ಅಂಬಾಲ

ಅಂಬಾಲ (/əmˈbɑːlə/) ಇದು ಹರ್ಯಾಣ ರಾಜ್ಯದ ಒಂದು ನಗರ ಮತ್ತು ಪಟ್ಟಣ ಪುರಸಭೆ. ಇದು ಪಂಜಾಬು ರಾಜ್ಯದ ಗಡಿಯಲ್ಲಿದೆ. ವಾಸ್ತವವಾಗಿ ಅಂಬಾಲಾ ಶಹರ್ ಮತ್ತು ಅಂಬಾಲಾ ಕಂಟೋನ್ಮೆಂಟ್ ಅವಳಿನಗರಗಳಾಗಿವೆ. ಅಂಬಾಲಾ ದಂಡುಪ್ರದೇಶದಲ್ಲಿ ಸೇನೆಯ ಹಾಗೂ ವಾಯುದಳದ ಬೃಹತ್ತಾದ ನೆಲೆಗಳಿವೆ. ಅಂಬಾಲಾ ಪಟ್ಟಣವು ಹರ್ಯಾನಾ ರಾಜ್ಯದ ಒಂದು ಜಿಲ್ಲೆ ಮತ್ತು ಆಡಳಿತಗಳ ಕೇಂದ್ರ. ಜಿಲ್ಲೆಯ ವಿಸ್ತೀರ್ಣ ಸುಮಾರು ೧೫೭೪ ಚ.ಕಿ.ಮೀ. ಅಂಬಾಲ ದಂಡಿನ ಭಾಗ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿತವಾಯಿತು. ಇದು ಅಂಬಾಲ ನಗರದ ಆಗ್ನೇಯದ ಕಡೆಗಿದೆ. ನವದೆಹಲಿಯಿಂದ ೨೦೦ ಕಿಲೊಮೀಟರು (೧೨೪ ಮೈಲು) ದೂರದಲ್ಲಿರುವ ಅಂಬಾಲಾವು ರಾಷ್ಟ್ರ ರಾಜಧಾನಿ ವಲಯ (counter-magnet)ದ ಪರಿಧಿಯಲ್ಲೇ ಬರುವುದರಿಂದ ನವದೆಹಲಿಯ ಅಭಿವೃದ್ಧಿಗೆ ಪರ್ಯಾಯವಾಗಿ ಗುರುತಿಸಲ್ಪಟ್ಟಿದೆ.

Ambala
ਅੰਬਾਲਾ
city
Ambala Cantonment Railway Station
Ambala Cantonment Railway Station
ದೇಶ ಭಾರತ
ರಾಜ್ಯಹರ್ಯಾಣ
ಜಿಲ್ಲೆಅಂಬಾಲ
Established೧೪ನೆಯ ಶತಮಾನ
Founded byಅಂಬಾ ರಜಪೂತ್
Named forಭವಾನಿ ಅಂಬಾ (Goddess)
Elevation
೨೬೪ m (೮೬೬ ft)
Population
 (2011)
 • Total೧೧,೩೬,೭೮೪
Time zoneUTC+5:30 (IST)
PIN
1330xx,1340xx
Telephone code0171
Vehicle registrationHR01(private), HR37(commercial)
Sex ratio869/1000
Websiteambala.nic.in
‍ಹರ್ಯಾನಾದ ಗ್ರ‍್ಯಾಂಡ್ ಟ್ರಂಕ್ ಹೆದ್ದಾರಿಯಲ್ಲಿ ಸಾಗುವಾಗ ಅಂಬಾಲಾ ಬಳಿ ಕಾಣುವ ಕೋಸ್ ಮಿನಾರ್

ಇತಿಹಾಸ

ಈ ಪಟ್ಟಣವನ್ನು ೧೪ನೆಯ ಶತಮಾನದಲ್ಲಿ ಅಂಬಾ ರಜಪೂತ್ ಎಂಬವನು ಸ್ಥಾಪಿಸಿದನು. ಅನಂತರ ಪಟ್ಟಣವನ್ನು ಆತನ ಜ್ಞಾಪಕಾರ್ಥವಾಗಿ ಅಂಬಾಲವೆಂದು ಕರೆಯಲಾಯಿತು. ಈ ಹೆಸರು ಅಂಬಾಲದ ಸುತ್ತಮುತ್ತಲಿನ ಆವರಣದಲ್ಲಿ ಗೋಚರವಾಗುವ ಮಾವಿನತೋಪುಗಳಿಂದ ಬಂದಿರಲಿಕ್ಕೂ ಸಾಕು. ಅಂಬವಾಲ ಎಂಬುದಾಗಿ ಕರೆಯಲಾಗುತ್ತಿದ್ದುದು ಅನಂತರ ಅಶುದ್ಧವಾಗಿ ಅಂಬಾಲವಾಗಿರಬಹುದು. 1809ರಲ್ಲಿ ಒಡೆಯನಾಗಿದ್ದ ದಯಾಕಾರ್ ಸತ್ತಮೇಲೆ 1823ರಲ್ಲಿ ಅದು ಬ್ರಿಟಿಷರ ಕೈಸೇರಿತು; ಮುಂದೆ 1849ರಲ್ಲಿ ಜಿಲ್ಲೆಯ ಕೇಂದ್ರಕಚೇರಿ ಇಲ್ಲಿ ಸ್ಥಾಪಿತವಾಯಿತು.

ಭೌಗೋಳಿಕ

ಭೌಗೋಳಿಕವಾಗಿ ಅಂಬಾಲ ಮೈದಾನ ಮತ್ತು ಬೆಟ್ಟಗುಡ್ಡಗಳು ಸೇರುವ ನೆಲೆಯಲ್ಲಿದೆ. ತನ್ನ ಹಿನ್ನೆಲೆಯ ಪ್ರಭಾವದಿಂದ ಒಂದು ಪ್ರಮುಖ ಕೈಗಾರಿಕಾ ಪಟ್ಟಣವಾಗಿ ಬೆಳೆದಿದೆ. ಕಾಗದ ತಯಾರಿಕೆ, ಹಣ್ಣುಗಳನ್ನು ಕೂಡಿಡುವುದು, ರೇಷ್ಮೆ ಕೈಗಾರಿಕೆ, ಗಾಜು ಮತ್ತು ವೈಜ್ಞಾನಿಕ ಸಲಕರಣೆಗಳು ಮತ್ತು ಆಟದ ಸಾಮಾನುಗಳ ತಯಾರಿಕೆ ಅಂಬಾಲದ ಪ್ರಮುಖ ಚಟುವಟಿಕೆಗಳು. ಅಂಬಾಲ ಇಂದಿಗೂ ಕೂಡ ಧಾರ್ಮಿಕತೆಗೆ ಹೆಸರುವಾಸಿ. ಸಿಖ್ಖರ ಒಂದು ಪ್ರಮುಖ ದೇವಸ್ಥಾನವಾದ ಗುರುದ್ವಾರ ಮಂಜಿ ಸಾಹಿಬ್ ಇಲ್ಲಿ ಇದ್ದು, ಪ್ರತಿ ವರ್ಷವೂ ಅನೇಕ ಯಾತ್ರಿಕರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ತನ್ನ ಹಿನ್ನೆಲೆಯ ಪ್ರಭಾವದಿಂದ ಒಂದು ಪ್ರಮುಖ ಕೈಗಾರಿಕಾ ಪಟ್ಟಣವಾಗಿ ಬೆಳೆದಿದೆ. ಲಾರೆನ್ಸ್ ರಸ್ತೆಯಲ್ಲಿನ ಕಥೋಲಿಕ ಚರ್ಚು, ವಾಯುನೆಲೆಯ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿನ ೧೯೬೫ರ ಇಂಡೋ ಪಾಕ್ ಯುದ್ಧದಲ್ಲಿ ಹಾನಿಗೊಳಗಾದ ಚರ್ಚು, ಲಾರೆನ್ಸ್ ರಸ್ತೆಯ ಹೋಲಿ ರಿಡೀಮರ್ ಚರ್ಚು, ಮಾರ್ ತೋಮಾ ಚರ್ಚು, ಜೆಎಂಜೆ ಕಾನ್ವೆಂಟು ಮತ್ತು ಶಾಲೆ, ಸಿಸಿಲ್ ಕಾನ್ವೆಂಟು ಮತ್ತು ಶಾಲೆ ಹಾಗೂ ಜೈನ್ ಶಾಲೆಗಳು ಇಲ್ಲಿ ಸೌಹಾರ್ದತೆಯಿಂದ ನೆಲೆಗೊಂಡಿವೆ. ಭೌಗೋಳಿಕವಾಗಿ ಅಂಬಾಲವು ಬಯಲುಪ್ರದೇಶ ಮತ್ತು ಬೆಟ್ಟಗುಡ್ಡಗಳು ಸೇರುವ ನೆಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಗಗ್ಗರ್ ಹಕ್ರಾ ನದಿ ಮತ್ತು ಟಂಗ್ರಿ ನದಿಗಳ ನಡುವೆ ಇದ್ದು ಸಿಂಧೂ ನದಿ ಕೊಡುಕೊಳುಗೆಯ ಪ್ರದೇಶವನ್ನು ಗಂಗಾ ನದಿ ಪ್ರದೇಶದಿಂದ ಬೇರ್ಪಡಿಸುತ್ತದೆ. ಈ ಎಲ್ಲ ಕಾರಣಗಳಿಂದ ಅಂಬಾಲಾ ಜಿಲ್ಲೆಯು ಒಂದು ಪ್ರವಾಸೋದ್ಯಮವಾಗಿಯೂ ಗುರುತಿಸಲ್ಪಟ್ಟಿದೆ. ಇಂತಾ ಒಂದು ನೆಲೆಗಟ್ಟು ಇರುವುದರಿಂದ ಉತ್ತರದ ಚಂಡೀಗಢ 47 km (29 mi), ದಕ್ಷಿಣದ ಕುರುಕ್ಷೇತ್ರ 50 km (31 mi), ಈಶಾನ್ಯದ ಶಿಮ್ಲಾ 148 km (92 mi), ವಾಯುವ್ಯದ ಅಮೃತಸರ 260 km (160 mi) ಹಾಗೂ ದಕ್ಷಿಣದಲ್ಲಿ ನವದೆಹಲಿ 198 km (123 mi) ಗಳಿಗೆ ಅಂಬಾಲಾವು ಒಂದು ಪ್ರವಾಸಕೊಂಡಿಯಾಗಿದೆ.


ಹೆಸರಿನ ಹಿನ್ನೆಲೆ

ಕ್ರಿಸ್ತಶಕ ೧೪ನೇ ಶತಮಾನದಲ್ಲಿ ಅಂಬಾ ರಜಪೂತ್ ಸ್ಥಾಪಿಸಿದನೆಂದು ನಂಬಲಾಗಿದೆ. ಆತನ ನೆನಪಿಗೆ ಪಟ್ಟಣವನ್ನು ಅಂಬಾಲವೆಂದು ಕರೆದರೆನ್ನುತ್ತಾರೆ. ಅಂಬಾಲದ ಸುತ್ತಮುತ್ತಲಿನ ಪರಿಸರದಲ್ಲಿ ಕಾಣಿಸುವ ಹೇರಳವಾದ ಮಾವಿನತೋಪುಗಳ ಕಾರಣದಿಂದ ಅಂಬವಾಲ ಎಂಬುದಾಗಿ ಕರೆಯಲಾಗುತ್ತಿದ್ದುದು ಅನಂತರ ಅಪಭ್ರಂಶವಾಗಿ ಅಂಬಾಲ ಆಗಿರಬಹುದು ಎಂದೂ ಹೇಳುತ್ತಾರೆ. ಇನ್ನೊಂದು ಕತೆಯ ಪ್ರಕಾರ ಅಂಬಾ ಭವಾನಿ ದೇವಿಯ ಹೆಸರಿನಿಂದ ಈ ಹೆಸರು ಬಂದಿದೆಯಂತೆ. ಆ ದೇವಿಯ ಗುಡಿಯನ್ನು ಅಂಬಾಲಾದಲ್ಲಿ ಇಂದಿಗೂ ನೋಡಬಹುದು.[೧][೨] ಕೆಲವೆಡೆ ಇಂಗ್ಲಿಷಿನ Umballa ಕೂಡಾ ಬಳಕೆಯಾಗಿದೆ, ರಡ್ಯಾರ್ಡ್ ಕಿಪ್ಲಿಂಗ್ ತನ್ನ ೧೯೦೧ರ ಕಿಮ್ ಎಂಬ ಕಾದಂಬರಿಯಲ್ಲಿ ಈ ಹೆಸರನ್ನು ಬಳಸಿದ್ದಾನೆ.[೩]

ಪ್ರಾಚ್ಯ ಇತಿಹಾಸ

ಪ್ರಾಚ್ಯನಿವೇಶನ ಬಾಂದಿನವರಾದ ಸಿ ಜೆ ರೋಜರ್ಸ್ ನವರು ಇಲ್ಲಿ ಇಂಡೋ ಪಾರ್ತಿಯನ್ ಸಾಮ್ರಾಜ್ಯದ ನಾಣ್ಯಗಳನ್ನು ಪತ್ತೆಹಚ್ಚಿದ್ದಾರೆ. ಜೊತೆಗೆ ಅವರು ಹೂಣರ, ಮಿಹಿರಕುಲ ಮತ್ತು ತೋರಾಮನ ನಾಣ್ಯಗಳನ್ನೂ ಸಂಗ್ರಹಿಸಿದ್ದರಿಂದ ಮೌರ್ಯ ಸಾಮ್ರಾಜ್ಯದ ಅವನತಿಯ ನಂತರ ಈ ಪ್ರದೇಶವು ಇಂಡೋ ಪಾರ್ತಿಯನ್ನರ ಆನಂತರ ಹೂಣರ ಆಳ್ವಿಕೆಗೆ ಬಂತೆಂದು ತಿಳಿಯಬಹುದಾಗಿದೆ.[೧]

ಮಧ್ಯಯುಗದ ಕೊನೆಯಲ್ಲಿ

ಕ್ರಿಸ್ತಶಕ ೧೭೦೯ರಲ್ಲಿ ಅಂಬಾಲಾ ಯುದ್ಧವು ನಡೆದು ಸಿಖ್ ದೊರೆಗಳು ಅಂಬಾಲಾವನ್ನು ಮೊಘಲ್ ದೊರೆಗಳಿಂದ ಕಿತ್ತುಕೊಂಡರು.[೪] ಆಮೇಲೆ ಕ್ರಿಸ್ತಶಕ ೧೭೪೮-೧೮೨೫ರ ಅವಧಿಯಲ್ಲಿ ಇದು ಜಾಟ್ ಸಮುದಾಯದ ಗಿಲ್ ದೊರೆಗಳ ಆಳ್ವಿಕೆಗೆ ಬಂತು.[೫] ನಿಶಾನ್ವಾಲಿಯಾ ನಿಗೆ ಇದು ರಾಜಧಾನಿಯಾಗಿತ್ತು.[೬] ಕೆಲಕಾಲ ಇದು ದೇಸು ಸಿಂಗ್ ರಾಂಧವನ ಬಳಗದ ಜವಾಹಿರ್ ಸಿಂಗ್ ಎಂಬ ಮುಸ್ತಫಾಬಾದ್ ದೊರೆಯ ತೆಕ್ಕೆಗೆ ಬಂದಿತ್ತು[೭]

ಬ್ರಿಟಿಷ್ ವಸಾಹತು ಯುಗ

ಅಂಬಾಲಾ ದಂಡುಪ್ರದೇಶ

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅಂಬಾಲಾ ಕಂಟೋನ್ಮೆಂಟ್ ಬಳಿಯ ಗ್ರ್ಯಾಂಡ್ ಟ್ರಂಕ್ ಹೆದ್ದಾರಿ
ಅಂಬಾಲಾ ಸೇನಾನೆಲೆ

ಅಂಬಾಲಾ ದಂಡುಪ್ರದೇಶವನ್ನು ಕ್ರಿಸ್ತಶಕ ೧೮೪೩ರಲ್ಲಿ ನಿರ್ಮಿಸಲಾಯಿತು. ಅದಕ್ಕೆ ಮುನ್ನ ಕರ್ನಾಲ್ ದಂಡುಪ್ರದೇಶದಲ್ಲಿ ನೆಲೆಗೊಂಡಿದ್ದ ಬ್ರಿಟಿಷರು ೧೮೪೧-೪೨ರ ಮಲೇರಿಯಾ ಸೋಂಕಿನಿಂದ ಜರ್ಜರಿತರಾಗಿ ಇಲ್ಲಿಗೆ ಎತ್ತಂಗಡಿಯಾದರು. ಅಂಬಾಲಾ ದಂಡುಪ್ರದೇಶವು ಭಾರತೀಯ ಸೇನೆಯ ಮೂರು ದಾಳಿಪಡೆಗಳಲ್ಲಿ ಒಂದೆನಿಸಿದೆ.

ಅಂಬಾಲಾ ವಾಯುನೆಲೆ

ಅಂಬಾಲಾ ವಾಯುನೆಲೆಯು ಬ್ರಿಟಿಷರು ಇಂಡಿಯನ್ ಏರ್ಫೋರ್ಸ್ ಗಾಗಿ ಕಟ್ಟಿದ ಅತಿ ಹಳೆಯ ಮತ್ತು ಅತಿವಿಸ್ತಾರದ ವಾಯುನೆಲೆ. ಇದೇ ಅಂಬಾಲಾ ವಾಯುನೆಲೆಯಿಂದಲೇ ೧೯೪೭-೪೮ರ ಇಂಡೋ-ಪಾಕ್ ಯುದ್ಧದಲ್ಲಿ ಬೆಂಕಿಯುಗುಳುವ ಸೂಪರ್ ಮೆರೈನ್ ಸ್ಪ್ಲಿಟ್ ಫೈರ್ ಮತ್ತು ಟಿ-೬ ಟೆಕ್ಸಾನ್ ವಿಮಾನಗಳನ್ನು ಹಾರಿಸಲಾಯಿತು. ಇಲ್ಲಿನ ಸುಧಾರಿತ ಹಾರಾಟ ತರಬೇತಿ ಸಂಸ್ಥೆಯ ತರಬೇತುದಾರರು ಈ ವಿಮಾನಗಳನ್ನು ಹಾರಿಸಿದ್ದರು. ಆನಂತರವೂ ಅಂಬಾಲಾ ವಾಯುನೆಲೆಯು ಹಲವರ್ಷಗಳ ಕಾಲ ಮುಂಚೂಣಿಯಲ್ಲೇ ಇತ್ತು. ದೇಶದ ವಾಯುದಳಕ್ಕೆ ಬಂದ ಹಲವಾರು ವಿಮಾನಗಳು ಅಂದರೆ ವ್ಯಾಂಪೈರ್, ದಸೋ ಓರಗಾನ್, ಹಂಟರ್ ಮುಂತಾದ ವಿಮಾನಗಳು ಇಲ್ಲಿಂದಲೇ ಮೊದಲ ಹಾರಾಟ ಕಂಡವು. ಕ್ರಿಸ್ತಶಕ ೧೯೬೫ರಲ್ಲಿ ಈ ವಾಯುನೆಲೆಯು ಪಾಕಿಸ್ತಾನ ವಾಯುದಳದ ಬಿ-೫೭ ಕ್ಯಾನ್ಬೆರಾ ಬಾಂಬರ್ಗಳ ದಾಳಿಗೆ ತುತ್ತಾಗಿ ಸ್ವಲ್ಪಮಟ್ಟಿಗೆ ಹಾನಿಗೀಡಾಯಿತು. ಇಂದು ಅಂಬಾಲಾ ವಾಯುನೆಲೆಯಲ್ಲಿ ಜಾಗ್ವಾರ್ (ಚಿರತೆ) ಮತ್ತು ಮಿಗ್ ೨೧ (ಕಾಡೆಮ್ಮೆ) ಸ್ಕ್ವಾಡ್ರನ್ ಗಳ ಸೆವೆಂತ್ ವಿಂಗ್ ಕಾರ್ಯನಿರ್ವಹಿಸುತ್ತಿದೆ. ಫ್ರೆಂಚ್ ನಿರ್ಮಿತ 'ದಸೋ ರಫೇಲ್' ವಿಮಾನಗಳ ಒಂದು ಘಟಕವೂ ಇಲ್ಲಿ ನೆಲೆಗೊಳ್ಳಲಿದೆ. [೮]

ಯೂರೋಪಿಯನ್ ಸಮಾಧಿಭೂಮಿ

ಅಂಬಾಲಾ ವಾಯುನೆಲೆಯು ಚರಿತ್ರಾರ್ಹ ಯೂರೋಪಿಯನ್ ಸಮಾಧಿಭೂಮಿಗೆ ಹೆಸರಾಗಿದೆ. ಧೀರೋದಾತ್ತ ಬ್ರಿಟಿಷ್ ಸೈನಿಕರನ್ನು ಇಲ್ಲಿ ಮಣ್ಣುಮಾಡಿ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಅಮೃತಶಿಲೆಯಲ್ಲಿ ಕಡೆದಿರುವ ಕಲಾತ್ಮಕ ಶಿಲ್ಪಗಳು ಹಾಗೂ ಶಿಲುಬೆಗಳು, ಸ್ಮಾರಕ ಫಲಕಗಳನ್ನು ಅಧ್ಯಯನ ಮಾಡುವವರಿಗೆ ಅದರಲ್ಲೂ ಇತಿಹಾಸದ ಸಂಶೋಧಕರಿಗೆ ಇದೊಂದು ಆಕರ ತಾಣವಾಗಿದೆ.

೧೮೫೭ರ ಯುದ್ಧಸ್ಮಾರಕ

ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಅಥವಾ ೧೮೫೭ರ ಯುದ್ಧಸ್ಮಾರಕವನ್ನು ೨೦೨೩ರಲ್ಲಿ ಪೂರ್ಣಗೊಳಿಸಲಾಯಿತು. ಇಂಡಿಯಾದ ೧೮೫೭ರ ಬಂಡಾಯದಲ್ಲಿ ಮೃತರಾದ ಕ್ರಾಂತಿಕಾರಿಗಳ ಸ್ಮರಣೆಗಾಗಿ ರಾಷ್ಟ್ರೀಯ ಹೆದ್ದಾರಿ ರಾ.ಹೆ.೪೪ರ ಬದಿಯಲ್ಲಿ ೨೨ ಎಕರೆ ಭೂಮಿಯಲ್ಲಿ ಇದನ್ನು ಮುನ್ನೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಾಳಗವು ೧೮೫೭ರ ಮೇ ಹತ್ತರಂದು[೯] ಅಂಬಾಲಾ ದಂಡುಪ್ರದೇಶದಲ್ಲಿ ಬೀಡುಬಿಟ್ಟಿದ್ದ ೫ನೇ ರಾಹುತಪಡೆ ಮತ್ತು ಬೆಂಗಾಲ್ ದೇಸೀ ಪದಾತಿಯಲ್ಲಿನ ಭಾರತೀಯ ಸಿಪಾಯಿಗಳಿಂದ ನಡೆಯಿತು. ಯುದ್ಧದ ತರುವಾಯ ಕ್ರಾಂತಿಕಾರಿ ಬಾಬಾ ಮೊಹರ್ ಸಿಂಗನನ್ನು ಬ್ರಿಟಿಷರು ೧೮೫೭ ಜೂನ್ ೫ರಂದು ಗಲ್ಲಿಗೇರಿಸಿದರು. ಬ್ರಿಟಿಷ್ ವಸಾಹತು ಆಳ್ವಿಕೆಯಲ್ಲಿ ನಡೆದ ಮೊದಲ ಗಲ್ಲುಶಿಕ್ಷೆಯಿದು. ಅಂಬಾಲಾ ಬಂಡಾಯವನ್ನು ಅನಂತಿ ಮಿಶ್ರಾ, ಪರಮೇಶ್ವರ ಪಾಂಡೆ, ಬೇನಿಪ್ರಸಾದ್, ಶೇಖ್ ಫೇಝ್ ಉಲ್ ಖಾನ್, ಬಿಕನ್ ಖಾನ್ ಅವರು ಮುನ್ನಡೆಸಿ ಬಿಲಾಸಪುರ, ಸಧೌರ, ಯಮುನಾನಗರ ಮತ್ತು ಸಹರಾನ್ಪುರ ಮಾರ್ಗವಾಗಿ ದೆಹಲಿಯ ಕೆಂಪು ಕೋಟೆಯತ್ತ ಕೊಂಡೊಯ್ದರು. ಬಂಡಾಯದ ನಂತರ ಬ್ರಿಟಿಷರು ಬಿಲಾಸ್ಪುರ ಮತ್ತು ಸಧೌರ ಗ್ರಾಮಗಳನ್ನು ಸುಟ್ಟುಹಾಕಿದರು, ಏಕೆಂದರೆ ಈ ಎರಡು ಹಳ್ಳಿಗಳ ಜನರು ಬಂಡಾಯಗಾರರಿಗೆ ನೆರವು ನೀಡಿದ್ದರು. ಆಮೇಲೆ ಬೆಂಗಾಲ್ ರೆಜಿಮೆಂಟನ್ನು ಬರಕಾಸ್ತುಗೊಳಿಸಲಾಯಿತು.[೯]

ಸ್ಮಾರಕದ ಕಟ್ಟೋಣವು ನಾಲ್ಕು ಭಾಗಗಳನ್ನು ಹೊಂದಿದ್ದು ಆಡಳಿತಸೌಧ, ವಸ್ತುಸಂಗ್ರಹಾಲಯ, ಪುಸ್ತಕಾಲಯ ಮತ್ತು ಊಟದ ಮನೆ ಹಾಗೂ ತೆರೆದ ಸಭಾಂಗಣ ಹೊಂದಿದೆ.[೧೦]

ಅಂಬಾಲಾ ಜಿಲ್ಲೆಯ ರಚನೆ

೧೮೦೯ರಲ್ಲಿ ಇಲ್ಲಿಯ ಪಾಳೇಗಾರನಾಗಿದ್ದ ದಯಾಕರ್ ಸತ್ತಮೇಲೆ ೧೮೨೩ರಲ್ಲಿ ಅದು ಬ್ರಿಟಿಷರ ಕೈಸೇರಿತು; ೧೮೪೭ರಲ್ಲಿ ಅಂಬಾಲಾವನ್ನು ಜಿಲ್ಲೆಯಾಗಿ ಕರೆದು ಜಮೀನುದಾರಿ ಮತ್ತು ಪಾಳೇಗಾರಿಕೆಗಳನ್ನು ಅಂತ್ಯಗೊಳಿಸಲಾಯಿತು. ಏಕೆಂದರೆ ಬ್ರಿಟಿಷರ ಸರಕಾರವು ಜಮೀನ್ದಾರಿ ಪದ್ದತಿಯನ್ನು ರದ್ದುಗೊಳಿಸಿ ಅವರ ಆಸ್ತಿಯೆಲ್ಲವನ್ನೂ ಮುಟ್ಟುಗೋಲು ಹಾಕಿಕೊಂಡಿತ್ತು. ಮುಂದೆ ೧೮೪೯ರಲ್ಲಿ ಇದು ಜಿಲ್ಲೆಯ ಕೇಂದ್ರಕಚೇರಿ ಆಯಿತು. ಅಂಬಾಲಾವು ಜಿಲ್ಲೆಯಾಗಿ ತನ್ನ ಇತಿಹಾಸದಲ್ಲಿ ಹಲವಾರು ಬದಲಾವಣೆಗಳನ್ನು ಕಂಡು ತನ್ನ ಬೇಲಿಯನ್ನು ಹಿಗ್ಗಿಸಿಕೊಂಡಿದೆ. ಮೊದಲು ಇದರ ವ್ಯಾಪ್ತಿಯಲ್ಲಿ ಅಂಬಾಲಾದ ತಹಸೀಲುಗಳು, ಚಂಡೀಗಢ, ಜಗಧ್ರಿ, ಪಿಪ್ಲಿ, ಕರಾರ್, ರೋಪರ್ ಮತ್ತು ನಾಲಾಗಡ್ ಗಳು ಸೇರಿದ್ದವು. ಮುಂದೆ ವಿವಿಧ ಕಾಲಘಟ್ಟಗಳಲ್ಲಿ ಕಲ್ಕಾ-ಕುರಾರಿ ಪ್ರಾಂತ್ಯ, ಪಿಂಜೋರ್, ಮಾನಿಮಜ್ರಾ, ಕಸೌಲಿ ಮತ್ತು ಸಾನಾವರ್ ಗಳು ಸೇರಿಕೊಂಡವು.

೧೮೫೭ರ ಬಂಡಾಯ

ಮೊದಲ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಪಾಲುಗೊಂಡ ಕಾರಣಕ್ಕೆ ಹಳ್ಳಿಗಳ ಚೌಧರಿಗಳು ಮತ್ತು ಲಂಬರದಾರ್ ಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಹಿಸಾರ್ ಮತ್ತು ಗುರ್ಗಾಂವ್ ಜಿಲ್ಲೆಗಳ ೩೬೮ ಮಂದಿಯನ್ನು ಗಲ್ಲಿಗೇರಿಸಲಾಯಿತು ಅಥವಾ ಗಡೀಪಾರು ಮಾಡಲಾಯಿತು, ಥಾನೆಸರ್ ಜನರ ಮೇಲೆ ರೂ. ೨,೩೫,೦೦೦, ಅಂಬಾಲಾ ರೂ.೨,೫೩,೫೪೧, ರೋಹಟಕ್ ರೂ. ೬೩,೦೦೦ (ರಾಂಗಡ್, ಪಂಜಾಬಿ ಶೇಕ್, ಕಸಬ್/ಕಸಾಯಿಗಳಿಗೆ) ಗಳಷ್ಟು ದೊಡ್ಡ ಮೊತ್ತದ ದಂಡ ವಿಧಿಸಲಾಯಿತು.[೧೧]

ಸ್ವಾತಂತ್ರ್ಯಾನಂತರ

ನಾಥುರಾಮ್ ಗೋಡ್ಸೆಯನ್ನು ನೇಣಿಗೇರಿಸಿದ್ದು

ನವೆಂಬರ್ ೧೯೪೯ರಲ್ಲಿ ಮಹಾತ್ಮ ಗಾಂಧಿ ಯವರನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ನೇಣಿಗೇರಿಸಿದ್ದು ಅಂಬಾಲಾ ಕೇಂದ್ರ ಸೆರೆಮನೆಯಲ್ಲೇ. ಅವನ ಜೊತೆಗೆ ಕೊಲೆಸಂಚಿನಲ್ಲಿ ಭಾಗಿಯಾಗಿದ್ದ ನಾರಾಯಣ ಆಪ್ಟೆಯನ್ನೂ ನೇಣಿಗೇರಿಸಲಾಯಿತು.[೧೨].

ಭೌಗೋಳಿಕ

ಹವಾಮಾನ

ಅಂಬಾಲಾ (೧೯೮೧–೨೦೧೦, ಅತಿಯಾಗಿದ್ದು ೧೯೦೧–೨೦೧೨)ದ ಹವಾಮಾನ ದತ್ತಾಂಶ
ತಿಂಗಳುಫೆಮಾಮೇಜೂಜುಸೆಆಕ್ಟೋಡಿವರ್ಷ
Source: ಇಂಡಿಯಾದ ಹವಾಮಾನ ಇಲಾಖೆ[೧೩][೧೪]

ಜನಗಣತಿ

ಅಂಬಾಲಾದಲ್ಲಿ ಧರ್ಮಗಳು[೧೫]
ReligionPercent
ಹಿಂದೂಧರ್ಮ
  
81.94%
ಸಿಖ್ ಧರ್ಮ
  
14.59%
ಜೈನಧರ್ಮ
  
1.44%
ಇಸ್ಲಾಂ
  
1.25%
ಇತರೆ
  
0.78%

೨೦೧೧ರ ಇಂಡಿಯಾ ಜನಗಣತಿಯ ಪ್ರಕಾರ, ಅಂಬಾಲಾ ಪಟ್ಟಣಪ್ರದೇಶದಲ್ಲಿ ೨,೦೭,೯೩೪ ಮಂದಿ ಇದ್ದರು. ಅದರಲ್ಲಿ ೧,೧೨,೮೪೦ ಗಂಡಸರು ಮತ್ತು ೯೫,೦೯೪ ಹೆಂಗಸರು. ಅಂದರೆ ಲಿಂಗಾನುಪಾತ ೮೪೩. ಆರು ವರ್ಷದೊಳಗಿನ ಮಕ್ಕಳು ೨೦,೬೮೭ ಇದ್ದರು. ಓದುಬರಹ ಬಲ್ಲವರು ಶೇ. ೮೯.೩೧ ಇದ್ದು ಗಂಡಸರು ೯೧.೭೬% ಹಾಗೂ ಹೆಂಗಸರು ೮೬.೪೧%[೧೬]

ಅಂಬಾಲಾ ಪಟ್ಟಣದ ಧಾರ್ಮಿಕ ಸಮುದಾಯಗಳು (೧೮೯೧-೨೦೧೧)[lower-alpha ೧]
Religious
group
1891[೧೮]: 68 1901[೧೯]: 44 1911[೨೦]: 20 1921[೨೧]: 23 1931[೨೨]: 26 1941[೧೭]: 32 2011[೨೩]
Pop.%Pop.%Pop.%Pop.%Pop.%Pop.%Pop.%
ಹಿಂದೂ ೪೦,೩೩೯ಟೆಂಪ್ಲೇಟು:ಶೇಕಡಾವಾರು೩೯,೬೦೧ಟೆಂಪ್ಲೇಟು:ಶೇಕಡಾವಾರು೩೮,೧೯೨ಟೆಂಪ್ಲೇಟು:ಶೇಕಡಾವಾರು೩೭,೭೬೫ಟೆಂಪ್ಲೇಟು:ಶೇಕಡಾವಾರು೩೯,೯೪೫[lower-alpha ೨]ಟೆಂಪ್ಲೇಟು:ಶೇಕಡಾವಾರು೫೦,೬೭೯[lower-alpha ೨]ಟೆಂಪ್ಲೇಟು:ಶೇಕಡಾವಾರು೧೫೯,೯೧೨ಟೆಂಪ್ಲೇಟು:ಶೇಕಡಾವಾರು
ಇಸ್ಲಾಂ ೩೦,೫೨೩ಟೆಂಪ್ಲೇಟು:ಶೇಕಡಾವಾರು೩೨,೧೪೯ಟೆಂಪ್ಲೇಟು:ಶೇಕಡಾವಾರು೩೧,೬೪೧ಟೆಂಪ್ಲೇಟು:ಶೇಕಡಾವಾರು೩೧,೪೪೮ಟೆಂಪ್ಲೇಟು:ಶೇಕಡಾವಾರು೩೮,೦೮೯ಟೆಂಪ್ಲೇಟು:ಶೇಕಡಾವಾರು೪೭,೮೮೧ಟೆಂಪ್ಲೇಟು:ಶೇಕಡಾವಾರು೨,೪೩೧ಟೆಂಪ್ಲೇಟು:ಶೇಕಡಾವಾರು
ಕ್ರೈಸ್ತ ೪,೮೯೯ಟೆಂಪ್ಲೇಟು:ಶೇಕಡಾವಾರು೩,೬೧೦ಟೆಂಪ್ಲೇಟು:ಶೇಕಡಾವಾರು೫,೯೧೮ಟೆಂಪ್ಲೇಟು:ಶೇಕಡಾವಾರು೨,೩೭೩ಟೆಂಪ್ಲೇಟು:ಶೇಕಡಾವಾರು೩,೧೩೮ಟೆಂಪ್ಲೇಟು:ಶೇಕಡಾವಾರು೧,೦೫೪ಟೆಂಪ್ಲೇಟು:ಶೇಕಡಾವಾರು೭೩೯ಟೆಂಪ್ಲೇಟು:ಶೇಕಡಾವಾರು
ಸಿಖ್ ೨,೪೦೭ಟೆಂಪ್ಲೇಟು:ಶೇಕಡಾವಾರು೨,೧೬೮ಟೆಂಪ್ಲೇಟು:ಶೇಕಡಾವಾರು೩,೩೯೨ಟೆಂಪ್ಲೇಟು:ಶೇಕಡಾವಾರು೩,೬೨೨ಟೆಂಪ್ಲೇಟು:ಶೇಕಡಾವಾರು೪,೧೪೩ಟೆಂಪ್ಲೇಟು:ಶೇಕಡಾವಾರು೪,೯೨೬ಟೆಂಪ್ಲೇಟು:ಶೇಕಡಾವಾರು೨೮,೪೭೧ಟೆಂಪ್ಲೇಟು:ಶೇಕಡಾವಾರು
ಜೈನ ೧,೧೧೯ಟೆಂಪ್ಲೇಟು:ಶೇಕಡಾವಾರು೧,೦೯೬ಟೆಂಪ್ಲೇಟು:ಶೇಕಡಾವಾರು೯೫೭ಟೆಂಪ್ಲೇಟು:ಶೇಕಡಾವಾರು೧,೦೮೩ಟೆಂಪ್ಲೇಟು:ಶೇಕಡಾವಾರು೧,೨೬೯ಟೆಂಪ್ಲೇಟು:ಶೇಕಡಾವಾರು೧,೮೧೪ಟೆಂಪ್ಲೇಟು:ಶೇಕಡಾವಾರು೨,೮೧೬ಟೆಂಪ್ಲೇಟು:ಶೇಕಡಾವಾರು
ಝೊರೊಆಸ್ಟ್ರಿಯನ್ ಟೆಂಪ್ಲೇಟು:ಶೇಕಡಾವಾರು೧೪ಟೆಂಪ್ಲೇಟು:ಶೇಕಡಾವಾರು೩೧ಟೆಂಪ್ಲೇಟು:ಶೇಕಡಾವಾರು೩೦ಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಮಾಹಿತಿಯಿಲ್ಲಟೆಂಪ್ಲೇಟು:ಮಾಹಿತಿಯಿಲ್ಲಟೆಂಪ್ಲೇಟು:ಮಾಹಿತಿಯಿಲ್ಲಟೆಂಪ್ಲೇಟು:ಮಾಹಿತಿಯಿಲ್ಲ
ಬೌದ್ಧ ಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಮಾಹಿತಿಯಿಲ್ಲಟೆಂಪ್ಲೇಟು:ಮಾಹಿತಿಯಿಲ್ಲ೫೫ಟೆಂಪ್ಲೇಟು:ಶೇಕಡಾವಾರು
ಯೆಹೂದಿ ಟೆಂಪ್ಲೇಟು:ಶೇಕಡಾವಾರುಮಾಹಿತಿಯಿಲ್ಲಮಾಹಿತಿಯಿಲ್ಲಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಮಾಹಿತಿಯಿಲ್ಲಟೆಂಪ್ಲೇಟು:ಮಾಹಿತಿಯಿಲ್ಲಟೆಂಪ್ಲೇಟು:ಮಾಹಿತಿಯಿಲ್ಲಟೆಂಪ್ಲೇಟು:ಮಾಹಿತಿಯಿಲ್ಲ
ಇತರೆಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರುಟೆಂಪ್ಲೇಟು:ಶೇಕಡಾವಾರು೧,೦೦೮ಟೆಂಪ್ಲೇಟು:ಶೇಕಡಾವಾರು೭೨೯ಟೆಂಪ್ಲೇಟು:ಶೇಕಡಾವಾರು
ಒಟ್ಟು ಜನಸಂಖ್ಯೆ೭೯,೨೯೪ಟೆಂಪ್ಲೇಟು:ಶೇಕಡಾವಾರು೭೮,೬೩೮ಟೆಂಪ್ಲೇಟು:ಶೇಕಡಾವಾರು೮೦,೧೩೧ಟೆಂಪ್ಲೇಟು:ಶೇಕಡಾವಾರು೭೬,೩೨೬ಟೆಂಪ್ಲೇಟು:ಶೇಕಡಾವಾರು೮೬,೫೯೨ಟೆಂಪ್ಲೇಟು:ಶೇಕಡಾವಾರು೧೦೭,೩೮೩ಟೆಂಪ್ಲೇಟು:ಶೇಕಡಾವಾರು೧೯೫,೧೫೩ಟೆಂಪ್ಲೇಟು:ಶೇಕಡಾವಾರು

ಜನಸಂಖ್ಯೆ

೨೦೧೧ರ ಜನಗಣತಿಯಂತೆ ಅಂಬಾಲ ಜಿಲ್ಲೆಯ ಜನಸಂಖ್ಯೆ ೧೧,೩೬,೭೮೪. ಸಾಂದ್ರತೆ :೭೨೨ ಇದ್ದು ೮೨.೯% ಸಾಕ್ಷರತೆ ಇದೆ. ಲಿಂಗಾನುಪಾತ ೮೮೨.

ಭೌಗೋಳಿಕ

ಹಣಕಾಸು

ಜವಳಿ ಮಾರುಕಟ್ಟೆ

ಅಂಬಾಲಾವು ಈ ಪ್ರಾಂತ್ಯದಲ್ಲೇ ಅತಿ ದೊಡ್ಡ ಜವಳಿ ಮಾರುಕಟ್ಟೆಯಾಗಿದೆ. ಇದು ಅಂಬಾಲಾ ನಗರದ ಸೆಕ್ಟರ್ ೭ರಲ್ಲಿದೆ. ಮದುವೆ ಜವಳಿಗೆ ಇದು ಹೆಸರುವಾಸಿಯಾಗಿದೆ. ಹೆಚ್ಚು ಮಾರಾಟವಾಗುವ ಸರಕು ಎಂದರೆ ಸೀರೆಗಳು ಮತ್ತು ರೇಷ್ಮೆ ಉಡುಗೆತೊಡುಗೆಗಳು.[೨೪]

ಸಾರಿಗೆ

[ಉತ್ತರ ಇಂಡಿಯಾ]]ದ ಎಲ್ಲಾ ದೊಡ್ಡ ನಗರಗಳಿಗೂ ಅಂಬಾಲಾವು ಸಂಪರ್ಕ ಸಾಧಿಸುತ್ತದೆ. ಸುತ್ತಮುತ್ತಲ ರಾಜ್ಯಗಳ ಹೆದ್ದಾರಿಗಳಿಗೆ ಇದೊಂದು ಕೊಂಡಿಯಾಗಿದೆ.[೨೫]ಗ್ರ್ಯಾಂಡ್ ಟ್ರಂಕ್ ಹೆದ್ದಾರಿ ಎಂದು ಹೆಸರಾಗಿರುವ ರಾಷ್ಟ್ರೀಯ ಹೆದ್ದಾರಿ ರಾಹೆ ೪೪ (ಮೊದಲಿನ ರಾಹೆ ೧) ಅಂಬಾಲಾ ಮೂಲಕ ಹಾದುಹೋಗಿದ್ದು ನವದೆಹಲಿ, ಪಾಣಿಪತ್, ಲುಧಿಯಾನ ಮತ್ತು ಅಮೃತಸರಗಳನ್ನು ಸಂಪರ್ಕಿಸುತ್ತದೆ. ರಾಹೆ ೧೫೨ ರಾಜ್ಯ ರಾಜಧಾನಿ ಚಂಡೀಗಡವನ್ನು ಕೇತಾಲದಲ್ಲಿ ಸಂಪರ್ಕಿಸುತ್ತದೆ.ರಾಜ್ಯಗಳ ನಡುವಿನ ಸೇವೆ ಮಾತ್ರವಲ್ಲದೆ, ಅಂಬಾಲಾವು ಹರ್ಯಾನಾ ರಾಜ್ಯದ ಅತಿ ಹಳೆಯ ನಗರಸಾರಿಗೆ ಹೊಂದಿದೆ. ಹರ್ಯಾನಾ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳಿಂದ ಇದು ಸಾಧ್ಯವಾಗಿದೆ. ಬಸ್ಸುಗಳು ಮಾತ್ರವಲ್ಲದೆ ಆಟೋರಿಕ್ಷಾಗಳೂ ಟ್ಯಾಕ್ಸಿಗಳೂ ನಗರಸಾರಿಗೆಗೆ ಕೊಡುಗೆ ನೀಡಿವೆ.

ರಸ್ತೆಸಾರಿಗೆ

ಜಿಲ್ಲೆಯ ರಸ್ತೆಸಾರಿಗೆಯಲ್ಲಿ ಬಸ್ಸುಗಳದೇ ಸಿಂಹಪಾಲು. ಅಂಬಾಲಾ ಡಿಪೋ ಕೆಲಸ ಆರಂಭಿಸಿದ್ದು ೧೯೫೦ ಆಗಸ್ಟ್ ಒಂದರಂದು. ಇದರಡಿಯಲ್ಲಿ ಮತ್ತೊಂದು ಡಿಪೊ ನಾರಾಯಣಗಢದಲ್ಲಿದೆ. ಸದ್ಯದಲ್ಲಿ ಹರ್ಯಾನಾ ರೋಡ್ವೇಸ್ ಅಂಬಾಲಾವು ೨೦೦ ಬಸ್ಸುಗಳನ್ನು ಹೊಂದಿದ್ದು ೧೯೦೦೦ ಕಿಲೋಮೀಟರುಗಳಷ್ಟು ಸಂಚರಿಸುತ್ತಾ ಪ್ರತಿದಿನವೂ ೩೪.೮೮ ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತದೆ. ಇದರಲ್ಲಿ ರಾಜ್ಯದ ಹೊರಗಿನ ಸಂಚಾರ 24,711 km (15,355 mi) ಮತ್ತು ಹರ್ಯಾನಾ ರಾಜ್ಯದ ಒಳಗಡೆಯೇ ಇರುವುದು 41.469 km (25.768 mi).ಅಂಬಾಲಾ ದಂಡು ರೈಲುನಿಲ್ದಾಣದ ಎದುರು 6.7 acres (2.7 ha)ಯಷ್ಟು ವಿಸ್ತಾರದ ಅಂಬಾಲಾ ಬಸ್ ನಿಲ್ದಾಣವನ್ನು ೧೯೯೯ ಜುಲೈ ೧೨ರಂದು ತೆರೆಯಲಾಯಿತು. ಇದರಲ್ಲಿ ಯಾತ್ರಿನಿವಾಸ್ ಕೂಡಾ ಇದ್ದು ಪ್ರಯಾಣಿಕರಿಗೆ ವಸತಿ ಒದಗಿಸುತ್ತದೆ. ಹಾಗೆಯೇ ಅಂಬಾಲಾ ನಗರ, ನಾರಾಯಣಗಢ ಮತ್ತು ಬರಾರಾಗಳಲ್ಲಿಯೂ ಬಸ್ ನಿಲ್ದಾಣಗಳಿವೆ. ಇದರ ಜೊತೆಗೆ ಅಂಬಾಲಾ ಜಿಲ್ಲೆಯಲ್ಲಿ ಸುಮಾರು ೬೦ ಖಾಸಗಿ ಬಸ್ಸುಗಳು ಸಂಚರಿಸುತ್ತವೆ.

ರೈಲುಸಾರಿಗೆ

ಅಂಬಾಲಾವು ಉತ್ತರ ರೈಲುವಲಯದ ವಿಭಾಗೀಯ ಕೇಂದ್ರವಾಗಿದ್ದು ರೈಲುಮಾರ್ಗಗಳ ಒಂದು ಪ್ರಮುಖ ಕೂಡುಸ್ಥಳವಾಗಿದೆ. ಈ ನಗರದಲ್ಲಿ ಮೂರು ಮುಖ್ಯ ರೈಲುನಿಲ್ದಾಣಗಳಿವೆ.

  • ಅಂಬಾಲಾ ಕಂಟೋನ್ಮೆಂಟ್ [UMB] (ದೆಹಲಿ-ಕಲ್ಕಾ ಮಾರ್ಗ, ಲುಧಿಯಾನ-ಸಹರಾನ್ ಪುರ ಮತ್ತು ಮೊರಾದಾಬಾದ್-ಅಂಬಾಲಾ/ಅಂಬಾಲಾ-ಅತ್ತಾರಿ ಮಾರ್ಗದ ಕೂಡುಸ್ಥಳ)
  • ಅಂಬಾಲಾ ನಗರ ರೈಲುನಿಲ್ದಾಣ [UBC] (ಅಂಬಾಲಾ-ಅತ್ತಾರಿ ಮಾರ್ಗ)
  • ಧೂಲ್ ಕೋಟ್ ರೈಲುನಿಲ್ದಾಣ [DKT] (ದೆಹಲಿ-ಕಲ್ಕಾ ಮಾರ್ಗ)

ಲೂಧಿಯಾನ-ಸಹರಾನ್ ಪುರ ಮಾರ್ಗವನ್ನು ೧೮೭೦ರಲ್ಲಿ ಹಾಕಲಾಗಿದ್ದರೆ, ದೆಹಲಿ-ಪಾನಿಪತ್ಾಂಬಾಲಾ-ಕಲ್ಕಾ ಮಾರ್ಗವನ್ನು ೧೮೮೯ರಲ್ಲಿ ಹಾಕಲಾಯಿತು. ಅಂಬಾಲಾ ವಿಭಾಗದಡಿಯಲ್ಲೇ ಬರುವ ಕಲ್ಕಾ-ಶಿಮ್ಲಾ ರೈಲುಹಾದಿಯು ಯುನೆಸ್ಕೊದಿಂದ ವಿಶ್ವ ಪರಂಪರೆಯ ತಾಣ ಎಂದು ಗುರುತಿಸಲ್ಪಟ್ಟಿದೆ. ನವದೆಹಲಿ ರೈಲುನಿಲ್ದಾಣ ಹೊರತುಪಡಿಸಿದರೆ ಅತಿ ಹೆಚ್ಚು ಶತಾಬ್ದಿ ರೈಲುಗಳು ಹಾದುಹೋಗುವುದು ಅಂಬಾಲಾ ಕಂಟೋನ್ಮೆಂಟ್ ರೈಲುನಿಲ್ದಾಣದಲ್ಲೇ. ರಸ್ಕಿನ್ ಬಾಂಡ್ ನ "ದ ವುಮನ್ ಆನ್ ಪ್ಲಾಟ್ಫಾರಂ ಎಯ್ಟ್"[೨೬] ಎಂಬ ಪ್ರಸಿದ್ಧ ಕತೆಯಲ್ಲಿ ಅಂಬಾಲಾ ರೈಲುನಿಲ್ದಾಣದ ಪ್ರಸ್ತಾಪ ಬರುತ್ತದೆ. ವಿಚಿತ್ರವೆಂದರೆ ಅಂಬಾಲಾ ರೈಲುನಿಲ್ದಾಣದಲ್ಲಿ ಎಂಟನೇ ಪ್ಲಾಟ್ಫಾರಂ ಎಂಬುದು ಇಲ್ಲವೇ ಇಲ್ಲ.

ಶಿಕ್ಷಣ

ಅಂಬಾಲಾದಲ್ಲಿ ಹೆಚ್ಚಿನ ಸಂಖ್ಯೆಯ ಶಾಲಾಕಾಲೇಜುಗಳಿವೆ. ಅವುಗಳಲ್ಲಿ ಪ್ರಸಿದ್ಧವಾದವು ಇವು:-

  • ಕಾನ್ವೆಂಟ್ ಆಫ್ ಜೀಸಸ್ ಅಂಡ್ ಮೇರಿ, ಅಂಬಾಲಾ
  • ಇ-ಮ್ಯಾಕ್ಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಅಂಡ್ ಅಪ್ಲೈಡ್ ರಿಸರ್ಚ್
  • ಗೌರ್ನಮೆಂಟ್ ಪಾಲಿಟೆಕ್ನಿಕ್ ಕಾಲೇಜು, ಅಂಬಾಲಾ
  • ಮಹರ್ಷಿ ಮಾರ್ಕಂಡೇಶ್ವರ ವಿಶ್ವವಿದ್ಯಾಲಯ, ಮುಲ್ಲಾನಾ
  • ಮಹರ್ಷಿ ಮಾರ್ಕಂಡೇಶ್ವರ ವಿಶ್ವವಿದ್ಯಾಲಯ, ಸಾದೋಪುರ್
  • ಫಿಲಡೆಲ್ಫಿಯಾ ಆಸ್ಪತ್ರೆ ಮತ್ತು ನರ್ಸಿಂಗ್ ಶಾಲೆ, ಅಂಬಾಲಾ
  • ಸನಾತನಧರ್ಮ ಕಾಲೇಜು (ಎಸ್ ಡಿ ಕಾಲೇಜು)
  • ಶ್ರೀ ಆತ್ಮಾನಂದ ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ

ಹೆಸರಾಂತ ವ್ಯಕ್ತಿಗಳು

ಸುಷ್ಮಾ ಸ್ವರಾಜ್
  • ಝೊಹರಾಬಾಯ್ ಅಂಬಾಲೆವಾಲಿ
  • ಹನ್ಸರಾಜ್ ಬೇಹ್ಲ್
  • ಊರ್ವಶಿ ಬುತಾಲಿಯಾ
  • ಸಿಮಿ ಚಹಲ್
  • ಜೂಹಿ ಚಾವ್ಲಾ
  • ಪರಿಣೀತಿ ಚೋಪ್ರಾ
  • ಸ್ವದೇಶ್ ದೀಪಕ್
  • ನವನೀತ್ ಕೌರ್ ಧಿಲ್ಲೋನ್
  • ಸಂಜೀವ್ ಕಪೂರ್
  • ಮನಪ್ರೀತ್ ಕೌರ್
  • ನಾಸಿರ್ ಕಝ್ಮಿ
  • ಸುಚೇತಾ ಕೃಪಾಲಾನಿ
  • ಶಲಭ್ ಕುಮಾರ್
  • ಸೆಲ್ಜಾ ಕುಮಾರಿ
  • ಕಿಮ್ ಫಿಲ್ಬಿ
  • ಆಶ್ ಕೆ ಪ್ರಕಾಶ
  • ಓಂ ಪುರಿ
  • ಸಘರ್ ಸಿದ್ದಿಕಿ
  • ಸಂಜೀವ್ ಸ್ಯಾಮ್ ಗಂಭೀರ್
  • ಸುಷ್ಮಾ ಸ್ವರಾಜ್
  • ಝೆಬ

ಟಿಪ್ಪಣಿಗಳು

ಉಲ್ಲೇಖಗಳು

ಹೊರಗಿನ ಕೊಂಡಿಗಳು

  • Media related to ಅಂಬಾಲ at Wikimedia Commons
  • ಟೆಂಪ್ಲೇಟು:Wikivoyage-inline

ಟೆಂಪ್ಲೇಟು:Ambala district topics

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ