ಅಪ್ಸರಕೊಂಡ

ಆಪ್ಸರ ಕೊಂಡ ಇದು ಹೊನ್ನಾವರ ತಾಲೂಕಿನ ಕಾಸರಕೋಡದಲ್ಲಿದೆ. ಹೊನ್ನಾವರದಿಂದ ಸುಮಾರು ೭ ಕೀ.ಮೀ. ದೂರದಲ್ಲಿರುವ ಈ ಪ್ರದೇಶ ಪ್ರವಾಸಿಗರಿಗರನ್ನು ಆಕರ್ಷಿಸುತ್ತದೆ[೧]

Apsarakonda
ಅಪ್ಸರಕೊಂಡ
ದೇಶ ಭಾರತ
ರಾಜ್ಯಕರ್ನಾಟಕ
ಪ್ರದೇಶಕೆನರಾ
ಜಿಲ್ಲೆಉತ್ತರ ಕನ್ನಡ
ತಾಲೂಕುಹೊನ್ನಾವರ
ಭಾಷೆಗಳು
 • ಅಧಿಕೃತಕನ್ನಡ

ಅಪ್ಸರಕೊಂಡ ಎಂಬುದು ಒಂದು ಪ್ರವಾಸಿತಾಣವಾಗಿದೆ.ಕರ್ನಾಟಕದ ಪಶ್ಚಿಮ ಕರಾವಳಿಯ ಒಂದು ಪ್ರದೇಶವಾದ ಉತ್ತರಕನ್ನಡ ಜಿಲ್ಲೆಹೊನ್ನಾವರ ತಾಲ್ಲೂಕಿನಲ್ಲಿದೆ.ಹೊನ್ನಾವರದಿಂದ ೮ ಕಿ.ಮೀ ದೂರ ಕ್ರಯಿಸಿದರೆ ಸಿಗುವುದೇ ಅಪ್ಸರಕೊಂಡ.[೨]

ವಿಶೇಷತೆಗಳು

* ಜಲಪಾತ* ಉಗ್ರನರಸಿಂಹ ದೇವಸ್ಥಾನ* ಉದ್ಭವ ಗಣಪತಿ ಮೂರ್ತಿ* ರಾಮಚಂದ್ರ ಮಠ  * ಉದ್ಯಾನವನ* ದೇವಿ ದೇಗುಲ                 

ಮಾರ್ಗ ಪರಿಚಯ

ಹೊನ್ನಾವರ ಬಸ್ ನಿಲ್ದಾಣದಿಂದ ೮ಕಿ.ಮೀ ಹೆದ್ದಾರಿಯಲ್ಲಿ ಚಲಿಸಿ, ಮುಂದೆ ೫೦ಮೀ ಮಣ್ಣು ಹಾದಿಯಲ್ಲಿ ಸಾಗಿದರೆ ಉಗ್ರನರಸಿಂಹ ದೇವಸ್ತಾನವು ಎದುರಾಗುತ್ತದೆ. ದೇವಸ್ತಾನದ ಹಿಂಬದಿಯಿಂದ ಸಾಗಿದರೆ ನೋಡಬೇಕಾದ ಸ್ಥಳಗಳು ಕಾಣಸಿಗುತ್ತವೆ. ಉಳಿದುಕೊಳ್ಳಲು ಹೋಟೇಲಿನ ವ್ಯವಸ್ಥೆಯಿದೆ. ಅಕ್ಟೋಬರ್ ನಿಂದ ಮಾರ್ಚವರೆಗೆ ಜಲಪಾತದಲ್ಲಿ ನೀರಿರುತ್ತದೆ. ಉದ್ಯಾನವನಕ್ಕೆ ಭೇಟಿಕೊಡಲು ಬೆಳಿಗ್ಗೆ ೮ ರಿಂದ ಸಂಜೆ ೪ರ ವರೆಗೆ ಅವಕಾಶವಿದೆ. ವಾರದ ಎಲ್ಲಾ ದಿನವೂ ತೆರೆದಿರುತ್ತದೆ.


ಜಲಪಾತ

ದೇವಸ್ತಾನದ ಹಿಂಬದಿಯಿಂದ ಸಾಗಿ ಮೆಟ್ಟಿಲುಗಳನ್ನು ಇಳಿದರೆ ಜಲಪಾತ ಕಾಣುತ್ತದೆ. ಚಿಕ್ಕದಾಗಿ ಒಂದೇ ಧಾರೆಯಲ್ಲಿ ನೀರು ಹರಿಯುತ್ತಿರುತ್ತದೆ. ಈ ಜಲಪಾತವು ೮-೧೦ ಮೀಟರ್ ಎತ್ತರದಿಂದ ಧುಮುಕುತ್ತದೆ. ನೀರಿನ ಭರದಿಂದಾಗಿ ಕೆಳಗೆ ಚಿಕ್ಕದಾದ ಒಂದು ಕೆರೆ ನಿ ರ್ಮಾಣವಾಗಿದೆ. ಇದರ ಹತ್ತಿರ ನೈಸರ್ಗಿಕವಾಗಿ ರೂಪುಗೊಂಡ ಹಸಿರಿನಿಂದ ಆವ್ರತ್ತವಾದ ಗುಹೆಯಿದೆ. ಅಪ್ಸರಕೊಂಡಕ್ಕೆಈ ಹೆಸರು ಬರಲು ಕಾರಣ ಅಲ್ಲಿರುವ ಕೆರೆ. ಹಿಂದೆ ದೇವಲೋಕದ ಅಪ್ಸರೆಯರು ಈ ಕೊಳದಲ್ಲಿ ಜಲಕ್ರೀಡೆ ಆಡುತ್ತಿದ್ದರೆಂಬ ಪ್ರತೀತಿಯಿದೆ.[೩] ಆದ್ದರಿಂದ, ಅಪ್ಸರೆಯರು ಮಿಂದ ಹೊಂಡ 'ಅಪ್ಸರಕೊಂಡ'[೪]ಎಂದು ಹೆಸರಾಯಿತು. ಇಲ್ಲಿರುವ ಗುಹೆಗಳಿಗೆ' ಪಾಂಡವರ ಗುಹೆ'[೫] ಎಂದು ಕರೆಯಲಾಗುತ್ತದೆ. ಹಿಂದೆ ಮಹಾಭಾರತದ ಕಾಲದಲ್ಲಿ ಪಾಂಡವರನ್ನು ವನವಾಸಕ್ಕೆ ಅಟ್ಟಿದಾಗ ಅವರು ಈ ಗುಹೆಯಲ್ಲಿ ವಾಸವಿದ್ದರು ಎನ್ನಲಾಗುತ್ತದೆ ಇಲ್ಲಿಂದ ಹಿಂದೆ ಬಂದು ಮತ್ತೆ ಮೆಟ್ಟಿಲುಗಳನ್ನು ಹತ್ತಿದರೆ ಉದ್ಯಾನವನ ಸಿಗುತ್ತದೆ.


ಉದ್ಯಾನವನ

ಉದ್ಯಾನವನಕ್ಕೆ ಹೋಗಲು ಎರಡು ಮಾರ್ಗಗಳಿವೆ. ದೇವಸ್ತಾನದ ಮೂಲಕ ಹಾಗೇಯೇ ರಸ್ತೆಯ ಮೂಲಕ. ಉದ್ಯಾನವನದಲ್ಲಿ ಹಲವಾರು ರೀತಿಯ ಗಿಡಗಳಿವೆ. ದೋಣಿಸಂಚಾರ ಮಾಡಲು ಅವಕಾಶವಿದೆ. ಇದು ಬೆಟ್ಟದ ತುದಿಯಲ್ಲಿದೆ. ಸೂರ್ಯಾಸ್ತ ಮತ್ತು ಸೂರ್ಯೋದಯ ಆನಂದಿಸಬಹುದು. ಉಪಹಾರ ಗೃಹಗಳಿವೆ.ಮೆಟ್ಟಿಲುಗಳನ್ನು ಹಿಡಿದು ಕೆಳಗಿಳಿದು ಹೋದರೆ ಬೀಚ್ ಸಿಗುತ್ತದೆ. ಉದ್ಯಾನವನದ ಬೆಂಚುಗಳನ್ನು ಚಿಪ್ಪುಗಳಿಂದ ಅಲಂಕರಿಸಲಾಗಿದೆ. ಕಾಡುಪ್ರಾಣಿಗಳ ಆಕೃತಿಗಳನ್ನು ಮಾಡಲಾಗಿದೆ. ಉದ್ಯಾನವನದ ವೀಕ್ಷಣೆಗೆ ಶುಲ್ಕವಿದೆ. ಮಕ್ಕಳಿಗಾಗಿ ಬೇರೆ ಬೇರೆ ನಮೂನೆಯ ಜೋಕಾಲಿಗಳಿವೆ.


ಆಕರ್ಷಣೆಗಳು

ಅರಬಿ ಸಮುದ್ರದ ತಟದಿಂದ ೫೦೦ ಮೀ ಪೊರ್ವಕ್ಕಿರುವ ಈ ಪ್ರದೇಶದಲ್ಲಿ ಸುಮಾರು ೫೦ ಅಡಿಯಿಂದ ಧುಮುಕುವ ಸಣ್ಣದಾದ ಮನಮೋಹಕ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಪುರಾತನ ಕಾಲದಲ್ಲಿ ಇಲ್ಲಿ ಅಪ್ಸರೆಯರು ಸ್ನಾನ ಮಾಡಿರುವರೆಂಬ ಪ್ರತೀತಿ. ಅದರಿಂದ ಈ ಪ್ರದೇಶಕ್ಕೆ ಅಪ್ಸರಕೊಂಡ ಎಂದು ಹೆಸರು ಬಂದಿದೆ. ಇಲ್ಲಿನ ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವದೆ ಒಂದು ವಿಶೇಷ ಅನುಭವ.

ಛಾಯಾಂಕಣ

ಉಲ್ಲೇಖಗಳು

<Reference/>

1. https://www.prajavani.net/apsarkonda-waterfalls-633315.html

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ