]

ಗುಲಾಮಗಿರಿಯು ಜನಾಂಗದ ವರ್ಣವಾಯಿತು, ವರ್ಜಿನಿಯದ ಜನರಲ್ ಅಸೆಂಬ್ಲಿ 1705 ರಲ್ಲಿ ಕೆಲವು ನಿಯಮಗಳನ್ನು ಮಾಡಿತು:

"ಎಲ್ಲಾ ಗುಲಾಮರನ್ನು ರಾಷ್ಟ್ರಕ್ಕೆ ಮರಳಿ ಕರೆತರಲಾಯಿತು... ಅವರ ಸ್ಥಳೀಯ ರಾಷ್ಟ್ರಗಳಲ್ಲಿ ಕ್ರೈಸ್ತಮತಾನುಯಾಯಿ ಅಲ್ಲದವರು... ಅಂತವರನ್ನು ಗುಲಾಮರಾಗಿಯೇ ಇರಲು ಬಿಡಲಾಯಿತು. ಈ ಆಡಳಿತಕ್ಕೆ ಒಳಪಟ್ಟ ಎಲ್ಲಾ ನೀಗ್ರೋ, ಮ್ಯೂಲ್ಯಾಟೋ(ಐರೋಪ್ಯ ವ್ಯಕ್ತಿಗೂ ನೀಗ್ರೋ ವ್ಯಕ್ತಿಗೂ ಜನಿಸಿದವ) ಮತ್ತು ಇಂಡಿಯನ್‌ ಗುಲಾಮರು.... ರಿಯಲ್ ಎಸ್ಟೇಟ್ (ಸ್ಥಿರಾಸ್ತಿ) ಎಂದು ಪರಿಗಣಿಸಿ ಕರೆತರಲಾಗುತ್ತಿತ್ತು. ಒಂದು ವೇಳೆ ಯಾವನೇ ಗುಲಾಮ ಆತನ ಒಡೆಯನನ್ನು ವಿರೋಧಿಸಿದರೆ... ಅಂತಹ ಗುಲಾಮನನ್ನು ಶಿಕ್ಷಿಸಲಾಗುವುದು, ಅಲ್ಲದೇ ಶಿಕ್ಷಿಸುವಾಗ ಆತನನ್ನು ಕೊಲ್ಲಬಹುದು... ಒಡೆಯನು ಎಲ್ಲಾ ಶಿಕ್ಷೆಗಳಿಂದ ಮುಕ್ತನಾಗಿರುತ್ತಾನೆ... ಆದರೆ ಅಂತಹ ಘಟನೆಯು ಎಂದೂ ನಡೆದಿಲ್ಲ."– ವರ್ಜಿನಿಯ ಜನರಲ್ ಅಸೆಂಬ್ಲಿ ಘೋಷಣೆ, 1705.[೯೧]

ಸ್ಥಳೀಯ ಅಮೆರಿಕನ್ನರ ಗುಲಾಮಗಿರಿಯ ವ್ಯಾಪಾರವು 1730 ರಲ್ಲಿ ಕೊನೆಕೊಂಡಿತು. ಅಲ್ಲದೇ ಇದು ಯಾಮಸೀ ಕದನ ವನ್ನು ಒಳಗೊಂಡಂತೆ ಬುಡಕಟ್ಟು ಜನಾಂಗದವರ ನಡುವೆ ಅನೇಕ ವಿಧ್ವಂಸಕ ಕದನಗಳಿಗೆ ಕಾರಣವಾಯಿತು. ಆಗ 18ನೇ ಶತಮಾನದ ಪೂರ್ವಾರ್ಧದಲ್ಲಿ ನಡೆದ ಇಂಡಿಯನ್ ಕದನಗಳು, ಹೆಚ್ಚಾದ ಆಫ್ರಿಕನ್‌ ಗುಲಾಮರ ಆಮದಿನೊಂದಿಗೆ ಸೇರಿ, ಸ್ಥಳೀಯ ಅಮೆರಿಕನ್ನರ ಗುಲಾಮಗಿರಿ ವ್ಯಾಪಾರವನ್ನು 1750 ರಲ್ಲಿ ಕೊನೆಗೊಳಿಸಿದವು. ಸ್ಥಳೀಯ ಅಮೆರಿಕನ್ ಗುಲಾಮರು ಈ ಮೂಲಕ ಸುಲಭವಾಗಿ ತಪ್ಪಿಸಿಕೊಳ್ಳಬಲ್ಲರು ಎಂಬುದನ್ನು ವಸಾಹತುಗಾರರು ಕಂಡುಕೊಂಡರು. ಅಲ್ಲದೇ ಯುದ್ಧಗಳು, ವಸಾಹತುಗಳು ಹೊಂದಿದ್ದ ಅನೇಕ ಗುಲಾಮರ ಬದುಕನ್ನು ಬಲಿತೆಗೆದುಕೊಂಡವು. ಉಳಿದ ಸ್ಥಳೀಯ ಅಮೆರಿಕನ್ ಗುಂಪುಗಳು, ಬಲದ ಮೂಲಕ ಯುರೋಪಿಯನ್ನರನ್ನು ಎದುರಿಸಲು ಒಟ್ಟುಗೂಡಿದವು. ಆಗ್ನೇಯ ಭಾಗದಲ್ಲಿ ವಾಸಿಸುತ್ತಿದ್ದ ಸ್ಥಳೀಯ ಅಮೆರಿಕನ್ ಜನರು ರಕ್ಷಣೆಗಾಗಿ ಚಾಕ್ಟವ್, ಕ್ರೀಕ್ ಮತ್ತು ಕಟವ್ಬ್ ದಂತಹ ಕೂಟಗಳನ್ನು ಸೇರಿದರು.[೮೮]ಸ್ಥಳೀಯ ಅಮೆರಿಕನ್ ಮಹಿಳೆಯರು ಗುಲಾಮರಾದರು ಅಥವಾ ಆಗದಿದ್ದರೂ ಕೂಡ ಅತ್ಯಾಚಾರಕ್ಕೆ ಒಳಪಡುವ ಅಪಾಯವನ್ನು ಎದುರಿಸುತ್ತಿದ್ದರು;ದಕ್ಷಿಣದ ಅನೇಕ ಸಮುದಾಯಗಳಲ್ಲಿ ವಸಾಹತು ಪೂರ್ವ ವರ್ಷಗಳಲ್ಲಿ ಪುರುಷರ ಸಂಖ್ಯೆ ಸಮನಾಗಿರಲಿಲ್ಲ. ಹಾಗಾಗಿ ಅವರು ಸ್ಥಳೀಯ ಅಮೆರಿಕನ್ ಮಹಿಳೆಯರನ್ನು ಲೈಂಗಿಕ ಸಂಬಂಧಗಳಿಗಾಗಿ ಬಳಸಲು ಪ್ರಾರಂಭಿಸಿದ್ದರು.[೯೨] ಸ್ಥಳೀಯ ಅಮೆರಿಕನ್ ಮತ್ತು ಗುಲಾಮಗಿರಿಗೆ ಒಳಪಟ್ಟ ಆಫ್ರಿಕನ್ ಮಹಿಳೆಯರು, ಗುಲಾಮರಾಗಿದ್ದ ಪುರುಷರಿಂದ ಮತ್ತು ಬಿಳಿಯ ಪುರುಷರಿಂದ ಅತ್ಯಾಚಾರಕ್ಕೆ ಮತ್ತು ಲೈಗಿಂಕ ಕಿರುಕುಳಕ್ಕೆ ಬಲಿಯಾಗಿದ್ದರು.[೯೨]

ಆಫ್ರಿಕನ್‌ ಗುಲಾಮಗಿರಿಯನ್ನು ಆಯ್ದುಕೊಂಡ ಸ್ಥಳೀಯ ಅಮೆರಿಕನ್ನರು

ತಮ್ಮ ಭೂ ಪ್ರದೇಶಗಳನ್ನು ಆಕ್ರಮಿಸುವ ಆಂಗ್ಲೊ-ಅಮೆರಿಕನ್ನರ ಯತ್ನವನ್ನು ಸ್ಥಳೀಯ ಅಮೆರಿಕನ್ನರು ತಡೆಗಟ್ಟಿ, ತಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡರು. ಸ್ಥಳೀಯ ಅಮೆರಿಕನ್ನರು ಹಾಗೂ ಗುಲಾಮಗಿರಿಯಲ್ಲಿದ್ದ ಆಫ್ರಿಕನ್ನರು ಮತ್ತು ಆಫ್ರಿಕನ್‌-ಅಮೆರಿಕನ್ನರೊಂದಿಗೆ ಹಲವು ಮಟ್ಟಗಳಲ್ಲಿ ಅಂತರ-ಸಂಪರ್ಕದಲ್ಲಿದ್ದರು. ಕಾಲಾನಂತರದಲ್ಲಿ ಇವೆಲ್ಲಾ ಸಂಸ್ಕೃತಿಗಳು ಅಂತರಸಂಪರ್ಕ ಗಳಿಸಿದವು. ಸ್ಥಳೀಯ ಅಮೆರಿಕನ್ನರು ನಿಧಾನವಾಗಿ ಬಿಳಿಯರ ಸಂಸ್ಕೃತಿಯನ್ನು ಆಯ್ದುಕೊಳ್ಳಲಾರಂಭಿಸಿದರು.[೯೩] ಸ್ಥಳೀಯ ಅಮೆರಿಕನ್ನರು ಆಫ್ರಿಕನ್ನರೊಂದಿಗೆ ಕೆಲವು ಅನುಭವಗಳು, ಅದರಲ್ಲೂ ವಿಶಿಷ್ಟವಾಗಿ ಇವೆರಡೂ ಜನಾಂಗದವರು ಗುಲಾಮಗಿರಿಗೆ ಒಳಗಾದಾಗ ಪಡೆದ ಅನುಭವಗಳನ್ನು ಹಂಚಿಕೊಂಡರು.[೯೪]ಇತರೆ ಯುರೋಪಿಯನ್‌-ಅಮೆರಿಕನ್‌ ರೀತಿ-ನೀತಿಗಳನ್ನು ಮೈಗೂಡಿಸಿಕೊಂಡ ಐದೂ ನಾಗರಿಕತೆಯುಳ್ಳ ಪಂಗಡಗಳು, ಗುಲಾಮರ ಸ್ವಾಮ್ಯ ಗಳಿಸುವುದರ ಮೂಲಕ, ಪ್ರಾಬಲ್ಯ ಮೆರೆಯಲು ಯತ್ನಿಸಿದರು. ಚೆರೊಕಿ ಪ್ರದೇಶದಲ್ಲಿ ಗುಲಾಮರ ಒಡೆತನದ ಮನೆಮಂದಿಗಳ ಪೈಕಿ 78%ರಷ್ಟು ತಾವು ಯಾವುದೋ ಒಂದು ಬಿಳಿಯರ ವಂಶಸ್ಥರೆಂದು ಹೇಳಿಕೊಳ್ಳುತ್ತಿದ್ದರು. ಈ ಜನಗಳ ನಡುವಿನ ಅಂತರಸಂಪರ್ಕದ ಸ್ವರೂಪವು, ಸ್ಥಳೀಯ ಅಮೆರಿಕನ್‌ ಪಂಗಡಗಳ, ಗುಲಾಮಗಿರಿಗೊಳಗಾದ ಜನ ಮತ್ತು ಗುಲಾಮರನ್ನಿಟ್ಟುಕೊಂಡಿದ್ದ ಯುರೋಪಿಯನ್ನರ ಐತಿಹಾಸಿಕ ಲಕ್ಷಣವನ್ನು ಅವಲಂಬಿಸಿತ್ತು. ಸ್ಥಳೀಯ ಅಮೆರಿಕನ್ನರು ಪರಾರಿಯಾಗುತ್ತಿದ್ದ ಗುಲಾಮರಿಗೆ ಆಗಾಗ್ಗೆ ನೆರವು ನೀಡಿದ್ದುಂಟು. ಈ ಪಂಗಡಗಳು, ಅನೇಕ ಹೊದಿಕೆಗಳು ಮತ್ತು ಕುದುರೆಗಳನ್ನು ವ್ಯಾಪಾರ ಮಾಡಿದಂತೆಯೇ ಆಫ್ರಿಕನ್ನರನ್ನು ಬಿಳಿಯರಿಗೆ ಮಾರಿದರು.[೮೮]ಯುರೋಪಿಯನ್ನರಂತೆಯೇ, ಸ್ಥಳೀಯ ಅಮೆರಿಕನ್ನರು ಸಹ ಗುಲಾಮಗಿರಿಗೊಳಗಾದವರನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡದ್ದುಂಟು. ಆದರೂ,ಚಾಟೆಲ್‌ ಗುಲಾಮಗಿರಿ ಎನ್ನಲಾದ ದಕ್ಷಿಣ ಬಿಳಿಯ ಜೀತಗಾರಿಕೆಯ ತೀರಾ ಕ್ರೂರ ವಿಧಾನಗಳನ್ನು ಹಲವು ಸ್ಥಳೀಯ ಅಮೆರಿಕನ್‌ ಒಡೆಯರು ತಿರಸ್ಕರಿಸಿದ್ದರು.[೯೫] ಗುಲಾಮರನ್ನಿಟ್ಟುಕೊಂಡ ಸ್ಥಳೀಯ ಅಮೆರಿಕನ್ನರು 3%ಕ್ಕಿಂತಲೂ ಕಡಿಮೆಯಾದರೂ, ಜೀತಗಾರಿಕೆಯು ಸ್ಥಳೀಯ ಅಮೆರಿಕನ್‌ ಪಂಗಡಗಳ ನಡುವೆ ವಿನಾಶಕಾರಿ ಬಿರುಕು-ಭಿನ್ನಾಭಿಪ್ರಾಯಗಳಿಗೆ ಕಾರಣವಾದವು. ಗುಲಾಮರನ್ನಿಟ್ಟುಕೊಂಡ ಮಿಶ್ರಿತ-ಜನಾಂಗೀಯರು ಯುರೋಪಿಯನ್‌ ಸಂತತಿಗೆ ಸಂಬಂಧಿತ ವರ್ಗ ಶ್ರೇಣಿಯ ಭಾಗವಾಗಿದ್ದರು. ಆದರೆ, ಅವರ ಅನುಕೂಲವು ತಮ್ಮ ಪೂರ್ವಜರಿಂದ ವರ್ಗಾವಣೆಯಾದ ಸಾಮಾಜಿಕ ಹೂಡಿಕೆಯನ್ನು ಆಧರಿಸಿತ್ತು.[೯೫] ಅಮೆರಿಕನ್‌ ಸಂಯುಕ್ತ ಸಂಸ್ಥಾನದ ದಕ್ಷಿಣ ಭಾಗದಲ್ಲಿ ಮಿಶ್ರಿತ-ಜನಾಂಗೀಯ ಸ್ಥಳೀಯ ಅಮೆರಿಕನ್ನರ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ, ಇಂಡಿಯನ್‌ ಜನಾಂಗದವರ ಮರುಸ್ಥಳಾಂತರದ ಪ್ರಸ್ತಾಪವು ಸಾಂಸ್ಕೃತಿಕ ಬದಲಾವಣೆಗಳ ಉದ್ವೇಗಗಳನ್ನು ಹೆಚ್ಚಿಸಿತು. ತಮ್ಮ ಭೂ ಪ್ರದೇಶಗಳು ಸೇರಿದಂತೆ, ತಮ್ಮ ಸಾಂಪ್ರದಾಯಿಕತೆಗಳನ್ನು ಉಳಿಸಿಕೊಳ್ಳಲು ಮಿಶ್ರಿತವಲ್ಲದ ಶುದ್ಧ ಜನಾಂಗೀಯರು ಕೆಲವೊಮ್ಮೆ ಬಹಳಷ್ಟು ಶ್ರಮಿಸಿದರು. ಬಹಳಷ್ಟು ಗುಲಾಮರನ್ನಿಟ್ಟುಕೊಂಡಿರದ ಸಾಂಪ್ರದಾಯಿಕ ಪಂಗಡ ಸದಸ್ಯರು, ಆಂಗ್ಲೊ-ಅಮೆರಿಕನ್ನರಿಗೆ ಭೂ ಪ್ರದೇಶಗಳನ್ನು ಮಾರುವ ವಿದ್ಯಮಾನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು..[೮೮]

ಯುದ್ಧಗಳು

ರಾಜ ಫಿಲಿಪ್‌ನ ಯುದ್ಧ

ರಾಜಾ ಫಿಲಿಪ್‌ನ ಯುದ್ಧವನ್ನು ಕೆಲವೊಮ್ಮೆ ಮೆಟಾಕಾಮ್‌ ಯುದ್ಧ ಅಥವಾ ಮೆಟಾಕಾಮ್‌ ದಂಗೆ ಎನ್ನಲಾಗುತ್ತಿತ್ತು. ಇಂದಿನ ದಕ್ಷಿಣ ನ್ಯೂ ಇಂಗ್ಲೆಂಡ್‌‌ನ ಸ್ಥಳೀಯ ಅಮೆರಿಕನ್ ನಿವಾಸಿಗಳು ಮತ್ತು ಇಂಗ್ಲಿಷ್‌ ವಸಾಹತುದಾರರು ಹಾಗು ಅವರ ಸ್ಥಳೀಯ ಆಮೆರಿಕನ್‌ ಮೈತ್ರಿಪಡೆಗಳ ನಡುವೆ 1675-1676ರಲ್ಲಿ ನಡೆದ ಸಶಸ್ತ್ರ ಸಂಘರ್ಷ ಇದಾಗಿತ್ತು. ರಾಜ ಫಿಲಿಪ್‌ ಹತನಾದ ನಂತರವೂ, ಯುದ್ಧವು ಉತ್ತರ ನ್ಯೂ ಇಂಗ್ಲೆಂಡ್‌ (ಮುಖ್ಯವಾಗಿ ಮೇಯ್ನ್‌ ಗಡಿಯಲ್ಲಿ)ನಲ್ಲಿ ಮುಂದುವರೆಯಿತು. ಹೀಗೆ 1678ರ ಏಪ್ರಿಲ್‌ ತಿಂಗಳಲ್ಲಿ ಕ್ಯಾಸ್ಕೋ ಬೇಯಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕುವುದರೊಂದಿಗೆ ಯುದ್ಧವು ಅಂತ್ಯಗೊಂಡಿತು.[ಸೂಕ್ತ ಉಲ್ಲೇಖನ ಬೇಕು] ರಕ್ಷಣಾ ಇಲಾಖೆ, ಜನಗಣತಿ ವಿಭಾಗ ಹಾಗೂ ವಸಾಹತು ಇತಿಹಾಸ ತಜ್ಞ ಫ್ರಾನ್ಸಿಸ್‌ ಜೆನಿಂಗ್ಸ್‌ರಂತಹವರ ಕೆಲಸದ ಮೂಲಗಳನ್ನು ಆಧರಿಸಿ, ಷುಲ್ಟ್ಜ್‌ ಮತ್ತು ಟುಗಿಯಾಸ್‌ ಬರೆದ 'ಕಿಂಗ್‌ ಫಿಲಿಪ್ಸ್‌ ವಾರ್‌, ದಿ ಹಿಸ್ಟರಿ ಅಂಡ್‌ ಲೆಗಾಸಿ ಆಫ್‌ ಅಮೆರಿಕಾಸ್‌ ಫರ್ಗಾಟನ್‌ ಕನ್ಫ್ಲಿಕ್ಟ್‌'ನಲ್ಲಿ ತಿಳಿಸಲಾದ ಒಟ್ಟಾರೆ ಅಂದಾಜುಗಳ ಪ್ರಕಾರ, ನ್ಯೂಇಂಗ್ಲೆಂಡ್‌ ಪ್ರದೇಶದ ಇಂಗ್ಲಿಷ್‌ ವಸಾಹತುದಾರರ ಪೈಕಿ 800 ಜನರು (ಪ್ರತಿ 65 ಜನರಲ್ಲಿ ಒಬ್ಬರು) ಹಾಗೂ, 20,000 ಸ್ಥಳೀಯರ ಪೈಕಿ 3000 (ಪ್ರತಿ 20 ಜನರಲ್ಲಿ ಮೂವರು) ಯುದ್ಧದಲ್ಲಿ ಹತರಾದರು. ಇದರಿಂದಾಗಿ, ಪ್ರಮಾಣಾನುಗುಣವಾಗಿ ಅಮೆರಿಕಾದ ಇತಿಹಾಸದಲ್ಲಿ ಇದು ಅತಿ ರಕ್ತಮಯ ಹಾಗೂ ಅತಿ ದುಬಾರಿ ಯುದ್ಧ ಎನ್ನಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ನ್ಯೂಇಂಗ್ಲೆಂಡ್‌ನ ತೊಂಬತ್ತು ಪಟ್ಟಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಟ್ಟಣಗಳು ಸ್ಥಳೀಯ ಅಮೆರಿಕನ್‌ ಯೋಧರಿಂದ ದಾಳಿಗೊಳಗಾದವು. ಉಭಯ ಪಕ್ಷಗಳಲ್ಲಿ ಹತ್ತು ಯೋಧರಲ್ಲಿ ಒಬ್ಬರು ಗಾಯಗೊಂಡಿದ್ದರು ಅಥವಾ ಮೃತಪಟ್ಟರು.[೯೬]'ಕಿಂಗ್‌ ಫಿಲಿಪ್'‌ ಎಂದು ಬ್ರಿಟಿಷ್‌ ಉಲ್ಲೇಖಿಸುತ್ತಿದ್ದ, ಸ್ಥಳೀಯ ಅಮೆರಿಕನ್‌ ಪಂಗಡದ ಮುಖ್ಯಸ್ಥ ಮೆಟಕಾಮೆಟ್‌, ಮೆಟಾಕಾಮ್‌ ಅಥವಾ ಪೊಮೆಟಾಕಾಮ್‌ನ ಹೆಸರನ್ನು ಈ ಯುದ್ಧಕ್ಕಿಡಲಾಗಿದೆ. ಅವನು ಪೊಕನೊಕೆಟ್‌ ಪಂಗಡ/ಪೊಕನೊಕೆಟ್‌ ಒಕ್ಕೂಟ ಮತ್ತು ವಾಂಪನೊವಗ್‌ ರಾಷ್ಟ್ರದ ಕೊನೆಯ ಮ್ಯಾಸಸೊಯಿಟ್‌ (ಮಹಾ ನಾಯಕ) ಆಗಿದ್ದ. ವಸಾಹತುದಾರರ ವಿರುದ್ಧ ಯುದ್ಧದಲ್ಲಿ ಸೋತು, ಪೊಕನೊಕೆಟ್‌ ಪಂಗಡ ಮತ್ತು ರಾಯಲ್‌ ಲೈನ್‌ನ ಸಾಮೂಹಿಕ ಹತ್ಯೆ ಯತ್ನದ ಹಿನ್ನೆಲೆಯಲ್ಲಿ, ಹಲವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಭಾಗಕ್ಕೆ ಪಲಾಯನ ಮಾಡಿದರು. ಅಲ್ಲಿ ಅಬನಕಿ ಪಂಗಡಗಳು ಮತ್ತು ವಬನಕಿ ಒಕ್ಕೂಟದ ಪಂಗಡಗಳೊಂದಿಗೆ ಒಗ್ಗೂಡಿ, ಮ್ಯಾಸಚೂಸೆಟ್ಸ್‌ ಬೇ ಕಾಲೊನಿಯಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮುಂದುವರೆಸಿದರು.[ಸೂಕ್ತ ಉಲ್ಲೇಖನ ಬೇಕು]

ಅಂತರ್ಯುದ್ಧಗಳು

ಎಲಿ ಎಸ್. ಪಾರ್ಕರ್ ಒಬ್ಬ ಯೂನಿಯನ್ ಸಿವಿಲ್ ವಾರ್ ಜನರಲ್, ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕಾದಿಂದ ಹೊರಬಂದ ರಾಜ್ಯಗಳ ಒಕ್ಕೂಟದ ಮಧ್ಯೆ ಶರಣಾಗತಿ ನಿಯಮಗಳನ್ನು ಬರೆದರು.[೯೭] ಅಂತರ್ಯುದ್ಧದ ಸಂದರ್ಭದಲ್ಲಿ ಬ್ರಿಗೇಡಿಯರ್ ಜನರಲ್ ಶ್ರೇಣಿಯನ್ನು ತಲುಪಿದ ಇಬ್ಬರು ಸ್ಥಳೀಯ ಅಮೆರಿಕನ್ನರಲ್ಲಿ ಪಾರ್ಕರ್ ಒಬ್ಬರಾಗಿದ್ದರು.

ಅಂತರ್ಯುದ್ಧದಲ್ಲಿ ಹಲವು ಸ್ಥಳೀಯ ಅಮೆರಿಕನ್ನರು ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಿದರು. ಇವರಲ್ಲಿ ಬಹಳಷ್ಟು ಸಂಯುಕ್ತ ಪಡೆಗಳೊಂದಿಗೆ ಸೇರಿದರು.[೯೮] ಬಿಳಿಯರ ಜೊತೆ ಸೇರಿಕೊಂಡು ಹೋರಾಟ ಮಾಡಿ, ಯುದ್ಧ ಯತ್ನಕ್ಕೆ ಬೆಂಬಲ ಸೂಚಿಸುವ ಮೂಲಕ ಸ್ಥಳೀಯ ಅಮೆರಿಕನ್ನರು ಅಂದಿನ ಸರ್ಕಾರದಿಂದ ಅನುಕೂಲವನ್ನು ಅಪೇಕ್ಷಿಸುತ್ತಿದ್ದರು.[೯೮][೯೯] ಯುದ್ಧದಲ್ಲಿ ಸೇವೆಯಿಂದ ಭೇದ-ಭಾವ ಹಾಗೂ ಪೂರ್ವಜರ ಭೂಸ್ವತ್ತುಗಳಿಂದ ಪಶ್ಚಿಮದ ಪ್ರಾಂತ್ಯಗಳತ್ತ ಮರುಸ್ಥಳಾಂತರವು ಅಂತ್ಯವಾಗುವುದೆಂದು ಅವರು ನಂಬಿದ್ದರು.[೯೮] ಭಾರಿ ಯುದ್ಧ ನಡೆದು ಆಫ್ರಿಕನ್‌ ಅಮೆರಿಕನ್ನರು ಸ್ವತಂತ್ರರು ಎಂದು ಘೋಷಿಸಿದಾಗ, ಇತ್ತ ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರವು, ಸ್ಥಳೀಯ ಅಮೆರಿಕನ್ನರ ಬೆರೆಯುವಿಕೆ, ಆಧೀನಗೊಳಿಸುವಿಕೆ, ನಿರಾಶ್ರಿತಗೊಳಿಸುವಿಕೆ ಅಥವಾ ನಾಶಗೊಳಿಸುವ ನೀತಿಗಳನ್ನು ಮುಂದುವರೆಸಿತು.[೯೮]

ಚೆರೋಕೀ 1903ರಲ್ಲಿ ನ್ಯೂಆರ್ಲಿಯನ್ಸ್‌ನಲ್ಲಿ ಪುನರ್ಮಿಲನ ಕೂಟವನ್ನು ನಡೆಸುತ್ತಿರುವುದು.

ಸೆನೆಕಾ ಪಂಗಡದ ಸದಸ್ಯ ಜನರಲ್‌ ಎಲಿ ಎಸ್‌. ಪಾರ್ಕರ್‌ ಶರಣಾಗತಿಯ ವಿಧಿಗಳನ್ನು ರಚಿಸಿದರು. ಇದಕ್ಕೆ ಜನರಲ್‌ ರಾಬರ್ಟ್‌ ಇ. ಲೀ 1865ರ ಏಪ್ರಿಲ್‌ 9ರಂದು ಅಪೊಮಟೊಕ್ಸ್‌ ಕೋರ್ಟ್‌ ಹೌಸ್‌‌ನಲ್ಲಿ ಸಹಿ ಹಾಕಿದರು. ಜನರಲ್‌ ಯುಲಿಸಸ್‌ ಎಸ್‌. ಗ್ರ್ಯಾಂಟ್‌ರ ಸೇನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ತರಬೇತಿ ಪಡೆದಿದ್ದ ನ್ಯಾಯವಾದಿಯಾಗಿದ್ದ ಜನರಲ್‌ ಪಾರ್ಕರ್‌ ಅವರ ಸಂಯುಕ್ತ ಸೇನಾ ಸೇವೆಗೆ ಸೇರುವ ಅರ್ಜಿಯನ್ನು ಅವರ ಜನಾಂಗೀಯತೆಯ ಆಧಾರದ ಮೇಲೆ ಒಮ್ಮೆ ತಿರಸ್ಕರಿಸಲಾಗಿತ್ತು. ಅಪೊಮಟಾಕ್ಸ್‌ನಲ್ಲಿ, ಲೀ, 'ಇಲ್ಲಿ ಒಬ್ಬ ನೈಜ ಅಮೆರಿಕನ್ನನನ್ನು ನೋಡಲು ನನಗೆ ಬಹಳ ಖುಷಿಯಾಗಿದೆ' ಎಂದು ಪಾರ್ಕರ್‌ಗೆ ಹೇಳಿದರು. ಇದಕ್ಕೆ, 'ನಾವೆಲ್ಲರೂ ಸಹ ಅಮೆರಿಕನ್ನರು' ಎಂದು ಪಾರ್ಕರ್‌ ಪ್ರತಿಕ್ರಿಯಿಸಿದರು.[೯೮]

ಸ್ಪೇನ್ - ಅಮೆರಿಕಾ ಸಮರ

ಸ್ಪೇನ್-ಅಮೆರಿಕನ್‌ ಯುದ್ಧವೆಂಬುದು ಸ್ಪೇನ್‌ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ ನಡುವೆ, 1898ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಸಂಭವಿಸಿದ ಯುದ್ಧ. ಕ್ಯೂಬಾ, ಫಿಲಿಪೀನ್ಸ್‌ ಮತ್ತು ಪೋರ್ಟೊ ರಿಕೋ ದೇಶಗಳ ಸ್ವಾಧೀನ ವಿಚಾರಗಳ ಬಗ್ಗೆ ಸಂಭವಿಸಿದ ಯುದ್ಧವಿದು. ಕ್ಯೂಬಾ ದೇಶದಲ್ಲಿ ಅಮೆರಿಕಾ ಹಸ್ತಕ್ಷೇಪದಲ್ಲಿ ಅಂದಿನ ಅಮೆರಿಕಾ ರಾಷ್ಟ್ರಾಧ್ಯಕ್ಷ ಥಿಯೊಡೊರ್‌ ರೂಸ್ವೆಲ್ಟ್‌ ಸಕ್ರಿಯಾತ್ಮಕ ಪ್ರೋತ್ಸಾಹ ನೀಡಿದರು. ಸ್ವಯಂಸೇವಕರ ಪಡೆಯನ್ನು ಸಂಘಟಿಸಿರೆಂದು ಅಮೆರಿಕಾದ ಭೂಸೇನೆಯ ಮನವೊಲಿಸುವಲ್ಲಿ ರೂಸ್ವೆಲ್ಟ್‌ ಲಿಯೊನಾರ್ಡ್‌ ವುಡ್‌ರೊಂದಿಗೆ ಸಕ್ರಿಯರಾಗಿದ್ದರು. ಇದರ ಫಲವಾಗಿ ಮೊದಲ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಯಂಸೇವಕ ಅಶ್ವದಳ ರಚನೆಯಾಯಿತು. 'ರಫ್‌ ರೈಡರ್ಸ್‌' ಎಂದು ಹೆಸರಿಸಲಾದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಸ್ವಯಂಸೇವೆಯ ಅಶ್ವಸೈನ್ಯವು ಯುದ್ಧದಲ್ಲಿ ಸಕ್ರಿಯವಾಗಿದ್ದ ಏಕೈಕ ಪಡೆಯಾಗಿತ್ತು. ಸೈನ್ಯಕ್ಕೆ ಸೇರಿಸಿಕೊಳ್ಳುವವರು ದನಗಾಹಿರಾವುತರು, ಚಿನ್ನ ಅಥವಾ ಗಣಿ ಅನ್ವೇಷಕರು, ಬೇಟೆಗಾರರು, ಜೂಜುಕೋರರು ಮತ್ತು ಸ್ಥಳೀಯ ಅಮೆರಿಕನ್ನರ ವೈವಿದ್ಯದ ಜನರ ಗುಂಪನ್ನು ಒಟ್ಟುಸೇರಿಸಿದರು. ಅರವತ್ತು ಸ್ಥಳೀಯ ಅಮೆರಿಕನ್ನರು 'ರಫ್‌ ರೈಡರ್ಸ್'‌ ಆಗಿ ಸೇವೆ ಸಲ್ಲಿಸಿದರು.[೧೦೦]

ಎರಡನೆಯ ವಿಶ್ವ ಸಮರ

ನವಾಜೊ, ಪಿಮಾ, ಪಾವ್ನೀ ಮತ್ತು ಇತರ ಸ್ಥಳೀಯ ಅಮೆರಿಕನ್‌ ಸೈನ್ಯದೊಂದಿಗೆ ಜನರಲ್ ಡೌಗ್ಲಾಸ್ ಮ್ಯಾಕ್‌ಆರ್ತರ್‌ರ ಭೇಟಿ.

ಎರಡನೆಯ ವಿಶ್ವಯುದ್ಧದಲ್ಲಿ, ಸುಮಾರು 44,000 ಸ್ಥಳೀಯ ಅಮೆರಿಕನ್ನರು ಅಮೆರಿಕಾ ಸಂಯುಕ್ತ ಸಂಸ್ಥಾನದ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಿದರು.[೧೦೧] ಆಗ 19ನೇ ಶತಮಾನದಲ್ಲಿ ಮರುಸ್ಥಳಾಂತರ ಆರಂಭವಾದಾಗಿನಿಂದಲೂ, ಮೀಸಲು ಪ್ರದೇಶಗಳಿಂದ ಸ್ಥಳೀಯರ ಭಾರೀ ಪ್ರಮಾಣದ ವಲಸೆ ಎಂದು ಬಣ್ಣಿಸಲಾಗಿದ್ದು, ಅಂತಾರಾಷ್ಟ್ರೀಯ ಸಂಘರ್ಷ ಸ್ಥಳೀಯ ಅಮೆರಿಕನ್ನರ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಇತರೆ ಅಮೆರಿಕನ್‌ ಪುರುಷರಂತೆಯೇ, ಸ್ಥಳೀಯ ಸಂತತಿಯ ಪುರುಷರನ್ನೂ ಸಹ ಸೇನಾ ಸೇವೆಗಾಗಿ ಸೇರಿಸಿಕೊಳ್ಳಲಾಯಿತು. ಅವರ ಸಹ-ಸೈನಿಕರು ಅವರನ್ನು ಬಹಳ ಗೌರವದಿಂದ ಕಂಡರು, ಏಕೆಂದರೆ, ಅತಿ ಕಠಿಣ ಸ್ಥಳೀಯ ಅಮೆರಿಕನ್ ಯೋಧರ ಕುರಿತು ದಂತಕಥೆಗಳು ಅಮೆರಿಕಾದ ಇತಿಹಾಸದ ಪ್ರಮುಖ ಘಟನಾವಳಿಗಳ ಪಟ್ಟಿಗೆ ಸೇರಿದ್ದವು. ಬಿಳಿಯ ಸೈನಿಕರು ಕೆಲವೊಮ್ಮೆ ಸ್ಥಳೀಯ ಅಮೆರಿಕನ್‌ ಸಹ-ಸೈನಿಕರನ್ನು 'ಚೀಫ್‌' ಎಂದು ಹರ್ಷಚಿತ್ತದಿಂದ ಮರ್ಯಾದೆ ಸಲ್ಲಿಸುತ್ತಿದ್ದರು.ಮೀಸಲು ವ್ಯವಸ್ಥೆಯ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಹೆಚ್ಚಾದಂತೆಯೇ, ಸ್ಥಳೀಯ ಅಮೆರಿಕನ್‌ ಸಂಸ್ಕೃತಿಗೆ ವ್ಯಾಪಕ ಬದಲಾವಣೆ ತಂದಿತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಇಂಡಿಯನ್‌ ಆಯುಕ್ತರು 1945ರಲ್ಲಿ ನೀಡಿದ ಹೇಳಿಕೆಯಂತೆ, 'ಯುದ್ಧವು ಮೀಸಲು ಯುಗದ ಆರಂಭ ಕಾಲದಿಂದಲೂ ಸ್ಥಳೀಯರ ಜೀವನದ ಮೇಲೆ ಭಾರಿ ಪ್ರಮಾಣದ ಭಂಗ ಉಂಟುಮಾಡಿತು.' ಇದು ಬುಡಕಟ್ಟು ಜನರ ಅಭ್ಯಾಸಗಳು, ದೃಷ್ಟಿಕೋನಗಳು ಮತ್ತು ಆರ್ಥಿಕ ಯೋಗಕ್ಷೇಮದ ಮೇಲೆ ಬಹಳಷ್ಟು ಪರಿಣಾಮ ಬೀರಿತು..[೧೦೨] ಈ ಬದಲಾವಣೆಗಳಲ್ಲಿ ಬಹಳಷ್ಟು ಗಮನಾರ್ಹವಾದದ್ದು, ಯುದ್ಧಕಾಲದಲ್ಲಿ ಶ್ರಮಿಕರ ಕೊರತೆಯ ಫಲವಾಗಿ, ಜನರಿಗೆ ಉತ್ತಮ ವೇತನ ನೀಡಬಲ್ಲ ಕೆಲಸವನ್ನು ಹುಡುಕುವ ಅವಕಾಶ ಸಿಕ್ಕಿತು.. ಆದರೆ ಈ ನಿಟ್ಟಿನಲ್ಲಿ ಹಾನಿಗಳೂ ಉಂಟಾಗಿದ್ದವು. ಒಟ್ಟಾರೆ, 12,00 ಪುಯೆಬ್ಲೊ ಜನರು ಎರಡನೆಯ ವಿಶ್ವಯುದ್ಧದಲ್ಲಿ ಸಕ್ರಿಯರಾಗಿದ್ದರು. ಇವರಲ್ಲಿ ಅರ್ಧದಷ್ಟು ಮಾತ್ರ ಬದುಕುಳಿದು ವಾಪಸಾದರು. ಜೊತೆಗೆ, ಇನ್ನಷ್ಟು ನವಜೊ ಜನಾಂಗದವರು ಪೆಸಿಫಿಕ್‌ನಲ್ಲಿ ಸೇನೆಗಾಗಿ ಸಂಕೇತ ಭಾಷಿಕರಾಗಿ ಸೇವೆ ಸಲ್ಲಿಸಿದರು. ಅವರು ರಚಿಸಿದ ಸಂಕೇತಗಳು, ಗುಪ್ತಭಾಷಿಕವಾಗಿ ಬಹಳ ಸರಳವಾಗಿದ್ದರೂ ಜಪಾನೀಯರು ಅದನ್ನು ಭೇದಿಸಲಾಗಲಿಲ್ಲ.

ಇಂದಿನ ಸ್ಥಳೀಯ ಅಮೆರಿಕನ್ನರು

"ಇಂಡಿಯನ್‌ ರಾಷ್ಟ್ರ"ದಾದ್ಯಂತದ ವಿವಿಧ ಗುಂಪು, ಬುಡಕಟ್ಟು ಮತ್ತು ಜನಾಂಗದ ಸ್ಥಳೀಯ ಅಮೆರಿಕನ್ನರ ಭಾವಚಿತ್ರ.

ಅದೇ ವೇಳೆಗೆ 1975ರಲ್ಲಿ ಇಂಡಿಯನ್‌ ಸ್ವಯಂ-ನಿರ್ಧಾರಾಧಿಕಾರ ಮತ್ತು ಶಿಕ್ಷಣಾ ನೆರವು ಕಾಯಿದೆಯನ್ನು ಅನುಮೋದಿಸಲಾಯಿತು. ಇದರೊಂದಿಗೆ 15 ವರ್ಷಗಳ ಕಾಲ ನೀತಿ-ಸೂತ್ರಗಳ ಪರಿವರ್ತನೆಗಳ ಅಭಿಯಾನ ಅಂತ್ಯಗೊಂಡಿತು. ನಂತರ 1960ರ ದಶಕದ ಕಾಲದಲ್ಲಿನ ಇಂಡಿಯನ್‌ ಕ್ರಿಯಾವಾದ, ನಾಗರಿಕ ಹಕ್ಕು ಚಳವಳಿ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಸಮುದಾಯ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿ, ಸ್ಥಳೀಯ ಅಮೆರಿಕನ್ನರ ಸ್ವಯಂ-ನಿರ್ಧಾರಾಧಿಕಾರದ ಅಗತ್ಯವನ್ನು ಈ ಕಾಯಿದೆಯು ಗುರುತಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರವು ಅಂತ್ಯಗೊಳಿಸುವಿಕೆ(ಟರ್ಮಿನೇಷನ್) ನೀತಿಯನ್ನು ರದ್ದುಗೊಳಿಸಿ, ಸ್ಥಳೀಯ ಅಮೆರಿಕನ್ನರು ಸ್ವಯಮಾಧಿಕಾರ ರಚಿಸುವ ಮತ್ತು ತಮ್ಮ ಭವಿಷ್ಯಗಳನ್ನು ರೂಪಿಸಿಕೊಳ್ಳುವ ಯತ್ನಗಳಿಗೆ ಪ್ರೋತ್ಸಾಹಿಸಿದರು.ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 562 ಸಂಯುಕ್ತವಾಗಿ ಮನ್ನಣೆ ಪಡೆದ ಪಂಗಡ ಸರ್ಕಾರಗಳಿವೆ. ಈ ಪಂಗಡಗಳಿಗೆ ತಮ್ಮದೇ ಆದ ಸರ್ಕಾರ ರಚಿಸಿಕೊಳ್ಳುವ, ನಾಗರಿಕ ಮತ್ತು ಅಪರಾಧಿ-ಸಂಬಂಧಿತ ಕಾನೂನು ಜಾರಿಗೊಳಿಸುವ, ಕಂದಾಯ ವಿಧಿಸುವ, ಸದಸ್ಯತ್ವಕ್ಕೆ ನೀತಿ-ನಿಯಮಾವಳಿಗಳನ್ನು ಸ್ಥಾಪಿಸುವ, ಪರವಾನಗಿ ನೀಡುವುದು ಹಾಗೂ ಚಟುವಟಿಕೆಗಳನ್ನು ನಿಯಂತ್ರಿಸುವ, ಪಂಗಡ ಪ್ರಾಂತ್ಯಗಳಲ್ಲಿ ವ್ಯಕ್ತಿಗಳನ್ನು ಸೇರಿಸಲು ಅಥವಾ ಅವುಗಳಿಂದ ಹೊರಗಿಡಲು ಹಕ್ಕಿದೆ. ಸ್ವ-ಸರ್ಕಾರ ರಚಿಸುವ ಪಂಗಡ ಅಧಿಕಾರಗಳ ಮೇಲೆ ಇತಿಮಿತಿಗಳಲ್ಲಿ ರಾಜ್ಯಗಳಿಗೆ ಅನ್ವಯಿಸುವ ಇತಿಮಿತಿಗಳನ್ನೂ ಒಳಗೊಂಡಿವೆ. ಉದಾಹರಣೆಗೆ, ಪಂಗಡಗಳಾಗಲೀ ರಾಜ್ಯಗಳಿಗಾಗಲೀ ಯುದ್ಧ ನಡೆಸಲು, ಇತರೆ ರಾಷ್ಟ್ರಗಳೊಂದಿಗೆ ಸಂಬಂಧ, ಅಥವಾ ನಗ-ನಾಣ್ಯ ಮುದ್ರಣ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ.[೧೦೩]ತಾನು ಸ್ಥಳೀಯ ಅಮೆರಿಕನ್‌ ಜನಾಂಗದವರ ಪರಮಾಧಿಕಾರವನ್ನು ಮನ್ನಿಸುತ್ತೇನೆ ಎಂದು ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರದ ಫೆಡರಲ್ ಸರ್ಕಾರದ ಹೇಳಿಕೆಯು ನಿರೀಕ್ಷಿತ ಮಟ್ಟಕ್ಕೆ ಬರುತ್ತಿಲ್ಲ ಎಂದು ಹಲವು ಸ್ಥಳೀಯ ಅಮೆರಿಕನ್ನರು ಮತ್ತು ಸ್ಥಳೀಯ ಅಮೆರಿಕನ್‌ ಹಕ್ಕುಗಳ ಸಮರ್ಥಕರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾ ಸಂಯುಕ್ತ ಸಂಸ್ಥಾನವು ಈಗಲೂ ಸಹ, ಸ್ಥಳೀಯ ಅಮೆರಿಕನ್‌ ಜನಾಂಗದ ಆಳ್ವಿಕೆ ಮುಂದುವರೆಸಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾನೂನುಗಳನ್ನು ಅವರಿಗೆ ಅನ್ವಯಿಸುತ್ತಲಿರುವುದೇ ಇದಕ್ಕೆ ಕಾರಣವಾಗಿತ್ತು. ಇಂತಹ ಸಮರ್ಥಕರ ಪ್ರಕಾರ, ಸ್ಥಳೀಯ ಅಮೆರಿಕನ್ನರ ಪರಮಾಧಿಕಾರಕ್ಕಾಗಿ ನಿಜವಾದ ಮರ್ಯಾದೆಯೆಂದರೆ, ಇತರೆ ದೇಶಗಳಂತೆಯೇ, ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂಯುಕ್ತತಾ ಸರ್ಕಾರವೂ ಸಹ ಸ್ಥಳೀಯ ಅಮೆರಿಕನ್‌ ಜನಾಂಗದವರೊಂದಿಗೆ ವ್ಯವಹರಿಸಿ, ಸ್ಥಳೀಯ ಅಮೆರಿಕನ್ನರ ವಿಚಾರಗಳನ್ನು ಬ್ಯೂರೊ ಆಫ್‌ ಇಂಡಿಯನ್‌ ಅಫೇರ್ಸ್‌ ಬದಲಿಗೆ ರಾಷ್ಟ್ರ ಪ್ರಧಾನ ಕಾರ್ಯದರ್ಶಿಯವರ ಮೂಲಕವೇ ವ್ಯವಹರಿಸಬೇಕು. ಅಮೆರಿಕನ್‌ ಇಂಡಿಯನ್ನರು, ಇಂಡಿಯನ್‌ ಪಂಗಡಗಳು ಮತ್ತು ಅಲಾಸ್ಕಾ ಸ್ಥಳೀಯರಿಗಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನವು ಟ್ರಸ್ಟ್ ರೂಪದಲ್ಲಿ ಹೊಂದಿದ್ದ 55,700,000 acres (225,000 km2) ಭೂಪ್ರದೇಶದ ಆಡಳಿತ ಮತ್ತು ವ್ಯವಸ್ಥಾಪನೆಯು ತನ್ನ ಸರ್ವೋನ್ನತ ಹೊಣೆಗಾರಿಕೆಯಾಗಿದೆ, ಎಂದು ಬ್ಯೂರೊ ಆಫ್‌ ಇಂಡಿಯನ್‌ ಅಫೇರ್ಸ್‌ ತನ್ನ ಅಂತರಜಾಲತಾಣದಲ್ಲಿ ವರದಿ ಮಾಡಿದೆ.[೧೦೪] ಇಂತಹ ಭೂಪ್ರದೇಶಗಳು ಟ್ರಸ್ಟ್ ರೂಪದಲ್ಲಿ ಹೊಂದಿರುವುದು ಮತ್ತುಅಮೆರಿಕಾ ಸಂಯುಕ್ತ ಸಂಸ್ಥಾನದ ಫೆಡೆರಲ್ ಸರ್ಕಾರವಾಗಲಿ, ಕೆನಡಾ ಆಗಲಿ ಅಥವಾ ಇತರೆ ಯಾವುದೇ ಸ್ಥಳೀಯ ಅಮೆರಿಕನ್‌ ಅಲ್ಲದ ಆಡಳಿತ ಮುಂತಾದ ವಿದೇಶೀಶಕ್ತಿ ನಿಯಂತ್ರಿಸುವುದು ತಗ್ಗಿನಡೆದಂತಾಗುತ್ತದೆ ಎಂದು ಹಲವು ಸ್ಥಳೀಯ ಅಮೆರಿಕನ್ನರು ಮತ್ತು ಸ್ಥಳೀಯ ಅಮೆರಿಕನ್‌ ಹಕ್ಕುಗಳ ಸಮರ್ಥಕರು ನಂಬಿದ್ದಾರೆ.

Forced termination is wrong, in my judgment, for a number of reasons. First, the premises on which it rests are wrong ... The second reason for rejecting forced termination is that the practical results have been clearly harmful in the few instances in which termination actually has been tried.... The third argument I would make against forced termination concerns the effect it has had upon the overwhelming majority of tribes which still enjoy a special relationship with the Federal government ... The recommendations of this administration represent an historic step forward in Indian policy. We are proposing to break sharply with past approaches to Indian problems.

—President Richard Nixon, Special Message on Indian Affairs, July 8, 1970.[೧೦೫]

ಅಲಾಸ್ಕಾದ ಕೊಯುಕಾನ್ ಲೇಖಕ ಪೋಲ್ಡಿನ್ ಕಾರ್ಲೊ

ಆಗ 2003ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಜನಗಣತಿ ಮಂಡಳಿ ಅಂದಾಜಿಸಿದ ಪ್ರಕಾರ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ 2,786,652 ಸ್ಥಳೀಯ ಅಮೆರಿಕನ್ನರಲ್ಲಿ ಸುಮಾರು 928884 ಜನರು ಮೂರು ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ: ಕೆಲಿಫೊರ್ನಿಯಾದಲ್ಲಿ 413,382, ಅರಿಝೊನಾದಲ್ಲಿ 294,137 ಹಾಗೂ ಒಕ್ಲಹೊಮಾದಲ್ಲಿ 279,559 ರಷ್ಟು ಸ್ಥಳೀಯ ಅಮೆರಿಕನ್ನರು ವಾಸಿಸುತ್ತಿದ್ದಾರೆ.[೧೦೬]ಅದಲ್ಲದೇ 2000ರಲ್ಲಿ, ಜನಸಂಖ್ಯೆಯ ವಿಚಾರದಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಅತಿದೊಡ್ಡ ಪಂಗಡಗಳೆಂದರೆ ನವಜೊ, ಚೆರೊಕಿ, ಚೊಕ್ಟಾ, ಸಿಯುಕ್ಸ್‌, ಚಿಪ್ಪವಾ, ಅಪ್ಯಾಚ್‌, ಬ್ಲ್ಯಾಕ್‌ಫೀಟ್‌, ಇರೊಕ್ವೊಯಿಸ್‌ ಮತ್ತು ಪುಯೆಬ್ಲೊ. ಆದಾಗ್ಯೂ 2000ರಲ್ಲಿ, ಸ್ಥಳೀಯ ಅಮೆರಿಕನ್‌ ಸಂತತಿಯ ಹತ್ತು ಅಮೆರಿಕನ್ನರಲ್ಲಿ ಎಂಟರಲ್ಲಿ ಮಿಶ್ರಿತ ಕುಲದವಾಗಿದ್ದರು. ಮುಂದಿನ 2100ರಷ್ಟರೊಳಗೆ, ಈ ಅನುಪಾತ ಹತ್ತರಲ್ಲಿ ಒಂಬತ್ತಕ್ಕೇರುತ್ತದೆಂದು ಅಂದಾಜಿಸಲಾಗಿದೆ.[೧೦೭]ಇನ್ನೂ ಹೆಚ್ಚಿಗೆ, ರಾಜ್ಯ ಮಟ್ಟದಲ್ಲಿ ಮಾನ್ಯತೆಯುಳ್ಳ, ಆದರೆ ಸಂಯುಕ್ತ ಸರ್ಕಾರವು ಮಾನ್ಯತೆ ನೀಡಿರದ ಹಲವು ಪಂಗಡಗಳಿವೆ. ರಾಜ್ಯಗಳ ಮಾನ್ಯತೆಯೊಂದಿಗಿನ ಹಕ್ಕು ಮತ್ತು ಸವಲತ್ತುಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುವವು.ಕೆಲವು ಪಂಗಡ ರಾಷ್ಟ್ರಗಳು ತಮ್ಮ ಪರಂಪರೆಗಳನ್ನು ದೃಢಪಡಿಸಿ ಫೆಡರಲ್ ಮಾನ್ಯತೆ ಗಳಿಸುವಲ್ಲಿ ವಿಫಲವಾಗಿವೆ. ಸ್ಯಾನ್‌ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದ ಮುವೆಕ್ಮಾ ಒಹ್ಲೊನ್‌ ಮಾನ್ಯತೆಯಾಗಿ ಸಂಯುಕ್ತತಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿವೆ.[೧೦೮] ಪೂರ್ವ ಪ್ರದೇಶದ ಬುಡಕಟ್ಟು ಜನಾಂಗದವರು ತಮ್ಮ ಬುಡಕಟ್ಟು ಸ್ಥಾನಮಾನದ ಬಗ್ಗೆ ಅಧಿಕೃತ ಮಾನ್ಯತೆ ಗಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಮಾನ್ಯತೆಯಿಂದಾಗಿ ಕೆಲವು ಸವಲತ್ತುಗಳು ಲಭಿಸುವವು. ಇವುಗಳಲ್ಲಿ ಕಲಾವಸ್ತು ಮತ್ತು ಕರಕುಶಲ ವಸ್ತುಗಳು ಸ್ಥಳೀಯ ಅಮೆರಿಕನ್‌ ಎಂದು ಗುರುತಿಸುವ ಹಕ್ಕು ಹಾಗೂ, ಸ್ಥಳೀಯ ಅಮೆರಿಕನ್ನರಿಗಾಗಿ ವಿಶೇಷವಾಗಿ ಮೀಸಲಿರುವ ಅನುದಾನಗಳಿಗಾಗಿ ಅರ್ಜಿ ಸಲ್ಲಿಸಲು ಅನುಮತಿಯೂ ಸೇರಿವೆ. ಆದರೆ, ಒಂದು ಪಂಗಡದ ಮಾನ್ಯತೆ ಗಳಿಸುವುದು ಸುಲಭದ ಕೆಲಸವಲ್ಲ. ಈ ರೀತಿಯ ಮಾನ್ಯತೆ ಗಳಿಸಬೇಕೆಂದಲ್ಲಿ, ಆ ಪಂಗಡದ ಸದಸ್ಯರು ಪಂಗಡದ ವಂಶದ ಬಗ್ಗೆ ವಿಸ್ತಾರವಾದ ವಂಶಪರಂಪರೆಯ ಮಾಹಿತಿ-ಪುರಾವೆಗಳನ್ನು ಸಲ್ಲಿಸಬೇಕಾಗಿದೆ.

ತಮ್ಮ ಭೂಮಿಯಲ್ಲಿ ಅಥವಾ ಅದರ ಹತ್ತಿರದಲ್ಲಿ ಪರಿತ್ಯಕ್ತ ಯುರೇನಿಯಂ ಗಣಿಗಳ ಉಪಸ್ಥಿ ಕೂಡ ಸ್ಥಳೀಯ ಜನರು ಪರಿಹರಿಸಲು ಯತ್ನಿಸುವ ಸಮಸ್ಯೆಗಳಲ್ಲಿ ಒಳಗೊಂಡಿದೆ.

ಬಡತನದ ಮಧ್ಯೆ, ಮೀಸಲು ಪ್ರದೇಶದಲ್ಲಿ, ಅಥವಾ ವಿಸ್ತಾರ ಸಮಾಜದಲ್ಲಿ ಜೀವನ ನಡೆಸಲು ಸ್ಥಳೀಯ ಅಮೆರಿಕನ್ನರ ಹೋರಾಟಗಳು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿವೆ. ಇದರಲ್ಲಿ ಕೆಲವು ಪೌಷ್ಟಿಕಾಂಶ ಮತ್ತು ಆರೋಗ್ಯದ ಸಮಸ್ಯೆಗಳೂ ಉಂಟು. ಈ ಸಮುದಾಯದಲ್ಲಿ ಅತಿಹೆಚ್ಚು ಪ್ರಮಾಣದ ಮದ್ಯಪಾನ ವ್ಯಸನದ ಸಮಸ್ಯೆಯಿದೆ.[೧೦೯] ಸ್ಥಳೀಯ ಅಮೆರಿಕನ್‌ ಸಮುದಾಯಗಳೊಂದಿಗೆ ಕಾರ್ಯಪ್ರವೃತ್ತ ನಿಯೋಗಗಳು, ಆ ಪಂಗಡಗಳ ಸಂಪ್ರದಾಯ-ಪರಂಪರೆಗಳನ್ನು ಗೌರವಿಸಿ, ತಮ್ಮದೇ ಸಾಂಸ್ಕೃತಿಕ ಔಷಧ ರೀತಿ-ನೀತಿಗಳಲ್ಲಿ ಪಾಶ್ಚಾತ್ಯ ಔಷಧಗಳ ಅನುಕೂಲಗಳನ್ನು ಜೋಡಿಸಲು ಯತ್ನಿಸುತ್ತಿವೆ.

"It has long been recognized that Native Americans are dying of diabetes, alcoholism, tuberculosis, suicide, and other health conditions at shocking rates. Beyond disturbingly high mortality rates, Native Americans also suffer a significantly lower health status and disproportionate rates of disease compared with all other Americans."

— The U.S. Commission on Civil Rights, September 2004 [೧೧೦]
ಈ ಜನಗಣತಿ ವಿಭಾಗ ನಕ್ಷೆಯು 2000ರ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಸ್ಥಳೀಯ ಅಮೆರಿಕನ್ನರ ಸ್ಥಳಗಳನ್ನು ತೋರಿಸುತ್ತಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದ ಸಂಯುಕ್ತ ಮತ್ತು ಶಾಸಕಾಂಗ ಶಾಖೆಗಳು ಪಂಗಡದ ಆಡಳಿತ ವ್ಯವಸ್ಥೆಯನ್ನು ಅಂತ್ಯಗೊಳಿಸುವುದು ಎಂದು ಶಿಫಾರಸು ಮಾಡಿ ವಾಷಿಂಗ್ಟನ್‌ ರಿಪಬ್ಲಿಕನ್‌ ಪಾರ್ಟಿ 2000ರ ಜುಲೈ ತಿಂಗಳಲ್ಲಿ ನಿರ್ಣಯ ಅಂಗೀಕರಿಸಿತು.[೧೧೧] ಹೀಗೆ 2007ರಲ್ಲಿ, ಡೆಮೊಕ್ರಾಟಿಕ್‌ ಪಾರ್ಟಿಯ ಶಾಸನಸಭಾ ಸದಸ್ಯರ ಗುಂಪು, ಚೆರೋಕೀ ರಾಷ್ಟ್ರ ಆಡಳಿತ ವ್ಯವಸ್ಥೆಯನ್ನು ಅಂತ್ಯಗೊಳಿಸಲೆಂದು ಅಮೆರಿಕಾ ಸಂಯುಕ್ತ ಸಂಸ್ಥಾನ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಸೂದೆ ಮಂಡಿಸಿತು.[೧೧೨] ಅಲ್ಲದೇ 2004ರಷ್ಟರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪಶ್ಚಿಮ ಭಾಗದಲ್ಲಿ ಲಭ್ಯವಾದ ಕಲ್ಲಿದ್ದಲು ಮತ್ತು ಯುರೆನಿಯಮ್‌ನಂತಹ ಸೈಸರ್ಗಿನ ಸಂಪನ್ಮೂಲಗಳನ್ನು ಇತರರು ಕಸಿದುಕೊಳ್ಳುವ ಯತ್ನಗಳ ಕುರಿತು ವಿವಿಧ ಸ್ಥಳೀಯ ಅಮೆರಿಕನ್ನರು ಜಾಗರೂಕರಾಗಿದ್ದರು.[೧೧೩][೧೧೪][೧೧೫]ವರ್ಜಿನಿಯಾ ರಾಜ್ಯದಲ್ಲಿ, ಸ್ಥಳೀಯ ಅಮೆರಿಕನ್ನರು ಈ ಸಂದರ್ಭದಲ್ಲಿ ಒಂದು ವಿಶಿಷ್ಟ, ವಿಚಿತ್ರ ಸಮಸ್ಯೆ ಎದುರಿಸುವರು. ವರ್ಜಿನಿಯಾದಲ್ಲಿ ಫೆಡರಲ್ ಮಟ್ಟದಲ್ಲಿ ಮಾನ್ಯತೆ ಪಡೆದ ಪಂಗಡಗಳಿಲ್ಲ. ಆ ರಾಜ್ಯದ ಮಹತ್ವ ಅಂಕಿ ಅಂಶ ಮಂಡಳಿಯ ದಾಖಲೆ ಸಂಗ್ರಹದ ಅಧಿಕಾರಿಯಾಗಿದ್ದ ವಾಲ್ಟರ್‌ ಆಷ್ಬಿ ಪ್ಲೆಕರ್‌, ಒನ್‌ ಡ್ರಾಪ್‌ ರೂಲ್‌ನ ತಮ್ಮದೇ ಆದ ವ್ಯಾಖ್ಯಾನ ಅನ್ವಯಿಸಿದ್ದರೆಂದು ಇದಕ್ಕೆ ವಿಶ್ಲೇಷಕರು ಕಾರಣ ನೀಡಿದ್ದಾರೆ. ಇವರು 1912ರಿಂದ 1946ರ ತನಕ ಸೇವೆ ಸಲ್ಲಿಸಿದ್ದರು. "ಬಿಳಿಯರು" ಮತ್ತು "ವರ್ಣೀಯರು" ಎಂಬ ಕೇವಲ ಎರಡೇ ಜನಾಂಗೀಯ ಗುಂಪುಗಳಿಗೆ ಮಾನ್ಯತೆ ನೀಡುವ ಕಾನೂನೊಂದನ್ನು ರಾಜ್ಯದ ಜನರಲ್ ಅಸೆಂಬ್ಲಿ 1920ರಲ್ಲಿ ಅನುಮೋದಿಸಿತು. ಆಫ್ರಿಕನ್‌ ಅಮೆರಿಕನ್ನರೊಂದಿಗೆ ಅಂತರ್ವಿವಾಹವಾದ ಕಾರಣ ರಾಜ್ಯದ ಸ್ಥಳೀಯ ಅಮೆರಿಕನ್ನರ ಶುದ್ಧ ಜನಾಂಗವನ್ನು ಕಲಬೆರಕೆ ಮಾಡಲಾಗುತ್ತಿದೆ, ಜೊತೆಗೆ ಆಂಶಿಕ ಕಪ್ಪು ವಂಶಪರಂಪರೆಯ ಜನರು ಸ್ಥಳೀಯ ಅಮೆರಿಕನ್ನರಾಗಿ ಮಾನ್ಯತೆ ಪಡೆಯಲು ಯತ್ನಿಸಿದ್ದಾರೆ ಎಂದು ಪ್ಲೆಕರ್‌ ನಂಬಿದ್ದರು. ಪ್ಲೆಕರ್‌ ಹೇಳುವಂತೆ, ನೋಡಲು ಅವರು ಹೇಗಾದರೂ ಇರಲಿ ಅಥವಾ ಸಾಂಸ್ಕೃತಿಕ ಗುರುತು ಏನಾದರೂ ಇರಲಿ, ಆಫ್ರಿಕನ್‌ ವಂಶಪರಂಪರೆಯ ಯಾರೇ ಆದರೂ ಅವರನ್ನು 'ವರ್ಣೀಯರು' ಎಂದೇ ವಿಂಗಡಿಸಬೇಕಾಯಿತು. ತಮ್ಮಲ್ಲಿದ್ದ ಮಾಹಿತಿ ಮತ್ತು ಕಾನೂನಿನ ವ್ಯಾಖ್ಯಾನವನ್ನು ಆಧರಿಸಿ, ಆ ರಾಜ್ಯದಲ್ಲಿರುವ ಎಲ್ಲಾ ಸ್ಥಳೀಯ ಅಮೆರಿಕನ್ನರನ್ನು ವರ್ಣೀಯರು ಎಂದು ವಿಂಗಡಿಸಬೇಕೆಂದು ಪ್ಲೆಕರ್‌ ಸ್ಥಳೀಯ ಸರ್ಕಾರಗಳನ್ನು ಒತ್ತಾಯಿಸಿದರು. ಮರುವರ್ಗೀಕರಣ ಪರಿಶೀಲನೆಗೆ ಕುಟುಂಬದ ಉಪನಾಮಗಳ ಪಟ್ಟಿಯನ್ನು ಒದಗಿಸಿದರು. ಇದರಿಂದಾಗಿ ರಾಜ್ಯದ ಅಧಿಕಾರಿಗಳು ಸ್ಥಳೀಯ ಅಮೆರಿಕನ್‌ ಸಮುದಾಯಗಳು ಮತ್ತು ಅವರ ಕುಟುಂಬಗಳಿಗೆ ಸಂಬಂಧಿಸಿದ ನಿಖರ ದಾಖಲೆಗಳೆಲ್ಲವನ್ನೂ ನಾಶಗೊಳಿಸಿದರು. ಕೆಲವೊಮ್ಮೆ ಒಂದೇ ಕುಟುಂಬದ ಬೇರೆಬೇರೆ ಸದಸ್ಯರನ್ನು 'ಬಿಳಿಯರು' ಮತ್ತು 'ವರ್ಣೀಯರು' ಎಂದು ವಿಂಗಡಿಸಲಾಯಿತು. ವ್ಯಕ್ತಿಯೊಬ್ಬರಿಗೆ ತಾವು 'ಸ್ಥಳೀಯ ಅಮೆರಿಕನ್‌' ಎಂದು ಹೇಳಿಕೊಳ್ಳಲು ಮುಖ್ಯಗುರುತಿಗೆ ಅವಕಾಶವೇ ಇರಲಿಲ್ಲ.[೧೧೬] ಆದರೂ, ವರ್ಜಿನಿಯಾದಲ್ಲಿರುವ ಪಂಗಡಗಳಿಗೆ ಸಂಯುಕ್ತತಾ,ಒಕ್ಕೂಟ ಮಟ್ಟದ ಮನ್ನಣೆ ನೀಡುವ ಮಸೂದೆಯನ್ನು ಸೆನೇಟ್‌ ಇಂಡಿಯನ್‌ ವ್ಯವಹಾರಗಳ ಸಮಿತಿಯು 2009ರಲ್ಲಿ ಅಂಗೀಕರಿಸಿತು.[೧೧೭]ಸಂಯುಕ್ತತಾ ಮನ್ನಣೆ ಹಾಗೂ ಸಂಬಂಧಿತ ಸವಲತ್ತುಗಳನ್ನು ಗಳಿಸಲು, ಪಂಗಡಗಳು ತಾವು 1900ರಿಂದಲೂ ಅಲ್ಲಿ ವಾಸಿಸುತ್ತಿದ್ದೆವು ಎಂಬುದರ ಪುರಾವೆ ಒದಗಿಸಬೇಕಿದೆ. ಸಂಯುಕ್ತತಾ ಸರ್ಕಾರವು ಈ ನಿಯಮವನ್ನು ಕಾಯ್ದುಕೊಂಡು ಬಂದಿದೆ. ಇತರೆ ಜನಾಂಗದವರೂ ಸಹ, ಇದೇ ರೀತಿಯ ಅಗತ್ಯಗಳನ್ನು ಪೂರೈಸಬೇಕು ಎಂದು ಸಂಯುಕ್ತತಾ ಮಟ್ಟದಲ್ಲಿ ಮನ್ನಣೆ ಗಳಿಸಿದ ಪಂಗಡಗಳು ಮಂಡಳಿಗಳು ಮತ್ತು ಸಮಿತಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಠ ಹಿಡಿದಿದ್ದು ಇದಕ್ಕೆ ಭಾಗಶಃ ಕಾರಣ.[೧೧೬]ಹೀಗೆ 21ನೆಯ ಶತಮಾನದ ಆರಂಭಕಾಲದಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಭೂಚಿತ್ರಣದಲ್ಲಿ, ಅಮೆರಿಕನ್‌ ಆರ್ಥಿಕತೆ ಹಾಗೂ ಸ್ಥಳೀಯ ಅಮೆರಿಕನ್ನರ ಜೀವನದಲ್ಲಿ ಸ್ಥಳೀಯ ಅಮೆರಿಕನ್‌ ಸಮುದಾಯಗಳು ಬಹಳ ಕಾಲ ಉಳಿದುಕೊಳ್ಳುವಂತಹ ಅಂಶವಾಗಿದೆ. ಅಗ್ನಿಶಮನ, ನೈಸರ್ಗಿಕ ಸಂಪನ್ಮೂಲ ವ್ಯವಸ್ಥಾಪನೆ ಮತ್ತು ಕಾನೂನು ಮತ್ತು ಸುವ್ಯವಸ್ಥಾ ಸೇವೆ ನಿರ್ವಹಿಸುವ ಸರ್ಕಾರಗಳನ್ನು ಇಂತಹ ಸಮುದಾಯಗಳು ಸುಸಂಗತವಾಗಿ ರಚಿಸಿಕೊಂಡಿವೆ. ಬಹಳಷ್ಟು ಸ್ಥಳೀಯ ಅಮೆರಿಕನ್‌ ಸಮುದಾಯಗಳು ಸ್ಥಳೀಯ ಕಾಯಿದೆಗಳ ವಿಚಾರವಾಗಿ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು, ನ್ಯಾಯಾಲಯ ವ್ಯವಸ್ಥೆ ಸ್ಥಾಪಿಸಿವೆ. ಹಲವು ಸಮುದಾಯಗಳು, ಸಮುದಾಯಗಳೊಳಗಿನ ಸಾಂಪ್ರದಾಯಿಕ ಅಂಗಗಳಲ್ಲಿರುವ ನೈತಿಕ ಮತ್ತು ಸಾಮಾಜಿಕ ಪ್ರಾಧಿಕಾರಗಳ ವಿವಿಧ ರೂಪಗಳನ್ನು ಆಧರಿಸುತ್ತವೆ. ಸ್ಥಳೀಯ ಅಮೆರಿಕನ್ನರ ವಸತಿ ಅಗತ್ಯಗಳನ್ನು ಪೂರೈಸಲು, ಕಾಂಗ್ರೆಸ್‌ (ಅಮೆರಿಕಾದಲ್ಲಿನ ರಾಷ್ಟ್ರಮಟ್ಟದ ಶಾಸನಸಭೆ) ಸ್ಥಳೀಯ ಅಮೆರಿಕನ್‌ ವಸತಿ ಮತ್ತು ಸ್ವಯಮಾಧಿಕಾರ ಕಾಯಿದೆ (NAHASDA)ಯನ್ನು 1996ರಲ್ಲಿ ಅಂಗೀಕರಿಸಿತು. ಈ ಶಾಸನವನ್ನು ಸಾರ್ವಜನಿಕ ಗೃಹನಿರ್ಮಾಣ ವ್ಯವಸ್ಥೆ ಹಾಗೂ ಇಂಡಿಯನ್‌ ಗೃಹನಿರ್ಮಾಣ ಪ್ರಾಧಿಕಾರಗಳಿಗಾಗಿ ರಚಿಸಲಾದ 1937 ಇಸವಿಯ ಗೃಹನಿರ್ಮಾಣ ಕಾಯಿದೆಯ ಬದಲಿಗೆ ತರಲಾಯಿತು. ಇದರಲ್ಲಿ ಪಂಗಡಗಳಿಗಾಗಿ ರಚಿಸಲಾದ 'ಬ್ಲಾಕ್‌ ಗ್ರ್ಯಾಂಟ್‌ ವ್ಯವಸ್ಥೆ'ಯೂ ಒಳಗೊಂಡಿತ್ತು.

ಸಮುದಾಯದಲ್ಲಿ ಭೇದಭಾವ, ಜನಾಂಗೀಯತೆ ಮತ್ತು ಘರ್ಷಣೆಗಳು

ಬಾರೊಂದರ ಮೇಲೆ ಪ್ರಕಟಪಡಿಸಲಾದ ಒಂದು ತಾರತಮ್ಯದ ಚಿಹ್ನೆ.ಬಿರ್ನೆ, ಮೋಂಟಾನ, 1941.

ಜನನಿಬಿಡತೆಯುಳ್ಳ ಪ್ರಮುಖ ಕೇಂದ್ರಗಳಿಂದ ದೂರವಿರುವ ಮೀಸಲು ಪ್ರದೇಶಗಳಲ್ಲಿ ಬಹಳಷ್ಟು ಪರಿಚಿತ ಸ್ಥಳೀಯ ಅಮೆರಿಕನ್ನರು ವಾಸಿಸುವ ಕಾರಣ, ಸಾರ್ವಜನಿಕರಲ್ಲಿ ಸಮೀಕ್ಷೆ ನಡೆಸಿ, ಸ್ಥಳೀಯ ಅಮೆರಿಕನ್‌ ಸಮುದಾಯದವರ ಬಗ್ಗೆ ಅವರ ಅಭಿಪ್ರಾಯ ತಿಳಿದುಕೊಳ್ಳುವ ಯತ್ನಗಳನ್ನು ವಿಶ್ವವಿದ್ಯಾನಿಲಯಗಳು ಮಾಡಿಲ್ಲ. ಆಗ 2007ರಲ್ಲಿ, ನಿಷ್ಪಕ್ಷಪಾತಿ ಸಾರ್ವಜನಿಕ ಕಾರ್ಯಸೂಚಿ ಸಂಘಟನೆಯು ಒಂದು ಕೇಂದ್ರೀಕೃತ ಸಮೂಹ ಸಮೀಕ್ಷೆ ನಡೆಸಿತು. ತಮ್ಮ ದೈನಿಕ ಜೀವನದಲ್ಲಿ ತಾವು ಸ್ಥಳೀಯ ಅಮೆರಿಕನ್ನರೊಂದಿಗೆ ಭೇಟಿಯಾದದ್ದು ಬಹಳ ವಿರಳ ಎಂದು ಬಹಳಷ್ಟು ಸ್ಥಳೀಯರಲ್ಲದ ಅಮೆರಿಕನ್ನರು ಒಪ್ಪಿಕೊಂಡರು. ಸ್ಥಳೀಯ ಅಮೆರಿಕನ್ನರತ್ತ ಸಹಾನುಭೂತಿ ವ್ಯಕ್ತಪಡಿಸಿ, ಹಿಂದೆ ಅವರ ವಿರುದ್ಧ ನಡೆದ ಅನ್ಯಾಯಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಇತರೆ ಅಮೆರಿಕನ್ನರು, ಇಂದು ಸ್ಥಳೀಯ ಅಮೆರಿಕನ್ನರು ಎದುರಿಸುತ್ತಿರುವ ಸಮಸ್ಯೆಗಳೇನು ಎಂಬುದು ತಮಗೆ ಯಾವುದೇ ನಿಖರ ಕಲ್ಪನೆಯೇ ಇಲ್ಲ ಎಂದು ಹೇಳಿದರು. ತಮ್ಮ ಪಾಲಿಗೆ, ವಿಶಾಲ ಸಮಾಜದಲ್ಲಿ ಇಂದಿಗೂ ಸಹ ಅವರ ವಿರುದ್ಧ ಜನರು ಪೂರ್ವಾಗ್ರಹದ ಧೋರಣೆ ತೋರುತ್ತಾರೆ, ಹಾಗೂ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯ ಅಮೆರಿಕನ್ನರು ಸಮೀಕ್ಷಕರಿಗೆ ತಿಳಿಸಿದರು.[೧೧೮]

He is ignoble—base and treacherous, and hateful in every way. Not even imminent death can startle him into a spasm of virtue. The ruling trait of all savages is a greedy and consuming selfishness, and in our Noble Red Man it is found in its amplest development. His heart is a cesspool of falsehood, of treachery, and of low and devilish instincts ... The scum of the earth!

—Mark Twain, 1870, The Noble Red Man (a satire on James Fenimore Cooper's portrayals) [೧೧೯]

ಸಂಯುಕ್ತತಾ ಸರ್ಕಾರ ಮತ್ತು ಸ್ಥಳೀಯ ಅಮೆರಿಕನ್ನರ ನಡುವಿನ ಘರ್ಷಣೆಗಳು ಕೆಲವೊಮ್ಮೆ ಹಿಂಸಾಚಾರಕ್ಕೆ ಕಾರಣವಾಗುತ್ತವೆ. ಆಗಿನ 20ನೆಯ ಶತಮಾನದಲ್ಲಿ ನಡೆದ ಅತಿ ಗಮನಾರ್ಹ ಘಟನೆಯೆಂದರೆ, ದಕ್ಷಿಣ ಡಕೋಟಾ ರಾಜ್ಯದ ಒಂದು ಸಣ್ಣ ಪಟ್ಟಣದಲ್ಲಿ ನಡೆದ ವೂಂಡೆಡ್‌ ನೀ ಘಟನೆ. ನಾಗರಿಕ ಹಕ್ಕುಗಳ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದ ಕಾಲದಲ್ಲಿ, ಅಮೆರಿಕನ್‌ ಇಂಡಿಯನ್‌ ಮೂವ್ಮೆಂಟ್‌(ಎಐಎಮ್‌)ನ ಸುಮಾರು 200 ಕಾರ್ಯಕರ್ತರು 1973ರ ಫೆಬ್ರವರಿ 27ರಂದು ವೂಂಡೆಡ್‌ ನೀ ಪ್ರದೇಶವನ್ನು ವಶಪಡಿಸಿಕೊಂಡರು. ಸ್ಥಳೀಯ ಅಮೆರಿಕನ್‌ ಹಕ್ಕುಗಳು ಮತ್ತು ಸನಿಹದಲ್ಲಿರುವ ಪೈನ್‌ ರಿಡ್ಜ್‌ ರಿಸರ್ವೇಷನ್‌ ಸಂಬಂಧಿತ ವಿಚಾರಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಸಂಯುಕ್ತತಾ ಕಾನೂನು ಅಧಿಕಾರಿಗಳು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಸೈನಿಕರು ಈ ಪಟ್ಟಣವನ್ನು ಸುತ್ತುವರೆದರು. ಮುಂದೆ ಸಂಭವಿಸಿದ ಗುಂಡಿನಚಕಮಕಿಯಲ್ಲಿ, ಎಐಎಮ್‌ನ ಇಬ್ಬರು ಸೈನಿಕರು ಹತರಾದರು; ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ ಮಾರ್ಷಲ್‌ ಒಬ್ಬರಿಗೆ ಗಾಯವಾಗಿ, ಪಾರ್ಶ್ವವಾಯುವಿಗೆ ತುತ್ತಾದರು.[೧೨೦] ನಂತರ 1975ರ ಜೂನ್‌ ತಿಂಗಳಲ್ಲಿ, ಪೈನ್‌ ರಿಡ್ಜ್‌ ರಿಸರ್ವೇಷನ್‌ನಲ್ಲಿ ಸಶಸ್ತ್ರ ದರೋಡೆಕೋರರನ್ನು ಬಂಧಿಸಲು ಹೋದ ಎಫ್‌ಬಿಐ ಅಧಿಕಾರಿಗಳು ಗುಂಡಿನ ಚಕಮಕಿಯಲ್ಲಿ ಗಾಯಗೊಂಡರು. ಆಗ ತೀರಾ ಹತ್ತಿರದಿಂದ ಹೊಡೆದ ಗುಂಡುಗಳಿಂದ ಹತರಾದರು. ಎಫ್‌ಬಿಐ ಅಧಿಕಾರಿಗಳ ಸಾವಿಗೆ ಕಾರಣನಾಗಿದ್ದ ಎಐಎಂ ಕಾರ್ಯಕರ್ತ ಲಿಯೊನಾರ್ಡ್‌ ಪೆಲ್ಷಿಯರ್‌ಗೆ ಎರಡು ಸತತ ಅವಧಿಗಳ ಜೀವಾವಧಿ ಶಿಕ್ಷೆ ವಿಧಿಸಲಾಯಿತು.[೧೨೧]

LeCompte also endured taunting on the battlefield. "They ridiculed him and called him a 'drunken Indian.' They said, 'Hey, dude, you look just like a haji—you'd better run.' They call the Arabs 'haji.' I mean, it's one thing to worry for your life, but then to have to worry about friendly fire because you don't know who in the hell will shoot you?

— Tammie LeCompte, May 25, 2007, "Soldier highlights problems in U.S. Army"[೧೨೨]

'ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರವು ಹಿಂದೆ ಇಂಡಿಯನ್‌ ಬುಡಕಟ್ಟು ಪಂಗಡಗಳಿಗಾಗಿ ಸರಿಯಿಲ್ಲದ ನೀತಿಗಳನ್ನು ಹೇರಿದಕ್ಕೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪರವಾಗಿ ಎಲ್ಲಾ ಸ್ಥಳೀಯ ಅಮೆರಿಕನ್ನರ ಕ್ಷಮೆ ಯಾಚಿಸುವ' ಒಂದು ಜಂಟಿ ನಿರ್ಣಯವನ್ನು ಕನ್ಸಸ್‌ ಪ್ರದೇಶದ ರಿಪಬ್ಲಿಕನ್‌ ಪ್ರತಿನಿಧಿ ಸೆನೇಟರ್‌ ಸ್ಯಾಮ್‌ ಬ್ರೌನ್‌ಬ್ಯಾಕ್‌ 2004ರಲ್ಲಿ ಮಂಡಿಸಿದರು.[೧೨೩] ಇತ್ತೀಚಿನ 2010ರ ರಕ್ಷಣಾ ಇಲಾಖೆಯ ವಿನಿಯೋಗ ಮಸೂದೆಯ ವಿಚಾರವು ಇನ್ನಷ್ಟು ಪ್ರಾಮುಖ್ಯ ಪಡೆದ ಕಾರಣ, ರಾಷ್ಟ್ರಾಧ್ಯಕ್ಷ ಬರಾಕ್‌ ಹುಸೇನ್‌ ಒಬಾಮಾ 2009ರಲ್ಲಿ ಇದಕ್ಕೆ ಸಹಿ ಹಾಕುವುದರೊಂದಿಗೆ ಶಾಸನವು ಕಾನೂನಾಯಿತು.[೧೨೪]ಆಗ 1975ರಲ್ಲಿ ಎನ್‌ ಎಸ್‌ ಮಿಮಾಕ್‌ನ್ನು ಹತ್ಯೆ ಮಾಡಿದ್ದ ಎಐಎಮ್‌ ಕಾರ್ಯಕರ್ತ ಜಾನ್‌ ಗ್ರಹಾಮ್‌ನ್ನು ವಿಚಾರಣೆಗೊಳಪಡಿಸಲು, 2007ರಲ್ಲಿ ಕೆನಡಾದಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಹಸ್ತಾಂತರಗೊಳಿಸಲಾಯಿತು. ವೂಂಡೆಡ್‌ ನೀ ಘಟನೆ ಸಂಭವಿಸಿ, ಕೆಲ ವರ್ಷಗಳ ನಂತರ, ಎಫ್‌ಬಿಐ ಗೂಢಚಾರಿಣಿ ಎಂಬ ಅನುಮಾನದ ಮೇರೆಗೆ, ಸ್ಥಳೀಯ ಅಮೆರಿಕನ್‌ ಮಹಿಳೆಯನ್ನು ಹತ್ಯೆಗೈಯಲಾಗಿತ್ತು.[೧೨೫][೧೨೬]ಈಚೆಗೆ 2010ರಲ್ಲಿ ಸಿಗರೆಟ್‌ಗಳ ಮೇಲೆ ತೆರಿಗೆ ಹೇರುವ ವಿಚಾರದಲ್ಲಿ ಸೆನೆಕಾ ನೇಷನ್‌ ಮತ್ತು ನ್ಯೂಯಾರ್ಕ್‌ ನಗರದ ಮಹಾಪೌರ ಬ್ಲೂಂಬರ್ಗ್‌ ನಡುವೆ ವಾಗ್ವಾದ ನಡೆಯಿತು. ಸೆನೆಕಾ ನೇಷನ್‌ ಬ್ಲೂಂಬರ್ಗ್‌ರ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿಯಿತು. ರೇಡಿಯೊ ಕಾರ್ಯಕ್ರಮವೊಂದರಲ್ಲಿ 'ರಾಜ್ಯಪಾಲ ಪ್ಯಾಟರ್ಸನ್‌ ದನಗಾಹಿರಾವುತನ ಟೊಪ್ಪಿಗೆ ಮತ್ತು ಗನ್ನು ಹಿಡಿದು ತನಗಾಗಿಯೇ ಹಣ ಬೇಕು' ಎಂದು ಬೇಡಿಕೆಯಿಡತಕ್ಕದ್ದು' ಎಂದು ಬ್ಲೂಂಬರ್ಗ್‌ ಹೇಳಿದಾಗ, ಸೆಪ್ಟೆಂಬರ್‌ 1ರಿಂದ ಜಾರಿಗೆ ಬರುವ ಈ ತೆರಿಗೆಯ ಸಂಬಂಧಿತ ವ್ಯಾಜ್ಯವು ಬಹಳಷ್ಟು ಗಮನ ಸೆಳೆಯಿತು.[೧೨೭]

ವಿಶ್ವಸಂಸ್ಥೆಯ ಮಾನವ ಹಕ್ಕುಗಳಿಂದ ಹೊರತಾದ ಸ್ಥಳೀಯ ಅಮೆರಿಕನ್ನರು

ಸುಮಾರು 25 ವರ್ಷಗಳ ಚರ್ಚೆಯ ನಂತರ, 2007ರ ಸೆಪ್ಟೆಂಬರ್ 13ರಂದು, ವಿಶ್ವಸಂಸ್ಥೆಯ ಮಹಾಸಭೆಯಲ್ಲಿ 'ಮೂಲನಿವಾಸಿ ಜನರ ಹಕ್ಕುಗಳ ಬಗ್ಗೆ ವಿಶ್ವಸಂಸ್ಥೆಯ ಘೋಷಣೆ'ಯನ್ನು ಅಂಗೀಕರಿಸಿತು. ಈ ಘೋಷಣೆಯಲ್ಲಿನ ಬೆಳವಣಿಗೆಯಲ್ಲಿ ಮೂಲನಿವಾಸಿ ಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸಿದರು. ಇದರ ಪರವಾಗಿ 143 ಮತಗಳು ಹಾಗೂ ಕೇವಲ ನಾಲ್ಕು ವಿರೋಧ ಮತಗಳು ಚಲಾವಣೆಯಾದವು. (ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕಾ ಸಂಯುಕ್ತ ಸಂಸ್ಥಾನ). ಐತಿಹಾಸಿಕವಾಗಿ, ದಬ್ಬಾಳಿಕೆಗೊಳಗಾದ, ನಾಗರಿಕ ಮತ್ತು ಮತದಾನ ಹಕ್ಕು ತಪ್ಪಿಸಲಾದ ಸಣ್ಣಪ್ರಮಾಣದ ಮೂಲನಿವಾಸಿ ಜನರ ಸಂಖ್ಯೆಯನ್ನು ವಸಾಹತುದಾರರ ಸಂಖ್ಯೆಯು ಅದೆಷ್ಟೋ ಅಂತರದಲ್ಲಿ ಮೀರಿಸಿದ್ದ [೧೨೮] ಈ ನಾಲ್ಕೂ ರಾಷ್ಟ್ರಗಳು, ವಿಶ್ವಸಂಸ್ಥೆಯ ಪ್ರಧಾನ ಸಭೆಯಲ್ಲಿ ಮಂಡಿಸಲಾದ ಈ ಘೋಷಣೆಯ ಅಂತಿಮ ಪಠ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು. ಆನಂತರ, ವಿರೋಧಿಸಿದ್ದ ಈ ನಾಲ್ಕೂ ರಾಷ್ಟ್ರಗಳ ಪೈಕಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಮ್ಮ ನಿಲುವು ಬದಲಿಸಿ, ಈ ಘೋಷಣೆಯ ಪರ ಮತ ಚಲಾಯಿಸಿದವು.ವಿಶ್ವಸಂಸ್ಥೆಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರತಿನಿಧಿಯಾಗಿ ಮಾತನಾಡಿದ, ರಿಚರ್ಡ್‌ ಗ್ರೆನೆಲ್‌ರ ಸಹಾಯಕ ಸಿಬ್ಬಂದಿ ಹಾಗೂ ವಕ್ತಾರರಾಗಿದ್ದ ಬೆಂಜಮಿನ್‌ ಚಾಂಗ್‌ ಹೇಳಿದ್ದು, 'ಇಂದು ಏನು ಮಾಡಲಾಯಿತೋ ಅದು ಅಸ್ಪಷ್ಟ. ಈಗಿರುವ ಸ್ಥಿತಿಯೆಂದರೆ, ಹಲವು ವಿಭಿನ್ನ ವ್ಯಾಖ್ಯಾನಗಳಾಗಬಹುದು. ಇದು ಸ್ಪಷ್ಟ ಸರ್ವತ್ರ ತತ್ತ್ವವನ್ನು ಪ್ರತಿಪಾದಿಸುವುದಿಲ್ಲ.[೧೨೯] ಅಮೆರಿಕಾ ಸಂಯುಕ್ತ ಸಂಸ್ಥಾನದ ನಿಯೋಗವೂ ಸಹ ಇನ್ನೊಂದು ಕಡತವನ್ನು ಪ್ರಕಟಿಸಿತು. 'ಮೂಲನಿವಾಸಿ ಜನರ ಹಕ್ಕುಗಳ ಬಗ್ಗೆ ಘೋಷಣೆಗಳ ವಿಚಾರವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಟಿಪ್ಪಣಿಗಳು' ಎಂಬ ಪತ್ರವನ್ನು ಪ್ರಕಟಿಸಿತು. ಈ ಪತ್ರದಲ್ಲಿ ಘೋಷಣೆಗೆ ಆಕ್ಷೇಪಗಳನ್ನು ತಿಳಿಸಲಾಯಿತು. ಇತರೆ ಮೂರು ದೇಶಗಳ ಆಕ್ಷೇಪಗಳನ್ನೇ ಅಮೆರಿಕಾ ಸಂಯುಕ್ತ ಸಂಸ್ಥಾನವೂ ಸಹ ಆಧರಿಸಿದೆ. ಆದರೆ, ಜೊತೆಗೆ, ಘೋಷಣೆಯಲ್ಲಿ ಮೂಲನಿವಾಸದ ಜನರು ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡುವಲ್ಲಿ ಮತ್ತು ವ್ಯಾಪ್ತಿ ಸೂಚಿಸುವಲ್ಲಿ ಘೋಷಣೆಯು ವಿಫಲವಾಗಿದೆ, ಎಂದು ಅಮೆರಿಕಾ ಸಂಯುಕ್ತ ಸಂಸ್ಥಾನವು ಅಭಿಪ್ರಾಯಪಟ್ಟಿದೆ.[೧೩೦]

ಕ್ರೀಡಾ ಕ್ಷೇತ್ರಗಳಲ್ಲಿ ಸ್ಥಳೀಯ ಅಮೆರಿಕನ್ನರ ಶುಭಚಿಹ್ನೆಗಳು

ಒಬ್ಬ ವಿದ್ಯಾರ್ಥಿಯು ಫ್ಲೋರಿಡಾ ಸ್ಟೇಟ್ ವಿಶ್ವವಿದ್ಯಾನಿಲಯದ ಶುಭಚಿಹ್ನೆಯಾದ ಮುಖ್ಯ ಓಸಿಯೋಲವಾಗಿ ನಟಿಸುತ್ತಿರುವುದು

ಕ್ರೀಡೆಗಳಲ್ಲಿ ಸ್ಥಳೀಯ ಅಮೆರಿಕನ್‌ ಲಾಂಛನಗಳ ಬಳಕೆಯು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ದೇಶಗಳಲ್ಲಿ ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ. ಕನಿಷ್ಠ ಪಕ್ಷ 18ನೆಯ ಶತಮಾನದಷ್ಟು ಹಿಂದಿನ ಕಾಲದಿಂದಲೂ 'ಆಟವಾಡುವ ಇಂಡಿಯನ್‌' ಇತಿಹಾಸವನ್ನು ಅಮೆರಿಕನ್ನರು ಹೊಂದಿದ್ದುಂಟು.[೧೩೧] ಹಲವು ವ್ಯಕ್ತಿಗಳು [who?] ಶಾಸ್ತ್ರೀಯ ಸ್ಥಳೀಯ ಅಮೆರಿಕನ್ ಯೋಧನ ವ್ಯಕ್ತಿತ್ವ ಹೊರಸೂಸುವ ಶೂರತ್ವ ಮತ್ತು ರಮ್ಯತೆಗಳನ್ನು ಪ್ರಶಂಶಿಸಿದ್ದಾರೆ. ಆದರೆ, ತಮ್ಮೊಂದಿಗೆ ಸಂಬಂಧಿತ ವಸ್ತುಗಳನ್ನು ಲಾಂಛನ ರೂಪದಲ್ಲಿ ಬಳಸುವುದು ಬಹಳ ಅವಹೇಳನಕಾರಿ ಎಂದು ಹಲವು [quantify] ಸ್ಥಳೀಯ ಅಮೆರಿಕನ್ನರು [which?] ಅಭಿಪ್ರಾಯಪಟ್ಟಿದ್ದಾರೆ. ಹಲವು ವಿಶ್ವವಿದ್ಯಾನಿಲಯಗಳು (ಉದಾಹರಣೆಗೆ ನಾರ್ತ್‌ ಡಕೊಟಾ ಫೈಟಿಂಗ್‌ ಸಿಯೊಕ್ಸ್‌ ಆಫ್‌ ಯುನಿವರ್ಸಿಟಿ ಆಫ್‌ ನಾರ್ತ್‌ ಡಕೊಟಾ) ಹಾಗೂ ವೃತ್ತಿಪರ ಕ್ರೀಡಾ ತಂಡಗಳು (ಉದಾಹರಣೆಗೆ ಚೀಫ್‌ ವಾಹೂ ಆಫ್‌ ಕ್ಲೆವಿಲೆಂಡ್‌ ಇಂಡಿಯನ್ಸ್) ಇಂದು ಸ್ಥಳೀಯ ಅಮೆರಿಕನ್‌ ರಾಷ್ಟ್ರಗಳೊಂದಿಗೆ ಚರ್ಚಿಸದೆ ಲಾಂಛನಗಳನ್ನು ಬಳಸಿಕೊಳ್ಳಲಾರವು. ಆದರೆ ಕೆಲಿಫೊರ್ನಿಯಾದ CA ವಲೆಜೊದಲ್ಲಿರುವ ವಲೆಜೊ ಹೈ ಸ್ಕೂಲ್‌ ಮತ್ತು ಅದೇ ರಾಜ್ಯದ CA ಕ್ರಾಕೆಟ್‌ನಲ್ಲಿರುವ ಜಾನ್‌ ಸ್ವೆಟ್‌ ಹೈ ಸ್ಕೂಲ್‌ನಂತಹ ಕೆಳಮಟ್ಟದ ಶಾಲೆಗಳು ಹಾಗೂ ಇತರೆ ಸ್ಥಳೀಯ ಮಟ್ಟದ ಕ್ರೀಡಾ ತಂಡಗಳು [which?] ಲಾಂಛನಗಳನ್ನು ಇಂದಿಗೂ ಬಳಸುತ್ತಿವೆ. ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ, ಟೊಮೇಲ್ಸ್‌ ಬೇ ಹೈ ಸ್ಕೂಲ್‌ ಮತ್ತು ಸೆಕೊಯಾ ಹೈ ಸ್ಕೂಲ್‌ ಸೇರಿದಂತೆ ಹಲವು ಪ್ರೌಢಶಾಲೆಗಳು ತಮ್ಮ ಲಾಂಛನಗಳ ಬಳಕೆ ಕೈಬಿಟ್ಟಿವೆ.

(Trudie Lamb Richmond doesn't) know what to say when kids argue, 'I don't care what you say, we are honoring you. We are keeping our Indian.' ... What if it were 'our black' or 'our Hispanic'?

—-Amy D'orio quoting Trudie Lamb Richmond, March 1996, "Indian Chief Is Mascot No More"[೧೩೨]

ಇತ್ತೀಚೆಗೆ 2005ರ ಆಗಸ್ಟ್‌ ತಿಂಗಳಲ್ಲಿ ನ್ಯಾಷನಲ್‌ ಕಾಲೆಜಿಯೇಟ್‌ ಅಥ್ಲಿಟಿಕ್‌ ಅಸೊಸಿಯೇಷನ್‌ (ಎನ್‌ಸಿಎಎ) ತನ್ನ ಋತುವಾರು ಪಂದ್ಯಾವಳಿಗಳಲ್ಲಿ ಬಹಳ ಉಗ್ರಸ್ವರೂಪದ ಸ್ಥಳೀಯ ಅಮೆರಿಕನ್‌ ಲಾಂಛನಗಳ ಬಳಕೆಯನ್ನು ನಿಷೇಧಿಸಿತು.[೧೩೩] ಪಂಗಡವು ಅನುಮತಿ ನೀಡುವ ತನಕ ಪಂಗಡದ ಹೆಸರು ಬಳಕೆಗೆ ಅವಕಾಶ ನೀಡುವ ವಿನಾಯಿತಿ ನೀಡಲಾಯಿತು. (ಉದಾಹರಣೆಗೆ ಫ್ಲಾರಿಡಾ ರಾಜ್ಯ ವಿಶ್ವವಿದ್ಯಾನಿಲಯದ ತಂಡಕ್ಕೆ ಫ್ಲಾರಿಡಾದ ಸೆಮಿನೊಲ್‌ ಪಂಗಡ ತನ್ನ ಹೆಸರನ್ನು ಬಳಸಲು ಅನುಮತಿ ನೀಡಿತು.[೧೩೪][೧೩೫] ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವೃತ್ತಿಪರ ಕ್ರೀಡೆಗಳಲ್ಲಿ ಸ್ಥಳೀಯ-ಅಮೆರಿಕನ್‌-ವಸ್ತುವಿಷಯಗಳುಳ್ಳ ತಂಡಗಳ ಹೆಸರುಗಳ ಬಳಕೆ ವ್ಯಾಪಕವಾಗಿದೆ. ಉದಾಹರಣೆಗೆ, ಚೀಫ್‌ ವಾಹೂದಂತಹ ಲಾಂಛನ ಮತ್ತು ಕ್ಲೆವಿಲೆಂಡ್‌ ಇಂಡಿಯನ್ಸ್‌ ಹಾಗೂ ವಾಷಿಂಗ್ಟನ್‌ ರೆಡ್‌ಸ್ಕಿನ್ಸ್‌ನಂತಹ ತಂಡಗಳು ಬಳಸುವ ಲಾಂಛನಗಳು ಕೆಲವರ ಪ್ರಕಾರ ವಿವಾದಾಸ್ಪದವಾಗಿದೆ.

"Could you imagine people mocking African Americans in black face at a game?" he said. "Yet go to a game where there is a team with an Indian name and you will see fans with war paint on their faces. Is this not the equivalent to black face?"

— "Native American Mascots Big Issue in College Sports",Teaching Tolerance, May 9, 2001[೧೩೬]

ಯುರೋಪಿಯನ್ನರು ಮತ್ತು ಅಮೆರಿಕನ್ನರಿಂದ ಚಿತ್ರಣ

ರೊನೋಕೆ ಇಂಡಿಯನ್ಸ್‌ನ ಜಾನ್ ವೈಟ್‌ ಬಿಡಿಸಿದ ರೇಖಾಚಿತ್ರ
ಐದು ಡಾಲರ್ ಸಿಲ್ವರ್ ಸರ್ಟಿಫಿಕೇಟ್‌ನಲ್ಲಿರುವ ಅಮೆರಿಕನ್‌ ಇಂಡಿಯನ್‌, 1899
1892ರಲ್ಲಿ ಅಲೆಕ್ಸಾಂಡರ್ ಮಿಲ್ನೆ ಕ್ಯಾಲ್ಡರ್ ರಚಿಸಿದ ಶಿಲ್ಪ, ಇದನ್ನು ಫಿಲಡೆಲ್ಫಿಯಾ ಸಿಟಿ ಹಾಲ್‌ನಲ್ಲಿ ಇರಿಸಲಾಗಿದೆ.

ಅಮೆರಿಕನ್‌ ಕಲಾವಿದರು ಸ್ಥಳೀಯ ಅಮೆರಿಕನ್ನರನ್ನು ವಿವಿಧ ಐತಿಹಾಸಿಕ ಕಾಲಗಳಲ್ಲಿ ವಿಭಿನ್ನ ರೀತ್ಯಾ ಬಣ್ಣಿಸಿದ್ದಾರೆ. ಆದರೆ 16ನೆಯ ಶತಮಾನದಲ್ಲಿ, ಕಲಾವಿದ ಜಾನ್‌ ವೈಟ್‌, ಅಗ್ನೇಯ ರಾಜ್ಯಗಳಲ್ಲಿನ ಸ್ಥಳೀಯ ಅಮೆರಿಕನ್ನರನ್ನು ಬಣ್ಣಿಸಲು ನೀರು-ಮಿಶ್ರಿತ ಜಲವರ್ಣಗಳು ಹಾಗೂ ಕೆತ್ತನೆಗಳನ್ನು ಮಾಡಿದರು. ಜಾನ್‌ ವೈಟ್‌ ರಚಿಸಿದ ಕೃತಿಗಳು ಬಹಳಷ್ಟು ಪ್ರಮಾಣದಲ್ಲಿ ತಾವು ಗಮನಿಸಿದ ಸ್ಥಳೀಯ ಅಮೆರಿಕನ್ನರನ್ನು ನಿಖರವಾಗಿಯೇ ಹೋಲುತ್ತಿದ್ದವು.ಆನಂತರ, 'ಎ ಬ್ರೀಫ್‌ ಅಂಡ್‌ ಟ್ರೂ ರಿಪೋರ್ಟ್‌ ಆಫ್‌ ದಿ ನ್ಯೂ ಫೌಂಡ್‌ ಲ್ಯಾಂಡ್‌ ಆಫ್‌ ವರ್ಜಿನಿಯಾ ' ಎಂಬ ಶಿರೋನಾಮೆಯುಳ್ಳ, ಕೆತ್ತನೆಗಳ ಪುಸ್ತಕಕ್ಕಾಗಿ ಕಲಾವಿದ ಥಿಯೊಡೊರ್‌ ಡಿ ಬ್ರಿ ವೈಟ್‌ರ ಮೂಲ ನೀರು-ಮಿಶ್ರಿತ ಬಣ್ಣಗಳನ್ನು ಬಳಸಿದರು. ತಮ್ಮ ಪುಸ್ತಕದಲ್ಲಿ ಡಿ ಬ್ರಿ ವೈಟ್‌ರ ಕೃತಿಗಳ ಭಂಗಿ ಮತ್ತು ಲಕ್ಷಣಗಳನ್ನು ಆಗಾಗ್ಗೆ ಬದಲಾಯಿಸಿ, ಇನ್ನಷ್ಟು ಯುರೋಪಿಯನ್‌ ರೂಪ ನೀಡಿದರು. ವೈಟ್ ಮತ್ತು ಡಿ ಬ್ರಿ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿ, ಯುರೋಪಿಯನ್ನರು ಮತ್ತು ಸ್ಥಳೀಯ ಅಮೆರಿಕನ್ನರ ನಡುವಿನ ಅಂತರಸಂಪರ್ಕದ ಆರಂಭದ ಕಾಲವಾಗಿತ್ತು. ಯುರೋಪಿಯನ್ನರು ಸ್ಥಳೀಯ ಅಮೆರಿಕನ್‌ ಸಂಸ್ಕೃತಿಯಲ್ಲಿ ಅಪಾರ ಆಸಕ್ತಿ ತೋರಿದರು. ಇವರ ಕುತೂಹಲ ಹೆಚ್ಚಾದ ಪರಿಣಾಮವಾಗಿ, ಡಿ ಬ್ರಿ ರಚಿಸಿದ ಪುಸ್ತಕವೂ ಸೇರಿದಂತೆ ಇತರೆ ಪುಸ್ತಕಗಳಿಗಾಗಿ ಬೇಡಿಕೆ ಹೆಚ್ಚಾಯಿತು.ಆಗ 19ನೆಯ ಮತ್ತು 20ನೆಯ ಶತಮಾನದಲ್ಲಿ, ಸ್ಥಳೀಯ ಸಂಸ್ಕೃತಿಯನ್ನು ಉಳಿಸುವ ಮಹತ್ವಾಕಾಂಕ್ಷೆ ಹೊತ್ತ ಕೆಲವು ಅಮೆರಿಕನ್‌ ಮತ್ತು ಕೆನಡಿಯನ್‌ ಚಿತ್ರಕಲಾವಿದರು ಆಗಾಗ್ಗೆ ಸ್ಥಳೀಯ ಅಮೆರಿಕನ್‌ ವಿಷಯಗಳಲ್ಲಿ ಆಸಕ್ತಿ ವಹಿಸಿ, ನಿಪುಣತೆ ಹೊಂದಿದರು. ಇವರಲ್ಲಿ ಎಲ್‌ಬ್ರಿಡ್ಜ್‌ ಅವರ್‌ ಬರ್ಬ್ಯಾಂಕ್‌, ಜಾರ್ಜ್‌ ಕ್ಯಾಟ್ಲಿನ್‌, ಸೇಠ್‌ ಅಂಡ್‌ ಮೇರಿ ಈಸ್ಟ್‌ಮನ್‌, ಪಾಲ್‌ ಕೇನ್‌, ಡಬ್ಲ್ಯೂ ಲ್ಯಾಂಗ್ಡನ್‌ ಕಿಹ್ನ್‌, ಚಾರ್ಲ್ಸ್‌ ಬರ್ಡ್‌ ಕಿಂಗ್‌, ಜೋಸೆಫ್‌ ಹೆನ್ರಿ ಷಾರ್ಪ್‌ ಹಾಗೂ ಜಾನ್‌ ಮಿಕ್ಸ್‌ ಸ್ಟ್ಯಾನ್ಲಿ ಖ್ಯಾತನಾಮರು.ನಂತರದ 19ನೆಯ ಶತಮಾನದ ಆರಂಭದಲ್ಲಿ ಕ್ಯಾಪಿಟಲ್‌ ಭವನದ ನಿರ್ಮಾಣವಾಗುತ್ತಿದ್ದಾಗ, ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರವು ರೊಟಂಡಾದ ದ್ವಾರದ ಮೇಲೆ ಅಲಂಕಾರಿಕ ಕೃತಿ ಜೋಡಿಸಲು ನಾಲ್ಕು ಪ್ಯಾನೆಲ್‌ಗಳ ಸರಣಿ ಸೇರಿಸಿತು. ಈ ಪ್ಯಾನೆಲ್‌ಗಳಲ್ಲಿ, 19ನೆಯ ಶತಮಾನದಲ್ಲಿ ಬಹಳಷ್ಟು ಪೌರಾಣಿಕ ಇತಿಹಾಸದ ಪ್ರಮಾಣಕ್ಕೆ ಬೆಳೆದ ಯುರೂಪಿಯನ್‌-ಸ್ಥಳೀಯ ಅಮೆರಿಕನ್‌ ಸಂಬಂಧಗಳ ದೃಷ್ಟಿಯನ್ನು ಕಲ್ಪಿಸಲಾಗಿದೆ. ಈ ನಾಲ್ಕೂ ಪ್ಯಾನೆಲ್‌ಗಳಲ್ಲಿ ಆಂಟೊನಿಯೊ ಕ್ಯಾಪೆಲನೊರ ದಿ ಪ್ರಸರ್ವೇಷನ್‌ ಆಫ್‌ ಕ್ಯಾಪ್ಟನ್‌ ಸ್ಮಿತ್ ಬೈ ಪೊಕಾಹಾಂಟಾಸ್‌ (1825), ಎನ್ರಿಕೊ ಕಾಸಿಕಿಯವರ ದಿ ಲ್ಯಾಂಡಿಂಗ್‌ ಆಫ್‌ ದಿ ಪಿಲ್ಗ್ರಿಮ್ಸ್‌ (1825) ಮತ್ತು ದಿ ಕಾನ್‌ಫ್ಲಿಕ್ಟ್‌ ಆಫ್‌ ಡೇನಿಯಲ್‌ ಬೂನ್‌ ಅಂಡ್‌ ದಿ ಇಂಡಿಯನ್ಸ್‌ (1826–27), ಹಾಗೂ ನಿಕಾಲಸ್ ಜೆವಲೊಟ್‌ರ ವಿಲಿಯಮ್‌ ಪೆನ್ಸ್‌ ಟ್ರೀಟಿ ವಿತ್‌ ದಿ ಇಂಡಿಯನ್ಸ್‌ (1827) ಇಲ್ಲಿ ಚಿತ್ರಿತವಾಗಿವೆ. ಈ ಕೆತ್ತನೆಗಳು ಯುರೋಪಿಯನ್ನರು ಮತ್ತು ಸ್ಥಳೀಯ ಅಮೆರಿಕನ್ನರ ಆದರ್ಶೀಕೃತ ರೂಪಗಳನ್ನು ನಿರೂಪಿಸುತ್ತವೆ. ಇದರಲ್ಲಿ ಯುರೋಪಿಯನ್ನರು ಸಜ್ಜನರು ಹಾಗೂ ಸ್ಥಳೀಯರು ಉಗ್ರ ಸ್ವಭಾವದವರೆಂದು ನಿರೂಪಿಸಲಾಗಿದೆ. ಈ ನಾಲ್ಕೂ ಕೆತ್ತನೆಗಳಲ್ಲಿ ನಿರೂಪಿಸಲಾದ ಸಂದೇಶಗಳನ್ನು ಸ್ಥಳೀಯ ಅಮೆರಿಕನ್ನರು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳುವರು ಎಂಬುದನ್ನು ವರ್ಜಿನಿಯಾದ ವ್ಹಿಗ್‌ ಪ್ರತಿನಿಧಿ ಹೆನ್ರಿ ಎ ವೈಸ್‌ ಚುಟುಕಾಗಿ ವಿವರಿಸಿದ್ದಾರೆ: "ನಾವು ನಿಮಗೆ ಕಾಳು ಕೊಡ್ತೀವಿ, ನೀವು ನಮ್ಮ ಭೂಮಿ ಕಸಿದುಕೊಂಡು ಮೋಸ ಮಾಡ್ತೀರ, ನಾವು ನಿಮ್ಮ ಜೀವ ಕಾಪಾಡ್ತೀವಿ, ನೀವು ನಮ್ಮ ಜೀವ ತೆಗೀತೀರ." ಇದೇ ರೀತಿ, ಸ್ಥಳೀಯ ಅಮೆರಿಕನ್ನರನ್ನು ನಿರೂಪಿಸುವ 19ನೆಯ ಶತಮಾನದ ಹಲವು ಚಿತ್ರಗಳು ನಕಾರಾತ್ಮಕ ನಿರೂಪಣೆ ನೀಡಿದರೂ, ಚಾರ್ಲ್ಸ್‌ ಬರ್ಡ್‌ ಕಿಂಗ್‌ನಂತಹ ಕಲಾವಿದರು ಸ್ಥಳೀಯ ಅಮೆರಿಕನ್ನರ ಬಗ್ಗೆ ಇನ್ನಷ್ಟು ಸಮತೋಲನದ ಚಿತ್ರಣ ನೀಡಬಯಸಿದರು.ಈ ಸಮಯದಲ್ಲಿ, ಸ್ಥಳೀಯ ಅಮೆರಿಕನ್‌ ಸಂಪ್ರದಾಯದ ಬಗ್ಗೆ ಬಹಳಷ್ಟು ತಿಳಿದುಕೊಂಡಿರುವ ಕಾಲ್ಪನಿಕ ಕಥಾ ಹಂದರದ ಬರಹಗಾರರಿದ್ದು, ಇವರು ಸಹಾನುಭೂತಿ ಧೋರಣೆಯಿಂದ ಬರೆದರು. ಇಂತಹ ಬರಹಗಾರರಲ್ಲಿ ಮಾರಾ ಎಲಿಸ್ ರಯಾನ್‌ ಸಹ ಒಬ್ಬರು.ಇತ್ತೀಚಿನ 20ನೆಯ ಶತಮಾನದಲ್ಲಿ, ಚಲನಚಿತ್ರಗಳು ಹಾಗೂ ಕಿರುತೆರೆಗಳಲ್ಲಿ ಯುರೋಪಿಯನ್‌-ಅಮೆರಿಕನ್ನರು ಅಣಕು-ಸಾಂಪ್ರದಾಯಿಕ ಉಡುಗೆ ಧರಿಸುವುದರ ಮೂಲಕ ಸ್ಥಳೀಯ ಅಮೆರಿಕನ್ನರನ್ನು ನಿರೂಪಿಸುತ್ತಿದ್ದರು. ಉದಾಹರಣೆಗಳಲ್ಲಿ, ದಿ ಲಾಸ್ಟ್‌ ಅಫ್‌ ದಿ ಮೊಹಿಕನ್ಸ್‌ (1920), ಹಾಕೈ ಅಂಡ್‌ ದಿ ಲಾಸ್ಟ್‌ ಆಫ್‌ ದಿ ಮೊಹಿಕನ್ಸ್‌ (1957) ಹಾಗೂ ಎಫ್‌ ಟ್ರೂಪ್‌ (1965–67) ಸೇರಿವೆ. ಆನಂತರದ ದಶಕಗಳಲ್ಲಿ, ದಿ ಲೋನ್‌ ರೇಂಜರ್‌ ಕಿರುತೆರೆ ಸರಣಿಯಲ್ಲಿ (1949–57) ಕಾಣಿಸಿಕೊಂಡ ಜೇ ಸಿಲ್ವರ್ಹೀಲ್ಸ್‌ ಮುಂತಾದ ಸ್ಥಳೀಯ ಅಮೆರಿಕನ್‌ ನಟರು ಪ್ರವರ್ಧಮಾನಕ್ಕೆ ಬಂದರು. ಸ್ಥಳೀಯ ಅಮೆರಿಕನ್ನರ ಪಾತ್ರಗಳು ಬಹಳ ಸೀಮಿತವಾಗಿದ್ದು, ಸ್ಥಳೀಯ ಅಮೆರಿಕನ್‌ ಸಂಸ್ಕೃತಿಯನ್ನು ನಿರೂಪಿಸಿದಂತಿರಲಿಲ್ಲ. ಆಗ 1970ರ ದಶಕದಲ್ಲಿ, ಚಲನಚಿತ್ರಗಳಲ್ಲಿ ಕೆಲವು ಸ್ಥಳೀಯ ಅಮೆರಿಕನ್‌ ಪಾತ್ರಗಳ ಗುಣಮಟ್ಟವನ್ನು ಉತ್ತಮಗೊಳಿಸಲಾಯಿತು. ಲಿಟ್ಲ್‌ ಬಿಗ್‌ ಮ್ಯಾನ್‌ (1970), ಬಿಲ್ಲಿ ಜ್ಯಾಕ್‌ (1971) ಹಾಗೂ ದಿ ಔಟ್ಲಾ ಜೋಸಿ ವೇಲ್ಸ್‌ (1976) ಚಲನಚಿತ್ರಗಳಲ್ಲಿ ಸ್ಥಳೀಯ ಅಮೆರಿಕನ್ನರನ್ನು ಕಿರುಪ್ರಮಾಣದ ಪೋಷಕ ಪಾತ್ರಗಳಲ್ಲಿ ಬಿಂಬಿಸಲಾಯಿತು.ಬಹಳಷ್ಟು ನಕಾರಾತ್ಮಕ ನಿರೂಪಣೆಗಳ ಜೊತೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕಿರುತೆರೆ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನರನ್ನು ಆನುಷಂಗಿಕ ಅಥವಾ ಕೆಳಮಟ್ಟದ ಪಾತ್ರಗಳಿಗೆ ಪರಿಗಣಿಸಲಾಗಿತ್ತು. ಬೊನಾನ್ಝಾ ಸರಣಿ ಪ್ರಸಾರವಾದ ವರ್ಷಗಳಲ್ಲಿ (1959–1973), ಯಾವುದೇ ಪ್ರಮುಖ ಅಥವಾ ಆನುಷಂಗಿಕ ಸ್ಥಳೀಯ ಪಾತ್ರಗಳು ಸತತವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿಲ್ಲ. ದಿ ಲೋನ್‌ ರೇಂಜರ್‌ (1949–1957), ಚೇಯೆನ್‌ (1957–1963) ಹಾಗೂ ಲಾ ಆಫ್‌ ದಿ ಪ್ಲೇನ್ಸ್‌ಮ್ಯಾನ್‌ (1959–1963) ಸರಣಿಗಳಲ್ಲಿ ಸ್ಥಳೀಯ ಪಾತ್ರಗಳು ಸಾಮಾನ್ಯವಾಗಿ ಕೇಂದ್ರಬಿಂದುವಾಗಿದ್ದ ಬಿಳಿಯರ ಪಾತ್ರಗಳಿಗೆ ಸಹಯೋಗಿಗಳಾಗಿದ್ದವಷ್ಟೆ. ಈ ಪಾತ್ರವಿನ್ಯಾಸವು ಆನಂತರದ ವರ್ಷಗಳಲ್ಲಿ ಕಿರುತೆರೆಯ ಪಾತ್ರವಿನ್ಯಾಸ ಮತ್ತು ಹೌ ದಿ ವೆಸ್ಟ್‌ ವಾಸ್‌ ವನ್‌ ನಂತಹ ಕಾರ್ಯಕ್ರಮಗಳಲ್ಲಿ ಪಾತ್ರವಿನ್ಯಾಸಕ್ಕೆ ಆಧಾರವಾಯಿತು. ಎಲ್ಲಾ ಷೊಹತ್‌ ಮತ್ತು ರಾಬರ್ಟ್‌ ಸ್ಟ್ಯಾಮ್‌ ಪ್ರಕಾರ, ಸಹಾನುಭೂತಿಯುಳ್ಳ ಆದರೆ ತದ್ವಿರುದ್ಧದ ಚಿತ್ರಕಥೆಯಿದ್ದ, ಡ್ಯಾನ್ಸಸ್‌ ವಿತ್‌ ವುಲ್ವ್‌ಸ್ ಚಲನಚಿತ್ರ 1990ರಲ್ಲಿ ತೆರೆಕಂಡಿತು. ಲಕೋಟಾಸ್‌ ಕಥೆಯನ್ನು ನಿರೂಪಿಸಲು, ಯುರೊ-ಅಮೆರಿಕನ್‌ ಧ್ವನಿಯನ್ನು ಬಳಸಲಾಯಿತು. ಬಹಳಷ್ಟು ವೀಕ್ಷಕರನ್ನು ಸಂಪಾದಿಸಲು ಈ ರೀತಿ ಮಾಡಲಾಯಿತು, ಎನ್ನಲಾಗಿದೆ.[೧೩೭]ಈ ಹಿಂದೆ 1992ರಲ್ಲಿ ಬಿಡುಗಡೆಯಾದ ದಿ ಲಾಸ್ಟ್‌ ಆಫ್‌ ದಿ ಮೊಹಿಕನ್ಸ್ ‌ ಚಲನಚಿತ್ರದ ರಿಮೇಕ್‌ ಮತ್ತು Geronimo: An American Legend (1993), ಡ್ಯಾನ್ಸ್‌ ವಿತ್‌ ವುಲ್ವ್‌ಸ್ ‌ ಸಹ ಹಲವು ಸ್ಥಳೀಯ ಅಮೆರಿಕನ್‌ ನಟರನ್ನು ಬಳಸಿಕೊಂಡಿತು. ಇದರಲ್ಲಿ ಮೂಲನಿವಾಸಿ ಭಾಷೆಗಳನ್ನು ಬಿಂಬಿಸುವ ಯತ್ನ ನಡೆಯಿತು.ಇದೇ ಮಾದರಿಯಲ್ಲಿ 2004ರಲ್ಲಿ, ಸಹ-ನಿರ್ಮಾಪಕ ಗಯ್‌ ಪೆರೊಟಾ Mystic Voices: The Story of the Pequot War ಕಿರುತೆರೆ ಸಾಕ್ಷ್ಯಚಿತ್ರವನ್ನು ಪ್ರಸ್ತುತಗೊಳಿಸಿದರು. ವಸಾಹತುದಾರರು ಹಾಗೂ ಅಮೆರಿಕಾ ಖಂಡಗಳಲ್ಲಿನ ಸ್ಥಳೀಯರ ನಡುವೆ ನಡೆದ ಮೊಟ್ಟಮೊದಲ ಭಾರಿ ಯುದ್ಧದ ಬಗ್ಗೆ ಕಿರುತೆರೆ ಸಾಕ್ಷ್ಯಚಿತ್ರವಾಗಿತ್ತು. ಪೆರೊಟಾ ಮತ್ತು ಚಾರ್ಲ್ಸ್‌ ಕ್ಲೆಮನ್ಸ್‌ ಈ ಆರಂಭಿಕ ಘಟನೆಯ ಮಹತ್ವದ ಬಗ್ಗೆ ಸಾರ್ವಜನಿಕ ತಿಳಿವಳಿಕೆ ಹೆಚ್ಚಿಸಲು ಉದ್ದೇಶಿಸಿದ್ದರು. ಈಶಾನ್ಯ ಸ್ಥಳೀಯ ಜನರು ಹಾಗೂ ಇಂಗ್ಲಿಷ್‌ ಮತ್ತು ಡಚ್‌ ವಸಾಹತುದಾರರ ವಂಶಸ್ಥರಿಗೆ ಮಾತ್ರವಲ್ಲ, ಒಟ್ಟಾರೆ ಇಂದಿನ ಎಲ್ಲ ಅಮೆರಿಕನ್ನರಿಗೂ ಇದು ಅರ್ಥಪೂರ್ಣವಾಗಿದೆ ಎಂದು ನಂಬಿದ್ದರು. ನಿರ್ಮಾಪಕರು ಈ ಸಾಕ್ಷ್ಯಚಿತ್ರವನ್ನು ಐತಿಹಾಸಿಕವಾಗಿ ನಿಖರ ಹಾಗೂ ಆದಷ್ಟು ನಿಷ್ಪಕ್ಷಪಾತವಾಗಿ ನಿರೂಪಿಸಿಸಲು ಬಯಸಿದ್ದರು. ವಿವಿಧ ಕ್ಷೇತ್ರಗಳಿಗೆ ಸಂಬಂಧಿತ ಸಲಹಾ ಮಂಡಳಿಯನ್ನು ಆಮಂತ್ರಿಸಿ, ಕಥೆ ವಿವರಿಸಿ ಹೆಣೆಯುವಲ್ಲಿ ಸಲಹೆ ಪಡೆಯಲು ವಿದ್ವಾಂಸರು, ಸ್ಥಳೀಯ ಅಮೆರಿಕನ್ನರು, ಹಾಗೂ ವಸಾಹತುದಾರರ ವಂಶಸ್ಥರನ್ನು ಕರೆಸಿದರು. ಸಮಕಾಲೀನ ಅಮೆರಿಕನ್ನರಿಂದಲೂ ಸಹ ವೈಯಕ್ತಿಕ ಹಾಗೂ ಆಗಾಗ್ಗೆ ಬಾವೋದ್ರಿಕ್ತ ದೃಷ್ಟಿಕೋನಗಳನ್ನು ಅವು ಹುಟ್ಟಿಸಿದವು. ನಿರ್ಮಾಣವು ವಿವಿಧ ಮೌಲ್ಯ ವ್ಯವಸ್ಥೆಗಳ ನಡುವೆ ಸಂಘರ್ಷವನ್ನು ನಿರೂಪಿಸಿತು. ಇದರಲ್ಲಿ ಪೆಕ್ವಟ್‌ಗಳು ಮಾತ್ರವಲ್ಲ, ಹಲವು ಸ್ಥಳೀಯ ಅಮೆರಿಕನ್‌ ಪಂಗಡಗಳು ಸಹ ಒಳಗೊಂಡಿದ್ದವು. ಇವುಗಳಲ್ಲಿ ಬಹಳಷ್ಟು ಪಂಗಡಗಳು ಇಂಗ್ಲಿಷ್‌ ಜನರೊಂದಿಗೆ ಮೈತ್ರಿ ಬೆಳೆಸಿದ್ದವು. ಇದು ನಿಜ ಮಾಹಿತಿಯನ್ನು ಪ್ರಸ್ತುತಗೊಳಿಸುವುದಲ್ಲದೆ, ಯುದ್ಧ ಮಾಡಿದ ಜನರ ಬಗ್ಗೆ ಜನರು ಇನ್ನಷ್ಟು ತಿಳಿದುಕೊಳ್ಳಲು ಈ ಚಿತ್ರವು ನೆರವಾಗುತ್ತದೆ.ಆಗ 2009ರಲ್ಲಿ ರಿಕ್‌ ಬರ್ನ್ಸ್‌ ರಚಿಸಿದ, ಅಮೆರಿಕನ್‌ ಎಕ್ಸ್‌ಪೀರಿಯನ್ಸ್‌ ಸರಣಿಯ ಭಾಗವಾದ 'ವಿ ಷಲ್‌ ರಿಮೇನ್ '‌ (2009) ಎಂಬ ಕಿರುತೆರೆ ಸಾಕ್ಷ್ಯಚಿತ್ರವು, ಐದು ಕಂತುಗಳ ಸರಣಿಯೊಂದನ್ನು 'ಜಾಗತಿಕ ಅಮೆರಿಕನ್‌ ದೃಷ್ಟಿಕೋನದಿಂದ' ಪ್ರಸ್ತುತಪಡಿಸಿತು. ಸ್ಥಳೀಯ ಹಾಗೂ ಸ್ಥಳೀಯರಲ್ಲದ ಚಲನಚಿತ್ರಕರ್ತರ ನಡುವಿನ ಅಭೂತಪೂರ್ವ ಸಹಯೋಗವನ್ನು ನಿರೂಪಿಸಿತು. ಜೊತೆಗೆ, ಈ ನಿರ್ಮಾಣದ ಎಲ್ಲಾ ಹಂತಗಳಲ್ಲಿಯೂ ಸ್ಥಳೀಯ ಸಲಹೆಗಾರರು ಮತ್ತು ವಿದ್ವಾಂಸರನ್ನು ಒಳಗೊಂಡಿದೆ.'[೧೩೮] ಐದು ಕಂತುಗಳು ಈಶಾನ್ಯ ಪಂಗಡಗಳ ವಿರುದ್ಧ ರಾಜ ಫಿಲಿಪ್‌ನ ಯುದ್ಧದ ಪರಿಣಾಮ ಪರಿಶೋಧಿಸುತ್ತದೆ, ಟೆಕುಂಸೆಹ್‌ ಯುದ್ಧ‌ದಲ್ಲಿ ಸ್ಥಳೀಯ ಅಮೆರಿಕನ್‌ ಕೂಟ, ಅತ್ಯಂತ ದುಃಖದಾಯಕ ಸ್ಥಳಾಂತರ (ಟ್ರೇಲ್‌ ಆಫ್‌ ಟಿಯರ್ಸ್‌), ಜೆರೊನಿಮೊನನ್ನು ಬೆನ್ನಟ್ಟಿ ಸೆರೆಹಿಡಿಯುವುದು ಮತ್ತು ಅಪ್ಯಾಷ್‌ ವಾರ್ಸ್‌, ಹಾಗೂ ವೂಂಡೆಡ್‌ ನೀ ಘಟನೆಯಲ್ಲಿ ಅಮೆರಿಕನ್ ಇಂಡಿಯನ್‌ ಮೂವ್ಮೆಂಟ್‌ನ ಒಳಗೊಳ್ಳುವಿಕೆ ಹಾಗೂ ತದನಂತರ ಆಧುನಿಕ ಸ್ಥಳೀಯ ಸಂಸ್ಕೃತಿಗಳ ಪುನರುತ್ಥಾನದಲ್ಲಿ ಕೊನೆಗೊಳ್ಳುತ್ತದೆ.

ಪಾರಿಭಾಷಿಕ ವ್ಯತ್ಯಾಸಗಳು

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಾಮಾನ್ಯ ಬಳಕೆ

ಸ್ಥಳೀಯ ಅಮೆರಿಕನ್ನರನ್ನು ಸಾಮಾನ್ಯವಾಗಿ ಇಂಡಿಯನ್ನರು ಅಥವಾ ಅಮೆರಿಕನ್‌ ಇಂಡಿಯನ್ನರು ಎನ್ನಲಾಗಿದೆ. ಇವರನ್ನು ಬುಡಕಟ್ಟು (ಅಬೊರಿಜಿನಲ್‌) ಅಮೆರಿಕನ್ನರು, ಅಮೆರಿಂಡಿಯನ್ನರು, ಅಮೆರಿಂಡ್ಸ್‌, ವರ್ಣೀಯರು,[೯೮][೧೩೯] ಪ್ರಪ್ರಥಮ ಅಮೆರಿಕನ್ನರು, ಸ್ಥಳೀಯ ಇಂಡಿಯನ್ನರು, ಮೂಲನಿವಾಸಿಗಳು, ಮೂಲ ಅಮೆರಿಕನ್ನರು, ರೆಡ್ ಇಂಡಿಯನ್ನರು, ಕೆಂಪುಚರ್ಮದವರು (ರೆಡ್‌ಸ್ಕಿನ್ಸ್‌) ಅಥವಾ ರೆಡ್‌ ಮೆನ್‌ ಎನ್ನಲಾಗುತ್ತದೆ.ನೇಟಿವ್ ಅಮೆರಿಕನ್ ಪದವನ್ನು ಮೂಲತಃ ಅಮೆರಿಕ ದಲ್ಲಿ ಶಿಕ್ಷಣತಜ್ಞರು ಇಂಡಿಯನ್ ಎಂಬ ಪದಕ್ಕೆ ಆದ್ಯತೆಯಾಗಿ ಪರಿಚಯಿಸಿದರು. ಭಾರತದ ಜನರು ಮತ್ತು ಅಮೆರಿಕದ ಮೂಲನಿವಾಸಿ ಜನಗಳ ನಡುವೆ ವ್ಯತ್ಯಾಸ ಗುರುತಿಸಲು ಮತ್ತು ಇಂಡಿಯನ್ ಎಂಬ ಪದದೊಂದಿಗೆ ಬಹುಶಃ ಸಂಬಂಧಿಸಿರಬಹುದಾದ ನಕಾರಾತ್ಮಕ ಮನೋದೃಷ್ಟಿಗಳನ್ನು ನಿವಾರಿಸಲು ಆ ಪದವನ್ನು ಪರಿಚಯಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಈ ಹೊಸ ಉಕ್ತಿಯ ಸ್ವೀಕೃತಿಯಿಂದಾಗಿ, ಇಂಡಿಯನ್ನರು ' ಎಂಬ ಪದವನ್ನು ಹಳತಾದದ್ದು ಅಥವ ಅಪರಾಧ ಎಂದು ಪರಗಣಿಸಿತಕ್ಕದ್ದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ,ಅನೇಕ ವಾಸ್ತವ ಮೂಲವಾಸಿ ಅಮೆರಿಕನ್ನರು ತಮ್ಮನ್ನು ಅಮೆರಿಕನ್‌ ಇಂಡಿಯನ್ನರು ಎಂದು ಉಲ್ಲೇಖಿಸುವುದಕ್ಕೆ ಆದ್ಯತೆ ನೀಡತ್ತಾರೆ. ಜೊತೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹುಟ್ಟಿದ ಯಾರೇ ಆದರೂ, ಅವರು ಆ ದೇಶಕ್ಕೆ ಸ್ಥಳೀಯರಾಗುವರು; ಸ್ಥಳೀಯ ಅಮೆರಿಕನ್‌ ಎಂಬ ಉಕ್ತಿಯನ್ನು ಮೊದಲು ಉತ್ತೇಜಿಸಿದ ತಜ್ಞರು ಬಹುಶಃ indigenous ಎಂಬ(ಮೂಲನಿವಾಸಿಗಳು) ಪದದೊಂದಿಗೆ ಸ್ಥಳೀಯ ಎಂಬ ಪದವನ್ನು ತಪ್ಪಾಗಿ ಗ್ರಹಿಸಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಜನರು ಹಾಗೂ ಅವರ ವಂಶಸ್ಥರಾಗಿದ್ದು ಅಮೆರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರಾಗಿದ್ದಲ್ಲಿ, ಅವರನ್ನು ಇಂಡಿಯನ್‌ ಅಮೆರಿಕನ್ನರು ಅಥವಾ ಏಷ್ಯನ್‌ ಇಂಡಿಯನ್ನರು ಎಂದು ಉಲ್ಲೇಖಿಸಲಾಗುತ್ತದೆ.

ಇಂಡಿಯಾನದ ಹೊಚುಂಕ್ ನೆಯ್ಗೆಕಾರ ಮಾರ್ತ ಗ್ರ್ಯಾಡಾಲ್ಫ್.

ಆದರೂ, ಸ್ಥಳೀಯ ಅಮೆರಿಕನ್ ‌ ಎಂಬ ನವಪದ ಪ್ರಯೋಗದ ಟೀಕೆಯು ವಿಭಿನ್ನ ಮೂಲಗಳಿಂದ ಬರುತ್ತವೆ. ಹಲವು ಅಮೆರಿಕನ್‌ ಇಂಡಿಯನ್ನರು ಸ್ಥಳೀಯ ಅಮೆರಿಕನ್ ‌ ಎಂಬ ಉಕ್ತಿಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಅಮೆರಿಕನ್ ಇಂಡಿಯನ್‌ ಕಾರ್ಯಕರ್ತ ರಸೆಲ್‌ ಮೀನ್ಸ್‌' ಸ್ಥಳೀಯ ಅಮೆರಿಕನ್ ‌ ಎಂಬ ಉಕ್ತಿಯನ್ನು ವಿರೋಧಿಸಿದರು.ಸರ್ಕಾರವು ಅಮೆರಿಕನ್‌ ಇಂಡಿಯನ್ನರೊಂದಿಗೆ ಚರ್ಚಿಸದೆ ಈ ಉಕ್ತಿಯನ್ನು ಹೇರಿತು ಎಂದರು. ಇಂಡಿಯನ್‌ ಎಂಬ ಪದದ ಬಳಕೆಯು ಇಂಡಿಯಾ ದ ತಪ್ಪುಗ್ರಹಿಕೆಯಿಂದಾಗಿ ಹುಟ್ಟಿದ್ದಲ್ಲ, ಬದಲಿಗೆ En Dio (ಅರ್ಥ: ದೇವರಲ್ಲಿ) ಎಂಬ ಸ್ಪ್ಯಾನಿಷ್‌ ಉಕ್ತಿಯಿಂದ ಪಡೆಯಲಾಗಿದೆ ಎಂದು ವಾದಿಸಿದ್ದಾರೆ.[೧೪೦] ಇನ್ನೂ ಹೆಚ್ಚಿಗೆ, ಕೆಲವು ಅಮೆರಿಕನ್‌ ಇಂಡಿಯನ್ನರು [who?] ಸ್ಥಳೀಯ ಅಮೆರಿಕನ್ನರು ಎಂಬ ಉಕ್ತಿಯನ್ನು ಪ್ರಶ್ನಿಸಿದ್ದಾರೆ. ಏಕೆಂದರೆ, ಹಿಂದೆ ಅಮೆರಿಕನ್‌ ಇಂಡಿಯನ್ನರ ವಿರುದ್ಧದ ಅನ್ಯಾಯಗಳ ವಿಚಾರವಾಗಿ, ವರ್ತಮಾನದಿಂದ ಇಂಡಿಯನ್ನರು ಎಂಬ ಪದವನ್ನು ಅಳಿಸಿಹಾಕುವ ಮೂಲಕ ಬಿಳಿಯ ಅಮೆರಿಕಾದ ಆತ್ಮಸಾಕ್ಷಿಗೆ ಸಮಾಧಾನ ಉಂಟುಮಾಡುತ್ತದೆ ಎಂಬುದು ಈ ಅಮೆರಿಕನ್‌ ಇಂಡಿಯನ್ನರ ವಾದ.[೧೪೧] 'ಸ್ಥಳೀಯ ಅಮೆರಿಕನ್ ‌ ಎಂಬ ಉಕ್ತಿಯು ಬಹಳ ಗೊಂದಲಮಯವಾಗಿದೆ. ಏಕೆಂದರೆ ಸ್ಥಳೀಯ ಎಂದರೆ 'ಅಲ್ಲೇ ಹುಟ್ಟಿದ' ಎಂಬರ್ಥ ನೀಡುತ್ತದೆ, ಹಾಗಾಗಿ, ಅಮೆರಿಕಾ ಖಂಡಗಳಲ್ಲಿ ಹುಟ್ಟಿದ ಯಾರೇ ಆದರೂ, ಸ್ಥಳೀಯರಾಗಿಬಿಡಬಹುದು' ಎಂದು ಇನ್ನೂ ಕೆಲವರು (ಇಂಡಿಯನ್ನರು ಮತ್ತು ಇಂಡಿಯನ್ನೇತರರು [who?]) ವಾದಿಸುತ್ತಾರೆ. ಆದರೂ, ಆಗಾಗ್ಗೆ ಸಂಕೀರ್ಣ ಉಕ್ತಿಯಾದ Native American ಉಕ್ತಿಯಲ್ಲಿ ಮೊದಲ ಅಕ್ಷರಗಳನ್ನು ದೊಡ್ಡ ಅಕ್ಷರಗಳಲ್ಲಿ ನಮೂದಿಸುವ ಮೂಲಕ, ಇತರೆ ಅರ್ಥಗಳಿಂದ ಭಿನ್ನವಾಗಿಸಬಹುದು. ಇದೇ ರೀತಿ, native (ಸಣ್ಣ n ಅಕ್ಷರ) ಎಂದರೆ "native-born" ಸೂತ್ರೀಕರಣದೊಂದಿಗೆ ನಿರೂಪಿಸಬಹುದು. ಅದರ ಉದ್ದೇಶಿತ ಅರ್ಥವು ವ್ಯಕ್ತಿ ಹುಟ್ಟಿದ ಸ್ಥಳ ಅಥವಾ ಮೂಲವನ್ನು ಸೂಚಿಸುವುದಾಗಿದೆ.ಅದರೆ 1995ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಜನಗಣತಿ ಮಂಡಳಿ ನಡೆಸಿದ ಸಮೀಕ್ಷೆಯ ಪ್ರಕಾರ, ಆ ದೇಶದಲ್ಲಿ ಬಹಳಷ್ಟು ಸ್ಥಳೀಯ ಅಮೆರಿಕನ್ನರು ತಮ್ಮನ್ನು ಸ್ಥಳೀಯ ಅಮೆರಿಕನ್ನರು ಎಂದು ಉಲ್ಲೇಖಿಸಿಕೊಳ್ಳುವ ಬದಲು ಅಮೆರಿಕನ್ ಇಂಡಿಯನ್ ‌ ಎನಿಸಿಕೊಳ್ಳಲು ಇಚ್ಛಿಸುತ್ತಾರೆ.[೧೪೨] ಅದೇನೇ ಇರಲಿ, ಬಹಳಷ್ಟು ಅಮೆರಿಕನ್‌ ಇಂಡಿಯನ್ನರು ಇಂಡಿಯನ್‌ , ಅಮೆರಿಕನ್‌ ಇಂಡಿಯನ್ ‌ ಮತ್ತು ಸ್ಥಳೀಯ ಅಮೆರಿಕನ್ ‌ ಎಂಬ ಉಕ್ತಿಗಳ ಬಳಕೆ ಬಗ್ಗೆ ನಿರಾಳಮನಸ್ಸಿನವರಾಗಿದ್ದಾರೆ. ಈ ಉಕ್ತಿಗಳನ್ನು ಒಂದರ ಬದಲಿಗೆ ಇನ್ನೊಂದನ್ನು ಸಾಮಾನ್ಯವಾಗಿ ಬಳಸಲಾಗಿದೆ.[೧೪೩] ಆಗ 2004ರಲ್ಲಿ ವಾಷಿಂಗ್ಟನ್‌ ಡಿಸಿಯ ಮಾಲ್‌ಲ್ಲಿ ತೆರೆದ ರಾಷ್ಟ್ರೀಯ ಅಮೆರಿಕನ್‌ ಇಂಡಿಯನ್‌ ವಸ್ತು ಪ್ರದರ್ಶನಾಲಯಕ್ಕ ಆಯ್ಕೆ ಮಾಡಲಾದ ಹೆಸರಿನಲ್ಲಿ ಸಾಂಪ್ರದಾಯಿಕ ಉಕ್ತಿಯು ಬಿಂಬಿತವಾಗಿದೆ.ಗೊಂದಲ ತಪ್ಪಿಸಲು, ಅಮೆರಿಕಾ ಸಂಯುಕ್ತ ಸಂಸ್ಥಾನ ಜನಗಣತಿ ಮಂಡಳಿಯು ಇತ್ತೀಚೆಗೆ 'ಏಷ್ಯನ್‌ ಇಂಡಿಯನ್‌ ಎಂಬ ವರ್ಗವನ್ನು ಹೊಸದಾಗಿ ಪರಿಚಯಿಸಿದೆ.

ಜೂಜಿನ ಉದ್ಯಮ

ನ್ಯೂಮೆಕ್ಸಿಕೊದ ಸ್ಯಾಂಡಿಯಾ ಪ್ಯುಯೆಬ್ಲೊಗೆ ಸೇರಿದ ಸ್ಯಾಂಡಿಯಾ ಕ್ಯಾಸಿನೊ

ಜೂಜಾಟವು ಪ್ರಮುಖ ಕ್ಷೇತ್ರವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹಲವು ಸ್ಥಳೀಯ ಅಮೆರಿಕನ್‌ ಸರ್ಕಾರಗಳು ನಡೆಸುತ್ತಿರುವ ಜೂಜುಮಂದಿರಗಳು(ಕ್ಯಾಸಿನೊ), ಜೂಜಿನಿಂದ ಆದಾಯದ ಹೊಳೆ ಹರಿಸುತ್ತಿದೆ. ಕೆಲವು ಸಮುದಾಯಗಳು ವಿವಿಧ ಆರ್ಥಿಕತೆಗಳ ಬಲವನ್ನು ನಿರ್ಮಿಸಲು ಈ ಮಾರ್ಗ ಅನುಸರಿಸುತ್ತಿವೆ. ಸ್ವಯಮಾಧಿಕಾರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯ ಹಕ್ಕುಗಳ ವಿಚಾರವಾಗಿ, ಸ್ಥಳೀಯ ಅಮೆರಿಕನ್‌ ಸಮುದಾಯಗಳು ಕಾನೂನು ಮೊಕದ್ದಮೆ ಹೂಡಿ ಜಯಗಳಿಸಿವೆ. ಒಡಂಬಡಿಕೆ ಹಕ್ಕುಗಳು ಎನ್ನಲಾದ ಇಂತಹ ಕೆಲವು ಹಕ್ಕುಗಳನ್ನು, ಅಂದು ಹೊಸದಾಗಿದ್ದ ಅಮೆರಿಕಾ ಸಂಯುಕ್ತ ಸಂಸ್ಥಾನ ಸರ್ಕಾರದೊಂದಿಗೆ ಸಹಿ ಹಾಕಲಾದ ಒಡಂಬಡಿಕೆಗಳಲ್ಲಿ ನಮೂದಿಸಲಾಗಿದೆ. ರಾಷ್ಟ್ರೀಯ ಶಾಸಕಾಂಗ ನೀತಿಗಳಲ್ಲಿ, ಬುಡಕಟ್ಟು ಜನಾಂಗಗಳ ಪರಮಾಧಿಕಾರವು ಅಮೆರಿಕನ್‌ ನ್ಯಾಯಶಾಸ್ತ್ರದ ಆಧಾರಸ್ಥಂಭಗಳಲ್ಲಿ ಒಂದಾಗಿದೆ. ಹಲವು ಸ್ಥಳೀಯ ಅಮೆರಿಕನ್‌ ಬುಡಕಟ್ಟು ಜನಾಂಗದವರು ಜೂಜುಮಂದಿರಗಳನ್ನು ಹೊಂದಿದ್ದರೂ, ಸ್ಥಳೀಯ ಅಮೆರಿಕನ್‌ ಜೂಜಾಟದ ಪ್ರಭಾವದ ಬಗೆಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಜೂಜುಮಂದಿರಗಳು ಮತ್ತು ಅದರ ಆದಾಯಗಳು ಒಳಗಿನ ಸಂಸ್ಕೃತಿಯನ್ನು ಹಾಳು ಮಾಡುತ್ತವೆ ಎಂದು ಕ್ಯಾಲಿಫೋರ್ನಿಯಾದ ರೆಡ್ಡಿಂಗ್‌ನ ವಿನ್ಮೆಮ್‌ ವಿಂಟು ಸೇರಿದಂತೆ ಕೆಲವು ಪಂಗಡಗಳು(ಬುಡಕಟ್ಟುಗಳು) ಅಭಿಪ್ರಾಯಪಟ್ಟಿವೆ. ಈ ಪಂಗಡಗಳು ಜೂಜಾಟದ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ನಿರಾಕರಿಸುತ್ತಿವೆ.

ಸಮಾಜ, ಭಾಷೆ ಮತ್ತು ಸಂಸ್ಕೃತಿ

ಜನಾಂಗೀಯ-ಭಾಷಿಕ ವರ್ಗೀಕರಣ

ಏಕೈಕ ಜನಾಂಗೀಯ ಗುಂಪು ಆಗುವ ಬದಲು, ಸ್ಥಳೀಯ ಅಮೆರಿಕನ್ನರನ್ನು ಹಲವು ನೂರು ಜನಾಂಗೀಯ-ಭಾಷಿಕ ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇವುಗಳಲ್ಲಿ ಹಲವನ್ನು ನಾ-ಡೆನೆ (ಅಥಬಸ್ಕನ್‌), ಆಲ್ಜಿಕ್‌ (ಅಲ್ಗಾನ್ಕ್ವಿಯಾನ್‌ ಸೇರಿದಂತೆ), ಉಟೊ-ಅಝ್ಟೆಕನ್‌, ಇರೊಕೊಯಿಯನ್‌, ಸಿಯೊಯನ್‌-ಕಟಾಬಾನ್‌, ಯೊಕ್‌-ಉಟಿಯನ್, ಸಲಿಷನ್‌ ಮತ್ತು ಯುಮನ್‌-ಕೊಚಿಮಿ ಗುಂಪುಗಳು, ಜೊತೆಗೆ ಇತರೆ ಹಲವು ಸಣ್ಣ-ಪ್ರಮಾಣದ ಗುಂಪುಗಳು ಮತ್ತು ಹಲವು ಭಾಷಾ-ಪ್ರತ್ಯೇಕತೆಗಳನ್ನಾಗಿ ವಿಂಗಡಿಸಲಾಯಿತು. ಉತ್ತರ ಅಮೆರಿಕಾದಲ್ಲಿ ಭಾಷಾವಾರು ವೈವಿಧ್ಯ ವ್ಯಾಪಕವಾಗಿರುವ ಕಾರಣ, ತಳಿಯ ಸಂಬಂಧಗಳನ್ನು ಪ್ರದರ್ಶಿಸುವುದು ಕಷ್ಟವಾಗಿದೆ.ಉತ್ತರ ಅಮೆರಿಕಾದ ಮೂಲನಿವಾಸಿ ಜನರನ್ನು ವಿಶಾಲ ಸಾಂಸ್ಕೃತಿಕ ಪ್ರದೇಶಗಳ ಮೇರೆಗೆ ವರ್ಗೀಕರಿಸಲಾಗಿದೆ:

USನಲ್ಲಿದ್ದ ಆರಂಭಿಕ ಇಂಡಿಯನ್ ಭಾಷೆಗಳು
  • ಅಲಾಸ್ಕಾ ಸ್ಥಳೀಯರು
    • ಆರ್ಕ್ಟಿಕ್‌: ಎಸ್ಕಿಮೊ-ಅಲೂಟ್‌
    • ಉಪ-ಆರ್ಕ್ಟಿಕ್‌: ಉತ್ತರ ಅಥಬಸ್ಕನ್‌
  • ಅಮೆರಿಕಾ ಸಂಯುಕ್ತ ಸಂಸ್ಥಾನದ ಪಶ್ಚಿಮ ವಲಯ
    • ಕ್ಯಾಲಿಫೋರ್ನಿಯನ್‌ ಪಂಗಡಗಳು (ಉತ್ತರ ವಲಯ): ಯೊಕ್‌-ಉಟಿಯನ್‌, ಪ್ರಶಾಂತ ಸಾಗರ ತೀರ ಅಥಬಸ್ಕನ್‌, ಕೋಸ್ಟ್‌ ಮಿವೊಕ್‌, ಯುರೊಕ್‌, ಪಲೇಹ್ನಿಹನ್‌, ಚುಮಷನ್‌, ಉಟೊ-ಅಝ್ಟೆಕನ್‌
    • ಪ್ರಸ್ಥಭೂಮಿ ಪಂಗಡಗಳು: ಒಳನಾಡ ಸಲಿಷ್‌, ಪ್ರಸ್ಥಭೂಮಿ ಪೆನುಷಿಯನ್‌
    • ಗ್ರೇಟ್‌ ಬೇಸಿನ್‌ ಪಂಗಡಗಳು: ಉಟೊ-ಅಝ್ಟೆಕನ್‌
    • ಶಾಂತಸಾಗರದ ವಾಯುವ್ಯ ತೀರ: ಪೆಸಿಫಿಕ್‌ ಕೋಸ್ಟ್‌ ಅಥಬಸ್ಕನ್‌, ಕೋಸ್ಟ್‌ ಸಲಿಷ್‌
    • ನೈಋತ್ಯ ಪಂಗಡಗಳು: ಯುಟೊ-ಅಝ್ಟೆಕನ್‌, ಯುಮನ್‌, ಸದರ್ನ್‌ ಅಥಬಸ್ಕನ್‌
  • ಅಮೆರಿಕಾ ಸಂಯುಕ್ತ ಸಂಸ್ಥಾನದ ಮಧ್ಯವಲಯ
    • ಬಯಲುಸೀಮೆ ಇಂಡಿಯನ್ನರು: ಸಿಯುಯನ್‌, ಪ್ಲೇನ್ಸ್‌ ಅಲ್ಗಾನ್ಕ್ವಿಯನ್‌, ಸದರ್ನ್‌ ಅಥಬಸ್ಕನ್‌
  • ಅಮೆರಿಕಾ ಸಂಯುಕ್ತ ಸಂಸ್ಥಾನ ಪೂರ್ವ ವಲಯ
    • ಈಷಾನ್ಯ ಕಾಡುಪ್ರದೇಶ ಪಂಗಡಗಳು: ಇರೊಕ್ವಿಯನ್‌, ಸೆಂಟ್ರಲ್‌ ಅಲ್ಗಾಂಕ್ವಿಯನ್‌, ಈಸ್ಟರ್ನ್‌ ಅಲ್ಗಾಂಕ್ವಿಯನ್‌
    • ಅಗ್ನೇಯ ಪಂಗಡಗಳು: ಮುಸ್ಕೊಗಿಯನ್‌, ಸಿಯುಯನ್‌, ಕಟಾಬನ್‌, ಇರೊಕ್ವಿಯನ್‌

ಸುಮಾರು 1.5 ದಶಲಕ್ಷ ನಹುವಟಿ ಭಾಷಿಕರಿರುವ ಕಾರಣ, ಮೆಕ್ಸಿಕೊ ದೇಶದ ಭಾಷೆಗಳನ್ನು ಪರಿಗಣಿಸಿದರೆ, ಉಳಿದುಕೊಂಡಿರುವ ಭಾಷೆಗಳಲ್ಲಿ, ಅತ್ಯಧಿಕ ಜನರುಯುಟೊ-ಅಝ್ಟೆಕನ್‌ ಭಾಷೆ ಮಾತನಾಡುವರು (1.95 ದಶಲಕ್ಷ); ಎರಡನೆಯ ಸ್ಥಾನದಲ್ಲಿ 180,200 ಭಾಷಿಕರುಳ್ಳ ನಡೆನೆ (ಇವರಲ್ಲಿ 148,500 ಜನರು ನವಜೊ ಮೂಲದ ಭಾಷಿಕರು). ನ-ಡೆನೆ ಮತ್ತು ಅಲ್ಜಿಕ್‌ ಅತಿ ಹೆಚ್ಚು ಭೌಗೋಳಿಕವಾಗಿ ಹರಡಿಕೊಂಡಿದೆ: ಅಲ್ಜಿಕ್‌ ಸದ್ಯಕ್ಕೆ ಈಶಾನ್ಯ ಕೆನಡಾದಿಂದ ಹಿಡಿದು ಇಡೀ ಖಂಡಕ್ಕೂ ಹರಡಿ ಈಶಾನ್ಯ ಮೆಕ್ಸಿಕೊದ ತನಕ ವ್ಯಾಪಿಸಿದೆ. (ಕಿಕಪೂನವರ ಆನಂತರದ ವಲಸೆ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಎರಡು ಕಡೆ (ಯುರೋಕ್ ಮತ್ತು ವಿಯೋಟ್) ಹೊರವಾಸಿಗಳು); ನ-ಡೆನೆ ಭಾಷೆ ಅಲಾಸ್ಕಾದಿಂದ ಹಿಡಿದು ಪಶ್ಚಿಮ ಕೆನಡಾ, ವಾಷಿಂಗ್ಟನ್‌, ಒರೆಗಾನ್‌ ಮತ್ತು ಕ್ಯಾಲಿಫೋರ್ನಿಯಾ, ಅಮೆರಿಕಾ ಸಂಯುಕ್ತ ಸಂಸ್ಥಾನದ ನೈಋತ್ಯ ಭಾಗ ಹಾಗೂ ಮೆಕ್ಸಿಕೊ ದೇಶದ ಉತ್ತರ ಭಾಗ (ಬಯಲುಸೀಮೆ ಪ್ರದೇಶದಲ್ಲಿ ಒಂದು ಹೊರವಾಸಿ ಪ್ರದೇಶ) ವರೆಗೂ ವ್ಯಾಪಿಸಿದೆ.ಗಮನಾರ್ಹ ವೈವಿಧ್ಯವುಳ್ಳ ಇನ್ನೊಂದು ಪ್ರದೇಶವೆಂದರೆ ಅಗ್ನೇಯ ವಲಯ. ಆದರೂ ಯುರೋಪಿಯನ್ನರು ಆಗಮಿಸಿ ಅವರೊಂದಿಗಿನ ಅಂತರಸಂಪರ್ಕವುಂಟಾದ ಕಾರಣ, ಇಂತಹ ಭಾಷೆಗಳಲ್ಲಿ ಹಲವು ಅಳಿದುಹೋದವು. ಇದರ ಪರಿಣಾಮವಾಗಿ, ಇವು ಐತಿಹಾಸಿಕ ದಾಖಲೆಗಳಲ್ಲ.

ಸಾಂಸ್ಕೃತಿಕ ಅಂಶಗಳು

ಹೋಪಿ ಮಹಿಳೆಯೊಬ್ಬಳು 1900ರ ಅವಧಿಯ ಚಿತ್ರದಲ್ಲಿ ಅವಿವಾಹಿತ ಹುಡುಗಿಯ ತಲೆಕೂದಲನ್ನು ಕಟ್ಟುತ್ತಿರುವುದು.
ಕುರಿಯು ನವಾಜೊ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಒಂದು ಪ್ರಮುಖ ಅಂಶವಾಗಿ ಉಳಿದಿದೆ.

ಸಾಂಸ್ಕೃತಿಕ ಲಕ್ಷಣಗಳು, ಭಾಷೆ, ಉಡುಪು ಮತ್ತು ಪದ್ಧತಿಗಳು ಒಂದು ಪಂಗಡದಿಂದ ಇನ್ನೊಂದಕ್ಕೆ ಬಹಳಷ್ಟು ವ್ಯತ್ಯಾಸಗೊಂಡರೂ, ಕೆಲವು ನಿರ್ದಿಷ್ಟ ಅಂಶಗಳು ಹಲವು ಪಂಗಡಗಳಲ್ಲಿ ಸರ್ವೇಸಾಮಾನ್ಯವಾಗಿವೆ.'' ಸುಮಾರು 10,000 ವರ್ಷಗಳ ಹಿಂದೆ, ಆರಂಭಿಕ ಬೇಟೆಗಾರ-ಸಂಗ್ರಹಕಾರರು ಕಲ್ಲಿನಿಂದ ಆಯುಧಗಳನ್ನು ತಯಾರಿಸುತ್ತಿದ್ದರು. ಲೋಹವಿಜ್ಞಾನ ಉಗಮವಾದಾಗ, ಹೊಸ ತಂತ್ರಜ್ಞಾನಗಳನ್ನು ಬಳಸಲಾಯಿತು. ಇನ್ನಷ್ಟು ಒಳ್ಳೆಯ ಕ್ಷಮತೆಯುಳ್ಳ ಶಸ್ತ್ರಗಳನ್ನು ತಯಾರಿಸಲಾಯಿತು. ಯುರೋಪಿಯನ್ನರು ಅಮೆರಿಕಾ ಖಂಡಕ್ಕೆ ಆಗಮಿಸುವ ಮೊದಲು, ಹಲವು ಪಂಗಡಗಳು ಇದೇ ರೀತಿಯ ಆಯುಧಗಳನ್ನು ಬಳಸುತ್ತಿದ್ದರು. ಬಿಲ್ಲು-ಬಾಣ, ಗದೆ ಮತ್ತು ಈಟಿಗಳು ಸಾಮಾನ್ಯ ಬಳಕೆಯ ಆಯುಧಗಳಾಗಿದ್ದವು. ಆದರೆ ಗುಣಮಟ್ಟ, ವಸ್ತು ಮತ್ತು ವಿನ್ಯಾಸಗಳಲ್ಲಿ ವ್ಯಾಪಕ ವಿಭಿನ್ನತೆಗಳಿದ್ದವು. ಸ್ಥಳೀಯ ಅಮೆರಿಕನ್ನರು ಬಳಸುತ್ತಿದ್ದ ಅಗ್ನಿ, ಅಹಾರ ಒದಗಿಸುವಿಕೆ ಮತ್ತು ತಯಾರಿಕೆಗೆ ಎರಡಕ್ಕೂ ಬಹಳ ಸಹಾಯಕವಾದವು. ಇದು ಜನಸಂಖ್ಯೆ ಹೆಚ್ಚಿಸಲು ಅಮೆರಿಕಾ ಖಂಡದ ಭೂಚಿತ್ರಣವನ್ನು ಬದಲಾಯಿಸಿತು.ಕ್ರಿಸ್ತಪೂರ್ವ ಸುಮಾರು 8000ರೊಳಗೆ ಬೃಹದ್ಗಜಗಳು ಮತ್ತು ಶಂಕುದಂತವುಗಳು ಅಳಿದುಹೋಗಿದ್ದವು. ಸ್ಥಳೀಯ ಅಮೆರಿಕನ್ನರು ಕಾಡುಕೋಣ ಹಾಗೂ ಇತರೆ ದೊಡ್ಡ ಪ್ರಾಣಿಗಳನ್ನು ಬೇಟೆಯಾಡತೊಡಗಿದ್ದರು. ಮಹಾ ಬಯಲುಸೀಮೆ ಪಂಗಡಗಳು ಆಗ ಇನ್ನೂ ಕಾಡುಕೋಣಗಳನ್ನು ಬೇಟೆಯಾಡುತ್ತಿದ್ದಾಗ, ಮೊದಲ ಬಾರಿಗೆ ಯುರೋಪಿಯನ್ನರನ್ನು ಪೈಪೋಟಿಯಲ್ಲಿ ಎದುರುಗೊಂಡರು. 17ನೆಯ ಶತಮಾನದಲ್ಲಿ ಸ್ಪ್ಯಾನಿಷ್‌ ಜನರು ಕುದುರೆಯನ್ನು ಉತ್ತರ ಅಮೆರಿಕಾದಲ್ಲಿ ಪುನಃ ಪರಿಚಯಿಸಿದ ಫಲವಾಗಿ, ಸ್ಥಳೀಯ ಅಮೆರಿಕನ್ನರು ಕುದುರೆ ಸವಾರಿ ಕಲಿತರು. ಅವರು ದೊಡ್ಡ ಗಾತ್ರದ ಬೇಟೆ ಹಿಡಿಯುವ ವಿಧಾನವೂ ಸೇರಿ, ಸ್ಥಳೀಯ ಪಂಗಡದವರ ಸಂಸ್ಕೃತಿಯನ್ನು ಬಹಳಷ್ಟು ಬದಲಾಯಿಸಿತು. (ಸ್ಪ್ಯಾನಿಷ್‌ ಜನರು ಆಗಮಿಸುವ ಮುನ್ನ, ಪ್ರಾಗೈತಿಹಾಸಿಕ ಕುದುರೆಗಳ ಸಾಕ್ಷ್ಯಗಳು ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ ನಗರದಲ್ಲಿ ಲಾ ಬ್ರಿಯ ಟಾರ್‌ ಪಿಟ್ಸ್‌ನಲ್ಲಿ ಲಭಿಸಿದವು.[೧೪೪][೧೪೫]) ಜೊತೆಗೆ, ಸ್ಥಳೀಯ ಪಂಗಡದವರ ಜೀವನದಲ್ಲಿ ಕುದುರೆಗಳು ಅದೆಷ್ಟು ಅಮೂಲ್ಯ, ಕೇಂದ್ರೀಯ ಅಂಶವಾಯಿತೆಂದರೆ, ಅವನ್ನು ಸಂಪತ್ತಿನ ಅಳತೆಯೆಂದು ಪರಿಗಣಿಸಲಾಯಿತು.

ಸಂಘಟನೆ

1909ರಲ್ಲಿ ತಲೆಯಲ್ಲಿ ಮಣ್ಣಿನ ಹೂಜಿಯನ್ನು ಹೊತ್ತುಕೊಂಡಿರುವ ಜುನಿ ಹುಡುಗಿ

ಬಣದ ರಚನೆ

ಪಂಗಡಗಳು ರಚನೆಯಾಗುವ ಮುಂಚೆ, ಸ್ಥಳೀಯ ಅಮೆರಿಕನ್ನರ ಸಮಾಜದಲ್ಲಿ ಕುಲಗಳು ಅಥವಾ ಬಣಗಳು ಪ್ರಾಬಲ್ಯ ಮೆರೆದಿದ್ದವು, ಎಂದು ಆರಂಭ ಯುಗೀಯ ಯುರೋಪಿಯನ್ ಅಮೆರಿಕನ್‌ ಪಂಡಿತರು ವಿವರಿಸಿದ್ದರು. ಕೆಳಕಂಡಂತೆ ಕೆಲವು ಸಾಮಾನ್ಯ ಗುಣಲಕ್ಷಣಗಳಿದ್ದವು:

  • ತಮ್ಮ ಪರಮೋಚ್ಚ ನಾಯಕ ಮತ್ತು ಮುಖಂಡರನ್ನು ಚುನಾಯಿಸುವ ಹಕ್ಕು
  • ತಮ್ಮ ಪರಮೋಚ್ಚ ನಾಯಕ ಹಾಗೂ ಮುಖಂಡರನ್ನು ಕೆಳಗಿಳಿಸುವ ಅಧಿಕಾರ
  • ಅದೇ ಬಣದೊಳಗೆ ವಿವಾಹವಾಗಬಾರದೆಂಬ ಕಟ್ಟುಪಾಡು.
  • ನಿಧನರಾದ ಸದಸ್ಯರ ಸ್ವತ್ತಿನ ಉತ್ತರಾಧಿಕಾರ ಪಡೆಯಲು ಪರಸ್ಪರ ಹಕ್ಕುಗಳು.
  • ಪರಸ್ಪರ ಸಹಾಯ, ರಕ್ಷಣಾತ್ಮಕ ವಿಧಾನಗಳಲ್ಲಿ ಗಾಯಗಳಾದಲ್ಲಿ ಮತ್ತು ಅವುಗಳ ಸೂಕ್ತ ಪರಿಹಾರಕ್ಕಾಗಿ ಕಟ್ಟುಪಾಡುಗಳು.
  • ಪಂಗಡದ ಸದಸ್ಯಸರಿಗೆ ಹೆಸರು ನೀಡುವ ಹಕ್ಕು.
  • ಅಪರಿಚಿತರನ್ನು ಬಣದೊಳಗೆ ಸೇರಿಸಿಕೊಳ್ಳುವ ಅಧಿಕಾರ.
  • ಒಂದೇ ರೀತಿಯ ಧಾರ್ಮಿಕ ಹಕ್ಕುಗಳು ಮತ್ತು ವಿಚಾರಣೆಗಳು.
  • ಶವ ಹೂಳಲು ಸರ್ವೆಸಮಾನ್ಯ ಸಾರ್ವಜನಿಕ ಜಾಗ.
  • ಬಣದ ಮಂಡಳಿ.[೧೪೬]

ಪಂಗಡದ ರಚನೆ

ಹಲವು ಗುಂಪುಗಳ ನಡುವೆ ಉಪ-ವಿಭಜನೆ ಮತ್ತು ಭಿನ್ನತೆ ಪ್ರಕ್ರಿಯೆ ನಡೆದವು. ಉತ್ತರ ಅಮೆರಿಕಾದಲ್ಲಿ ನಲವತ್ತಕ್ಕೂ ಹೆಚ್ಚು ಮೂಲ ಭಾಷೆಗಳು ಅಭಿವೃದ್ಧಿಯಾದವು. ಪ್ರತಿಯೊಂದು ಸ್ವತಂತ್ರ ಪಂಗಡವೂ ಆ ಭಾಷೆಗಳಲ್ಲಿ ಒಂದರ ಆಡುಭಾಷೆ ಬಳಸುವುದು. ಪಂಗಡಗಳ ಕೆಲವು ಕಾರ್ಯಗಳು ಮತ್ತು ಲಕ್ಷಣಗಳು ಕೆಳಕಂಡಂತಿವೆ:

  • ಬಣಗಳ ಸ್ವಾಮ್ಯ.
  • ಈ ಬಣಗಳ ಪರಮೋಚ್ಚನಾಯಕ ಮತ್ತು ಮುಖಂಡರನ್ನು ಕೆಳಗಿಳಿಸುವ ಹಕ್ಕು.
  • ಧಾರ್ಮಿಕ ಪಂಥ ಮತ್ತು ಪೂಜೆಯ ಅನುಸರಣ.
  • ಮುಖ್ಯಸ್ಥರ ಮಂಡಳಿಗಳುಳ್ಳ ಪರಮೋಚ್ಚ ಸರ್ಕಾರ.
  • ಕೆಲವು ನಿದರ್ಶನಗಳಲ್ಲಿ ಪಂಗಡದ ಪರಮೋಚ್ಚ ನಾಯಕ.[೧೪೬]

ಸಮಾಜ ಮತ್ತು ಕಲೆ

ಐದು ಮಹಾ ಕೆರೆಗಳು ಹಾಗೂ ಆ ಪ್ರದೇಶದ ಪೂರ್ವ ಮತ್ತು ಉತ್ತರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಇರೊಕೊಯಿಸ್‌ ಪಂಗಡದವರು ವಾಂಪಮ್ ಎಂಬ ದಾರ ಅಥವಾ ಪಟ್ಟಿಗಳನ್ನು ಬಳಸುತ್ತಿದ್ದರು. ಇವುಗಳು ಎರಡು ಉಪಯುಕ್ತತೆಗಳನ್ನು ಹೊಂದಿದ್ದವು: ಗಂಟುಗಳು ಮತ್ತು ಮಣಿಗಳುಳ್ಳ ವಿನ್ಯಾಸಗಳು ಪಂಗಡದ ಕಥೆಗಳು ಮತ್ತು ಪುರಾಣ ಕಥೆಗಳ ಸ್ಮೃತಿವರ್ಧಕ ವೃತ್ತಾಂತಗಳಿಂದ ಕೂಡಿದ್ದು, ವಿನಿಮಯದ ಮಾಧ್ಯಮ ಹಾಗೂ ಅಳತೆಯ ಪರಿಮಾಣವನ್ನಾಗಿಯೂ ಬಳಸಲಾಗುತ್ತಿತ್ತು. ಈ ವಸ್ತುಗಳ ಪಾಲಕರನ್ನು ಪಂಗಡದ ಗಣ್ಯರೆಂದು ಪರಿಗಣಿಸಲಾಗುತ್ತಿತ್ತು.[೧೪೭]ಪುಯೆಬ್ಲೊ ಜನರು ತಮ್ಮ ಧಾರ್ಮಿಕ ಸಮಾರಂಭಗಳಿಗೆ ಸಂಬಂಧಿತ ಆಕರ್ಷಕ ವಸ್ತುಗಳ ಕಲಾಕೃತಿ ರಚಿಸಿದರು. ಕಚಿನಾ ನೃತ್ಯಕಲಾವಿದರು ಬಹಳ ವಿಸ್ತಾರವಾಗಿ ಬಣ್ಣ ಬಳಿಯಲಾದ ಮತ್ತು ಅಲಂಕರಿಸಲಾದ ಮುಖವಾಡಗಳನ್ನು ಧರಿಸಿ, ಶಾಸ್ತ್ರೋಕ್ತವಾಗಿ ವಿವಿಧ ಪೂರ್ವಜ ಆತ್ಮಗಳನ್ನು ಅನುಕರಿಸಿ ನರ್ತಿಸುತ್ತಿದ್ದರು. ಶಿಲ್ಪಕಲಾಕೃತಿ ಕ್ಷೇತ್ರವು ಅಷ್ಟೇನೂ ಅಭಿವೃದ್ಧಿ ಹೊಂದಿರಲಿಲ್ಲ. ಆದರೂ, ಕೆತ್ತನೆ ಮಾಡಲಾದ ಕಲ್ಲು ಮತ್ತು ಮರದ ವಸ್ತುಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಉತ್ತಮ ಗುಣಮಟ್ಟದ ನೇಯ್ಗೆ, ಕಸೂತಿ-ವಿನ್ಯಾಸಗಳು ಮತ್ತು ಸಮೃದ್ಧ ವರ್ಣಗಳು ಜವಳಿ ಕಲೆಗಳ ಪ್ರಮುಖಾಂಶಗಳಾಗಿದ್ದವು. ಟರ್ಕೋಯಿಸ್(ನೀಲಿ ಖನಿಜ) ಮತ್ತು ಚಿಪ್ಪಿನ ಆಭರಣಗಳು ಹಾಗೂ ಅತ್ಯುತ್ತಮ ಗುಣಮಟ್ಟದ ಕುಂಬಾರಿಕೆ ಮತ್ತು ರೂಪಪ್ರಾಧಾನ್ಯಗೊಳಿಸಲಾದ ಚಿತ್ರ ಕಲೆಗಳನ್ನು ರಚಿಸಲಾಯಿತು.ನವಜೊ ಆಧ್ಯಾತ್ಮಿಕತೆಯು ಆಧ್ಯಾತ್ಮಿಕ ಲೋಕದೊಂದಿಗೆ ಸಂಯಮದ ಸಂಬಂಧ ಕಾಯ್ದುಕೊಳ್ಳುವತ್ತ ಗಮನ ಕೇಂದ್ರೀಕರಿಸಿತು. ಇದನ್ನು ಸಾಮಾನ್ಯವಾಗಿ, ರಂಗೋಲಿ ಕಲಾಕೃತಿ ಸೇರಿದಂತೆ ಸಮಾರಂಭದ ವಿಧಾನಗಳ ಮೂಲಕ ನಡೆಸಲಾಗುತ್ತಿತ್ತು. ಮರಳು, ಇದ್ದಿಲು, ಜೋಳದ ಹಿಟ್ಟು ಮತ್ತು ಪರಾಗದಿಂದ ತಯಾರಿಸಲಾದ ಬಣ್ಣಗಳು ವಿಶಿಷ್ಟ ಉತ್ಸಾಹಗಳನ್ನು ನಿರೂಪಿಸುತ್ತಿದ್ದವು. ಈ ಪ್ರಮುಖ, ಉಜ್ವಲ, ಗಹನ ಮತ್ತು ವಿವಿಧ-ಬಣ್ಣಗಳುಳ್ಳ ಮರಳು ಕಲಾಕೃತಿಗಳನ್ನು ಸಮಾರಂಭದ ಅಂತ್ಯದಲ್ಲಿ ಅಳಿಸಲಾಗುತ್ತಿತ್ತು.

ಕೃಷಿ

ಸ್ಥಳೀಯ ಅಮೆರಿಕನ್ನರು ಬೆಳೆದ ಮೆಕ್ಕೆಜೋಳ
ಹೆತ್ತವರು ಬತ್ತದ ಬೆಳೆಗಳನ್ನು ನೋಡಿಕೊಳ್ಳುವಾಗ ಚಿಪ್ಪೇವ ಮಗು ಕ್ರ್ಯಾಡಲ್‌ಬೋರ್ಡ್‌ನಲ್ಲಿ ಕಾಯುತ್ತಿರುವುದು (ಮಿನ್ನೆಸೊಟ,1940).

ಕುಂಬಳಕಾಯಿ ಜಾತಿಯ, ಸೌತೆಕಾಯಿಯನ್ನು ಹೋಲುವ ತರಕಾರಿಯು ಸ್ಥಳೀಯ ಅಮೆರಿಕನ್ನರು ಆರಂಭಕಾಲದಲ್ಲಿ ಬೆಳೆಸುತ್ತಿದ್ದರು. ಆರಂಭಿಕ ಕಾಲದ ಇತರೆ ಫಸಲುಗಳಲ್ಲಿ ಹತ್ತಿ, ಸೂರ್ಯಕಾಂತಿ, ಕುಂಬಳಕಾಯಿ, ತಂಬಾಕು, ಹುಳಿ-ಓಮ, ಹೊಸೆಜೊಂಡು ಮತ್ತು ಸಂಪ್ ವೀಡ್ ಸೇರಿದ್ದವು.ವ್ಯಾಪಾರಿಗಳು ಮೆಕ್ಸಿಕೊದಿಂದ ಕಲ್ಟಿಜನ್‌ಗಳನ್ನು ತರುವುದರೊಂದಿಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ನೈಋತ್ಯ ವಲಯದಲ್ಲಿ ಕೃಷಿ ಚಟುವಟಿಕೆಗಳು ಸುಮಾರು 4,000 ವರ್ಷಗಳ ಹಿಂದೆ ಆರಂಭವಾಯಿತು. ಬಹಳಷ್ಟು ಬದಲಾಗುವ ಹವಾಮಾನದ ಕಾರಣ, ಕೃಷಿ ಸಫಲವಾಗಲು ಸ್ವಲ್ಪ ಮಟ್ಟದ ಮುಕ್ತ ಮನಸ್ಸಿನ ಅಗತ್ಯವಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನದ ನೈಋತ್ಯ ವಲಯದಲ್ಲಿನ ಹವಾಮಾನವು ತಣ್ಣನೆಯ, ತೇವವುಳ್ಳ ಗುಡ್ಡಗಾಡು ಪ್ರದೇಶಗಳಿಂದ ಹಿಡಿದು, ಒಣ, ಮರಳು-ಮರಳಾದ ಮಣ್ಣಿನ ಮರುಭೂಮಿಯ ಹವಾಮಾನದವರೆಗೂ ಇತ್ತು. ಒಣ ಪ್ರದೇಶಗಳಿಗೆ ನೀರು ಒಯ್ಯಲು ನೀರಾವರಿ ಹಾಗೂ ಬೀಜ ಬೀರುವ ಬೆಳೆಯುವ ಗಿಡಗಳ ಲಕ್ಷಣಗಳ ಆಧರಿಸಿ ಬೀಜಗಳ ಆಯ್ಕೆಯು, ಆ ಕಾಲದ ನಾವೀನ್ಯವುಳ್ಳ ವಿಧಾನಗಳಾಗಿದ್ದವು. ನೈಋತ್ಯ ವಲಯದಲ್ಲಿ, ಸ್ವಾವಲಂಬಿ ಕಾಳುಗಳನ್ನು ಇಂದು ಬೆಳೆಸುವ ರೀತಿಯಲ್ಲೇ ಬೆಳೆಸುತ್ತಿದ್ದರು.ಆದರೆ, ಪೂರ್ವದಲ್ಲಿ, ಅವುಗಳನ್ನು ಜೋಳದ ಪಕ್ಕದಲ್ಲಿಯೇ ಅವುಗಳನ್ನೂ ಬೆಳೆಸಲಾಗುತ್ತಿತ್ತು. ಇದರಿಂದ, ಬಳ್ಳಿಗಳು ಜೋಳ ಫಸಲಿನ ಕಾಂಡವನ್ನು ಸುತ್ತಿಕೊಂಡು ಬೆಳೆಯಬಹುದು. ಸ್ಥಳೀಯ ಅಮೆರಿಕನ್ನರು ಬೆಳೆಸಿದ ಅತಿಮುಖ್ಯ ಫಸಲೆಂದರೆ ಮೆಕ್ಕೆ-ಜೋಳ. ಇದರ ಕೃಷಿಯನ್ನು ಮೊದಲಿಗೆ ಮಧ್ಯಯುಗೀಯ ಅಮೆರಿಕಾದಲ್ಲಿ ಆರಂಭಿಸಿ ನಂತರ ಉತ್ತರ ದಿಕ್ಕಿನತ್ತ ಹರಡಿಸಲಾಯಿತು. ಇದು ಸುಮಾರು 2,000 ವರ್ಷಗಳ ಹಿಂದೆ ಪೂರ್ವ ಅಮೆರಿಕಾ ವಲಯ ತಲುಪಿತು. ದೈನಿಕ ಆಹಾರದ ಬಹುಮುಖ್ಯ ಅಂಗವಾಗಿದ್ದ ಕಾರಣ, ಮೆಕ್ಕೆ-ಜೋಳವು ಸ್ಥಳೀಯ ಅಮೆರಿಕನ್ನರಿಗೆ ಬಹಳ ಮುಖ್ಯ ಫಸಲಾಗಿತ್ತು. ಚಳಿಗಾಲದ ಹವಾಮಾನದಲ್ಲಿ ಈ ಫಸಲನ್ನು ಭೂಮಿಯಡಿಯ ಗುಂಡಿಗಳಲ್ಲಿ ಶೇಖರಿಸಿಡಬಹುದಾಗಿತ್ತು. ಸ್ವಲ್ಪವನ್ನೂ ಪೋಲು ಮಾಡುತ್ತಿರಲಿಲ್ಲ. ಇದರ ಹೊಟ್ಟನ್ನು ಕಲಾಕೃತಿಗಳನ್ನಾಗಿ ಮಾಡಲಾಗುತ್ತಿತ್ತು. ಇದರ ದಿಂಡನ್ನು ಉರಿಸಿ ಇಂಧನವನ್ನಾಗಿ ಬಳಸಲಾಗುತ್ತಿತ್ತು. ಕ್ರಿಸ್ತಶಕ 800ರಷ್ಟರೊಳಗೆ, ಸ್ಥಳೀಯ ಅಮೆರಿಕನ್ನರು ಮೂರು ಪ್ರಮುಖ ಫಸಲುಗಳಾದ ಕಾಳು, ಕುಂಬಳಕಾಯಿ ಜಾತಿಯ ಸೌತೆಕಾಯಿಯಂತಹ ತರಕಾರಿ ಮತ್ತು ಜೋಳವನ್ನು ಫಸಲಾಗಿ ಬೆಳೆಸುತ್ತಿದ್ದರು. ಇದನ್ನು ಮೂರು ಸಹೋದರಿಯರು ಎನ್ನಲಾಗುತ್ತಿತ್ತು.ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ಅಮೆರಿಕನ್‌ ಪುರುಷರು ಮತ್ತು ಸ್ತ್ರೀಯರ ಪಾತ್ರಗಳು ವಲಯದಿಂದ ವಲಯಕ್ಕೆ ಬದಲಾಗುತ್ತಿತ್ತು. ನೈಋತ್ಯ ವಲಯದಲ್ಲಿ ಪುರುಷರು ಸಲಿಕೆ ಬಳಸಿ ಮಣ್ಣನ್ನು ಸಿದ್ಧಗೊಳಿಸುತ್ತಿದ್ದರು. ಮಹಿಳೆಯರು ಫಸಲು ನೆಡುವುದು, ಕಳೆ ಕಿತ್ತುವುದು ಹಾಗೂ ಫಸಲುಗಳನ್ನು ಕೊಯ್ಲು ಮಾಡುವ ಕೆಲಸ ಮಾಡುತ್ತಿದ್ದರು. ಹಲವು ಇತರೆ ಪ್ರದೇಶಗಳಲ್ಲಿ, ಮಹಿಳೆಯರು ತಮ್ಮ ಹೊಲಗಳನ್ನು ಸ್ವಚ್ಛಗೊಳಿಸುವ ಕೆಲಸ ಸೇರಿದಂತೆ ಎಲ್ಲಾ ರೀತಿಯ ಕಾರ್ಯಗಳನ್ನೂ ನಿರ್ವಹಿಸುತ್ತಿದ್ದರು. ಹೊಲಗದ್ದೆಗಳನ್ನು ಸ್ವಚ್ಘಗೊಳಿಸುವುದು ಬಹಳ ದೊಡ್ಡ ಕೆಲಸವಾಗಿತ್ತು, ಏಕೆಂದರೆ ಸ್ಥಳೀಯ ಅಮೆರಿಕನ್ನರು ಆಗಾಗ್ಗೆ ಗದ್ದೆಗಳನ್ನು ಬದಲಾಯಿಸುತ್ತಿದ್ದರು. ರಸಗೊಬ್ಬರದಂತಹ ಪಾತ್ರ ವಹಿಸಲು ಗದ್ದೆಗಳಲ್ಲಿ ಮೀನುಗಳನ್ನು ಹಾಕುವುದು ಹೇಗೆ ಎಂಬುದನ್ನು ನ್ಯೂಇಂಗ್ಲೆಂಡ್‌ನಲ್ಲಿ ಸ್ಕ್ವಾಂಟೊ ತೀರ್ಥಯಾತ್ರಿಗಳಿಗೆ ತೋರಿಸಿಕೊಟ್ಟನೆಂಬ ಸಾಂಪ್ರದಾಯಿಕ ಕಥೆಯಿದೆ. ಆದರೆ ಈ ಕಥೆಯ ಸತ್ಯಾಧಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸ್ಥಳೀಯ ಅಮೆರಿಕನ್ನರು ಜೋಳದ ಪಕ್ಕ ಕಾಳು ಫಸಲು ನೆಟ್ಟಿದ್ದರು. ಆದರೆ, ಜೋಳವು ಭೂಮಿಯಿಂದ ತೆಗೆದುಕೊಳ್ಳುವ ಸಾರಜನಕವನ್ನು ಬದಲಾಯಿಸುತ್ತಿತ್ತು, ಅಲ್ಲದೆ, ಹತ್ತಲು ಜೋಳದ ಕಾಂಡಗಳನ್ನು ಆಸರೆಗಾಗಿ ಬಳಸುತ್ತಿತ್ತು. ಸ್ಥಳೀಯ ಅಮೆರಿಕನ್ನರು ಕಳೆಗಳನ್ನು ಸುಡಲು ಮತ್ತು ಗದ್ದೆಗಳನ್ನು ಸ್ವಚ್ಛಗೊಳಿಸಲು ನಿಯಂತ್ರಿತ ರೀತಿಯಲ್ಲಿ ಸುಡುತ್ತಿದ್ದರು. ಇದರ ಮೂಲಕ ಪೌಷ್ಟಿಕಾಂಶವನ್ನು ಪುನಃ ಭೂಮಿಯೊಳಗೆ ಮರಳಿಸಿದಂತಾಯಿತು. ಈ ಕ್ರಮ-ವಿಧಾನಗಳು ವಿಫಲವಾದಲ್ಲಿ, ಅವರು ಈ ಗದ್ದೆಯನ್ನು ಹಾಗೆಯೇ ಸುಮ್ಮನೆ ತೊರೆದು, ಉಳುಮೆ ಮಾಡಲು ಬೇರೆ ಗದ್ದೆಯನ್ನು ಹುಡುಕುತ್ತಿದ್ದರು.ಖಂಡದ ಪೂರ್ವ ಭಾಗದಲ್ಲಿ, ಹೊಲಗದ್ದೆಗಳನ್ನಾಗಿ ಮಾಡಿ ಫಸಲು ಬೆಳೆಸಲು, ಸ್ಥಳೀಯರು ವಿಸ್ತಾರ ಭೂಪ್ರದೇಶಗಳನ್ನು ತೆರವುಗೊಳಿಸುತ್ತಿದ್ದನ್ನು ಯುರೋಪಿಯನ್ನರು ಗಮನಿಸಿದರು. ನ್ಯೂಇಂಗ್ಲೆಂಡ್‌ನಲ್ಲಿ ತಮ್ಮ ಹೊಲಗದ್ದೆಗಳು ಕೆಲವೊಮ್ಮೆ ನೂರಾರು ಎಕರೆಗಳಷ್ಟು ವ್ಯಾಪಿಸಿದ್ದವು. ಸ್ಥಳೀಯ ಅಮರಿಕನ್ನರು ಸಾವಿರಾರು ಎಕರೆಗಳಲ್ಲಿ ಉಳುಮೆ ಮಾಡುತ್ತಿರುವುದನ್ನು ವರ್ಜಿನಿಯಾದ ವಸಾಹತುದಾರರು ಗಮನಿಸಿದರು.[೧೪೮]ಸ್ಥಳೀಯ ಅಮೆರಿಕನ್ನರು ಸಾಮಾನ್ಯವಾಗಿ ಸಲಿಕೆ, ಸುತ್ತಿಗೆ ಮತ್ತು ಸೈಂಗೋಲು ಸಲಕರಣೆ ಬಳಸಿ ಕೃಷಿ ಕೆಲಸ ಮಾಡುತ್ತಿದ್ದರು. ಭೂಮಿಯನ್ನು ಉಳುಮೆ ಮಾಡಿ, ಬೀಜ ಬಿತ್ತಲು, ಸಲಿಕೆ ಪ್ರಮುಖ ಸಲಕರಣೆಯಾಗಿತ್ತು. ನಂತರ ಕಳೆ ಕಿತ್ತಲು ಸಹ ಬಳಸಲಾಗುತ್ತಿತ್ತು. ಸಲಿಕೆಯ ಆರಂಭಿಕ ಆವೃತ್ತಿಗಳು ಮರ ಅಥವಾ ಕಲ್ಲಿನದಾಗಿದ್ದವು. ವಸಾಹತುದಾರರು ಕಬ್ಬಿಣ ತಂದಾಗ, ಸ್ಥಳೀಯ ಅಮೆರಿಕನ್ನರು ಕಬ್ಬಿಣದ ಸಲಿಕೆ ಮತ್ತು ಮಚ್ಚು ಬಳಸಲಾರಂಭಿಸಿದರು. ಬೀಜ ನೆಡಲೆಂದು ಭೂಮಿ ಅಗೆಯಲು ಸೈಂಗೋಲು ಬಳಸಲಾಗುತ್ತಿತ್ತು. ಫಸಲುಗಳನ್ನು ಕೊಯ್ಲು ಮಾಡಿದಾಗ, ಮಹಿಳೆಯರು ಖಾದ್ಯ ಪದಾರ್ಥವಾಗಿಸಲು ಇದರ ಉತ್ಪನ್ನವನ್ನು ಸಿದ್ಧಗೊಳಿಸುತ್ತಿದ್ದರು. ಜೋಳವನ್ನು ಪುಡಿ ಮಾಡಲು ಸುತ್ತಿಗೆ ಬಳಸುತ್ತಿದ್ದರು. ಅದನ್ನು ಬೇಯಿಸಿ ಆ ರೀತಿಯಲ್ಲಿ ತಿನ್ನುತ್ತಿದ್ದರು, ಅಥವಾ ಜೋಳದ ಬ್ರೆಡ್‌ ರೂಪದಲ್ಲಿ ಸುಟ್ಟು ತಿನ್ನುತ್ತಿದ್ದರು.[೧೪೯]

ಧಾರ್ಮಿಕತೆ

ಬ್ಯಾಪ್ಟಿಸಮ್ ಆಫ್ ಪೊಕಾಹೊಂಟಾಸ್ಅನ್ನು 1840ರಲ್ಲಿ ಚಿತ್ರಿಸಲಾಯಿತು.ಇದರಲ್ಲಿ ಜಾನ್ ಗ್ಯಾಡ್ಸ್‌ಬಿ ಚ್ಯಾಪ್‌ಮ್ಯಾನ್ ವರ್ಜಿನಿಯಾದ ಜೇಮ್‌ಟೌನ್‌ನಲ್ಲಿ ಆಂಗ್ಲಿಕನ್ ಮಂತ್ರಿ ಅಲೆಕ್ಸಾಂಡರ್ ವೈಟೀಕರ್‌ನಿಂದ ರೆಬೆಕ್ಕಾ ದೀಕ್ಷಾಸ್ನಾನ ಮಾಡಿಸಲ್ಪಡುತ್ತಿರುವ, ಬಿಳಿಬಟ್ಟೆಯನ್ನು ಧರಿಸಿದ ಪೊಕಾಹೊಂಟಾಸ್‌ರನ್ನು ಚಿತ್ರಿಸಿದ್ದಾರೆ; ಈ ಘಟನೆಯು 1613 ಅಥವಾ 1614ರಲ್ಲಿ ನಡೆದಿರಬಹುದೆಂದು ನಂಬಲಾಗುತ್ತದೆ.

ಸ್ಥಳೀಯ ಅಮೆರಿಕನ್ನರ ಸಾಂಪ್ರದಾಯಿಕ ಧಾರ್ಮಿಕ ಕ್ರಿಯೆಗಳನ್ನು ಈಗಲೂ ಅನೇಕ ಬುಡಕಟ್ಟು ಜನಾಂಗಗಳು ಮತ್ತು ಗುಂಪುಗಳು ಆಚರಿಸುತ್ತವೆ. ಅನೇಕ "ಸಾಂಪ್ರದಾಯಿಕ" ಜನರು ಈಗಲೂ ಹಳೆಯ ದೇವತಾಶಾಸ್ತ್ರಕ್ಕೆ ಸಂಬಂಧಿಸಿದ ಧರ್ಮಶ್ರದ್ಧೆ ವ್ಯವಸ್ಥೆಗಳನ್ನು ಹೊಂದಿದ್ದಾರೆ.[specify] ಈ ಆಧ್ಯಾತ್ಮಿಕತೆಗಳು ಇನ್ನೊಂದು ಧರ್ಮಕ್ಕೆ ನಿಷ್ಠೆಯಿಂದ ಕೂಡಿರಬಹುದು ಅಥವಾ ವ್ಯಕ್ತಿಯ ಮುಖ್ಯ ಧಾರ್ಮಿಕ ಗುರುತನ್ನು ಪ್ರತಿನಿಧಿಸಬಹುದು. ಹೆಚ್ಚು ಸ್ಥಳೀಯ ಅಮೆರಿಕದ ಆಧ್ಯಾತ್ಮಿಕತೆಯು ಬುಡಕಟ್ಟು ಸಂಸ್ಕೃತಿಯ ನಿರಂತತೆಯಲ್ಲಿ ಅಸ್ತಿತ್ವದಲ್ಲಿದ್ದು, ಬುಡಕಟ್ಟು ಗುರುತಿನಿಂದ ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಿಲ್ಲ. "ಸಾಂಪ್ರದಾಯಿಕ" ಸ್ಥಳೀಯ ಅಮೆರಿಕದ ವೃತ್ತಿಗಾರರಲ್ಲಿ ಕೆಲವು ಸ್ಫುಟ ಬೆಳವಣಿಗೆಗಳು ಉದ್ಭವಿಸಿದವು. ಇವುಗಳನ್ನು ಪ್ರಾಯೋಗಿಕ ಪ್ರಜ್ಞೆಯಲ್ಲಿ ಧರ್ಮಗಳು ಎಂದು ಗುರುತಿಸಲಾಗಿದೆ. ಕೆಲವು ಬುಡಕಟ್ಟುಗಳ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಪವಿತ್ರ ಗಿಡಮೂಲಿಕೆಗಳಾದ ತಂಬಾಕು, ಸ್ವೀಟ್‌ಗ್ರಾಸ್ ಅಥವಾ ಸುಗಂಧಮೂಲಿಕೆ ಬಳಕೆ ಒಳಗೊಂಡಿವೆ. ಅನೇಕ ಸಮತಟ್ಟು ಪ್ರದೇಶದ ಬುಡಕಟ್ಟು ಜನರು ಸ್ವೇದಗೃಹ ಧಾರ್ಮಿಕ ಕ್ರಿಯೆಗಳನ್ನು ಹೊಂದಿದ್ದರು. ಆದರೂ ಬುಡಕಟ್ಟು ಜನರ ನಡುವೆ ಧಾರ್ಮಿಕ ಕ್ರಿಯೆಯ ಲಕ್ಷಣಗಳು ವ್ಯತ್ಯಾಸ ಹೊಂದಿರುತ್ತದೆ. ಉಪವಾಸ ಮಾಡುವುದು, ಅವರ ಜನರ ಪ್ರಾಚೀನ ಬಾಷೆಗಳಲ್ಲಿ ಹಾಡುವುದು ಮತ್ತು ಪ್ರಾರ್ಥನೆ ಮತ್ತು ಕೆಲವುಬಾರಿ ಡ್ರಮ್ಮಿಂಗ್(ಡ್ರಮ್ ಬಾರಿಸುವುದು) ಕೂಡ ಸಾಮಾನ್ಯವಾಗಿದೆ.ಮಿಡ್‌ವಿವಿನ್ ಲಾಜ್ ಸಾಂಪ್ರದಾಯಿಕ ಔಷಧಿ ಸಮಾಜವಾಗಿದ್ದು, ಓಜಿಬ್ವಾ(ಚಿಪ್ಪೇವಾ)ಮತ್ತು ಸಂಬಂಧಿತ ಬುಡಕಟ್ಟುಗಳ ಮೌಖಿಕ ಸಂಪ್ರದಾಯಗಳು ಮತ್ತು ಭವಿಷ್ಯನುಡಿಗಳಿಂದ ಪ್ರೇರೇಪಣೆ ಹೊಂದಿವೆ.ಸ್ಥಳೀಯ ಜನರ ನಡುವೆ ಇನ್ನೊಂದು ಗಮನಾರ್ಹ ಧಾರ್ಮಿಕ ಸಂಸ್ಥೆಯು ಸ್ಥಳೀಯ ಅಮೆರಿಕದ ಚರ್ಚ್ ಎಂದು ಹೆಸರಾಗಿದೆ. ಇದೊಂದು ಸಮನ್ವಯವಾದಿ ಚರ್ಚ್ ಆಗಿದ್ದು, ವಿವಿಧ ಬುಡಕಟ್ಟುಗಳಿಂದ ಸ್ಥಳೀಯ ಧಾರ್ಮಿಕ ಆಚರಣೆಯ ಅಂಶಗಳನ್ನು ಮತ್ತು ಕ್ರೈಸ್ತಧರ್ಮದಿಂದ ಸಾಂಕೇತಿಕ ಅಂಶಗಳನ್ನು ಒಳಗೊಂಡಿದೆ. ಅದರ ಮುಖ್ಯ ಮತಾಚರಣೆಯು ಪಿಯೋಟೆ ಧಾರ್ಮಿಕ ಕ್ರಿಯೆಯಾಗಿದೆ. 1890ಕ್ಕೆ ಮುಂಚೆ, ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳಲ್ಲಿ ವಾಕನ್ ಟಾಂಕಾ ಸೇರಿವೆ. ಅಮೆರಿಕಾದ ನೈರುತ್ಯ ಭಾಗದಲ್ಲಿ ವಿಶೇಷವಾಗಿ ನ್ಯೂಮೆಕ್ಸಿಕೊದಲ್ಲಿ, ಸ್ಪೇನಿನ ಧರ್ಮಪ್ರಚಾರಕರು ತಂದಿರುವ ಕ್ಯಾಥೋಲಿಕ ಚರ್ಚ್‌ನ ಸಿದ್ಧಾಂತ ಮತ್ತು ಸ್ಥಳೀಯ ಧರ್ಮದ ನಡುವೆ ಸಮನ್ವಯತೆ ಸಾಮಾನ್ಯವಾಗಿದೆ. ಪ್ಯುಬ್ಲೊ ಜನರ ಧಾರ್ಮಿಕ ಡ್ರಮ್‌ಗಳು,ಗಾಯನಗಳು ಮತ್ತು ನೃತ್ಯಗಳು ಸಾಂಟಾ ಫೆನ ಸಂತ ಫ್ರಾನ್ಸಿಸ್ ಕೆಥೆಡ್ರಲ್‌ನ ಸಮೂಹಪ್ರಾರ್ಥನೆಗಳಲ್ಲಿ ನಿಯಮಿತ ಭಾಗವಾಗಿದೆ.[೧೫೦] ಸ್ಥಳೀಯ ಅಮೆರಿಕಾದ ಕ್ಯಾಥೋಲಿಕ್ ಸಮನ್ವಯತೆಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಇತರ ಕಡೆ ಕೂಡ ಕಂಡುಬಂದಿದೆ.(ಉದಾ, ನ್ಯೂಯಾರ್ಕ್, ಫೊಂಡಾದ ರಾಷ್ಟ್ರೀಯ ಕಟೇರಿ ಟೆಕಕ್‌ವಿಥಾ ಪ್ರಾರ್ಥನಾಮಂದಿರ ಮತ್ತು ನ್ಯೂಯಾರ್ಕ್ ,ಆರಿಸ್‌ವಿಲ್ಲೆಯಲ್ಲಿರುವ ಉತ್ತರ ಅಮೆರಿಕಾದ ಹುತಾತ್ಮರ ರಾಷ್ಟ್ರೀಯ ಪ್ರಾರ್ಥನಾಮಂದಿರ.ಫೆಡರಲ್ ವಿಧಾನದಿಂದ ಮಾನ್ಯತೆ ಗಳಿಸಿದ ಬುಡಕಟ್ಟು ಜನಾಂಗದಲ್ಲಿ ನೋಂದಣಿಯಾದ ಪ್ರಮಾಣೀಕರಿಸಬಲ್ಲ ಸ್ಥಳೀಯ ಅಮೆರಿಕಾದ ಸಂತತಿಯ ವ್ಯಕ್ತಿಗಳು ಧಾರ್ಮಿಕ ಅಥವಾ ಆಧ್ಯಾತ್ಮಿಕ ಬಳಕೆಗೆ ಹದ್ದಿನ ಗರಿಗಳನ್ನು ಪಡೆಯಲು ಕಾನೂನುಬದ್ಧವಾಗಿ ಅಧಿಕಾರ ಹೊಂದಿರುತ್ತಾರೆ ಎಂದು ಈಗಲ್ ಫೆದರ್ ಕಾನೂನು (ಫೆಡರಲ್ ನಿಬಂಧನೆಗಳ ಸಂಹಿತೆಯ ಶೀರ್ಷಿಕೆ 50 ಭಾಗ 22) ನಿಗದಿ ಮಾಡಿದೆ. ಕಾನೂನಿನಲ್ಲಿ ಸ್ಥಳೀಯ ಅಮೆರಿಕನ್ನರು ಸ್ಥಳೀಯರಲ್ಲದ ಅಮೆರಿಕನ್ನರಿಗೆ ಹದ್ದಿನ ಗರಿಗಳನ್ನು ಕೊಡಲು ಅವಕಾಶ ನೀಡುವುದಿಲ್ಲ.

ಲಿಂಗಾಧಾರಿತ ಪಾತ್ರಗಳು

ಡಾ. ಸುಸಾನ್ ಲಾ ಫ್ಲೆಸ್ಚೆ ಪಿಕೊಟ್ಟೆ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವೈದ್ಯೆಯಾದ ಮೊದಲ ಸ್ಥಳೀಯ ಅಮೆರಿಕನ್‌ ಮಹಿಳೆಯಾಗಿದ್ದಾರೆ.

ಬಹುತೇಕ ಸ್ಥಳೀಯ ಅಮೆರಿಕಾದ ಬುಡಕಟ್ಟು ಜನರು ಸಾಂಪ್ರದಾಯಿಕ ಲಿಂಗಾಧಾರಿತ ಪಾತ್ರಗಳನ್ನು ಹೊಂದಿದ್ದರು.[ಸೂಕ್ತ ಉಲ್ಲೇಖನ ಬೇಕು] ಇರೋಕೊಯಿಸ್ ಮುಂತಾದ ಕೆಲವು ಬುಡಕಟ್ಟುಗಳಲ್ಲಿ, ರಾಷ್ಟ್ರ, ಸಾಮಾಜಿಕ ಮತ್ತು ಕುಲದ ಸಂಬಂಧಗಳು ಮಾತೃಸಂತತಿ ಮತ್ತು/ಅಥವಾ ಮಾತೃಪ್ರಧಾನವಾಗಿವೆ. ಆದರೂ ಅನೇಕ ವಿವಿಧ ವ್ಯವಸ್ಥೆಗಳು ಬಳಕೆಯಲ್ಲಿವೆ. ಒಂದು ಉದಾಹರಣೆಯು ಪತ್ನಿಯರು ಕುಟುಂಬದ ಆಸ್ತಿಯ ಮಾಲೀಕತ್ವ ಹೊಂದುವ ಚೆರೋಕಿ ಸಂಪ್ರದಾಯ. ಪುರುಷರು ಬೇಟೆಯಾಡುತ್ತಿದ್ದರು, ವ್ಯಾಪಾರ ಮತ್ತು ಯುದ್ಧ ಮಾಡುತ್ತಿದ್ದರು. ಆದರೆ ಮಹಿಳೆಯರು ಸಸ್ಯಗಳನ್ನು ಸಂಗ್ರಹಿಸುತ್ತಿದ್ದರು, ಕಿರಿಯರು ಮತ್ತು ಹಿರಿಯವಯಸ್ಕರ ಆರೈಕೆ ಮಾಡುವುದು, ವಸ್ತ್ರಗಳು ಮತ್ತು ಉಪಕರಣಗಳ ವಿನ್ಯಾಸ ಮತ್ತು ಮಾಂಸದ ಸಂಸ್ಕರಣೆ ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ಕೆಲಸ ಮಾಡುವಾಗ ಅಥವಾ ಪ್ರಯಾಣ ಮಾಡುವಾಗ ತಾಯಂದಿರು ತಮ್ಮ ಮಕ್ಕಳನ್ನು ಸಾಗಿಸಲು ಕ್ರೇಡಲ್‌ಬೋರ್ಡ್‌ಗಳನ್ನು ಬಳಸುತ್ತಿದ್ದರು.[೧೫೧] ಕೆಲವು(ಆದರೆ ಎಲ್ಲವೂ ಅಲ್ಲದ)ಬುಡಕಟ್ಟು ಜನಾಂಗಗಳಲ್ಲಿ ದ್ವಿಮನೋಧರ್ಮ(ಮಿಶ್ರಿತ ಲಿಂಗದ ಪಾತ್ರ) ವ್ಯಕ್ತಿಗಳು ಮಿಶ್ರಿತ ಅಥವಾ ಮೂರನೇ ಲಿಂಗದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.ಕನಿಷ್ಠ 12 ಬುಡಕಟ್ಟು ಜನಾಂಗಗಳು ಸಹೋದರಿಯರಿಗೆ ಬಹುಪತ್ನೀತ್ವಕ್ಕೆ ವಿಧಿವಿಧಾನ ಮತ್ತು ಆರ್ಥಿಕ ಮಿತಿಗಳೊಂದಿಗೆ ಅವಕಾಶ ನೀಡಿದ್ದರು.[೧೪೬]ಮನೆಯನ್ನು ನೋಡಿಕೊಳ್ಳುವುದಲ್ಲದೇ, ಮಹಿಳೆಯರು ಬುಡಕಟ್ಟುಗಳು ಉಳಿಯುವುದಕ್ಕೆ ಅಗತ್ಯವಾದ ಅನೇಕ ಕೆಲಸಗಳನ್ನು ಹೊಂದಿದ್ದರು. ಅವರು ಅಸ್ತ್ರಗಳನ್ನು ಮತ್ತು ಸಾಧನಗಳನ್ನು ತಯಾರಿಸಿದರು. ಅವರ ಮನೆಗಳ ಛಾವಣಿಗಳ ಬಗ್ಗೆ ನಿಗಾವಹಿಸುತ್ತಿದ್ದರು ಮತ್ತು ಅವರ ಪುರುಷರು ಬೈಸನ್‌(ಕಾಡೆಮ್ಮೆ/ ಕಾಡುಕೋಣ)ಬೇಟೆಗೆ ಸಾಮಾನ್ಯವಾಗಿ ನೆರವು ನೀಡುತ್ತಿದ್ದರು.[೧೫೨]ಕೆಲವು ಸಮತಟ್ಟು ಪ್ರದೇಶಗಳ ಭಾರತೀಯ ಬುಡಕಟ್ಟುಗಳಲ್ಲಿ ಔಷಧಿ ನೀಡುವ ಮಹಿಳೆಯರಿದ್ದು, ಅವರು ಗಿಡಮೂಲಿಕೆಗಳನ್ನು ಸಂಗ್ರಹಿಸಿ ರೋಗಿಗಳನ್ನು ಗುಣಪಡಿಸುತ್ತಿದ್ದರು.[೧೫೩]ಸಿಯೋಕ್ಸ್ ಮುಂತಾದ ಕೆಲವು ಬುಡಕಟ್ಟುಗಳಲ್ಲಿ ಬಾಲಕಿಯರಿಗೆ ಸವಾರಿ, ಬೇಟೆ ಮತ್ತು ಹೋರಾಟ ಕಲಿಯಲು ಪ್ರೋತ್ಸಾಹಿಸಲಾಯಿತು.[೧೫೪] ಹೋರಾಟವನ್ನು ಬಹುಮಟ್ಟಿಗೆ ಬಾಲಕರಿಗೆ ಮತ್ತು ಪುರುಷರಿಗೆ ಬಿಡಲಾಗಿದ್ದರೂ, ಮಹಿಳೆಯರು ಅವರ ಜತೆಗೆ ಹೋರಾಡಿದ ಪ್ರಕರಣಗಳಿವೆ. ವಿಶೇಷವಾಗಿ ಬುಡಕಟ್ಟಿನ ಅಸ್ತಿತ್ವಕ್ಕೆ ಬೆದರಿಕೆ ಉಂಟಾದಾಗ ಈ ರೀತಿಯಾಗಿದೆ.[೧೫೫]

ಕ್ರೀಡೆಗಳು

ಸ್ಥಳೀಯ ಅಮೆರಿಕನ್ನರ ಬಿಡುವಿನ ಕಾಲದಿಂದ ಸ್ಪರ್ಧಾತ್ಮಕ ವ್ಯಕ್ತಿಗೆ ಮತ್ತು ತಂಡದ ಕ್ರೀಡೆಗಳಿಗೆ ದಾರಿಕಲ್ಪಿಸಿತು. ಜಿಮ್ ಥಾರ್ಪ್,, ನೋಟಾ ಬೇಗಯ್III, ಜ್ಯಾಕೋಬಿ ಎಲ್ಸ್‌ಬರಿ, ಮತ್ತುಬಿಲ್ಲಿ ಮಿಲ್ಸ್ ಖ್ಯಾತ ವೃತ್ತಿಪರ ಕ್ರೀಡಾಪಟುಗಳಾಗಿದ್ದಾರೆ.

ತಂಡ ಆಧಾರಿತ

1830ರಲ ದಶಕದಲ್ಲಿ ಜಾರ್ಜ್ ಕ್ಯಾಟ್ಲಿನ್ ಚಿತ್ರಿಸಿದ ಚೊಕ್ಟಾವ್ ಮತ್ತು ಲಕೋಟ ಬುಡಕಟ್ಟು ಜನಾಂಗದ ಚೆಂಡು ಆಟಗಾರರು

ಸ್ಥಳೀಯ ಅಮೆರಿಕಾದ ಚೆಂಡಿನ ಕ್ರೀಡೆಗಳು, ಕೆಲವು ಬಾರಿ ಲ್ಯಾಕ್ರೋಸ್ ಎಂದು ಉಲ್ಲೇಖಿಸಲಾಗುವ, ಸ್ಟಿಕ್‌ಬಾಲ್ ಅಥವಾ ಬಾಗ್ಗಟಾವೇಯನ್ನು ಯುದ್ಧಕ್ಕೆ ಹೋಗುವ ಬದಲಿಗೆ ವಿವಾದಗಳನ್ನು ಇತ್ಯರ್ಥಗೊಳಿಸಲು ಬಳಸಲಾಗುತ್ತಿತ್ತು. ಸಂಭವನೀಯ ಸಂಘರ್ಷವನ್ನು ಇತ್ಯರ್ಥ ಮಾಡಲು ಇದೊಂದು ನಾಗರಿಕ ವಿಧಾನವಾಗಿತ್ತು. ಚೋಕ್ಟಾ ಅದನ್ನು ISITOBOLI (ಯುದ್ಧದ ಕಿರಿಯ ಸಹೋದರ)ಎಂದು ಕರೆದರು.[೧೫೬] ಒನೊನ್‌ಡಾಗಾ ಹೆಸರು DEHUNTSHIGWA'ES ("ಪುರುಷರು ಗುಂಡನೆಯ ವಸ್ತುವಿಗೆ ಗುರಿಯಿಡುವುದು"). ಅವುಗಳಲ್ಲಿ ಮೂರು ರೂಪಾಂತರಗಳಿದ್ದು, ಗ್ರೇಟ್ ಲೇಕ್ಸ್, ಇರೋಕ್ವಿಯಾನ್ ಮತ್ತು ಸದರನ್ ಎಂದು ವರ್ಗೀಕರಿಸಲಾಗಿದೆ.[೧೫೭] ಕ್ರೀಡೆಯನ್ನು ಒಂದು ಅಥವಾ ಎರಡು ರಾಕೆಟ್‌ಗಳು/ದಾಂಡುಗಳು ಮತ್ತು ಒಂದು ಚೆಂಡಿನ ಜತೆಯಲ್ಲಿ ಆಡಲಾಗುತ್ತಿತ್ತು. ಕ್ರೀಡೆಯ ಉದ್ದೇಶವು ಎದುರಾಳಿ ತಂಡದ ಗೋಲಿನೊಳಕ್ಕೆ ಚೆಂಡನ್ನು ಹಾಕುವ(ಏಕ ಕಂಬ ಅಥವಾ ನೆಟ್)ಮೂಲಕ ಸ್ಕೋರ್ ಮಾಡುವುದು ಮತ್ತು ನಿಮ್ಮ ಗೋಲಿನಲ್ಲಿ ಎದುರಾಳಿ ತಂಡ ಸ್ಕೋರು ಮಾಡದಂತೆ ತಡೆಯುವುದು. ಈ ಕ್ರೀಡೆಯು ಕೆಲವು 20 ಜನರಿಂದ 300ರಷ್ಟು ಅನೇಕ ಆಟಗಾರರನ್ನು ಒಳಗೊಂಡಿದ್ದು, ಎತ್ತರ ಅಥವಾ ತೂಕದ ನಿರ್ಬಂಧಗಳಿರುವುದಿಲ್ಲ ಮತ್ತು ರಕ್ಷಣಾತ್ಮಕ ಉಪಕರಣವಿರುವುದಿಲ್ಲ. ಗೋಲುಗಳು ಕೆಲವು ನೂರು ಅಡಿಗಳಿಂದ ಕೆಲವು ಮೈಲುಗಳ ಅಂತರದಲ್ಲಿ ಇರುತ್ತದೆ. ಲ್ಯಾಕ್ರೋಸ್‌ನಲ್ಲಿ ಮೈದಾನವು 110ಗಜಗಳ ವಿಸ್ತೀರ್ಣವನ್ನು ಹೊಂದಿರುತ್ತದೆ. ಕ್ರೈಸ್ತ ಪಾದ್ರಿಯೊಬ್ಬರು 1729ರಲ್ಲಿ ಸ್ಟಿಕ್‌ಬಾಲ್ ಕುರಿತು ಉಲ್ಲೇಖಿಸಿದ್ದರು ಮತ್ತು ಜಾರ್ಜ್ ಕ್ಯಾಟ್ಲಿನ್ ಈ ವಿಷಯವನ್ನು ಚಿತ್ರಿಸಿದ್ದರು.[who?]

ವ್ಯಕ್ತಿ ಆಧಾರಿತ

ಚಂಕಿ ಕಲ್ಲಿನ ಆಕಾರದ, 1 -2ಇಂಚುಗಳ ವ್ಯಾಸದ ಬಿಲ್ಲೆಯನ್ನು ಒಳಗೊಂಡ ಆಟವಾಗಿದೆ. ಬಿಲ್ಲೆಯನ್ನು ಕಾರಿಡರ್(ಪ್ರವೇಶದ ಮುಖ್ಯ ಮಾರ್ಗ) ಕೆಳಗೆ200-foot (61 m) ಎಸೆಯುವುದರಿಂದ ವೇಗವಾಗಿ ಆಟಗಾರರನ್ನು ದಾಟಿಕೊಂಡು ಉರುಳುತ್ತವೆ. ಬಿಲ್ಲೆಯು ಕಾರಿಡರ್ ಕೆಳಗೆ ಉರುಳುತ್ತಿದ್ದಂತೆ, ಆಟಗಾರರು ಚಲಿಸುವ ಬಿಲ್ಲೆಯತ್ತ ಮರದ ಈಟಿಗಳನ್ನು ಎಸೆಯುತ್ತಾರೆ. ಆಟದ ಉದ್ದೇಶವು ಬಿಲ್ಲೆಗೆ ಗುರಿಯಿಟ್ಟು ಹೊಡೆಯುವುದು ಅಥವಾ ಇತರೆ ಆಟಗಾರರು ಅದಕ್ಕೆ ಹೊಡೆಯದಂತೆ ತಪ್ಪಿಸುವುದಾಗಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನ ಒಲಿಂಪಿಕ್ಸ್

ಜಿಮ್ ತೋರ್ಪ್ ಸ್ವೀಡನ್‌ನ ರಾಜ ಗುಸ್ತಾಫ್ ವಿ.ಯಿಂದ "ಪ್ರಪಂಚದಲ್ಲೇ ಅತ್ಯುತ್ತಮ ಕ್ರೀಡಾಪಟು" ಎಂದು ಕರೆಯಿಸಿಕೊಂಡಿದ್ದರು
1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 10,000 ಮೀಟರ್ ಓಟದಲ್ಲಿ ಅಂತಿಮ ಗೆರೆಯನ್ನು ದಾಟುತ್ತಿರುವ ಬಿಲ್ಲಿ ಮಿಲ್ಸ್

ಸಾಕ್ ಮತ್ತು ಫಾಕ್ಸ್ ಸ್ಥಳೀಯ ಅಮೆರಿಕನ್ನರಾದ ಜಿಮ್ ಥಾರ್ಪ್, 20ನೇ ಶತಮಾನದ ಪೂರ್ವದಲ್ಲಿ ಫುಟ್ಬಾಲ್ ಮತ್ತು ಬೇಸ್‌ಬಾಲ್ ಆಡುತ್ತಿದ್ದ ಬಹುಮುಖ ಸಾಮರ್ಥ್ಯದ ಅಥ್ಲೇಟ್ ಆಗಿದ್ದರು. ಯುವಕ ಥಾರ್ಪ್‌ನನ್ನು ನಿಭಾಯಿಸುವಾಗ ಮುಂದಿನ ರಾಷ್ಟ್ರಾಧ್ಯಕ್ಷರಾಗಿದ್ದ ಡಿವೈಟ್ ಐಸೆನ್‌ಹೋವರ್ ಮಂಡಿಗೆ ಗಾಯಮಾಡಿಕೊಂಡಿದ್ದರು. 1961ರಭಾಷಣದಲ್ಲಿ ಐಸೆನ್‌ಹೋವರ್ ಥಾರ್ಪ್ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಅಲ್ಲಲ್ಲಿ ಕೆಲವು ಜನರಿರುತ್ತಾರೆ. ಅವರು ಅತ್ಯುಚ್ಚವಾಗಿ ಪ್ರತಿಭಾಸಂಪನ್ನರಾಗಿರುತ್ತಾರೆ. ಜಿಮ್ಮ ಥಾರ್ಪ್ ಬಗ್ಗೆ ನನ್ನ ನೆನಪು ಆವರಿಸುತ್ತದೆ. ಅವನು ಜೀವಮಾನದಲ್ಲಿ ಎಂದಿಗೂ ಆಟದ ಅಭ್ಯಾಸ ಮಾಡಿಲ್ಲ. ಆದರೆ ನಾನು ನೋಡಿದ ಯಾವುದೇ ಫುಟ್ಬಾಲ್ ಆಟಗಾರನಿಗಿಂತ ಅವನು ಚೆನ್ನಾಗಿ ಆಡಬಲ್ಲ."[೧೫೮]1912ರ ಒಲಿಂಪಿಕ್ಸ್‌ನಲ್ಲಿ, ಥಾರ್ಪ್ 100 ಗಜ ದೂರವನ್ನು 10 ಸೆಕೆಂಡುಗಳಲ್ಲಿ ಓಡಲು ಸಾಧ್ಯವಾಗಿತ್ತು, 220ಗಜ ದೂರವನ್ನು 21.8ಸೆಕೆಂಡುಗಳು,440ನ್ನು 51 .8ಸೆಕೆಂಡುಗಳಲ್ಲಿ, 880ನ್ನು 1 ನಿಮಿಷ 57ಸೆಕೆಂಡುನಲ್ಲಿ, ಒಂದು ಮೈಲನ್ನು 4:35ರಲ್ಲಿ, 120 ಗಜ ದೂರದ ಹೆಚ್ಚು ಎತ್ತರದ ಹರ್ಡಲ್‌ಗಳನ್ನು 15ಸೆಕೆಂಡುಗಳಲ್ಲಿ ಮತ್ತು220ಗಜ ದೂರದ ಕಡಿಮೆ ಎತ್ತರದ ಹರ್ಡಲ್‌ಗಳನ್ನು 24 ಸೆಕೆಂಡುಗಳಲ್ಲಿ ಓಡಲು ಸಾಧ್ಯವಾಗಿತ್ತು.[೧೫೯] ಅವರು, 23ಅಡಿ 6ಇಂಚುಗಳಷ್ಟು ದೂರದ ಜಿಗಿತವನ್ನು ಮತ್ತು 6ಅಡಿ 5ಇಂಚು ಎತ್ತರದ ಜಿಗಿತವನ್ನು ಮಾಡಲು ಸಾಧ್ಯವಾಗಿತ್ತು.[೧೫೯] ಅವರು 11ಅಡಿ ಎತ್ತರಕ್ಕೆ ಪೋಲ್ ವಾಲ್ಟ್ ಜಿಗಿಯಲು ಸಾಧ್ಯವಾಗಿತ್ತು. ಶಾಟ್ ಪುಟ್ 47ಅಡಿ 9ಇಂಚುಗಳು, ಜಾವೆಲಿನ್‌ ಎಸೆತವನ್ನು 163ಅಡಿ ದೂರ ಮತ್ತು ಡಿಸ್ಕಸ್ 136ಅಡಿ ದೂರ ಎಸೆಯಲು ಸಮರ್ಥರಾಗಿದ್ದರು.[೧೫೯] ಪೆಂಟಾಥ್ಲಾನ್ ಮತ್ತು ಡೆಕಾಥ್ಲಾನ್ ಎರಡಕ್ಕೂ ಥಾರ್ಪ್ ಅಮೆರಿಕಾ ಸಂಯುಕ್ತ ಸಂಸ್ಥಾನದ ಒಲಿಂಪಿಕ್ ಅಭ್ಯಾಸಪಂದ್ಯಗಳಿಗೆ ಪ್ರವೇಶಿಸಿದ್ದರು.ಲಾಕೋಟ ಮತ್ತು USMC ಅಧಿಕಾರಿ ಬಿಲ್ಲಿ ಮಿಲ್ಸ್ 1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 10 ,000ಮೀಟರುಗಳ ಓಟದ ಚಿನ್ನದ ಪದಕ ವಿಜೇತರಾಗಿದ್ದರು. ಈ ಸ್ಪರ್ಧೆಯಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದ ಏಕೈಕ ಅಮೆರಿಕಾ ಸ್ಪರ್ಧಿ ಅವರಾಗಿದ್ದಾರೆ. ಒಲಿಂಪಿಕ್ಸ್‌ಗೆ ಮುಂಚೆ ಅಜ್ಞಾತರಾಗಿದ್ದ ಮಿಲ್ಸ್ ಅಮೆರಿಕಾ ಸಂಯುಕ್ತ ಸಂಸ್ಥಾನ ಒಲಿಂಪಿಕ್ ಅಭ್ಯಾಸಪಂದ್ಯಗಳಲ್ಲಿ ಎರಡನೇ ಸ್ಥಾನ ಗಳಿಸಿದರು.ವರ್ಮೋಂಟ್‌ನ ಆಂಶಿಕ ಅಬೆನಾಕಿ ಬುಡಕಟ್ಟಿಗೆ ಸೇರಿದ ಬಿಲ್ಲಿ ಕಿಡ್ ಒಲಿಂಪಿಕ್ಸ್‌ನ ಆಲ್ಪೈನ್ ಸ್ಕೀಯಿಂಗ್‌(ಹಿಮದಲ್ಲಿ ಜಾರುವಿಕೆ) ಅಮೆರಿಕಾದ ಪುರುಷ ಪದಕ ವಿಜೇತರಾಗಿದ್ದು, ಆಸ್ಟ್ರಿಯದ ಇನ್ಸ್‌ಬ್ರಕ್‌ನ 1964ರ ಚಳಿಗಾಲದ ಒಲಿಂಪಿಕ್ಸ್‌ನ ಸ್ಲಾಲೋಮ್ ಸ್ಕೀಯಿಂಗ್‌ನಲ್ಲಿ 20ವರ್ಷ ವಯಸ್ಸಿನಲ್ಲೇ ಬೆಳ್ಳಿಪದಕ ವಿಜೇತರಾಗಿದ್ದರು.
ಆರು ವರ್ಷಗಳ ನಂತರ,1970ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ, ಕಿಡ್ ಸಂಯೋಜಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದರು ಮತ್ತು ಸ್ಲಾಲೋಮ್ ಸ್ಕೀಯಿಂಗ್‌‍ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಸಂಗೀತ ಮತ್ತು ಕಲೆ

ನ್ಯೂಮೆಕ್ಸಿಕೊದ ಜೇಕ್ ಫ್ರ್ಯಾಗ್ವಾ ಜೆಮೆಜ್ ಪ್ಯುಯೆಬ್ಲೊ

ಸಾಂಪ್ರದಾಯಿಕ ಸ್ಥಳೀಯ ಅಮೆರಿಕಾದ ಸಂಗೀತ ಬಹುಮಟ್ಟಿಗೆ ಸಂಪೂರ್ಣ ಏಕಧ್ವನಿಕವಾಗಿದ್ದು, ಕೆಲವು ಗಮನಾರ್ಹ ಅಪವಾದಗಳಿವೆ. ಸ್ಥಳೀಯ ಅಮೆರಿಕಾದ ಸಂಗೀತದಲ್ಲಿ ಸಾಮಾನ್ಯವಾಗಿ ಡ್ರಮ್ ಬಾರಿಸುವುದು ಮತ್ತು /ಅಥವಾ ರಾಟಲ್‌ಗಳನ್ನು ನುಡಿಸುವುದು ಅಥವಾ ಇತರೆ ತಾಳವಾದ್ಯಗಳನ್ನು ಒಳಗೊಂಡಿರುತ್ತದೆ. ಆದರೆ ಇತರೆ ವಾದ್ಯಗಳು ಕಡಿಮೆಯಿರುತ್ತದೆ. ಮರ, ಬಿದಿರು ಅಥವಾ ಮೂಳೆಯಿಂದ ತಯಾರಿಸಿದ ಕೊಳಲುಗಳು ಮತ್ತು ಸೀಟಿಗಳನ್ನು ಕೂಡ ಸಾಮಾನ್ಯವಾಗಿ ವ್ಯಕ್ತಿಗಳು ನುಡಿಸುತ್ತಾರೆ. ಆದರೆ ಮುಂಚಿನ ಕಾಲಗಳಲ್ಲಿ ದೊಡ್ಡ ಮೇಳಭಾಗದಿಂದಲೂ ನುಡಿಸಲಾಗುತ್ತದೆ(ಸ್ಪೇನ್ ಸಾಹಸಿ ಡಿ ಸೊಟೊ ಟಿಪ್ಪಣಿ ಮಾಡಿರುವ ಪ್ರಕಾರ). ಈ ಕೊಳಲುಗಳ ಶ್ರುತಿಯು ನಿಖರವಾಗಿಲ್ಲ ಮತ್ತು ಬಳಸಿದ ಮರದ ಉದ್ದವನ್ನು ಮತ್ತು ಉದ್ದೇಶಿತ ನುಡಿಸುವವರ ಕೈ ವ್ಯಾಪ್ತಿಯನ್ನು ಅವಲಂಬಿಸಿದೆ. ಆದರೆ ಬೆರಳಿನ ರಂಧ್ರಗಳು ಬಹುತೇಕ ಬಾರಿ ಇಡೀ ಸ್ವರಾವಧಿಯಷ್ಟು ದೂರವಿರುತ್ತದೆ ಮತ್ತು ಕನಿಷ್ಠ ಉತ್ತರ ಕ್ಯಾಲಿಫೋರ್ನಿಯದಲ್ಲಿ ಅರ್ಧ ಸ್ವರಾವಧಿಗೆ ಹತ್ತಿರದ ಅಂತರವಿದ್ದರೆ ಕೊಳಲನ್ನು ಬಳಸಲಾಗುವುದಿಲ್ಲ.ಸ್ಥಳೀಯ ಅಮೆರಿಕದ ವಂಶಾವಳಿಯ ಪ್ರದರ್ಶಕರು ಅಮೆರಿಕದ ಜನಪ್ರಿಯ ಸಂಗೀತದಲ್ಲಿ ಸಾಂದರ್ಭಿಕವಾಗಿ ಕಾಣಿಸಿಕೊಂಡಿದ್ದಾರೆ. ಉದಾಹರಣೆಗೆ ರಾಬ್ಬಿ ರಾಬರ್ಟ್‌ಸನ್ (ದಿ ಬ್ಯಾಂಡ್), ರೀಟಾ ಕೂಲಿಜ್, ವಾಯ್ನೆ ನ್ಯೂಟನ್, ಜೀನ್ ಕ್ಲಾರ್ಕ್, ಬಫಿ ಸೇಂಟ್-ಮೇರಿ, ಬ್ಲಾಕ್‌ಫೂಟ್, ಟೋರಿ ಅಮೋಸ್, ರೆಡ್‌ಬೋನ್, ಮತ್ತು ಕೊಕೊರೋಸಿ. ಜಾನ್ ಟ್ರಡೆಲ್ ಮುಂತಾದವರು ಸ್ಥಳೀಯ ಅಮೆರಿಕದಲ್ಲಿ ಜೀವನದ ಬಗ್ಗೆ ಪ್ರತಿಕ್ರಿಯಿಸಲು ಸಂಗೀತವನ್ನು ಬಳಸಿಕೊಂಡಿದ್ದಾರೆ. ಆರ್. ಕಾರ್ಲೋಸ್ ನಕಾಯ್ ಮುಂತಾದವರು ಸಂಗೀತೋಪಕರಣಗಳ ಧ್ವನಿಮುದ್ರಣಗಳಲ್ಲಿ ಸಾಂಪ್ರದಾಯಿಕ ಶಬ್ದಗಳನ್ನು ಆಧುನಿಕ ಶಬ್ದಗಳ ಜತೆ ಸಂಯೋಜಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ಧ್ವನಿಮುದ್ರಣ ಕಂಪೆನಿಗಳು ಯುವ ಮತ್ತು ವಯಸ್ಸಾದ ಸ್ಥಳೀಯ ಅಮೆರಿಕ ಪ್ರದರ್ಶಕರಿಂದ ಇತ್ತೀಚಿನ ಹೇರಳ ಸಂಗೀತವನ್ನು ಒದಗಿಸುತ್ತವೆ. ಪೌ-ವೌ ಡ್ರಮ್ ಸಂಗೀತದಿಂದ ಹಿಡಿದು ಪ್ರಬಲ ರಾಕ್-ಎಂಡ್-ರೋಲ್ ಮತ್ತು ರಾಪ್‌ ಸಂಗೀತದವರೆಗೆ ಒದಗಿಸುತ್ತವೆ.ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳೀಯ ಅಮೆರಿಕನ್ನರ ನಡುವೆ ಅತ್ಯಂತ ವ್ಯಾಪಕವಾಗಿ ರೂಢಿಯಲ್ಲಿರುವ ಸಾರ್ವಜನಿಕ ಸಂಗೀತ ರೂಪವು ಪೌ-ವೌವ್ ಆಗಿದೆ. ನ್ಯೂ ಮೆಕ್ಸಿಕೊದ ಆಲ್ಬುಕರ್ಕಿಯಲ್ಲಿ ವಾರ್ಷಿಕ ರಾಷ್ಟ್ರಗಳ ಕೂಟ ಪೌವ್-ವೊವ್‌ಗಳಲ್ಲಿ, ದೊಡ್ಡ ಡ್ರಮ್ ಸುತ್ತ ವೃತ್ತಾಕಾರದಲ್ಲಿ ಡ್ರಮ್ ಗುಂಪಿನ ಸದಸ್ಯರು ಕುಳಿತುಕೊಳ್ಳುತ್ತಾರೆ. ಡ್ರಮ್ ಗುಂಪುಗಳು ಸ್ಥಳೀಯ ಭಾಷೆಯಲ್ಲಿ ಹಾಡುವಾಗ ಒಂದೇ ಸಂಗೀತದ ಶ್ರುತಿಯನ್ನು ನುಡಿಸುತ್ತವೆ ಮತ್ತು ನರ್ತಕರು ವರ್ಣರಂಜಿತ ಅಲಂಕೃತ ಬಟ್ಟೆಯೊಂದಿಗೆ ಮಧ್ಯದಲ್ಲಿ ಡ್ರಮ್ ಗುಂಪುಗಳ ಸುತ್ತ ಪ್ರದಕ್ಷಿಣವಾಗಿ(ಕ್ಲಾಕ್‌ವೈಸ್)ನೃತ್ಯಮಾಡುತ್ತವೆ. ಪರಿಚಿತ ಪೌವ್-ವೋವ್ ಹಾಡುಗಳು, ಗೌರವದ ಹಾಡುಗಳು, ಅಂತರಬುಡಕಟ್ಟು ಹಾಡುಗಳು, ಕ್ರೊ-ಹಾಪ್ಸ್, ಸ್ನೀಕ್-ಅಪ್ ಹಾಡುಗಳು, ಗ್ರಾಸ್ ನೃತ್ಯಗಳು, ಎರಡು-ಸ್ವರಾವಧಿಗಳು, ಸ್ವಾಗತ ಹಾಡುಗಳು, ಮನೆಗೆ ತೆರಳುವ ಹಾಡುಗಳು ಮತ್ತು ಯುದ್ಧಗೀತೆಗಳನ್ನು ಒಳಗೊಂಡಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಬಹುತೇಕ ದೇಶೀಯ ಸಮುದಾಯಗಳು ಕೂಡ ಸಾಂಪ್ರದಾಯಿಕ ಹಾಡುಗಳನ್ನು ಮತ್ತು ಧಾರ್ಮಿಕ ಕ್ರಿಯೆಗಳನ್ನು ನಿರ್ವಹಿಸುತ್ತವೆ. ಕೆಲವನ್ನು ಹಂಚಿಕೊಂಡು ಸಮುದಾಯದೊಳಕ್ಕೆ ವಿಶೇಷವಾಗಿ ಆಚರಿಸಲಾಗುತ್ತದೆ.[೧೬೦]ಸ್ಥಳೀಯ ಅಮೆರಿಕ ಕಲೆಯು ವಿಶ್ವ ಕಲಾ ಸಂಗ್ರಹದಲ್ಲಿ ಪ್ರಮುಖ ವರ್ಗವನ್ನು ಒಳಗೊಂಡಿವೆ. ಸ್ಥಳೀಯ ಅಮೆರಿಕನ್ನನ ಕೊಡುಗೆಗಳಲ್ಲಿ ಕುಂಬಾರಿಕೆ(ಸ್ಥಳೀಯ ಅಮೆರಿಕನ್‌ ಕುಂಬಾರಿಕೆ), ವರ್ಣಚಿತ್ರಗಳು, ಆಭರಣಗಳು, ನೇಯ್ಗೆಗಳು, ಶಿಲ್ಪಕೃತಿಗಳು, ಬುಟ್ಟಿ, ಮತ್ತುಕೆತ್ತನೆಗಳು ಸೇರಿವೆ. ಪ್ರಾಂಕ್ಲಿನ್ ಗ್ರಿಟ್ಸ್ ಚೆರೋಕೀ ಕಲಾವಿದರಾಗಿದ್ದು, ಸ್ಥಳೀಯ ಅಮೆರಿಕನ್ ಚಿತ್ರಕಲಾವಿದರ ಸುವರ್ಣ ಯುಗ ವಾದ 1940ರ ದಶಕದಲ್ಲಿ ಹ್ಯಾಸ್ಕೆಲ್ ಇನ್‌ಸ್ಟಿಟ್ಯೂಟ್‌ನ(ಈಗ ಹ್ಯಾಸ್ಕೆಲ್ ಇಂಡಿಯನ್ ನೇಷನ್ಸ್ ಯೂನಿವರ್ಸಿಟಿ) ಅನೇಕ ಬುಡಕಟ್ಟು ಜನಾಂಗಗಳ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ.ಕೆಲವು ಸ್ಥಳೀಯ ಅಮೆರಿಕ ಕಲಾಕೃತಿಗಳ ಪ್ರಾಮಾಣಿಕತೆಯನ್ನು ಕಾಂಗ್ರೆಸ್‌ನ ಕಾಯ್ದೆಯೊಂದರಿಂದ ರಕ್ಷಿಸಲಾಗಿದೆ. ನೋಂದಣಿಯಾದ ಸ್ಥಳೀಯ ಅಮೆರಿಕದ ಕಲಾವಿದರು ತಯಾರಿಸಿರದ ಕಲಾಕೃತಿಯನ್ನು ಸ್ಥಳೀಯ ಅಮೆರಿಕದ್ದೆಂದು ಬಿಂಬಿಸುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.

ಆರ್ಥಿಕ ಸ್ಥಿತಿ

ಇನ್ಯೂಟ್ ಅಥವಾ ಎಸ್ಕಿಮೊಗಳು ಒಣ ಮಾಂಸ ಮತ್ತು ಮೀನಿನ ಅಧಿಕ ಪ್ರಮಾಣವನ್ನು ಸಿದ್ಧಗೊಳಿಸಿ ಹೂತಿಡುತ್ತಿದ್ದರು. ವಾಯವ್ಯ ಪೆಸಿಫಿಕ್ ಬುಡಕಟ್ಟುಗಳು ಸಮುದ್ರಯಾನಕ್ಕೆ 40-50ಅಡಿ ಉದ್ದದ ತೋಡುದೋಣಿಗಳನ್ನು ಮೀನುಗಾರಿಕೆ ಸಲುವಾಗಿ ನಿರ್ಮಿಸುತ್ತಿದ್ದರು. ಪೂರ್ವ ವುಡ್‌ಲ್ಯಾಂಡ್ಸ್‌ನ ರೈತರು ಕಳೆಗುದ್ದಲಿಗಳು ಮತ್ತು ಅಗೆಯುವ ಸಾಧನಗಳಿಂದ ಜೋಳದ ಗದ್ದೆಗಳನ್ನು ನಿರ್ವಹಿಸುತ್ತಿದ್ದರು. ಆದರೆ ನೆರೆಯ ಆಗ್ನೇಯದಲ್ಲಿರುವ ಜನರು ತಂಬಾಕು ಮತ್ತು ಆಹಾರ ಬೆಳೆಗಳನ್ನು ಬೆಳೆಯುತ್ತಾರೆ. ಕೆಲವು ಸಮತಟ್ಟು ಪ್ರದೇಶಗಳಲ್ಲಿ, ಕೆಲವು ಬುಡಕಟ್ಟು ಜನರು ಕೃಷಿಯಲ್ಲಿ ನಿರತರಾಗಿರುತ್ತಾರೆ ಮತ್ತು ಕಾಡುಕೋಣ/ಕಾಡೆಮ್ಮೆಯ ಬೇಟೆಯನ್ನು ಕೂಡ ಯೋಜಿಸುತ್ತಾರೆ. ಇದರಲ್ಲಿ ಹಿಂಡುಗಳನ್ನು ಭೂಶಿರಗಳ ಮೇಲೆ ಅಟ್ಟಲಾಗುತ್ತದೆ. ನೈಋತ್ಯ ಮರಳುಗಾಡುಗಳ ನಿವಾಸಿಗಳು ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಮತ್ತು ಓಕ್ ಮರದ ಹಣ್ಣಿನ(ಅಕಾರ್ನ್) ಬೀಜಗಳನ್ನು ಸಂಗ್ರಹಿಸಿ ಅದನ್ನು ಹಿಟ್ಟಾಗಿ ಪುಡಿಮಾಡಿ ಅದರಿಂದ ಕಾದ ಕಲ್ಲುಗಳ ಮೇಲೆ ತುಂಬ ತೆಳುವಾದ ಬ್ರೆಡ್ ಬೇಯಿಸುತ್ತಿದ್ದರು. ಕೆಲವು ಗುಂಪುಗಳು ಪ್ರದೇಶದ ಕಡಿದಾದ ಪಕ್ಕಗುಳುಳ್ಳ ಪ್ರಸ್ಥಭೂಮಿಯಲ್ಲಿ ನೀರಾವರಿ ತಂತ್ರಗಳನ್ನು ಅಭಿವೃದ್ಧಿಪಡಿಸಿದರು ಮತ್ತು ಪ್ರದೇಶದಲ್ಲಿ ಅಡಿಗಡಿಗೆ ಸಂಭವಿಸುವ ಬರಗಾಲಗಳಿಂದ ರಕ್ಷಣೆ ಪಡೆಯಲು ಉಗ್ರಾಣಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸುತ್ತಿದ್ದರು.ಪೂರ್ವದ ವರ್ಷಗಳಲ್ಲಿ, ಈ ಸ್ಥಳೀಯ ಜನರು ಯುರೋಪಿನ ಪರಿಶೋಧಕರು ಮತ್ತು ನಿವಾಸಿಗಳನ್ನು ಸಂಧಿಸಿ ವ್ಯಾಪಾರದಲ್ಲಿ ನಿರತರಾದರು. ಅವರು ಆಹಾರ, ಕರಕುಶಲ ವಸ್ತುಗಳು ಮತ್ತು ಕಂಬಳಿಗಳಿಗೆ ತುಪ್ಪಳಗಳು, ಕಬ್ಬಿಣ ಮತ್ತು ಉಕ್ಕಿನ ಉಪಕರಣಗಳು, ಕುದುರೆಗಳು, ಅಲ್ಪಬೆಲೆಯ ಆಭರಣಗಳು, ಬಂದೂಕು ಮತ್ತು ಆಲ್ಕೋಹಾಲ್ ಪಾನೀಯಗಳನ್ನು ವಿನಿಮಯ ಮಾಡಿಕೊಂಡರು.

ಆರ್ಥಿಕ ಅಭಿವೃದ್ಧಿಗೆ ತೊಡಕುಗಳು

"ಮಕಾಹ್ ಜನರ ಕೈಯಲ್ಲಿ ಸಮುದ್ರರಾಜ(ತಿಮಿಂಗಿಲ)" ಛಾಯಾಚಿತ್ರವನ್ನು 1910ರಲ್ಲಿ ಮಕಾಹ್ ಸ್ಥಳೀಯ ಅಮೆರಿಕನ್ನರು ತೆಗೆದರು

ಇಂದು, ಬುಡಕಟ್ಟುಗಳಲ್ಲದ ಜನರು ಕ್ಯಾಸಿನೊ(ಜೂಜುಮಂದಿರ)ಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದರೆ, ಬುಡಕಟ್ಟು ಜನರು ಹೆಣಗಾಡುತ್ತಿದ್ದಾರೆ. ಅಂದಾಜು 2.1ದಶಲಕ್ಷ ಸ್ಥಳೀಯ ಅಮೆರಿಕನ್ನರಿದ್ದು, ಎಲ್ಲಾ ಜನಾಂಗೀಯ ಗುಂಪುಗಳ ಪೈಕಿ ಅವರು ಅತ್ಯಂತ ದುರ್ಬಲರಾಗಿದ್ದಾರೆ. 2000ನೇ ಜನಗಣತಿ ಪ್ರಕಾರ, ಅಂದಾಜು 400,000ಸ್ಥಳೀಯ ಅಮೆರಿಕನ್ನರು ಮೀಸಲು ಪ್ರದೇಶದಲ್ಲಿ ವಾಸವಿದ್ದಾರೆ. ಕೆಲವು ಬುಡಕಟ್ಟು ಜನರು ಜೂಜಾಟ(ಗೇಮಿಂಗ್)ದಲ್ಲಿ ಯಶಸ್ವಿಯಾಗಿದ್ದರೆ, ಫೆಡರಲ್ ಸರ್ಕಾರದಿಂದ ಮಾನ್ಯತೆ ಪಡೆದ 562 ಬುಡಕಟ್ಟುಗಳಲ್ಲಿ ಶೇಕಡ 40ರಷ್ಟು ಮಾತ್ರ ಕ್ಯಾಸಿನೊಗಳನ್ನು ನಿರ್ವಹಿಸುತ್ತಾರೆ.[೧೬೧] ಅಮೆರಿಕಾ ಸಂಯುಕ್ತ ಸಂಸ್ಥಾನದ ಸಣ್ಣ ಉದ್ಯಮ ಆಡಳಿತದ 2007ನೇ ಸಮೀಕ್ಷೆ ಪ್ರಕಾರ, ಸ್ಥಳೀಯ ಅಮೆರಿಕನ್ನರಲ್ಲಿ ಶೇಕಡ 1ರಷ್ಟು ಜನರು ಮಾತ್ರ ವ್ಯಾಪಾರದ ಮಾಲೀಕರಾಗಿ ನಿರ್ವಹಿಸುತ್ತಾರೆ.[೧೬೨] ಪ್ರತಿಯೊಂದು ಸಾಮಾಜಿಕ ಅಂಕಿಅಂಶದಲ್ಲಿ ಸ್ಥಳೀಯ ಅಮೆರಿಕನ್ನರು ಕೆಳಗಿನ ಶ್ರೇಣಿಯಲ್ಲಿದ್ದಾರೆ, ಪ್ರತಿ 100,000ಜನರ ಪೈಕಿ 18 .5ಶೇಕಡದೊಂದಿಗೆ ಎಲ್ಲ ಅಲ್ಪಸಂಖ್ಯಾತರ ಪೈಕಿ ಅತ್ಯಧಿಕ ಹದಿವಯಸ್ಕರ ಆತ್ಮಹತ್ಯೆ ಪ್ರಮಾಣವನ್ನು ಒಳಗೊಂಡಿದೆ. ಹದಿವಯಸ್ಕರ ಗರ್ಭಧರಿಸುವಿಕೆಯಲ್ಲಿ ಅತ್ಯಧಿಕ ಪ್ರಮಾಣ, ಪ್ರೌಢಶಾಲೆಯಲ್ಲಿ ವ್ಯಾಸಂಗ ತ್ಯಜಿಸುವವರ ಪೈಕಿ ಶೇಕಡ 54 ಅತ್ಯಧಿಕ ಪ್ರಮಾಣ, ಅತೀ ಕಡಿಮೆ ತಲಾದಾಯ ಮತ್ತು ಶೇಕಡ 50 ಮತ್ತು ಶೇಕಡ 90ರ ನಡುವೆ ನಿರುದ್ಯೋಗದ ಪ್ರಮಾಣಗಳು.ಸ್ಥಳೀಯ ಅಮೆರಿಕನ್ನರ ಮೀಸಲು ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ತೊಡಕುಗಳನ್ನು ಸಾಮಾನ್ಯವಾಗಿ ಇತರರು ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಮೆರಿಕನ್ ಇಂಡಿಯನ್ ಆರ್ಥಿಕ ಅಭಿವೃದ್ಧಿ ಕುರಿತು ಹಾರ್ವರ್ಡ್ ಯೋಜನೆಯ ಇಬ್ಬರು ತಜ್ಞರಾದ ಜೋಸೆಫ್ ಕಾಲ್ಟ್[೧೬೩] ಮತ್ತು ಸ್ಟೀಫನ್ ಕಾರ್ನೆಲ್[೧೬೪] ತಮ್ಮ ಶ್ರೇಷ್ಠ ವರದಿ ವಾಟ್ ಕ್ಯಾನ್ ಟ್ರೈಬ್ಸ್ ಡು? ನಲ್ಲಿ ಉದಾಹರಿಸಿದ್ದಾರೆ.ಸ್ಟ್ರಾಟಜೀಸ್ ಎಂಡ್ ಇನ್‌ಸ್ಟಿಟ್ಯೂಷನ್ಸ್ ಇನ್ ಅಮೆರಿಕನ್ ಇಂಡಿಯನ್ ಎಕಾನಾಮಿಕ್ ಡೆವಲಪ್‌ಮೆಂಟ್ [೧೬೫] ಈ ಕೆಳಗಿನಂತಿವೆ(ಅಪೂರ್ಣ ಪಟ್ಟಿ, ನೋಡಿ ಪೂರ್ಣ ಕಾಲ್ಟ್ &ಕಾರ್ನೆಲ್ ವರದಿ):

  • ಬಂಡವಾಳಕ್ಕೆ ಅವಕಾಶದ ಕೊರತೆ
  • ಮಾನವ ಬಂಡವಾಳದ ಕೊರತೆ (ಶಿಕ್ಷಣ, ಕೌಶಲಗಳು, ತಾಂತ್ರಿಕ ತಜ್ಞತೆ) ಮತ್ತು ಅಭಿವೃದ್ಧಿಗೆ ಮಾರ್ಗಗಳು.
  • ಮೀಸಲು ಪ್ರದೇಶಗಳು ಪರಿಣಾಮಕಾರಿ ಯೋಜನೆಯ ಕೊರತೆಯನ್ನು ಹೊಂದಿದೆ.
  • ನೈಸರ್ಗಿಕ ಸಂಪನ್ಮೂಲಗಳಲ್ಲಿ ಮೀಸಲು ಪ್ರದೇಶಗಳು ಕಳಪೆಯಾಗಿವೆ.
  • ಮೀಸಲು ಪ್ರದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿವೆ, ಆದರೆ ಸಾಕಷ್ಟು ನಿಯಂತ್ರಣದ ಕೊರತೆಯನ್ನು ಒಳಗೊಂಡಿದೆ.
  • ಮೀಸಲು ಪ್ರದೇಶಗಳು ಮಾರುಕಟ್ಟೆಗಳಿಂದ ದೂರವಿದ್ದು, ಸಾಗಾಣಿಕೆಯ ಅತ್ಯಧಿಕ ವೆಚ್ಚಗಳಿಂದ ಅನನುಕೂಲವನ್ನು ಹೊಂದಿವೆ.
  • ಸ್ಥಳೀಯೇತರ ಅಮೆರಿಕದ ಸಮುದಾಯಗಳಿಂದ ತೀವ್ರ ಸ್ಪರ್ಧೆ ಎದುರಿಸಿದ ಕಾರಣ ಮೀಸಲು ಪ್ರದೇಶಗಳಲ್ಲಿ ನೆಲೆಹೊಂದುವಂತೆ ಬಂಡವಾಳದಾರರಿಗೆ ಬುಡಕಟ್ಟು ಜನಾಂಗಗಳು ಮನವೊಲಿಸಲು ಸಾಧ್ಯವಾಗಿಲ್ಲ.
  • ಮೀಸಲು ಪ್ರದೇಶ ಅಭಿವೃದ್ಧಿಯಲ್ಲಿ ಇಂಡಿಯನ್ ಅಫೇರ್ಸ್ ಬ್ಯೂರೊ ಅರ್ಥಶೂನ್ಯ, ಭ್ರಷ್ಟ ಮತ್ತು/ಅಥವಾ ನಿರಾಸಕ್ತಿಯಿಂದ ಕೂಡಿತ್ತು.
  • ಬುಡಕಟ್ಟು ರಾಜಕಾರಣಿಗಳು ಮತ್ತು ಆಡಳಿತಾಧಿಕಾರಿಗಳು ಅರ್ಥಶೂನ್ಯತೆ ಅಥವಾ ಭ್ರಷ್ಟತೆಯಿಂದ ಕೂಡಿದ್ದರು.
  • ಮೀಸಲು ಪ್ರದೇಶ ಕುರಿತ ಗುಂಪುಗುಳಿತನವು ಬುಡಕಟ್ಟು ನಿರ್ಧಾರಗಳಲ್ಲಿ ಸ್ಥಿರತೆಯನ್ನು ನಾಶಮಾಡಿದೆ.
  • ಬುಡಕಟ್ಟು ಸರ್ಕಾರದ ಅಸ್ಥಿರತೆ ಹೊರಗಿನವರನ್ನು ಬಂಡವಾಳ ಹೂಡುವುದರಿಂದ ದೂರವಿಟ್ಟಿದೆ.
  • ಉದ್ಯಮಶೀಲತೆಯ ಕೌಶಲಗಳು ಮತ್ತು ಅನುಭವ ದುರ್ಲಭವಾಗಿವೆ.
  • ಬುಡಕಟ್ಟು ಸಂಸ್ಕೃತಿಗಳು ಅಡ್ಡಬರುತ್ತವೆ.

ಆರ್ಥಿಕ ಪೈಪೋಟಿಯಲ್ಲಿ ಮೇಲುಗೈಯಾಗಲು ಪ್ರಮುಖ ತೊಡಕುಗಳಲ್ಲಿ ಒಂದೆಂದರೆ, ಉದ್ಯಮಶೀಲತೆಯ ಜ್ಞಾನದ ಕೊರತೆ ಮತ್ತು ಇಂಡಿಯನ್ ಮೀಸಲು ಪ್ರದೇಶಗಳಲ್ಲಿ ಅನುಭವದ ಕೊರತೆ. “ಸಾಮಾನ್ಯವಾಗಿ ಶಿಕ್ಷಣದ ಕೊರತೆ ಮತ್ತು ವ್ಯವಹಾರದ ಬಗ್ಗೆ ಅನುಭವದ ಕೊರತೆಯು ಭವಿಷ್ಯದ ಉದ್ಯಮಿಗಳಿಗೆ ಗಮನಾರ್ಹ ಸವಾಲಾಗಿದೆ”ಎಂದು 2004ರಲ್ಲಿ ನಾರ್ತ್‌ವೆಸ್ಟ್ ಏರಿಯ ಫೌಂಡೇಶನ್‌ನ ಸ್ಥಳೀಯ ಅಮೆರಿಕದ ಉದ್ಯಮಶೀಲತೆಯ ಇನ್ನೊಂದು ವರದಿ ತಿಳಿಸುತ್ತದೆ. ಉದ್ಯಮಶೀಲತೆ ಸಂಪ್ರದಾಯಗಳು ಮತ್ತು ಇತ್ತೀಚಿನ ಅನುಭವಗಳ ಕೊರತೆ ಹೊಂದಿರುವ ಸ್ಥಳೀಯ ಅಮೆರಿಕನ್ನರ ಸಮುದಾಯಗಳು ಉದ್ಯಮಿಗಳಿಗೆ ಅಭಿವೃದ್ದಿಯಾಗಲು ಅಗತ್ಯವಾದ ಬೆಂಬಲವನ್ನು ಸಾಮಾನ್ಯವಾಗಿ ನೀಡುವುದಿಲ್ಲ. ಇದರ ಪರಿಣಾಮವಾಗಿ, ಶಾಲೆಯ ಪಠ್ಯಕ್ರಮದಲ್ಲಿ ಮತ್ತು ಶಾಲೆಯ ನಂತರ ಮತ್ತು ಸಮುದಾಯದ ಚಟುವಟಿಕೆಗಳಲ್ಲಿ ಪ್ರಾಯೋಗಿಕ ಉದ್ಯಮಶೀಲತೆ ಶಿಕ್ಷಣವು ಒಳಗೊಳ್ಳುವ ಅಗತ್ಯವಿದೆ. ಇದರಿಂದ ಕಿರಿಯ ವಯಸ್ಸಿನಲ್ಲೇ ಉದ್ಯಮಶೀಲತೆಯ ಅವಶ್ಯಕ ಅಂಶಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುತ್ತದೆ ಮತ್ತು ಜೀವನಪೂರ್ತಿ ಈ ಅಂಶಗಳನ್ನು ಬಳಸಿಕೊಳ್ಳಲು ಅವರಿಗೆ ಉತ್ತೇಜನ ನೀಡುತ್ತದೆ.[೧೬೬] ಒಂದು ಪ್ರಕಟಣೆಯು ರೆಜ್ ಬಿಜ್ ನಿಯತಕಾಲಿಕೆಯಲ್ಲಿ ಈ ವಿಷಯಗಳನ್ನು ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಮೀಸಲಾಗಿದೆ.

ಸ್ಥಳೀಯ ಅಮೆರಿಕನ್ನರು, ಯುರೋಪಿಯನ್ನರು ಮತ್ತು ಆಫ್ರಿಕನ್ನರು

ಸ್ಮಿತ್ಸೋನಿಯನ್ ಮೂಲದಿಂದ "ಮಿಶ್ರ ರಕ್ತ"ವೆಂದು ವಿವರಿಸಲ್ಪಡುವ ಲಿಲ್ಲಿಯನ್ ಗ್ರೋಸ್ ಸ್ಥಳೀಯ ಅಮೆರಿಕನ್‌ ಮತ್ತು ಯುರೋಪಿಯನ್‌/ಅಮೆರಿಕನ್‌ ಪರಂಪರೆಯವರಾಗಿದ್ದಾರೆ.ಅವರು ತನ್ನ ಚೆರೋಕೀ ಸಂಸ್ಕೃತಿಯಿಂದ ಗುರುತಿಸಲ್ಪಡುತ್ತಾರೆ.

ಸ್ಥಳೀಯ ಅಮೆರಿಕನ್ನರು, ಯುರೋಪಿಯನ್ನರು ಮತ್ತು ಆಫ್ರಿಕನ್ನರ ನಡುವೆ ಅಂತರ್ಜನಾಂಗೀಯ ಸಂಬಂಧಗಳು ಜಟಿಲ ವಿಷಯವಾಗಿದ್ದು, ಅಂತರ್ಜನಾಂಗೀಯ ಸಂಬಂಧಗಳನ್ನು ಕುರಿತು ಕೆಲವೇ ಆಳವಾದ ಅಧ್ಯಯನಗಳಿಂದ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ.[೧೬೭][೧೬೮] ಯುರೋಪಿಯನ್‌/ಸ್ಥಳೀಯ ಅಮೆರಿಕನ್‌ ಅಂತರ್ವಿವಾಹಗಳು ಮತ್ತು ಸಂಪರ್ಕದ ಕೆಲವು ಪ್ರಥಮ ದಾಖಲೆಯಿಂದ ಕೂಡಿದ ಪ್ರಕರಣಗಳು ಕೊಲಂಬಿಯನ್ ಅವಧಿಯ ನಂತರದ ಮೆಕ್ಸಿಕೊದಲ್ಲಿ ದಾಖಲಾಗಿವೆ. ಒಂದು ಪ್ರಕರಣವು ಸ್ಪೇನ್‌ನ ಯುರೋಪ್ ಪ್ರಜೆ ಗೊಂಜಾಲೊ ಗುರೆರೊಗೆ ಸಂಬಂಧಿಸಿದ್ದು, ಯುಕಾಟನ್ ಪರ್ಯಾಯದ್ವೀಪದಲ್ಲಿ ಅವನ ಹಡಗು ನಾಶವಾಯಿತು ಮತ್ತು ಮಾಯನ್ ಕುಲೀನ ಸ್ತ್ರೀಯಿಂದ ಮೂವರು ಮೆಸ್ಟಿಜೊ(ಮಿಶ್ರಿತ ಯುರೋಪ್ ಮತ್ತು ಸ್ಥಳೀಯ ಅಮೆರಿಕದ ಪೀಳಿಗೆ) ಮಕ್ಕಳಿಗೆ ತಂದೆಯಾದ. ಇನ್ನೊಂದು ಪ್ರಕರಣವು ಹರ್ನನ್ ಕಾರ್ಟೆಸ್ ಮತ್ತು ಅವನ ಪ್ರೇಯಸಿ ಲಾ ಮೆರಿಂಚೆ ಅವರದ್ದಾಗಿದ್ದು, ಅಮೆರಿಕದಲ್ಲಿ ಇನ್ನೊಂದು ಪ್ರಥಮ ಬಹುಜನಾಂಗೀಯ ಪೀಳಿಗೆ ಹುಟ್ಟಲು ಕಾರಣರಾಗಿದ್ದಾರೆ.[೧೬೯]

ಸ್ಥಳೀಯ ಅಮೆರಿಕನ್ನರು ಮತ್ತು ಯುರೋಪಿಯನ್ನರ ಜತೆ ಸಮೀಕರಣ ಸ್ವೀಕಾರ

ವಸಾಹತುಗಳ ಸ್ಥಾಪನೆ ಮತ್ತು ರಾಷ್ಟ್ರತ್ವದ ಮುಂಚಿನ ವರ್ಷಗಳಲ್ಲಿ ಸ್ಥಳೀಯ ಅಮೆರಿಕನ್ನರ ಜತೆ ಸಂಪರ್ಕ ಹೊಂದಿದ ಯಾವುದೇ ಜನಾಂಗಕ್ಕಿಂತ ಐರೋಪ್ಯ ಪರಿಣಾಮವು ತಕ್ಷಣದ,ವ್ಯಾಪಕವಾಗಿ ಹರಡಿದ ಮತ್ತು ಗಹನತೆಯಿಂದ ಕೂಡಿತ್ತು. ಸ್ಥಳೀಯ ಅಮೆರಿಕನ್ನರ ಮಧ್ಯದಲ್ಲಿ ವಾಸಿಸುತ್ತಿದ್ದ ಯುರೋಪಿಯನ್ನರನ್ನು ಸಾಮಾನ್ಯವಾಗಿ "ವೈಟ್ ಇಂಡಿಯನ್ನರು" ಎಂದು ಕರೆಯಲಾಗುತ್ತದೆ. ಅವರು ಸ್ಥಳೀಯ ಸಮುದಾಯಗಳಲ್ಲಿ ವರ್ಷಗಟ್ಟಲೆ ವಾಸಿಸಿದರು, ಸ್ಥಳೀಯ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಕಲಿತರು, ಸ್ಥಳೀಯ ಮಂಡಳಿಗಳಲ್ಲಿ ಭಾಗವಹಿಸಿದರು ಮತ್ತು ಸ್ಥಳೀಯ ಸಂಗಡಿಗರ ಪಕ್ಕದಲ್ಲಿ ಹೋರಾಟ ಮಾಡಿದರು.[೧೭೦]

ಫ್ರಾನ್ಸ್‌ನ ಪ್ಯಾರಿಸ್‌ನ ಪ್ರವಾಸದಿಂದ 1725ರಲ್ಲಿ ಹಿಂದಿರುಗಿದ ಓಸೇಜ್ ಮದುಮಗಳುಆ ಓಸೇಜ್ ಮಹಿಳೆಯು ಫ್ರೆಂಚ್ ಸೈನಿಕನನ್ನು ಮದುವೆಯಾಗುತ್ತಾಳೆ.

ಮುಂಚಿನ ಸಂಪರ್ಕಗಳು ಸಾಮಾನ್ಯವಾಗಿ ಉದ್ವೇಗ ಮತ್ತು ಭಾವವಿಕಾರಗಳಿಂದ ಕೂಡಿತ್ತು. ಆದರೆ ಸ್ನೇಹತ್ವ, ಸಹಕಾರ ಮತ್ತು ನಿಕಟತೆಯ ಕ್ಷಣಗಳಿಂದ ಕೂಡ ಕೂಡಿದ್ದವು.[೧೭೧] ಐರೋಪ್ಯ ಪುರುಷರು ಮತ್ತು ಸ್ಥಳೀಯ ಮಹಿಳೆಯರ ನಡುವೆ ಇಂಗ್ಲೀಷ್, ಸ್ಪೇನ್ ಮತ್ತು ಫ್ರೆಂಚ್ ವಸಾಹತುಗಳಲ್ಲಿ ವಿವಾಹಗಳು ಜರುಗಿದವು. 1528ರಲ್ಲಿ ಮಾಕ್ಟೆಜುಮಾ IIಉತ್ತರಾಧಿಕಾರಿಣಿ ಇಸಾಬೆಲ್ ಡೆ ಮಾಕ್ಟೆಜುಮಾ ಸ್ಪೇನ್ ಸಾಹಸಿ ಅಲೋನ್ಸೊ ಡೆ ಗ್ರಾಡೊ ಅವರನ್ನು ವಿವಾಹವಾದರು. ಅವರ ಸಾವಿನ ನಂತರ ಜಾನ್ ಕ್ಯಾನೊ ಡೆ ಸಾವೆಡ್ರಾ ಅವರನ್ನು ವಿವಾಹವಾದರು. ಅವರಿಗೆ ಒಟ್ಟು ಐವರು ಮಕ್ಕಳು ಜನಿಸಿದರು. ಬಹುಕಾಲದ ನಂತರ, 1614ರ ಏಪ್ರಿಲ್ 5ರಂದು ಪೊಕಾಹೊಂಟಾಸ್ ಇಂಗ್ಲೀಷ್ ಪ್ರಜೆ ಜಾನ್ ರಾಲ್ಫ್ ಅವರನ್ನು ವಿವಾಹವಾದರು. ಅವರಿಗೆ ಥಾಮಸ್ ರಾಲ್ಫ್ ಎಂಬ ಮಗು ಜನಿಸಿತು. ಚಕ್ರವರ್ತಿ ಎರಡನೇ ಮಾಕ್ಟೆಜುಮಾನ ಅನೇಕ ಉತ್ತರಾಧಿಕಾರಿಗಳನ್ನು ಸ್ಪೇನ್ ರಾಜಪ್ರಭುತ್ವವು ಮನ್ನಣೆ ನೀಡಿತು. ಅವರಿಗೆ ಡ್ಯೂಕ್ ಆಫ್ ಮಾಕ್ಟೆಜುಮಾ ಡಿ ಟುಲ್ಟೆಂಗೊ ಸೇರಿದಂತೆ ಅನೇಕ ಬಿರುದುಗಳನ್ನು ದಯಪಾಲಿಸಿತು.ಸ್ಥಳೀಯ ಅಮೆರಿಕನ್ನರು ಮತ್ತು ಯುರೋಪಯನ್ನರ ನಡುವೆ ನಿಕಟ ಸಂಬಂಧಗಳು ವ್ಯಾಪಕವಾಗಿ ಬೆಳೆಯಿತು. ಇದು ಫ್ರೆಂಚ್ ಮತ್ತು ಸ್ಪೇನ್ ಪರಿಶೋಧಕರು ಮತ್ತು ಟ್ರಾಪರ್‌(ಕಾಡುಪ್ರಾಣಿಗಳನ್ನು ಹಿಡಿಯುವವರು)ಗಳಿಂದ ಆರಂಭವಾಯಿತು. ಉದಾಹರಣೆಗೆ 19ನೇ ಶತಮಾನದ ಪೂರ್ವದಲ್ಲಿ ಸ್ಥಳೀಯ ಅಮೆರಿಕದ ಮಹಿಳೆಯಾದ ಸಕಾಗಾವಿ, ಲೆವಿಸ್ ಮತ್ತು ಕ್ಲಾರ್ಕ್ ಯಾತ್ರೆಯನ್ನು ಅನುವಾದಿಸಲು ನೆರವಾಗಿದ್ದು, ಫ್ರೆಂಚ್ ಟ್ರಾಪರ್ ಟೌಸೇಂಟ್ ಚಾರ್ಬೋನಿಯನ್ನು ವಿವಾಹವಾಗಿದ್ದರು. ಅವರಿಗೆ ಜೀನ್ ಬಾಪ್ಟಿಸ್ಟೆ ಚಾರ್ಬೊನಿ ಎಂಬ ಪುತ್ರ ಜನಿಸಿದರು. ಇದು ವ್ಯಾಪಾರಿಗಳು ಮತ್ತು ಟ್ರಾಪರ್‌ಗಳ ನಡುವೆ ಅತ್ಯಂತ ವಿಶಿಷ್ಟ ನಮೂನೆಯಾಗಿತ್ತು.

ಫೈವ್ ಇಂಡಿಯನ್ಸ್ ಆಂಡ್ ಎ ಕ್ಯಾಪ್ಟಿವ್, ಇದನ್ನು 1855ರಲ್ಲಿ ಕಾರ್ಲ್ ವಿಮಾರ್ ಚಿತ್ರಿಸಿದರು

ಅನೇಕ ನಿವಾಸಿಗಳು ಸ್ಥಳೀಯ ಅಮೆರಿಕನ್ನರ ಬಗ್ಗೆ ಭಯಪಟ್ಟಿದ್ದರು. ಏಕೆಂದರೆ ಅವರು ಭಿನ್ನಸ್ವರೂಪದಿಂದ ಕೂಡಿದ್ದರು.[೧೭೧] ಅವರ ವಿಧಾನಗಳು ಬಿಳಿಯರಿಗೆ ಅನಾಗರಿಕವೆನಿಸಿದವು ಮತ್ತು ಅವರಿಗೆ ಅರ್ಥವಾಗದ ಸಂಸ್ಕೃತಿ ಬಗ್ಗೆ ಅನುಮಾನ ಹೊಂದಿದ್ದರು.[೧೭೧] ಒಬ್ಬ ಸ್ಥಳೀಯ ಅಮೆರಿಕನ್‌ ಲೇಖಕ ಆಂಡ್ರಿವ್ ಜೆ. ಬ್ಲಾಕ್‌ಬರ್ಡ್ 1897ರಲ್ಲಿ, ಬಿಳಿಯ ನಿವಾಸಿಗಳು ಸ್ಥಳೀಯ ಅಮೆರಿಕದ ಬುಡಕಟ್ಟುಗಳಲ್ಲಿ ಅನೈತಿಕತೆಗಳನ್ನು ಪರಿಚಯಿಸಿದ್ದನ್ನು ಕಂಡುಕೊಂಡಿದ್ದಾರೆ.[೧೭೧]ಅವರು ತಮ್ಮ ಪುಸ್ತಕ ಹಿಸ್ಟರಿ ಆಫ್ ದಿ ಒಟ್ಟಾವ ಎಂಡ್ ಚಿಪ್ಪೇವಾ ಇಂಡಿಯನ್ಸ್ ಆಫ್ ಮಿಚಿಗನ್‌ನಲ್ಲಿ ಹೀಗೆ ಬರೆದಿದ್ದಾರೆ,

"ಒಟ್ಟಾವಾಗಳು ಮತ್ತು ಚಿಪ್ಪೇವಾಗಳು ತಮ್ಮ ಆದಿಕಾಲದ ರಾಜ್ಯದಲ್ಲಿ ಸದ್ಗುಣಿಗಳಾಗಿದ್ದರು. ನಮ್ಮ ಹಳೆಯ ಸಂಪ್ರದಾಯಗಳಲ್ಲಿ ಯಾವುದೇ ಅಕ್ರಮ ಸಂಬಂಧದಿಂದ ಜನಿಸಿದ ಮಕ್ಕಳ ಬಗ್ಗೆ ವರದಿಯಾಗಿರಲಿಲ್ಲ. ಆದರೆ ತೀರಾ ಇತ್ತೀಚೆಗೆ ಈ ದುಷ್ಟಪ್ರವೃತ್ತಿಯು ಒಟ್ಟಾವಗಳಲ್ಲಿ ಕಾಣಿಸಿದ್ದು, ಆರ್ಬರ್ ಕ್ರೋಚ್‌ನ ಒಟ್ಟಾವಗಳ ನಡುವೆ ಎರಡನೇ ಪ್ರಕರಣವು 1897ರಲ್ಲಿ ಇನ್ನೂ ಜೀವಂತವಿತ್ತು. ಆಗಿನಿಂದ ಈ ಕೆಡುಕುಗಳು ಆಗಾಗ್ಗೆ ಕಾಣಿಸಿಕೊಂಡಿತು. ದುಷ್ಟ ಬಿಳಿಯ ಜನರು ಬುಡಕಟ್ಟು ಜನರಲ್ಲಿ ದುಷ್ಟ ಪ್ರವೃತ್ತಿಗಳನ್ನು ಪರಿಚಯಿಸಿದರು.[೧೭೧]

ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ಕಾರ ಸ್ಥಳೀಯ ಅಮೆರಿಕನ್ನರ ಜತೆ ಭೂ ಒಪ್ಪಂದಗಳನ್ನು ಮಾಡಿಕೊಂಡಾಗ, ಮನಸ್ಸಿನಲ್ಲಿ ಎರಡು ಉದ್ದೇಶಗಳನ್ನು ಹೊಂದಿತ್ತು. ಮೊದಲಿಗೆ ಅವರು ಬಿಳಿಯರ ನೆಲೆಗಳಿಗೆ ಹೆಚ್ಚು ಭೂಮಿಯನ್ನು ನೀಡಲು ಬಯಸಿದ್ದರು.[೧೭೨] ಎರಡನೆಯದಾಗಿ, ಸ್ಥಳೀಯರಿಗೆ ಬಿಳಿಯ ಜನರ ರೀತಿಯಲ್ಲೇ ಭೂಮಿಯ ಬಳಕೆಗೆ ಬಲವಂತ ಮಾಡುವ ಮೂಲಕ ಬಿಳಿಯರು ಮತ್ತು ಸ್ಥಳೀಯ ಅಮೆರಿಕನ್ನರ ನಡುವೆ ಉದ್ವಿಗ್ನತೆಗಳನ್ನು ಶಮನ ಮಾಡಲು ಬಯಸಿದ್ದರು.[೧೭೨] ಈ ಗುರಿಗಳನ್ನು ಸಾಧಿಸಲು ಸರ್ಕಾರವು ವಿವಿಧ ಕಾರ್ಯತಂತ್ರಗಳನ್ನು ಹೊಂದಿತ್ತು. ಅನೇಕ ಒಪ್ಪಂದಗಳಲ್ಲಿ ತಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಅಮೆರಿಕನ್ನರು ಕೃಷಿಕರಾಗುವ ಅಗತ್ಯದ ಬಗ್ಗೆ ತಿಳಿಸಲಾಗಿತ್ತು.[೧೭೨] ಸ್ಥಳೀಯ ಅಮೆರಿಕನ್ನರನ್ನು ಸಹಿ ಹಾಕುವಂತೆ ಬಲಪ್ರಯೋಗಿಸಿದ ದಾಖಲೆಗಳನ್ನು ಸರ್ಕಾರಿ ಅಧಿಕಾರಿಗಳು ಸಾಮಾನ್ಯವಾಗಿ ತರ್ಜುಮೆ ಮಾಡುತ್ತಿರಲಿಲ್ಲ. ಸ್ಥಳೀಯ ಮುಖಂಡರಿಗೂ ಕೂಡ ತಾವು ಸಹಿ ಹಾಕುವುದು ಯಾವುದಕ್ಕೆ ಎಂಬ ಕಲ್ಪನೆಯೂ ಇರಲಿಲ್ಲ ಅಥವಾ ಕಡಿಮೆ ಕಲ್ಪನೆ ಹೊಂದಿದ್ದರು.[೧೭೨]ಸ್ಥಳೀಯ ಅಮೆರಿಕದ ಪುರುಷ ಬಿಳಿಯವರ್ಣೀಯ ಮಹಿಳೆಯನ್ನು ವಿವಾಹವಾಗಬೇಕಾದರೆ,"ಉತ್ತಮ ಮನೆಯಲ್ಲಿ ಬಿಳಿಯವರ್ಣೀಯ ಮಹಿಳೆಗೆ ಆಸರೆಯಾಗಿರುವುದನ್ನು ಸಾಬೀತು ಮಾಡುವವರೆಗೆ" ತಂದೆತಾಯಿಗಳ ಅನುಮತಿಯನ್ನು ಪಡೆಯಬೇಕಾಗಿತ್ತು.[೧೭೩] 19ನೇ ಶತಮಾನದ ಪೂರ್ವದಲ್ಲಿ, ಸ್ಥಳೀಯ ಅಮೆರಿಕನ್ ಟೆಕುಮ್‌ಸೆ ಮತ್ತು ಹೊಂಬಣ್ಣದ ಕೂದಲಿನ ನೀಲಿ ಕಣ್ಣಿನ ರೆಬೆಕ್ಕಾ ಗ್ಯಾಲೋವೇ ಅಂತರ ಜನಾಂಗೀಯ ಸಂಬಂಧವನ್ನು ಹೊಂದಿದ್ದರು. 19ನೇ ಶತಮಾನದ ಕೊನೆಯಲ್ಲಿ, ಹ್ಯಾಂಪ್ಟನ್ ಸಂಸ್ಥೆಯು ಸ್ಥಳೀಯ ಅಮೆರಿಕದ ಕಾರ್ಯಕ್ರಮವನ್ನು ನಿರ್ವಹಿಸಿದ ಸಂದರ್ಭದಲ್ಲಿ ಮೂವರು ಸ್ಥಳೀಯ ಅಮೆರಿಕದ ಪುರುಷರನ್ನು ಭೇಟಿ ಮಾಡಿದ ಐರೋಪ್ಯ‌-ಅಮೆರಿಕದ ಮಧ್ಯಮ ವರ್ಗದ ಮಹಿಳಾ ಸಿಬ್ಬಂದಿಯು ಅವರನ್ನು ವಿವಾಹವಾದರು.[೧೭೪] ಚಾರ್ಲೆಸ್ ಈಸ್ಟ್‌ಮನ್ ಐರೋಪ್ಯ-ಅಮೆರಿಕನ್ ಪತ್ನಿ ಎಲೈನ್ ಗೂಡೇಲ್ ಅವರನ್ನು ವಿವಾಹವಾದರು. ಗೂಡೇಲ್ ಮೀಸಲು ಪ್ರದೇಶಗಳಲ್ಲಿ ಸ್ಥಳೀಯ ಅಮೆರಿಕನ್ನರ ಶಿಕ್ಷಣದ ಸೂಪರಿಂಟೆಂಡೆಂಟ್ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದಾಗ ಡಕೋಟಾ ಪ್ರದೇಶದಲ್ಲಿ ಈಸ್ಟ್‌ಮನ್ ಭೇಟಿಯಾಗಿದ್ದರು. ಅವರಿಗೆ ಒಟ್ಟು ಆರು ಮಂದಿ ಮಕ್ಕಳಿದ್ದರು.

ಸ್ಥಳೀಯ ಅಮೆರಿಕನ್ನರ ಮತ್ತು ಆಫ್ರಿಕನ್ನರ ಸಂಬಂಧಗಳು

ಆಫ್ರಿಕನ್ನರು ಮತ್ತು ಸ್ಥಳೀಯ ಅಮೆರಿಕನ್ನರು ಶತಮಾನಗಳವರೆಗೆ ಪರಸ್ಪರ ಪ್ರಭಾವ ಬೀರಿದ್ದರು. ಆಫ್ರಿಕನ್ನರ ಮತ್ತು ಸ್ಥಳೀಯ ಅಮೆರಿಕನ್ನರ ಸಂಪರ್ಕದ ಬಗ್ಗೆ 1502ರ ಏಪ್ರಿಲ್‌ನಲ್ಲಿ ಅತೀ ಪ್ರಾಚೀನ ದಾಖಲೆಯನ್ನು ಹೊಂದಿದೆ. ಪ್ರಥಮ ಆಫ್ರಿಕನ್ನರನ್ನು ಗುಲಾಮರಾಗಿ ದುಡಿಸಿಕೊಳ್ಳಲು ಹಿಸ್ಪಾನಿಯೋಲಾಗೆ ಕರೆತರಲಾಯಿತು.[೧೭೫]

ಕೆಲವು ಬಾರಿ ಸ್ಥಳೀಯ ಅಮೆರಿಕನ್ನರು ಆಫ್ರಿಕದ ಅಮೆರಿಕನ್ನರ ಉಪಸ್ಥಿತಿ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.[೧೭೬] ಒಂದು ವಿವರಣೆಯಲ್ಲಿ "1752ರಲ್ಲಿ ಆಫ್ರಿಕದ ಅಮೆರಿಕನ್ ಪ್ರಜೆ ಅವರ ನಡುವೆ ವ್ಯಾಪಾರಿಯಾಗಿ ಆಗಮಿಸಿದಾಗ ಕಾಟಾವಾಬಾ ಬುಡಕಟ್ಟು ಜನಾಂಗ ತೀವ್ರ ಕೋಪ ಮತ್ತು ಅಸಮಾಧಾನ ಹೊಂದಿದ್ದರು".[೧೭೬] ಯುರೋಪಿಯನ್ನರ ಒಲವನ್ನು ಗಳಿಸಲು ಎಲ್ಲ ಸ್ಥಳೀಯ ಅಮೆರಿಕನ್ನರ ಬಗ್ಗೆ ಪ್ರಬಲವಾದ ವರ್ಣ ಪೂರ್ವಗ್ರಹ ಕಲ್ಪನೆಯನ್ನು ಚೆರೋಕೀ ಹೊಂದಿತ್ತು.[೧೭೭] ಸ್ಥಳೀಯ ಅಮೆರಿಕನ್ನರು ಮತ್ತು ಆಫ್ರಿಕದ ಅಮೆರಿಕನ್ನರು ಒಟ್ಟಿಗೆ ಬಂಡಾಯ ಏಳಬಹುದೆಂಬ ಯುರೋಪ್ ಭಯವೇ ಈ ಶತ್ರುತ್ವ ಉಂಟುಮಾಡಲು ಕಾರಣವಾಗಿತ್ತು. ಆಫ್ರಿಕದ ಅಮೆರಿಕನ್ನರು ಸ್ಥಳೀಯ ಅಮೆರಿಕನ್ನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆಂದು ಮನವರಿಕೆ ಮಾಡಲು ಬಿಳಿಯರು ಯತ್ನಿಸಿದರು." [೧೭೮] 1751ರಲ್ಲಿ ,ದಕ್ಷಿಣ ಕರೋಲಿನ ಕಾನೂನು ಹೇಳಿಕೆ ನೀಡಿತು:

"ಇಂಡಿಯನ್ನರ ನಡುವೆ ನೀಗ್ರೋಗಳನ್ನು ಒಯ್ಯುವುದು ಹಾನಿಕರ ಎಂದು ಭಾವಿಸಲಾಗಿದ್ದು, ಅವರ ನಡುವೆ ಸಾಮೀಪ್ಯತೆಯನ್ನು ತಪ್ಪಿಸಬೇಕು"[೧೭೯]

ಯುರೋಪಿಯನ್ನರು ಎರಡೂ ಜನಾಂಗದವರನ್ನು ಕೆಳದರ್ಜೆಯವರೆಂದು ಪರಿಗಣಿಸಿದ್ದರು ಮತ್ತು ಸ್ಥಳೀಯ ಅಮೆರಿಕನ್ನರು ಮತ್ತು ಆಫ್ರಿಕನ್ನರು ಇಬ್ಬರೂ ಶತ್ರುಗಳೆಂದು ಬಿಂಬಿಸುವ ಪ್ರಯತ್ನಗಳನ್ನು ಮಾಡಿದರು.[೯೩] ತಪ್ಪಿಸಿಕೊಂಡ ಗುಲಾಮರನ್ನು ವಾಪಸು ಕರೆತಂದರೆ ಸ್ಥಳೀಯ ಅಮೆರಿಕನ್ನರಿಗೆ ಬಹುಮಾನಗಳನ್ನು ನೀಡಲಾಗುತ್ತಿತ್ತು ಮತ್ತು ಇಂಡಿಯನ್ ಯುದ್ಧಗಳಲ್ಲಿ ಹೋರಾಟ ಮಾಡಿದರೆ ಆಫ್ರಿಕದ ಅಮೆರಿಕನ್ನರಿಗೆ ಬಹುಮಾನ ನೀಡಲಾಗುತ್ತಿತ್ತು.[೯೩][೧೮೦][೧೮೧]

ರಾಸ್ ಕೆ ಡೀ, ಕ್ಯಾಲಿಫೋರ್ನಿಯಾದ ಪೋಮೊ-ಕೀನ್ಯದ ಗಾಯಕ ಮತ್ತು ಸಂಪಾದಕ

"ಆಫ್ರಿಕನ್ನರು ಮೊದಲ ಜನಾಂಗೀಯ ಗುಲಾಮರಾದ ಬದಲಾವಣೆಯ ಅವಧಿಯಲ್ಲಿ ಸ್ಥಳೀಯ ಅಮೆರಿಕನ್ನರೂ ಸಹ ಗುಲಾಮರಾದರು ಮತ್ತು ದಾಸ್ಯದ ಒಂದು ಸಾಮಾನ್ಯ ಅನುಭವವನ್ನು ಹಂಚಿಕೊಂಡರು. ಅವರು ಒಟ್ಟಿಗೆ ಕೆಲಸ ಮಾಡಿದರು, ಸಾಮುದಾಯಿಕ ವಸತಿಗಳಲ್ಲಿ ಜೊತೆಯಾಗಿ ವಾಸಿಸಿದರು, ಸಾಮೂಹಿಕ ಪಾಕವಿಧಾನಗಳನ್ನು ಸೃಷ್ಟಿಸಿದರು, ಮೂಲಿಕೆಗಳಿಂದ ರೋಗವನ್ನು ಗುಣಪಡಿಸುವ ಚಿಕಿತ್ಸೆ, ಪುರಾಣ ಕಥೆಗಳು ಮತ್ತು ದಂತಕಥೆಗಳನ್ನು ಹಂಚಿಕೊಂಡರು ಹಾಗೂ ಕೊನೆಯಲ್ಲಿ ಅವರು ಅಂತರ್ವಿವಾಹ ಮಾಡಿಕೊಂಡರು."[೯೪] ಈ ಕಾರಣದಿಂದಾಗಿ ಹೆಚ್ಚಿನ ಬುಡಕಟ್ಟು ಜನಾಂಗಗಳು ಎರಡು ಸಮುದಾಯಗಳ ನಡುವಿನ ವಿವಾಹವನ್ನು ಪ್ರೋತ್ಸಾಹಿಸಿದರು, ಅವರು ಈ ಮಿಲನಗಳಿಂದ ಬಲಿಷ್ಠ, ಆರೋಗ್ಯವಂತ ಮಕ್ಕಳು ಹುಟ್ಟುತ್ತವೆ ಎಂಬ ಭಾವನೆಯನ್ನು ಹೊಂದಿದ್ದರು.[೧೮೨] 18ನೇ ಶತಮಾನದಲ್ಲಿ, ಸ್ಥಳೀಯ ಅಮೆರಿಕನ್ನರ ಹಳ್ಳಿಗಳಲ್ಲಿ ಪುರುಷರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾದ್ದರಿಂದ ಹೆಚ್ಚಿನ ಸ್ಥಳೀಯ ಅಮೆರಿಕನ್‌ ಮಹಿಳೆಯರು ಬಂಧಮುಕ್ತರಾದ ಅಥವಾ ಗುಲಾಮಗಿರಿಯಿಂದ ತಪ್ಪಿಸಿಕೊಂಡ ಆಫ್ರಿಕನ್ ಪುರುಷರೊಂದಿಗೆ ವಿವಾಹವಾದರು.[೯೩] ಇದರ ಜತೆಗೆ ಅನೇಕ ಸ್ಥಳೀಯ ಅಮೆರಿಕನ್‌ ಮಹಿಳೆಯರು ಆಫ್ರಿಕನ್‌ ಪುರುಷರನ್ನು ವಾಸ್ತವವಾಗಿ ಕೊಂಡುಕೊಳ್ಳುತ್ತಿದ್ದರು, ಆದರೆ ಆ ಮಹಿಳೆಯರು ಐರೋಪ್ಯ ಮಾರಾಟಗಾರರ ತಿಳಿವಳಿಕೆಯಿಲ್ಲದೇ ಈ ಪುರುಷರನ್ನು ಬಂಧಮುಕ್ತಗೊಳಿಸಿ ತಮ್ಮ ಬುಡಕಟ್ಟಿಗೆ ಸೇರಿಸಿಕೊಂಡು ವಿವಾಹವಾಗುತ್ತಿದ್ದರೆಂದು ದಾಖಲೆಗಳು ತೋರಿಸಿಕೊಡುತ್ತವೆ.[೯೩] ಆಫ್ರಿಕನ್‌ ಪುರುಷರಿಗೆ ಸ್ಥಳೀಯ ಅಮೆರಿಕನ್‌ ಮಹಿಳೆಯರನ್ನು ಮದುವೆಯಾಗುವುದು ಅಥವಾ ಅವರಿಂದ ಮಕ್ಕಳನ್ನು ಪಡೆಯುವುದು ಪ್ರಯೋಜನಕಾರಿಯಾಗಿತ್ತು ಏಕೆಂದರೆ ಒಬ್ಬ ಗುಲಾಮಳಲ್ಲದ ತಾಯಿಗೆ ಹುಟ್ಟಿದ ಮಕ್ಕಳು ಗುಲಾಮಗಿರಿಯಿಂದ ಸ್ವತಂತ್ರವಾಗಿರುತ್ತಿದ್ದರು.[೯೩] ಯುರೋಪಿಯನ್‌ ವಸಾಹತುಶಾಹಿಗಳು ಹೆಚ್ಚಾಗಿ ಸಂಧಾನಗಳನ್ನು ನಡೆಸಿ ಓಡಿಹೋದ ಗುಲಾಮರನ್ನು ಹಿಂದಿರುಗುವಂತೆ ಕೇಳಿಕೊಳ್ಳುತ್ತಿದ್ದರು. 1726ರಲ್ಲಿ, ನ್ಯೂಯಾರ್ಕ್‌ನ ಬ್ರಿಟಿಷ್ ಗವರ್ನರ್, ಇರಾಕೊಯಿಸ್ ಜತೆ ಸೇರಿಕೊಂಡಿರುವ ಎಲ್ಲ ಓಡಿಹೋದ ಗುಲಾಮರನ್ನು ಹಿಂದಿರುಗುಗಿಸುವಂತೆ ಅವರಿಂದ ಭರವಸೆಯನ್ನು ಪಡೆದುಕೊಂಡರು.[೧೮೩] 1760ರ ದಶಕದ ಮಧ್ಯಾವಧಿಯಲ್ಲಿ, ಹ್ಯುರಾನ್ ಮತ್ತು ದೇಲಾವೇರ್ ಸ್ಥಳೀಯ ಅಮೆರಿಕನ್ನರನ್ನೂ ಸಹ ಓಡಿಹೋದ ಗುಲಾಮರನ್ನು ಹಿಂದಿರುಗಿಸುವಂತೆ ಕೇಳಿಕೊಳ್ಳಲಾಯಿತು, ಆದರೆ ಗುಲಾಮರು ಹಿಂದಿರುಗಿದ ಬಗ್ಗೆ ಯಾವುದೇ ದಾಖಲೆಗಳು ಕಂಡುಬರಲಿಲ್ಲ.[೧೮೪] ಗುಲಾಮರು ಹಿಂದಿರುಗುವಂತೆ ಮಾಡಲು ಜಾಹೀರಾತುಗಳನ್ನು ಬಳಸಿಕೊಳ್ಳಲಾಯಿತು.

ಎಡದಿಂದ ಬಲಕ್ಕೆ: ಅಮೋಸ್ ಚ್ಯಾಪ್‌ಮ್ಯಾನ್, ಆಕೆಯ ಮಗಳು, ಸಹೋದರಿ (ಎಲ್ಲರೂ ಚೆಯೆನ್ನೆ ಮತ್ತು ಒಬ್ಬ ಗುರುತಿಸದ ಆಫ್ರಿಕನ್-ಅಮೆರಿಕನ್‌ ಹುಡುಗಿ. 1886[೧೮೫]

ಗುಲಾಮರ ಮಾಲಿಕತ್ವ ಹೊಂದುವುದು ಕೆಲವು ಸ್ಥಳೀಯ ಅಮೆರಿಕನ್‌ ಬುಡಕಟ್ಟು ಜನಾಂಗಗಳಲ್ಲಿ ವಿಶೇಷವಾಗಿ ಚೆರೋಕೀ, ಚೊಕ್ಟಾವ್ ಮತ್ತು ಕ್ರೀಕ್ ಜನರು ವಾಸಿಸುತ್ತಿದ್ದ ಆಗ್ನೇಯ ಭಾಗದಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು. 3%ಗಿಂತಲೂ ಕಡಿಮೆ ಸ್ಥಳೀಯ ಅಮೆರಿಕನ್ನರು ಗುಲಾಮರ ಒಡೆತನ ಹೊಂದಿದ್ದರೂ, ಜೀತಗಾರಿಕೆ ಪದ್ಧತಿಗಳು ಸ್ಥಳೀಯ ಅಮೆರಿಕನ್ನರಲ್ಲಿ ಹಾನಿಕಾರಕ ವಿಭಜನೆಗಳನ್ನು ಉಂಟುಮಾಡಿದವು.[೯೫] ಚೆರೋಕೀ ಬುಡಕಟ್ಟು ಜನಾಂಗದಲ್ಲಿ ಗುಲಾಮರ ಒಡೆಯರು ಹೆಚ್ಚಾಗಿ ಯುರೋಪಿಯನ್‌ ಪುರುಷರ ಮಕ್ಕಳಾಗಿದ್ದರು, ಅದು ಅವರ ಮಕ್ಕಳಿಗೆ ಗುಲಾಮತನದ ಆರ್ಥಿಕತೆಯನ್ನು ತೋರಿಸಿಕೊಟ್ಟಿತು ಎಂದು ದಾಖಲೆಗಳು ಸೂಚಿಸುತ್ತವೆ.[೧೮೦] ಯುರೋಪಿಯನ್ನರ ವಿಸ್ತರಣೆ ಅಧಿಕವಾದಂತೆ ಹೆಚ್ಚೆಚ್ಚು ಆಫ್ರಿಕನ್‌ ಮತ್ತು ಸ್ಥಳೀಯ ಅಮೆರಿಕನ್‌ ವಿವಾಹಗಳು ಪ್ರಾಮುಖ್ಯತೆ ಪಡೆದವು.[೯೩]ಹೆಚ್ಚಿನ ಆಫ್ರಿಕನ್‌-ಅಮೆರಿಕನ್ನರು ಸ್ಥಳೀಯ ಅಮೆರಿಕನ್ನರ ಆನುವಂಶಿಕ ಲಕ್ಷಣವನ್ನು ಹೊಂದಿದ್ದಾರೆಂದು ಕೆಲವು ಇತಿಹಾಸಕಾರರು ಹೇಳುತ್ತಾರೆ.[೧೮೬] ತಳಿವಿಜ್ಞಾನಿಗಳ ಕೆಲಸದ ಆಧಾರದ ಮೇಲೆ, ಆಫ್ರಿಕನ್‌ ಅಮೆರಿಕನ್ನರನ್ನು ಕುರಿತ PBS ಸರಣಿಯೊಂದು, ಹೆಚ್ಚಿನ ಆಫ್ರಿಕನ್‌ ಅಮೆರಿಕನ್ನರು ಮಿಶ್ರಿತ ಜನಾಂಗಕ್ಕೆ ಸೇರಿದ್ದು, ಅವರು ಸ್ಥಳೀಯ ಅಮೆರಿಕನ್‌ ಸಂತತಿಯನ್ನು ಹೊಂದುವುದು ಅತಿವಿರಳವಾಗಿರುತ್ತದೆ ಎಂದು ವಿವರಿಸಿದೆ.[೧೮೭][೧೮೮] ಈ PBS ಸರಣಿಯ ಪ್ರಕಾರ, ಹೆಚ್ಚು ಸಾಮಾನ್ಯವಾದ "ಕರಿಯರಲ್ಲದ" ಮಿಶ್ರಣವೆಂದರೆ ಇಂಗ್ಲಿಷ್ ಮತ್ತು ಸ್ಕಾಟ್ಸ್-ಐರಿಷ್.[೧೮೭][೧೮೮] ಆದರೆ ನೇರ-ಮಾರ್ಗದ ಗಂಡು ಮತ್ತು ಹೆಣ್ಣಿನ ಪೂರ್ವಿಕರ Y-ಕ್ರೋಮೊಸೋಮ್ ಮತ್ತು mtDNA (ಮೈಟೊಕಾಂಡ್ರಿಯಲ್ DNA) ಪರೀಕ್ಷಾ ಪ್ರಕ್ರಿಯೆಗಳು ಅನೇಕ ಪೂರ್ವಜರ ಆನುವಂಶಿಕ ಲಕ್ಷಣವನ್ನು ಕಂಡುಹಿಡಿಯುವಲ್ಲಿ ವಿಫಲಗೊಳ್ಳಬಹುದು. (ಆನುವಂಶಿಕ ಲಕ್ಷಣದ ಅಂದಾಜಿನಲ್ಲಿ DNA ಪರೀಕ್ಷೆಯ ಮಿತಿಗಳನ್ನು PBS ಸರಣಿಯು ತೃಪ್ತಿಕರವಾದ ರೀತಿಯಲ್ಲಿ ವಿವರಿಸಿಲ್ಲವೆಂದು ಕೆಲವು ವಿಮರ್ಶಕರು ಹೇಳಿದ್ದಾರೆ.)[೧೮೯] ತುಲನಾತ್ಮಕವಾಗಿ ಕೆಲವು ಸ್ಥಳೀಯ ಅಮೆರಿಕನ್ನರು ಆಫ್ರಿಕನ್-ಅಮೆರಿಕನ್ನರ ಪರಂಪರೆಯನ್ನು ಹೊಂದಿದ್ದಾರೆಂದು ಮತ್ತೊಂದು ಅಧ್ಯಯನವು ಸೂಚಿಸುತ್ತದೆ.[೧೯೦] ದಿ ಅಮೆರಿಕನ್‌ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್ ‌ನಲ್ಲಿ ವರದಿಯಾದ ಅಧ್ಯಯನವೊಂದು ಹೀಗೆಂದು ಸೂಚಿಸುತ್ತದೆ - "ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಆಫ್ರಿಕನ್‌ ಸಂತತಿಯ 10 ಜನಸಂಖ್ಯೆಗಳಲ್ಲಿ ಯುರೋಪಿಯನ್ನರ ಆನುವಂಶಿಕ ಕೊಡುಗೆಯ ಬಗ್ಗೆ ನಾವು ವಿಶ್ಲೇಷಿಸಿದ್ದೇವೆ (ಮೇವುಡ್, ಇಲಿನಾಯ್ಸ್; ಡೆಟ್ರಾಯಿಟ್; ನ್ಯೂಯಾರ್ಕ್; ಫಿಲಡೆಲ್ಫಿಯಾ; ಪಿಟ್ಸ್‌ಬರ್ಗ್; ಬ್ಯಾಲ್ಟಿಮೋರ್; ಚಾರ್ಲೆಸ್ಟನ್, ದಕ್ಷಿಣ ಕ್ಯಾರೋಲಿನ; ನ್ಯೂ ಆರ್ಲಿಯನ್ಸ್; ಮತ್ತು ಹೌಸ್ಟನ್). 10 ಜನಸಂಖ್ಯೆಗಳಲ್ಲಿ ಯಾವುದಕ್ಕೂ ಗಮನಾರ್ಹವಾದ ಮಾತೃಸಂಬಂಧದ ಅಮೆರಿಂಡಿಯನ್(ಅಮೆರಿಕನ್ ಇಂಡಿಯನ್) ಕೊಡುಗೆಗೆ ಸಾಕ್ಷ್ಯವಿಲ್ಲವೆಂದು mtDNA ಹ್ಯಾಪ್ಲೊಗ್ರೂಪ್ಸ್ ವಿಶ್ಲೇಷಣೆಯು ತೋರಿಸುತ್ತದೆ."[೧೯೧]ಆನುವಂಶಿಕ ಸಂತತಿಯ DNA ಪರೀಕ್ಷೆಯು ಮಿತಿಗಳನ್ನು ಹೊಂದಿರುತ್ತದೆ ಮತ್ತು ಆನುವಂಶಿಕ ಲಕ್ಷಣದ ಬಗೆಗಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ವ್ಯಕ್ತಿಗಳು ಅದನ್ನು ಅವಲಂಬಿಸಬಾರದೆಂದು ಸಂಶೋಧಕರು ಎಚ್ಚರಿಸುತ್ತಾರೆ.[೧೮೯][೧೯೨] ಪರೀಕ್ಷೆಯಿಂದ ಪ್ರತ್ಯೇಕ ಸ್ಥಳೀಯ ಅಮೆರಿಕನ್‌ ಬುಡಕಟ್ಟು ಜನಾಂಗಗಳ ಮಧ್ಯೆ ವ್ಯತ್ಯಾಸ ಕಲ್ಪಿಸಲು ಸಾಧ್ಯವಿಲ್ಲ. ಬುಡಕಟ್ಟಿನಲ್ಲಿನ ಸದಸ್ಯತ್ವವನ್ನು ದೃಢಪಡಿಸಲು ಇದನ್ನು ಮಾತ್ರ ಬಳಸುವುದು ಸಾಧ್ಯವಾಗುವುದಿಲ್ಲ.[೧೯೩]

ರಕ್ತ ಪರಿಮಾಣ

ಸ್ಥಳೀಯ ಅಮೆರಿಕನ್‌ ಬುಡಕಟ್ಟು ಜನಾಂಗಗಳಲ್ಲಿ ಅಂತರ-ಬುಡಕಟ್ಟಿನ ಮಿಶ್ರಣವು ಸಾಮಾನ್ಯವಾಗಿತ್ತು. ಆದ್ದರಿಂದ ಜನರು ಒಂದಕ್ಕಿಂತ ಹೆಚ್ಚು ಬುಡಕಟ್ಟುಗಳ ವಂಶಜರೆಂದು ಹೇಳಬಹುದಿತ್ತು.[೩೭][೩೮] ಹವಾಗುಣ, ಕಾಯಿಲೆ ಮತ್ತು ಯುದ್ಧದ ಒತ್ತಡಗಳಿಗೆ ಪ್ರತಿಕ್ರಿಯೆಯಾಗಿ ಕೆಲವೊಮ್ಮೆ ಗುಂಪುಗಳು ಅಥವಾ ಸಂಪೂರ್ಣ ಬುಡಕಟ್ಟುಗಳು ವಿಭಾಗಗೊಂಡು ಅಥವಾ ವಿಲೀನವಾಗಿ ಹೆಚ್ಚು ಜೀವಶಕ್ತಿಯುಳ್ಳ ಗುಂಪುಗಳಾಗಿ ರಚನೆಯಾಗುತ್ತಿದ್ದವು.[೧೯೪] ಹಲವಾರು ಬುಡಕಟ್ಟು ಜನಾಂಗಗಳು ಯುದ್ಧದಲ್ಲಿ ಸೆರೆಹಿಡಿಯಲ್ಪಟ್ಟ ಅಥವಾ ಮೃತರಾದವರ ಬದಲಿಗೆ ಸಾಂಪ್ರದಾಯಿಕವಾಗಿ ಸೆರೆಯಾಳುಗಳನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳುತ್ತಿದ್ದರು. ಈ ಸೆರೆಯಾಳುಗಳು ವಿರೋಧಿ ಬುಡಕಟ್ಟುಗಳಿಂದ ಮತ್ತು ನಂತರ ಯುರೋಪಿಯನ್‌ ನೆಲಸಿಗರಿಂದ ಆಗಮಿಸಿದ್ದರು. ಕೆಲವು ಬುಡಕಟ್ಟುಗಳು ಬಿಳಿಯ ವ್ಯಾಪಾರಿಗಳು ಹಾಗೂ ಓಡಿಹೋದ ಗುಲಾಮರು ಮತ್ತು ಸ್ಥಳೀಯ ಅಮೆರಿಕನ್‌-ಒಡೆತನದ ಗುಲಾಮರಿಗೂ ಸಹ ಆಶ್ರಯ ನೀಡುತ್ತಿದ್ದರು ಅಥವಾ ಸ್ವೀಕರಿಸುತ್ತಿದ್ದರು. ಯುರೋಪಿಯನ್ನರೊಂದಿಗೆ ದೀರ್ಘಕಾಲದ ವ್ಯಾಪಾರದ ಇತಿಹಾಸವನ್ನು ಹೊಂದಿರುವ ಬುಡಕಟ್ಟುಗಳು ಹೆಚ್ಚಿನ ಪ್ರಮಾಣದ ಯುರೋಪಿಯನ್‌ ಮಿಶ್ರಣವನ್ನು ತೋರಿಸುತ್ತವೆ. ಇದು ಯುರೋಪಿಯನ್‌ ಪುರುಷರು ಮತ್ತು ಸ್ಥಳೀಯ ಅಮೆರಿಕನ್‌ ಮಹಿಳೆಯರ ನಡುವಿನ ಹಲವಾರು ವರ್ಷಗಳ ಅಂತರ್ವಿವಾಹವನ್ನು ಬಿಂಬಿಸುತ್ತದೆ.[೧೯೪] ಆದ್ದರಿಂದ ಸ್ಥಳೀಯ ಅಮೆರಿಕನ್ನರಲ್ಲಿ ಆನುವಂಶಿಕ ವೈವಿಧ್ಯತೆಗೆ ಹಲವಾರು ಮಾರ್ಗಗಳು ಅಸ್ತಿತ್ವದಲ್ಲಿದ್ದವು.

1877ರ ಸರಿಸುಮಾರು ಒಕ್ಲಹೋಮಾದ ಕ್ರೀಕ್ (ಮುಸ್ಕೊಗೀ) ರಾಷ್ಟ್ರದ ಸದಸ್ಯರು, ಅವರೊಂದಿಗೆ ಕೆಲವು ಯುರೋಪಿಯನ್‌ ಮತ್ತು ಆಫ್ರಿಕನ್‌ ಸಂತತಿಯವರು.[೧೯೫]

ಇತ್ತೀಚೆಗೆ ಕೆಲವು ವ್ಯಾಖ್ಯಾನಕಾರರು ಸ್ಥಳೀಯ ಅಮೆರಿಕನ್ನರು ಮತ್ತು ಆಫ್ರಿಕನ್‌ ಅಮೆರಿಕನ್ನರ ನಡುವೆ ಹೆಚ್ಚಿನ ಪ್ರಮಾಣದ ಮಿಶ್ರಣವಿದೆ ಎಂದು ಸೂಚಿಸಿದರೆ, ತಳೀಯ ವಂಶಪರಂಪರಾಶಾಸ್ತ್ರಜ್ಞರು ಕಡಿಮೆ ಪ್ರಮಾಣದ ಮಿಶ್ರಣವಿದೆಯೆಂದು ಹೇಳಿದ್ದಾರೆ. ಕೇವಲ 5 ಪ್ರತಿಶತದಷ್ಟು ಆಫ್ರಿಕನ್‌ ಅಮೆರಿಕನ್ನರು ಕನಿಷ್ಠ 12.5 ಪ್ರತಿಶತದಷ್ಟು ಸ್ಥಳೀಯ ಅಮೆರಿಕನ್‌ ವಂಶಪರಂಪರೆಯನ್ನು (ಒಬ್ಬ ಮುತ್ತಜ್ಜ/ಮುತ್ತಜ್ಜಿಗೆ ಸಮನಾದ) ಹೊಂದಿದ್ದಾರೆಂದು ವಾದಿಸುವ ತಜ್ಞರಿಗೆ ಸಾಹಿತ್ಯಕ ವಿಮರ್ಶಕ ಮತ್ತು ಲೇಖಕ ಹೆನ್ರಿ ಲೂಯಿಸ್ ಗೇಟ್ಸ್ ಜೂನಿಯರ್ ಆಧಾರ ಕೊಡುತ್ತಾರೆ. ಅಂದರೆ ಹೆಚ್ಚಿನ ಶೇಕಡಾವಾರು ಜನರು ಅತಿ ಕಡಿಮೆ ವಂಶಪರಂಪರೆಯನ್ನು ಹೊಂದಿರಬಹುದು, ಆದರೆ ಇದು ಮಿಶ್ರಣದ ಹಿಂದಿನ ಅಂದಾಜುಗಳು ತುಂಬಾ ಹೆಚ್ಚಾಗಿರಬಹುದೆಂಬುದನ್ನೂ ಸೂಚಿಸುತ್ತದೆ.[೧೯೬] ಕೆಲವು ಆನುವಂಶಿಕ ಪರೀಕ್ಷೆಗಳು ಕೇವಲ ನೇರ ಗಂಡು ಅಥವಾ ಹೆಣ್ಣಿನ ಪೂರ್ವಜರನ್ನು ನಿರ್ಣಯಿಸುವುದರಿಂದ, ಸ್ಥಳೀಯ ಅಮೆರಿಕನ್‌ ವಂಶಪರಂಪರೆಯನ್ನು ಇತರ ಪೂರ್ವಜರಿಂದ ಕಂಡುಹಿಡಿಯಲಾಗುವುದಿಲ್ಲ. ಒಬ್ಬ ವ್ಯಕ್ತಿಯ 64 4xಮುತ್ತಜ್ಜ/ಮುತ್ತಜ್ಜಿಯರಲ್ಲಿ, ನೇರ ಪರೀಕ್ಷೆಯು ಕೇವಲ ಇಬ್ಬರ DNA ಆಧಾರವನ್ನು ಮಾತ್ರ ನೀಡುತ್ತದೆ.[೧೮೯][೧೯೨][೧೯೭]

ಕೇವಲ ಗಂಡು ಮತ್ತು ಹೆಣ್ಣಿನ ನೇರ-ಪೂರ್ವಜರನ್ನು ಪರೀಕ್ಷಿಸಬಹುದಾದ ಮಿತಿಗಳಿಗೆ ಹೆಚ್ಚುವರಿಯಾಗಿ, DNA ಪರೀಕ್ಷೆಯನ್ನು ಬುಡಕಟ್ಟು ಜನಾಂಗದ ಸದಸ್ಯತ್ವವನ್ನು ನಿರ್ಧರಿಸಲು ಬಳಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಅದು ಸ್ಥಳೀಯ ಅಮೆರಿಕನ್‌ ಗುಂಪುಗಳ ಮಧ್ಯೆ ವ್ಯತ್ಯಾಸ ತೋರಿಸುವುದಿಲ್ಲ. ಸ್ಥಳೀಯ ಅಮೆರಿಕನ್ನರ ಗುರುತು ಐತಿಹಾಸಿಕವಾಗಿ ಕೇವಲ ಜೀವ-ವಿಜ್ಞಾನವನ್ನು ಮಾತ್ರವಲ್ಲದೆ ಸಂಸ್ಕೃತಿಯನ್ನೂ ಆಧರಿಸಿದೆ. ದಿ ಇಂಡೀಜಿನಸ್ ಪೀಪಲ್ಸ್ ಕೌನ್ಸಿಲ್ ಆನ್ ಬಯೊಕೊಲೊನಿಯಲಿಸಮ್ (IPCB) ಹೀಗೆಂದು ಸೂಚಿಸುತ್ತದೆ:

"ಸ್ಥಳೀಯ ಅಮೆರಿಕನ್‌ ಗುರುತುಗಳು" ಕೇವಲ ಸ್ಥಳೀಯ ಅಮೆರಿಕನ್ನರಲ್ಲಿ ಮಾತ್ರ ಕಂಡುಬರುವುದಿಲ್ಲ. ಅವು ಹೆಚ್ಚಾಗಿ ಸ್ಥಳೀಯ ಅಮೆರಿಕನ್ನರಲ್ಲಿ ಕಂಡುಬರುವುದು ಮಾತ್ರವಲ್ಲದೆ ಪ್ರಪಂಚದ ಇತರ ಭಾಗಗಳ ಜನರಲ್ಲೂ ಕಂಡುಬರುತ್ತವೆ.[೧೯೭]

ತಳಿವಿಜ್ಞಾನಿಗಳೂ ಹೀಗೆಂದು ಹೇಳುತ್ತಾರೆ:

ಸಿಡುಬು ಮೊದಲಾದ ಕಾಯಿಲೆಗಳಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದರಿಂದ ಎಲ್ಲಾ ಸ್ಥಳೀಯ ಅಮೆರಿಕನ್ನರನ್ನು ಪರೀಕ್ಷಿಸಲಾಗಿಲ್ಲ. ತಾಯಿಯ ಅಥವಾ ತಂದೆಯ ವಂಶಜರು ಸ್ಥಳೀಯೇತರ ಅಮೆರಿಕನ್ನರನ್ನು ಒಳಗೊಂಡಿಲ್ಲದಿದ್ದರೂ ಸ್ಥಳೀಯ ಅಮೆರಿಕನ್ನರು ಮಾತ್ರ ಅವರು ಗುರುತಿಸಿದ ಆನುವಂಶಿಕ ಗುರುತುಗಳನ್ನು ಹೊಂದಿದ್ದಾರೆ ಎಂಬುದು ಅಸಂಭವವಾಗಿದೆ‌.[೧೮೯][೧೯೨]

ಬುಡಕಟ್ಟು ಜನಾಂಗಗಳಿಂದ ಸೇವೆಯನ್ನು ಪಡೆಯಲು, ಸ್ಥಳೀಯ ಅಮೆರಿಕನ್ನರು ಮಾನ್ಯತೆ ಪಡೆದ ಬುಡಕಟ್ಟು ಸಂಘಟನೆಗೆ ಸೇರಿರಬೇಕು ಮತ್ತು ದೃಢೀಕರಣವಾಗಿರಬೇಕು. ಪ್ರತಿಯೊಂದು ಬುಡಕಟ್ಟು ಸರ್ಕಾರವು ನಾಗರಿಕರಿಗೆ ಅಥವಾ ಬುಡಕಟ್ಟು ಜನಾಂಗದ ಸದಸ್ಯರಿಗೆ ಅದರದೇ ಆದ ಸ್ವಂತ ನಿಯಮಗಳನ್ನು ವಿಧಿಸುತ್ತದೆ. ಫೆಡರಲ್ ಸರ್ಕಾರವು ಅಂಗೀಕೃತ ಸ್ಥಳೀಯ ಅಮೆರಿಕನ್ನರಿಗೆ ಲಭ್ಯವಿರುವ ಸೇವೆಗಳಿಗೆ ಸಂಬಂಧಿಸಿದ ಪ್ರಮಾಣಕಗಳನ್ನು ಹೊಂದಿದೆ. ಉದಾಹರಣೆಗೆ, ಸ್ಥಳೀಯ ಅಮೆರಿಕನ್ನರು ಫೆಡರಲ್ ವಿದ್ಯಾರ್ಥಿವೇತನವನ್ನು ಪಡೆಯಬೇಕಾದರೆ ಆ ವಿದ್ಯಾರ್ಥಿಯು ಫೆಡರಲ್ ಸರ್ಕಾರದಿಂದ ಮಾನ್ಯತೆ ಪಡೆದ ಬುಡಕಟ್ಟು ಜನಾಂಗಕ್ಕೆ ಸೇರಿದವನಾಗಿರಬೇಕು ಮತ್ತು ಕನಿಷ್ಠ ಕಾಲು ಭಾಗ ಸ್ಥಳೀಯ ಅಮೆರಿಕನ್‌ ಸಂತತಿಯನ್ನು (ಒಬ್ಬ ಮುತ್ತಜ್ಜ/ಮುತ್ತಜ್ಜಿಗೆ ಸಮನಾದ) ಹೊಂದಿರಬೇಕು, ಅದು ಇಂಡಿಯನ್ ಬ್ಲಡ್ ಕಾರ್ಡ್‌ನ ಡಿಗ್ರಿ ಪ್ರಮಾಣಪತ್ರ(ಸ್ಥಳೀಯ ಅಮೆರಿಕನ್ ರಕ್ತದ ಗುಂಪನ್ನು ಹಂಚಿಕೊಂಡ ದಾಖಲೆ)ದಿಂದ ದೃಢೀಕರಿಸಲ್ಪಟ್ಟಿರಬೇಕು. ಬುಡಕಟ್ಟು ಜನಾಂಗಗಳಲ್ಲಿ, ಅರ್ಹತೆಯು ಮಾನ್ಯತೆಯನ್ನು ಕೋರುವ ವ್ಯಕ್ತಿಯಲ್ಲಿ ಅವಶ್ಯಕ ಪ್ರತಿಶತದಷ್ಟು ಸ್ಥಳೀಯ ಅಮೆರಿಕನ್‌ "ರಕ್ತದಗುಂಪನ್ನು" ಅಥವಾ "ರಕ್ತ ಪರಿಮಾಣ"ವನ್ನು ಆಧರಿಸಿರಬಹುದು.ಖಚಿತತೆಯನ್ನು ಕಾಪಾಡಲು, ಕೆಲವು ಬುಡಕಟ್ಟು ಜನಾಂಗಗಳು ವಂಶಪರಂಪರೆಯ DNA ಪರೀಕ್ಷೆಯ ಅಗತ್ಯವಿದೆಯೆಂದು ಹೇಳಲು ಆರಂಭಿಸಿವೆ. ಆದರೆ ಇದು ಸಾಮಾನ್ಯವಾಗಿ ದೃಢೀಕೃತ ಸದಸ್ಯರಿಂದ ವಂಶ ಅಥವಾ ನೇರ ಪೀಳಿಗೆಯನ್ನು ಸಾಬೀತು ಮಾಡುವುದಕ್ಕೆ ಸಂಬಂಧಿಸಿದೆ.[೧೯೮] ಬುಡಕಟ್ಟು ಜನಾಂಗದ ಸದಸ್ಯತ್ವದ ಅಗತ್ಯತೆಗಳು ವ್ಯಾಪಕವಾಗಿ ಬುಡಕಟ್ಟಿನಿಂದ ಬುಡಕಟ್ಟಿಗೆ ವ್ಯತ್ಯಾಸಗೊಳ್ಳುತ್ತದೆ. ಚೆರೋಕೀ ಜನಾಂಗಕ್ಕೆ ಆರಂಭಿಕ 1906ರ ಡ್ಯಾವೆಸ್ ರೋಲ್ಸ್‌ನಲ್ಲಿ ಪಟ್ಟಿಮಾಡಲಾದ ಸ್ಥಳೀಯ ಅಮೆರಿಕನ್ನರ ವಂಶಪರಂಪರೆಯ ಸಂತತಿಯ ಪ್ರಮಾಣೀಕೃತ ದಾಖಲೆ ಅಗತ್ಯವಿರುತ್ತದೆ. ಬಹು ಬುಡಕಟ್ಟುಗಳಿಂದ ವಂಶಪರಂಪರೆಯನ್ನು ಹೊಂದಿರುವ ಸದಸ್ಯರನ್ನು ಅಂಗೀಕರಿಸುವುದಕ್ಕೆ ಸಂಬಂಧಿಸಿದ ಬುಡಕಟ್ಟು ಜನಾಂಗದ ನಿಯಮಗಳು ವೈವಿಧ್ಯಮಯವಾಗಿವೆ ಮತ್ತು ಸಂಕೀರ್ಣವಾಗಿವೆ.ಬುಡಕಟ್ಟು ಜನಾಂಗದ ಸದಸ್ಯತ್ವದ ಸಂಘರ್ಷಗಳು ಅಸಂಖ್ಯಾತ ಕಾನೂನಿನ ವಿವಾದಗಳು, ನ್ಯಾಯಾಲಯ ಕೇಸುಗಳು ಮತ್ತು ತೀವ್ರವಾದಿ ಗುಂಪುಗಳ ರಚನೆಗೆ ಕಾರಣವಾದವು. ಇದಕ್ಕೆ ಒಂದು ಉದಾಹರಣೆಯೆಂದರೆ ಚೆರೋಕೀ ಮುಕ್ತ ಗುಲಾಮರು. ಇಂದು ಅವರಲ್ಲಿ ಚೆರೋಕೀಯರಿಂದ ಗುಲಾಮಗಿರಿಗೆ ಒಳಪಟ್ಟ ಆಫ್ರಿಕನ್‌ ಅಮೆರಿಕನ್ನರ ಸಂತತಿಯವರನ್ನು ಒಳಗೊಂಡಿದ್ದಾರೆ.ಅಂತರ್ಯುದ್ಧದ ನಂತರ ಐತಿಹಾಸಿಕ ಚೆರೋಕೀ ರಾಷ್ಟ್ರದಲ್ಲಿ ಮುಕ್ತ ಗುಲಾಮರೆಂದು ಪೌರತ್ವವನ್ನು ಫೆಡರಲ್ ಒಪ್ಪಂದದ ಮೂಲಕ ಅವರಿಗೆ ನೀಡಲಾಗಿತ್ತು. 1980ರ ದಶಕದ ಆರಂಭದಲ್ಲಿ ಆಧುನಿಕ ಚೆರೋಕೀ ರಾಷ್ಟ್ರವು ಡ್ಯಾವೆಸ್ ರೋಲ್ಸ್‌ನಲ್ಲಿ ಪಟ್ಟಿಮಾಡಲಾದ ಚೆರೋಕೀ ಸ್ಥಳೀಯ ಅಮೆರಿಕನ್ನರ(ಕೇವಲ ಗುಲಾಮಗಿರಿಯಿಂದ ಮುಕ್ತರಾಗುವುದಲ್ಲ) ಸಂತತಿಗೆ ಸೇರಿದವರೆಂದು ದೃಢಪಡಿಸಲು ಸಾಧ್ಯವಾಗದಿದ್ದರೆ, ಅವರನ್ನು ಪೌರತ್ವದಿಂದ ಹೊರಗಿಡಲಾಗಿತ್ತು.20ನೇ ಶತಮಾನದಲ್ಲಿ, ಹೆಚ್ಚಿನ ಸಂಖ್ಯೆಯ ಬಿಳಿಯ-ಅಮೆರಿಕನ್ನರು ಸ್ಥಳೀಯ ಅಮೆರಿಕನ್ನರ ಸಂತತಿಯನ್ನು ಹೊಂದಿರುವುದಾಗಿ ಪ್ರತಿಪಾದಿಸಲು ಹೆಚ್ಚು ಆಸಕ್ತಿ ತೋರಿಸಿದರು. ಹೆಚ್ಚಿನವರು ಚೆರೋಕೀಗಳ ಸಂತತಿಯನ್ನು ಹೊಂದಿರುವುದಾಗಿ ಪ್ರತಿಪಾದಿಸಿದರು.[೧೯೯]

ಪರಿಸರಶಾಸ್ತ್ರಜ್ಞರು, ದೇಶಭ್ರಷ್ಟರು ಮತ್ತು ಅನಾಥರ ಆಶ್ರಯದಾತ ಕ್ಯಾಟೆರಿ ಟೆಕಾಕ್ವಿತಾ ರೋಮನ್ ಕ್ಯಾಥೋಲಿಕ್ ಚರ್ಚ್‌ನಿಂದ ಪರಮಪದ ಮತ್ತು ಸಂತಪದವಿಯನ್ನು ಪಡೆದರು.
ಮಿಶಿಕಿನಾಕ್ವ ("ಸಣ್ಣ ಕಡಲಾಮೆ")ನ ಸೈನ್ಯಗಳು 1791ರ ವಾಬಾಶ್ ಯುದ್ಧದಲ್ಲಿ ಸುಮಾರು 1000 U.ಸ ಸೇನೆಯ ಸೈನಿಕರಿಂದ ಕೂಡಿದ ಅಮೆರಿಕನ್‌ ಸೈನ್ಯವನ್ನು ಸೋಲಿಸಿತು ಮತ್ತು ಇತರ ಸಾವುನೋವುಗಳನ್ನು ಉಂಟುಮಾಡಿತು.
ಚಾರ್ಲ್ಸ್ ಈಸ್ಟ್‌ಮ್ಯಾನ್ ಪಾಶ್ಚಿಮಾತ್ಯ ವೈದ್ಯರಾದ ಮೊದಲ ಸ್ಥಳೀಯ ಅಮೆರಿಕನ್ನರಾಗಿದ್ದಾರೆ.[೨೦೦][೨೦೧]

ಜನಸಂಖ್ಯೆ

2006ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ 0.8 ಪ್ರತಿಶತದಷ್ಟು ಜನರು ಅಮೆರಿಕನ್‌ ಇಂಡಿಯನ್‌ ಅಥವಾ ಅಲಾಸ್ಕಾ ಸ್ಥಳೀಯ ಸಂತತಿಯೆಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಗಣತಿ ವಿಭಾಗವು ಅಂದಾಜಿಸಿದೆ. ಈ ಜನಸಂಖ್ಯೆಯು ರಾಷ್ಟ್ರದಾದ್ಯಂತ ಸರಿಸಮಾನವಾಗಿಲ್ಲದೆ ಹಂಚಿಕೆಯಾಗಿದೆ.[೨೦೨] 2006ರ ಅಂದಾಜುಗಳ ಆಧಾರದಲ್ಲಿ, ಎಲ್ಲಾ 50 ರಾಜ್ಯಗಳು ಮಾತ್ರವಲ್ಲದೆ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಪೋರ್ಟೊ ರಿಕೊ ಮೊದಲಾದವನ್ನು ಅಮೆರಿಕನ್‌ ಇಂಡಿಯನ್‌ ಅಥವಾ ಅಲಾಸ್ಕಾ ಸ್ಥಳೀಯ ಪೀಳಿಗೆಯಿಂದ ಉಲ್ಲೇಖಿಸಲಾದ ನಿವಾಸಿಗಳ ಅನುಪಾತದಿಂದ ಕೆಳಗಿನಂತೆ ಪಟ್ಟಿಮಾಡಲಾಯಿತು:

ಅಲಾಸ್ಕಾ-13.1% 101,352
ನ್ಯೂಮೆಕ್ಸಿಕೊ-9.7% 165,944
ದಕ್ಷಿಣ ಡಕೋಟ – 8.6% 60,358
ಒಕ್ಲಹೋಮ – 6.8% 262,581
ಮೋಂಟಾನ – 6.3% 57,225
ಉತ್ತರ ಡಕೋಟ – 5.2% 30,552
ಅರಿಜೋನ – 4.5% 261,168
ವ್ಯೋಮಿಂಗ್ – 2.2% 10,867
ಒರೆಗನ್ – 1.8% 45,633
ವಾಷಿಂಗ್ಟನ್ – 1.5% 104,819
ನೇವಾಡ – 1.2%
ಇಡಾಹೊ – 1.1%
ಉತ್ತರ ಕ್ಯಾರೋಲಿನ – 1.1%
ಉತಾಹ್ – 1.1%
ಮಿನ್ನೆಸೊಟ – 1.0%
ಕೊಲೊರಾಡೊ – 0.9%
ಕ್ಯಾನ್ಸಾಸ್ – 0.9%
ನೆಬ್ರಾಸ್ಕ – 0.9%
ವಿಸ್ಕೋನ್ಸಿನ್ – 0.9%
ಅರ್ಕಾನ್ಸಸ್ – 0.8%
ಕ್ಯಾಲಿಫೋರ್ನಿಯಾ 0.7%
ಲೂಯಿಸಿಯಾನ – 0.6%
ಮೈನ್ – 0.5%
ಮಿಚಿಗನ್ – 0.5%
ಟೆಕ್ಸಾಸ್ – 0.5%
ಅಲಬಾಮ – 0.4%
ಮಿಸಿಸಿಪ್ಪಿ – 0.4%
ಮಿಸ್ಸೌರಿ – 0.4%
ರೋಡೆ ದ್ವೀಪ – 0.4%
ವರ್ಮಂಟ್ – 0.4%
ಪ್ಲೋರಿಡಾ – 0.3%
ಡೆಲಾವೇರ್ – 0.3%
ಹವಾಯಿ – 0.3%
ಅಯೋವ – 0.3%
ನ್ಯೂಯಾರ್ಕ್ - 0.3%
ದಕ್ಷಿಣ ಕ್ಯಾರೊಲಿನಾ – 0.3%
ಟೆನ್ನೆಸ್ಸೀ – 0.3%
ಜಾರ್ಜಿಯಾ – 0.2%
ವರ್ಜಿನಿಯಾ – 0.2%
ಕನೆಕ್ಟಿಕಟ್ – 0.2%
ಇಲಿನಾಯ್ಸ್ – 0.2%
ಇಂಡಿಯಾನ – 0.2%
ಕೆಂಟುಕಿ – 0.2%
ಮೆರಿಲ್ಯಾಂಡ್ – 0.2%
ಮಸ್ಸಾಚ್ಯುಸೆಟ್ಸ್ – 0.2%
ನ್ಯೂಹ್ಯಾಂಪ್ಶೈರ್ – 0.2%
ನ್ಯೂ ಜೆರ್ಸಿ - 0.2%
ಓಹಿಯೊ – 0.2%
ಪಶ್ಚಿಮ ವರ್ಜಿನಿಯಾ – 0.2%
ಪೆನ್ನಿಸಿಲ್ವೇನಿಯಾ – 0.1%
ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ – 0.3%
ಪೋರ್ಟೊ ರಿಕೊ – 0.2%

2006ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಒಟ್ಟು ಜನಸಂಖ್ಯೆಯ ಸುಮಾರು 1.0 ಪ್ರತಿಶತಕ್ಕಿಂತಲೂ ಕಡಿಮೆ ಜನರು ಸ್ಥಳೀಯ ಹವಾಯಿಯನ್ ಅಥವಾ ಪೆಸಿಫಿಕ್ ದ್ವೀಪದವರ ಸಂತತಿಯವರಾಗಿದ್ದಾರೆಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಗಣತಿ ವಿಭಾಗವು ಅಂದಾಜಿಸಿದೆ. ಈ ಜನಸಂಖ್ಯೆಯು 26 ರಾಜ್ಯಗಳಾದ್ಯಂತ ಅಸಮಾನವಾಗಿ ಹರಡಿಕೊಂಡಿದ್ದಾರೆ.[೨೦೨] ಕನಿಷ್ಠ 0.1%ಅನ್ನು ಹೊಂದಿರುವ 26 ರಾಜ್ಯಗಳನ್ನು ಕೆಳಗೆ ಸೂಚಿಸಲಾಗಿದೆ. ಅವನ್ನು 2006ರ ಅಂದಾಜುಗಳ ಆಧಾರದಲ್ಲಿ ಸ್ಥಳೀಯ ಹವಾಯಿಯನ್ ಅಥವಾ ಪೆಸಿಫಿಕ್ ದ್ವೀಪದವರ ಪೀಳಿಗೆಯನ್ನು ಹೊಂದಿರುವ ನಿವಾಸಿಗಳ ಅನುಪಾತದಿಂದ ಪಟ್ಟಿಮಾಡಲಾಗಿದೆ:

ಹವಾಯಿ – 8.7
ಉತಾಹ್ – 0.7
ಅಲಾಸ್ಕಾ – 0.6
ಕ್ಯಾಲಿಫೋರ್ನಿಯಾ – 0.4
ನೇವಾಡಾ – 0.4
ವಾಷಿಂಗ್ಟನ್ – 0.4
ಅರಿಜೋನ – 0.2
ಒರೆಗನ್ – 0.2
ಅಲಬಾಮ – 0.1
ಅರ್ಕ್ಯಾನ್ಸಸ್ – 0.1
ಕೊಲೊರಾಡೊ – 0.1
ಫ್ಲೋರಿಡಾ – 0.1
ಇದಾಹೊ – 0.1
ಕೆಂಟುಕಿ – 0.1
ಮೇರಿಲ್ಯಾಂಡ್ – 0.1
ಮಸ್ಸಾಚ್ಯುಸೆಟ್ಸ್ – 0.1
ಮಿಸ್ಸೌರಿ – 0.1
ಮೊಂಟಾನ – 0.1
ನ್ಯೂಮೆಕ್ಸಿಕೊ – 0.1
ಉತ್ತರ ಕ್ಯಾರೊಲಿನಾ – 0.1
ಒಕ್ಲಹೋಮ – 0.1
ದಕ್ಷಿಣ ಕ್ಯಾರೊಲಿನಾ – 0.1
ಟೆಕ್ಸಾಸ್ – 0.1
ವರ್ಜಿನಿಯಾ – 0.1
ಪಶ್ಚಿಮ ವರ್ಜಿನಿಯಾ – 0.1
ವ್ಯೋಮಿಂಗ್ – 0.1

ಜನಸಂಖ್ಯಾ ವಿತರಣೆ

ಆಯ್ದ ಬುಡಕಟ್ಟು-ಜನಾಂಗಗಳ ವರ್ಗೀಕರಣ:2000[೨೦೩]

ಬುಡಕಟ್ಟು-ಜನಾಂಗಗಳ ವರ್ಗೀಕರಣಅಮೆರಿಕನ್‌ ಮತ್ತು ಅಲಾಸ್ಕಾ ಸ್ಥಳೀಯರು ಮಾತ್ರಅಮೆರಿಕನ್‌ ಮತ್ತು ಅಲಾಸ್ಕಾ ಸ್ಥಳೀಯರು ಮಾತ್ರಒಂದು ಅಥವಾ ಅದಕ್ಕಿಂತ ಹೆಚ್ಚು ಜನಾಂಗಗಳೊಂದಿಗೆ ಜತೆಗೂಡಿರುವ ಅಮೆರಿಕನ್‌-ಇಂಡಿಯನ್‌ ಮತ್ತು ಅಲಾಸ್ಕಾ ಸ್ಥಳೀಯರುಒಂದು ಅಥವಾ ಅದಕ್ಕಿಂತ ಹೆಚ್ಚು ಜನಾಂಗಗಳೊಂದಿಗೆ ಜತೆಗೂಡಿರುವ ಅಮೆರಿಕನ್‌-ಇಂಡಿಯನ್‌ ಮತ್ತು ಅಲಾಸ್ಕಾ ಸ್ಥಳೀಯರುಅಮೆರಿಕನ್‌ ಇಂಡಿಯನ್‌ ಮತ್ತು ಅಲಾಸ್ಕಾ ಸ್ಥಳೀಯ ಬುಡಕಟ್ಟು ಜನಾಂಗಗಳ ಏಕೈಕ ವರ್ಗೀಕರಣ ಅಥವಾ ಯಾವುದಾದರೂ ಸಂಯೋಗ
ಬುಡಕಟ್ಟು-ಜನಾಂಗಗಳ ವರ್ಗೀಕರಣಒಂದು ಬುಡಕಟ್ಟು-ಜನಾಂಗದ ವರ್ಗೀಕರಣ ವರದಿಯಾಗಿದೆಒಂದಕ್ಕಿಂತ ಹೆಚ್ಚು ಬುಡಕಟ್ಟು ಜನಾಂಗಗಳ ವರ್ಗೀಕರಣ ವರದಿಯಾಗಿದೆಒಂದು ಬುಡಕಟ್ಟು-ಜನಾಂಗದ ವರ್ಗೀಕರಣ ವರದಿಯಾಗಿದೆಒಂದಕ್ಕಿಂತ ಹೆಚ್ಚು ಬುಡಕಟ್ಟು-ಜನಾಂಗದ ವರ್ಗೀಕರಣ ವರದಿಯಾಗಿದೆ
ಒಟ್ಟು2,423,53152,4251,585,39657,9494,119,301
ಅಪೇಕ್57,0607,91724,9476,90996,833
ಬ್ಲ್ಯಾಕ್‌ಫೀಟ್27,1044,35841,38912,89985,750
ಚೆರೋಕೀ281,06918,793390,90238,769729,533
ಚೆಯೆನ್ನೆ11,1911,3654,65599318,204
ಚಿಕಸಾವ್20,8873,01412,0252,42538,351
ಚಿಪ್ಪೇವ105,9072,73038,6352,397149,669
ಚೊಕ್ಟಾವ್87,3499,55250,12311,750158,774
ಕೊಲ್ವಿಲ್ಲೆ7,8331931,308599,393
ಕೊಮ್ಯಾಂಚ್10,1201,5686,1201,56819,376
ಕ್ರೀ2,4887243,5779457,734
ಕ್ರೀಕ್40,2235,49521,6523,94071,310
ಕ್ರೊ9,1175742,81289113,394
ಡೆಲಾವೇರ್8,3046026,86656916,341
ಹೌಮ6,798791,794428,713
ಇರಾಕಿಯಾಸ್‌45,2122,31829,7633,52980,822
ಕಿಯೋವ8,5591,1302,11943412,242
ಲ್ಯಾಟಿನ್ ಅಮೆರಿಕನ್‌ ಇಂಡಿಯನ್‌104,3541,85073,0421,694180,940
ಲುಂಬೀ51,9136424,93437957,868
ಮೆನೊಮಿನೀ7,8832581,5511489,840
ನವಾಜೊ269,2026,78919,4912,715298,197
ಒಸೇಗ್7,6581,3545,4911,39415,897
ಒಟ್ಟಾವಾ6,4326233,17444810,677
ಪೈಯುಟೆ9,7051,1632,31534913,532
ಪಿಮಾ8,5199991,74123411,493
ಪೊಟಾವಟೋಮಿ15,8175928,60258425,595
ಪ್ಯುಯೆಲ್ಬೊ59,5333,5279,9431,08274,085
ಪುಗೆಟ್ ಸೌಂಡ್ ಸ್ಯಾಲಿಶ್11,0342263,21215914,631
ಸೆಮಿನೋಲ್12,4312,9829,5052,51327,431
ಶೊಶೋನ್7,7397143,03953412,026
ಸಿಯೋಕ್ಸ್108,2724,79435,1795,115153,360
ಟೊಹೋನೊ ಓಡ್ಹ್ಯಾಮ್17,4667141,74815920,087
ಉಟೆ7,3097151,94441710,385
ಯಕಾಮ8,4815611,61919010,851
ಯಾಕ್ಯು15,2241,2455,18475922,412
ಯುಮ್ಯಾನ್7,2955261,0511048,976
ಇತರ ನಮೂದಿತ ಅಮೆರಿಕನ್‌ ಇಂಡಿಯನ್‌ ಬುಡಕಟ್ಟು ಜನಾಂಗಗಳು240,5219,468100,3467,323357,658
ನಮೂದಿಸಿರದ ಅಮೆರಿಕನ್‌ ಇಂಡಿಯನ್‌ ಬುಡಕಟ್ಟು ಜನಾಂಗ109,6445786,17328195,902
ಅಲಾಸ್ಕಾ ಅತಬ್ಯಾಸ್ಕನ್14,5208153,21828518,838
ಅಲ್ಯುಟ್11,9418323,85035516,978
ಎಸ್ಕಿಮೊ45,9191,4186,91950554,761
ಟ್ಲಿಂಗಿಟ್-ಹೈಡ14,8251,0596,04743422,365
ಇತರ ನಮೂದಿಸಿದ ಅಲಾಸ್ಕಾ ಸ್ಥಳೀಯ ಬುಡಕಟ್ಟು ಜನಾಂಗಗಳು2,5524358411453,973
ನಮೂದಿಸಿಲ್ಲದ ಅಲಾಸ್ಕಾ ಸ್ಥಳೀಯ ಬುಡಕಟ್ಟು ಜನಾಂಗ6,1613702,0531188,702
ನಮೂದಿಸಿರದ ಅಮೆರಿಕನ್‌ ಇಂಡಿಯನ್‌ ಅಥವಾ ಅಲಾಸ್ಕಾ ಸ್ಥಳೀಯ ಬುಡಕಟ್ಟು-ಜನಾಂಗಗಳು511,960(X)544,497(X)1,056,457

ತಳಿವಿಜ್ಞಾನ

A genetic tree of 18 world human groups by a neighbour-joining autosomal relationships.

ಅಮೆರಿಕಾದ ಸ್ಥಳೀಯ ಜನರ ಆನುವಂಶಿಕ ಇತಿಹಾಸವು ಮುಖ್ಯವಾಗಿ ಮಾನವರ Y-ಕ್ರೋಮೊಸೋಮ್ DNA ಹ್ಯಾಪ್ಲೊಗ್ರೂಪ್‌ಗಳು ಮತ್ತು ಮಾನವರ ಮೈಟೊಕಾಂಡ್ರಿಯಲ್ DNA ಹ್ಯಾಪ್ಲೊಗ್ರೂಪ್‍‌ಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. "Y-DNA" ತಂದೆಯಿಂದ ಮಗನಿಗೆ ಕೇವಲ ಪಿತೃವಂಶಕ್ರಮದೊಂದಿಗೆ ಮಾತ್ರ ಸಾಗುತ್ತದೆ. ಅದೇ "mtDNA" ಮಾತೃವಂಶಕ್ರಮದೊಂದಿಗೆ ತಾಯಿಯಿಂದ ಎರಡೂ ಲಿಂಗಗಳ ಮಕ್ಕಳಿಗೆ ಸಾಗುತ್ತದೆ. ಅವು ಮರುಸಂಯೋಗಹೊಂದುವುದಿಲ್ಲ ಹಾಗೂ ಆದ್ದರಿಂದ Y-DNA ಮತ್ತು mtDNA ತಂದೆ ಯಾ ತಾಯಿಯ ಆನುವಂಶಿಕ ಅಂಶದ ಅಂತರಮಿಶ್ರಣವಿಲ್ಲದೆ ಪ್ರತಿ ಪೀಳಿಗೆಯಲ್ಲಿ ಅನಿರೀಕ್ಷಿತ ಹೊಸಪರಿವರ್ತನೆಯಿಂದ ಮಾತ್ರ ಬದಲಾವಣೆಗೊಳ್ಳುತ್ತದೆ.[೨೦೪] ಅಲಿಂಗ ಕ್ರೋಮೊಸೋಮ್ "atDNA" ಗುರುತುಗಳನ್ನೂ ಬಳಸಲಾಗುತ್ತದೆ, ಆದರೆ mtDNA ಅಥವಾ Y-DNAಗಿಂತ ವ್ಯತ್ಯಾಸದಿಂದ ಕೂಡಿರುತ್ತವೆ, ಇದರಲ್ಲಿ ಅವು ಗಮನಾರ್ಹವಾಗಿ ಒಂದರ ಮೇಲೊಂದು ಪ್ರಸರಿಸುತ್ತವೆ.[೨೦೫] AtDNAಅನ್ನು ಸಾಮಾನ್ಯವಾಗಿ ಇಡೀ ಮಾನವನ ಜೀನೋಮ್ ಮತ್ತು ಸಂಬಂಧಿತ ಪ್ರತ್ಯೇಕ ಜನಸಂಖ್ಯೆಗಳಲ್ಲಿರುವ ಪೀಳಿಗೆಯ ಆನುವಂಶಿಕ ಮಿಶ್ರಣದ ಭೂಖಂಡದ ಸರಾಸರಿಯನ್ನು ಅಳೆಯಲು ಬಳಸಲಾಗುತ್ತದೆ.[೨೦೫]ಆನುವಂಶಿಕ ವಿನ್ಯಾಸವು ಸ್ಥಳೀಯ ಅಮೆರಿಕನ್ನರು ಎರಡು ವಿಭಿನ್ನ ಆನುವಂಶಿಕ ಘಟನೆಗಳನ್ನು ಅನುಭವಿಸಿದ್ದಾರೆಂದು ಸೂಚಿಸುತ್ತದೆ; ಮೊದಲನೆಯದು ಅಮೆರಿಕಾದ ಆರಂಭಿಕ-ಜನರೊಂದಿಗೆ ಮತ್ತು ಎರಡನೆಯದು ಅಮೆರಿಕಾದ ಯುರೋಪಿಯನ್‌ ವಸಾಹತುಗಾರಿಕೆಯೊಂದಿಗೆ.[೧೫][೨೦೬][೨೦೭] ಅಮೆರಿಕಾದ ಆರಂಭಿಕ-ಜನರೊಂದಿಗಿನ ಘಟನೆಯು ಅನೇಕ ಜೀನ್ ವಂಶ ಪರಂಪರೆ, ಜೈಗೊಸಿಟಿ(ಜೀವಿಯ ಲಕ್ಷಣದಲ್ಲಿ ಜೀನ್‌ಗಳ ಸಾಮ್ಯತೆ) ಹೊಸ-ಪರಿವರ್ತನೆ ಮತ್ತು ಇಂದಿನ ಸ್ಥಳೀಯ ಅಮೆರಿಂಡಿಯನ್ ಜನರಲ್ಲಿರುವ ಹ್ಯಾಪ್ಲೊಟೈಪ್‌ಗಳ ಕಂಡುಬರುವಿಕೆಗೆ ನಿರ್ಣಾಯಕ ಅಂಶವಾಗಿದೆ.[೨೦೬]ನವ ಜಗತ್ತಿನ ಮಾನವರ ನೆಲೆಯು ಬೆರಿಂಗ್ ಸಮುದ್ರದ ಕರಾವಳಿಯಿಂದ ಹಂತಗಳಲ್ಲಿ ಉಂಟಾಯಿತು. ಆರಂಭಿಕ 15,000ದಿಂದ 20,000-ವರ್ಷದ ಬಿಡುವಿನಲ್ಲಿ ಬೆರಿಂಜಿಯಾದಲ್ಲಿ ಸಣ್ಣ ಪ್ರಮಾಣದ ಜನಸಂಖ್ಯೆಯು ಅಸ್ತಿತ್ವದಲ್ಲಿತ್ತು.[೧೫][೨೦೮][೨೦೯] ಮೈಕ್ರೋ-ಸ್ಯಾಟಲೈಟ್(ಸರಳ ಅನುಕ್ರಮ ಪುನರಾವರ್ತನೆಗಳು) ವೈವಿಧ್ಯತೆ ಮತ್ತು ದಕ್ಷಿಣ ಅಮೆರಿಕಾಕ್ಕೆ ನಿರ್ದಿಷ್ಟಪಡಿಸಿದ Y ವಂಶ-ಪರಂಪರೆಯ ಹಂಚಿಕೆಗಳು, ಆ ಪ್ರದೇಶದ ಆರಂಭಿಕ ವಸಾಹತುಗಾರಿಕೆಯಿಂದಾಗಿ ಕೆಲವು ಅಮೆರಿಂಡಿಯನ್ ಜನರು ಪ್ರತ್ಯೇಕವಾದರು ಎಂಬುದನ್ನು ಸೂಚಿಸುತ್ತದೆ.[೨೧೦] ನಾ-ಡೆನೆ, ಇನ್ಯೂಟ್ ಮತ್ತು ಸ್ಥಳೀಯ ಅಲಸ್ಕನ್ ಜನಸಂಖ್ಯೆಗಳು ಹ್ಯಾಪ್ಲೊಗ್ರೂಪ್ Q (Y-DNA) ಹೊಸ-ಪರಿವರ್ತನೆಗಳನ್ನು ತೋರಿಸುತ್ತವೆ. ಆದಾಗ್ಯೂ, ಅವರು ಅನೇಕ mtDNA ಮತ್ತು atDNA ಹೊಸ-ಪರಿವರ್ತನೆಗಳನ್ನು ಹೊಂದಿರುವ ಇತರ ಸ್ಥಳೀಯ ಅಮೆರಿಂಡಿಯನ್ನರಿಂದ ಭಿನ್ನವಾಗಿದ್ದಾರೆ.[೨೧೧][೨೧೨][೨೧೩] ಇದು ಉತ್ತರ ಅಮೆರಿಕಾ ಮತ್ತು ಗ್ರೀನ್‌ಲ್ಯಾಂಡ್ನ ತೀರಾ ಉತ್ತರ ಭಾಗಕ್ಕೆ ಬಂದ ಆರಂಭಿಕ ವಲಸೆಗಾರರನ್ನು ನಂತರ ವಲಸೆ ಬಂದವರು ಶೋಧಸಿದ್ದಾರೆ.[೨೧೪][೨೧೫]

ಇವನ್ನೂ ಗಮನಿಸಿ

ಉಲ್ಲೇಖಗಳು

  • ಆಡಮ್ಸ್, ಡೇವಿಡ್ ವ್ಯಾಲ್ಲೇಸ್. ಎಜುಕೇಶನ್ ಫಾರ್ ಎಕ್ಸ್‌ಟಿಂಕ್ಷನ್: ಅಮೆರಿಕನ್‌ ಇಂಡಿಯನ್ಸ್ ಆಂಡ್ ದಿ ಬೋರ್ಡಿಂಗ್ ಸ್ಕೂಲ್ ಎಕ್ಸ್‌ಪೀರಿಯನ್ಸ್ 1875–1928 , ಯೂನಿವರ್ಸಿಟಿ ಪ್ರೆಸ್ ಆಫ್ ಕನ್ಸಾಸ್, 1975. ISBN 0-7006-0735-8 (hbk); ISBN 0-7006-0838-9 (pbk).
  • ಬೈರ್ಹಾರ್ಸ್ಟ್, ಜಾನ್. ಎ ಕ್ರೈ ಫ್ರಮ್ ದಿ ಅರ್ತ್: ಮ್ಯೂಸಿಕ್ ಆಫ್ ನಾರ್ತ್ ಅಮೆರಿಕನ್ ಇಂಡಿಯನ್ಸ್ . ISBN 0-941270-53-X.
  • ಡೆಲೋರಿಯಾ, ವಿನೆ. 1969. ಕಸ್ಟರ್ ಡೈಡ್ ಫಾರ್ ಯುವರ್ ಸಿನ್ಸ್: ಆನ್ ಇಂಡಿಯನ್‌ ಮ್ಯಾನಿಫೆಸ್ಟೊ. ನ್ಯೂಯಾರ್ಕ್: ಮ್ಯಾಕ್‌ಮಿಲ್ಲನ್.
  • ಎಲೆಕ್ಟ್ರೋನಿಕ್ ಕೋಡ್ ಆಫ್ ಫೆಡರಲ್ ರೆಗ್ಯುಲೇಶನ್ಸ್ (e-CFR), ಟೈಟಲ್ 50: ವೈಲ್ಡ್‌ಲೈಫ್ ಆಂಡ್ ಫಿಶರೀಸ್ ಪಾರ್ಟ್ 22-ಈಗಲ್ ಪರ್ಮಿಟ್ಸ್ "Electronic Code of Federal Regulations:". =Ecfr.gpoaccess.gov. 2007-02-27. Archived from the original on 2007-06-10. Retrieved 2010-08-22.{{cite web}}: CS1 maint: extra punctuation (link)
  • ಹರ್ಸ್ಚ್‌ಫೆಲ್ಡರ್, ಅರ್ಲೆನೆ ಬಿ.; ಬೈಲರ್, ಮೇರಿ ಜಿ.; & ಡೋರಿಸ್, ಮೈಕೆಲ್. ಗೈಡ್ ಟು ರಿಸರ್ಚ್ ಆನ್ ನಾರ್ತ್ ಅಮೆರಿಕನ್‌ ಇಂಡಿಯನ್ಸ್ . ಅಮೆರಿಕನ್‌ ಲೈಬ್ರರಿ ಅಸೋಸಿಯೇಶನ್ (1983). ISBN 0-8389-0353-3.
  • ಜಾನ್ಸ್ಟನ್, ಎರಿಕ್ ಎಫ್. ದಿ ಲೈಫ್ ಆಫ್ ದಿ ನೇಟಿವ್ ಅಮೆರಿಕನ್‌ , ಅಟ್ಲಾಂಟ, GA: ಟ್ರೇಡ್‌ವಿಂಡ್ಸ್ ಪ್ರೆಸ್ (2003).
  • ಜಾನ್ಸ್ಟನ್, ಎರಿಕ್. ದಿ ಲೈಫ್ ಆಫ್ ದಿ ನೇಟಿವ್ . ಫಿಲಡೆಲ್ಫಿಯಾ, PA: ಇ. ಸಿ. ಬಿಡಲ್, ಇತ್ಯಾದಿ. 1836–44. ಯೂನಿವರ್ಸಿಟಿ ಆಫ್ ಜಾರ್ಜಿಯಾ ಲೈಬ್ರರಿ.
  • ಜಾನ್ಸ್, ಪೀಟರ್ ಎನ್. ರೆಸ್ಪೆಕ್ಟ್ ಫಾರ್ ದಿ ಏನ್ಸಿಸ್ಟರ್ಸ್: ಅಮೆರಿಕನ್‌ ಇಂಡಿಯನ್‌ ಕಲ್ಚರಲ್ ಅಫಿಲಿಯೇಶನ್ ಇನ್ ದಿ ಅಮೆರಿಕನ್‌ ವೆಸ್ಟ್ . ಬೌಲ್ಡರ್, CO: ಬಯೂ ಪ್ರೆಸ್ (2005). ISBN 0-9721349-2-1.
  • Kroeber, Alfred L. (1939). Cultural and Natural Areas of Native North America. = University of California Publications in American Archaeology and Ethnology.{{cite book}}: CS1 maint: extra punctuation (link)
  • ನಿಕೋಲ್ಸ್, ರೋಜರ್ ಎಲ್. ಇಂಡಿಯನ್ಸ್ ಇನ್ ದಿ ಯುನೈಟೆಡ್ ಸ್ಟೇಟ್ಸ್ ಆಂಡ್ ಕೆನಡಾ, ಎ ಕಂಪೇರೆಟಿವ್ ಹಿಸ್ಟರಿ . ಯೂನಿವರ್ಸಿಟಿ ಆಫ್ ನೆಬ್ರಾಸ್ಕಾ ಪ್ರೆಸ್ (1998). ISBN 0-8032-8377-6.
  • Pohl, Frances K. (2002). Framing America: A Social History of American Art. New York: =Thames & Hudson. pp. 54–56, 105–106 & 110–111. ISBN 0500237921. Archived from the original on 2007-08-08. Retrieved 2011-02-25.{{cite book}}: CS1 maint: extra punctuation (link)
  • Shanley, Kathryn Winona (2004). "The Paradox of Native American Indian Intellectualism and Literature". Melus. 29.
  • Shanley, Kathryn Winona (1997). "The Indians America Loves to Love and Read: American Indian Identity and Cultural Appropriation". American Indian Quarterly. 21 (4): 675–702. doi:10.2307/1185719. {{cite journal}}: Unknown parameter |month= ignored (help)
  • ಕ್ರೆಚ್, ಶೆಪಾರ್ಡ್. ದಿ ಇಕಲಾಜಿಕಲ್ ಇಂಡಿಯನ್‌: ಮಿತ್ ಆಂಡ್ ಹಿಸ್ಟರಿ , ನ್ಯೂಯಾರ್ಕ್: W.W. ನಾರ್ಟನ್, 1999. 352 ಪುಟ. ISBN 0-393-04755-5
  • Shohat, Ella; Stam, Robert (1994). Unthinking Eurocentrism: Multiculturalism and the Media. New York: = Routledge. ISBN 0415063248.{{cite book}}: CS1 maint: extra punctuation (link)
  • ಸ್ಲೆಟ್ಚರ್, ಮೈಕೆಲ್, "ನಾರ್ತ್ ಅಮೆರಿಕನ್‌ ಇಂಡಿಯನ್ಸ್", ವಿಲ್ ಕಾಫ್‌ಮ್ಯಾನ್ ಮತ್ತು ಹೈಡಿ ಮ್ಯಾಕ್ಫರ್ಸನ್ ಸಂಪಾದಕರು, ಬ್ರಿಟನ್ ಆಂಡ್ ದಿ ಅಮೆರಿಕಾಸ್: ಕಲ್ಚರ್, ಪಾಲಿಟಿಕ್ಸ್ ಆಂಡ್ ಹಿಸ್ಟರಿ , ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 2005, 2 ಸಂಪುಟಗಳು.
  • Snipp, C.M. (1989). American Indians: The first of this land. New York: = Russell Sage Foundation. ISBN 0871548224.{{cite book}}: CS1 maint: extra punctuation (link)
  • ಸ್ಟರ್ಟೆವಂಟ್, ವಿಲಿಯಂ ಸಿ. (ಸಂಪಾದಕರು). ಹ್ಯಾಂಡ್‌ಬುಕ್ ಆಫ್ ನಾರ್ತ್ ಅಮೆರಿಕನ್ ಇಂಡಿಯನ್ಸ್ (ಸಂಪುಟ 1–20). ವಾಷ್ಟಿಂಗ್ಟನ್, ಡಿ.ಸಿ.: ಸ್ಮಿತ್ಸೋನಿಯನ್ ಇನ್‌ಸ್ಟಿಟ್ಯೂಷನ್. (ಸಂಪುಟಗಳು 1–3, 16, 18–20 ಇದುವರೆಗೆ ಪ್ರಕಟವಾಗಿಲ್ಲ), (1978–ಇತ್ತೀಚಿನವರೆಗೆ).
  • ಟಿಲ್ಲರ್, ವೆರೋನಿಕಾ ಇ. (ಸಂಪಾದಕರು). ಡಿಸ್ಕವರ್ ಇಂಡಿಯನ್‌ ರಿಸರ್ವೇಶನ್ಸ್ USA: ಎ ವಿಸಿಟರ್ಸ್ ವೆಲ್ಕಮ್ ಗೈಡ್ . ಫೋರ್‌ವರ್ಡ್ ಬೈ ಬೆನ್ ನೈಟ್‌ಹಾರ್ಸ್ ಕ್ಯಾಂಪ್‌ಬೆಲ್. ಡೆನ್ವರ್, CO: ಕೌನ್ಸಿಲ್ ಪಬ್ಲಿಕೇಷನ್ಸ್, 1992. ISBN 0-9632580-0-1.

ಬಾಹ್ಯ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ